ಗೀತೆ 56
ಸದಾ ಸಂತೋಷದ ದಾರಿ
1. ಸತ್ಯದ ದಾರಿ, ಖುಷಿ ನೀಡೋ ಈ ದಾರಿ.
ಸದಾ ಸಾಗೋಕೆ, ಯೋಗ್ಯ ದಾರಿ.
ಕೇಳುತ್ತಾ ಮಾತು, ಸಲಹೆ ನೀ ಪಾಲಿಸು
ಯೆಹೋವನನ್ನು ಪ್ರೀತಿಸು.
(ಪಲ್ಲವಿ)
ಈ ಸತ್ಯ ನಿನ್ನ
ಮನದಲ್ಲಿ ಸೇರಿಸು
ಜೀವನ ಪೂರ್ತಿ
ಸದಾ ಸಂತೋಷ
ಪಡೆವೆ ಪ್ರತಿ ದಿನ
2. ದೇವ ಸೇವೇಲಿ, ನೀನು ಮಾಡಿದ ತ್ಯಾಗ
ಫಲ ಕೊಡುತೆ ಅತೀ ಬೇಗ
ಕಾಣಲ್ಲ ದು:ಖ ಬರಿ ಸಂತೋಷ ಆಗ
ಹೊಸ ಲೋಕವು ಬಂದಾಗ
(ಪಲ್ಲವಿ)
ಈ ಸತ್ಯ ನಿನ್ನ
ಮನದಲ್ಲಿ ಸೇರಿಸು
ಜೀವನ ಪೂರ್ತಿ
ಸದಾ ಸಂತೋಷ
ಪಡೆವೆ ಪ್ರತಿ ದಿನ
3. ಯೆಹೋವ ದೇವ ನಿಂಗೆ ದಾರಿ ತೋರುವ,
ಸದಾ ಜ್ಞಾನ ವಿವೇಕ ನೀಡಿ.
ಆತನ ಜೊತೆ ದಿನನಿತ್ಯ ಸಾಗುತ್ತಾ,
ಪಡೆ ಶಾಶ್ವತ ಜೀವವ.
(ಪಲ್ಲವಿ)
ಈ ಸತ್ಯ ನಿನ್ನ
ಮನದಲ್ಲಿ ಸೇರಿಸು
ಜೀವನ ಪೂರ್ತಿ
ಸದಾ ಸಂತೋಷ
ಪಡೆವೆ ಪ್ರತಿ ದಿನ
(ಕೀರ್ತ. 26:3; ಜ್ಞಾನೋ. 8:35; 15:31; ಯೋಹಾ. 8:31, 32 ಸಹ ನೋಡಿ.)