ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g93 3/8 ಪು. 27-28
  • “ನಮ್ಮ ದಿನನಿತ್ಯದ ರೊಟ್ಟಿ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ನಮ್ಮ ದಿನನಿತ್ಯದ ರೊಟ್ಟಿ”
  • ಎಚ್ಚರ!—1993
  • ಅನುರೂಪ ಮಾಹಿತಿ
  • “ಪರಲೋಕದ ನಿಜವಾದ ರೊಟ್ಟಿ”
    ಅತ್ಯಂತ ಮಹಾನ್‌ ಪುರುಷ
  • ಯೇಸು—ಪರಲೋಕದ ನಿಜವಾದ ರೂಟ್ಟಿ
    ಕಾವಲಿನಬುರುಜು—1991
  • ಜೀವ ಕೊಡೋ ಅದ್ಭುತ ರೊಟ್ಟಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
ಎಚ್ಚರ!—1993
g93 3/8 ಪು. 27-28

“ನಮ್ಮ ದಿನನಿತ್ಯದ ರೊಟ್ಟಿ”

“ನಮ್ಮ ದಿನನಿತ್ಯದ ರೊಟ್ಟಿಯನ್ನು ಇಂದು ನಮಗೆ ಕೊಡು.” ಇದು ಮಾಡಲ್ಪಟ್ಟಿರುವ ಪ್ರಾರ್ಥನೆಗಳಲ್ಲಿ ಅತಿ ಪ್ರಸಿದ್ಧ ಪ್ರಾರ್ಥನೆ—ಕರ್ತನ ಪ್ರಾರ್ಥನೆಯೆಂದು ಹೇಳಲ್ಪಡುತ್ತದೆ—ಯ ಒಂದು ಭಾಗವೆಂದು ನೀವು ಗುರುತಿಸುತ್ತೀರೆಂಬುದರಲ್ಲಿ ಸಂಶಯವಿಲ್ಲ. (ಮತ್ತಾಯ 6:9, 11, ಕಿಂಗ್‌ ಜೇಮ್ಸ್‌ ವರ್ಷನ್‌) ಯೇಸುವಿನ ಸಮಯದಲ್ಲಿ ಇಸ್ರಾಯೇಲಿನಲ್ಲಿ ರೊಟ್ಟಿ ಪ್ರಧಾನ ಆಹಾರವಾಗಿದ್ದು ದೈಹಿಕ ಪೋಷಣೆಯ ದ್ಯೋತಕವಾಗಿ ಸೂಚಿಸಲ್ಪಡಲು ಸುಸಾಧ್ಯತೆಯುಳ್ಳದ್ದಾಗಿತ್ತು.

ಇಂದು ಲೋಕದ ಅಧಿಕಾಂಶ ಭಾಗದಲ್ಲಿ, ರೊಟ್ಟಿಯು ಒಮ್ಮೆ ಇದ್ದಂತೆ ಭಕ್ಷ್ಯಪಟ್ಟಿಯಲ್ಲಿ ಪ್ರಮುಖವಾಗಿರುವುದಿಲ್ಲ. ಇಂದು ನಮ್ಮ ಅಕ್ಷರಾರ್ಥದ ದಿನನಿತ್ಯದ ರೊಟ್ಟಿ ಅನೇಕ ವೇಳೆ ಒಂದು ಊಟದ ಜೊತೆಗೆ ಸೇರುವ ವಸ್ತುವಾಗಿರುತ್ತದೆ. ಹೀಗಿದ್ದರೂ, ರೊಟ್ಟಿಯು ಲೋಕಾದ್ಯಂತ ಲಕ್ಷಗಟ್ಟಲೆ ಜನರ ಜೀವಿತದಲ್ಲಿ ಪ್ರಾಮುಖ್ಯ ಪಾತ್ರವನ್ನು ವಹಿಸುತ್ತಾ ಮುಂದುವರಿಯುತ್ತದೆ.

ಮೆಕ್ಸಿಕೊದಲ್ಲಿ ಗೃಹಿಣಿಯರು ಟೊರ್ಟಿಯ ಎಂದು ಕರೆಯಲ್ಪಡುವ ತೆಳ್ಳಗಿನ ರೊಟ್ಟಿ ತುಂಡುಗಳನ್ನು ಮಾಡುತ್ತಾರೆ. ಇಥಿಯೋಪ್ಯದಲ್ಲಿ ಹೆಂಗುಸರು ಬಿಸಿ ಕಾವಲಿಯ ಮೇಲೆ ಸುತ್ತು ಸುತ್ತಾಗಿ ಒಂದು ಸಾರಿನ ರೂಪದ ದ್ರವವನ್ನು ಹೊಯ್ದು ಸರಳವಾದ ರೊಟ್ಟಿಯನ್ನು ತಯಾರಿಸುತ್ತಾರೆ. ಪಾಶ್ಚಾತ್ಯ ದೇಶಗಳಲ್ಲಿ ರೊಟ್ಟಿಯನ್ನು ಆಶ್ಚರ್ಯಕರವಾದ ಆಕಾರ ಮತ್ತು ಗಾತ್ರಗಳಲ್ಲಿ ರಾಶೀಗಟ್ಟಲೆಯಾಗಿ ತಯಾರಿಸುತ್ತಾರೆ. ಮತ್ತು ಆ ದೇಶಗಳ ಅನೇಕ ಗೃಹಿಣಿಯರು ಮನೆಯಲ್ಲಿ ತಯಾರಿಸಿದ ರೀತಿಯ ರೊಟ್ಟಿಗಳನ್ನು ಮಾಡಿ ತಮ್ಮ ಕುಟುಂಬಗಳನ್ನು ಸಂತೋಷಪಡಿಸುತ್ತಾರೆ.

ಗೂಡು ಒಲೆಯಿಂದ ಬಿಸಿ ಬಿಸಿಯಾದ ರೊಟ್ಟಿಯನ್ನು ತೆಗೆಯುವಾಗ ಬರುವ ಸುವಾಸನೆಯಿಂದ ಯಾರು ತಾನೆ ಮೋಹಿತರಾಗುವುದಿಲ್ಲ? ಅದು ದಾರಿಹೋಕರನ್ನು ರೊಟ್ಟಿ ಅಂಗಡಿಗೆ ಎಳೆಯಬಲ್ಲದು. ಅನೇಕರಿಗೆ ಇದು ತಮ್ಮ ಮನೆಯ ಅನುರಾಗ ತುಂಬಿದ ಜ್ಞಾಪಕವನ್ನೂ ಶೈಶವದ ನಿರ್ಭಯತೆಯನ್ನೂ ಮನಸ್ಸಿಗೆ ತರುತ್ತದೆ.

ರೊಟ್ಟಿ ಮಾಡುವ ಕಲೆಯನ್ನು ಯಾರು ಕಂಡುಹಿಡಿದರೆಂಬುದು ಅಜ್ಞಾತ ವಿಷಯ. ಆದಿಕಾಂಡ 3:19 (NW)ರಲ್ಲಿ, ಪ್ರಥಮ ಮಾನವ ಪಾಪಿಗಳಿಗೆ, “ನೀನು ಮಣ್ಣಿಗೆ ಹಿಂದಿರುಗುವ ತನಕ ನಿನ್ನ ಮುಖದ ಬೆವರಿನಲ್ಲಿ ರೊಟ್ಟಿಯನ್ನು ತಿನ್ನುವಿ” ಎಂದು ಹೇಳಲಾಯಿತು. ಇಲ್ಲಿ “ರೊಟ್ಟಿ”ಯನ್ನು ಸಾಮಾನ್ಯ ಆಹಾರದ ಸ್ಥಾನದಲ್ಲಿ ಕೇವಲ ಸಂಕೇತವಾಗಿ ಉಪಯೋಗಿಸಲಾಗಿದೆ ಎಂಬುದು ಸ್ಪಷ್ಟ. ಆದರೆ ಆದಿಕಾಂಡ 14:18, 19ರಲ್ಲಿ, ಯಾಜಕ ಮೆಲ್ಕಿಜೆದೇಕನು ಮೂಲಪಿತ ಅಬ್ರಹಾಮನನ್ನು ಆಶೀರ್ವದಿಸಲು ಬಂದಾಗ, ಅವನು “ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ” ತಂದನು ಎಂದು ನಾವು ಓದುತ್ತೇವೆ. ಇದು ಪುರಾತನ ಕಾಲದ ಜನರ ಪ್ರಧಾನ ಆಹಾರವಾಗಿದ್ದ ರೀತಿಯ ರೊಟ್ಟಿಯನ್ನು ಸೂಚಿಸಿತೆಂಬುದು ನಿಸ್ಸಂದೇಹ. ಮಧ್ಯಪೂರ್ವದ ಕೆಲವು ಭಾಗಗಳಲ್ಲಿ ರೊಟ್ಟಿ ಪ್ರಧಾನ ಆಹಾರವಾಗಿ ಮುಂದುವರಿಯುತ್ತದೆ.

ಪುರಾತನ ಈಜಿಪ್ಟಿನಲ್ಲಿ, ಆ ಬಳಿಕ ಬಂದ ರಾಷ್ಟ್ರಗಳಾದ ಗ್ರೀಸ್‌ ಮತ್ತು ರೋಮ್‌ಗಳಂತೆಯೇ ವ್ಯಾಪಾರದ ರೊಟ್ಟಿಗಾರರಿದ್ದರು. ಹತ್ತೊಂಬತ್ತನೆಯ ಶತಮಾನದ ಅಂತ್ಯದೊಳಗೆ ಕೈಗಾರಿಕಾ ವಿಪ್ಲವವು ಪೂರ್ತಿ ಜಾರಿಯಲ್ಲಿತ್ತು. ರೊಟ್ಟಿ ತಯಾರಿಯು ರಾಶಿಗಟ್ಟಲೆ ತಯಾರಿಕೆಗಾಗಿ ಮನೆಯಿಂದ ಕಾರ್ಖಾನೆಗಳಿಗೆ ಚಲಿಸತೊಡಗಿತು. ಈ ಉತ್ಪಾದನಾ ಆವಶ್ಯಕತೆಗಳಿಗೆ ಅನೇಕ ಹೊಸ ಕಂಡುಹಿಡಿತಗಳು ಸಹಾಯ ಮಾಡಿದವು: ಮಿಶ್ರಣ ಯಂತ್ರಗಳು, ವಾಹಕ ಸುತ್ತುಪಟಿಗಳ್ಟು, ಸ್ವಯಂಚಾಲಕ ಗೂಡು ಒಲೆಗಳು, ಹಾಗೂ ಹೋಳು ಮಾಡುವ ಮತ್ತು ಹಾಳೆ ಹೊದಿಸುವ ಯಂತ್ರಗಳು. ರೊಟ್ಟಿ ತಯಾರಿಕೆ ಕುಟುಂಬದ ಕಲೆಯಾಗಿರುವುದರಿಂದ ವಿಕಸಿಸಿ ವ್ಯಾಪಾರ ವಿಜ್ಞಾನವಾಗಿ ಪರಿಣಮಿಸಿತ್ತು.

ಉದ್ಯಮೀಕರಿಸಲ್ಪಟ್ಟ ರಾಷ್ಟ್ರಗಳಲ್ಲಿ ಇಂದು ಬಳಸಲ್ಪಡುವ, ಅಧಿಕಾಂಶವಲ್ಲದಿದ್ದರೆ, ಹೆಚ್ಚು ರೊಟ್ಟಿ ವ್ಯಾವಹಾರಿಕವಾಗಿ ತಯಾರಿಸಲ್ಪಡುತ್ತದೆ. ಅನೇಕ ಸಂಸ್ಕೃತಿಗಳಲ್ಲಿ ಇದು ಪಾಕಶಾಲೆಯ ಮುಖ್ಯ ಭಾಗವಾಗಿ ಮುಂದುವರಿಯುತ್ತದೆ. ಗಡುಸಾದ ಇಟ್ಯಾಲಿಯನ್‌ ರೊಟ್ಟಿ ಇಲ್ಲದಿದ್ದರೆ ಸ್ಪೆಗೆಟಿ ಊಟಕ್ಕೆ ಯಾವ ರುಚಿ ಇದ್ದೀತು? ಅಥವಾ, ಕರೀ ಬಣ್ಣದ, ಅಗಿಯಲು ತಕ್ಕುದಾದ ಪಂಪೆರ್‌ನಿಕೆಲ್‌ ರೊಟ್ಟಿಯ ರುಚಿಯಿಲ್ಲದಿರುವಲ್ಲಿ, ಸಮೃದ್ಧ ಸಾರ್‌ಕ್ರಾಟ್‌ ಜರ್ಮನ್‌ ಭೋಜನವನ್ನು ಊಹಿಸಿರಿ! ಚಳಿಗಾಲದ ತಣ್ಣಗಿನ ಬೆಳಿಗ್ಗೆ, ಪ್ಯಾನ್‌ಕೇಕ್‌ ತೆಳುದೋಸೆಯನ್ನು ತಿನ್ನಲು ಯಾರು ಮನಸ್ಸು ಮಾಡಲಿಕ್ಕಿಲ್ಲ? ಈ ಪ್ಯಾನ್‌ಕೇಕ್‌, ಜೋಳ, ತವುಡಿರುವ ಗೋಧಿಹಿಟ್ಟು ಯಾ ಬಕ್‌ವೀಟ್‌ ಹಿಟ್ಟಿನಿಂದ ಮಾಡಿದ ಬೇಗನೆ ಹುರಿದು ತಯಾರಿಸಿದ ರೊಟ್ಟಿಯಾಗಿದೆ.

ಪಾಶ್ಚಾತ್ಯ ದೇಶಗಳಲ್ಲಿ ಅತಿ ಜನಪ್ರಿಯವಾಗಿ ಪರಿಣಮಿಸಿರುವ ಒಂದು ವಿಧದ ರೊಟ್ಟಿಯು ಇಟ್ಯಾಲಿಯನ್‌ ಪೀಟ್ಸದಲ್ಲಿ ಬಳಸಲ್ಪಡುತ್ತದೆ. ಅದರ ತಯಾರಿಯನ್ನು ವೀಕ್ಷಿಸುವುದೂ ಆನಂದಕರ; ಪೀಟ್ಸ ರೊಟ್ಟಿಗಾರನು ಹಿಟ್ಟಿನ ಮುದ್ದೆಯನ್ನು ತನ್ನ ತಲೆಗೂ ಮೇಲೆ, ಒಬ್ಬ ಸರ್ಕಸ್‌ ನಟನ ಪೂರ್ತಿ ಸಾಮರ್ಥ್ಯದಿಂದ ಸುತ್ತಿಸುವುದನ್ನು ಪ್ರಾಯಸ್ಥರು ಸಹ ಮಕ್ಕಳ ಬೆರಗಿನಿಂದ ಪ್ರೇಕ್ಷಿಸುವರು.

ಪ್ರತಿಯೊಬ್ಬನಿಗೆ ಏನಾದರೂ ಇದೆಯೆ? ಹೌದು, ನಿಶ್ಚಯ! ಆದರೆ ಪ್ರಾಯಶಃ, ರೊಟ್ಟಿಯಲ್ಲಿ ಆನಂದಿಸುವ ಅತ್ಯುತ್ತಮ ವಿಧಗಳಲ್ಲಿ ಒಂದು, ನಿಮ್ಮ ಸ್ವಂತ ರೊಟ್ಟಿಯನ್ನು ಸುಡುವುದೇ ಆಗಿದೆ. ಈ ಪ್ರಾಯೋಗಿಕ ಪ್ರಯತ್ನದಲ್ಲಿ ನಿಮಗೆ ದೊರೆಯಬಲ್ಲ ತೃಪ್ತಿಯಿಂದ ನಿಮಗೇ ಆಶ್ಚರ್ಯವಾದೀತು. ಮತ್ತು ದೋಬಿ ಕೆಲಸ ಮತ್ತು ತಿಕ್ಕು ತೊಟ್ಟಿಯಲ್ಲಿ ಒಬ್ಬ ಗೃಹಿಣಿಗೆ ದೊರೆಯಲಾರದ ಸೃಜನಾತ್ಮಕ ಸಾಧನೆ ಇದರಿಂದ ಆಕೆಗೆ ದೊರೆಯಬಲ್ಲದು.

ಜೊತೆಯಾಗಿ ಕೊಟಿರುವ್ಟ ಪಾಕವಿಧಾನವು, ಪಾಶ್ಚಾತ್ಯ ದೇಶಗಳಲ್ಲಿ ಜನಪ್ರಿಯವಾಗಿರುವ ಕಿಣ್ವ ಉದ್ರೇಕಿತ ರೊಟ್ಟಿಯನ್ನು ನೀವು ಮಾಡುವಂತೆ ಸಹಾಯ ಮಾಡುವುದು. ಪದಾರ್ಥಗಳನ್ನು ಅಳೆದು, ಮಿಶ್ರ ಮಾಡುವುದು ವಿನೋದವಾಗಬಲ್ಲದು. ಮತ್ತು ಎಲ್ಲ ವಿಧಗಳ ಹತಾಶೆಗಳಿಗೆ, ಹಿಟ್ಟನ್ನು ನಾದುವುದು ಆರೋಗ್ಯಕರವಾದ ಬಹಿರ್‌ದ್ವಾರವಾಗಿರಬಲ್ಲದು! ರೊಟ್ಟಿ ತಯಾರಿಯ ಇನ್ನೊಂದು ಮೋಹಕ ಲಕ್ಷಣವು ರೊಟ್ಟಿ ಉಬ್ಬುವುದನ್ನು ಪ್ರೇಕ್ಷಿಸುವುದೇ. ಉಬ್ಬುವಿಕೆ ಹುದುಗುವುದರ ಪರಿಣಾಮ. ಹಿಟ್ಟಿಗೆ ಕಿಣ್ವವನ್ನು ಸೇರಿಸಲಾಗಿ, ಅದು ಕಾರ್ಬನ್‌ ಡೈಆಕ್ಸೈಡ್‌ ಅನಿಲದ ಗುಳ್ಳೆಗಳನ್ನೆಬ್ಬಿಸಿ ಹಿಟ್ಟನ್ನು ಸಚ್ಫಿದ್ರತೆಯದ್ದಾಗಿ ಮಾಡುತ್ತದೆ. ಈಗ ಹಿಟ್ಟಿನ ಮುದ್ದೆಯನ್ನು ಹೊಡೆದು, ಚಿಕ್ಕ ಮುದೆಗಳ್ದಾಗಿ ರೂಪಿಸಿ, ಸುಡುವ ಮೊದಲಾಗಿ ರೊಟ್ಟಿ ಪಾತ್ರೆಗಳಲ್ಲಿ ಪುನಃ ಉಬ್ಬುವಂತೆ ಬಿಡಲಾಗುತ್ತದೆ. ಈಗ ಮುದೆಗಳ್ದು ಗೂಡುಒಲೆಯೊಳಗೆ ಹೋಗುತ್ತವೆ—ಮತ್ತು ಎಂತಹ ಆಶ್ಚರ್ಯಕರವಾದ ಸುಗಂಧ ನಿಮ್ಮ ಮನೆಯನ್ನು ಆವರಿಸುತ್ತದೆ! ಅತ್ಯುತ್ತಮ ವಿಷಯವು ರುಚಿ ನೋಡುವುದೇ ಆಗಿದೆ. ಆ ಬಳಿಕ ಅಂಗಡಿಯಿಂದ ಕೊಳ್ಳುವ ರೊಟ್ಟಿಗೆ ಹಿಂದೆ ಹೋಗಲು ನಿಮಗೆ ಕಷ್ಟವಾದೀತು. ಮತ್ತು ನಿಮಗೆ ರೊಟ್ಟಿ ತಯಾರಿಯ ವಿಧಾನ ತಿಳಿಯುವಲ್ಲಿ, ನೀವು ಬಾರ್ಲಿ, ರೈ, ಜೋಳ, ಆಲುಗಡ್ಡೆ, ಯಾ ಸೋಯಬೀನ್‌ನಂಥ ವಿವಿಧ ಹಿಟ್ಟುಗಳ ಪ್ರಯೋಗ ಮಾಡುವಂತೆ ಪ್ರಚೋದಿಸಲ್ಪಟ್ಟೀರಿ.

ನಿಜ, ವ್ಯಾಪಾರದ ಉದ್ದೇಶದಿಂದ ಮಾಡಿದ ವಿವಿಧ ರೊಟ್ಟಿಯ ತೆರಗಳನ್ನು ಖರೀದಿಸುವುದು ನಿಮಗೆ ಹೆಚ್ಚು ಅನುಕೂಲವಾಗಿರಬಹುದು. ಆದರೆ ನಿಮ್ಮ ಆನಂದವು ಅದನ್ನು ಸುಡುವುದರಲಿರಲ್ಲಿ, ತಿನ್ನುವುದರಲಿರಲ್ಲಿ, ಅದು ನಿಮ್ಮ ಆಹಾರದ ದೊಡ್ಡ ಭಾಗವಾಗಿರಲಿ, ಚಿಕ್ಕ ಭಾಗವಾಗಿರಲಿ, ಅದಕ್ಕೆ ಗಣ್ಯತೆಯನ್ನು ತೋರಿಸದೆ ಇರಬೇಡಿ. ಏಕೆಂದರೆ, “ನಮ್ಮ ದಿನನಿತ್ಯದ ರೊಟ್ಟಿಯನ್ನು” ಕೊಟ್ಟಾತನು ದೇವರೇ! (g92 12/8)

[ಪುಟ 28 ರಲ್ಲಿರುವ ಚೌಕ/ಚಿತ್ರಗಳು]

ರೊಟ್ಟಿಯ ಪಾಕವಿಧಾನ

ಕರಗಿಸಿ 1 ಕೇಕ್‌ ಕಿಣ್ವ (ಯಾ 3 ಪ್ಯಾಕೆಟ್‌ ಒಣ ಕಿಣ್ವ) 4 ಕಪ್‌ ಬಿಸಿ ನೀರಲ್ಲಿ

ಕದಡಿಸಿ 5 ಕಪ್‌ ಹಿಟ್ಟು (ತವುಡಿರುವ ಯಾ ಬಿಳಿ)

ಉಬ್ಬಲಿ ಅದರ ಗಾತ್ರದ ಇಮ್ಮಡಿಗೆ, ಬೆಚ್ಚಗಿನ ಸ್ಥಳದಲ್ಲಿ

ಸೇರಿಸಿ 2 ಟೀಸ್ಪೂನ್‌ ಉಪ್ಪು, 1⁄2 ಕಪ್‌ ಸಕ್ಕರೆ, 1⁄2 ಕಪ್‌ ವೆಜಿಟೆಬ್‌ಲ್‌ ಷಾರ್ಟನಿಂಗ್‌ (ಕೊಬ್ಬು)

ಚೆನ್ನಾಗಿ ಬೆರಸಿ

ಸೇರಿಸಿ ಇನ್ನು ಸುಮಾರು 4 ಕಪ್‌ ಹಿಟ್ಟನ್ನು, ಮುದ್ದೆಯನ್ನು ತುಸು ಗಟ್ಟಿ ಮಾಡಲು

ನಾದಿರಿ ಹಿಟ್ಟು ಹಚ್ಚಿದ ಮೇಲ್ಮೈಯ ಮೇಲೆ, 15 ನಿಮಿಷಗಳ ತನಕ

ಉಬ್ಬಲಿ ಎಣ್ಣೆ ಸವರಿದ ಬೋಗುಣಿಯಲ್ಲಿ ಇಮ್ಮಡಿ ಗಾತ್ರಕ್ಕೆ

ನಾದಿರಿ ಲಘುವಾಗಿ, ನಾಲ್ಕು ಮುದೆಗಳ್ದಾಗಿ ರೂಪಿಸಿರಿ

ಉಬ್ಬಲಿ ಕೆಲವು ನಿಮಿಷ ಎಣ್ಣೆ ಸವರಿದ ರೊಟ್ಟಿಯ ಪಾತ್ರೆಗಳಲ್ಲಿ

ಸುಡಿರಿ ಒಂದು ತಾಸಿನ ತನಕ 325 ಡಿಗ್ರಿ ಫ್ಯಾರನ್‌ಹೈಟ್‌ ಕಾವಿನಲ್ಲಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ