ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 75 ಪು. 178-ಪು. 179 ಪ್ಯಾ. 4
  • ಯೇಸುವನ್ನು ಪಿಶಾಚನು ಪರೀಕ್ಷಿಸಿದನು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೇಸುವನ್ನು ಪಿಶಾಚನು ಪರೀಕ್ಷಿಸಿದನು
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ನಾವು ಪ್ರಲೋಭನೆಗಳಿಗೆ ಬಲಿಯಾಗಬಾರದು
    ಮಹಾ ಬೋಧಕನಿಂದ ಕಲಿಯೋಣ
  • ಯೇಸುವಿನಂತೆ “ಸೈತಾನನನ್ನು ಎದುರಿಸಿರಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಯೇಸುವಿನ ಶೋಧನೆಗಳಿಂದ ಕಲಿಯುವುದು
    ಅತ್ಯಂತ ಮಹಾನ್‌ ಪುರುಷ
  • ಪಿಶಾಚನು ಕೇವಲ ಮೂಢನಂಬಿಕೆಯ ಉತ್ಪತ್ತಿಯಲ್ಲ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 75 ಪು. 178-ಪು. 179 ಪ್ಯಾ. 4
ದೇವಾಲಯದ ಮೇಲಿಂದ ಕೆಳಕ್ಕೆ ಜಿಗಿಯಲು ಯೇಸು ನಿರಾಕರಿಸುತ್ತಾನೆ

ಪಾಠ 75

ಯೇಸುವನ್ನು ಪಿಶಾಚನು ಪರೀಕ್ಷಿಸಿದನು

ಕಲ್ಲುಗಳನ್ನು ರೊಟ್ಟಿಯಾಗುವಂತೆ ಮಾಡಲು ಯೇಸು ನಿರಾಕರಿಸುತ್ತಾನೆ

ಯೇಸು ದೀಕ್ಷಾಸ್ನಾನ ಪಡೆದ ಮೇಲೆ, ಪವಿತ್ರಶಕ್ತಿ ಅವನನ್ನು ಬರಡು ಪ್ರದೇಶಕ್ಕೆ ನಡೆಸಿತು. ಯೇಸು ನಲವತ್ತು ದಿನಗಳವರೆಗೆ ಏನೂ ತಿನ್ನಲಿಲ್ಲ, ಅವನಿಗೆ ತುಂಬಾ ಹಸಿವಾಯಿತು. ಆಗ ಪಿಶಾಚನು ಯೇಸುವನ್ನು ಪರೀಕ್ಷಿಸಲು ಬಂದನು. ಅವನು ಯೇಸುವಿಗೆ, ‘ನೀನು ನಿಜವಾಗಿ ದೇವರ ಮಗನಾಗಿದ್ರೆ ಈ ಕಲ್ಲುಗಳಿಗೆ ರೊಟ್ಟಿ ಆಗು ಅಂತ ಹೇಳು’ ಅಂದನು. ಆದರೆ ಯೇಸು ಪವಿತ್ರ ಗ್ರಂಥವನ್ನ ಉಪಯೋಗಿಸಿ, ‘ಬದುಕಲು ಕೇವಲ ಆಹಾರ ಅಷ್ಟೇ ಸಾಕಾಗಲ್ಲ. ಯೆಹೋವನು ಹೇಳುವ ಪ್ರತಿಯೊಂದು ಮಾತನ್ನು ಕೇಳಬೇಕು ಎಂದು ಬರೆದಿದೆ’ ಎಂದು ಉತ್ತರಿಸಿದನು.

ನಂತರ, ಪಿಶಾಚನು ಯೇಸುವಿಗೆ, ‘ನೀನು ನಿಜವಾಗಿ ದೇವರ ಮಗನಾಗಿದ್ರೆ ದೇವಾಲಯದ ಮೇಲಿಂದ ಕೆಳಕ್ಕೆ ಜಿಗಿ. ದೇವರು ತನ್ನ ದೂತರನ್ನು ಕಳುಹಿಸಿ ನಿನ್ನನ್ನು ಕಾಪಾಡುವನು ಎಂದು ಬರೆದಿದೆಯಲ್ಲಾ’ ಎಂದು ಹೇಳಿದನು. ಆದರೆ ಯೇಸು ಪುನಃ ಪವಿತ್ರ ಗ್ರಂಥವನ್ನು ಉಪಯೋಗಿಸಿ, ‘ಯೆಹೋವನನ್ನು ಪರೀಕ್ಷಿಸಬಾರದು ಎಂದು ಸಹ ಬರೆದಿದೆ’ ಅಂದನು.

ಸೈತಾನನು ತೋರಿಸಿದ ಲೋಕದ ಎಲ್ಲ ಸಾಮ್ರಾಜ್ಯಗಳನ್ನ ಯೇಸು ನಿರಾಕರಿಸುತ್ತಾನೆ

ಬಳಿಕ, ಸೈತಾನನು ಎಲ್ಲಾ ಸಾಮ್ರಾಜ್ಯಗಳನ್ನೂ ಅವುಗಳ ಸಂಪತ್ತನ್ನೂ, ಮಹಿಮೆಯನ್ನೂ ತೋರಿಸಿ, ‘ನೀನು ನನಗೆ ಒಂದೇ ಒಂದು ಸಾರಿ ಆರಾಧನೆ ಮಾಡಿದರೆ ಈ ಎಲ್ಲಾ ಸಾಮ್ರಾಜ್ಯಗಳನ್ನು ಮತ್ತು ಸಂಪತ್ತನ್ನು ನಿನಗೆ ಕೊಡ್ತೀನಿ’ ಅಂದನು. ಆದರೆ ಯೇಸು ಅವನಿಗೆ, ‘ಸೈತಾನನೇ, ಇಲ್ಲಿಂದ ತೊಲಗಿ ಹೋಗು! ಯೆಹೋವನನ್ನು ಮಾತ್ರ ಆರಾಧಿಸಬೇಕು ಎಂದು ಬರೆದಿದೆ’ ಅಂದನು.

ಆಗ ಪಿಶಾಚನು ಅಲ್ಲಿಂದ ಹೋದನು ಮತ್ತು ದೇವದೂತರು ಬಂದು ಯೇಸುವಿಗೆ ಉಪಚಾರ ಮಾಡಿದರು. ಅಂದಿನಿಂದ ಯೇಸು ದೇವರ ಆಳ್ವಿಕೆಯ ಸಿಹಿಸುದ್ದಿಯನ್ನು ಸಾರಿದನು. ಈ ಕೆಲಸಕ್ಕಾಗಿಯೇ ದೇವರು ಅವನನ್ನು ಭೂಮಿಗೆ ಕಳುಹಿಸಿದ್ದನು. ಯೇಸುವಿನ ಬೋಧನೆಯನ್ನು ಜನರು ಇಷ್ಟಪಟ್ಟರು. ಅವನು ಹೋದಲ್ಲೆಲ್ಲಾ ಅವರು ಅವನ ಹಿಂದೆ ಹೋದರು.

“ಅವನು [ಪಿಶಾಚ] ಸುಳ್ಳು ಹೇಳ್ತಾನೆ. ಯಾಕಂದ್ರೆ ಅವನ ಮನಸ್ಸು ತುಂಬ ಅದೇ ತುಂಬಿದೆ. ಅವನು ಸುಳ್ಳುಬುರುಕ. ಸುಳ್ಳನ್ನ ಹುಟ್ಟಿಸಿದವನೇ ಅವನು.”—ಯೋಹಾನ 8:44

ಪ್ರಶ್ನೆಗಳು: ಯೇಸುವಿಗೆ ಯಾವ ಮೂರು ಪರೀಕ್ಷೆಗಳು ಬಂದವು? ಯೇಸು ಪಿಶಾಚನಿಗೆ ಹೇಗೆ ಉತ್ತರ ಕೊಟ್ಟನು?

ಮತ್ತಾಯ 4:1-11; ಮಾರ್ಕ 1:12, 13; ಲೂಕ 4:1-15; ಧರ್ಮೋಪದೇಶಕಾಂಡ 6:13, 16; 8:3; ಯಾಕೋಬ 4:7

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ