ಭಾಗ 13- ಪರಿಚಯ
ಯೇಸು ಭೂಮಿಗೆ ಬಂದಿದ್ದು ಅಪರಿಪೂರ್ಣ ಮನುಷ್ಯರಿಗಾಗಿ ತನ್ನ ಜೀವವನ್ನು ಕೊಡಲು. ಅವನು ಸತ್ತರೂ ಲೋಕವನ್ನು ಜಯಿಸಿದನು. ಯೆಹೋವನು ತನ್ನ ಮಗನಾದ ಯೇಸುವನ್ನು ಮರೆಯಲಿಲ್ಲ. ಅವನನ್ನು ಮತ್ತೆ ಬದುಕಿಸಿದನು. ಯೇಸು ಸಾಯುವ ವರೆಗೆ ದೀನತೆಯಿಂದ ಇತರರ ಸೇವೆ ಮಾಡಿದನು ಮತ್ತು ಅವರು ತಪ್ಪುಗಳನ್ನು ಮಾಡಿದಾಗಲೂ ಅವರನ್ನು ಕ್ಷಮಿಸಿದನು. ಅವನು ಮತ್ತೆ ಜೀವ ಪಡೆದುಕೊಂಡ ನಂತರ ತನ್ನ ಶಿಷ್ಯರಿಗೆ ಕಾಣಿಸಿಕೊಂಡನು. ಅವರಿಗೆ ತಾನು ಕೊಟ್ಟ ಮುಖ್ಯ ಕೆಲಸವನ್ನು ಹೇಗೆ ಮಾಡುವುದೆಂದು ಕಲಿಸಿದನು. ಆ ಕೆಲಸದಲ್ಲಿ ಇಂದು ನಮಗೂ ಪಾಲಿದೆ. ಹೆತ್ತವರೇ, ಈ ಸುಯೋಗವನ್ನು ಅಮೂಲ್ಯವೆಂದೆಣಿಸಲು ನಿಮ್ಮ ಮಕ್ಕಳಿಗೆ ಸಹಾಯ ಮಾಡಿ.