ಕಾಲಗಣನ ರೇಖೆ
“ಆದಿಯಲ್ಲಿ . . . ”
ಕ್ರಿ.ಪೂ. 4026 ಆದಾಮನ ಸೃಷ್ಟಿ
ಕ್ರಿ.ಪೂ. 3096 ಆದಾಮನ ಮರಣ
ಕ್ರಿ.ಪೂ. 2370 ಜಲಪ್ರಳಯದ ಆರಂಭ
ಕ್ರಿ.ಪೂ. 2018 ಅಬ್ರಹಾಮನ ಜನನ
ಕ್ರಿ.ಪೂ. 1943 ಅಬ್ರಹಾಮನ ಒಡಂಬಡಿಕೆ
ಕ್ರಿ.ಪೂ. 1750 ಯೋಸೇಫನನ್ನು ದಾಸನಾಗಿ ಮಾರಿದ್ದು
ಕ್ರಿ.ಪೂ. 1613ರ ಮೊದಲು ಯೋಬನ ಪರೀಕ್ಷೆ
ಕ್ರಿ.ಪೂ. 1513 ಈಜಿಪ್ಟ್‌ನಿಂದ ಬಿಡುಗಡೆ
ಕ್ರಿ.ಪೂ. 1473 ಯೆಹೋಶುವನ ನೇತೃತ್ವದಲ್ಲಿ ಇಸ್ರಾಯೇಲ್ಯರ ಕಾನಾನ್ ಪ್ರವೇಶ
ಕ್ರಿ.ಪೂ. 1467 ಬಹುಪಾಲು ಕಾನಾನ್ ಕೈವಶ
ಕ್ರಿ.ಪೂ. 1117 ಸೌಲನ ರಾಜ್ಯಾಭಿಷೇಕ
ಕ್ರಿ.ಪೂ. 1070 ದಾವೀದನಿಗೆ ದೇವರಿಂದ ರಾಜ್ಯದ ವಾಗ್ದಾನ
ಕ್ರಿ.ಪೂ. 1037 ಸೊಲೊಮೋನನ ಪಟ್ಟಾಭಿಷೇಕ
ಕ್ರಿ.ಪೂ. 1027 ಯೆರೂಸಲೇಮಿನಲ್ಲಿ ದೇವಾಲಯದ ನಿರ್ಮಾಣಕಾರ್ಯ ಮುಕ್ತಾಯ
ಸುಮಾರು ಕ್ರಿ.ಪೂ. 1020 ಪರಮ ಗೀತ ಪುಸ್ತಕ ಬರೆದು ಮುಗಿಸಿದ್ದು
ಕ್ರಿ.ಪೂ. 997 ಎರಡು ರಾಜ್ಯಗಳಾಗಿ ಇಸ್ರಾಯೇಲ್‌ನ ವಿಭಜನೆ
ಸುಮಾರು ಕ್ರಿ.ಪೂ. 717 ಜ್ಞಾನೋಕ್ತಿಗಳ ಸಂಗ್ರಹಕಾರ್ಯ ಮುಕ್ತಾಯ
ಕ್ರಿ.ಪೂ. 607 ಯೆರೂಸಲೇಮಿನ ನಾಶನ; ಬ್ಯಾಬಿಲೋನಿನಲ್ಲಿ ಬಂದಿವಾಸ ಪ್ರಾರಂಭ
ಕ್ರಿ.ಪೂ. 539 ಬ್ಯಾಬಿಲೋನ್ ಕೋರೆಷನ ಕೈವಶ
ಕ್ರಿ.ಪೂ. 537 ಯೆಹೂದಿ ಬಂದಿವಾಸಿಗಳು ಯೆರೂಸಲೇಮಿಗೆ ಹಿಂದಿರುಗುತ್ತಾರೆ
ಕ್ರಿ.ಪೂ. 455 ಯೆರೂಸಲೇಮಿನ ಗೋಡೆಗಳ ಪುನರ್‌ನಿರ್ಮಾಣ; 69 ಸಾಂಕೇತಿಕ ವಾರಗಳ ಆರಂಭ
ಕ್ರಿ.ಪೂ. 443ರ ನಂತ ಮಲಾಕಿಯ ತನ್ನ ಪ್ರವಾದನೆ ಪುಸ್ತಕ ಬರೆದು ಮುಗಿಸುತ್ತಾನೆ
ಸುಮಾರು ಕ್ರಿ.ಪೂ. 2 ಯೇಸುವಿನ ಜನನ
ಕ್ರಿ.ಶ. 29 ಯೇಸುವಿನ ದೀಕ್ಷಾಸ್ನಾನ ಮತ್ತು ಯೇಸು ದೇವರ ರಾಜ್ಯದ ಕುರಿತು ಸಾರಲು ಪ್ರಾರಂಭಿಸುತ್ತಾನೆ
ಕ್ರಿ.ಶ. 31 ಯೇಸು ತನ್ನ 12 ಅಪೊಸ್ತಲರನ್ನು ಆಯ್ಕೆ ಮಾಡುತ್ತಾನೆ; ಪರ್ವತ ಪ್ರಸಂಗ ನೀಡುತ್ತಾನೆ
ಕ್ರಿ.ಶ. 32 ಯೇಸು ಲಾಜರನನ್ನು ಪುನರುತ್ಥಾನಗೊಳಿಸುತ್ತಾನೆ
ನೈಸಾನ್ 14, ಕ್ರಿ.ಶ. 33 ಯೇಸುವಿನ ಮರಣ (ನೈಸಾನ್ ತಿಂಗಳು ನಮ್ಮ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಸಮಯದಲ್ಲಿ ಬರುತ್ತದೆ)
ನೈಸಾನ್ 16, ಕ್ರಿ.ಶ. 33 ಯೇಸುವಿನ ಪುನರುತ್ಥಾನ
ಸಿವಾನ್ 6, ಕ್ರಿ.ಶ. 33 ಪಂಚಾಶತ್ತಮ; ಪವಿತ್ರಾತ್ಮ ಸುರಿಸಲ್ಪಟ್ಟದ್ದು (ಸಿವಾನ್ ತಿಂಗಳು ಮೇ ಮತ್ತು ಜೂನ್ ತಿಂಗಳ ಸಮಯದಲ್ಲಿ ಬರುತ್ತದೆ)
ಕ್ರಿ.ಶ. 36 ಕೊರ್ನೇಲ್ಯನು ಕ್ರೈಸ್ತನಾಗುತ್ತಾನೆ
ಸುಮಾರು ಕ್ರಿ.ಶ. 47-48 ಪೌಲನ ಮೊದಲ ಸುವಾರ್ತಾ ಪ್ರಯಾಣ
ಸುಮಾರು ಕ್ರಿ.ಶ. 49-52 ಪೌಲನ ಎರಡನೇ ಸುವಾರ್ತಾ ಪ್ರಯಾಣ
ಸುಮಾರು ಕ್ರಿ.ಶ. 52-56 ಪೌಲನ ಮೂರನೇ ಸುವಾರ್ತಾ ಪ್ರಯಾಣ
ಸುಮಾರು ಕ್ರಿ.ಶ. 60-61 ಪೌಲನು ರೋಮ್‌ನಲ್ಲಿ ಸೆರೆಯಲ್ಲಿದ್ದು ಪತ್ರಗಳನ್ನು ಬರೆಯುತ್ತಾನೆ
ಕ್ರಿ.ಶ. 62ರ ಮೊದಲು ಯೇಸುವಿನ ಮಲತಮ್ಮ ಯಾಕೋಬನು ತನ್ನ ಪತ್ರವನ್ನು ಬರೆಯುತ್ತಾನೆ
ಕ್ರಿ.ಶ. 66 ರೋಮ್‌ನ ವಿರುದ್ಧ ಯೆಹೂದ್ಯರ ದಂಗೆ
ಕ್ರಿ.ಶ. 70 ರೋಮನ್ನರಿಂದ ಯೆರೂಸಲೇಮ್ ಹಾಗೂ ಅದರ ದೇವಾಲಯದ ನಾಶ
ಸುಮಾರು ಕ್ರಿ.ಶ. 96 ಯೋಹಾನನು ಪ್ರಕಟನೆಯನ್ನು ಬರೆದದ್ದು
ಸುಮಾರು ಕ್ರಿ.ಶ. 100 ಅಪೊಸ್ತಲರಲ್ಲಿ ಕೊನೆಗೆ ಉಳಿದಿದ್ದ ಯೋಹಾನನು ಮರಣಪಟ್ಟದ್ದು