ನ್ಯಾಯದ ಕುರಿತು ಎಂದಾದರೂ ದೇವರು ಏನಾದರೂ ಮಾಡಲಿರುವನೋ?
“ಅದು ನ್ಯಾಯವಲ್ಲ.” ಎಳೆಯ ವಿದ್ಯಾರ್ಥಿಯು ರೇಗಿದಾಳ್ದೆ ಎಂದು ತೋರುತ್ತಿತ್ತು, ವೈಯಕಿಕ್ತವಾಗಿ ನ್ಯಾಯದ ತಿರುಚುವಿಕೆಯೊಂದನ್ನು ನೋಡಿ ಅನುಭವಿಸಿದ ನಂತರ ಕೋಪದಿಂದ ತುಂಬಿದ್ದಳು. ಅವಳು ಮುಂದುವರಿಸಿದ್ದು: “ಒಬ್ಬ ದೇವರು ನಿಜವಾಗಿ ಇರುವುದಾದರೆ, ಅಂತಹ ಅನ್ಯಾಯವನ್ನು ಅವನು ಹೇಗೆ ಅನುಮತಿಸ ಸಾಧ್ಯವಿದೆ?” ಈ ಎಳೇ ಯುವತಿಯೊಂದಿಗೆ ನೀವು ಸಹಾನುಕಂಪ ತೋರಿಸಬಲ್ಲಿರೋ? ಪ್ರಾಯಶಃ ಹಾಗೆ ಮಾಡಬಹುದು. ಆದರೆ ಅವಳ ಅಡ್ಡಿಯನ್ನು ನೀವು ಉತ್ತರಿಸಬಲ್ಲಿರೋ?
ನೀವು ಮಗುವಾಗಿದ್ದಾಗ, ನಿಮ್ಮ ಹೆತ್ತವರು ನೀವು ಅನ್ಯಾಯವಾಗಿ ಸತ್ಕರಿಸಲ್ಪಡುವಂತೆ ಅನುಮತಿಸಿರಬಹುದು ಎಂಬ ಅನಿಸಿಕೆ ನಿಮಗೆ ಬಂದಿರಬಹುದು. ಆದರೆ ಆ ತೋರಿಕೆಯ ಅನ್ಯಾಯಗಳು ಅವರು ಅಸ್ತಿತ್ವದಲ್ಲಿರಲಿಲ್ಲ ಎಂದು ಎಂದೂ ರುಜುಪಡಿಸುವುದಿಲ್ಲ, ಎಂದಾದರೂ ಮಾಡುತ್ತವೂ? ಅದೇ ರೀತಿ, ದೇವರು ಅನ್ಯಾಯವನ್ನು ಅನುಮತಿಸುವುದು, ಅವನ ಅಸ್ತಿತ್ವಯಿಲ್ಲದಿರುವಿಕೆಯನ್ನು ಯಾವುದೇ ವಿಧದಲ್ಲಿ ರುಜುಪಡಿಸುವುದಿಲ್ಲ.
ಆದಾಗ್ಯೂ, ಎಳೇ ವಿದ್ಯಾರ್ಥಿಯು, ಈ ವಿಷಯವು ಪೂರ್ಣವಾಗಿ ಭಿನ್ನವಾಗಿದೆ ಎಂದು ಉತ್ತರಿಸಿದಳು. ಅಪರಿಪೂರ್ಣ ಮಾನವ ತಂದೆಯು ಸ್ವತಃ ತನ್ನಲ್ಲಿ ಸ್ವಲ್ಪ ಅನ್ಯಾಯವಿದ್ದವನಾಗಿರಬಹುದು ಎಂದು ಅವಳು ಸೂಚಿಸಿದಳು. ಇಲ್ಲವೇ, ಎಲ್ಲಾ ವಾಸ್ತವಾಂಶವನ್ನು ತಿಳಿಯದೇ ಇರುವುದರಿಂದ, ಅವನು ಅನ್ಯಾಯವನ್ನು ನೋಡಿದಾಗ, ಅದನ್ನು ತಿಳಿದು ಕೊಳ್ಳದೇ ಇರಬಹುದು. ಅದಲ್ಲದೇ, ಮಾನವ ಸೀಮಿತಗಳ ಕಾರಣದಿಂದ, ಅವನು ನೋಡಿರುವ ಅನ್ಯಾಯಗಳ ಕುರಿತು ಏನನ್ನಾದರೂ ಮಾಡುವರೇ ಅವನು ಶಕ್ತಿಯಿಲ್ಲದವನಾಗಿರಬಹುದು. ಇವೆಲ್ಲಾ ಕಾರಣಗಳ ಹೊರತಾಗಿಯೂ, ಸರ್ವಜ್ಞಾನಿಯೂ, ಸರ್ವಶಕ್ತನೂ ಆಗಿರುವ ಒಬ್ಬ ನ್ಯಾಯವಂತ ದೇವರಿಗೆ ಇದು ಅನ್ವಯವಾಗುವುದಿಲ್ಲ, ಎಂದವಳು ವಾದಿಸಿದಳು.
ಅನ್ಯಾಯಗಳನ್ನು ಅನುಮತಿಸಿದ್ದು ದೈವಿಕ ಗುಣಗಳೊಂದಿಗೆ ಸರಳವಾಗಿ ಹೊಂದಿಕೆಯಾಗುವುದಿಲ್ಲ ಎಂದು ನೀವು ಕೂಡಾ ಭಾವಿಸಬಹುದು. ಆದರೂ, ದೇವರು ತನ್ನ ಗರಿಷ್ಠ ವಿವೇಕದಿಂದಾಗಿ, ಒಂದು ಸಮಯಾವಧಿಯ ತನಕ ಅನ್ಯಾಯವನ್ನು ಅನುಮತಿಸಲು ದೇವರಿಗೆ ಒಂದು ಯುಕ್ತವಾದ ಕಾರಣವಿರಸಾಧ್ಯವೂ?
ದೇವರು “ನೀತಿ ಮತ್ತು ನ್ಯಾಯವನ್ನು ಪ್ರೀತಿಸುವವನೆಂದು,” ಬೈಬಲ್ ಲೇಖಕರು ಪರಿಗಣಿಸಿದ್ದಾರೆ. “ಅವನ ಮಾರ್ಗಗಳೆಲ್ಲಾ ನ್ಯಾಯವಾದವುಗಳು, ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ, ಯಥಾರ್ಥನೂ ಆಗಿದ್ದಾನೆ,” ಎಂದು ಮೋಶೆಯು ಬರೆದನು.—ಕೀರ್ತನೆ 33:5; ಧರ್ಮೋಪದೇಶಕಾಂಡ 32:4; ಯೋಬನು 37:23.
ಅನ್ಯಾಯದಲ್ಲಿ ಸಂತೋಷಿಸಿದ ಒಬ್ಬ ನ್ಯಾಯವಂತನಾದ ದೇವರೆಂದು ಯೆಹೋವನನ್ನು ವೀಕ್ಷಿಸುವುದರೊಂದಿಗೆ, ಅವನದನ್ನು ಒಂದು ದಿನ ನಿರ್ಮೂಲ ಮಾಡುವನೆಂದು ಎಂಬ ವಿಷಯವನ್ನು ಬೈಬಲ್ ಲೇಖಕರು ಒಪ್ಪಿದ್ದಾರೆ. ಉದಾಹರಣೆಗಾಗಿ, ಯೆಶಾಯನು ಈ ಸ್ಥಿತಿಯ ಕುರಿತು ಮುನ್ನುಡಿದದ್ದು: “ಇಗೋ, ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು, ಅಧಿಪತಿಗಳು ನ್ಯಾಯದಿಂದ ದೊರೆತನ ಮಾಡುವರು. ನ್ಯಾಯವು ಅಡವಿಯಲ್ಲಿಯೂ ನೆಲೆಗೊಳ್ಳುವುದು, ಧರ್ಮವು ತೋಟದಲ್ಲಿ ಇದ್ದೇ ಇರುವುದು.” (ಯೆಶಾಯ 32:1, 16) ಆದರೆ ಯಾವಾಗ? ಮತ್ತು ದೇವರು ಅನ್ಯಾಯದ ಲೋಕವನ್ನು ನಿರ್ಮೂಲಗೊಳಿಸಲು ಬಯಸುವುದಾದರೆ, ಅವನದಕ್ಕೆ ಈ ಮೊದಲೇ ಯಾಕೆ ಅನುಮತಿಯನ್ನಿತ್ತನು?
ಅನ್ಯಾಯ—ಯಾಕೆ ಅನುಮತಿಸಿದ್ದು?
ವಿಶ್ವದಲ್ಲಿ ಅನ್ಯಾಯವು ಅಸ್ತಿತ್ವದಲ್ಲಿರದ ಸಮಯವೊಂದಿತ್ತು. ಪಿಶಾಚನಾದ ಸೈತಾನನ ಒತ್ತಡದ ಕಾರಣದಿಂದ ಆದಾಮ ಮತ್ತು ಹವ್ವರ ದಂಗೆಯಿಂದ ಮಾತ್ರ ಅನ್ಯಾಯವು ಮಾನವಕುಲಕ್ಕೆ ಪರಿಚಿತವಾಯಿತು. ದಂಗೆಯ ಸಮಯದಲ್ಲಿ ಸೈತಾನನು ಕೂಡಲೇ ನಾಶಗೊಳಿಸಲ್ಪಡಲಿಲ್ಲ. ಅವನ ಸ್ವಂತ ಒಳ್ಳೆಯ ಉದ್ದೇಶದಿಂದಾಗಿ, ಮನುಷ್ಯನು ಅನ್ಯಾಯಗಳನ್ನು ನಡಿಸಬಹುದಾದ ಒಂದು ಸಮಯಾವಧಿಯನ್ನು ದೇವರು ಅನುಮತಿಸಿದನು ಮತ್ತು ಅವನಿಗೆ ಭಕ್ತಿತೋರಿಸುವವರನ್ನು ಪರೀಕ್ಷಿಸುವ ಉದ್ದೇಶಕ್ಕಾಗಿ, ಅವರು ಅವನಿಗೆ ನಂಬಿಗಸ್ತರಾಗಿ ರುಜುಪಡಿಸುವರೋ ಎಂದು ತಿಳಿಯಲು ಈ ಸಮಯವಿರುತ್ತದೆ. ಅವರು ಯಥಾರ್ಥತೆಯ ಪರಿಪಾಲಕರಾಗಿರಲು ಅವರು ಆಯ್ಕೆ ಮಾಡುವುದು, ಎಲ್ಲಾ ಮಾನವ ಸೃಷ್ಟಿಯನ್ನು ದೇವರ ವಿರುದ್ಧವಾಗಿ ತಿರುಗಿಸಲು ಸೈತಾನನಿಗಿರುವ ಸಾಮರ್ಥ್ಯದ ನಿರಾಕರಣೆಯು ಇದಾಗಿರುತ್ತದೆ. ಈ ರೀತಿಯಲ್ಲಿ ಯೆಹೋವನು ಸಮರ್ಥಿಸಲ್ಪಡುವಾಗ, ಸೈತಾನನ ಕೆಲಸವು ನಾಶಮಾಡಲ್ಪಟ್ಟು, ಎಲ್ಲಾ ಅನ್ಯಾಯವು ತೆಗೆಯಲ್ಪಡುವುದು.
ತನ್ಮಧ್ಯೆ, ಜನರು ಅನ್ಯಾಯವಾಗಿ ವ್ಯವಹರಿಸುವುದನ್ನು ಬಲಾತ್ಕಾರವಾಗಿ ದೇವರು ಅಡ್ಡಿಮಾಡಿದರೆ, ಅವನು ಅವರ ಆಯ್ಕೆಯ ಸ್ವಾತಂತ್ರ್ಯವನ್ನು ಕಸಿದು ಕೊಂಡಂತಾಗುತ್ತದೆ. ಅದಲ್ಲದೇ, ಇತರರ ತಪ್ಪು ಕ್ರಿಯೆಗಳ ಅನ್ಯಾಯದ ಫಲಿತಾಂಶಗಳನ್ನು ಅನುಭವಿಸಲು ಜನರಿಗೆ ಅನುಮತಿಯನ್ನೀಯುವುದರಿಂದ, ದೈವಿಕ ಕ್ರಮವಿಧಾಯಕಗಳ ವಿರುದ್ಧ ಅನ್ಯಾಯವಾಗಿ ದಂಗೆ ಎದ್ದು, ಅವುಗಳ ಸ್ಥಾನದಲ್ಲಿ ಅವರ ಸ್ವಂತ ತಪ್ಪಾದ ಮಟ್ಟಗಳನ್ನು ಇಟ್ಟದರ್ದ ಫಲಿತಾಂಶವು ಎಷ್ಟೊಂದು ಬಾಧಕವಾಗಿರುತ್ತದೆ ಎಂದು ದೇವರು ನಿದರ್ಶಿಸುತ್ತಾನೆ. ಅದೇನು ಬಿತ್ತಿದೆಯೋ ಅದನ್ನೇ ಕೊಯ್ಯಲು ಮಾನವ ಕುಲಕ್ಕೆ ಅನುಮತಿಸುವುದರಿಂದ, ದೇವರ ಮಾರ್ಗಕ್ಕನುಗುಣವಾಗಿ ವಿಷಯಗಳನ್ನು ಮಾಡುವುದರ ಶ್ರೇಷ್ಠತೆಯನ್ನು ಪ್ರಾಮಾಣಿಕ ಜನರು ತಿಳಿದುಕೊಳ್ಳಲು ದೇವರು ಸಹಾಯ ಮಾಡುತ್ತಾನೆ.—ಯೆರೆಮೀಯ 10:23; ಗಲಾತ್ಯದವರಿಗೆ 6:7.
ಇದಕ್ಕೆ ಕೂಡಿಸಿ, ವ್ಯಕ್ತಿಗಳು ನಡಿಸುವ ನ್ಯಾಯದ ಯಾ ಅನ್ಯಾಯ ಕ್ರಿಯೆಗಳು ಕೆಲವೊಂದು ರುಜುವಾತನ್ನು ಹೊರಗೆಡಹುತ್ತವೆ. ಪೂರ್ಣ ನ್ಯಾಯವು ಪುನಃ ಸ್ಥಾಪಿಸಿದಾಗ ನೂತನ ಲೋಕವೊಂದರಲ್ಲಿ ಭೂಮಿಯ ಮೇಲೆ ಜೀವಿಸಲು ಯಾರು ಅರ್ಹರು ಎಂದು ತೀರ್ಮಾನಿಸಲು ದೇವರಿಗೆ ಒಂದು ಸ್ಪಷ್ಟವಾದ ಆಧಾರವನ್ನು ಈ ಕೆಲಸಗಳು ಒದಗಿಸುತ್ತವೆ. ಇದನ್ನು ಸೂಚಿಸುವುದನ್ನು ನಾವು ಓದುವುದು: “ಆದರೆ ದುಷ್ಟನು ತಾನು ಮಾಡುತ್ತಿದ್ದ ಪಾಪಗಳನ್ನೆಲ್ಲಾ ಬಿಟ್ಟುಬಿಟ್ಟು ನನ್ನ ಸಕಲ ವಿಧಿಗಳನ್ನು ಕೈಕೊಂಡು ನೀತಿನ್ಯಾಯಗಳನ್ನು ನಡಿಸಿದರೆ ಸಾಯನು, ಬಾಳೇ ಬಾಳುವನು.”—ಯೆಹೆಜ್ಕೇಲನು 18:21.
ಅನ್ಯಾಯವು ಯಾವಾಗ ಅಂತ್ಯಗೊಳ್ಳುವುದು?
ಮಾನವ ಕುಲದೊಂದಿಗೆ ದೇವರ ವ್ಯವಹರಿಸುವಿಕೆಗಳು ಯಾವಾಗಲೂ ನ್ಯಾಯಯುಕ್ತವಾಗಿದ್ದವು ಮತ್ತು ಪ್ರೀತಿ-ಕರುಣೆಗಳಿಂದ ಗುರುತಿಸಲ್ಪಟ್ಟಿದ್ದವು. ಇದನ್ನು ಉದಾಹರಿಸುತ್ತಾ, ದೇವರ ನಂಬಿಗಸ್ತ ಸೇವಕನಿಗೆ ಸಂಭವಿಸುತ್ತಿರುವುದೇನು ಎಂದು ತಿಳಿದು ಕೊಳ್ಳಲು ಆಗದ ಸಮಯದಲ್ಲಿ, ಅವನು ದೇವರ ಕುರಿತು ಅಂದದ್ದು: “ಆ ರೀತಿಯಾಗಿ ದುಷ್ಟರಿಗೂ, ಶಿಷ್ಟರಿಗೂ ಭೇದಮಾಡದೆ ದುಷ್ಟರ ಸಂಗಡ ನೀತಿವಂತರನ್ನೂ ಸಂಹರಿಸುವುದು ನಿನ್ನಿಂದ ಎಂದಿಗೂ ಅಗಬಾರದು; ಸರ್ವಲೋಕಕ್ಕೆ ನ್ಯಾಯತೀರಿಸುವವನು ನ್ಯಾಯವನ್ನೇ ನಡಿಸುವನಲ್ಲವೇ?” (ಆದಿಕಾಂಡ 18:25) ಯೇಸುವಿನ ಬರೋಣದ ನಂತರ, ನ್ಯಾಯದ ಮತ್ತು ಪ್ರೀತಿ-ಕರುಣೆಯ ದೇವರ ಗುಣಗಳು ಹೆಚ್ಚಾಗಿ ತೋರಿಬಂದವು. ಕ್ರಿಸ್ತ ಯೇಸುವಿನ ವಿಮೋಚನಾ ಈಡಿನ ಯಜ್ಞದ ಏರ್ಪಾಡಿನ ಮೂಲಕ ಯೆಹೂದ್ಯರಿಗೂ, ಯೆಹೂದ್ಯೇತರರಿಗೂ ನಿತ್ಯಜೀವವನ್ನು ಸಂಪಾದಿಸಲು ಪ್ರತಿಯೊಬ್ಬರಿಗೂ ದಾರಿಯನ್ನು ತೆರೆಯಲಾಯಿತು. ಇದು ಪೇತ್ರನು ಈ ರೀತಿಯಲ್ಲಿ ಹೇಳುವುದಕ್ಕೆ ನಡಿಸಿತು: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದು ಬಂದಿದೆ.”—ಅ.ಕೃತ್ಯಗಳು 10:34, 35.
ಪೂರ್ಣವಾದ ರೀತಿಯಲ್ಲಿ ನಮ್ಮ ಭೂಮಿಯ ಮೇಲೆ ಪುನಃ ನ್ಯಾಯವು ಸ್ಥಾಪಿಸಲ್ಪಡುವ ಸಮಯವು ಹತ್ತರಿಸಿದೆ ಮತ್ತು ದೇವರ ಮೆಸ್ಸೀಯ ರಾಜನ ಆಳಿಕ್ವೆಯು ಆರಂಭಿಸಿದೆ ಎಂದು ಸಾರುವುದರಲ್ಲಿ ಯೆಹೋವನ ಸಾಕ್ಷಿಗಳು ಕಾರ್ಯಮಗ್ನರಾಗಿರುತ್ತಾರೆ.a ಸದ್ಯದ ಅನ್ಯಾಯದ ಲೋಕವನ್ನು ರಾಜನು ನಾಶಮಾಡಿದಾಗ ಮತ್ತು ಅದರ ಅದೃಶ್ಯ ದೇವರಾದ ಪಿಶಾಚನಾದ ಸೈತಾನನ ಶಕ್ತಿಯನ್ನು ಮುರಿದಾಗ ಇದು ಪೂರೈಸಲ್ಪಡಲಿರುವುದು. ಇದು ಬೇಗನೆ ಸಾಮಾನ್ಯವಾಗಿ ಅರ್ಮೆಗೆದ್ದೋನ್ ಎಂದು ಕರೆಯಲ್ಪಡುವ “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧದಲ್ಲಿ” ಬಲುಬೇಗನೆ ಸಂಭವಿಸಲಿರುವುದು ಎಂದು ಬೈಬಲು ತೋರಿಸುತ್ತದೆ.—ಪ್ರಕಟನೆ 16:14, 16.
“ಉಗ್ರ ದಂಡನೆಯನ್ನು ಮಾಡುವ ದೇವರು ಅನ್ಯಾಯಸ್ಥನಲ್ಲ, ” ಹಾಗಾದರೆ ಅರ್ಮೆಗೆದ್ದೋನ್ ಒಂದು ನ್ಯಾಯ ಯುದ್ಧವಾಗಿರುತ್ತದೆ. (ರೋಮಾಪುರದವರಿಗೆ 3:5) ಅನಂತರ, ಕ್ರಿಸ್ತ ಯೇಸುವು ಮತ್ತು ಅಪೊಸ್ತಲರಂತಹ ಅವನ ಸಹ ರಾಜರುಗಳು ಪರಲೋಕದಿಂದ ಒಂದು ಸಾವಿರ ವರುಷ ಆಳುವರು. (ಪ್ರಕಟನೆ 20:4) ಗತಕಾಲದಲ್ಲಿ ಬಾಧಿತರಾದ ಲಕ್ಷಾಂತರ ಜನರು ಮಾನವ ಕುಲದ ಮೂಲ ಮನೆಯಾದ ಭೂಮಿಯ ಮೇಲಿನ ನೀತಿಯ ವ್ಯವಸ್ಥೆಯೊಂದರಲ್ಲಿ ಪುನರುತ್ಥಾನಗೊಳ್ಳಲ್ಪಡುವರು, ಇಲ್ಲಿ ಮೊತ್ತ ಮೊದಲ ಬಾರಿ ಅವರ ಜೀವಿತಗಳಲ್ಲಿ ಪರಿಪೂರ್ಣ ನ್ಯಾಯವನ್ನು ಅನುಭವಿಸುವರು.
“ಹಾಗಾದರೆ ದೇವರಲ್ಲಿ ಅನ್ಯಾಯ ಉಂಟೋ?
ದೇವರ ವ್ಯವಹಾರಗಳಲ್ಲಿ ಒಂದರ ಕುರಿತು ಅಪೊಸ್ತಲ ಪೌಲನು ಅದನ್ನು ಕೇಳಿದನು. ಉತ್ತರ? “ಎಂದಿಗೂ ಇಲ್ಲ,” ಎಂದು ಬರೆದನು ಪೌಲನು. ಕುಂಬಾರನಿಂದ ಕೋಪಕ್ಕೆ ಗುರಿಯಾದ ಇಲ್ಲವೇ ಕರುಣೆಗೆ ಪಾತ್ರವಾದ ಪಾತ್ರೆಗಳನ್ನಾಗಿ ರೂಪಿಗೆ ತರುವ ಮಣ್ಣಿಗೆ ಮಾನವರನ್ನು ಹೋಲಿಸುತ್ತಾ, ಪೌಲನು ವಿವರಿಸಿದ್ದು: “ದೇವರು ತನ್ನ ಕೋಪವನ್ನು ತೋರಿಸಲು ಮತ್ತು ತನ್ನ ಶಕ್ತಿಯನ್ನು ಪ್ರದರ್ಶಿಸಲು ಸಿದ್ಧನಾಗಿರುವುದಾದರೂ, ಅವನು ದೀರ್ಘಶಾಂತಿಯಿಂದ ಅವನನ್ನು ರೇಗಿಸುವ ಜನರೊಂದಿಗೆ ಸೈರಣೆಯುಳ್ಳವನಾಗಿದ್ದಾನೆ, ಆದಾಗ್ಯೂ, ಅವರು ನಾಶನಕ್ಕೆ ಅರ್ಹರಾಗಿರುತ್ತಾರೆ. ಯಾರ ಕಡೆಗೆ ಕರುಣಾಭರಿತನಾಗಿರಲು ಬಯಸುತ್ತಾನೋ, ಆ ಇತರ ಜನರ ಕಾರಣದಿಂದ ಇವರೊಂದಿಗೆ ಸಹಿಸಿಕೊಂಡಿದ್ದಾನೆ, ಅವರಲ್ಲಿ ತನ್ನ ಮಹಿಮಾತಿಶಯವನ್ನು ತೋರಿಸಲು ಅವನು ಬಯಸುತ್ತಾನೆ.”—ರೋಮಾಪುರದವರಿಗೆ 9:14, 20-24, ದ ಜೆರೂಸಲೇಮ್ ಬೈಬಲ್.
ಈ ಮುಂಚೆ ತಿಳಿಸಿದ ಎಳೇ ವಿದ್ಯಾರ್ಥಿಯೋಪಾದಿ, ಸಾಮಾನ್ಯವಾಗಿ ಇಲ್ಲವೇ ವೈಯಕಿಕ್ತವಾಗಿ ದೇವರು ಯಾಕೆ ಅನ್ಯಾಯಕ್ಕೆ ಅನುಮತಿಯನ್ನೀಯುತ್ತಾನೆ ಎಂದು ಅರ್ಥಮಾಡಿಕೊಳ್ಳಲು ಕೆಲವೊಮ್ಮೆ ನಿಮಗೂ ಕಷ್ಟಕರವಾಗಿ ಕಂಡುಬರಬಹುದು. ಆದರೆ ಹಾಗೆ ಮಾಡಲು — ಅವನ ಕೈಯಲ್ಲಿ ರೂಪಿಸಲ್ಪಡುವವರು — ಅವನ ದೀರ್ಘಶಾಂತಿ ಮತ್ತು ವಿವೇಕವನ್ನು ಪ್ರಶ್ನಿಸಲು ನಾವು ಯಾರು? ಯೆಹೋವ ದೇವರು ಯೋಬನಿಗೆ ಅಂದದ್ದು: “ಏನು! ನನ್ನ ನೀತಿಯನ್ನು ಖಂಡಿಸಿ ಬಿಡುವಿಯಾ? ನಿನ್ನ ನ್ಯಾಯವನ್ನು ಸ್ಥಾಪಿಸಿ ಕೊಳ್ಳಲಿಕ್ಕೆ ನನ್ನನ್ನು ಕೆಟ್ಟವನೆಂದೂ ನಿರ್ಣಯಿಸುವಿಯೋ?”—ಯೋಬನು 40:8.
ಅಂತಹದ್ದನ್ನು ಮಾಡುವ ತಪ್ಪನ್ನು ನಾವೆಂದಿಗೂ ಮಾಡದಿರೋಣ. ಬದಲಿಗೆ, ನಮ್ಮೊಂದಿಗೆ ಅನ್ಯಾಯವು ಇನ್ನೂ ಅಸ್ತಿತ್ವದಲ್ಲಿರುವುದಾದರೂ, ಇಡೀ ಭೂಮಿಯಿಂದ ಅನ್ಯಾಯವನ್ನು ನ್ಯಾಯದ ದೇವರು ಬಲುಬೇಗನೆ ತೆಗೆಯಲಿರುವುದಕ್ಕಾಗಿ ನಾವೆಲ್ಲರೂ ಸಂತೋಷಿಸ ಬೇಕು. (w89 10/15)
[ಅಧ್ಯಯನ ಪ್ರಶ್ನೆಗಳು]
a 1914 ರಿಂದ ಭೂಮಿಯ ತನ್ನ ಅದೃಶ್ಯ ಆಳಿಕ್ವೆಯನ್ನು ದೇವರ ರಾಜ್ಯವು ಆರಂಭಿಸಿದೆ ಎಂಬ ರುಜುವಾತಿಗಾಗಿ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರೇಕ್ಟ್ ಸೊಸೈಟಿ ಆಫ್ ಇಂಡಿಯಾದಿಂದ ಪ್ರಕಾಶಿಸಲ್ಪಟ್ಟ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕದ ಪುಟ 134-141 ನೋಡಿರಿ. ಇದೇ ಪುಸ್ತಕದಲ್ಲಿ “ದೇವರು ದುಷ್ಟತ್ವಕ್ಕೆ ಏಕೆ ಅವಕಾಶ ಕೊಟ್ಟಿದ್ದಾನೆ?” ಎಂಬ ಒಂದು ಅಧ್ಯಾಯವೂ ಇದೆ.
[ಪುಟ 31 ರಲ್ಲಿರುವ ಚಿತ್ರ]
ಅನ್ಯಾಯಕ್ಕೆ ಅನುಮತಿಯು, ದೇವರು ಅಸ್ತಿತ್ವದಲ್ಲಿಲ್ಲ ಎಂದು ರುಜುಪಡಿಸಲು ಯಾವುದೇ ವಿಧದಲ್ಲಿ ಸಾಧ್ಯವಿಲ್ಲ
ಕುಡಿದು ಮತ್ತನಾದ ವಾಹನಚಾಲಕನು ಸಾಮಾನ್ಯ ಪ್ರಜ್ಞೆಯ ಗುಣಗಳನ್ನು, ಸ್ವ-ನಿಯಂತ್ರಣವನ್ನು ಮತ್ತು ಪರಿಗಣನೆಯನ್ನು ಬಳಸಲು ನಿರಾಕರಿಸಿದರೆ, ದೇವರು ತಪ್ಪಿತಸ್ಥನೋ?
ನಮ್ಮ ಭೂಮಿಯ ಮೇಲೆ ಬಲುಬೇಗನೆ ಪೂರ್ಣ ನ್ಯಾಯವನ್ನು ಪುನಃ ಸ್ಥಾಪಿಸುವ ಸಮಯ ಸಮೀಪಿಸಿದೆ