ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g19 ನಂ. 2 ಪು. 12-13
  • ಮಾರ್ಗದರ್ಶನದ ಪ್ರಾಮುಖ್ಯತೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾರ್ಗದರ್ಶನದ ಪ್ರಾಮುಖ್ಯತೆ
  • ಎಚ್ಚರ!—2019
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮಕ್ಕಳಿಗೆ ಯಾರು ಮಾರ್ಗದರ್ಶನ ನೀಡಬೇಕು?
  • ಮಕ್ಕಳಿಗೆ ಯಾಕೆ ದೊಡ್ಡವರ ಮಾರ್ಗದರ್ಶನ ಬೇಕು?
  • ಮಾರ್ಗದರ್ಶನವನ್ನು ಕೊಡುವುದು ಹೇಗೆ?
  • ಮಕ್ಕಳಿಗೆ ಹೆತ್ತವರ ಮಾರ್ಗದರ್ಶನ ಎಷ್ಟು ಪ್ರಾಮುಖ್ಯ?
    ಸುಖೀ ಸಂಸಾರಕ್ಕೆ ಸಲಹೆಗಳು
  • ತಾರುಣ್ಯ ಪ್ರಾಪ್ತವಯಸ್ಸಿಗೆ ತಯಾರಿ
    ಎಚ್ಚರ!—2011
  • ಮಕ್ಕಳನ್ನು ಬೆಳೆಸಲು ಭರವಸಾರ್ಹ ಸಲಹೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಹೋಗಲು ಬಿಡುವುದನ್ನು ಕಲಿಯುವುದು
    ಎಚ್ಚರ!—1998
ಇನ್ನಷ್ಟು
ಎಚ್ಚರ!—2019
g19 ನಂ. 2 ಪು. 12-13
ಒಬ್ಬ ಸ್ತ್ರೀ ಒಂದು ಮಗುವಿಗೆ ತನ್ನ ಹಳೇ ಫೋಟೋಗಳನ್ನು ತೋರಿಸುತ್ತಿದ್ದಾಳೆ

ಪಾಠ 5

ಮಾರ್ಗದರ್ಶನದ ಪ್ರಾಮುಖ್ಯತೆ

ಮಕ್ಕಳಿಗೆ ಯಾರು ಮಾರ್ಗದರ್ಶನ ನೀಡಬೇಕು?

ಮಕ್ಕಳಿಗೆ ದೊಡ್ಡವರ ಮಾರ್ಗದರ್ಶನ ಮತ್ತು ಸಲಹೆಯ ಅಗತ್ಯ ಇದೆ. ಬೇರೆಲ್ಲರಿಗಿಂತ ಹೆತ್ತವರಾದ ನೀವೇ ಇದನ್ನು ಉತ್ತಮ ರೀತಿಯಲ್ಲಿ ಪೂರೈಸಬಲ್ಲಿರಿ. ಇದು ನಿಮ್ಮ ಕರ್ತವ್ಯ ಸಹ. ಬೇರೆ ಅನುಭವಸ್ಥರು ಕೂಡ ನಿಮ್ಮ ಮಕ್ಕಳಿಗೆ ಸಲಹೆ-ಸಹಾಯ ನೀಡಬಹುದು.

ಮಕ್ಕಳಿಗೆ ಯಾಕೆ ದೊಡ್ಡವರ ಮಾರ್ಗದರ್ಶನ ಬೇಕು?

ಅನೇಕ ದೇಶಗಳಲ್ಲಿ ಯುವಕರು ದೊಡ್ಡವರೊಟ್ಟಿಗೆ ಹೆಚ್ಚು ಬೆರೆಯುವುದಿಲ್ಲ. ಇದನ್ನು ನೋಡಿ:

  • ಮಕ್ಕಳು ದಿನದ ಹೆಚ್ಚಿನ ಸಮಯ ಶಾಲೆಯಲ್ಲಿರುತ್ತಾರೆ. ಅಲ್ಲಿ ಶಿಕ್ಷಕರಿಗಿಂತ ಮಕ್ಕಳೇ ಜಾಸ್ತಿ ಇರುತ್ತಾರೆ.

  • ಶಾಲೆಯಾದ ಮೇಲೆ ಮಕ್ಕಳು ಮನೆಗೆ ಬರುತ್ತಾರೆ, ಆದರೆ ಹೆಚ್ಚಿನ ಹೆತ್ತವರು ಕೆಲಸಕ್ಕೆ ಹೋಗುವುದರಿಂದ ಆ ಮಕ್ಕಳು ಒಂಟಿಯಾಗಿ ಮನೆಯಲ್ಲಿ ಇರಬೇಕಾಗುತ್ತದೆ.

  • ಅಮೆರಿಕದ ಒಂದು ಅಧ್ಯಯನವು ಹೇಳುವ ಪ್ರಕಾರ 8 ರಿಂದ 12 ವಯಸ್ಸಿನ ಮಕ್ಕಳು ದಿನದ 6 ತಾಸುಗಳನ್ನು ಟಿ.ವಿ., ಮೊಬೈಲ್‌ ಅಥವಾ ಗೇಮ್‌ಗಳಲ್ಲಿ ಕಳೆಯುತ್ತಾರೆ.a

“ಮಕ್ಕಳು ಮಾರ್ಗದರ್ಶನೆ, ಸಲಹೆ ಮತ್ತು ಸಹಾಯಕ್ಕಾಗಿ ಬೇರೆ ಮಕ್ಕಳ ಹತ್ತಿರ ಹೋಗುತ್ತಾರೇ ಹೊರತು ತಮ್ಮ ತಂದೆ-ತಾಯಿ, ಟೀಚರ್‌ ಅಥವಾ ಬೇರೆ ದೊಡ್ಡವರ ಹತ್ತಿರ ಅಲ್ಲ.” ಎನ್ನುತ್ತದೆ ಹೋಲ್ಡ್‌ ಆನ್‌ ಟು ಯೋರ್‌ ಕಿಡ್ಸ್‌ ಎಂಬ ಪುಸ್ತಕ.

ಮಾರ್ಗದರ್ಶನವನ್ನು ಕೊಡುವುದು ಹೇಗೆ?

ನಿಮ್ಮ ಮಕ್ಕಳೊಂದಿಗೆ ಸಮಯ ಕಳೆಯಿರಿ.

ಬೈಬಲ್‌ ತತ್ವ: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು.”—ಜ್ಞಾನೋಕ್ತಿ 22:6.

ಮಕ್ಕಳು ಮಾರ್ಗದರ್ಶನಕ್ಕಾಗಿ ತಮ್ಮ ಹೆತ್ತವರ ಕಡೆಗೆ ನೋಡುತ್ತಾರೆ. ನಿಜವೇನೆಂದರೆ, ಮಕ್ಕಳು ಹದಿವಯಸ್ಸಿನಲ್ಲಿ ಕಾಲಿಡುವಾಗಲೂ ತಮ್ಮ ಗೆಳೆಯರ ಮಾತಿಗಿಂತ ಹೆತ್ತವರ ಸಲಹೆಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ. ಯು ಆ್ಯಂಡ್‌ ಯೋರ್‌ ಅಡಲೆಸೆಂಟ್‌ ಎನ್ನುವ ಪುಸ್ತಕದಲ್ಲಿ ಡಾ. ಲಾರೆನ್ಸ್‌ ಸ್ಟೇನ್ಬರ್ಗ್‌ ಹೀಗೆ ಹೇಳುತ್ತಾರೆ: “ತಾರುಣ್ಯವನ್ನು ದಾಟಿ ಯುವಕರಾಗುವ ತನಕ, ಮಕ್ಕಳ ಮನೋಭಾವದಲ್ಲಿ ಮತ್ತು ಸ್ವಭಾವದಲ್ಲಿ ಆಗುವ ಬದಲಾವಣೆಗೆ ಹೆತ್ತವರ ಮನೋಭಾವ ಮತ್ತು ನಡವಳಿಕೆಯೇ ಪ್ರಮುಖ ಕಾರಣ. ಹೆತ್ತವರ ಮಾತುಗಳನ್ನು ಅವರು ಪ್ರತಿಯೊಂದು ಸಲ ಒಪ್ಪುವುದಿಲ್ಲವಾದರೂ ಅಥವಾ ಮೆಚ್ಚುವುದಿಲ್ಲವಾದರೂ, ಹೆತ್ತವರು ಹೇಗೆ ಯೋಚಿಸುತ್ತಾರೆ ಅಂತ ತಿಳಿಯಲು ಅವರು ಇಷ್ಟಪಡುತ್ತಾರೆ ಮತ್ತು ಹೆತ್ತವರು ಹೇಳುವುದನ್ನು ಕೇಳುತ್ತಾರೆ.”

ನಿಮ್ಮ ಸಲಹೆಗಳಿಗಾಗಿ ಮಕ್ಕಳು ಆಸೆಪಡುವುದರಿಂದ ನಿಮ್ಮಿಂದ ಆಗುವುದನ್ನೆಲ್ಲಾ ಮಾಡಿ. ಮಕ್ಕಳೊಟ್ಟಿಗೆ ಸಮಯ ಕಳೆಯಿರಿ ಮತ್ತು ನಿಮ್ಮ ದೃಷ್ಟಿಕೋನವನ್ನು, ಮೌಲ್ಯಗಳನ್ನು ಮತ್ತು ಅನುಭವಗಳನ್ನು ಅವರೊಟ್ಟಿಗೆ ಹಂಚಿಕೊಳ್ಳಿರಿ.

ಒಬ್ಬ ಒಳ್ಳೇ ಸಲಹೆಗಾರನನ್ನು ಪರಿಚಯಿಸಿರಿ.

ಬೈಬಲ್‌ ತತ್ವ: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.”—ಜ್ಞಾನೋಕ್ತಿ 13:20.

ನಿಮ್ಮ ಮಕ್ಕಳಿಗೆ ಮಾರ್ಗದರ್ಶನ ನೀಡುವ, ಸಹಾಯಮಾಡುವ ಯಾರಾದರೊಬ್ಬ ಹಿರಿಯ ವ್ಯಕ್ತಿ ನಿಮಗೆ ಗೊತ್ತಾ? ನಿಮ್ಮ ಮಕ್ಕಳು ಅವರ ಜೊತೆ ಸಮಯ ಕಳೆಯುವಂತೆ ಏರ್ಪಾಡು ಮಾಡಿ. ಹಾಗಂತ, ಹೆತ್ತವರಾಗಿ ನಿಮಗಿರುವ ಜವಾಬ್ದಾರಿಯನ್ನು ನೀವು ಬಿಟ್ಟುಬಿಡಬಾರದು. ಆದರೆ ಕೇಡು ಮಾಡದ, ನಂಬಬಹುದಾದ ಒಬ್ಬ ಹಿರಿಯ ವ್ಯಕ್ತಿ ಕೊಡುವ ಪ್ರೋತ್ಸಾಹದಿಂದಾಗಿ ನೀವು ಕೊಡುವ ತರಬೇತಿಯನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ಮಕ್ಕಳಿಗೆ ಸಹಾಯವಾಗುತ್ತದೆ. ತಿಮೊಥೆಯನು ದೊಡ್ಡವನಾದಾಗಲೂ ಅಪೊಸ್ತಲ ಪೌಲನ ಸಹವಾಸದಿಂದಾಗಿ ಸಹಾಯ ಪಡೆದನು, ಪೌಲನು ಸಹ ತಿಮೊಥೆಯನ ಸಹವಾಸದಿಂದ ಪ್ರಯೋಜನ ಹೊಂದಿದನು ಎಂದು ಬೈಬಲ್‌ ಹೇಳುತ್ತದೆ. —ಫಿಲಿಪ್ಪಿ 2:20, 22.

ಕೂಡುಕುಟುಂಬ ಕಣ್ಮರೆಯಾಗಿರುವ ಈ ಕಾಲದಲ್ಲಿ ಅಜ್ಜ-ಅಜ್ಜಿ, ಚಿಕ್ಕಪ್ಪ-ದೊಡ್ಡಪ್ಪ ಹಾಗೂ ಇತರ ಸಂಬಂಧಿಕರು ಬೇರೆ ಯಾವುದೋ ಸ್ಥಳಗಳಲ್ಲಿ ಇರುತ್ತಾರೆ. ನಿಮ್ಮ ಕುಟುಂಬದವರೂ ಬೇರೆ ಬೇರೆ ಕಡೆಯಲ್ಲಿದ್ದರೆ, ನಿಮ್ಮ ಮಕ್ಕಳಲ್ಲಿ ಯಾವ ಗುಣಗಳಿರಬೇಕೆಂದು ನೀವು ಬಯಸುತ್ತೀರೋ ಅಂಥ ಗುಣಗಳಿರುವ ವ್ಯಕ್ತಿಗಳನ್ನು ಪರಿಚಯಿಸಿ, ಅವರಿಂದ ಕಲಿಯಲು ಅವಕಾಶವನ್ನು ಮಾಡಿಕೊಡಿ.

a ಅದೇ ಅಧ್ಯಯನವು, ಹದಿವಯಸ್ಕರು ಸುಮಾರು 9 ತಾಸುಗಳನ್ನು ಹೀಗೆ ಕಳೆಯುತ್ತಾರೆ ಅಂತ ತಿಳಿಸುತ್ತದೆ. ಇವುಗಳಲ್ಲಿ ಮಕ್ಕಳು ಹೋಂ ವರ್ಕ್‌ಗೆಂದು, ಬೇರೆ ಶಾಲಾ ಪ್ರಾಜೆಕ್ಟ್‌ಗೆಂದು ಅಥವಾ ಕಂಪ್ಯೂಟರ್‌ಗೆಂದು ಬಳಸುವ ಸಮಯ ಸೇರಿಲ್ಲ.

ಒಬ್ಬ ಸ್ತ್ರೀ ಒಂದು ಮಗುವಿಗೆ ತನ್ನ ಹಳೇ ಫೋಟೋಗಳನ್ನು ತೋರಿಸುತ್ತಿದ್ದಾಳೆ

ಈಗಲಿಂದಲೇ ತರಬೇತಿ ಕೊಡಿ

ದೊಡ್ಡವರ ಮಾರ್ಗದರ್ಶನವನ್ನು ಕೇಳುವ ಮಕ್ಕಳು, ಭವಿಷ್ಯತ್ತಿನಲ್ಲಿ ವಿವೇಕಯುತ ಪ್ರೌಢ ವ್ಯಕ್ತಿಗಳಾಗಿ ಬೆಳೆಯುತ್ತಾರೆ

ಮಾದರಿಯ ಮೂಲಕ ಕಲಿಸಿ

  • ನಾನು ನನ್ನ ಮಕ್ಕಳಿಗೆ ಒಳ್ಳೆಯ ಮಾದರಿಯಾಗಿದ್ದೇನಾ?

  • ನಾನು ಸಹ ಹೆಚ್ಚು ಅನುಭವ ಇರುವವರ ಸಹಾಯವನ್ನು ಪಡೆದುಕೊಳ್ಳುತ್ತೇನೆ ಅಂತ ಮಕ್ಕಳಿಗೆ ತೋರಿಸಿಕೊಟ್ಟಿದ್ದೇನಾ?

  • ಮಕ್ಕಳೊಂದಿಗೆ ಸಮಯ ಕಳೆಯುವ ಮೂಲಕ ಅವರು ನನಗೆ ತುಂಬ ಅಮೂಲ್ಯರು ಅಂತ ತೋರಿಸುತ್ತೇನಾ?

ನಾವು ಹೀಗೆ ಮಾಡಿದೆವು

“ಕೆಲವೊಮ್ಮೆ ನಾನು ಏನಾದರೂ ಕೆಲಸ ಮಾಡುವಾಗ ನನ್ನ ಮಗಳು ಬಂದು ನನ್ನತ್ರ ಮಾತಾಡಬೇಕು ಅನ್ನುತ್ತಾಳೆ. ಅವಳಿಗೆ ಪೂರ್ಣ ಗಮನ ಕೊಡಲಿಕ್ಕಾಗಿ ನಾನು ಕೆಲವೊಮ್ಮೆ, ‘ಸ್ವಲ್ಪ ಇರು, ಬಂದೆ’ ಅಂತ ಹೇಳಬೇಕಾಗುತ್ತದೆ. ಆದ್ರೆ, ಯಾವತ್ತೂ ನಾನವಳನ್ನು ಅಲಕ್ಷಿಸುವುದಿಲ್ಲ. ನಾನು ಮತ್ತು ನನ್ನ ಹೆಂಡ್ತಿ ಒಳ್ಳೆಯ ಮಾದರಿಗಳಾಗಿರಲು ಪ್ರಯತ್ನಿಸುತ್ತೇವೆ, ಯಾಕೆಂದರೆ ಹೀಗೆ ಮಾಡುವುದರಿಂದ ನಾವು ಕಲಿಸುವ ಬೋಧನೆಗಳಿಗೆ ತಕ್ಕಂತೆ ಜೀವಿಸುತ್ತಿದ್ದೇವೆ ಎಂದು ಅವಳಿಗೆ ಅರ್ಥ ಆಗುತ್ತದೆ.”—ಡೇವಿಡ್‌.

“ನಮ್ಮ ಮಗಳು ಹುಟ್ಟಿದಾಗ, ನಾನು ಕೆಲಸಕ್ಕೆ ಹೋಗಬಾರದು, ಮನೆಯಲ್ಲೇ ಇದ್ದು ಅವಳನ್ನ ನೋಡಿಕೊಳ್ಳಬೇಕಂತ ನಾವಿಬ್ಬರು ಸೇರಿ ನಿರ್ಧರಿಸಿದೆವು. ಹಾಗೆ ಮಾಡಿದ್ದು ಒಳ್ಳೇದಾಗಿತ್ತು. ಮಗುವಿಗೆ ಸರಿಯಾದ ಮಾರ್ಗದರ್ಶನ ಸಿಗುತ್ತಿದೆ ಎಂದು ಖಚಿತಪಡಿಸಿಕೊಳ್ಳಲು ಮಗುವಿನೊಟ್ಟಿಗೆ ಸಾಧ್ಯವಾದಷ್ಟು ಹೆಚ್ಚು ಸಮಯ ಕಳೆಯುವುದು ತುಂಬ ಪ್ರಾಮುಖ್ಯ. ನಾವು ಮಕ್ಕಳಿಗೆ ಸಮಯ ಕೊಡುವಾಗ ನಾವವರನ್ನು ಪ್ರೀತಿಸುತ್ತೇವೆಂದು ತೋರಿಸುತ್ತೇವೆ.”—ಲೀಸ.

ಅನುಭವಸ್ಥರೊಂದಿಗೆ ಸಮಯ ಕಳೆಯುವುದರ ಪ್ರಯೋಜನ

“ನನ್ನ ಮಕ್ಕಳು ಅವರಿಗಿಂತ ವಯಸ್ಸಿನಲ್ಲಿ ದೊಡ್ಡವರಾದ ಬೇರೆ ಬೇರೆ ರೀತಿಯ ಜನರ ಮಧ್ಯದಲ್ಲಿ ಬೆಳೆದಿದ್ದಾರೆ, ಹಾಗಾಗಿ ಜೀವನ ಅಂದರೆ ಏನು ಅಂತ ಬೇರೆಯವರ ಅನುಭವಗಳಿಂದ ಕಲಿತಿದ್ದಾರೆ. ಉದಾಹರಣೆಗೆ, ನನ್ನ ಅಜ್ಜಿ ಹೇಳಿದ ಅನುಭವ ಕೇಳಿ ಮಕ್ಕಳು ತುಂಬ ಆಶ್ಚರ್ಯಪಟ್ಟರು. ಅಜ್ಜಿ ಚಿಕ್ಕವರಿದ್ದಾಗ ಅವರ ಊರಲ್ಲಿ ಮೊದಲು ಎಲೆಕ್ಟ್ರಿಕ್‌ ಲೈಟ್‌ (ವಿದ್ಯುತ್‌ ದೀಪ) ಬಂದಿದ್ದು ಅವರ ಮನೆಗೇ. ಹಾಗಾಗಿ, ಸುತ್ತಮುತ್ತ ಹಳ್ಳಿಯ ಜನ ಅಡುಗೆ ಮನೆಯ ಲೈಟ್‌ ಆನ್‌-ಆಫ್‌ ಆಗೋದನ್ನು ನೋಡಲು ಅವರ ಮನೆಗೆ ಬರುತ್ತಿದ್ದರು ಎಂದು ನನ್ನ ಅಜ್ಜಿ ಮಕ್ಕಳಿಗೆ ಹೇಳಿದರು. ಈ ಸಣ್ಣ ಕಥೆಯಿಂದ ನನ್ನ ಮಕ್ಕಳು ಆಗಿನ ಕಾಲದ ಜೀವನಕ್ಕೂ ಈಗಿನ ಕಾಲದ ಜೀವನಕ್ಕೂ ಎಷ್ಟು ವ್ಯತ್ಯಾಸ ಇದೆ ಎಂದು ತಿಳಿದುಕೊಂಡರು. ಇದರಿಂದ ಮಕ್ಕಳು ಹಿರಿಯರನ್ನು, ತಮಗಿಂತ ವಯಸ್ಸಿನಲ್ಲಿ ದೊಡ್ಡವರನ್ನು ಗೌರವಿಸಲು ಕಲಿತರು. ಮಕ್ಕಳು ತಮ್ಮ ಸಮವಯಸ್ಕರಿಗಿಂತ ದೊಡ್ಡವರೊಂದಿಗೆ ಸಮಯ ಕಳೆದರೆ ಜೀವನದ ಬಗ್ಗೆ ಒಳ್ಳೇ ಪಾಠಗಳನ್ನು ಕಲಿಯಲು ಸಾಧ್ಯ.”—ಮರಾಂಡ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ