ಮುಂದೆಂದೂ ಒಂದು ಬಂಡೆಯೊ ದ್ವೀಪವೊ ಆಗಿರುವುದಿಲ್ಲ
‘ನಾನು ಒಂದು ಬಂಡೆ⁄ ನಾನು ಒಂದು ದ್ವೀಪ⁄ ಮತ್ತು ಆ ಬಂಡೆಗೆ ನೋವನಿಸುವುದಿಲ್ಲ⁄ ಮತ್ತು ಒಂದು ದ್ವೀಪವು ಎಂದೂ ಅಳುವುದಿಲ್ಲ.’ 60ಗಳ ಒಂದು ಹಾಡಿನಿಂದ ಸಾಲೊಂದು ಹೀಗಂದಿತು. ಈ ಹಾಡು ನನ್ನ ಅಚ್ಚುಮೆಚ್ಚಿನ ಹಾಡಾಗಿತ್ತು ಯಾಕೆಂದರೆ ಆ ವಿಧದಲ್ಲೇ ನಾನು ಜೀವಿಸುತ್ತಿದ್ದೆ. ಇತರರು ಅನುಭವಿಸಿದರೆಂದು ಹೇಳಿದ ವಿಷಯಗಳಾದ ಪ್ರೀತಿ, ಅನುಕಂಪ, ಮತ್ತು ಕನಿಕರದ ಅನಿಸಿಕೆಗಳನ್ನು ನಾನು ಎಂದೂ ಜ್ಞಾಪಿಸಿಕೊಳ್ಳಸಾಧ್ಯವಿಲ್ಲ. ಅಂಥ ಅನಿಸಿಕೆಗಳನ್ನು ನಾನು ಕಲ್ಪಿಸುತ್ತಿದ್ದೆ ಮತ್ತು ಇತರರೂ ಹಾಗೆ ಮಾಡಿದರೆಂದು ನಂಬಿದ್ದೆ. ಒಬ್ಬ ವಯಸ್ಕನೋಪಾದಿ ಎಂದೂ ಅತ್ತಿದ್ದ ಜ್ಞಾಪಕ ನನಗಿಲ್ಲ. ಮತ್ತು ಇಲ್ಲಿ ನಾನು—50 ವರ್ಷ ಪ್ರಾಯದವನಾಗಿದ್ದ ಮತ್ತು ಕ್ರೈಸ್ತ ಸಭೆಯೊಂದರಲ್ಲಿ ಹಿರಿಯನೋಪಾದಿ ಸೇವೆ ಸಲ್ಲಿಸುತ್ತಿದ್ದ ನಾನು ನನ್ನ ಮನೆಯಲ್ಲಿ ಏಕಾಂಗಿಯಾಗಿ, ನಾನು ಓದುತ್ತಿದ್ದ ಒಂದು ಪುಸ್ತಕದ ಕಾರಣ ಉಸಿರುಕಟ್ಟುವಂತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ಇದು ಹೇಗೆ ನನಗೆ ಸಂಭವಿಸಲು ಸಾಧ್ಯ?
ಎಂಟು ಮಕ್ಕಳಲ್ಲಿ ನಾಲ್ಕನೆಯವನಾಗಿ, ಬಾಸ್ಟನ್ ನಗರದ ಹೊರವಲಯದಲ್ಲಿ 1936ರಲ್ಲಿ ನಾನು ಹುಟ್ಟಿದೆ. ನನ್ನ ತಂದೆ ಮತ್ತು ತಾಯಿ ಮದ್ಯವ್ಯಸನಿಗಳಾಗಿದ್ದರು. ನನಗೆ ಜ್ಞಾಪಕವಿರುವಂತೆ ಯಾವುದೇ ರೀತಿಯಲ್ಲಿ ನಾವು ಅನಿಸಿಕೆಗಳನ್ನು ಚರ್ಚಿಸಲಿಲ್ಲ, ಆಲಿಂಗನ ಯಾ ಪ್ರೀತಿಯನ್ನು ವ್ಯಕ್ತಪಡಿಸಲಿಲ್ಲ. ನಾನು ಆರು ತಿಂಗಳ ಪ್ರಾಯದವನಾಗಿದ್ದಾಗ, ಯಾರೋ ಒಬ್ಬರು ನನ್ನನ್ನು ಸ್ನಾನದತೊಟ್ಟಿಯಲ್ಲಿ ಹಾಕಿ, ಬಿರಡೆಯಿಂದ ತೂತನ್ನು ಮುಚ್ಚಿ, ನೀರನ್ನು ತಿರುಗಿಸಿ ಬಿಟ್ಟುಹೋದರು. ಕೆಲಸದವಳು ನನ್ನನ್ನು ನೋಡಿ ನನ್ನ ಜೀವವನ್ನು ರಕ್ಷಿಸಿದಳು. ಮಗುವಿನೋಪಾದಿ ನನಗೆ ಅನಿಸಿದ ವಿಷಯಗಳು ಕೇವಲ ಭಯ, ಭೀತಿ, ಕೋಪ, ಮತ್ತು ಶಾರೀರಿಕ ನೋವಾಗಿದ್ದವು.
ಇವುಗಳು ನನ್ನ ತಂದೆಯ ಮೂಲಕ ನನಗೆ ಕಲಿಸಲ್ಪಟ್ಟವು. ಕೋಪೋದ್ರೇಕದೊಂದಿಗೆ ಸ್ಫೋಟನಗೊಳ್ಳುತ್ತಿದ್ದ ಅವರು ಹೆಚ್ಚುಕಡಮೆ ವಿನಾಯಿತಿಯಿಲ್ಲದೆ ತನ್ನ ಮುಷ್ಟಿಗಳು ಮತ್ತು ಪಾದಗಳೊಂದಿಗೆ ಅದನ್ನು ನನ್ನ ಚಿಕ್ಕ ದೇಹದ ಮೇಲೆ ವ್ಯಕ್ತಪಡಿಸುತ್ತಿದ್ದರು. ಆ ಸಮಯದಲ್ಲಿ ಅವರ ಮುಖದ ಮೇಲಿದ್ದ ಆ ಮುಖಭಾವವು ಅರ್ಧ ಶತಮಾನದ ಅನಂತರ ಇನ್ನೂ ನನ್ನನ್ನು ಬೆನ್ನತ್ತುತ್ತದೆ. ನನ್ನ ಜೀವನದ ಅಧಿಕಾಂಶ ಭಾಗ ಈ ಹೊಡೆತಗಳು ನಾನು ಅಂಥ ಕೆಟ್ಟ ಹುಡುಗನಾಗಿದ್ದದ್ದಕ್ಕಾಗಿ ಎಂದು ನಂಬಿದ್ದೆ, ಆದರೆ ನನ್ನ ವಿರುದ್ಧ ಅವರು ವ್ಯಕ್ತಪಡಿಸುತ್ತಿದ್ದ ಕೋಪಕ್ಕೆ ನನ್ನ ಒಳ್ಳೆಯತನ ಯಾ ಕೆಟ್ಟತನದೊಂದಿಗೆ ಯಾವ ಸಂಬಂಧವೂ ಇರಲಿಲ್ಲವೆಂದು ಈಗ ನನಗೆ ಗೊತ್ತು.
ನಾನು ಐದು ಮತ್ತು ಆರು ವರ್ಷ ವಯಸ್ಸಿನವನಾಗಿದ್ದಾಗ, ಕುಟುಂಬ ವೈದ್ಯರ ಮೂಲಕ ಲೈಂಗಿಕವಾಗಿ ದುರುಪಯೋಗಿಸಲ್ಪಟ್ಟೆ. ನಾನು ಶಾಲೆಯನ್ನು ಪ್ರಾರಂಭಿಸಿದಾಗ, 2,50,000 ಡಬ್ಲ್ಯೂಏಎಸ್ಪಿಗಳನ್ನೊಳಗೊಂಡ (ಬಿಳಿಯ ಆಂಗ್ಲೋ ಸ್ಯಾಕ್ಸನ್ ಪ್ರಾಟೆಸ್ಟಂಟರು) ಒಂದು ನಗರದಲ್ಲಿ ನಾವು ಜೀವಿಸಿದ್ದೆವು, ಮತ್ತು ನನ್ನ ಶಾಲಾಸಹಪಾಠಿಗಳು ಚಿಕ್ಕ ಯೆಹೂದಿ ಹುಡುಗನೆಂದು, ನನ್ನನ್ನು ಬೆನ್ನಟ್ಟಿ ಹಿಂಸಿಸುತ್ತಿದ್ದರು. ಈ 10 ಯಾ 12 ಮಕ್ಕಳ ಗುಂಪುಗಳು ನನ್ನನ್ನು ಹಿಡಿಯಲು ಸಾಧ್ಯವಾದಾಗ, ನನ್ನ ಬಟ್ಟೆಗೆಳನ್ನು ಕಳಚಿ, ನನ್ನನ್ನು ಹೊಡೆದು, ಮರಗಳ ತುತ್ತತುದಿಗಳಿಗೆ ನನ್ನ ಬಟ್ಟೆಗೆಳನ್ನು ಎಸೆಯುತ್ತಿದ್ದರು. ನನ್ನ ಬಟ್ಟೆಗೆಳನ್ನು ಪುನಃ ಪಡೆಯಲು ನಾನು ನಗ್ನನಾಗಿ ಮರಗಳ ಮೇಲೆ ಹತ್ತಬೇಕಾಗಿತ್ತು.
ನನ್ನ 18ನೇ ಜನ್ಮದಿನದ ಒಂದು ತಿಂಗಳ ಮುಂಚೆ, ಮನೆಯಿಂದ ದೂರ ಹೊರಟು ಹೋಗುವ ಕಾರಣದಿಂದ ನಾನು ಮಿಲಿಟರಿಗೆ ಸೇರಿದೆ. ಅಷ್ಟರ ತನಕ ನಾನು ಎಂದೂ ಮದ್ಯವನ್ನು ರುಚಿಸಿರಲಿಲ್ಲ, ಆದರೆ ಬಹುಮಟ್ಟಿಗೆ ತತ್ಕ್ಷಣವೇ ನಾನು ಕುಡಿಯಲು ಪ್ರಾರಂಭಿಸಿದೆ ಮತ್ತು ತದ್ರೀತಿಯಲ್ಲಿ ತತ್ಕ್ಷಣವೇ ವ್ಯಸನಿಯಾದೆ. 20 ವರ್ಷಗಳ ತನಕ ನಾನು ಮಿಲಿಟರಿಯಲ್ಲಿದ್ದೆ ಮತ್ತು ಮದ್ಯವನ್ನು ಕೊಳ್ಳಲು ಬೇಕಾಗಿರುವ ಹಣಕ್ಕಾಗಿ ಯಾವ ವಿಧದಲ್ಲಿಯಾದರೂ ಭಿಕ್ಷೆಬೇಡಿಯೋ, ಸಾಲ ಪಡೆದೋ, ಯಾ ಕದ್ದೋ ನಾನು ಕುಡಿಯುತ್ತಿದ್ದೆ. ನಾನು 24 ವರ್ಷದವನಾಗಿದ್ದಾಗ ಮದುವೆಯಾದೆ ಮತ್ತು ನನಗೆ ಒಬ್ಬ ಮಗನಿದ್ದ. ಆದರೆ ನನ್ನ ಪತ್ನಿ ಹಾಗೂ ಮಗನು ಮದ್ಯವ್ಯಸನಿ—ನಾನು—ಯಿಂದ ಆಳಲ್ಪಟ್ಟ ಮತ್ತು ನಿಯಂತ್ರಿಸಲ್ಪಟ್ಟ ಒಂದು ಮನೆಯಲ್ಲಿ, ಯಾರು ಅವರನ್ನು ಒಂದು ಹೊರೆಯಾಗಿ ಮತ್ತು ಅನಾವಶ್ಯಕ ಖರ್ಚಾಗಿ ನೋಡುತ್ತಿದ್ದನೋ ಅಂಥ ಮನೆಯಲ್ಲಿ ವಾಸಿಸುತ್ತಿದ್ದರು.
1974ರಲ್ಲಿ ಮಿಲಿಟರಿಯಿಂದ ನಾನು ನಿವೃತ್ತನಾದೆ ಮತ್ತು ಸ್ವಲ್ಪ ಸಮಯಕ್ಕಾಗಿ ವ್ಯಾಪಾರವನ್ನು ಮಾಡಲು ಪ್ರಯತ್ನಿಸಿದೆ, ಆದರೆ ಅದನ್ನು ನಾನು ಬೇಗನೇ ಬಿಟ್ಟೆ. ಹೆಚ್ಚು ಮದ್ಯವನ್ನು ನನ್ನ ದೇಹಕ್ಕೆ ಸಹಿಸಲಸಾಧ್ಯವಾಗಿದ್ದ ಕಾರಣ, ನಾನು ಮದ್ಯವನ್ನು ಕುಡಿಯುತ್ತಿರಲಿಲ್ಲ. ಕೇವಲ ಒಂದು ಯಾ ಎರಡು ಗ್ಲಾಸ್ ಬಿಯರನ್ನು ಕುಡಿದ ಬಳಿಕ ಚರ್ಮದ ಮೇಲಿನ ಗುಳ್ಳೆಗಳ ಮೂಲಕ ವ್ಯಾಧಿಗೊಳಪಡುತ್ತಿದ್ದೆ. ಈಗ ನಾನು ಅಮಲೌಷಧಕ್ಕೆ ವ್ಯಸನಿಯಾಗಿದ್ದೆ—ಅಧಿಕಾಂಶ ಮಾರಿವಾನ, ಆದರೆ ಆವ್ಯಶಕತೆಯಿದ್ದಾಗ ಇತರ ಮಯಕ ಬರಿಸುವ ವಸ್ತುಗಳು. ಇದು ಯಾವುದೇ ರೀತಿಯ ಉದ್ಯೋಗದಲ್ಲಿರಲು ನನಗೆ ಅಸಾಧ್ಯವಾಗಿ ಮಾಡಿತು, ಆದುದರಿಂದ ನನ್ನ ಪತ್ನಿ ಡಾನ ಕೆಲಸ ಮಾಡುತ್ತಿದ್ದಾಗ, ನಾನು ಮನೆಯಲ್ಲಿಯೇ ಉಳಿದು ಮನೆಗೆಲಸ ಮಾಡುತ್ತಿದ್ದೆ.
ಯೆಹೋವನ ಸಾಕ್ಷಿಗಳು ನನ್ನ ಮನೆಗೆ ಭೇಟಿನೀಡಿದರು
ಒಂದು ಬೆಳಿಗ್ಗೆ ನನ್ನ ಪತ್ನಿ ಕೆಲಸಕ್ಕೆ ಹೊರಡುತ್ತಿದ್ದಳು. ಸಮಯ 7:30 ಆಗಿತ್ತು ಮತ್ತು ನಾನಾಗಲೇ ಅಮಲೌಷಧದ ಹಿಡಿತದಲ್ಲಿದ್ದೆ. ಇದು ಅವಳನ್ನು ಕೋಪಗೊಳಿಸಿತ್ತು. ಅವಳು ಹೋಗುವ ಹಾದಿಯಲ್ಲಿ ಮುಂಬಾಗಿಲಿನಿಂದ ಒಂದು ಜಾಹಿರಾತನ್ನು ನನ್ನೆಡೆಗೆ ಎಸೆದು ಕಿರುಚಿದ್ದು: “ಅವರು ನಿನ್ನನ್ನು ಮರಣದ ತನಕ ಕಾಡಿಸಲಿ ಎಂಬುದೇ ನನ್ನ ಹಾರೈಕೆ.” “ಯೆಹೋವನ ಸಾಕ್ಷಿಗಳು ಬೇಡ” ಎಂದು ದೊಡ್ಡ ಅಕ್ಷರಗಳಲ್ಲಿದ್ದ, ಆ ಜಾಹಿರಾತನ್ನು ಅವಳು ಯಾವಾಗಲೂ ಕಿಟಕಿಯ ಮೇಲೆ ಇಡುತ್ತಿದ್ದಳು. ಅದನ್ನು ನಾನು ಕಚಡದಲ್ಲಿ ಹಾಕಿದೆ. ಮರುದಿನ ಬೆಳಿಗ್ಗೆ ಇಬ್ಬರು ಹೆಂಗಸರು ನನ್ನ ಬಾಗಿಲಿಗೆ ಬಂದರು. ಅವರು ಯೆಹೋವನ ಸಾಕ್ಷಿಗಳಾಗಿದ್ದರು.
ಇಷ್ಟರಲ್ಲೇ ನಾನು ಬೌದ್ಧಧರ್ಮವನ್ನು ನನ್ನ ಧರ್ಮವನ್ನಾಗಿ ಅಂಗೀಕರಿಸಿದ್ದೆ. ನನ್ನ ಯೆಹೂದಿ ಮತ್ತು ಕ್ಯಾತೊಲಿಕ ಹೆತ್ತವರ ಕಪಟತನದ ಕಾರಣ ನಾನು ಬಹಳ ಹಿಂದೆಯೇ ಬೈಬಲನ್ನು ತಿರಸ್ಕರಿಸಿದ್ದೆ. ಒಂದು ಸಮಯದಲ್ಲಿ ನಾನು ದೇವರಿಗಾಗಿ ಹುಡುಕಾಡಿದ್ದೆ, ಆದರೆ ದೇವರಿಲ್ಲವೆಂದು ಭಾವಿಸಿ ಹುಡುಕುವುದನ್ನು ಬಿಟ್ಟುಬಿಟ್ಟೆ. ನಾನು ವಿಕಾಸವಾದದಲ್ಲಿ ನಂಬಿದ್ದೆ ಮತ್ತು ಮಳೆಗಾಲದ ಮಿಂಚಿನ ಸಮಯದಲ್ಲಿ ಹೊರಗೆ ಬಯಲು ಸ್ಥಳದಲ್ಲಿ ನಿಂತುಕೊಂಡು, ಮೇಲೆ ನೋಡುತ್ತಾ ನಾನು ಜ್ಞಾಪಿಸಿಕೊಳ್ಳ ಸಾಧ್ಯವಿದ್ದ ಪ್ರತಿ ಅಸಹ್ಯವಾದ ಹೆಸರಿನಿಂದ ದೇವರನ್ನು ಕರೆಯುತ್ತಾ ಹೀಗೆ ಹೇಳುತ್ತಿದ್ದೆ: “ನೀನು ಇರುವುದಾದರೆ, ನನ್ನನ್ನು ಕೊಲ್ಲು.” ಈ ಮೂಲಕ ನಾನು ದೇವರು ಇಲ್ಲವೆಂದು ರುಜುಪಡಿಸಿದೆನೆಂದು ನಾನು ಎಣಿಸಿದೆ. ನಾನು ದೇವರಾಗಿದ್ದರೆ ಹಾಗೆ ಮಾಡುತ್ತಿದ್ದೆ. ದೇವರು ಹಾಗೆ ಮಾಡದಿದ್ದ ಕಾರಣ, ದೇವರು ಇರಲು ಸಾಧ್ಯವಿಲ್ಲವೆಂಬ ಮುಕ್ತಾಯಕ್ಕೆ ನಾನು ಬಂದೆ. ನಾಶಮಾಡುವುದನ್ನು ನಿಲ್ಲಿಸಲು ಮನುಷ್ಯನ ಅಸಾಮರ್ಥ್ಯದ ಕಾರಣ ಲೋಕವು ನಾಶವಾಗುತ್ತದೆಂದು ನಾನು ನೆನಸಿದ್ದೆ ಮತ್ತು ಅಮಲೌಷಧದ ಹಿಡಿತದಲ್ಲಿರುವಾಗಲೇ ಸಂಭವಿಸುವುದೆಲ್ಲವನ್ನು ಟಿವಿಯಲ್ಲಿ ನೋಡಸಾಧ್ಯವಾಗುವಂತೆ ನಾನು ಆಶಿಸುತ್ತಿದ್ದೆ.
ಅದರಂತೆಯೇ, ಮರುದಿನ ಬೆಳಿಗ್ಗೆ ಆ ಇಬ್ಬರು ಹೆಂಗಸರು ಬಂದರು. ನಾನು ಅಮಲೌಷಧದ ಹಿಡಿತದಲ್ಲಿದ್ದೆ ಮತ್ತು ವಿನೋದಕ್ಕಾಗಿ ಎದುರುನೋಡುತ್ತಿದ್ದೆ. 25 ಸೆಂಟುಗಳ ಒಂದು ಚಿಕ್ಕ ನೀಲಿ ಪುಸ್ತಕದ ಅವರ ಕೊಡುವಿಕೆಯೊಂದಿಗೆ ಅಂತ್ಯಗೊಂಡ, ಸುಮಾರು 20 ನಿಮಿಷಗಳ ಒಂದು ಅರ್ಥಹೀನ ಸಂಭಾಷಣೆಯನ್ನು ನಾವು ಮಾಡಿದೆವು. 20 ನಿಮಿಷಗಳ ವಿನೋದವು 25 ಸೆಂಟುಗಳ ಬೆಲೆಯುಳ್ಳದ್ದೆಂದು ನಾನು ಎಣಿಸಿ, ಆ ಪುಸ್ತಕವನ್ನು ತೆಗೆದುಕೊಂಡು ಆಸಕ್ತಿಯಿಲ್ಲದೆ ಅದನ್ನು ಮೇಜಿನ ಮೇಲೆ ಎಸೆದೆ.
ಮರುದಿನ ಬೆಳಿಗ್ಗೆ, ಕೊಂಚ ಸಮಯಕ್ಕಾಗಿ ಮಾರಿವಾನದ ಸೇವನೆಯನ್ನು ಮುಂದೂಡಲು ಸಾಧ್ಯವಾಗುವಂತೆ ಏನನ್ನಾದರೂ ಓದಲು ನಾನು ಎದುರುನೋಡುತ್ತಿದ್ದೆ. ನಾನು ಆ ಚಿಕ್ಕ ನೀಲಿ ಪುಸ್ತಕವನ್ನು ನೋಡಿದೆ ಮತ್ತು ಅದು ನನ್ನನ್ನು ಒಂದು ಘಂಟೆಗಾದರೂ ಮನೋರಂಜಿಸಬಹುದೆಂದು ಆಶಿಸಿ ಅದನ್ನು ತೆಗೆದುಕೊಂಡೆ. ನಾಲ್ಕು ಘಂಟೆಗಳ ಅನಂತರ ನಾನು ಆ ಪುಸ್ತಕವನ್ನು ಓದಿ ಮುಗಿಸಿದ್ದೆ ಮತ್ತು ಅದರ ಮೇಲಿಷ್ವಯವು ಏನಾಗಿತ್ತೋ ಅದು ಸರಿಯೆಂದು ನಾನು ಸಂಪೂರ್ಣವಾಗಿ ಮನಗಾಣಿಸಲ್ಪಟ್ಟೆ: ನಿತ್ಯ ಜೀವಕ್ಕೆ ನಡೆಸುವ ಸತ್ಯವು. ಮನೆಯಲ್ಲಿ ನನ್ನೊಂದಿಗೆ ಅಮಲೌಷಧವಿತ್ತು ಮತ್ತು ಪುಸ್ತಕವನ್ನು ಓದಲು ನಿಲ್ಲಿಸಿದಾಕ್ಷಣ ನಾನು ಮಂಕು ಬರಿಸುವ ಅಮಲೌಷಧಕ್ಕೆ ಒಳಗಾಗುವೆನೆಂದು ಹಾಗೂ ನಾನು ಓದಿದ ಪ್ರತಿಯೊಂದನ್ನು ಕಡೆಗಣಿಸುವನೆಂದು ನನಗೆ ಗೊತ್ತಿತ್ತು. ಕೊನೆಯ ಪುಟವು ಕೇವಲ ಒಂದು ಡಾಲರಿಗೆ ಬೈಬಲಿನ ನೀಡುವಿಕೆಯನ್ನು ಮಾಡಿತ್ತು. ಆದಕಾರಣ ಒಂದು ಡಾಲರನ್ನು ಲಕೋಟೆಯಲ್ಲಿ ಹಾಕಿ, ದೇವರಿಗೆ—ನನ್ನ ಆಯುಷ್ಯದಲ್ಲಿ ಪ್ರಾರ್ಥಿಸಿದ್ದಿಲ್ಲ—“ದೇವರೇ, ನನಗೆ ಮಾಡಸಾಧ್ಯವಿರುವುದು ಇಷ್ಟೇ, ಮಿಕ್ಕದ್ದನ್ನು ನೀನೇ ಮಾಡಬೇಕು,” ಎಂದು ಹೇಳಿ ರವಾನಿಸಿದೆ. ಅದನ್ನು ರವಾನಿಸಿ ಅಮಲೌಷಧದ ಹಿಡಿತಕ್ಕೊಳಗಾಗಿ, ನನ್ನನ್ನು ಆಗತಾನೇ ಅಷ್ಟು ಆಳವಾಗಿ ಪ್ರಚೋದಿಸಿದ್ದ ಎಲ್ಲವನ್ನೂ ಕಡೆಗಣಿಸಿದೆ.
ಬೈಬಲ್ ಅಂಚೆಯಲ್ಲಿ ಬಂತು, ಆದರೆ ಅದನ್ನು ನಾನು ಬದಿಗಿಟ್ಟೆ. ತರುವಾಯ, ಕೂಡಲೆ ಇಬ್ಬರು ಸಾಕ್ಷಿಗಳು ಬಂದರು ಮತ್ತು ನನ್ನೊಂದಿಗೆ ಬೈಬಲ್ ಅಭ್ಯಾಸವನ್ನು ಮಾಡಲು ಸಿದ್ಧರಿದ್ದೇವೆಂದು ಹೇಳಿದರು, ಮತ್ತು ನಾನು ಒಪ್ಪಿದೆ. ಅಭ್ಯಾಸಗಳು ಸಂತೋಷದಾಯಕವಾಗಿದ್ದವು, ಆದರೆ ಅಭಿವೃದ್ಧಿಯಿರಲಿಲ್ಲ ಯಾಕೆಂದರೆ ಬಹುಮಟ್ಟಿಗೆ ತತ್ವಶಾಸ್ತ್ರದ ನನ್ನ ಜ್ಞಾನದೊಂದಿಗೆ ಅವರನ್ನು ಪ್ರಭಾವಿಸಲು ನಾನು ಪ್ರಯತ್ನಿಸುತ್ತಿದ್ದೆ. ಅಲ್ಲದೆ, ಅವರು ಹೊರಟು ಹೋದ ತಕ್ಷಣ ನಾನು ಅಮಲೌಷಧಗಳನ್ನು ಉಪಯೋಗಿಸುತ್ತಿದ್ದೆ, ಮತ್ತು ಇದು ಆ ದಿನದಲ್ಲಿ ಮಾಡಿದ ಯಾವುದೇ ಪ್ರಗತಿಯನ್ನು ತೊಡೆದುಹಾಕಿಬಿಡುತ್ತಿತ್ತು.
ಕಟ್ಟಕಡೆಗೆ, ಒಂದು ವರ್ಷದ ಬಳಿಕ, ಸಾಕ್ಷಿಗಳಲ್ಲಿ ಒಬ್ಬನಾದ ಜಿಮ್ ಬಂದು ಯೆಹೆಜ್ಕೇಲ 33:9ನ್ನು ಓದುವಂತೆ ನನ್ನನ್ನು ಕೇಳಿಕೊಂಡನು. ನಾನು ಹೀಗೆ ಓದಿದೆ: “ಆದರೆ ನೀನು ದುಷ್ಟನನ್ನು ದುರ್ಮಾರ್ಗದಿಂದ ತಪ್ಪಿಸಲು ಅವನನ್ನು ಎಚ್ಚರಿಸಿದರೂ ಅವನು ಅದನ್ನು ಬಿಡದೆಹೋದರೆ ತನ್ನ ಅಪರಾಧದಲ್ಲೇ ಸಾಯುವನು; ನೀನೋ ನಿನ್ನ ಪ್ರಾಣವನ್ನು ಉಳಿಸಿಕೊಂಡಿರುವಿ.” ಅನಂತರ ಅದು ಏನು ಅರ್ಥೈಸುತ್ತದೆಂದು ನಾನು ನೆನಸಿದೆನೆಂದು ಅವನು ನನ್ನನ್ನು ಕೇಳಿದನು. ನಾನು ಉತ್ತರಿಸಿದ್ದು: “ಅಂದರೆ ನೀನು ಹಿಂದಿರುಗಿ ಬರುವುದಿಲ್ಲ ಮತ್ತು ನಾನು ಸಾಯಲಿಕ್ಕಿದ್ದೇನೆ.” “ಅದು ಸರಿ,” ಎಂದು ಹೇಳಿ ಅವನು ಹೊರಟುಹೋದನು.
ಆ ಸಾಕ್ಷಿ ಹಿಂದಿರುಗಿದನು
ಇನ್ನೂ ನನ್ನಲ್ಲಿ ಒಂದು ಮನಸ್ಸಾಕ್ಷಿಯಿದೆಯೆಂದು ಕಂಡುಹಿಡಿದೆನೆಂದು ತಿಳಿಸಲು ನಾನು ಹರ್ಷಿಸುತ್ತೇನೆ—ಬಹು ಹಿಂದೆಯೇ ನನ್ನ ಮನಸ್ಸಾಕ್ಷಿಯನ್ನು ನಾನು ಕೊಂದಿದ್ದೆನೆಂದು ನಂಬಿದ್ದೆ. ಬೈಬಲಿನಲ್ಲಿರುವ ಭವಿಷ್ಯತ್ತಿಗಾಗಿ ಯಾವುದೋ ಒಂದು ರೀತಿಯ ಬಯಕೆ ನನಗಿದೆ ಎಂದು ಅನಿಸುತ್ತಿದ್ದ ಕಾರಣ, ಅಮಲೌಷಧದಿಂದ ಹೊರಗೆ ಬರುವ ಪ್ರಯತ್ನ ಮಾಡಲು ನಾನು ನಿರ್ಧರಿಸಿದೆ. ನಾನೇ ವಾರಗಳ ತನಕ ಯಶಸ್ವಿಯಾಗದ ಪ್ರಯತ್ನವನ್ನು ಮಾಡಿದೆ. ಒಂದು ಸಂಜೆ ನನ್ನ ಪತ್ನಿ ಆ ಸಾಕ್ಷಿಯಾದ ಜಿಮ್ನನ್ನು ನಿರ್ದೇಶಿಸುತ್ತಾ, “ಆ ಸ್ನೇಹಿತ”ನನ್ನು ಕರೆಯುವಂತೆ ನನಗೆ ಸೂಚಿಸಿದಳು. ಅವನು ಹಿಂದಿರುಗಿ ಬರುವುದಿಲ್ಲವೆಂದು ನನಗೆ ಹೇಳಿದ್ದನೆಂದೂ ಅವನ ಟೆಲಿಫೋನ್ ನಂಬ್ರ ಗೊತ್ತಿಲ್ಲವೆಂದೂ ನಾನು ಅವಳಿಗೆ ಹೇಳಿದೆ. ನಾನು ತೀರ ಆಶಾರಾಹಿತ್ಯನಾದೆ.
ಮರುದಿನವೇ, ಒಂದು ಕಾವಲಿನಬರುಜು ಜಿಮ್ನ ಟೆಲಿಫೋನ್ ನಂಬ್ರ ಅದರ ಮೇಲೆ ಬರೆಯಲ್ಪಟ್ಟದ್ದರೊಂದಿಗೆ ನಮ್ಮ ಮುಂಬಾಗಿಲಿನಲ್ಲಿ ಇರುವುದನ್ನು ನಾವು ಕಂಡುಕೊಂಡೆವು. ಅದನ್ನು ಅವನ ಪತ್ನಿ “ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ” ಬಿಟ್ಟು ಹೋಗಿದ್ದಳು. ನಾನು ಅವನಿಗೆ ಟೆಲಿಫೋನ್ ಮಾಡಿದೆ ಮತ್ತು ಮದ್ಯ ಹಾಗೂ ಅಮಲೌಷಧದ ನನ್ನ ಸಮಸ್ಯೆಯನ್ನು ಅವನಿಗೆ ನಿವೇದಿಸಿದೆ ಮತ್ತು ನನಗೆ ಸಹಾಯ ಮಾಡಬಹುದೋ ಎಂದು ಅವನನ್ನು ಕೇಳಿದೆ. ನಾನು ಅಮಲೌಷಧಗಳನ್ನು ತೆಗೆದುಕೊಳ್ಳುವುದನ್ನು ಬಿಟ್ಟುಬಿಡುವುದಾದರೆ, ತಾನು ಪ್ರತಿ ದಿನ ನನ್ನೊಂದಿಗೆ ಅಭ್ಯಾಸವನ್ನು ಮಾಡಲು ಬರುವೆನೆಂದು ನನಗೆ ಹೇಳಿದನು.
ನನ್ನ ಎಲ್ಲಾ ದಿನಗಳನ್ನು ಮತ್ತು ರಾತ್ರಿಗಳನ್ನು ಉಪಯೋಗಿಸಿದ ಗಾಢವಾದ ಅಭ್ಯಾಸದ ಒಂದು ಅವಧಿಯನ್ನು ಇದು ಪ್ರಾರಂಭಿಸಿತು. ಅವನು ನನ್ನೊಂದಿಗೆ ದಿನಾಲೂ ಅಭ್ಯಾಸ ಮಾಡಿದ್ದಷ್ಟೆ ಅಲ್ಲ, ಅವನು ನನಗೆ ಬೈಬಲ್ ಅಭ್ಯಾಸದ ಪುಸ್ತಕಗಳನ್ನು ಮತ್ತು ಕಾವಲಿನಬುರುಜು ಲೇಖನಗಳನ್ನು ಸಹ ನನಗೆ ಒದಗಿಸಿದನು. ರಾತ್ರಿಯಲ್ಲಿ ಕೇವಲ ನಾಲ್ಕು ಘಂಟೆಗಳ ಕಾಲ ನಾನು ನಿದ್ರಿಸುತ್ತಿದ್ದೆ—ಮದ್ಯವ್ಯಸನಿಗಳಿಗೆ ಇರುವ ಒಂದು ಸಾಮಾನ್ಯ ಸಮಸ್ಯೆ—ಮತ್ತು ನನ್ನ ಉಳಿದ ಸಮಯವು ಬೈಬಲ್ ಅಭ್ಯಾಸಕ್ಕಾಗಿ ಮೀಸಲಾಗಿರುತ್ತಿತ್ತು. ಅಮಲೌಷಧಗಳನ್ನು ಬಿಟ್ಟುಬಿಡುವುದರೊಂದಿಗೆ, ಹಿಂದಿನ ವರ್ಷದಲ್ಲಿ ನಾನು ಕಲಿತದ್ದೂ, ಪ್ರತಿ ದಿನ 18ರಿಂದ 20 ಘಂಟೆಗಳ ಅಭ್ಯಾಸದ ಮೂಲಕ ಕಲಿತದ್ದೂ, ಒಮ್ಮೆಲೆ ಹೃದಯಕ್ಕೆ ನಾಟಿದವು.
ಇದಲ್ಲದೆ, ನಾನು ಸಾಕ್ಷಿಗಳ ಎಲ್ಲಾ ಕೂಟಗಳಿಗೆ ಹಾಜರಾಗಲು ಪ್ರಾರಂಭಿಸಿದೆ. ಕೇವಲ ಕೆಲವೇ ವಾರಗಳೊಳಗೆ, ನನ್ನ ಸಮರ್ಪಣೆಯ ಪ್ರಾರ್ಥನೆಯೂ ಆಗಿದ್ದ, ನನ್ನ ಜೀವನದ ನಿಜವಾದ ಮೊದಲನೆಯ ಪ್ರಾರ್ಥನೆಯ ಮಟ್ಟಕ್ಕೆ ನಾನು ಪ್ರಗತಿಯನ್ನು ಮಾಡಿದ್ದೆ. ಮನೆಯಿಂದ ಮನೆಗೆ ಹೋಗಲು ಮತ್ತು ನನಗೆ ಗೊತ್ತಿರುವ ಪ್ರತಿಯೊಬ್ಬರಿಗೂ ನಾನು ಸಾರಲು ಪ್ರಾರಂಭಿಸಿದೆ. ಏಳು ಅಭ್ಯಾಸಗಳು ಪ್ರಾರಂಭವಾದವು, ಇವುಗಳಲ್ಲಿ ನನ್ನ ಪತ್ನಿ ಮತ್ತು ಮಗನನ್ನೊಳಗೊಂಡು, ಐದು ದೀಕ್ಷಾಸ್ನಾನಕ್ಕೆ ಪ್ರಗತಿ ಹೊಂದಿದವು. “ಆ ಸ್ನೇಹಿತ,”ನಿಗೆ ನಾನು ಟೆಲಿಫೋನ್ ಮಾಡಿದ ಕೇವಲ ಮೂರು ತಿಂಗಳುಗಳ ಬಳಿಕ, ಮೇ 23, 1976ರ ಸರ್ಕಿಟ್ ಸಮ್ಮೇಳನವೊಂದರಲ್ಲಿ ನಾನು ದೀಕ್ಷಾಸ್ನಾನ ಪಡೆದೆ. ನಾನು ಪಯನಿಯರಿಂಗ್ (ಪೂರ್ಣ ಸಮಯದ ಸಾರುವಿಕೆ) ಪ್ರಾರಂಭಿಸಿದೆ ಮತ್ತು 13 ವರ್ಷಗಳ ತನಕ ಮುಂದುವರಿಸಿದೆ.
ಇದು ಈ ಕಥೆಯನ್ನು ಪ್ರಾರಂಭಿಸಿದಲ್ಲಿಗೆ—50 ವರ್ಷ ಪ್ರಾಯ, ಮನೆಯಲ್ಲಿ ಏಕಾಂಗಿಯಾಗಿ ಕುಳಿತುಕೊಂಡು, ಮತ್ತು ಒಂದು ಪುಸ್ತಕದ ಕಾರಣ ಅಳುತ್ತಿದ್ದೆ—ನನ್ನನ್ನು ಕರೆದುಕೊಂಡು ಹೋಗುತ್ತದೆ. 80ಗಳಲ್ಲಿ ಸ್ವಪ್ರಯತ್ನ ಕೈಪಿಡಿಗಳು ಅತ್ಯಂತ ಜನಪ್ರಿಯವಾಗಿದ್ದವು, ಮತ್ತು ಅವುಗಳಲ್ಲಿ ಒಂದನ್ನು ನಾನು ಓದಿದೆ. ಸ್ಪಷ್ಟವಾಗಿಗಿ ಹೇಳುವದಾದರೆ ಆ ಸ್ವಪ್ರಯತ್ನದ ಭಾಗವು ನನಗೆ ಸಹಾಯ ಮಾಡಲಿಲ್ಲ. ಅದು ನೀಡಿದ ಲೌಕಿಕ ವಿಷಯಗಳನ್ನು ಅನುಸರಿಸುವ ಒಲವು ನನಗನಿಸಲಿಲ್ಲ ಆದರೆ ಆ ಪುಸ್ತಕವು ಪ್ರಥಮ ಬಾರಿಗೆ ನನ್ನ ಬಾಲ್ಯಾವಸ್ಥೆಯ ಕಲೆಗೊಂಡ ವರ್ಷಗಳು ಮತ್ತು ಪ್ರೀತಿಗಾಗಿ ಹಂಬಲಿಸಿದ ಭಾವನಾತ್ಮಕ ಅಗತ್ಯತೆಗಳು ನನ್ನನ್ನು ಭಾವನಾತ್ಮಕವಾಗಿ ಹೇಗೆ ಶಕ್ತಿಗುಂದಿಸಿದ್ದವೆಂದು ನೋಡುವಂತೆ ಮಾಡಿತು. ಕಣ್ಣೀರು ಆನಂದಬಾಷ್ಪವೂ ದುಃಖಾಶ್ರುವೂ ಆಗಿತ್ತು. ಭಾವಾತ್ಮಕವಾಗಿ ಅನಿಸಿಕೆಯಾಗುವ ಸಾಮರ್ಥ್ಯದಲ್ಲಿ ನನಗೆ ಅಷ್ಟು ಕೊರತೆ ಯಾವಾಗಲೂ ಯಾಕಿತ್ತು ಎಂಬುದನ್ನು ತಿಳಿದುಕೊಳ್ಳಲು ನನಗೆ ಈಗ ಸಾಧ್ಯವಾದುದಕ್ಕೆ ಆನಂದಬಾಷ್ಪವೂ, ಭಾವಾತ್ಮಕ ಮಾನವನಾಗಿದ್ದರೂ ಭಾವಾತ್ಮಕವಾಗಿ ಪ್ರತಿಕ್ರಿಯೆ ತೋರಿಸಲು ಅಶಕ್ತನಾಗಿ 50 ವರ್ಷಕಾಲ ಮಹಾ ನಷ್ಟವನ್ನು ಅನುಭವಿಸಿದ್ದಕ್ಕಾಗಿ ದುಃಖಾಶ್ರುವೂ ಬಂತು. ಇದು ನನ್ನ ಜೀವನದುದ್ದಕ್ಕೂ ಅನುಭವಿಸಿದ ಖಿನ್ನತೆಯ ಆ ಅನೇಕ ಸರದಿಗಳನ್ನು ವಿವರಿಸಿತು.
ಕ್ರಮೇಣ, ನನಗೂ ಸಹ, ವೈಯಕ್ತಿಕವಾಗಿ ಹಿಂದೆ ಎಂದೂ ಅನಿಸದ ಭಾವನಾತ್ಮಾಕ ಅನಿಸಿಕೆಗಳು, ಯೆಹೋವನ ಮತ್ತು ಆತನ ಪ್ರೀತಿಯ ಕುರಿತಾಗಿ ಬೈಬಲಿನಲ್ಲಿ ಓದುವಾಗ ಆದವು. ನನ್ನ ಪತ್ನಿ ಮತ್ತು ಮಗನಿಗಾಗಿ ಪ್ರೀತಿ, ದೇವರ ಸಭೆಯಲ್ಲಿರುವ ನನ್ನ ಸಹೋದರರು ಮತ್ತು ಸಹೋದರಿಯರಿಗಾಗಿ ನನ್ನ ಪ್ರೀತಿ, ಮತ್ತು ದೇವರ ರಾಜ್ಯದ ಸುಸಂದೇಶವನ್ನು ನಾನು ಸಾರುವ ವ್ಯಕ್ತಿಗಳಿಗೂ, ಇದೇ ಭೂಮಿಯಲ್ಲಿ ಯೆಹೋವನ ವಾಗ್ದಾನಿತ ನೀತಿಯ ಹೊಸ ಲೋಕದಲ್ಲಿ ಸದಾಕಾಲ ಜೀವಿಸುವಂಥ ಸುಯೋಗವನ್ನು ಅವರೂ ಪಡೆಯಲಿ ಎನ್ನುವ ಪ್ರೀತಿಯು ಇದಾಗಿತ್ತು.
ಪ್ರೀತಿಸಲು ಮತ್ತು ಪ್ರೀತಿಸಲ್ಪಡಲು ಸೃಷ್ಟಿಸಲ್ಪಟ್ಟದ್ದು
ನಾವು ಪ್ರೀತಿಸಲು ಮತ್ತು ಪ್ರೀತಿಸಲ್ಪಡಲು ಸೃಷ್ಟಿಸಲ್ಪಟ್ಟಿದ್ದೇವೆ. ಒಂದು ಮಗುವು ಹುಟ್ಟಿದಾಗ, ಆ ಮಗುವಿಗೆ ಪ್ರೀತಿಯ ಮತ್ತು ಅಂಗೀಕರಿಸಲ್ಪಡುವ ಆವಶ್ಯಕತೆಯಿದೆ. ಒಂದು ಮಗುವು ತನ್ನ ಹೆತ್ತವರಿಂದ ಪ್ರೀತಿಯನ್ನು ಮತ್ತು ಅಂಗೀಕಾರವನ್ನು ಪಡೆಯದಿರುವಾಗ, ಅವನಿಗೆ ಅಪ್ರೀತಿಯೋಗ್ಯನಾಗಿರುವ ಮತ್ತು ಆತ್ಮಮೌಲ್ಯವಿಲ್ಲದಿರುವ ಅನಿಸಿಕೆಯಾಗುತ್ತದೆ. ನಾನು ಬಹಳ ಚಿಕ್ಕವನಿದ್ದಾಗ, ಎತ್ತಿಕೊಳ್ಳಲ್ಪಡುವಂತೆ, ಹಿಡಿದುಕೊಂಡು ಮುದ್ದಿಸಲ್ಪಡುವಂತೆ ಬಯಸುತ್ತಿದ್ದೆ. ಸಂದರ್ಶಕರು ಮನೆಯೊಳಗೆ ಬಂದಾಗ, ಆಟದ ಆವರಣದಲ್ಲಿರುತ್ತಿದ್ದ ನನ್ನೆಡೆಗೆ ಅವರು ನೋಡುತ್ತಿದ್ದರು ಮತ್ತು ನನ್ನನ್ನು ಅವರು ಎತ್ತಿಕೊಳ್ಳಬಹುದೆಂದು ನಾನು ಆಶಿಸುತ್ತಿದ್ದೆ. ಅವರು ಎಂದೂ ಹಾಗೆ ಮಾಡಲಿಲ್ಲ, ಯಾರೊಬ್ಬರೂ ನನ್ನನ್ನು ಎತ್ತಿಕೊಳ್ಳದ ಕಾರಣ ನಾನು ಅಳಲು ಪ್ರಾರಂಭಿಸುತ್ತಿದ್ದೆ.
ಅಂಥ ಬಾಲ್ಯಾವಸ್ಥೆಯ ಕಲೆಗಳು ಪತಿ ಮತ್ತು ಕುಟುಂಬದ ತಲೆಯೋಪಾದಿ ನನ್ನ ಪಾತ್ರವನ್ನು ಶಕ್ತಿಗುಂದಿಸಿದ್ದವು ಮತ್ತು ಸ್ವರ್ಗೀಯ ತಂದೆಯಾದ, ಯೆಹೋವನು ನನ್ನನ್ನು ಪ್ರೀತಿಸಲು ಸಾಧ್ಯವಿದೆಯೆಂದು ನಂಬಲು ನನ್ನನ್ನು ಅಸಮರ್ಥನನ್ನಾಗಿ ಮಾಡಿತು. ಯೆಹೋವನ ಕುರಿತಾದ ಸತ್ಯವು ಕ್ರಮೇಣ ನನ್ನನ್ನು ಬದಲಾಯಿಸಿತು, ಆತನ ಕುರಿತಾದ ಸಾಮಾನ್ಯಜ್ಞಾನವನ್ನು ನನ್ನ ತಲೆಯಿಂದ ಹೃದಯಕ್ಕೆ ಹೋಗುವಂತೆ ಪ್ರೇರಿಸಿತು, ಮತ್ತು ಅನಿರ್ಬಂಧವಾಗಿ ನನ್ನನ್ನು ಯೆಹೋವನು ಪ್ರೀತಿಸುತ್ತಾನೆಂದು ನನಗೆ ಈಗ ಗೊತ್ತು. ನಾವು ಆ ಪ್ರೀತಿಯನ್ನು ಸಂಪಾದಿಸಲು ಬೇರೆ ಯಾವ ವಿಧವು ಇಲ್ಲವೆಂದೂ ನನಗೆ ಗೊತ್ತು. ಅದು ಪ್ರೀತಿಯ ದೇವರಾದ, ಯೆಹೋವ ದೇವರಿಂದ ಬರುವ ಒಂದು ಅಪಾತ್ರ ದಯೆಯಾಗಿದೆ.
ಇವೆಲ್ಲವುಗಳಲ್ಲಿ ಎದ್ದುಕಾಣುವ ವಿಷಯವೇನೆಂದರೆ, ಯೆಹೋವನ ಆಶೀರ್ವಾದಗಳ ಕಾರಣ, ನನ್ನ ಪತ್ನಿ ಮತ್ತು ನಾನು ಈಗ ಒಂದು ಒಳ್ಳೆ ಜೀವನವನ್ನು ಅನುಭವಿಸುತ್ತೇವೆ. ಸದ್ಯಕ್ಕೆ ರಾಜ್ಯದ ಪ್ರಚಾರಕರು ಹೆಚ್ಚಾಗಿ ಅವಶ್ಯವಿರುವಲ್ಲಿ, ಅರಿಸೋನದ ಪರ್ವತಗಳ ಚಿತ್ರಯೋಗ್ಯವಾದ ಒಂದು ಚಿಕ್ಕ ಪಟ್ಟಣದಲ್ಲಿ, ಸಣ್ಣದಾದ ಒಂದು ಪ್ರೀತಿಯ ಸಭೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ನಾನು ಸಭೆಯ ಅಧ್ಯಕ್ಷ ಮೇಲ್ವಿಚಾರಕನೋಪಾದಿ ಸೇವೆ ಸಲ್ಲಿಸುತ್ತಿದ್ದೇನೆ, ಸಭೆಯ ಪುಸ್ತಕ ಅಭ್ಯಾಸವೊಂದನ್ನು ನಿರ್ವಹಿಸುತ್ತಿದ್ದೇನೆ, ಮತ್ತು ದೇವಪ್ರಭುತ್ವ ಶುಶ್ರೂಷಾ ಶಾಲೆಯನ್ನೂ ನಿರ್ವಹಿಸುತ್ತಿರುವುದು ನನ್ನ ಮಹತ್ತರವಾದ ಸಂತೋಷವಾಗಿದೆ. ನನ್ನ ವಿಶ್ರಾಂತಿ ವೇತನಕ್ಕೆ ಕೂಡಿಸಲು ಒಂದು ಸಣ್ಣ ಕಿಟಕಿ ತೊಳೆಯುವ ವ್ಯಾಪಾರವು ನನಗಿರುವ ಕಾರಣ ಲೌಕಿಕವಾಗಿ ಅವಶ್ಯವಿರುವ ಸಕಲವೂ ನಮಗಿದೆ ಮಾತ್ರವಲ್ಲ ನಮ್ಮ ಶೂಶ್ರೂಷೆಗೂ, ನಮ್ಮ ಪ್ರೀತಿಯ ಸ್ವರ್ಗೀಯ ಪಿತನಿಗೆ ನಾವು ಮಾಡುವ ಮಿಕ್ಕ ಸೇವೆಗೂ ಸಾಕಷ್ಟು ಸಮಯವಿದೆ.
ನನ್ನ ಪತ್ನಿ “ಯೆಹೋವನ ಸಾಕ್ಷಿಗಳು ಬೇಡ” ಎನ್ನುವ ಆ ಜಾಹಿರಾತನ್ನು ನನ್ನೆಡೆಗೆ ಎಸೆದ ಆ ಬೆಳಿಗ್ಗೆಯನ್ನು ನಾನು ಹಿಂದಿರುಗಿ ನೋಡುವಾಗ, ನನಗಾಗಿ ಮಾಡಿರುವ ವಿಷಯಗಳಿಗಾಗಿ ಆ ನನ್ನ ಸ್ವರ್ಗೀಯ ತಂದೆಗೆ ನಾನು ಕೃತಜ್ಞತೆಯಿಂದ ತುಂಬುತ್ತೇನೆ. ಒಬ್ಬ ವ್ಯಸನಿಯಾಗಿ ಒಂದು ಕೆಲಸದಲ್ಲಿರಲು ಅಸಮರ್ಥನಾಗಿದ್ದ ಮತ್ತು ನನ್ನೊಂದಿಗೆ ಪ್ರತಿಯೊಬ್ಬರು ಕೊಲ್ಲಲ್ಪಡುವದನ್ನು ನೋಡುವ ಒಂದೇ ನಂಬಿಕೆಯಿದ್ದ ನಾನು ಈಗ ಭೂಮಿಯ ಮೇಲೆ ಯೆಹೋವನ ದೃಶ್ಯ ಸಂಸ್ಥಾಪನೆಯ ಒಬ್ಬ ಸದಸ್ಯನಾಗಿದ್ದೇನೆ ಮತ್ತು ವಿಶ್ವಕ್ಕಾಗಿರುವ ಒಂದೇ ನಿರೀಕ್ಷೆಯಾದ, ದೇವರ ರಾಜ್ಯದ ಸುಸಂದೇಶವನ್ನು ಸಾಧ್ಯವಾಗುವಷ್ಟು ಜನರಿಗೆ ತಿಳಿಯಪಡಿಸಲು ನನ್ನನ್ನು ಒಪ್ಪಿಸಿಕೊಂಡಿದ್ದೇನೆ. ಯಾವಾಗಲೂ ನಾನು ಏನು ಬಯಸಿದ್ದನೋ ಅದನ್ನು—ಪ್ರೀತಿ, ಭರವಸೆ ಮತ್ತು ಅಂಗೀಕಾರ—ನೀಡುವ ಜನರಿಂದ ಸಹ ಯೆಹೋವನು ನನ್ನ ಜೀವನವನ್ನು ತುಂಬಿಸಿದ್ದಾನೆ.
ಮತ್ತು ನೋವನಿಸದ ಒಂದು “ಬಂಡೆ”ಯಂತೆ ಯಾ ಎಂದೂ ಅಳದಿರುವ ಒಂದು “ದ್ವೀಪ”ದಂತೆ ಇರಲು ಇನ್ನೆಂದೂ ನಾನು ಪ್ರಯತ್ನಿಸುತ್ತಿಲ್ಲ.—ಲ್ಯಾರಿ ರೂಬನ್ರವರಿಂದ ಹೇಳಲ್ಪಟ್ಟಂತೆ.
[ಪುಟ 17 ರಲ್ಲಿರುವ ಚಿತ್ರ]
ಲ್ಯಾರಿ ರೂಬನ್ ಮತ್ತು ಅವರ ಪತ್ನಿ, ಡಾನ