ದೇವರ ವಾಕ್ಯದ ಸತ್ಯತೆಯ ರುಜುವಾತುಗಳು
ಸತ್ಯವೂ ಅಥವಾ ಸುಳ್ಳೋ?—ಶತಮಾನಗಳಿಂದ ಯಾವ ಮಾರ್ಪಾಟವೂ ಇಲ್ಲದೆ ಬೈಬಲು ಕೈಸೇರಿರುತ್ತದೆ.
ಸತ್ಯವೂ ಅಥವಾ ಸುಳ್ಳೋ?—ಬೈಬಲ್ ಹಸ್ತ ಪ್ರತಿಗಳಲ್ಲಿರುವ ಸಾವಿರಾರು ವ್ಯತ್ಯಾಸಗಳು ಅದು ದೇವರ ವಾಕ್ಯವೆಂಬ ವಾದವನ್ನು ನಿರ್ಬಲಗೊಳಿಸುತ್ತದೆ.
ಆ ಪ್ರಶ್ನೆಗಳನ್ನು ನೀವು ಉತ್ತರಿಸುವ ಮೊದಲು, ಅಯರ್ಲೆಂಡ್ನ ಡಬ್ಲಿನ್ನಲ್ಲಿರುವ ಚೆಸ್ಟರ್ ಬ್ಯೇಟಿ ಲೈಬ್ರೆರಿಯಲ್ಲಿ ನಡೆದ “ದ ವರ್ಡ್ ಆಫ್ ಗಾಡ್” ಪ್ರದರ್ಶನದಲ್ಲಿ ನೀಡಲಾದ, ಕೆಲವು ಸಮಾಚಾರವನ್ನು ಗಮನಿಸಿರಿ.
ಹರಿದು ಚಿಂದಿಯಾದ ಪಪೈರಸ್ ಪುಟಗಳು ಮುಪ್ಪಿನಿಂದಾಗಿ ನಶಿಸಿಹೋಗುತ್ತಾ ಇವೆ. ಆದರೂ, ಲೈಬ್ರೆರಿಯಲ್ಲಿರುವ ಅತ್ಯಂತ ಅಮೂಲ್ಯವಾದ ಹಸ್ತ ಪ್ರತಿಗಳಲ್ಲಿ ಚೆಸ್ಟರ್ ಬ್ಯೇಟಿ ಪಪೈರಿ ಒಂದಾಗಿದೆ. ಅವು ಇಜಿಪ್ತಿನ ಕಾಪ್ಟರ ದಫನ ಭೂಮಿಯಿಂದ 1930 ರ ಸುಮಾರಿಗೆ ಅಗೆದು ತೆಗೆದವುಗಳಾಗಿವೆ. “[ಅದೊಂದು] ಹೊಸ ಶೋಧ” ಎಂದರು ಸರ್ ಫ್ರೆಡ್ರಿಕ್ ಕೆನ್ಯನ್, “ಕೋಡೆಕ್ಸ್ ಸೈನೈಟಿಕಸ್ ಶೋಧ ಮಾತ್ರವೇ ಅದರ ಪ್ರತಿದ್ವಂದಿ.”
ಹಸ್ತಾಕ್ಷರ ರೂಪದಲ್ಲಿರುವ ಈ ಕೈಬರಹದ ಪಪೈರಸ್ ಪುಟಗಳು ನಮ್ಮ ಸಾಮಾನ್ಯ ಶಕದ ಎರಡನೇ, ಮೂರನೇ, ಮತ್ತು ನಾಲ್ಕನೇ ಶತಮಾನದಲ್ಲಿ ನಕಲು ಮಾಡಲ್ಪಟ್ಟವು. ಅವುಗಳಲ್ಲಿ “ಕೆಲವು,” ಸರ್ ವಿಲ್ಪಿರ್ಡ್ ಲಾಕ್ವುಡ್, ಲೈಬ್ರೇರಿಯನ್, ಅಂದದ್ದು, “ಅದರ ಮೂಲ ಬರೆಯೋಣದ ಒಂದು ನೂರು ವರ್ಷದೊಳಗಿನ ಅವಧಿಯಲ್ಲಿ ನಕಲು ಮಾಡಲ್ಪಟ್ಟಿರಬೇಕು.” (ಒತ್ತು ನಮ್ಮದು.) ಒಂದು ಕೋಡೆಕ್ಸ್ನಲ್ಲಿ ನಾಲ್ಕು ಸುವಾರ್ತೆಗಳಿವೆ ಮತ್ತು ಅಪೊಸ್ತಲರ ಕೃತ್ಯ ಪುಸ್ತಕವಿದೆ. ಇನ್ನೊಂದರಲ್ಲಿ, ಅಪೊಸ್ತಲ ಪೌಲನ ಹೆಚ್ಚಿನ ಪತ್ರಿಕೆಗಳು, ಇಬ್ರಿಯರಿಗೆ ಆತನು ಬರೆದ ಪತ್ರವು ಕೂಡಾ, ಸೇರಿರುತ್ತದೆ.
ಹಸ್ತಪ್ರತಿಗಳನ್ನು ಈ ರೀತಿ ನಕಲು ಮಾಡುವುದು ತ್ರಾಸದಾಯಕ ಮತ್ತು ಶ್ರಮದ ಕೆಲಸ, ತಪ್ಪಿಗೆ ಎಡೆಗೊಡುವಂಥಾದ್ದು. ನಕಲುಗಾರನು ಎಷ್ಟೇ ಜಾಗ್ರತೆ ಮಾಡಲಿ, ಒಂದು ಗೀಟನ್ನು ಕಳಕೊಳ್ಳುವುದು ಯಾ ಅಕ್ಷರವನ್ನು ತಪ್ಪಾಗಿ ಓದುವುದು ಸುಲಭವಾಗಿತ್ತು. ಕೆಲವು ಸಾರಿ ನಕಲುಗಾರನು ಮೂಲಬರಹದ ನಿಶ್ಚಿತ ಶಬ್ದಗಳನ್ನು ಬರೆಯುವದಕ್ಕಿಂತ ಅದರ ಸಾರಾಂಶವನ್ನು ಮತ್ತು ಅರ್ಥವನ್ನು ಪಡೆಯುವದರಲ್ಲಿ ಹೆಚ್ಚು ಆಸಕ್ತನಿರುತ್ತಾನೆ. ನಕಲುಗಳನ್ನು ಪುನಃ ನಕಲು ಮಾಡಿದಾಗ ತಪ್ಪುಗಳು ನಿರಂತರವಾಗಿ ಉಳಿದವು. ಮೂಲಗ್ರಂಥದ ಪಂಡಿತರು ತದ್ರೀತಿಯ ವೈವಿಧ್ಯತೆಗಳುಳ್ಳ ಹಸ್ತ ಪ್ರತಿಗಳನ್ನು ಒಂದೇ ಬುಡಗಟ್ಟಿನವುಗಳಾಗಿ ವರ್ಗೀಕರಿಸಿದರು. ಅಸ್ತಿತ್ವದಲ್ಲಿರುವ ಗ್ರೀಕ್ ಬೈಬಲಿನ ಅತ್ಯಂತ ಹಳೆಯ ಹಾಗೂ ಸತ್ವಭರಿತ ಹಸ್ತ ಪ್ರತಿಯಾದ ಚೆಸ್ಟರ್ ಬ್ಯೇಟಿ ಪಪೈರಿಯು ಪಂಡಿತರಿಗೆ ವಿಷಯಗಳ ಮೇಲೆ ಅನಿರೀಕ್ಷಿತವಾಗಿ ಒಂದು ಹೊಸ ಓಲನ್ನು ಕೊಟ್ಟಿತು, ಹೇಗಂದರೆ, ಅವು ಸ್ಥಾಪಿತ ಬುಡಗಟ್ಟಿನ ಯಾವುದೇ ವರ್ಗಕ್ಕೆ ಹೊಂದಿಕೆಯಾಗಿರಲಿಲ್ಲ.
ಯೇಸುವಿನ ಸಮಯಕ್ಕೆ ಮುಂಚೆ ಮತ್ತು ವಿಶೇಷವಾಗಿ ಯೆರೂಸಲೇಮಿನ ನಾಶನದ (ಸಾ.ಶ.ಪೂ. 607) ಮತ್ತು ತದನಂತರ ಯೆಹೂದ್ಯರ ಚದರಿಸುವಿಕೆಯನ್ನು ಹಿಂಬಾಲಿಸಿ, ಪವಿತ್ರ ಹಿಬ್ರೂ ಶಾಸ್ತ್ರದ ಅನೇಕ ಹಸ್ತ ಬರಹದ ಪ್ರತಿಗಳು ಮಾಡಲ್ಪಟ್ಟವು. ಸಾ.ಶ. 100 ರ ಸುಮಾರಿಗೆ ಯೆಹೂದಿ ಅಧಿಕಾರಿಗಳು ಇಂತಹ ಪ್ರತಿಗಳನ್ನು ಸಂಪ್ರದಾಯವಾದಿ ಯೆಹೂದ್ಯರಿಂದ ಹಿಬ್ರೂ ಶಾಸ್ತ್ರವಚನವು ಸ್ವೀಕರಿಸಲ್ಪಡುವಂತೆ, ಸಾಕ್ಷ್ಯವಾಗಿ ಉಪಯೋಗಿಸಿದ್ದರು.
ವಚನದ ಸರಿಯಾದ ನಕಲು ಮಾಡಲ್ಪಡುವಂತೆ ಅವರು ನಿಶ್ಚಿತ ನಿಯಮಗಳನ್ನೂ ಮಾಡಿದ್ದರು. ಯಾವ ಸಾಮಗ್ರಿಗಳನ್ನು ಉಪಯೋಗಿಸಬೇಕು ಮತ್ತು ಅಕ್ಷರಗಳ ಆಕಾರ ಮತ್ತು ತೆರಪು, ಶಬ್ದಗಳು, ಗೆರೆಗಳು ಮತ್ತು ಅಂಕಣಗಳು ಹೇಗಿರಬೇಕೆಂದೂ ಅವರು ಸೂಚಿಸಿದ್ದರು. “ಯಾವದೇ ಶಬ್ದ ಅಥವಾ ಅಕ್ಷರ, ಯೋಡ್ [ಹಿಬ್ರೂ ಅಕ್ಷರಮಾಲೆಯ ಅತ್ಯಂತ ಚಿಕ್ಕ ಅಕ್ಷರ] ಸಹಾ ಸ್ಮರಣೆಯಿಂದ ಬರೆಯಲ್ಪಡಬಾರದು” ಎಂದರವರು. ಹೀಗೆ ನಕಲುಗಾರರು, ಬೈಬಲಿನ ಮೊದಲ ಐದು ಪುಸ್ತಕಗಳು ಮತ್ತು ಎಸ್ತೇರಳ ಪುಸ್ತಕವನ್ನು ಒಳಗೊಂಡ ತೋರಾ (ಬೋಧನೆ) ದಂತಹ ಸುರುಳಿಗಳನ್ನು ಉತ್ಪಾದಿಸಿದರು. ಅಂತಹ ಹಿಬ್ರೂ ವಚನಗಳ ಹಸ್ತ ಪ್ರತಿಗಳು, ಪ್ರದರ್ಶನೆಯ ಕ್ಯಾಟಲಾಗ್ ಅಂದಂತೆ, “ಏಕರೂಪತೆಯ ಪ್ರಭಾವಯುಕ್ತ ಮಟ್ಟವನ್ನು ಪ್ರದರ್ಶಿಸುತ್ತವೆ.”
ಹಿಬ್ರೂ ಮತ್ತು ಕ್ರೈಸ್ತ ಗ್ರೀಕ್ ಹಸ್ತ ಪ್ರತಿಗಳೊಳಗೆ ನುಸುಳಿರುವ ತಪ್ಪುಗಳು ಅದೆಷ್ಟು ಗಂಭೀರತರದ್ದು? “ಬೈಬಲ್ ಹಸ್ತ ಬರಹಗಳ ನಡುವೆ ಕಂಡುಬರುವ ವ್ಯತ್ಯಾಸಗಳು, ವಿಧರ್ಮಿ ಸಾಹಿತ್ಯದ ಹಸ್ತ ಬರಹಗಳಲ್ಲಿ ಕಂಡು ಬರುವ ವ್ಯತ್ಯಾಸಗಳಿಗೆ ತುಲನೆಯಲ್ಲಿ ಎಷ್ಟೋ ಅಲ್ಪತರದ್ದಾಗಿವೆ ಎಂದು ಒತ್ತಾಗಿ ಹೇಳಬೇಕು . . . ನಕಲುಗಾರರ ಭೃಷ್ಟತೆಯಿಂದಾಗಿ ಕ್ರೈಸ್ತ ಬೋಧನೆಯ ಯಾವುದೇ ಭಾಗವು ವಿಕಾರಗೊಂಡಿರುವುದಿಲ್ಲ” ಎಂದರು ಶ್ರೀ ಲಾಕ್ವುಡ್.—ಒತ್ತು ನಮ್ಮದು.
ಬೈಬಲಿನ ಪುಸ್ತಕಗಳು ಯೇಸುವಿನ ಸಮಯದ ಮೊದಲು ಮತ್ತು ಅನಂತರ, ಬೇರೆ ಭಾಷೆಗಳಿಗೆ ಭಾಷಾಂತರಿಸಲ್ಪಟ್ಟಿದ್ದವು. ಅಂತಹ ಹಳೇ ತರ್ಜುಮೆಗಳಲ್ಲಿ ಒಂದು ಸಮಾರ್ಯದವರ ಪೆಂಟಟ್ಯೂಕ್ ಆಗಿದೆ. ಸಮಾರ್ಯರು, ಅಶ್ಯೂರ್ಯದ ಅರಸನು ಇಸ್ರಾಯೇಲ್ಯರನ್ನು (ಸಾ.ಶ.ಪೂ. 740ರಲ್ಲಿ) ಬಂಧೀವಾಸಿಗಳಾಗಿ ಒಯ್ದ ನಂತರ ಹತ್ತುಕುಲಗಳ ಇಸ್ರಾಯೇಲ್ಯ ರಾಜ್ಯದ ಕ್ಷೇತ್ರದಲ್ಲಿ ವಾಸಿಸಿದವರು. ಅವರು ಯೆಹೂದಿ ಭಕ್ತಿಯ ಕೆಲವು ವೈಶಿಷ್ಟ್ಯಗಳನ್ನು ಪಾಲಿಸುತ್ತಿದ್ದರು ಮತ್ತು ಬೈಬಲಿನ ಮೊದಲನೆಯ ಐದು ಪುಸ್ತಕ (ಪೆಂಟಟ್ಯೂಕ್) ಗಳನ್ನು ಮಾತ್ರವೇ ಸ್ವೀಕರಿಸಿದ್ದರು. ಈ ಪುಸ್ತಕಗಳ ಸಮಾರ್ಯ ವಚನಗಳು, ಒಂದು ಪುರಾತನ ಹಿಬ್ರೂ ಲಿಪಿರೂಪದಲ್ಲಿ ಬರೆಯಲ್ಪಟ್ಟಿದ್ದು, ಹಿಬ್ರೂ ಶಾಸ್ತ್ರ ಬರಹಕ್ಕಿಂತ ಸುಮಾರು 6000 ವ್ಯತ್ಯಾಸಗಳನ್ನು ತೋರಿಸುತ್ತವೆ. ಅವುಗಳಲ್ಲಿ “ಹೆಚ್ಚಿನವು” ಕ್ಯಾಟ್ಲಾಗ್ ಅಂದದ್ದು, “ವಚನಕ್ಕೆ ಕೊಂಚವೂ ಮಹತ್ವದಲವ್ಲಾದರೂ, ಪುರಾತನ ಉಚ್ಚಾರಣೆ ಯಾ ವ್ಯಾಕರಣದ ವೈಶಿಷ್ಟ್ಯವನ್ನುಳಿಸಿಕೊಳ್ಳುವ ಅದರ ಪ್ರಯತ್ನವು ಕೂತೂಹಲಕಾರಿ.”
ಸಾ.ಶ.ಪೂ. 3ನೇ ಶತಮಾನದಲ್ಲಿ ಇಜಿಪ್ತಿನ ಅಲೆಕ್ಸಾಂಡ್ರಿಯದ ಯೆಹೂದಿ ಪಂಡಿತರು ಹಿಬ್ರೂ ಶಾಸ್ತ್ರ ಗ್ರಂಥದ ಗ್ರೀಕ್ ಸೆಪ್ತುವಜಿಂಟ್ ತರ್ಜುಮೆಯನ್ನು ಉತ್ಪಾದಿಸಿದರು, ಇದು ಲೋಕದಲ್ಲೆಲ್ಲೂ ಗ್ರೀಕ್ ಭಾಷೆಯನ್ನಾಡುವ ಯೆಹೂದ್ಯರಿಂದ ಉಪಯೋಗಿಸಲ್ಪಡತೊಡಗಿತು. ಕಾಲಾನಂತರ, ಯೆಹೂದ್ಯರು ಅದರ ಉಪಯೋಗವನ್ನು ನಿಲ್ಲಿಸಿದರು, ಆದರೆ ಅದು ಆದಿ ಕ್ರೈಸ್ತ ಸಭೆಯ ಬೈಬಲಾಗಿ ಪರಿಣಮಿಸಿತು. ಕ್ರೈಸ್ತ ಬೈಬಲ್ ಲೇಖಕರು ಪವಿತ್ರ ಹಿಬ್ರೂ ಶಾಸ್ತ್ರ ದಿಂದ ಉದ್ದರಿಸಿದಾಗ, ಸೆಪ್ತುವಜಿಂಟ್ನ್ನು ಅವರು ಉಪಯೋಗಿಸಿದ್ದರು. ಚೆಸ್ಟರ್ ಬ್ಯೇಟಿ ಪಪೈರಿಯಲ್ಲಿ ಸೆಪ್ಟುವಜಿಂಟ್ನ ದಾನಿಯೇಲ ಪುಸ್ತಕದ 13 ಪುಟಗಳನ್ನು ಒಳಗೂಡಿದೆ.
ಅನಂತರದ ಬೈಬಲಿನ ತರ್ಜುಮೆಗಳು ಲ್ಯಾಟಿನ್, ಕಾಪ್ಟಿಕ್, ಸಿರಿಯಕ್ ಮತ್ತು ಆರ್ಮೇನಿಯನ್ ನಂತಹ ಭಾಷೆಗಳಲ್ಲಿ ಉತ್ಪಾದಿಸಲ್ಪಟ್ಟವು. ಪ್ರದರ್ಶನದಲ್ಲಿ ತೋರಿಸಲ್ಪಟ್ಟ ಒಂದು ನಮೂನೆಯು, ಆರನೇ ಅಥವಾ ಏಳನೇ ಶತಮಾನದ ಕಾಪ್ಟಿಕ್ ಭಾಷೆಯ ಅಂಶಿಕ ಬೈಬಲ್ ಚರ್ಮಪತ್ರಗಳ ಮೇಲಿನ ಹಸ್ತಾಕ್ಷರವಾಗಿತ್ತು. ಇಂತಹ ತರ್ಜುಮೆಗಳು ಬೈಬಲ್ ಪಂಡಿತರಿಗೆ ಮತ್ತು ಮೂಲಗ್ರಂಥದ ಠೀಕಾಕಾರರಿಗೆ ಹೇಗೆ ಸಹಾಯವಾಗಿವೆ? ಅಂಥ ತರ್ಜುಮೆಗಳು, ಸಾಮಾನ್ಯವಾಗಿ ತರ್ಜುಮೆಗಾರರು ಉಪಯೋಗಿಸಿದ ಗ್ರೀಕ್ ಹಸ್ತ ಬರಹಗಳ ತೀರಾ ಅಕ್ಷರಾರ್ಥಕ ತರ್ಜುಮೆಗಳಾಗಿದ್ದವು. “ತರ್ಜುಮೆಗಾರನು ಕೆಲಸನಡಿಸಿದ ಗ್ರೀಕ್ ವಚನವು ಉತ್ತಮವಿದ್ದರೆ,” ಶ್ರೀ ಲಾಕ್ವುಡ್ ವಿವರಿಸಿದ್ದು, “ಗ್ರೀಕಿನ ಮೂಲ ಪದಗಳನ್ನು ಪುನಃ ಪಡೆಯುವ ಕೆಲಸದಲ್ಲಿ ತರ್ಜುಮೆಯು ಮಹತ್ವದ ಸಹಾಯವನ್ನು ಒದಗಿಸುತ್ತದೆಂಬದು ವ್ಯಕ್ತ .”
ಲೈಬ್ರೆರಿಯಲ್ಲಿ ಪ್ರದರ್ಶಿಸಲ್ಪಟ್ಟ ಒಂದು ಅತ್ಯಮೂಲ್ಯ ವಸ್ತುವು ನಾಲ್ಕನೆಯ ಶತಕದ ಸಿರಿಯನ್ ಲೇಖಕ ಎಫ್ರೇಮನು, ಟೇಟ್ಯನ್ನ ಡಯಟೆಸ್ರಾನ್ ಮೇಲೆ ಕೊಟ್ಟ ಹೇಳಿಕೆಯೇ. ಟೇಟ್ಯನ್ ನಾಲ್ಕು ಸುವಾರ್ತೆಗಳ ಸಾರವನ್ನು ಹಿಂಡಿತೆಗೆದು, ಯೇಸುವಿನ ಜೀವನ ಮತ್ತು ಶುಶ್ರೂಷೆಯ ಒಂದು ಹೊಂದಿಕೆಯಾದ ವೃತ್ತಾಂತವನ್ನು ಸಂಕಲಿಸಿದನು. (ಡಯಟೆಸ್ರಾನ್ ಅಂದರೆ “ನಾಲ್ಕರ ಮುಖೇನ”) ಯಾವ ಪ್ರತಿಯೂ ಪಾರಾಗಿ ಉಳಿಯದ ಕಾರಣ, ಕೊನೆಯ ಶತಕದ ಕೆಲವು ಟೀಕಾಕಾರರು, ಸುವಾರ್ತೆಗಳ ಅಂತಹ ಹೊಂದಿಕೆಯು ಎಂದಾದರೂ ಅಸ್ತಿತ್ವದಲ್ಲಿತ್ತೋ ಎಂಬ ವಾಗ್ವಾದವನ್ನೆಬ್ಬಿಸಿದರು. ಆ ಸುವಾರ್ತೆಗಳು ತಾವೇ ಎರಡನೇ ಶತಕದ ಮಧ್ಯಭಾಗದ ತನಕ ಬರೆಯಲ್ಪಡಲಿಲ್ಲ ಎಂದವರು ವಾದಿಸಿದ್ದರು.
ಆದರೂ, ಕಳೆದ ನೂರು ವರ್ಷಗಳಲ್ಲಿ ಡಯಟ್ರೆಸಾನ್ನ ಅರ್ಮೇನಿಯನ್ ಮತ್ತು ಅರೇಬಿಕ್ ಭಾಷಾಂತರಗಳ ತರ್ಜುಮೆಗಳ ಸಂಶೋಧನೆಯು ಉಚ್ಛ ಟೀಕಾಕಾರರನ್ನು ಹಿಮ್ಮೆಟ್ಟುವಂತೆ ಬಲಾತ್ಕರಿಸಿತು. ಅನಂತರ, 1956 ರಲ್ಲಿ, ಸರ್ ಚೆಸ್ಟರ್ ಬ್ಯೇಟಿ, ಈ 5⁄6ನೇ ಶತಕದ ಟೆಟ್ಯನ್ನ ಮೂಲ ಕೃತಿಯಿಂದ ತೆಗೆದ ದೀರ್ಘ ಸಾರಾಂಶಗಳು ಅಡಕವಾಗಿರುವ ಹೇಳಿಕೆಗಳನ್ನು ಪಡೆಯಶಕ್ತರಾದರು. “ಆ ಯುಗದಲ್ಲಿ ಆ ನಾಲ್ಕು ಸುವಾರ್ತೆಗಳು ಚಲಾವಣೆಯಲ್ಲಿರಲಿಲ್ಲ ಎಂಬ ವಾದವನ್ನು ಅದು ಖಂಡಿತವಾಗಿಯೂ ಕಚ್ಚುಮಾಡಿತು” ಎಂದರು ಶ್ರೀ ಲಾಕ್ವುಡ್ರವರು.
“ದ ವರ್ಡ್ ಆಫ್ ಗಾಡ್” ಪ್ರದರ್ಶನೆಯು, ಬೈಬಲ್ ಪಂಡಿತರಿಗೆ ಮತ್ತು ಮೂಲಗ್ರಂಥದ ಟೀಕಾಕಾರರಿಗೆ ದೊರೆಯುವ ಹೇರಳ ಸಮಾಚಾರದ ಜ್ಞಾಪಕವನ್ನು ಕೊಡುತ್ತದೆ. ಈ ಪಂಡಿತರಲ್ಲಿ ಒಬ್ಬರಾದ ಸರ್ ಫ್ರೆಡ್ರಿಕ್ ಕೆನ್ಯನ್, ಸಂಶೋಧಿಸಲ್ಪಟ್ಟ ಈ ಎಲ್ಲಾ ಬೈಬಲ್ ಹಸ್ತ ಪ್ರತಿಗಳ ಭಾವಾರ್ಥಗಳನ್ನು ವಿವರಿಸುವಂತಾಗಲಿ ಮತ್ತು ಅದೇ ಸಮಯ, ಆರಂಭದಲ್ಲಿ ಎಬ್ಬಿಸಲ್ಪಟ್ಟ ಪ್ರಶ್ನೆಗಳಿಗೆ ಉತ್ತರವನ್ನು ಕೊಡುವಂತಾಗಲಿ:
“ಬೈಬಲು ಯುಗಾವಧಿಯಿಂದ ಯಾವ ಮಾರ್ಪಾಟೂ ಇಲ್ಲದೆ ಕೈಸೇರಿರುತ್ತದೆ ಎಂಬ ಕಲ್ಪನೆಯನ್ನು ತ್ಯಜಿಸಲು ಕೆಲವರಿಗೆ ಕಷ್ಟವಾದೀತು . . . ಆದರೆ ಈ ಎಲ್ಲಾ ಸಂಶೋಧನೆಗಳ ಅಂತ್ಯಫಲವನ್ನು ಕಾಣುವದು ಕೊನೆಯಲ್ಲಿ ಆಶ್ವಾಸನಾದಾಯಕವು ಮತ್ತು ಈ ಎಲ್ಲಾ ಅಧ್ಯಯನವು ಶಾಸ್ತ್ರ ವಚನದ ಸತ್ಯತೆಯ ಪ್ರಾಮಾಣ್ಯತೆಯನ್ನು ಮತ್ತು ನಮ್ಮ ಕೈಯಲ್ಲಿ ಸತ್ವಯುಕ್ತ ಯಥಾರ್ಥತೆ ಮತ್ತು ನಿಜತ್ವವುಳ್ಳ ದೇವರ ವಾಕ್ಯವಿದೆ ಎಂಬ ದೃಢತೆಯನ್ನು ಬಲಗೊಳಿಸುತ್ತದೆ.” (ದ ಸ್ಟೋರಿ ಆಫ್ ದ ಬೈಬಲ್, ಪುಟ 113)—ಕೀರ್ತನೆ 119:105; 1 ಪೇತ್ರ 1:25. (w89 2/1)
[ಪುಟ 29 ರಲ್ಲಿರುವ ಚಿತ್ರ]
ಮೂರನೇ ಶತಮಾನದ ಪಪೈರಸ್—2 ಕೊರಿಂಥ 4:13–5:4
[ಕೃಪೆ]
Reproduced by permission of the Chester Beatty Library
[ಪುಟ 30 ರಲ್ಲಿರುವ ಚಿತ್ರ]
18 ನೆಯ ಶತಕದ ಎಸ್ತೇರ್ ಪುಸ್ತಕದ ಚರ್ಮ ಮತ್ತು ಚರ್ಮಪತ್ರದ ಸುರುಳಿಗಳು
[ಕೃಪೆ]
Reproduced by permission of the Chester Beatty Library
[ಪುಟ 31 ರಲ್ಲಿರುವ ಚಿತ್ರ]
ಆರನೇ ಯಾ ಏಳನೇ ಶತಮಾನದ ಚರ್ಮಪತ್ರಗಳ ಕೋಡೆಕ್ಸ್—ಯೋಹಾನ 1:1-9, ಕಾಪ್ಟಿಕ್ ತರ್ಜುಮೆ
[ಕೃಪೆ]
Reproduced by permission of the Chester Beatty Library
[ಪುಟ 31 ರಲ್ಲಿರುವ ಚಿತ್ರ]
Fifth- or sixth-century vellum codex—commentary by Ephraem that includes extracts from Tatian’s Diatessaron, in Syriac
[ಕೃಪೆ]
Reproduced by permission of the Chester Beatty Library