ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lff ಪಾಠ 49
  • ಸುಖ ಸಂಸಾರ ಸಾಧ್ಯ!—ಭಾಗ 1

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸುಖ ಸಂಸಾರ ಸಾಧ್ಯ!—ಭಾಗ 1
  • ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಹೆಚ್ಚನ್ನ ತಿಳಿಯೋಣ
  • ನಾವೇನು ಕಲಿತ್ವಿ
  • ಇದನ್ನೂ ನೋಡಿ
  • ಚಿರಸ್ಥಾಯಿಯಾದ ವಿವಾಹಕ್ಕೆ ಎರಡು ಕೀಲಿ ಕೈಗಳು
    ಕುಟುಂಬ ಸಂತೋಷದ ರಹಸ್ಯ
  • ದೇವರು ಕೂಡಿಸಿದ್ದನ್ನು ಅಗಲಿಸಬೇಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ವಿವಾಹಿತ ದಂಪತಿಗಳಿಗಾಗಿ ವಿವೇಕಭರಿತ ಮಾರ್ಗದರ್ಶನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಮದುವೆಯ ಬಗ್ಗೆ ಬೈಬಲ್‌ ಏನು ಹೇಳುತ್ತೆ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
ಇನ್ನಷ್ಟು
ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
lff ಪಾಠ 49
ಪಾಠ 49. ಯುವದಂಪತಿ ವೃದ್ಧರಾಗಿರುವ ಇನ್ನೊಂದು ದಂಪತಿಯನ್ನ ಸಂತೋಷದಿಂದ ನೋಡುತ್ತಿದ್ದಾರೆ.

ಪಾಠ 49

ಸುಖ ಸಂಸಾರ ಸಾಧ್ಯ!—ಭಾಗ 1

ಮುದ್ರಿತ ಸಂಚಿಕೆ
ಮುದ್ರಿತ ಸಂಚಿಕೆ
ಮುದ್ರಿತ ಸಂಚಿಕೆ

ಹೊಸದಾಗಿ ಮದುವೆಯಾದ ದಂಪತಿಗಳು ತಮ್ಮ ಮದುವೆ ದಿನದಂದು ಹೇಗೆ ಖುಷಿಯಾಗಿ ಇದ್ದರೋ ಹಾಗೆನೇ ಜೀವನ ಪೂರ್ತಿ ಖುಷಿಯಾಗಿ ಇರಬೇಕು ಅಂತ ಆಸೆಪಡುತ್ತಾರೆ. ಆದರೆ ಅದು ಸಾಧ್ಯನಾ? ಖಂಡಿತ ಸಾಧ್ಯ. ಬೈಬಲಿನಲ್ಲಿರುವ ನೀತಿನಿಯಮಗಳನ್ನ ಪಾಲಿಸುತ್ತಿರುವ ಕ್ರೈಸ್ತ ದಂಪತಿಗಳು ಅನೇಕ ವರ್ಷಗಳಿಂದ ಖುಷಿಯಾದ ಜೀವನ ನಡೆಸುತ್ತಿದ್ದಾರೆ.

1. ಗಂಡಂದಿರಿಗೆ ಬೈಬಲ್‌ ಯಾವ ಸಲಹೆ ಕೊಡುತ್ತೆ?

ಯೆಹೋವ ದೇವರು ಗಂಡನನ್ನ ಕುಟುಂಬದ ಯಜಮಾನನಾಗಿ ನೇಮಿಸಿದ್ದಾನೆ. (ಎಫೆಸ 5:23 ಓದಿ.) ಗಂಡ ಕುಟುಂಬಕ್ಕೆ ಪ್ರಯೋಜನವಾಗುವ ತೀರ್ಮಾನಗಳನ್ನ ತೆಗೆದುಕೊಳ್ಳಬೇಕು ಅಂತ ದೇವರು ಬಯಸುತ್ತಾನೆ. ಬೈಬಲ್‌ ಗಂಡಂದಿರಿಗೆ ಹೀಗೆ ಹೇಳುತ್ತೆ: “ನೀವು ನಿಮ್ಮ ಹೆಂಡತಿಯರನ್ನ ಪ್ರೀತಿಸ್ತಾ ಇರಿ.” (ಎಫೆಸ 5:25) ಈ ಮಾತಿನ ಅರ್ಥವೇನು? ಗಂಡ ತನ್ನ ಹೆಂಡತಿಯನ್ನ ಪ್ರೀತಿಯಿಂದ ನೋಡಿಕೊಳ್ಳಬೇಕು. ಬೇರೆಯವರ ಮುಂದೆ ಇರಲಿ, ಅವರಿಬ್ಬರೇ ಇರಲಿ ಒಬ್ಬ ಪ್ರೀತಿಯ ಗಂಡ ತನ್ನ ಹೆಂಡತಿ ಜೊತೆ ಚೆನ್ನಾಗಿ ನಡೆದುಕೊಳ್ಳುತ್ತಾನೆ. ಅವನು ಅವಳ ಅಗತ್ಯಗಳನ್ನ ಪೂರೈಸುತ್ತಾನೆ, ಸಂರಕ್ಷಿಸುತ್ತಾನೆ ಮತ್ತು ಖುಷಿಯಾಗಿ ಇರುವಂತೆ ನೋಡಿಕೊಳ್ಳುತ್ತಾನೆ. (1 ತಿಮೊತಿ 5:8) ತುಂಬ ಮುಖ್ಯವಾಗಿ ಯೆಹೋವ ದೇವರ ಜೊತೆ ಆಪ್ತ ಸಂಬಂಧವನ್ನ ಬೆಳೆಸಿಕೊಳ್ಳೋಕೆ ಅವಳಿಗೆ ಸಹಾಯ ಮಾಡುತ್ತಾನೆ. (ಮತ್ತಾಯ 4:4) ಉದಾಹರಣೆಗೆ, ಅವಳ ಜೊತೆ ಪ್ರಾರ್ಥನೆ ಮಾಡುತ್ತಾನೆ, ಬೈಬಲ್‌ ಓದುತ್ತಾನೆ. ಒಬ್ಬ ಗಂಡ ತನ್ನ ಹೆಂಡತಿ ಜೊತೆ ಪ್ರೀತಿಯಿಂದ ನಡೆದುಕೊಳ್ಳುವಾಗ ಯೆಹೋವನ ಜೊತೆ ಅವನಿಗಿರುವ ಸಂಬಂಧ ಇನ್ನೂ ಬಲವಾಗುತ್ತೆ.—1 ಪೇತ್ರ 3:7 ಓದಿ.

2. ಹೆಂಡತಿಯರಿಗೆ ಬೈಬಲ್‌ ಯಾವ ಸಲಹೆಯನ್ನ ಕೊಡುತ್ತೆ?

“ಹೆಂಡತಿ ತನ್ನ ಗಂಡನಿಗೆ ಆಳವಾದ ಗೌರವ ಕೊಡಬೇಕು” ಅಂತ ಬೈಬಲ್‌ ಹೇಳುತ್ತೆ. (ಎಫೆಸ 5:33) ಇದನ್ನ ಮಾಡಕ್ಕೆ ಯಾವುದು ಸಹಾಯ ಮಾಡುತ್ತೆ? ಗಂಡ ತನ್ನನ್ನ ಮತ್ತು ಮಕ್ಕಳನ್ನ ನೋಡಿಕೊಳ್ಳೋಕೆ ಏನೆಲ್ಲಾ ಮಾಡುತ್ತಿದ್ದಾನೆ, ಅವನಲ್ಲಿ ಯಾವೆಲ್ಲಾ ಒಳ್ಳೇ ಗುಣಗಳಿವೆ ಅಂತ ಯೋಚಿಸಬೇಕು. ಗಂಡ ಸತ್ಯದಲ್ಲಿ ಇರಲಿ, ಇಲ್ಲದಿರಲಿ ಅವನು ತೆಗೆದುಕೊಳ್ಳುವ ನಿರ್ಣಯಗಳನ್ನ ಬೆಂಬಲಿಸುವ ಮೂಲಕ ಮತ್ತು ಗಂಡನ ಜೊತೆ ಪ್ರೀತಿಯಿಂದ ಮಾತಾಡೋ ಮೂಲಕ ಗೌರವ ತೋರಿಸಬಹುದು. ಅಷ್ಟೇ ಅಲ್ಲ ಬೇರೆಯವರ ಮುಂದೆ ಗಂಡನ ಬಗ್ಗೆ ಒಳ್ಳೇ ರೀತಿಯಲ್ಲಿ ಮಾತಾಡುವ ಮೂಲಕನೂ ಗೌರವ ತೋರಿಸಬಹುದು.

3. ಗಂಡ ಹೆಂಡತಿ ಹೇಗೆ ತಮ್ಮ ಕುಟುಂಬ ಜೀವನವನ್ನ ಬಲಪಡಿಸಬಹುದು?

ಗಂಡಹೆಂಡತಿ “ಒಂದೇ ದೇಹ ಆಗ್ತಾರೆ” ಅಂತ ಬೈಬಲ್‌ ಹೇಳುತ್ತೆ. (ಮತ್ತಾಯ 19:5) ಅವರ ಸಂಸಾರದಲ್ಲಿ ಯಾವುದೇ ರೀತಿಯ ಬಿರುಕು ಬರೋಕೆ ಬಿಡಬಾರದು ಅನ್ನೋದು ಈ ಮಾತಿನ ಅರ್ಥ. ಅವರು ಒಬ್ಬರಿಗೊಬ್ಬರು ಆಪ್ತರಾಗೋಕೆ ಸಮಯ ಕೊಡಬೇಕು ಮತ್ತು ತಮ್ಮ ಭಾವನೆಗಳನ್ನ, ಅನಿಸಿಕೆಗಳನ್ನ ಮನಬಿಚ್ಚಿ ಹೇಳಿಕೊಳ್ಳಬೇಕು. ಯೆಹೋವ ದೇವರನ್ನ ಬಿಟ್ಟರೆ ಅವರ ಜೀವನದಲ್ಲಿ ಯಾರಿಗೂ ಅಥವಾ ಯಾವುದಕ್ಕೂ ಸಂಗಾತಿಗಿಂತ ಹೆಚ್ಚಿನ ಪ್ರಾಮುಖ್ಯತೆ ಕೊಡಬಾರದು. ಅಷ್ಟೇ ಅಲ್ಲ, ಬೇರೆ ಯಾರ ಜೊತೆನೂ ಸಂಗಾತಿಗಿಂತ ಹೆಚ್ಚು ಆಪ್ತತೆ ಬೆಳೆಸಿಕೊಳ್ಳದಂತೆ ಎಚ್ಚರವಹಿಸಬೇಕು.

ಹೆಚ್ಚನ್ನ ತಿಳಿಯೋಣ

ನಿಮ್ಮ ಮದುವೆ ಜೀವನವನ್ನ ಬಲಪಡಿಸೋಕೆ ಬೈಬಲಿನ ಯಾವ ತತ್ವಗಳು ಸಹಾಯ ಮಾಡುತ್ತೆ ಅಂತ ನೋಡಿ.

ದಂಪತಿ ತಮ್ಮ ಕೈಯನ್ನ ಹಿಡಿದುಕೊಂಡು ಒಬ್ಬರಿಗೊಬ್ಬರು ನೋಡುತ್ತಾ ಇದ್ದಾರೆ. ಕೊಲಾಜ್‌: ಸುಖ ಸಂಸಾರವನ್ನ ನಡೆಸುವ ದಂಪತಿಗಳು ಅನೇಕ ವಿಧಗಳಲ್ಲಿ ತಮ್ಮ ವಿವಾಹ ಜೀವನವನ್ನ ಬಲಪಡಿಸುತ್ತಾರೆ. ಅವರಿರುವ ಬೇರೆಬೇರೆ ಚಿತ್ರಗಳನ್ನ ಈ ಪಾಠದಲ್ಲಿ ನೋಡಬಹುದು.

4. ಗಂಡಂದಿರೇ ನಿಮ್ಮ ಹೆಂಡತಿಯರನ್ನ ಪ್ರೀತಿಸಿ, ಚೆನ್ನಾಗಿ ನೋಡಿಕೊಳ್ಳಿ

“ಗಂಡಂದಿರು ತಮ್ಮ ದೇಹವನ್ನ ಪ್ರೀತಿಸೋ ಹಾಗೆ ತಮ್ಮ ಹೆಂಡತಿಯರನ್ನ ಪ್ರೀತಿಸಬೇಕು” ಅಂತ ಬೈಬಲ್‌ ಹೇಳುತ್ತೆ. (ಎಫೆಸ 5:28, 29) ಇದರ ಅರ್ಥ ಏನು? ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.

ವಿಡಿಯೋ: ಗಂಡಂದಿರೇ, ನಿಮ್ಮ ಹೆಂಡತಿಯನ್ನು ನಿಮ್ಮ ಹಾಗೇ ಪ್ರೀತಿಸಿ (9:53)

  • ಗಂಡ ತನ್ನ ಹೆಂಡತಿಯನ್ನ ಪ್ರೀತಿಸಿ ಚೆನ್ನಾಗಿ ನೋಡಿಕೊಳ್ಳುತ್ತಾನೆ ಅಂತ ಹೇಗೆಲ್ಲಾ ತೋರಿಸಬಹುದು?

ಕೊಲೊಸ್ಸೆ 3:12 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಈ ವಚನದಲ್ಲಿರುವ ಗುಣಗಳನ್ನ ಗಂಡನು ಹೇಗೆಲ್ಲಾ ತೋರಿಸಬಹುದು?

ಹುಷಾರಿಲ್ಲದೆ ಹಾಸಿಗೆಯಲ್ಲಿ ಮಲಗಿರುವ ತನ್ನ ಹೆಂಡತಿಗೆ ಗಂಡ ಚಹಾ ತಂದು ಕೊಡುತ್ತಿದ್ದಾನೆ. ಗಂಡ ಹೆಂಡತಿ ಒಟ್ಟಿಗೆ ಪಾತ್ರೆ ತೊಳೆದು, ಒರೆಸುತ್ತಿದ್ದಾರೆ. ಗಂಡ ಹೆಂಡತಿ ಒಟ್ಟಿಗೆ ಬೈಬಲನ್ನ ಓದುತ್ತಿದ್ದಾರೆ. ಗಂಡ ಹೆಂಡತಿ ಇಬ್ಬರೂ ಸೈಕಲ್‌ ಓಡಿಸ್ತಿದ್ದಾರೆ. ಗಂಡ ಹೆಂಡತಿ ಒಂದು ಸಮಸ್ಯೆಯ ಬಗ್ಗೆ ಒಟ್ಟಿಗೆ ಕೂತು ಮಾತಾಡುತ್ತಿದ್ದಾರೆ.

5. ಹೆಂಡತಿಯರೇ ನಿಮ್ಮ ಗಂಡಂದಿರನ್ನ ಪ್ರೀತಿಸಿ, ಗೌರವಿಸಿ

ನಿಮ್ಮ ಗಂಡ ಸತ್ಯದಲ್ಲಿರಲಿ ಇಲ್ಲದಿರಲಿ ಗೌರವ ಕೊಡಬೇಕು ಅಂತ ಬೈಬಲ್‌ ಹೇಳುತ್ತೆ. 1 ಪೇತ್ರ 3:1, 2 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ನಿಮ್ಮ ಗಂಡ ಸತ್ಯದಲ್ಲಿ ಇಲ್ಲದಿದ್ರೆ, ಅವರು ಯೆಹೋವ ದೇವರ ಆರಾಧಕನಾಗಬೇಕು ಅಂತ ನಿಮ್ಮ ಆಸೆ. ಅದಕ್ಕಾಗಿ ನೀವು ಏನು ಮಾಡಿದರೆ ಚೆನ್ನಾಗಿರುತ್ತೆ: ಯಾವಾಗ್ಲೂ ಸತ್ಯದ ಬಗ್ಗೆ ಹೇಳುತ್ತಾ ಇರಬೇಕಾ ಅಥವಾ ಪ್ರೀತಿ ಗೌರವದಿಂದ ನಡೆದುಕೊಳ್ಳಬೇಕಾ? ಯಾಕೆ ಹಾಗೆ ಹೇಳುತ್ತೀರಾ?

ಗಂಡ ಹೆಂಡತಿ ಒಟ್ಟಿಗೆ ಮನಬಿಚ್ಚಿ ಮಾತಾಡಿದ್ರೆ ಒಳ್ಳೇ ತೀರ್ಮಾನಗಳನ್ನ ಮಾಡಕ್ಕೆ ಆಗುತ್ತೆ. ಆದ್ರೆ ಕೆಲವೊಮ್ಮೆ ಗಂಡನ ಯೋಚನೆಗಳು ಹೆಂಡತಿಗೆ ಇಷ್ಟವಾಗದೇ ಇರಬಹುದು. ಅಂಥ ಸಮಯದಲ್ಲಿ ಏನು ಮಾಡಬೇಕು? ತನ್ನ ಅಭಿಪ್ರಾಯದ ಬಗ್ಗೆ ಶಾಂತಿಯಿಂದ, ಗೌರವದಿಂದ ಗಂಡನ ಹತ್ತಿರ ಹೇಳಿಕೊಳ್ಳಬೇಕು. ಆದರೆ ಕೊನೆಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನ ಯೆಹೋವ ದೇವರು ಗಂಡನಿಗೆ ಕೊಟ್ಟಿದ್ದಾನೆ ಅಂತ ಹೆಂಡತಿ ಮರೆಯಬಾರದು. ಗಂಡನ ತೀರ್ಮಾನವನ್ನ ಬೆಂಬಲಿಸಲು ತನ್ನಿಂದಾದ ಎಲ್ಲವನ್ನ ಹೆಂಡತಿ ಮಾಡಬೇಕು. ಹೀಗೆ ಮಾಡುವಾಗ ಸಂಸಾರ ಆನಂದ ಸಾಗರವಾಗುತ್ತೆ. 1 ಪೇತ್ರ 3:3-5 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಹೆಂಡತಿ ಗಂಡನಿಗೆ ಗೌರವ ತೋರಿಸುವಾಗ ಯೆಹೋವ ದೇವರಿಗೆ ಹೇಗನಿಸುತ್ತೆ?

6. ಸಂಸಾರದಲ್ಲಿ ಬರುವ ಸಮಸ್ಯೆಗಳನ್ನ ಸರಿಮಾಡಲು ಸಾಧ್ಯ

“ಎಲ್ಲರ ಮನೆ ದೋಸೆ ತೂತು” ಅನ್ನೋ ಹಾಗೆ ಮದುವೆ ಜೀವನದಲ್ಲಿ ಸಮಸ್ಯೆಗಳು ಇದ್ದಿದ್ದೇ. ಹಾಗಿದ್ರೂ ಆ ಸಮಸ್ಯೆಗಳನ್ನ ಬಗೆಹರಿಸೋಕೆ ಇಬ್ಬರೂ ಒಟ್ಟಿಗೆ ಪ್ರಯತ್ನ ಹಾಕಬೇಕು. ವಿಡಿಯೋ ನೋಡಿ, ನಂತರ ಪ್ರಶ್ನೆಗಳನ್ನ ಚರ್ಚಿಸಿ.

ವಿಡಿಯೋ: ಮದುವೆಯ ಬಾಂಧವ್ಯವನ್ನು ಬಲಪಡಿಸಿ (5:44)

  • ಈ ವಿಡಿಯೋದಲ್ಲಿರುವ ಗಂಡ ಹೆಂಡತಿ ಮಧ್ಯೆ ಏನೋ ಸಮಸ್ಯೆ ಇತ್ತು ಅಂತ ಹೇಗೆ ಹೇಳಬಹುದು?

  • ಮದುವೆ ಜೀವನವನ್ನ ಬಲಪಡಿಸೋಕೆ ಅವರಿಬ್ಬರೂ ಏನು ಮಾಡಿದ್ರು?

1 ಕೊರಿಂಥ 10:24 ಮತ್ತು ಕೊಲೊಸ್ಸೆ 3:13 ಓದಿ, ಪ್ರತಿ ವಚನವನ್ನ ಓದಿದ ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಮದುವೆ ಜೀವನವನ್ನ ಬಲಪಡಿಸಲು ಈ ವಚನ ಹೇಗೆ ಸಹಾಯ ಮಾಡುತ್ತೆ?

ನಾವು ಒಬ್ಬರಿಗೊಬ್ಬರು ಗೌರವ ತೋರಿಸಬೇಕು ಅಂತ ಬೈಬಲ್‌ ಹೇಳುತ್ತೆ. ಅದರಲ್ಲಿ ನಾವು ಪ್ರೀತಿ ಮತ್ತು ಮರ್ಯಾದೆಯಿಂದ ನಡೆದುಕೊಳ್ಳೋದು ಸೇರಿದೆ. ರೋಮನ್ನರಿಗೆ 12:10 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ನನ್ನ ಗಂಡನೇ ಅಥವಾ ಹೆಂಡತಿನೇ ಮೊದಲು ಗೌರವ ತೋರಿಸಲಿ ಅಂತ ಕಾಯುತ್ತಾ ಇರೋದು ಸರಿನಾ? ಯಾಕೆ ಹಾಗೆ ಹೇಳುತ್ತೀರಾ?

ಕೆಲವರು ಹೀಗಂತಾರೆ: “ನಮ್ಮ ಮದುವೆ ಜೀವನ ಮೊದಲಿನಷ್ಟು ಚೆನ್ನಾಗಿಲ್ಲ.”

  • ಅಂಥವರಿಗೆ ಬೈಬಲ್‌ ಸಹಾಯ ಮಾಡುತ್ತೆ ಅಂತ ಹೇಗೆ ಹೇಳ್ತೀರಾ?

ನಾವೇನು ಕಲಿತ್ವಿ

ಗಂಡ ಹೆಂಡತಿ ಬೈಬಲಿನ ತತ್ವಗಳನ್ನ ಪಾಲಿಸುತ್ತಾ, ಒಬ್ಬರನ್ನೊಬ್ಬರು ಪ್ರೀತಿಸುತ್ತಾ, ಗೌರವಿಸುತ್ತಾ ಇದ್ದರೆ ಜೀವನ ಖುಷಿಖುಷಿಯಾಗಿರುತ್ತೆ.

ನೆನಪಿದೆಯಾ

  • ಸಂಸಾರ ಆನಂದ ಸಾಗರವಾಗೋಕೆ ಗಂಡ ಏನು ಮಾಡಬೇಕು?

  • ಸಂಸಾರ ಆನಂದ ಸಾಗರವಾಗೋಕೆ ಹೆಂಡತಿ ಏನು ಮಾಡಬೇಕು?

  • ನಿಮಗೆ ಮದುವೆಯಾಗಿದ್ದರೆ, ನಿಮ್ಮ ಮದುವೆ ಜೀವನವನ್ನ ಬಲಪಡಿಸೋಕೆ ಬೈಬಲಿನಲ್ಲಿರುವ ಯಾವ ಸಲಹೆಗಳು ಸಹಾಯ ಮಾಡುತ್ತೆ?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ಕುಟುಂಬ ಜೀವನದಲ್ಲಿ ಖುಷಿಖುಷಿಯಾಗಿರಲು ಸಹಾಯ ಮಾಡುವ ಕೆಲವು ಸಲಹೆಗಳನ್ನ ನೋಡಿ.

ಸುಖೀ ಸಂಸಾರ ಸಾಧ್ಯ! (ಕಿರುಹೊತ್ತಗೆ)

ಮದುವೆ ಜೀವನದಲ್ಲಿ ದೇವರ ಮಾರ್ಗದರ್ಶನಗಳನ್ನ ಪಾಲಿಸೋದ್ರಿಂದ ಸಿಗುವ ಆಶೀರ್ವಾದಗಳ ಬಗ್ಗೆ ತಿಳಿಯಲು ಈ ಸಂಗೀತ ವಿಡಿಯೋ ನೋಡಿ.

ಪ್ರೇಮದ ಸೋನೆ ಸುರಿಸಿದ್ದು ನೀನೆ (4:26)

ಗಂಡನಿಗೆ ಅಧೀನತೆ ತೋರಿಸಬೇಕು ಅನ್ನೋ ಮಾತಿನ ಅರ್ಥವೇನು ಅಂತ ಕಲಿಯಿರಿ.

“ಸ್ತ್ರೀಯರೇ, ನೀವು ತಲೆತನಕ್ಕೆ ಏಕೆ ಅಧೀನರಾಗಬೇಕು?” (ಕಾವಲಿನಬುರುಜು, ಮೇ 15, 2010)

ಒಂದು ದಂಪತಿ ವಿಚ್ಛೇದನ ಕೊಡುವಷ್ಟು ಗಂಭೀರ ಸಮಸ್ಯೆಗಳು ಬಂದ್ರೂ ಅದನ್ನ ಹೇಗೆ ಜಯಿಸಿದ್ರು ಅಂತ ನೋಡಿ.

ನಾವು ಮತ್ತೆ ಒಂದಾಗೋಕೆ ದೇವರೇ ಕಾರಣ (5:14)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ