ಪಾಠ 27
ಅವರು ಯೆಹೋವನ ವಿರುದ್ಧ ತಿರುಗಿಬಿದ್ದರು
ಕೆಲವು ವರ್ಷಗಳ ನಂತರ, ಇಸ್ರಾಯೇಲ್ಯರು ಕಾಡಲ್ಲಿದ್ದಾಗ ಕೋರಹ, ದಾತಾನ್, ಅಬೀರಾಮ್ ಮತ್ತು ಇತರ 250 ಜನ ಮೋಶೆ ವಿರುದ್ಧ ತಿರುಗಿಬಿದ್ದರು. ಅವರು ಮೋಶೆಗೆ ‘ಸಾಕು ನಿಮ್ಮ ದರ್ಬಾರ್! ನೀನೇ ಏಕೆ ನಾಯಕನಾಗಬೇಕು ಮತ್ತು ಆರೋನನೇ ಏಕೆ ಪುರೋಹಿತನಾಗಬೇಕು? ಯೆಹೋವನು ನಮ್ಮ ಎಲ್ಲರ ಜೊತೆಯಲ್ಲಿ ಇದ್ದಾನೆ, ನಿನ್ನ ಮತ್ತು ಆರೋನನ ಜೊತೆಯಲ್ಲಿ ಮಾತ್ರ ಅಲ್ಲ’ ಎಂದರು. ಇವರ ಮಾತು ಯೆಹೋವನಿಗೆ ಇಷ್ಟ ಆಗಲಿಲ್ಲ. ಏಕೆಂದರೆ ಅವರು ಮೋಶೆ ಆರೋನರ ವಿರುದ್ಧ ಅಲ್ಲ, ಯೆಹೋವನ ವಿರುದ್ಧ ತಿರುಗಿಬಿದ್ದಂತಿತ್ತು!
ಕೋರಹನಿಗೆ ಮತ್ತು ಆತನ ಬೆಂಬಲಿಗರಿಗೆ ಮೋಶೆ ‘ನಾಳೆ ನೀವೆಲ್ಲರೂ ಧೂಪ ಹಾಕೋ ಪಾತ್ರೆಗಳನ್ನ ತಗೊಂಡು ಪವಿತ್ರ ಡೇರೆಗೆ ಬನ್ನಿ. ಯೆಹೋವನು ನಮ್ಮಲ್ಲಿ ಯಾರನ್ನು ಆರಿಸ್ಕೊಂಡಿದ್ದಾನೆ ಆತನೇ ತಿಳಿಸುವನು’ ಅಂದನು.
ಮಾರನೇ ದಿನ ಕೋರಹ ಮತ್ತು ಇತರ 250 ಜನ ಗಂಡಸರು ಮೋಶೆಯನ್ನು ಭೇಟಿಯಾಗಲು ಪವಿತ್ರ ಡೇರೆಗೆ ಹೋದರು. ಇವರೇ ಪುರೋಹಿತರು ಅನ್ನೋ ಥರ ಧೂಪವನ್ನು ಸುಟ್ಟರು. ಆಗ ಯೆಹೋವನು ಮೋಶೆ ಮತ್ತು ಆರೋನನಿಗೆ ‘ಕೋರಹ ಮತ್ತು ಅವನ ಜನರಿಂದ ದೂರ ಹೋಗಿ’ ಅಂದನು.
ಮೋಶೆಯನ್ನು ಭೇಟಿಯಾಗಲು ಕೋರಹ ದೇವರ ಪವಿತ್ರ ಡೇರೆಗೆ ಹೋಗಿದ್ದನು. ಆದರೆ ದಾತಾನ್, ಅಬೀರಾಮ ಮತ್ತು ಅವರ ಕುಟುಂಬದವರು ಹೋಗಲು ನಿರಾಕರಿಸಿದರು. ಯೆಹೋವನು ಇಸ್ರಾಯೇಲ್ಯರಿಗೆ ‘ಕೋರಹ, ದಾತಾನ್ ಮತ್ತು ಅಬೀರಾಮರ ಡೇರೆಗಳಿಂದ ದೂರ ಹೋಗಿರಿ’ ಎಂದನು. ಇಸ್ರಾಯೇಲ್ಯರು ತಕ್ಷಣ ದೂರ ಹೋದರು. ದಾತಾನ್, ಅಬೀರಾಮ ಮತ್ತು ಅವರ ಕುಟುಂಬದವರು ಹೊರಗೆ ತಮ್ಮ ತಮ್ಮ ಡೇರೆಗಳ ಬಾಗಿಲುಗಳಲ್ಲಿ ನಿಂತುಕೊಂಡರು. ಆಗ ತಕ್ಷಣ ಭೂಮಿ ಬಾಯ್ದೆರೆದು ಅವರನ್ನು ನುಂಗಿಬಿಟ್ಟಿತ್ತು! ಪವಿತ್ರ ಡೇರೆ ಹತ್ತಿರ ಆಕಾಶದಿಂದ ಬೆಂಕಿಬಿದ್ದು ಕೋರಹ ಮತ್ತು 250 ಜನ್ರನ್ನ ಸುಟ್ಟುಬಿಟ್ಟಿತು.
ಆಮೇಲೆ ಯೆಹೋವನು ಮೋಶೆಗೆ ‘ಪ್ರತಿಯೊಂದು ಕುಲದ ಪ್ರಧಾನ ಒಂದೊಂದು ಕೋಲನ್ನ ತೆಗೆದು ಅದರ ಮೇಲೆ ಅವನವನ ಹೆಸ್ರು ಬರಿ, ಆದರೆ ಲೇವಿ ಕುಲದ ಕೋಲಿನ ಮೇಲೆ ಆರೋನನ ಹೆಸರನ್ನು ಬರಿ. ಇದನ್ನು ಪವಿತ್ರ ಡೇರೆ ಒಳಗೆ ಇಡು, ನಾನು ಯಾರನ್ನ ಆರಿಸ್ಕೊಳ್ತೀನೋ ಅವನ ಕೋಲು ಚಿಗುರಿ ಹೂ ಬಿಡುವುದು’ ಎಂದನು.
ಮಾರನೇ ದಿನ, ಮೋಶೆ ಎಲ್ಲರ ಕೋಲುಗಳನ್ನು ತಂದು ನಾಯಕರಿಗೆ ಕೊಟ್ಟನು. ಆರೋನನ ಕೋಲು ಚಿಗುರಿ ಹೂ ಬಿಟ್ಟು ಅದರಲ್ಲಿ ಬಾದಾಮಿ ಹಣ್ಣುಗಳಿದ್ದವು. ಈ ರೀತಿಯಲ್ಲಿ, ಆರೋನನ್ನೇ ಮಹಾ ಪುರೋಹಿತನಾಗಿ ಆರಿಸಿಕೊಂಡಿದ್ದೇನೆಂದು ಯೆಹೋವನು ದೃಢಪಡಿಸಿದನು.
“ಮುಂದೆ ನಿಂತು ನಿಮ್ಮನ್ನ ನಡಿಸುವವ್ರ ಮಾತನ್ನ ಕೇಳಿ ಮತ್ತು ಅಧೀನತೆ ತೋರಿಸಿ.”—ಇಬ್ರಿಯ 13:17