ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 39 ಪು. 96
  • ಇಸ್ರಾಯೇಲ್ಯರ ಮೊದಲ ರಾಜ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಇಸ್ರಾಯೇಲ್ಯರ ಮೊದಲ ರಾಜ
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ಸೌಲ—ಇಸ್ರಾಯೇಲಿನ ಮೊದಲನೆಯ ಅರಸ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • “ಯಜ್ಞವನ್ನರ್ಪಿಸುವದಕ್ಕಿಂತ ಮಾತುಕೇಳುವದು ಉತ್ತಮ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಸಾಲಾಗಿ ಬಂದ ನಿರಾಶೆಗಳನ್ನು ಸಹಿಸಿಕೊಂಡಾತನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ನಿರಾಶೆಗಳ ಮಧ್ಯೆಯೂ ತಾಳಿಕೊಂಡಾತನು
    ಅವರ ನಂಬಿಕೆಯನ್ನು ಅನುಕರಿಸಿ
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 39 ಪು. 96
ರಾಜ ಸೌಲ ಸಮುವೇಲನ ಮೇಲಂಗಿಯ ಅಂಚನ್ನು ಎಳೆದಾಗ ಅದು ಹರಿದು ಹೋಗುತ್ತಿರುವುದು

ಪಾಠ 39

ಇಸ್ರಾಯೇಲ್ಯರ ಮೊದಲ ರಾಜ

ಯೆಹೋವನು ಇಸ್ರಾಯೇಲ್ಯರನ್ನು ಮಾರ್ಗದರ್ಶಿಸಲು ನ್ಯಾಯಾಧೀಶರನ್ನು ನೇಮಿಸಿದ್ದನು. ಆದರೆ ಇಸ್ರಾಯೇಲ್ಯರಿಗೆ ಒಬ್ಬ ರಾಜ ಬೇಕಿದ್ದ. ಅವರು ಸಮುವೇಲನಿಗೆ ‘ಎಲ್ಲಾ ಜನಾಂಗಗಳಿಗೆ ರಾಜರಿದ್ದಾರೆ. ನಮಗೂ ಒಬ್ಬ ರಾಜ ಬೇಕು’ ಅಂದರು. ಇದು ತಪ್ಪು ಎಂದು ಸಮುವೇಲನಿಗೆ ಗೊತ್ತಿತ್ತು. ಹಾಗಾಗಿ ಅವನು ಈ ವಿಷಯದ ಬಗ್ಗೆ ಯೆಹೋವನಿಗೆ ಪ್ರಾರ್ಥಿಸಿದ. ಆಗ ಯೆಹೋವನು ಅವನಿಗೆ ‘ಈ ಜನ ನಿನ್ನನ್ನಲ್ಲ, ನನ್ನನ್ನ ಬೇಡ ಅಂತಿದ್ದಾರೆ. ನಿಮಗೆ ಒಬ್ಬ ರಾಜನನ್ನು ನೇಮಿಸುತ್ತೇನೆ. ಆದರೆ ಆ ರಾಜ ಅವರಿಂದ ಏನು ಬೇಕಾದ್ರೂ ಕೇಳಬಹುದು ಅಂತ ಜನರಿಗೆ ಹೇಳು’ ಅಂದನು. ಇದನ್ನು ಸಮುವೇಲ ತಿಳಿಸಿದರೂ ಜನರು ‘ಏನಾದ್ರೂ ಸರಿ, ನಮಗೊಬ್ಬ ರಾಜ ಬೇಕೇ ಬೇಕು’ ಅಂದರು.

ಯೆಹೋವನು ಸಮುವೇಲನಿಗೆ ‘ಇಸ್ರಾಯೇಲ್ಯರ ರಾಜನಾಗಲು ನಾನು ಸೌಲನನ್ನು ಆರಿಸಿದ್ದೇನೆ’ ಎಂದನು. ಸೌಲ ರಾಮದಲ್ಲಿದ್ದ ಸಮುವೇಲನನ್ನು ಭೇಟಿಯಾಗಲು ಹೋದಾಗ ಸಮುವೇಲ ಅವನ ತಲೆಯ ಮೇಲೆ ಎಣ್ಣೆ ಸುರಿದು ಅವನನ್ನು ರಾಜನಾಗಿ ಅಭಿಷೇಕಿಸಿದ.

ನಂತರ ಹೊಸ ರಾಜನನ್ನು ತೋರಿಸಲು ಸಮುವೇಲ ಇಸ್ರಾಯೇಲ್ಯರೆಲ್ಲರನ್ನು ಕೂಡಿಸಿದ. ಆದರೆ ಸೌಲ ಅಲ್ಲಿರಲಿಲ್ಲ. ಯಾಕೆ ಗೊತ್ತಾ? ಯಾಕೆಂದರೆ ಅವನು ಸಾಮಾನುಗಳ ಮಧ್ಯೆ ಬಚ್ಚಿಟ್ಟುಕೊಂಡಿದ್ದ. ಕೊನೆಗೆ ಜನರು ಅವನನ್ನು ಹುಡುಕಿ ಎಲ್ಲರ ಮಧ್ಯೆ ಕರೆತಂದು ನಿಲ್ಲಿಸಿದರು. ಸೌಲ ಬೇರೆಯವರಿಗಿಂತ ತುಂಬ ಎತ್ತರವಾಗಿದ್ದು ಅತಿ ಸುಂದರನಾಗಿದ್ದ. ಸಮುವೇಲ ಜನರಿಗೆ ‘ಯೆಹೋವನು ಆರಿಸಿದ ವ್ಯಕ್ತಿ ಇವನೇ’ ಎಂದನು. ಆಗ ಜನರು ‘ರಾಜ ತುಂಬ ವರ್ಷ ಬದುಕ್ಲಿ!’ ಎಂದು ಜೈಕಾರ ಹಾಕಿದ್ರು.

ಮೊದಮೊದಲು ರಾಜ ಸೌಲ ಸಮುವೇಲನ ಮಾತನ್ನು ಕೇಳುತ್ತಿದ್ದ ಹಾಗೂ ಯೆಹೋವನಿಗೆ ವಿಧೇಯನಾಗಿದ್ದ. ಆದರೆ ನಂತರ ಅವನು ಬದಲಾದ. ಉದಾಹರಣೆಗೆ, ರಾಜರು ಬಲಿಗಳನ್ನು ಅರ್ಪಿಸುವಂತಿರಲಿಲ್ಲ. ಒಮ್ಮೆ ಸಮುವೇಲ ತಾನು ಬರುವ ತನಕ ಕಾಯಲು ಸೌಲನಿಗೆ ಹೇಳಿದನು. ಆದರೆ ಸಮುವೇಲ ಬರುವುದು ಸ್ವಲ್ಪ ತಡವಾಯಿತು. ಆದ್ದರಿಂದ ಸೌಲನೇ ಬಲಿಯನ್ನು ಅರ್ಪಿಸಿದ. ಆಗ ಸಮುವೇಲನಿಗೆ ಹೇಗನಿಸಿರಬೇಕು? ಅವನು ಸೌಲನಿಗೆ ‘ನೀನು ಯೆಹೋವನಿಗೆ ಅವಿಧೇಯನಾಗಬಾರದಿತ್ತು’ ಅಂದನು. ಸೌಲ ಈ ತಪ್ಪಿನಿಂದ ಪಾಠ ಕಲಿತನಾ?

ನಂತರ ಸೌಲ ಅಮಾಲೇಕ್ಯರ ವಿರುದ್ಧ ಯುದ್ಧಕ್ಕೆ ಹೊರಟಾಗ ‘ಅವರಲ್ಲಿ ಯಾರನ್ನು ಉಳಿಸಬೇಡ’ ಎಂದು ಸಮುವೇಲ ತಿಳಿಸಿದ್ದ. ಆದರೆ ಸೌಲ ಅಮಾಲೇಕ್ಯರ ಅರಸನಾದ ಆಗಾಗನನ್ನು ಕೊಲ್ಲಲಿಲ್ಲ. ಆದ್ದರಿಂದ ಯೆಹೋವನು ಸಮುವೇಲನಿಗೆ ‘ಸೌಲನು ನನ್ನನ್ನು ಬಿಟ್ಟುಬಿಟ್ಟಿದ್ದಾನೆ. ನಾನು ಹೇಳಿದ ಹಾಗೆ ಅವನು ಕೇಳ್ತಾ ಇಲ್ಲ’ ಅಂದನು. ಸಮುವೇಲನಿಗೆ ತುಂಬ ದುಃಖ ಆಯಿತು. ಅವನು ಸೌಲನಿಗೆ ‘ನೀನು ಯೆಹೋವನಿಗೆ ವಿಧೇಯನಾಗದೇ ಹೋದ್ದರಿಂದ ಆತನು ಬೇರೊಬ್ಬನನ್ನು ರಾಜನಾಗಲು ಆರಿಸುತ್ತಾನೆ’ ಎಂದ. ಸಮುವೇಲ ಅಲ್ಲಿಂದ ಹೋಗಲು ಹಿಂದೆ ತಿರುಗಿದಾಗ ಸೌಲ ಅವನ ಮೇಲಂಗಿಯನ್ನು ಹಿಡಿದು ಎಳೆದ. ಅದು ಹರಿದುಹೋಯ್ತು. ಆಗ ಸಮುವೇಲ ಸೌಲನಿಗೆ ‘ಯೆಹೋವನು ನಿನ್ನಿಂದ ಅಧಿಕಾರವನ್ನ ಕಿತ್ಕೊಳ್ತಾನೆ’ ಅಂದ. ಯೆಹೋವನು ತನ್ನನ್ನು ಪ್ರೀತಿಸಿ, ವಿಧೇಯತೆ ತೋರಿಸುವ ವ್ಯಕ್ತಿಗೆ ಅಧಿಕಾರವನ್ನ ಕೊಡಲಿದ್ದನು.

“ಬಲಿಗಿಂತ ಮಾತು ಕೇಳೋದೆ ಆತನಿಗೆ ತುಂಬ ಇಷ್ಟ.”—1 ಸಮುವೇಲ 15:22

ಪ್ರಶ್ನೆಗಳು: ಇಸ್ರಾಯೇಲ್ಯರು ಏನನ್ನು ಕೇಳಿದರು? ಯೆಹೋವನು ಸೌಲನನ್ನು ತಿರಸ್ಕರಿಸಿದ್ದೇಕೆ?

1 ಸಮುವೇಲ 8:1-22; 9:1, 2, 15-17; 10:8, 20-24; 13:1-14; 15:1-35

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ