ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ll ಭಾಗ 3 ಪು. 8-9
  • ಏದೆನ್‌ ಉದ್ಯಾನದಲ್ಲಿ ಜೀವನ ಹೇಗಿತ್ತು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಏದೆನ್‌ ಉದ್ಯಾನದಲ್ಲಿ ಜೀವನ ಹೇಗಿತ್ತು?
  • ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ
  • ಅನುರೂಪ ಮಾಹಿತಿ
  • ದೇವರು ಎಲ್ಲರಿಗಿಂತಲೂ ಉನ್ನತನಾಗಿದ್ದಾನೆ
    ಮಹಾ ಬೋಧಕನಿಂದ ಕಲಿಯೋಣ
  • ಅವರು ತಮ್ಮ ಬೀಡನ್ನು ಕಳೆದುಕೊಂಡದ್ದಕ್ಕೆ ಕಾರಣ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಅವರು ಸೈತಾನನ ಮಾತನ್ನು ಕೇಳಿದರು—ಪರಿಣಾಮ ಏನಾಯಿತು?
    ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ
  • ಭಾಗ 3
    ದೇವರ ಮಾತನ್ನು ಆಲಿಸಿ
ಇನ್ನಷ್ಟು
ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ
ll ಭಾಗ 3 ಪು. 8-9

ಭಾಗ 3

ಏದೆನ್‌ ಉದ್ಯಾನದಲ್ಲಿ ಜೀವನ ಹೇಗಿತ್ತು?

ಯೆಹೋವನು ಆದಾಮ ಹವ್ವರಿಗೆ ಎಲ್ಲವನ್ನು ಕೊಟ್ಟನು. ಆದಿಕಾಂಡ 1:28

ಯೆಹೋವನು ಹವ್ವಳನ್ನು ಸೃಷ್ಟಿಸಿ ಅವಳನ್ನು ಆದಾಮನಿಗೆ ಕೊಡುತ್ತಾನೆ

ಯೆಹೋವನು ಮೊದಲ ಸ್ತ್ರೀಯಾದ ಹವ್ವಳನ್ನು ಉಂಟುಮಾಡಿದನು. ಅವಳನ್ನು ಆದಾಮನಿಗೆ ಹೆಂಡತಿಯಾಗಿ ಕೊಟ್ಟನು.—ಆದಿಕಾಂಡ 2:21, 22.

ಯೆಹೋವನು ಸೃಷ್ಟಿಸಿದಾಗ ಆದಾಮ ಹವ್ವ ಶುದ್ಧ ಮನಸ್ಸು ಮತ್ತು ದೋಷವಿಲ್ಲದ ಪರಿಪೂರ್ಣ ದೇಹವನ್ನು ಹೊಂದಿದ್ದರು.

ಏದೆನ್‌ ಉದ್ಯಾನವನ್ನು ನೋಡುತ್ತಿರುವ ಆದಾಮ ಮತ್ತು ಹವ್ವ

ಏದೆನ್‌ ಉದ್ಯಾನ ಅವರ ವಾಸಸ್ಥಳವಾಗಿತ್ತು. ಹರಿಯುವ ನದಿ, ಹಣ್ಣಿನ ಮರಗಳು ಮತ್ತು ಪ್ರಾಣಿಪಕ್ಷಿಗಳಿಂದ ತುಂಬಿದ ಅತೀ ಸುಂದರವಾದ ಉದ್ಯಾನ ಅದಾಗಿತ್ತು.

ಯೆಹೋವನು ಅವರೊಂದಿಗೆ ಮಾತಾಡುತ್ತಿದ್ದನು, ಮಾರ್ಗದರ್ಶನ ನೀಡುತ್ತಿದ್ದನು. ಅವರು ಆತನ ಮಾತನ್ನು ಕೇಳಿ ನಡೆದರೆ ಆ ಸುಂದರ ಪರದೈಸ್‌ ಉದ್ಯಾನದಲ್ಲಿ ಸದಾಕಾಲ ಜೀವಿಸಸಾಧ್ಯವಿತ್ತು.

ಆದರೆ ಒಂದು ಮರದ ಹಣ್ಣನ್ನು ಮಾತ್ರ ತಿನ್ನಬಾರದೆಂದು ಹೇಳಿದನು. ಆದಿಕಾಂಡ 2:16, 17

ಯಾವುದರ ಹಣ್ಣನ್ನು ತಿನ್ನಬಾರದೆಂದು ಯೆಹೋವನು ಆದಾಮ ಹವ್ವರಿಗೆ ಹೇಳಿದ್ದನೋ ಆ ಹಣ್ಣಿನ ಮರ

ಒಬ್ಬ ದೇವದೂತನು ಯೆಹೋವನ ವಿರುದ್ಧ ತಿರುಗಿಬಿದ್ದನು. ಅವನೇ ಪಿಶಾಚನಾದ ಸೈತಾನ.

ದುಷ್ಟ ದೇವದೂತ ಪಿಶಾಚನಾದ ಸೈತಾನ ಹವ್ವಳ ಜೊತೆ ಮಾತಾಡಲು ಹಾವನ್ನು ಉಪಯೋಗಿಸುತ್ತಾನೆ

ಯೆಹೋವನು ಆದಾಮ ಹವ್ವಳಿಗೆ ಒಂದು ಮರವನ್ನು ತೋರಿಸಿ, ಅದರ ಹಣ್ಣನ್ನು ತಿನ್ನಬಾರದೆಂದು, ತಿಂದರೆ ಸಾಯುವರೆಂದು ಹೇಳಿದನು.

ಆದಾಮ ಹವ್ವ ಯೆಹೋವನ ಮಾತಿಗೆ ವಿಧೇಯತೆ ತೋರಿಸುವುದು ಸೈತಾನನಿಗೆ ಇಷ್ಟವಿರಲಿಲ್ಲ. ಹಾಗಾಗಿ, ಹಾವಿನ ಮೂಲಕ ಅವನು ಹವ್ವಳಿಗೆ ಸುಳ್ಳು ಹೇಳಿದನು. ತಿನ್ನಬಾರದೆಂದು ದೇವರು ಅಪ್ಪಣೆ ಕೊಟ್ಟಿದ್ದ ಹಣ್ಣನ್ನು ತಿನ್ನುವಂತೆಯೂ ತಿಂದರೆ ಸಾಯುವುದಿಲ್ಲ ಬದಲಾಗಿ ದೇವರಂತೆ ಆಗುವಳೆಂದೂ ಹೇಳಿದನು.—ಆದಿಕಾಂಡ 3:1-5.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ