ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 13 ಪು. 36-ಪು. 37 ಪ್ಯಾ. 2
  • ಯಾಕೋಬ ಮತ್ತು ಏಸಾವ ಒಂದಾದರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯಾಕೋಬ ಮತ್ತು ಏಸಾವ ಒಂದಾದರು
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ಭಿನ್ನರಾಗಿದ್ದ ಅವಳಿಗಳು
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಯಾಕೋಬನಿಗೆ ಬಾಧ್ಯತೆ ಸಿಕ್ಕಿತು
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಯಾಕೋಬನು ಆತ್ಮಿಕ ಮೌಲ್ಯಗಳನ್ನು ಬಹುಮೂಲ್ಯವೆಂದೆಣಿಸಿದನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಆದಿಕಾಂಡ ಮುಖ್ಯಾಂಶಗಳು
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 13 ಪು. 36-ಪು. 37 ಪ್ಯಾ. 2
ಯಾಕೋಬ ಬಗ್ಗಿ ನಮಸ್ಕರಿಸುತ್ತಿದ್ದಾನೆ, ಏಸಾವ ತಮ್ಮನನ್ನು ತಬ್ಬಿಕೊಳ್ಳಲು ಓಡಿಬರುತ್ತಿದ್ದಾನೆ

ಪಾಠ 13

ಯಾಕೋಬ ಮತ್ತು ಏಸಾವ ಒಂದಾದರು

ಯೆಹೋವನು ಯಾಕೋಬನಿಗೆ ‘ಅಬ್ರಹಾಮ ಇಸಾಕನನ್ನ ಕಾಪಾಡಿದಂತೆ ನಿನ್ನನ್ನೂ ಕಾಪಾಡ್ತೀನಿ’ ಎಂದು ಮಾತು ಕೊಟ್ಟನು. ಯಾಕೋಬನು ಖಾರಾನಿನಲ್ಲಿ ನೆಲೆನಿಂತನು. ಅಲ್ಲಿ ಅವನಿಗೆ ಮದುವೆಯಾಗಿ ಅನೇಕ ಮಕ್ಕಳು ಹುಟ್ಟಿದರು. ಅಲ್ಲದೇ ಅವನು ದೊಡ್ಡ ಶ್ರೀಮಂತನಾದನು.

ಸಮಯಾನಂತರ ಯೆಹೋವ ದೇವರು ಯಾಕೋಬನಿಗೆ ‘ನೀನು ನಿನ್ನ ಸ್ವಂತ ಊರಿಗೆ ವಾಪಸ್‌ ಹೋಗು’ ಅಂದನು. ಆಗ ಯಾಕೋಬ ತನ್ನ ಕುಟುಂಬದೊಂದಿಗೆ ದೂರದ ಪ್ರಯಾಣ ಮಾಡಿದ. ದಾರಿಯಲ್ಲಿ ಹೋಗುತ್ತಿರುವಾಗ ಕೆಲವರು ಯಾಕೋಬನ ಹತ್ತಿರ ಬಂದು ‘ನಿನ್ನ ಅಣ್ಣ ಏಸಾವ 400 ಗಂಡಸರೊಟ್ಟಿಗೆ ಬರ್ತಿದ್ದಾನೆ’ ಎಂದು ಹೇಳಿದರು. ಈ ಮಾತನ್ನು ಕೇಳಿದಾಗ ಎಲ್ಲಿ ಏಸಾವ ತನಗೂ, ತನ್ನ ಕುಟುಂಬಕ್ಕೂ ಹಾನಿ ಮಾಡುತ್ತಾನೋ ಅಂತ ಯಾಕೋಬ ಹೆದರಿದ. ಆಗ ಅವನು ಯೆಹೋವನಿಗೆ ‘ದಯವಿಟ್ಟು ನನ್ನ ಅಣ್ಣನಿಂದ ನನ್ನನ್ನ ಕಾಪಾಡಪ್ಪಾ’ ಎಂದು ಪ್ರಾರ್ಥಿಸಿದ. ಮಾರನೇ ದಿನ ಯಾಕೋಬ ತನ್ನ ಅಣ್ಣನಿಗೆ ಅನೇಕ ಕುರಿ, ಆಡು, ದನ, ಒಂಟೆ ಮತ್ತು ಕತ್ತೆಗಳನ್ನು ಉಡುಗೊರೆಯಾಗಿ ಕಳುಹಿಸಿದ.

ಆ ರಾತ್ರಿ ಯಾಕೋಬ ಒಬ್ಬನೇ ಇದ್ದಾಗ ಒಬ್ಬ ದೇವದೂತನನ್ನು ನೋಡಿದ! ಆ ದೇವದೂತ ಇಡೀ ರಾತ್ರಿ ಯಾಕೋಬನೊಟ್ಟಿಗೆ ಹೋರಾಡಿದ. ಹೋರಾಟದಲ್ಲಿ ಯಾಕೋಬನಿಗೆ ನೋವಾಯಿತು. ಆದರೂ ಯಾಕೋಬ ಬಿಟ್ಟುಕೊಡಲಿಲ್ಲ. ದೇವದೂತ ‘ನನ್ನನ್ನ ಬಿಡು, ನಾನು ಹೋಗಬೇಕು’ ಎಂದು ಹೇಳಿದನು. ಆಗ ಯಾಕೋಬ ‘ನೀನು ನನ್ನನ್ನ ಆಶೀರ್ವದಿಸೋ ತನಕ ನಿನ್ನನ್ನ ಹೋಗಲು ಬಿಡೋದಿಲ್ಲ’ ಎಂದನು.

ಕೊನೆಗೆ ದೇವದೂತ ಯಾಕೋಬನನ್ನು ಆಶೀರ್ವದಿಸಿದ. ಆಗ ಏಸಾವನಿಂದ ತನಗೆ ಯಾವುದೇ ತೊಂದರೆ ಆಗಲು ಯೆಹೋವನು ಬಿಡುವುದಿಲ್ಲ ಎಂದು ಯಾಕೋಬನಿಗೆ ಗೊತ್ತಾಯಿತು.

ಮಾರನೇ ದಿನ ಏಸಾವ 400 ಗಂಡಸರೊಂದಿಗೆ ದೂರದಲ್ಲಿ ಬರುತ್ತಿರುವುದನ್ನು ಯಾಕೋಬ ನೋಡಿದ. ಆಗ ಯಾಕೋಬ ಕುಟುಂಬದವರಿಗಿಂತ ಮುಂದೆ ಹೋಗಿ ಏಸಾವನ ಮುಂದೆ ಬಗ್ಗಿ ಏಳು ಸಲ ನಮಸ್ಕರಿಸಿದ. ಇದನ್ನು ಕಂಡ ಏಸಾವ ಓಡಿ ಬಂದು ಯಾಕೋಬನನ್ನು ಗಟ್ಟಿಯಾಗಿ ತಬ್ಬಿಕೊಂಡನು. ಇಬ್ಬರು ತುಂಬ ಅತ್ತರು. ಹೀಗೆ ಅವರಿಬ್ಬರು ಒಂದಾದರು. ಈ ಸನ್ನಿವೇಶವನ್ನು ಯಾಕೋಬ ನಿಭಾಯಿಸಿದ ವಿಧದ ಬಗ್ಗೆ ಯೆಹೋವನಿಗೆ ಹೇಗನಿಸಿರಬಹುದು?

ಆಮೇಲೆ ಯಾಕೋಬ ಮತ್ತು ಏಸಾವ ತಮ್ಮ ತಮ್ಮ ಮನೆಗಳಿಗೆ ಹೋದರು. ಯಾಕೋಬನಿಗೆ 12 ಗಂಡು ಮಕ್ಕಳು. ಅವರು ಯಾರೆಂದರೆ ರೂಬೇನ್‌, ಸಿಮೆಯೋನ್‌, ಲೇವಿ, ಯೆಹೂದಾ, ದಾನ್‌, ನಫ್ತಾಲಿ, ಗಾದ್‌, ಅಶೇರ್‌, ಇಸ್ಸಾಕಾರ್‌, ಜೆಬುಲೂನ್‌, ಯೋಸೇಫ ಮತ್ತು ಬೆನ್ಯಾಮೀನ್‌. ಇವರಲ್ಲಿ ಒಬ್ಬನಾದ ಯೋಸೇಫನನ್ನು ಉಪಯೋಗಿಸಿ ಯೆಹೋವನು ತನ್ನ ಜನರನ್ನು ಕಾಪಾಡಿದನು. ಅದು ಹೇಗೆ? ನೋಡೋಣ ಬನ್ನಿ.

“ನಿಮ್ಮ ಶತ್ರುಗಳನ್ನ ಪ್ರೀತಿಸ್ತಾ ಇರಿ. ನಿಮಗೆ ಹಿಂಸೆ ಕೊಡುವವರಿಗಾಗಿ ಪ್ರಾರ್ಥಿಸ್ತಾ ಇರಿ. ಆಗ ನೀವು ಸ್ವರ್ಗದಲ್ಲಿರೋ ತಂದೆಯ ಮಕ್ಕಳು ಅಂತ ತೋರಿಸ್ತೀರ.”—ಮತ್ತಾಯ 5:44, 45

ಪ್ರಶ್ನೆಗಳು: ಯಾಕೋಬನಿಗೆ ಯಾಕೆ ಆಶೀರ್ವಾದ ಸಿಕ್ಕಿತು? ಯಾಕೋಬ ತನ್ನ ಅಣ್ಣನೊಂದಿಗೆ ಹೇಗೆ ಶಾಂತಿ ಕಾಪಾಡಿಕೊಂಡ?

ಆದಿಕಾಂಡ 28:13-15; 31:3, 17, 18; 32:1-29; 33:1-18; 35:23-26

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ