ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lff ಪಾಠ 6 ಪಾಯಿಂಟ್‌ 1-6
  • ಜೀವ ತನ್ನಿಂದ ತಾನೇ ಬಂತಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವ ತನ್ನಿಂದ ತಾನೇ ಬಂತಾ?
  • ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಹೆಚ್ಚನ್ನ ತಿಳಿಯೋಣ
  • ನಾವೇನು ಕಲಿತ್ವಿ
  • ಇದನ್ನೂ ನೋಡಿ
  • ಬೈಬಲ್‌ ನಮಗೆ ಏನು ಕಲಿಸುತ್ತೆ
    ಎಚ್ಚರ!—2021
  • ದೇವರು ಮನುಷ್ಯರನ್ನ ಯಾಕೆ ಸೃಷ್ಟಿ ಮಾಡಿದನು?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಸೃಷ್ಟಿಕರ್ತನಲ್ಲಿ ದೃಢ ನಂಬಿಕೆ ಬೆಳೆಸಿಕೊಳ್ಳಲು ನಿಮ್ಮ ಮಕ್ಕಳಿಗೆ ಸಹಾಯಮಾಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಆಧಾರವನ್ನು ಪರೀಕ್ಷಿಸಿ
    ಎಚ್ಚರ!—2021
ಇನ್ನಷ್ಟು
ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
lff ಪಾಠ 6 ಪಾಯಿಂಟ್‌ 1-6
ಪಾಠ 6. ಗಿಡ ಮೊಳಕೆಯೊಡೆದಿದೆ, ಅದರ ಮೇಲೆ ಬಿಸಿಲಿನ ಕಿರಣಗಳು ಬೀಳುತ್ತಿವೆ.

ಪಾಠ 06

ಜೀವ ತನ್ನಿಂದ ತಾನೇ ಬಂತಾ?

ಮುದ್ರಿತ ಸಂಚಿಕೆ
ಮುದ್ರಿತ ಸಂಚಿಕೆ
ಮುದ್ರಿತ ಸಂಚಿಕೆ

‘ದೇವರು ಎಲ್ಲವನ್ನ ಸೃಷ್ಟಿ ಮಾಡಿದನು’ ಅಂತ ಬೈಬಲ್‌ ಹೇಳುತ್ತೆ. (ಪ್ರಕಟನೆ 4:11) ನೀವು ಇದನ್ನ ನಂಬ್ತೀರಾ? ಕೆಲವರು ‘ಜೀವ ತನ್ನಿಂದ ತಾನೇ ಬಂತು, ಅದನ್ನ ಯಾರೂ ಸೃಷ್ಟಿ ಮಾಡಿಲ್ಲ’ ಅಂತ ಹೇಳ್ತಾರೆ. ಒಂದುವೇಳೆ ಅದು ನಿಜ ಆಗಿದ್ರೆ ನಾವೆಲ್ಲ ಇದ್ದಕ್ಕಿದ್ದ ಹಾಗೆ ಬಂದಿರಬೇಕು. ನಮ್ಮ ಜೀವನಕ್ಕೆ ಉದ್ದೇಶನೇ ಇರುತ್ತಿರಲಿಲ್ಲ. ಆದ್ರೆ ಯೆಹೋವನು ನಮ್ಮನ್ನ ಸೃಷ್ಟಿ ಮಾಡಿದ್ರೆ ಅದಕ್ಕೆ ಖಂಡಿತ ಒಂದು ಉದ್ದೇಶa ಇರುತ್ತೆ. ನಾವೀಗ, ಜೀವದ ಬಗ್ಗೆ ಬೈಬಲ್‌ ಹೇಳೋ ವಿಷಯಗಳನ್ನ ಮತ್ತು ನಾವು ಯಾಕೆ ಅದನ್ನ ನಂಬಬಹುದು ಅನ್ನೋದನ್ನ ನೋಡೋಣ.

1. ವಿಶ್ವ ಮತ್ತು ಅದರಲ್ಲಿರುವ ಎಲ್ಲವೂ ಹೇಗೆ ಬಂತು?

“ಆರಂಭದಲ್ಲಿ ದೇವರು ಆಕಾಶ, ಭೂಮಿ ಸೃಷ್ಟಿ ಮಾಡಿದನು” ಅಂತ ಬೈಬಲ್‌ ಹೇಳುತ್ತೆ. (ಆದಿಕಾಂಡ 1:1) ಪ್ರಪಂಚಕ್ಕೆ ಒಂದು ಆರಂಭ ಇತ್ತು ಅಂತ ಹೆಚ್ಚಿನ ವಿಜ್ಞಾನಿಗಳೂ ಒಪ್ಪುತ್ತಾರೆ. ಹಾಗಾದ್ರೆ ದೇವರು ಹೇಗೆ ಇಡೀ ವಿಶ್ವವನ್ನ ಸೃಷ್ಟಿ ಮಾಡಿದನು? ದೇವರು ತನ್ನ “ಪವಿತ್ರಶಕ್ತಿ” ಬಳಸಿ ಗ್ರಹಗಳನ್ನ, ನಕ್ಷತ್ರಗಳನ್ನ, ಗ್ಯಾಲಕ್ಸಿಗಳನ್ನ ಹೀಗೆ ವಿಶ್ವದಲ್ಲಿ ಇರೋ ಎಲ್ಲವನ್ನ ಸೃಷ್ಟಿ ಮಾಡಿದನು.—ಆದಿಕಾಂಡ 1:2.

2. ದೇವರು ಭೂಮಿಯನ್ನ ಯಾಕೆ ಸೃಷ್ಟಿ ಮಾಡಿದನು?

ಯೆಹೋವನು “[ಭೂಮಿಯನ್ನ] ಹಾಗೇ ಸುಮ್ಮನೆ ಸೃಷ್ಟಿಸಲಿಲ್ಲ, ಜನ ವಾಸಿಸಬೇಕಂತನೇ ರೂಪಿಸಿದನು” ಅಂತ ಬೈಬಲ್‌ ಹೇಳುತ್ತೆ. (ಯೆಶಾಯ 45:18) ದೇವರು ಭೂಮಿಯನ್ನ ಹೇಗೆ ಸೃಷ್ಟಿ ಮಾಡಿದ್ದಾನೆ ಅಂದ್ರೆ ಅದರಲ್ಲಿ ಮನುಷ್ಯರು ಯಾವುದೇ ಕೊರತೆ ಇಲ್ಲದೆ ಆರಾಮಾಗಿ, ಸಂತೋಷವಾಗಿ, ಎಂದೆಂದಿಗೂ ಜೀವಿಸಬಹುದು. (ಯೆಶಾಯ 40:28 ಮತ್ತು 42:5 ಓದಿ.) ಭೂಮಿಯಲ್ಲಿ ಮಾತ್ರ ಮನುಷ್ಯರು ಬದುಕೋಕೆ ಸಾಧ್ಯ. ಈ ಭೂಮಿ ತರ ಇರುವ ಬೇರೆ ಯಾವುದೇ ಗ್ರಹವನ್ನ ಇದುವರೆಗೂ ಕಂಡುಹಿಡಿದಿಲ್ಲ ಅಂತ ವಿಜ್ಞಾನಿಗಳು ಹೇಳುತ್ತಾರೆ.

3. ಮನುಷ್ಯರು ಹೇಗೆ ಪ್ರಾಣಿಗಳಿಗಿಂತ ಶ್ರೇಷ್ಠರಾಗಿದ್ದಾರೆ?

ಯೆಹೋವನು ಭೂಮಿಯನ್ನ ಸೃಷ್ಟಿ ಮಾಡಿದ ಮೇಲೆ ಅದರಲ್ಲಿ ಜೀವಿಗಳನ್ನ ಸೃಷ್ಟಿ ಮಾಡಿದನು. ಮೊದಲಿಗೆ ಆತನು ಗಿಡ-ಮರಗಳನ್ನ ನಂತ್ರ ಪ್ರಾಣಿಗಳನ್ನ ಸೃಷ್ಟಿಸಿದನು. ಆಮೇಲೆ “ದೇವರು ತನ್ನನ್ನ ಹೋಲೋ ಮನುಷ್ಯನನ್ನ ಸೃಷ್ಟಿ ಮಾಡಿದನು.” (ಆದಿಕಾಂಡ 1:27 ಓದಿ.) ಮನುಷ್ಯರು ಹೇಗೆ ಬೇರೆಲ್ಲಾ ಜೀವಿಗಳಿಗಿಂತ ಶ್ರೇಷ್ಠರಾಗಿದ್ದಾರೆ? ತನ್ನನ್ನ ಹೋಲುವ ರೀತಿಯಲ್ಲಿ ದೇವರು ನಮ್ಮನ್ನ ಸೃಷ್ಟಿ ಮಾಡಿರೋದ್ರಿಂದ ನಾವು ಆತನಲ್ಲಿ ಇರೋ ಪ್ರೀತಿ, ನ್ಯಾಯದಂಥ ಗುಣಗಳನ್ನ ತೋರಿಸೋಕೆ ಆಗುತ್ತೆ. ಭಾಷೆಗಳನ್ನ ಕಲಿಯುವ, ಸಂಗೀತ ಮತ್ತು ಕಲೆಯನ್ನ ಆನಂದಿಸುವ ಸಾಮರ್ಥ್ಯವನ್ನ ಇಟ್ಟು ದೇವರು ನಮ್ಮನ್ನ ಸೃಷ್ಟಿ ಮಾಡಿದ್ದಾನೆ. ಅಷ್ಟೇ ಅಲ್ಲ, ಆತನನ್ನ ಆರಾಧಿಸುವ ಸಾಮರ್ಥ್ಯವನ್ನೂ ಕೊಟ್ಟಿದ್ದಾನೆ. ಇದನ್ನ ಬೇರೆ ಯಾವ ಜೀವಿಗಳಿಂದನೂ ಮಾಡೋಕೆ ಆಗಲ್ಲ.

ಹೆಚ್ಚನ್ನ ತಿಳಿಯೋಣ

ಜೀವವನ್ನ ಸೃಷ್ಟಿ ಮಾಡಲಾಗಿದೆ ಮತ್ತು ಅದನ್ನ ಬೈಬಲಲ್ಲಿ ಹೇಳಿರೋ ತರನೇ ಸೃಷ್ಟಿ ಮಾಡಲಾಗಿದೆ ಅನ್ನೋದಕ್ಕೆ ಆಧಾರವನ್ನ ನೋಡಿ. ಮನುಷ್ಯರಲ್ಲಿ ಇರೋ ಯಾವ ಒಳ್ಳೇ ಗುಣಗಳು ದೇವರ ಬಗ್ಗೆ ಕಲಿಯೋಕೆ ಸಹಾಯ ಮಾಡುತ್ತೆ ಅನ್ನೋದನ್ನೂ ನೋಡಿ.

4. ಜೀವವನ್ನ ಸೃಷ್ಟಿ ಮಾಡಲಾಗಿದೆ

ಜನರು ಪ್ರಕೃತಿಯನ್ನ ನೋಡಿ, ಅದನ್ನ ಕಾಪಿ ಮಾಡಿ ಕೆಲವು ವಸ್ತುಗಳನ್ನ ನಿರ್ಮಿಸುತ್ತಾರೆ. ಅದನ್ನ ತಾವೇ ಮಾಡಿದ್ದು ಅಂತ ಕೀರ್ತಿ ತಗೋತಾರೆ. ಹಾಗಾದ್ರೆ ಪ್ರಕೃತಿಯನ್ನ ಸೃಷ್ಟಿ ಮಾಡಿದಕ್ಕೆ ಯಾರಿಗೆ ಕೀರ್ತಿ ಸಿಗಬೇಕು? ವಿಡಿಯೋ ನೋಡಿ, ನಂತರ ಈ ಕೆಳಗಿನ ಪ್ರಶ್ನೆಯನ್ನ ಚರ್ಚಿಸಿ.

ವಿಡಿಯೋ: ದೇವರ ಬಗ್ಗೆ ನಿಮ್ಮ ವಯಸ್ಸಿನವರು ಏನಂತಾರೆ? (2:43)

  • ಜನರು ಪ್ರಕೃತಿಯನ್ನ ನೋಡಿ ಏನೆಲ್ಲಾ ಮಾಡಿದ್ದಾರೆ?

ಪ್ರತಿಯೊಂದು ಮನೆಯನ್ನ ಯಾರಾದ್ರೂ ಒಬ್ಬರು ಕಟ್ಟಿರುತ್ತಾರೆ. ಹಾಗಾದ್ರೆ ಪ್ರಕೃತಿಯಲ್ಲಿ ಇರೋ ಎಲ್ಲವನ್ನ ಯಾರಾದ್ರೂ ಮಾಡಿರಬೇಕು ಅಲ್ವಾ? ಇಬ್ರಿಯ 3:4 ಓದಿ, ನಂತರ ಈ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ:

  • ಪ್ರಕೃತಿಯಲ್ಲಿರೋ ಯಾವ ವಿಷಯಗಳನ್ನ ನೋಡಿದಾಗ ನಿಮಗೆ ಆಶ್ಚರ್ಯ ಆಗುತ್ತೆ?

  • ಈ ವಿಶ್ವವನ್ನ ಮತ್ತು ಅದರಲ್ಲಿ ಇರೋ ವಸ್ತುಗಳನ್ನ ಯಾರೋ ಒಬ್ಬರು ಸೃಷ್ಟಿ ಮಾಡಿದ್ದಾರೆ ಅಂತ ನಂಬಬಹುದಾ? ಯಾಕೆ?

ನಿಮಗೆ ಗೊತ್ತಿತ್ತಾ?

ಈ ವಿಷಯದ ಬಗ್ಗೆ ಇರೋ ಲೇಖನಗಳು ಮತ್ತು ವಿಡಿಯೋಗಳನ್ನ jw.org ವೆಬ್‌ಸೈಟಲ್ಲಿ ಇರೋ “ವಿಕಾಸವೇ? ವಿನ್ಯಾಸವೇ?” ಮತ್ತು “ಜೀವದ ಉಗಮದ ಬಗ್ಗೆ ದೃಷ್ಟಿಕೋನಗಳು” ಅನ್ನೋ ವಿಭಾಗದಲ್ಲಿ ನೋಡಿ.

“ನಿಜ ಹೇಳಬೇಕಂದ್ರೆ, ಪ್ರತಿಯೊಂದು ಮನೆಯನ್ನ ಯಾರಾದ್ರೂ ಒಬ್ರು ಕಟ್ಟಿರ್ತಾರೆ. ಆದ್ರೆ ಎಲ್ಲವನ್ನೂ ಸೃಷ್ಟಿಸಿದ್ದು ದೇವರೇ”

ಒಬ್ಬ ವ್ಯಕ್ತಿ ಉಷ್ಣವಲಯ ಪ್ರದೇಶದಲ್ಲಿ ಕಟ್ಟುತ್ತಿರುವ ಮನೆಗೆ ಬಿದಿರಿನ ಛಾವಣಿಯನ್ನ ಹಾಕುತ್ತಿದ್ದಾನೆ.

5. ಸೃಷ್ಟಿಯ ಬಗ್ಗೆ ಬೈಬಲ್‌ ತಿಳಿಸಿರೋ ವಿಷಯಗಳನ್ನ ನಾವು ನಂಬಬಹುದು

ಬೈಬಲಿನ ಆದಿಕಾಂಡ ಪುಸ್ತಕದ ಅಧ್ಯಾಯ 1ರಲ್ಲಿ ಭೂಮಿ ಮತ್ತು ಅದರಲ್ಲಿ ಇರೋ ಜೀವಿಗಳ ಸೃಷ್ಟಿಯ ಬಗ್ಗೆ ವಿವರಿಸಲಾಗಿದೆ. ಅದನ್ನ ನೀವು ನಂಬ್ತೀರಾ ಅಥವಾ ಅದು ಬರೀ ಕಟ್ಟುಕಥೆ ಅಂತ ಅನಿಸುತ್ತಾ? ವಿಡಿಯೋ ನೋಡಿ, ನಂತರ ಈ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ.

ವಿಡಿಯೋ: ವಿಶ್ವದ ರಚನೆ ಹೇಗಾಯ್ತು? —ತುಣುಕು (3:51)

ಕೊಲಾಜ್‌: ‘ವಿಶ್ವದ ರಚನೆ ಹೇಗಾಯ್ತು?’—ತುಣುಕು ಅನ್ನೋ ವಿಡಿಯೋದಲ್ಲಿರುವ ದೃಶ್ಯಗಳು. 1. ಸೃಷ್ಟಿಯ 6 ದಿನಗಳಲ್ಲಾದ ವಿಷಯಗಳನ್ನ ಸೂಚಿಸುವ ಚಿತ್ರಗಳು. 2. ಸೃಷ್ಟಿಯ 6 ದಿನಗಳಾದ ಮೇಲೆ ಸೂರ್ಯ, ಒಣ ನೆಲ, ನೀರು, ಸಸ್ಯಗಳು, ಪಕ್ಷಿಗಳು, ನೆಲದ ಮೇಲಿರೋ ಪ್ರಾಣಿಗಳು ಮತ್ತು ಮನುಷ್ಯನಿಂದ ತುಂಬಿದ ಭೂಮಿ.
  • 6 ದಿನಗಳಲ್ಲಿ ಭೂಮಿಯನ್ನ ಮತ್ತು ಅದರಲ್ಲಿರೋ ಜೀವಿಗಳನ್ನ ಸೃಷ್ಟಿಸಲಾಯ್ತು ಅಂತ ಬೈಬಲ್‌ ಹೇಳುತ್ತೆ. ಆದ್ರೆ ಇದು 24 ಗಂಟೆಗಳಿರುವ ದಿನಗಳಾ?

  • ಬೈಬಲಿನಲ್ಲಿ ಸೃಷ್ಟಿಯ ಬಗ್ಗೆ ಹೇಳಿರೋ ವಿಷಯಗಳನ್ನ ನೀವು ನಂಬ್ತೀರಾ? ಯಾಕೆ?

ಆದಿಕಾಂಡ 1:1 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಈ ವಿಶ್ವಕ್ಕೆ ಒಂದು ಆರಂಭ ಇದೆ ಅಂತ ವಿಜ್ಞಾನಿಗಳು ಹೇಳ್ತಾರೆ. ಅವರು ಹೇಳೋ ಮಾತಿಗೂ ಈಗಷ್ಟೇ ನೀವು ಬೈಬಲಿಂದ ಓದಿದ ವಚನಕ್ಕೂ ಯಾವ ಹೋಲಿಕೆ ಇದೆ?

ಕೆಲವರು, ‘ದೇವರು ವಿಕಾಸದ ಮೂಲಕ ಜೀವಿಗಳನ್ನ ಸೃಷ್ಟಿ ಮಾಡಿದ್ದಾನೆ’ ಅಂತ ಹೇಳುತ್ತಾರೆ. ಅಂದ್ರೆ ಒಂದು ಚಿಕ್ಕ ಜೀವಿಯನ್ನ ಸೃಷ್ಟಿ ಮಾಡಿ ನಂತ್ರ ಅದ್ರಿಂದ ಬೇರೆಬೇರೆ ತರದ ಜೀವಿಗಳು ಹುಟ್ಟಿಕೊಳ್ಳುವ ಹಾಗೆ ಮಾಡಿದ್ದಾನೆ ಅನ್ನೋದು ಅವರ ಅಭಿಪ್ರಾಯ. ಆದಿಕಾಂಡ 1:21, 25, 27 ಓದಿ, ನಂತರ ಈ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ:

  • ದೇವರು ವಿಕಾಸದ ಮೂಲಕ ಜೀವಿಗಳನ್ನ ಮಾಡಿದನು ಅಂತ ಬೈಬಲ್‌ ಕಲಿಸುತ್ತಾ? ಅಥವಾ ದೇವರೇ ‘ಎಲ್ಲಾ ಜಾತಿಯ’b ಜೀವಿಗಳನ್ನ ಸೃಷ್ಟಿ ಮಾಡಿದನಾ?

6. ದೇವರ ಅದ್ಭುತ ಸೃಷ್ಟಿ—ಮನುಷ್ಯ

ಯೆಹೋವ ದೇವರು ಪ್ರಾಣಿಗಳನ್ನ ಮತ್ತು ಮನುಷ್ಯರನ್ನ ಸೃಷ್ಟಿ ಮಾಡಿದನು. ಆದರೆ ಮನುಷ್ಯರಲ್ಲಿ ಪ್ರಾಣಿಗಳಿಗಿಂತ ಶ್ರೇಷ್ಠ ಗುಣಗಳಿವೆ. ಆದಿಕಾಂಡ 1:26 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಯೆಹೋವ ದೇವರು ತನ್ನನ್ನ ಹೋಲುವ ತರ ನಮ್ಮನ್ನ ಸೃಷ್ಟಿ ಮಾಡಿದ್ದಾನೆ. ಅದಕ್ಕೆ ನಮ್ಮಲ್ಲಿ ಪ್ರೀತಿ, ಕರುಣೆಯಂಥ ಗುಣಗಳಿವೆ, ಹಾಗಾದ್ರೆ ದೇವರಲ್ಲಿ ಯಾವೆಲ್ಲಾ ಗುಣಗಳಿವೆ?

ಕೆಲವರು ಹೀಗಂತಾರೆ: “ಸೃಷ್ಟಿ ಬಗ್ಗೆ ಬೈಬಲ್‌ ಹೇಳೋದೆಲ್ಲಾ ಕಟ್ಟುಕಥೆ.”

  • ನಿಮಗೇನು ಅನಿಸುತ್ತೆ? ಯಾಕೆ?

ನಾವೇನು ಕಲಿತ್ವಿ

ಯೆಹೋವ ದೇವರು ಈ ವಿಶ್ವವನ್ನ ಮತ್ತು ಅದರಲ್ಲಿರೋ ಎಲ್ಲವನ್ನ ಸೃಷ್ಟಿ ಮಾಡಿದನು.

ನೆನಪಿದೆಯಾ

  • ಈ ವಿಶ್ವ ಹೇಗೆ ಬಂತು ಅಂತ ಬೈಬಲ್‌ ಹೇಳುತ್ತೆ?

  • ದೇವರು ಒಂದು ಚಿಕ್ಕ ಜೀವಿಯನ್ನ ಸೃಷ್ಟಿ ಮಾಡಿ ಬೇರೆಲ್ಲವನ್ನ ಅದರಿಂದ ವಿಕಾಸವಾಗುವಂತೆ ಬಿಟ್ಟನಾ? ಅಥವಾ ತಾನೇ ಎಲ್ಲಾ ಜೀವಿಗಳನ್ನ ಸೃಷ್ಟಿ ಮಾಡಿದನಾ?

  • ಬೇರೆಲ್ಲಾ ಜೀವಿಗಳಿಗಿಂತ ಮನುಷ್ಯರು ಯಾಕೆ ಶ್ರೇಷ್ಠರು?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ಪ್ರಕೃತಿಯಲ್ಲಿ ಇರೋ ಸುಂದರ ಸೃಷ್ಟಿಗಳನ್ನ ನೋಡಿ.

“ಪ್ರಕೃತಿ ಏನನ್ನು ಕಲಿಸುತ್ತದೆ?” (ಎಚ್ಚರ!, ಅಕ್ಟೋಬರ್‌ 2006)

ಒಬ್ಬ ತಂದೆ ತನ್ನ ಪುಟ್ಟ ಮಗನಿಗೆ ಸೃಷ್ಟಿಯ ಬಗ್ಗೆ ಹೇಗೆ ಕಲಿಸ್ತಾನೆ ಅಂತ ನೋಡಿ.

“ಯೆಹೋವನು ಎಲ್ಲವನ್ನೂ ಸೃಷ್ಟಿಸಿದನು” (2:37)

ವಿಕಾಸವಾದವನ್ನ ಬೈಬಲ್‌ ಒಪ್ಪುತ್ತಾ ಅನ್ನೋದರ ಬಗ್ಗೆ ತಿಳಿಯಿರಿ.

“ದೇವರು ವಿಕಾಸದ ಮೂಲಕ ಎಲ್ಲಾ ಜೀವಿಗಳನ್ನ ಸೃಷ್ಟಿ ಮಾಡಿದ್ನಾ?” (jw.org ಲೇಖನ)

ಪಳೆಯುಳಿಕೆ ದಾಖಲೆ ಮತ್ತು ವೈಜ್ಞಾನಿಕ ಪ್ರಯೋಗಗಳು ಜೀವ ಸೃಷ್ಟಿ ಆಯ್ತು ಅಂತ ತೋರಿಸಿ ಕೊಡುತ್ತಾ ಅಥವಾ ತನ್ನಿಂದ ತಾನೇ ಬಂತು ಅಂತ ತೋರಿಸಿ ಕೊಡುತ್ತಾ ಅನ್ನೋದನ್ನ ತಿಳಿದುಕೊಳ್ಳಿ.

ಜೀವದ ಆರಂಭ: ಐದು ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ (ಕಿರುಹೊತ್ತಗೆ)

a ಆ ಉದ್ದೇಶದ ಬಗ್ಗೆ 25ನೇ ಪಾಠದಲ್ಲಿ ನೋಡಲಿದ್ದೇವೆ.

b ಒಂದು ಗುಂಪಿಗೆ ಸೇರಿದ ಎಲ್ಲಾ ರೀತಿಯ ಪ್ರಾಣಿಗಳನ್ನ ಸೂಚಿಸೋಕೆ ಬೈಬಲಿನಲ್ಲಿ “ಜಾತಿ” ಅನ್ನೋ ಪದವನ್ನ ಉಪಯೋಗಿಸಲಾಗಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ