ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 32 ಪು. 80-ಪು. 81 ಪ್ಯಾ. 3
  • ಒಬ್ಬ ಹೊಸ ನಾಯಕ ಮತ್ತು ಇಬ್ಬರು ಧೀರ ಸ್ತ್ರೀಯರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒಬ್ಬ ಹೊಸ ನಾಯಕ ಮತ್ತು ಇಬ್ಬರು ಧೀರ ಸ್ತ್ರೀಯರು
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ನಂಬಿಕೆಯಿಂದಲೇ ಬಾರಾಕನು ಒಂದು ಪರಾಕ್ರಮಿ ಸೇನೆಯನ್ನು ಸಂಹರಿಸಿದನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಧೀರೆಯರಾದ ಇಬ್ಬರು ಸ್ತ್ರೀಯರು
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ನಿಮ್ಮ ಸ್ವಇಚ್ಛೆಯ ಸೇವೆ ಯೆಹೋವನಿಗೆ ಸ್ತುತಿ ತರಲಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ತಾಬೋರ್‌ನಿಂದ ಹೊರಟು ವಿಜಯಕ್ಕೆ!
    ಕಾವಲಿನಬುರುಜು—1990
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 32 ಪು. 80-ಪು. 81 ಪ್ಯಾ. 3
ತನ್ನೊಂದಿಗೆ ಬರುವಂತೆ ಬಾರಾಕ ದೆಬೋರಳಿಗೆ ಸೂಚಿಸುತ್ತಿದ್ದಾನೆ

ಪಾಠ 32

ಒಬ್ಬ ಹೊಸ ನಾಯಕ ಮತ್ತು ಇಬ್ಬರು ಧೀರ ಸ್ತ್ರೀಯರು

ಯೆಹೋಶುವ ಅನೇಕ ವರ್ಷಗಳವರೆಗೆ ಯೆಹೋವನ ಜನರನ್ನು ಮುನ್ನಡೆಸಿದ. ಅವನು 110 ವರ್ಷದವನಾದಾಗ ತೀರಿಕೊಂಡ. ಅವನು ಜೀವದಿಂದ ಇರುವವರೆಗೆ ಇಸ್ರಾಯೇಲ್ಯರು ಯೆಹೋವನನ್ನು ಆರಾಧಿಸುತ್ತಿದ್ದರು. ಆದರೆ ಯೆಹೋಶುವ ಸತ್ತ ನಂತರ ಅವರು ಕಾನಾನ್ಯರಂತೆ ಮೂರ್ತಿಗಳನ್ನು ಆರಾಧಿಸಲು ಆರಂಭಿಸಿದರು. ಇಸ್ರಾಯೇಲ್ಯರು ತನ್ನ ಮಾತನ್ನು ಕೇಳದೇ ಇದ್ದದ್ದರಿಂದ ಕಾನಾನ್ಯ ಅರಸನಾದ ಯಾಬೀನನಿಂದ ಕಷ್ಟ ಅನುಭವಿಸುವಂತೆ ಯೆಹೋವನು ಮಾಡಿದನು. ಇಸ್ರಾಯೇಲ್ಯರು ಸಹಾಯಕ್ಕಾಗಿ ಯೆಹೋವನ ಹತ್ತಿರ ಬೇಡಿಕೊಂಡಾಗ ಆತನು ಬಾರಾಕನನ್ನು ಇಸ್ರಾಯೇಲ್ಯರ ಹೊಸ ನಾಯಕನಾಗಿ ನೇಮಿಸಿದನು. ಇವನು ಇಸ್ರಾಯೇಲ್ಯರು ಯೆಹೋವನ ಬಳಿ ಹಿಂತಿರುಗುವಂತೆ ಸಹಾಯ ಮಾಡಿದ.

ಪ್ರವಾದಿನಿಯಾದ ದೆಬೋರಳು ಬಾರಾಕನಿಗೆ ಕರೆ ಕಳುಹಿಸಿದಳು. ಬಾರಾಕನಿಗೆ ತಿಳಿಸಬೇಕಿದ್ದ ಒಂದು ಸಂದೇಶವನ್ನು ಯೆಹೋವನು ಅವಳಿಗೆ ನೀಡಿದ್ದನು. ಅವಳು ಬಾರಾಕನಿಗೆ ‘10,000 ಗಂಡಸ್ರನ್ನ ಕರ್ಕೊಂಡು ಕೀಷೋನ್‌ ಕಣಿವೆಗೆ ಹೋಗಿ ಯಾಬೀನನ ಸೈನ್ಯವನ್ನು ಎದುರಾಗು. ಅಲ್ಲಿ ನೀನು ಯಾಬೀನನ ಸೇನಾಪತಿ ಸಿಸೆರನನ್ನ ಸೋಲಿಸುವಿ’ ಎಂದಳು. ಆಗ ಬಾರಾಕನು ದೆಬೋರಳಿಗೆ ‘ನೀನೂ ಜೊತೆಗೆ ಬಂದ್ರೆ ಹೋಗ್ತೀನಿ’ ಅಂದನು. ಆಗ ಅವಳು ‘ನಾನು ನಿನ್ನ ಜೊತೆ ಬರ್ತಿನಿ. ಆದರೆ ಸಿಸೆರನನ್ನು ನೀನು ಕೊಲ್ಲುವುದಿಲ್ಲ. ಒಬ್ಬ ಸ್ತ್ರೀ ಕೊಲ್ಲುತ್ತಾಳೆ ಎಂದು ಯೆಹೋವನು ಹೇಳಿದ್ದಾನೆ’ ಅಂದಳು.

ದೆಬೋರಳು ಬಾರಾಕ ಮತ್ತು ಅವನ ಸೈನಿಕರೊಂದಿಗೆ ಯುದ್ಧ ಮಾಡಲು ತಾಬೋರ್‌ ಬೆಟ್ಟಕ್ಕೆ ಹೋದಳು. ಈ ಸುದ್ದಿ ಸಿಸೆರನ ಕಿವಿಗೆ ಬಿದ್ದಾಗ ತನ್ನ ಯುದ್ಧ ರಥಗಳನ್ನು ಮತ್ತು ಇಡೀ ಸೈನ್ಯವನ್ನ ಅಲ್ಲಿಗೆ ಕರತಂದನು. ಆಗ ದೆಬೋರ ಬಾರಾಕನಿಗೆ ‘ಇವತ್ತು ಯೆಹೋವನು ನಿನಗೆ ಜಯವನ್ನು ಕೊಡುವನು’ ಎಂದಳು. ಬಾರಾಕ ಮತ್ತು ಅವನ 10,000 ಗಂಡಸ್ರು ಶಕ್ತಿಶಾಲಿ ಸಿಸೆರನ ಸೈನ್ಯದ ಮೇಲೆ ಯುದ್ಧ ಮಾಡಲು ಹೋದರು.

ಯೆಹೋವನು ಕೀಷೋನ್‌ ಕಣಿವೆ ತುಂಬಿ ಹರಿಯುವಂತೆ ಮಾಡಿದನು. ಆಗ ಸಿಸೆರನ ಯುದ್ಧ ರಥಗಳು ಮಣ್ಣಿನಲ್ಲಿ ಹೂತು ಹೋದವು. ಸಿಸೆರನು ರಥದಿಂದ ಇಳಿದು ಓಡಿ ಹೋದ. ಬಾರಾಕ ಮತ್ತು ಅವನ ಸೈನಿಕರು ಸಿಸೆರನ ಸೈನ್ಯವನ್ನು ಸೋಲಿಸಿದರು. ಆದರೆ ಸಿಸೆರ ತಪ್ಪಿಸಿಕೊಂಡ! ಅವನು ಯಾಯೇಲ ಎಂಬ ಸ್ತ್ರೀಯ ಡೇರೆಗೆ ಹೋಗಿ ಅಡಗಿಕೊಂಡನು. ಅವಳು ಅವನಿಗೆ ಕುಡಿಯಲು ಹಾಲನ್ನು ಕೊಟ್ಟು ಕಂಬಳಿಯನ್ನು ಅವನ ಮೇಲೆ ಹಾಕಿದಳು. ಅವನಿಗೆ ತುಂಬಾ ಸುಸ್ತಾಗಿದ್ದರಿಂದ ನಿದ್ದೆ ಹೋದ. ಆಗ ಯಾಯೇಲ ಮೆಲ್ಲಮೆಲ್ಲನೆ ಅವನ ಹತ್ತಿರ ಹೋಗಿ ಡೇರೆಗೆ ಹಾಕೋ ಗೂಟದಿಂದ ಅವನ ತಲೆಗೆ ಹೊಡೆದಳು. ಅವನು ಸತ್ತು ಹೋದ.

ಬಾರಕ ಮತ್ತು ದೆಬೋರ ಯೆಹೋವನಿಗೆ ಹಾಡುತ್ತಾ ಸ್ತುತಿಸುತ್ತಿದ್ದಾರೆ

ಬಾರಾಕನು ಸಿಸೆರನನ್ನು ಹುಡುಕಿಕೊಂಡು ಬಂದ. ಯಾಯೇಲಳು ಡೇರೆ ಹೊರಗೆ ಬಂದು ಬಾರಾಕನಿಗೆ ‘ಒಳಗೆ ಬಾ, ನೀನು ಹುಡುಕ್ತಾ ಇರೋ ಮನುಷ್ಯನನ್ನ ತೋರಿಸ್ತೀನಿ’ ಅಂದಳು. ಬಾರಾಕ ಒಳಗೆ ಹೋದಾಗ ಸಿಸೆರನು ಸತ್ತು ಬಿದ್ದಿದ್ದ. ಹೀಗೆ ಯೆಹೋವನು ಇಸ್ರಾಯೇಲ್ಯರಿಗೆ ಶತ್ರುಗಳ ಮೇಲೆ ಜಯ ಸಿಗುವಂತೆ ಮಾಡಿದನು. ಆದ್ದರಿಂದ ಬಾರಾಕ ಮತ್ತು ದೆಬೋರ ಆತನನ್ನು ಹಾಡಿ ಹೊಗಳಿದರು. ಮುಂದಿನ 40 ವರ್ಷಗಳು ಇಸ್ರಾಯೇಲ್‌ನಲ್ಲಿ ಸಮಾಧಾನವಿತ್ತು.

“ಸಿಹಿಸುದ್ದಿಯನ್ನ ಹೇಳೋ ಸ್ತ್ರೀಯರು ಒಂದು ದೊಡ್ಡ ಸೈನ್ಯದ ತರ ಇದ್ದಾರೆ.”—ಕೀರ್ತನೆ 68:11

ಪ್ರಶ್ನೆಗಳು: ದೆಬೋರ ಇಸ್ರಾಯೇಲ್ಯರಿಗೆ ಹೇಗೆ ಸಹಾಯ ಮಾಡಿದಳು? ಯಾಯೇಲಳು ಹೇಗೆ ಧೈರ್ಯ ತೋರಿಸಿದಳು?

ನ್ಯಾಯಸ್ಥಾಪಕರು 4:1–5:31

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ