ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 36 ಪು. 88-ಪು. 89 ಪ್ಯಾ. 1
  • ಯೆಫ್ತಾಹ ಕೊಟ್ಟ ಮಾತು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಫ್ತಾಹ ಕೊಟ್ಟ ಮಾತು
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ಯೆಪ್ತಾಹನ ವಚನ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಅಪ್ಪ ಮತ್ತು ಯೆಹೋವನನ್ನು ಖುಷಿಪಡಿಸಿದ ಮಗಳು
    ನಿಮ್ಮ ಮುದ್ದು ಮಕ್ಕಳಿಗೆ ಕಲಿಸಿರಿ
  • ನಂಬಿಗಸ್ತರಿಗೆ ದೇವರ ಮೆಚ್ಚಿಕೆ ಸಿಗುತ್ತದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ಯೆಫ್ತಾಹನಿಗೆ ಯೆಹೋವ ದೇವರ ಜೊತೆ ಒಳ್ಳೇ ಸ್ನೇಹ ಇತ್ತು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 36 ಪು. 88-ಪು. 89 ಪ್ಯಾ. 1
ಯೆಫ್ತಾಹ, ತನ್ನ ಮಗಳು ಅವನನ್ನು ಭೇಟಿ ಮಾಡಲು ಬರುತ್ತಿರುವುದನ್ನು ಕಂಡು ಬಟ್ಟೆಯನ್ನು ಹರಿದುಕೊಳ್ಳುತ್ತಿದ್ದಾನೆ

ಪಾಠ 36

ಯೆಫ್ತಾಹ ಕೊಟ್ಟ ಮಾತು

ಇಸ್ರಾಯೇಲ್ಯರು ಮತ್ತೆ ಯೆಹೋವನನ್ನು ಬಿಟ್ಟು ಸುಳ್ಳು ದೇವರುಗಳನ್ನು ಆರಾಧಿಸಿದರು. ಅಮ್ಮೋನಿಯರು ಇಸ್ರಾಯೇಲ್ಯರ ಮೇಲೆ ಆಕ್ರಮಣ ಮಾಡಿದಾಗ ಆ ಸುಳ್ಳು ದೇವರುಗಳು ಇಸ್ರಾಯೇಲ್ಯರಿಗೆ ಯಾವುದೇ ಸಹಾಯ ಮಾಡಲಿಲ್ಲ. ಅನೇಕ ವರ್ಷಗಳ ವರೆಗೆ ಇಸ್ರಾಯೇಲ್ಯರು ಕಷ್ಟ ಅನುಭವಿಸಿದರು. ಕೊನೆಗೆ ಅವರು ಯೆಹೋವನಿಗೆ ‘ನಾವು ಪಾಪ ಮಾಡಿದ್ದೀವಿ. ದಯವಿಟ್ಟು ಶತ್ರುಗಳಿಂದ ನಮ್ಮನ್ನು ಕಾಪಾಡು’ ಎಂದು ಬೇಡಿಕೊಂಡರು. ಇಸ್ರಾಯೇಲ್ಯರು ತಮ್ಮಲ್ಲಿದ್ದ ಮೂರ್ತಿಗಳನ್ನು ನಾಶ ಮಾಡಿ ಮತ್ತೆ ಯೆಹೋವನನ್ನು ಆರಾಧಿಸಲು ಶುರು ಮಾಡಿದರು. ಅವರು ಇನ್ನು ಮುಂದೆ ಕಷ್ಟ ಪಡುವುದು ಯೆಹೋವನಿಗೆ ಇಷ್ಟವಿರಲಿಲ್ಲ.

ಅಮ್ಮೋನಿಯರ ವಿರುದ್ಧ ಯುದ್ಧದಲ್ಲಿ ಇಸ್ರಾಯೇಲ್ಯರನ್ನು ಮುನ್ನಡೆಸಲು ಯೆಫ್ತಾಹ ಎಂಬ ಸೈನಿಕನನ್ನ ಆರಿಸಲಾಯಿತು. ಅವನು ಯೆಹೋವನಿಗೆ, ‘ಈ ಯುದ್ಧವನ್ನು ಗೆಲ್ಲಲು ನೀನು ನಮಗೆ ಸಹಾಯ ಮಾಡಿದರೆ ನಾನು ನಿನಗೆ ಒಂದು ಮಾತು ಕೊಡುತ್ತೇನೆ. ಅದೇನೆಂದರೆ ನಾನು ಮನೆಗೆ ವಾಪಸ್ಸು ಹೋಗುವಾಗ ಯಾರು ಮೊದಲ ನನ್ನ ಮನೆ ಬಾಗಿಲಿಂದ ನನ್ನನ್ನ ಸ್ವಾಗತಿಸೋಕೆ ಬರ್ತಾರೋ ಆ ವ್ಯಕ್ತಿಯನ್ನ ನಿನಗೆ ಕೊಡುತ್ತೀನಿ’ ಎಂದನು. ಯೆಹೋವನು ಯೆಫ್ತಾಹನ ಬೇಡಿಕೆಯನ್ನು ಕೇಳಿ ಯುದ್ಧದಲ್ಲಿ ಅವನಿಗೆ ಜಯ ನೀಡಿದನು.

ಯೆಫ್ತಾಹ ಮನೆಗೆ ವಾಪಸ್ಸು ಬಂದಾಗ ಮೊದಲು ಅವನನ್ನು ನೋಡಲು ಬಂದದ್ದು ಅವನ ಒಬ್ಬಳೇ ಮುದ್ದಿನ ಮಗಳು. ಅವಳು ಕುಣಿತಾ ದಮ್ಮಡಿ ಬಡಿಯುತ್ತಾ ಬಂದಳು. ಆಗ ಯೆಫ್ತಾಹ ಏನು ಮಾಡಿದ? ಅವನು ತನ್ನ ಮಾತನ್ನು ನೆನಪಿಸಿಕೊಂಡು ‘ಅಯ್ಯೋ, ನನ್ನ ಮಗಳೇ! ನನ್ನ ಹೃದಯ ಒಡೆದುಬಿಟ್ಯಲ್ಲಾ. ನಾನು ಯೆಹೋವನಿಗೆ ಮಾತು ಕೊಟ್ಟಿದ್ದೀನಿ. ಅದನ್ನು ಪಾಲಿಸಲು ನಿನ್ನನ್ನು ದೇವರ ಸೇವೆ ಮಾಡಲು ಶೀಲೋವಿನಲ್ಲಿರುವ ಪವಿತ್ರ ಡೇರೆಗೆ ಕಳುಹಿಸಬೇಕು’ ಅಂದನು. ಆಗ ಅವನ ಮಗಳು ‘ಅಪ್ಪಾ, ನೀನು ಯೆಹೋವನಿಗೆ ಮಾತು ಕೊಟ್ಟಿದ್ರೆ ಅದ್ರ ತರಾನೇ ಮಾಡು. ಆದರೆ ನನಗೊಂದು ಆಸೆ ಇದೆ, ಎರಡು ತಿಂಗಳು ಗೆಳತಿಯರ ಜೊತೆ ಬೆಟ್ಟಗಳಿಗೆ ಹೋಗಿ ಇದ್ದು ಬರುತ್ತೇನೆ. ಆಮೇಲೆ ಶೀಲೋವಿಗೆ ಹೋಗುತ್ತೇನೆ’ ಅಂದಳು. ಯೆಫ್ತಾಹನ ಮಗಳು ತನ್ನ ಉಳಿದ ಜೀವಮಾನವೆಲ್ಲಾ ಪವಿತ್ರ ಡೇರೆಯಲ್ಲಿ ನಂಬಿಗಸ್ತಿಕೆಯಿಂದ ಯೆಹೋವನ ಸೇವೆ ಮಾಡಿದಳು. ಪ್ರತಿವರ್ಷ ಆಕೆಯ ಸ್ನೇಹಿತರು ಅವಳನ್ನು ಭೇಟಿ ಮಾಡಲು ಶೀಲೋವಿಗೆ ಹೋಗುತ್ತಿದ್ದರು.

ಪವಿತ್ರ ಡೇರೆಯಲ್ಲಿ ಯೆಫ್ತಾಹನ ಮಗಳನ್ನು ಅವಳ ಸ್ನೇಹಿತರು ಭೇಟಿ ಮಾಡುತ್ತಿದ್ದಾರೆ

“ನನಗಿಂತ ಹೆಚ್ಚಾಗಿ ಮಗ ಅಥವಾ ಮಗಳನ್ನ ಪ್ರೀತಿಸಿದ್ರೆ ನನ್ನ ಶಿಷ್ಯನಾಗೋ ಯೋಗ್ಯತೆ ಅವನಿಗಿಲ್ಲ.”—ಮತ್ತಾಯ 10:37

ಪ್ರಶ್ನೆಗಳು: ಯೆಫ್ತಾಹ ಏನೆಂದು ಮಾತು ಕೊಟ್ಟ? ಯೆಫ್ತಾಹನ ಮಗಳು ತಂದೆ ಕೊಟ್ಟ ಮಾತನ್ನು ಹೇಗೆ ನೆರವೇರಿಸಿದಳು?

ನ್ಯಾಯಸ್ಥಾಪಕರು 10:6–11:11; 11:29-40; 1 ಸಮುವೇಲ 12:10, 11

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ