ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • yc ಪಾಠ 7 ಪು. 16-17
  • ನಿನ್ನ ಜೊತೆ ಯಾರೂ ಇಲ್ಲ ಅಂತ ಭಯ ಆಗಿದೆಯಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿನ್ನ ಜೊತೆ ಯಾರೂ ಇಲ್ಲ ಅಂತ ಭಯ ಆಗಿದೆಯಾ?
  • ನಿಮ್ಮ ಮುದ್ದು ಮಕ್ಕಳಿಗೆ ಕಲಿಸಿರಿ
  • ಅನುರೂಪ ಮಾಹಿತಿ
  • ತನ್ನ ದೇವರಿಂದ ಸಾಂತ್ವನ ಪಡೆದಾತನು
    ಅವರ ನಂಬಿಕೆಯನ್ನು ಅನುಕರಿಸಿ
  • ತನ್ನ ದೇವರಿಂದ ಸಾಂತ್ವನ ಪಡೆದಾತನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ನೀವು ಎಲೀಯನಂತೆ ನಂಬಿಗಸ್ತರಾಗಿರುವಿರೊ?
    ಕಾವಲಿನಬುರುಜು—1997
  • ಯೆಹೋವನು ಎಲೀಯನನ್ನು ಬಲಪಡಿಸಿದ
    ಬೈಬಲ್‌ ನಮಗೆ ಕಲಿಸುವ ಪಾಠಗಳು
ಇನ್ನಷ್ಟು
ನಿಮ್ಮ ಮುದ್ದು ಮಕ್ಕಳಿಗೆ ಕಲಿಸಿರಿ
yc ಪಾಠ 7 ಪು. 16-17
ಹುಡುಗನೊಬ್ಬ ತನ್ನ ಜೊತೆ ಯಾರೂ ಇಲ್ಲವೆಂದು ಬೇಜಾರಿಂದ ಮತ್ತು ಭಯದಿಂದ ಕೂತಿರುವುದು

ಪಾಠ 7

ನಿನ್ನ ಜೊತೆ ಯಾರೂ ಇಲ್ಲ ಅಂತ ಭಯ ಆಗಿದೆಯಾ?

ಈ ಚಿತ್ರದಲ್ಲಿರುವ ಹುಡುಗನನ್ನು ನೋಡು. ಅವನ ಜೊತೆ ಯಾರೂ ಇಲ್ಲ ಅಂತ ಅವನು ಬೇಜಾರಿಂದ, ಭಯದಿಂದ ಕೂತಿರುವ ಹಾಗೆ ಕಾಣುತ್ತಿದೆ ಅಲ್ವಾ? ನಿನಗೆ ಯಾವತ್ತಾದರೂ ಈ ತರ ಅನಿಸಿದೆಯಾ?— ನಮಗೆಲ್ಲ ಒಂದಲ್ಲ ಒಂದು ಸಮಯ ಹಾಗೆ ಅನಿಸಿರುತ್ತದೆ. ಯೆಹೋವನ ಸ್ನೇಹಿತರಾಗಿದ್ದ ಎಷ್ಟೋ ಜನರಿಗೆ ಕೂಡ ಹೀಗೆ ಬೇಜಾರು ಆಗಿದೆ, ಭಯ ಆಗಿದೆ. ಅವರ ಕಥೆಗಳು ಬೈಬಲಲ್ಲಿವೆ. ಅದರಲ್ಲಿ ಒಂದು ಕಥೆ ನೋಡೋಣ. ಅದು ಎಲೀಯನದ್ದು.

ರಾಣಿ ಈಜೆಬೆಲಳು ಕೋಪದಿಂದ ಚೀರುತ್ತಿರುವುದು

ಈಜೆಬೆಲ ಎಲೀಯನನ್ನು ಸಾಯಿಸಲು ನೋಡಿದಳು

ಎಲೀಯ ತುಂಬ ಸಮಯದ ಹಿಂದೆ ಅಂದರೆ ಯೇಸು ಹುಟ್ಟುವುದಕ್ಕೂ ತುಂಬ ವರ್ಷಗಳ ಹಿಂದೆ ಇಸ್ರಾಯೇಲಿನಲ್ಲಿ ಜೀವಿಸಿದ್ದ. ಅಲ್ಲಿನ ರಾಜನ ಹೆಸರು ಅಹಾಬ. ಅವನ ಹೆಂಡತಿ ಈಜೆಬೆಲ. ಇವರಿಬ್ಬರೂ ಸತ್ಯ ದೇವರಾದ ಯೆಹೋವನನ್ನು ಆರಾಧಿಸುತ್ತಿರಲಿಲ್ಲ. ಸುಳ್ಳು ದೇವರಾದ ಬಾಳನನ್ನು ಆರಾಧಿಸುತ್ತಿದ್ದರು. ಹಾಗಾಗಿ ಇಸ್ರಾಯೇಲಿನಲ್ಲಿ ಹೆಚ್ಚಿನ ಜನರು ಈ ದೇವರನ್ನೇ ಆರಾಧಿಸಲು ಶುರುಮಾಡಿದರು. ಈಜೆಬೆಲ ರಾಣಿ ತುಂಬ ಕ್ರೂರಿ ಹೆಂಗಸು. ಯೆಹೋವನನ್ನು ಆರಾಧಿಸುತ್ತಿದ್ದ ಎಲ್ಲರನ್ನೂ, ಎಲೀಯನನ್ನು ಸಹ ಸಾಯಿಸಬೇಕು ಅಂತ ನೆನಸಿದಳು! ಆಗ ಎಲೀಯ ಏನು ಮಾಡಿದ ಗೊತ್ತಾ?—

ಅವನು ಓಡಿಹೋದ! ಮರುಭೂಮಿಯಲ್ಲಿ ತುಂಬ ದೂರ ಹೋಗಿ ಒಂದು ಗುಹೆಯೊಳಗೆ ಬಚ್ಚಿಟ್ಟುಕೊಂಡ. ಎಲೀಯ ಯಾಕೆ ಹೀಗೆ ಮಾಡಿದ ಅಂತ ಹೇಳುತ್ತೀಯಾ?— ಹೌದು, ಅವನಿಗೆ ಅಷ್ಟು ಭಯ ಆಗಿತ್ತು. ಆದರೆ ಎಲೀಯ ಹೆದರಬೇಕಾಗಿರಲಿಲ್ಲ. ಯಾಕೆ? ಯಾಕೆಂದರೆ ಯೆಹೋವ ದೇವರ ಸಹಾಯ ಅವನಿಗೆ ಖಂಡಿತ ಸಿಗುತ್ತಿತ್ತು. ಈ ಮುಂಚೆ ಒಮ್ಮೆ ಯೆಹೋವನು ತನ್ನ ಶಕ್ತಿಯನ್ನು ಎಲೀಯನಿಗೆ ತೋರಿಸಿದ್ದನು. ಒಮ್ಮೆಯಂತೂ ಎಲೀಯ ಬೆಂಕಿ ಕಳುಹಿಸುವಂತೆ ಪ್ರಾರ್ಥನೆ ಮಾಡಿದಾಗ ದೇವರು ಸ್ವರ್ಗದಿಂದ ಬೆಂಕಿ ಬರುವಂತೆ ಮಾಡಿದ್ದನು. ಹಾಗೇ ಈಗ ಕೂಡ ಯೆಹೋವನು ಎಲೀಯನಿಗೆ ಸಹಾಯ ಮಾಡಲು ಶಕ್ತನಾಗಿದ್ದನು!

ಎಲೀಯನು ಯೆಹೋವನಿಗೆ ಬೆಂಕಿ ಕಳುಹಿಸುವಂತೆ ಪ್ರಾರ್ಥನೆ ಮಾಡಿದಾಗ ಯೆಹೋವನು ಸ್ವರ್ಗದಿಂದ ಬೆಂಕಿ ಬರುವಂತೆ ಮಾಡಿದನು; ಗುಹೆಯೊಳಗೆ ಕೂತಿರುವ ಎಲೀಯ; ಯೆಹೋವನು ಧೈರ್ಯತುಂಬಿದ ಮೇಲೆ ಸಂತೋಷವಾಗಿರುವ ಎಲೀಯ

ಎಲೀಯನಿಗೆ ಯೆಹೋವ ಹೇಗೆ ಸಹಾಯ ಮಾಡಿದನು?

ಗುಹೆಯೊಳಗೆ ಕೂತಿದ್ದ ಎಲೀಯನಿಗೆ ಯೆಹೋವನು ಹೀಗೆ ಕೇಳಿದನು: ‘ಇಲ್ಲಿ ಏನು ಮಾಡುತ್ತಿದ್ದೀಯಾ?’ ಅದಕ್ಕೆ ಎಲೀಯ ‘ನಿನ್ನನ್ನು ಆರಾಧಿಸುವವರಲ್ಲಿ ನಾನು ಒಬ್ಬನೇ ಇದ್ದೇನೆ. ನನ್ನ ಜೊತೆ ಯಾರೂ ಇಲ್ಲ. ನನ್ನನ್ನು ಕೊಂದುಬಿಡುತ್ತಾರೆ ಅಂತ ಭಯ ಆಗುತ್ತಿದೆ’ ಎಂದನು. ಯೆಹೋವನನ್ನು ಆರಾಧಿಸುವ ಎಲ್ಲ ಜನರನ್ನು ಕೊಂದುಬಿಟ್ಟಿದ್ದಾರೆ ಅಂತ ಎಲೀಯ ನೆನಸಿದ್ದ. ಅದಕ್ಕೆ ಯೆಹೋವನು ಎಲೀಯನಿಗೆ ‘ನೀನು ಮಾತ್ರ ಅಲ್ಲ, ನನ್ನನ್ನು ಆರಾಧಿಸುವ ಇನ್ನೂ 7,000 ಜನರು ಇದ್ದಾರೆ. ಧೈರ್ಯವಾಗಿರು. ನೀನು ಇನ್ನೂ ಬೇಕಾದಷ್ಟು ಕೆಲಸ ಮಾಡಲಿಕ್ಕಿದೆ!’ ಎಂದು ಹೇಳಿದನು. ಇದನ್ನು ಕೇಳಿದಾಗ ಎಲೀಯನಿಗೆ ಸಂತೋಷ ಆಯಿತಾ?—

ಎಲೀಯನಿಗೆ ಏನಾಯಿತೋ ಅದರಿಂದ ನೀನೇನು ಕಲಿತುಕೊಂಡೆ?— ನಿನ್ನ ಜೊತೆ ಯಾರೂ ಇಲ್ಲ ಅಂತ ನೀನು ಬೇಜಾರು ಮಾಡಿಕೊಳ್ಳಬೇಕಾಗಿಲ್ಲ, ಭಯಪಡಬೇಕಾಗಿಲ್ಲ. ಯೆಹೋವನನ್ನು ಮತ್ತು ನಿನ್ನನ್ನು ಪ್ರೀತಿಸುವ ಸ್ನೇಹಿತರು ನಿನಗಿದ್ದಾರೆ. ಅಷ್ಟೇ ಅಲ್ಲ, ತುಂಬ ಶಕ್ತಿ ಇರುವ ಯೆಹೋವ ನಿನ್ನ ಜೊತೆ ಇದ್ದಾನೆ. ಆತನು ನಿನಗೆ ಯಾವಾಗಲೂ ಸಹಾಯ ಮಾಡುತ್ತಾನೆ! ಯೆಹೋವನು ಯಾವಾಗಲೂ ನಿನ್ನ ಜೊತೆ ಇರುತ್ತಾನೆಂದು ಕೇಳಿ ನಿನಗೆ ಖುಷಿ ಆಗುವುದಿಲ್ಲವಾ?—

ಬೈಬಲಲ್ಲೇ ಓದೋಣ

  • 1 ಅರಸುಗಳು 19:3-18

  • ಕೀರ್ತನೆ 145:18

  • 1 ಪೇತ್ರ 5:9

ಪ್ರಶ್ನೆಗಳು:

  • ಎಲೀಯನ ಕಾಲದಲ್ಲಿ ಇಸ್ರಾಯೇಲಿನ ಜನರಲ್ಲಿ ಹೆಚ್ಚಿನವರು ಯೆಹೋವನನ್ನು ಆರಾಧಿಸುತ್ತಿದ್ದರಾ? ಯಾರನ್ನು ಆರಾಧಿಸುತ್ತಿದ್ದರು?

  • ಎಲೀಯ ಗುಹೆಯೊಳಗೆ ಯಾಕೆ ಬಚ್ಚಿಟ್ಟುಕೊಂಡ?

  • ಯೆಹೋವನು ಎಲೀಯನಿಗೆ ಏನು ಹೇಳಿದನು?

  • ಎಲೀಯನ ಕಥೆಯಿಂದ ನೀನೇನು ಕಲಿತೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ