ವಿಶ್ವ-ವ್ಯಾಪಕ ಕೊಯ್ಲಿಗಾಗಿ ಹೆಚ್ಚು ಮಿಶನೆರಿಗಳು
ಸಪ್ಟಂಬರ ಬೇಸಾಯಗಾರರ ಕೊಯ್ಲಿನ ತಿಂಗಳು, ಆದರೆ ಅದಕ್ಕಿಂತ ಎಷ್ಟೋ ಹೆಚ್ಚು ಮಹತ್ವದ ಒಂದು ಕೊಯ್ಲಿನ ಕೆಲಸವು, ನ್ಯೂ ಯೊರ್ಕ್ ಶಹರದ ಹಡ್ಸನ್ ನದಿಯಾಚೆಯ ಜರ್ಸಿ ಸಿಟಿ ಯೆಹೋವನ ಸಾಕ್ಷಿಗಳ ಎಸೆಂಬ್ಲಿ ಹೋಲಿಗೆ ಒಂದು ದೊಡ್ಡ ಜನಸಮೂಹವನ್ನು ಆಕರ್ಷಿಸಿದ್ದು ಸಪ್ಟಂಬರ 8, 1991ರಂದು. ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾದ್ನ 91ನೆಯ ಕ್ಲಾಸ್ ಪದವಿ ಪ್ರಾಪ್ತಿಸುತ್ತಿತ್ತು. ಸುಮಾರು 4,263 ಬೆತೆಲ್ ಕುಟುಂಬ ಸದಸ್ಯರು ಮತ್ತು ಆಮಂತ್ರಿತ ಅಥಿತಿಗಳು ಅಲಿದ್ದರು, ಮತ್ತು ಬ್ರೂಕ್ಲಿನ್ ಮುಖ್ಯ ಕಾರ್ಯಾಲಯ ಮತ್ತು ವಾಲ್ಕಿಲ್ ಮತ್ತು ಪ್ಯಾಟರ್ಸನ್ನಲ್ಲಿನ ಫಾರ್ಮ್ಗಳಿಗೆ ಟೆಲಿಫೋನ್ ಲೈನ್ಸ್ ಮೂಲಕ ಇನ್ನು 1,151 ಮಂದಿ ಸಂಪರ್ಕ ಹೊಂದಿದ್ದರು.
ಗಿಲ್ಯಾದ್ ಶಾಲೆಯ ಪ್ರೆಸಿಡೆಂಟರಾದ ಸುಮಾರು 98 ವರ್ಷ-ವಯಸ್ಸಿನ ಫ್ರೆಡ್ರಿಕ್ ಡಬ್ಲ್ಯೂ. ಫ್ರಾಂಝ್, ಒಂದು ಹೃದಯಸ್ಪರ್ಶಕ ಹಾಗೂ ಭಕ್ತಿಯಾಳದ ಪ್ರಾರ್ಥನೆಯಿಂದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆಡಳಿತ ಮಂಡಲಿಯ ಸದಸ್ಯರೂ, ಶಾಲೆಯ ಮಾಜಿ ರಿಜಿಸ್ಟ್ರಾರ್ ಮತ್ತು ಶಿಕ್ಷಕರೂ ಅಗಿದ್ದ ಆಲ್ಬರ್ಟ್ ಡಿ. ಶ್ರೋಡರ್ ಈ ಪದವಿ ನೀಡುವ ಕಾರ್ಯಕ್ರಮದ ಅಧ್ಯಕ್ಷರಾಗಿದ್ದರು. ಜನಾಂಗಗಳನ್ನು ನಡುಗಿಸುವ ಮತ್ತು ಅಲ್ಲಕಲ್ಲೋಲ ಮಾಡುವ ಈ ಸಮಯದ ಕುರಿತು ಮುಂತಿಳಿಸಿದ ಕೀರ್ತನೆ 2:1, 2 ಮತ್ತು ಇತರ ಪ್ರವಾದನೆಗಳನ್ನು ಅವರು ನೆನಪಿಗೆ ತಂದರು. ಈ ಬಿರಿದ ಸ್ಥಿತಿಗತಿಯಿಂದಾಗಿ ಅನೇಕ ಹೊಸ ಹೊಲಗಳು ಕೊಯ್ಲಿಗಾಗಿ ತೆರೆಯಲ್ಪಟ್ಟಿವೆ.
ದಿನದ ಮೊದಲನೆಯ ಭಾಷಣವು, ಬೆತೆಲ್ ಕಮಿಟಿಯ ಸದಸ್ಯರಾದ ಜಾರ್ಜ್ ಎಮ್. ಕೌಚ್ರಿಂದ ಕೊಡಲ್ಪಟ್ಟಿತು. ಅವರ ಮುಖ್ಯ ವಿಷಯವು, “ನಿಮ್ಮ ಆಶೀರ್ವಾದಗಳನ್ನು ಎಣಿಕೆಗೆ ತನ್ನಿರಿ” ಎಂದಾಗಿತ್ತು. ಈ ಹವ್ಯಾಸವನ್ನು ಪ್ರಾರಂಭಿಸುವುದಕ್ಕೆ ಇದೆಂದೂ ಹೊತ್ತಿಗೆ ಮುಂಚೆಯಲ್ಲವೆಂಬ ಜ್ಞಾಪಕವನ್ನು ಅವರು ಗಿಲ್ಯಾದ್ ವಿದ್ಯಾರ್ಥಿಗಳಿಗೆ ಕೊಟ್ಟರು. ವಿದ್ಯಾರ್ಥಿಗಳು ಸ್ವತಃ ಆಶೀರ್ವದಿಸಲ್ಪಟ್ಟಿದ್ದಾರೆ ಖಂಡಿತ, ಆದರೆ ಈ ಆಶೀರ್ವಾದಗಳು ಅವರ ಪರಿಶ್ರಮದ ಕೆಲಸದ ಅನಂತರವೇ ಬಂದಿವೆ. ತದ್ರೀತಿಯಲ್ಲಿ, 97 ವರ್ಷ-ವಯಸ್ಸಿನ ಯಾಕೋಬನು ಇಡೀ ರಾತ್ರಿ ದೇವದೂತನೊಡನೆ ಹೋರಾಡಿದ್ದನು—ಎಲ್ಲವೂ ಒಂದು ಆಶೀರ್ವಾದವನ್ನು ಪಡೆಯಲೋಸುಗ. (ಆದಿಕಾಂಡ 32:24-32) ನಕಾರಾತ್ಮಕ ವಿಚಾರಗಳಲ್ಲಿ ಮಗ್ನರಾಗದೆ, ಪ್ರಾರ್ಥನೆ ಮತ್ತು ಮನೋನಿರ್ಧಾರದ ಮೂಲಕ ಮನಃಶಾಂತಿಯನ್ನು ಬೆಳೆಸಿಕೊಂಡು ಇತರರಿಗೆ ಆಶೀರ್ವಾದವಾಗಿ ಪರಿಣಮಿಸುವಂತೆ ಅವರು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಆಡಳಿತ ಮಂಡಲಿಯ ಜಾನ್ ಇ. ಬಾರ್, “ನಿಮ್ಮ ನಿಮ್ಮೊಳಗೆ ಪ್ರೀತಿ ಇರಲಿ” ಎಂಬ ವಿಷಯದ ಮೇಲೆ ಮಾತಾಡಿದರು. ಯೇಸುವಿನ ಹಿಂಬಾಲಕರು ಒಬ್ಬರಿಗೋಸ್ಕರ ಒಬ್ಬರು ಸಾಯಲಿಕ್ಕೂ ಸಿದ್ಧರಾಗಿದ್ದರು. “ಇಂಥ ಪ್ರೀತಿಯು ನಿಮ್ಮ ಹೃದಯದಲ್ಲಿ ಹೊರಹುಮ್ಮುತ್ತಿರುವ ಅನಿಸಿಕೆ ನಿಮಗಾಗುತ್ತದೋ?” ಎಂದರವರು ವಿದ್ಯಾರ್ಥಿಗಳಿಗೆ. ‘ಈ ಪ್ರೀತಿಯ ಹೊರತು’ ಅವರಂದದ್ದು, ‘ನಾವು ಏನೂ ಅಲ್ಲ. ಅದು ಅಷ್ಟು ಸರಳ ಸತ್ಯ.’ (1 ಕೊರಿಂಥ 13:3) ಪ್ರೀತಿಯನ್ನು ತೋರಿಸುವ ಕೆಲವು ವ್ಯಾವಹಾರ್ಯ ವಿಧಾನಗಳನ್ನು ಸಹೋದರ ಬಾರ್ರು ತಿಳಿಸಿದರು. ಜೊತೆ ಮಿಶನೆರಿಗಳನ್ನು ಆದರದಿಂದ ಉಪಚರಿಸುವಂತೆ, ವಿಷಯಗಳನ್ನು ತಿಳಿಸುವ ಜಾಣ ವಿಧಾನಗಳನ್ನು ಹುಡುಕುವಂತೆ ಅವರು ವಿದ್ಯಾರ್ಥಿಗಳಿಗೆ ಉತ್ತೇಜನ ಕೊಟ್ಟರು. ‘ಅಲ್ಪವಾದ ಒಪ್ಪುತಪ್ಪುಗಳನ್ನು ದುರ್ಲಕ್ಷಿಸಿರಿ,’ ಎಂದವರು 1 ಪೇತ್ರ 4:8ನ್ನು ಉಲ್ಲೇಖಿಸುತ್ತಾ ಸಲಹೆ ಕೊಟ್ಟರು. ಮಿಶನೆರಿಗಳ ಅಡಿಗೆ ಮಾಡುವ ದಿನಗಳು ಸಹಾ ಆ ಪ್ರೀತಿ ತೋರಿಸುವ ಸಂದರ್ಭಗಳಾಗಿರಬಲ್ಲವು ಹೇಗಂದರೆ ಆ ಕೆಲಸವನ್ನು ಮಾಡಬೇಕೆಂದು ಮಾಡುವ ಕೆಲಸಕ್ಕಿಂತ ಹೆಚ್ಚಿನದ್ದಾಗಿ ನೋಡುವ ಮೂಲಕವಾಗಿ. ವಿದ್ಯಾರ್ಥಿಗಳಿಗೆ ಅವರು ನೆನಪಿಸಿದ್ದು: “ನಮ್ಮ ಸಹೋದರ ಮತ್ತು ಸಹೋದರಿಯರನ್ನು ಪ್ರೀತಿಸುವ ನಮ್ಮ ಸಾಲವು ಎಂದೂ ತೀರದು.”—ರೋಮಾಪುರ 13:8.
“ನೀವು ಎಷ್ಟು ಆತ್ಮವಿಶ್ವಾಸವುಳ್ಳವರು?” ಎಂಬದು ಸರ್ವಿಸ್ ವಿಭಾಗ ಕಮಿಟಿಯ ಡೇವಿಡ್ ಎ. ಓಲ್ಸನ್ ವಿಕಾಸಿಸಿದ ಇನ್ನೊಂದು ರಸಕರ ವಿಷಯ. ಆತ್ಮ ವಿಶ್ವಾಸದ ಎರಡು ಕ್ಷೇತ್ರಗಳನ್ನು ಅವರು ಎತ್ತಿಹೇಳಿದರು: ಯೆಹೋವನಲ್ಲಿ ಮತ್ತು ಆತನ ಸಂಸ್ಥೆಯಲ್ಲಿ, ಅದಕ್ಕೆ ನಮಗೆ ಅಸಂಖ್ಯಾತ ಕಾರಣಗಳಿವೆ (ಜ್ಞಾನೋಕ್ತಿ 14:6; ಯೆರೆಮೀಯ 17:8); ಮತ್ತು ನಮ್ಮಲ್ಲಿ. ಮಿಶನೆರಿಗಳಲ್ಲಿ ಆತ್ಮವಿಶ್ವಾಸದ ಅಂಶವು ಇರುವುದಕ್ಕೆ ಸಕಾರಣವದೆ ಏನಂದರೆ ಶುಶ್ರೂಷಕರಾಗಿರುವ ಅವರ ಹಿನ್ನೆಲೆ ಮತ್ತು ಯೆಹೋವನು ಮತ್ತು ಆತನ ಸಂಸ್ಥೆಯು ಅವರ ಮೇಲಿಟ್ಟಿರುವ ಹೊಣೆ. ತದ್ರೀತಿಯ ಕಾರಣಗಳಿಗಾಗಿ ಅಪೊಸ್ತಲ ಪೌಲನು ಅಂಥ ಆತ್ಮವಿಶ್ವಾಸವನ್ನು ತೋರಿಸಿದ್ದನು. (1 ಕೊರಿಂಥ 16:13; ಫಿಲಿಪ್ಪಿಯ 4:13) ಲೋಕವು ಪ್ರವರ್ಧಿಸುವ ಅತಿರೇಕ ಆತ್ಮವಿಶ್ವಾಸದ ವಿರುದ್ಧವಾದರೊ ಸಹೋದರ ಓಲ್ಸನ್ ಎಚ್ಚರಿಕೆ ನೀಡುತ್ತಾ, ಒಬ್ಬ ಪ್ರಖ್ಯಾತ ಲೇಖಕನು ಹೀಗಂದನೆಂದು ಉದಾಹರಣೆ ಕೊಟ್ಟರು. “ನಾನು ನನ್ನನ್ನೇ ಉಲ್ಲೇಖಿಸಿಕೊಳ್ಳುತ್ತೇನೆ. ಅದು ನನ್ನ ಸಂಭಾಷಣೆಯ ರುಚಿಯನ್ನು ಹೆಚ್ಚಿಸುತ್ತದೆ.” ಆದರೂ, ದೀನತೆಯೊಂದಿಗೆ ಸಮತೆಯಲ್ಲಿರುವ ಆತ್ಮವಿಶ್ವಾಸವು ಬೇರೆಯವರ ಆತ್ಮವಿಶ್ವಾಸವನ್ನು ಪ್ರೇರೇಪಿಸುವುದು. ಪೌಲನ ವಿಷಯದಲ್ಲಿ ಹಾಗಿದ್ದದ್ದು ಖಂಡಿತ.—ಫಿಲಿಪ್ಪಿಯ 1:12-14.
ಆಡಳಿತ ಮಂಡಲಿಯ ಲೈಮನ್ ಎ. ಸ್ವಿಂಗ್ಲ್ ಅನಂತರ ವಿದ್ಯಾರ್ಥಿಗಳಿಗೆ ಬುದ್ಧಿವಾದ ನೀಡಿದರು: “ಗಿಲ್ಯಾದ್ ಪದವೀಧರರೇ, ಹೋಗಿರಿ, ಕೊಯ್ಲಿನ ಹೊಲಕ್ಕೆ!” ಇದು ಗಿಲ್ಯಾದ್ ಶಾಲೆಗೆ ಮತ್ತು ವಿಶ್ವವ್ಯಾಪ್ತ ಸಹೋದರತ್ವಕ್ಕೆ ಕೊಯ್ಲಿನ ದಿನವಾಗಿದೆ ಎಂದರವರು ಯಾಕೆಂದರೆ ಪದವೀಧರರು ಹೊರಟುಹೋಗಿ ಇನ್ನೂ ಮಿಶನೆರಿ ಸೇವೆಯಲ್ಲಿರುವ ಸಾವಿರಾರು ಮಂದಿ ಹಿಂದಣ ಪದವೀಧರರನ್ನು—ಅವರಲ್ಲಿ 1940ರ ವರ್ಷದ ಒಂದನೆಯ, ಎರಡನೆಯ ಮತ್ತು ಮೂರನೆಯ ಕ್ಲಾಸ್ನ ಕೆಲವರನ್ನೂ—ಜತೆಗೂಡಲಿರುವರು! ಆಗಿನ ಕಾಲದಲ್ಲಿ ಮಿಶನೆರಿ ಕಾರ್ಯವು ಇನ್ನು 50 ವರ್ಷಕಾಲ ಮುಂದರಿಯುವುದೆಂದಾಗಲಿ, ಅಥವಾ ಸಾರುವ ಕಾರ್ಯಕ್ಕೆ ಪ್ರತಿಬಂಧಕವಾಗಿದ್ದ ನಾಝೀಸಮ್, ಫ್ಯಾಷಿಸಮ್ ಮತ್ತು ಇತರ ಸರಕಾರಿಕ ಆಡಳಿತಗಳು ಮುಗ್ಗರಿಸುವದೆಂದಾಗಲಿ ಯಾರಿಗೂ ಗೊತ್ತಿರಲಿಲ್ಲ. “ಪೂರ್ವದಲ್ಲಿ ಯೆಹೋವನು ಮಾಡಿರುವ ಕಾರ್ಯದಿಂದ ನಾವು ಭಯಚಕಿತರಾಗಿದ್ದರೆ,” ಅವರಂದದ್ದು, “ಭವಿಷ್ಯದ ಕುರಿತೇನು?” “ಹೋಗಿರಿ, ಹೊಲಕ್ಕೆ,“ ಎಂಬ ಹುರಿದುಂಬಿಸುವ ಕರೆಯೊಂದಿಗೆ ಅವರು ಸಮಾಪ್ತಿಗೊಳಿಸಿದರು.
ಅನಂತರ ಗಿಲ್ಯಾದ್ ಶಾಲೆಯ ಇಬ್ಬರು ಪ್ರಧಾನ ಶಿಕ್ಷಕರು, 91ನೆಯ ಕ್ಲಾಸ್ನ್ನು ಕೊನೆಯದಾಗಿ ಉದ್ದೇಶಿಸಿ ಮಾತಾಡಿದರು. ಜಾಕ್ ಡಿ. ರೆಡ್ಫರ್ಡರು “ವಿವೇಕವನ್ನು ಗಳಿಸಿರಿ” ಎಂಬ ವಿಷಯದ ಮೇಲೆ ಮಾತಾಡಿದರು. ಗಿಲ್ಯಾದ್ ಶಾಲೆಯು, ಅವರು ವಿದ್ಯಾರ್ಥಿಗಳಿಗೆ ಹೇಳಿದ್ದು, ಜ್ಞಾನ ಮತ್ತು ತಿಳುವಳಿಕೆಯನ್ನು ಕಲಿಸುತ್ತದೆ, ಅದರೆ ಅವರು ವಿವೇಕವನ್ನು, ಜ್ಞಾನವನ್ನು ಯೋಗ್ಯ ರೀತಿಯಲ್ಲಿ ಉಪಯೋಗಿಸುವ ಸಾಮರ್ಥ್ಯವನ್ನು ಗಳಿಸಬೇಕು. ತಾವು ಕಲಿಯಲಿಕ್ಕಿದ್ದ ಎಲ್ಲವನ್ನು ಗಿಲ್ಯಾದಿನಲ್ಲಿ ಕಲಿತಿದ್ದೇವೆಂಬ ಮಿಥ್ಯೆಯನ್ನು ತಿರಸ್ಕರಿಸುವಂತೆ ವಿದ್ಯಾರ್ಥಿಗಳನ್ನು ಅವರು ಪ್ರೇರಿಸಿದರು. “ಈ ವರ್ಗದ ಅನಂತರ ಅವರೇನನ್ನು ಕಲಿಯುತ್ತಾರೋ ಅದು ಮಹತ್ವದ್ದು.” ಅವರು ಕಲಿಯಲೇ ಬೇಕಾದ ವಿಷಯಗಳಲ್ಲಿ: ಜನರೊಂದಿಗೆ ಸಮಾಧಾನದಿಂದ ವ್ಯವಹರಿಸುವಿಕೆ, ತಮ್ಮ ವೈವಾಹಿಕ ಜೊತೆಗೆ, ಜತೆ ಮಿಶನೆರಿಗಳಿಗೆ, ಮತ್ತು ಸ್ಥಳೀಕ ಸಹೋದರ ಮತ್ತು ಸಹೋದರಿಯರಿಗೆ, “ತಪ್ಪಾಯಿತು, ಕ್ಷಮಿಸಿ” ಎಂದು ಹೇಳಶಕ್ತರಾಗುವುದು, ಮೊದಲ ಭಾವನೆಗಳನ್ನು ನಂಬುವ ವಿಷಯದಲ್ಲಿ ಮತ್ತು ಪ್ರತಿಯೊಂದು ಸಮಸ್ಯೆಯೂ ಜಟಿಲವಾದದ್ದು ಆದ್ದರಿಂದ ಸುಜ್ಞ ಸೂಚನೆ ಕೊಡುವ ಮೊದಲು ಪರಿಸ್ಥಿತಿಗಳ ಆಳವಾದ ತಿಳುವಳಿಕೆ ಬೇಕೆನ್ನುವ ವಿಷಯದಲ್ಲಿ ದಕ್ಷತೆ; ಮತ್ತು ಕಷ್ಟದ ಪರಿಸ್ಥಿತಿಗಳಲ್ಲಿ ಸ್ಥಳೀಕ ಸಹೋದರರ ಕಾರ್ಯನಿರ್ವಾಹಕ ಸಾಮರ್ಥ್ಯಕ್ಕೆ ಗೌರವವೇ ಮುಂತಾದವುಗಳು.—ಜ್ಞಾನೋಕ್ತಿ 15:28; 16:23; ಯಾಕೋಬ 1:19.
ಯುಲೈಝಸ್ ವಿ. ಗ್ಲಾಸ್, ಗಿಲ್ಯಾದ್ ಶಾಲೆಯ ರಿಜಿಸ್ಟ್ರಾರರು, ಫಿಲಿಪ್ಪಿಯ 3:16ನ್ನು ತನ್ನ ಭಾಷಣದ ಮುಖ್ಯ ತಿರುಳಾಗಿ ಇಟ್ಟರು. ಮಾಡಿದ ಪ್ರಗತಿಗಾಗಿ ಆ ವರ್ಗವನ್ನು ಅವರು ಪ್ರಶಂಸಿಸಿದರು ಮತ್ತು ಆ ವಚನಕ್ಕೆ ಹೊಂದಿಕೆಯಲ್ಲಿ ಮುಂದೆ ಸಾಗುವಂತೆ ಪ್ರಚೋದಿಸಿದರು. ವಿದ್ಯಾರ್ಥಿಗಳು ನಿಷ್ಕೃಷ್ಟ ಜ್ಞಾನವನ್ನು ಗಳಿಸುತ್ತಾ ಮುಂದರಿಯಬೇಕಾದರೂ, ಅವರು ಗಮನಿಸಿದ್ದು, ಎಲ್ಲವನ್ನೂ ತಿಳಿದವರು ಅವರಾಗರು. ಆ ವಿಷಯವನ್ನು ಒಂದು ಅಂಕಿ ಗಡಿಯಾರಕ್ಕೆ ಅವರು ದೃಷ್ಟಾಂತಿಸಿದರು. ಅದರ ಒಡೆಯನು ಅದು ಕಾರ್ಯಥಃ ಹೇಗೆ ಕಾರ್ಯನಡಿಸುತ್ತದೆಂದು ತಿಳಿಯದಿದ್ದರೂ ಅದನ್ನು ಚಲಾಯಿಸಶಕ್ತನು. ತದ್ರೀತಿಯಲ್ಲಿ ಮಿಶನೆರಿಗಳು, ತಮ್ಮಷ್ಟು ಸರಿಸಮಾನದ ಆಳ ಜ್ಞಾನವಿಲ್ಲದಿದ್ದರೂ ಯಾವುದು ಮಹತ್ವವೊ ಅದನ್ನು—ಅಂದರೆ ಯೆಹೋವನ ಭಯದಲ್ಲಿ ನಡೆಯುವದು ಹೇಗೆಂದು ತಿಳಿದಿರುವ ಬೇರೆಯವರನ್ನು ಅಲ್ಪರೆಂದು ಭಾವಿಸಬಾರದು. (ಜ್ಞಾನೋಕ್ತಿ 1:7) ಒಂದು ‘ಸರಳ ನೇತ್ರ’ವನ್ನಿಡುವ ಮಹತ್ವವನ್ನು ಅವರು ವರ್ಗಕ್ಕೆ ನೆನಪಿಸಿದರು. (ಮತ್ತಾಯ 6:22) ದೈಹಿಕ ನೇತ್ರಕ್ಕೆ ಹೇಗೋ ಹಾಗೆ ಆತ್ಮಿಕ ನೇತ್ರಕ್ಕೂ ತೊಡಕು ಬರಬಹುದು. ದೃಷ್ಟಾಂತಕ್ಕಾಗಿ, ಕೆಲವರು ಇಡೀ ಚಿತ್ರವನ್ನು ನೋಡಲು ಕೆಲವು ವಿವರಣೆಗಳ ಮೇಲೆ ತೀರಾ ಹೆಚ್ಚಾದ ದೃಷ್ಟಿಯನ್ನು ಕೇಂದ್ರೀಕರಿಸುವಾಗ, ಬೇರೆ ಕೆಲವರಾದರೊ ಕೇವಲ ಮೇಲ್ಮೈಯನ್ನು ಮಾತ್ರ ನೋಡುತ್ತಾರೆ ಮತ್ತು ಗಮನಿಸತಕ್ಕ ಪ್ರಧಾನ ವಿಷಯಗಳಿಂದ ಸದಾ ದೂರ ತೆರಳುತ್ತಾರೆ.
ಬೆಳಿಗ್ಗಿನ ಕೊನೆಯ ಭಾಷಣವಾದ “ಯೆಹೋವನ ಸಂಸ್ಥೆಯನ್ನು ಗುರುತಿಸುವುದು ಮತ್ತು ಅದರೊಂದಿಗೆ ಕಾರ್ಯನಡಿಸುವುದು” ಎಂಬದು ಆಡಳಿತ ಮಂಡಲಿಯ ಥಿಯೊಡರ್ ಜಾರಸ್ರಿಂದ ಕೊಡಲ್ಪಟ್ಟಿತು. ಲೋಕದಲ್ಲಿ ಸಾವಿರಾರು ಸಂಸ್ಥೆಗಳು ಮತ್ತು ಸಮಾಜಗಳು ಇದ್ದರೂ, ಅವುಗಳಲ್ಲಿ ಈ ಲೋಕದ ಮೂಲವಲ್ಲದ್ದು ಒಂದು ಮಾತವೇ. ಯೆಹೋವನನ್ನು ಪ್ರತಿನಿಧಿಸುವಂಥ ಆ ಸಮಾಜವನ್ನು ನಾವು ಗುರುತಿಸುವುದು ಹೇಗೆ? ದೇವರ ವಾಕ್ಯವು ಆ ಗುರುತಿಸುವ ಚಿಹ್ನೆಗಳನ್ನು ಕೊಡುತ್ತದೆ. ಆತನ ಸ್ವರ್ಗೀಯ ಸೃಷ್ಟಿಯು ಉಚ್ಛತಮ ಸಂಸ್ಥಾಪನೆಯಿಂದ ಕೂಡಿದೆ ಎಂದು ಬೈಬಲ್ ಹೇಳುತ್ತದೆ. (ಕೀರ್ತನೆ 103:20, 21; ಯೆಶಾಯ 40:26) ಯೆಹೋವನ ಐಹಿಕ ಸಂಸ್ಥೆಯು ಸಹಾ ಅದರ ಕ್ರಮಬದ್ಧತೆ ಹಾಗೂ ಲೋಕದಿಂದ ಪ್ರತ್ಯೇಕತೆ ಇಡುವ ಮೂಲಕ, ಬೈಬಲ್ ತತ್ವಗಳ ಕಟ್ಟುನಿಟ್ಟಿನ ಅವಲಂಬನೆ, ಉಚ್ಛತಮ ನೈತಿಕ ಶುದ್ಧತೆ ಮತ್ತು ಅದರ ಸದಸ್ಯರೊಳಗೆ ಪರಸ್ಪರ ಪ್ರೀತಿ ಇವುಗಳಿಂದ ಗುರುತಿಸಲ್ಪಡುತ್ತದೆ. ಗಿಲ್ಯಾದ್ ವಿದ್ಯಾರ್ಥಿಗಳು ತಮ್ಮ ನೇಮಕದಲ್ಲಿ, ಆದಷ್ಟು ಹೆಚ್ಚು ಜನರಿಗೆ ಯೆಹೋವನ ಸಂಸ್ಥೆಯ ಶಾಸ್ತ್ರೀಯ ಪರಿಚಯವನ್ನು ಕೊಡುವಂತೆ ಸಹೋದರ ಜಾರಸ್ ಉತ್ತೇಜಿಸಿದರು. ಆ ಸಂಬಂಧದಲ್ಲಿ ಅವರೊಂದು ರೋಮಾಂಚಕ ಪ್ರಕಟನೆಯನ್ನು ಮಾಡಿದರು: ಗಿಲ್ಯಾದ್ ಶಾಲೆಯ ಗಾತ್ರ ಬೇಗನೆ ಇಮ್ಮಡಿಯಾಗಲಿದೆ, ಸುಮಾರು 50 ವಿದ್ಯಾರ್ಥಿಗಳು 93ನೆಯ ಕ್ಲಾಸ್ನಲ್ಲಿ! ಅಲ್ಲದೆ, ಗಿಲ್ಯಡ್ ಎಕ್ಸ್ಟೆನ್ಶನ್ ಸ್ಕೂಲ್ ಇದೇ ಸಮಯದ ಸುಮಾರಿಗೆ ಜರ್ಮನಿಯಲ್ಲಿ ಪ್ರಾರಂಭಿಸುವುದು. ಗಟ್ಟಿ ಮತ್ತು ದೀರ್ಘ ಕರತಾಡನದಿಂದ ಮೆಚ್ಚಿಗೆ ಸೂಚಿಸಲ್ಪಟ್ಟಿತು!
ಬೆಳಗಾತದ ಪರಮಾವಧಿಯಾಗಿ, ಗಿಲ್ಯಾದ್ ವಿದ್ಯಾರ್ಥಿಗಳಲ್ಲಿ ಎಲ್ಲಾ 24 ಮಂದಿಗೆ ಡಿಪ್ಲೊಮಗಳು ಕೊಡಲ್ಪಟ್ಟವು. ಶೀಘ್ರದಲ್ಲೇ ಅವರು ಭೂಸುತ್ತಲಿನ 12 ವಿವಿಧ ದೇಶಗಳ ದಾರಿ ಹಿಡಿಯಲಿರುವರು. ವರ್ಗವು ಒಂದು ಹೃತ್ಪೂರ್ವಕವಾದ ನಿರ್ಧಾರವನ್ನು ಸಾದರಪಡಿಸಿ, ಆಡಳಿತ ಮಂಡಲಿಗೆ ಮತ್ತು ಬೆತೆಲ್ ಕುಟುಂಬಕ್ಕೆ ಉಪಕಾರ ವ್ಯಕ್ತಪಡಿಸಿತು. ಮಧ್ಯಾಹ್ನದೂಟದ ನಂತರ, ವಾಚ್ಟವರ್ ಫಾರ್ಮ್ಸ್ ಕಮಿಟಿಯ ಸಹೋದರ ಚಾರ್ಲ್ಸ್ ಜೆ. ರೈಸ್ ಒಂದು ಸಂಕ್ಷೇಪಿತ ಕಾವಲಿನಬುರುಜು ಅಭ್ಯಾಸವನ್ನು ನಡಿಸಿದರು. ಅನಂತರ ಪದವೀಧರರು, ವಾಲ್ಕಿಲ್ಲ್, ನ್ಯೂ ಯೊರ್ಕ್ನ ಐದು ತಿಂಗಳ ಅಧ್ಯಯನ ಅವಧಿಯಲ್ಲಿ ಕ್ಷೇತ್ರಸೇವೆಯಲ್ಲಿ ದೊರೆತ ಕೆಲವು ಅನುಭವಗಳ ಸಜೀವ ಅಭಿನಯ ಕಾರ್ಯಕ್ರಮವನ್ನು ತೋರಿಸಿದರು. ಅದರನಂತರ, ಹಲವಾರು ಸ್ಥಳೀಕ ಸಭೆಗಳನ್ನು ಪ್ರತಿನಿಧಿಸಿದ ಪ್ರಚಾರಕರು, ತಮ್ಮ ಸೃಷ್ಟಿಕರ್ತನನ್ನು ಈಗಲೇ ಸ್ಮರಿಸುವ ಯುವಜನರು ಎಂಬ ಡ್ರಾಮವನ್ನು ನೀಡಿದರು.
ಕಾರ್ಯಕ್ರಮದ ಅಂತ್ಯದಲ್ಲಿ, ಆಡಳಿತ ಮಂಡಲಿಯ 95 ವರ್ಷ-ವಯಸ್ಸಿನ ಸದಸ್ಯರಾದ ಸಹೋದರ ಜಾರ್ಜ್ ಗ್ಯಾಂಗಸ್, ಯೆಹೋವನಿಗೆ ಒಂದು ವೈಶಿಷ್ಟ್ಯಪೂರ್ಣವಾದ ಸಚೇತಕ ಪ್ರಾರ್ಥನೆಯನ್ನು ಸಲ್ಲಿಸಿದರು. ಸಭಿಕರಲ್ಲಿ ಪ್ರತಿಯೊಬ್ಬರು ವಿಶ್ವ-ವ್ಯಾಪಕ ಕೊಯ್ಲಿನ ಕೆಲಸದಲ್ಲಿ ಇನ್ನೂ ಹೆಚ್ಚಿನ ಪಾಲನ್ನು ವಹಿಸಲು ನಿಸ್ಸಂದೇಹವಾಗಿ ಪ್ರೇರಿಸಲ್ಪಟ್ಟು, ಉಚ್ಛ ಹುರುಪಿನಿಂದ ಕೂಡಿದವರಾಗಿ ಬೀಳ್ಕೊಟ್ಟರು. (w91 12/1)
[ಪುಟ 22 ರಲ್ಲಿರುವ ಚೌಕ]
ವರ್ಗದ ಸಂಖ್ಯಾಸಂಗ್ರಹಣ
ಪ್ರತಿನಿಧಿಸಲ್ಪಟ್ಟ ದೇಶಗಳ ಸಂಖ್ಯೆ: 6
ನೇಮಕಗೊಂಡ ದೇಶಗಳ ಸಂಖ್ಯೆ: 12
ವಿದ್ಯಾರ್ಥಿಗಳ ಸಂಖ್ಯೆ: 24
ವಿವಾಹಿತ ದಂಪತಿಗಳು: 12
ಸರಾಸರಿ ವಯಸ್ಸು: 33.4
ಸತ್ಯದಲ್ಲಿ ಸರಾಸರಿ ವರ್ಷಗಳು: 16.13
ಪೂರ್ಣ ಸಮಯ ಶುಶ್ರೂಷೆಯಲ್ಲಿ ಸರಾಸರಿ ವರ್ಷಗಳು: 11.3
[ಪುಟ 23 ರಲ್ಲಿರುವ ಚಿತ್ರ]
ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾದಿನ ಪದವಿ ಪಡೆದ 91ನೆಯ ಕ್ಲಾಸ್
ಕೆಳಗಿನ ಪಟ್ಟಿಯಲ್ಲಿ, ಸಾಲುಗಳನ್ನು ಮುಂದಿನಿಂದ ಹಿಂದಕ್ಕೆ ಲೆಕ್ಕಿಸಲಾಗುತ್ತದೆ ಮತ್ತು ಹೆಸರುಗಳು ಪ್ರತಿ ಸಾಲಿನಲ್ಲಿ ಎಡದಿಂದ ಬಲಕ್ಕೆ ಪಟ್ಟಿಮಾಡಲ್ಪಟ್ಟಿವೆ.
(1) ಮಕ್ಡಾವಲ್ ಎ; ಯಂಕ್ವಿಸ್ಟ್ ಎಲ್; ಸ್ಕಾಕನ್ ಬಿ; ವಾರ್ನಿಯ ಎನ್; ಮಿಲರ್ ವೈ; ಮ್ಯುನೊಸ್ ಎಮ್. (2) ಬೇಲ್ಚ್ ಎಮ್; ಪೆರಸ್ ಡಿ; ಏಟಿಕ್ ಇ; ವಿನೈಕಿನನ್ ಎ; ಮೊಸ್ಟ್ಬರ್ಗ್ ಕೆ; (3) ಡಾಪ್ರಸ್ಟ್ ಡಿ; ಡಾಪ್ರಸ್ಟ್ ಟಿ; ಪೆರಸ್ ಆರ್; ವಾರ್ನಿಯ ಜೆ; ಮ್ಯುನೊಸ್ ಜೆ. ಮಿಲರ್ ಜೆ. (4) ಮಕ್ಡಾವಲ್ ಎಸ್; ಬೇಲ್ಚ್ ಡಿ; ಸ್ಕಾಕನ್ ಎಮ್; ಏಟಿಕ್ ಸಿ; ಯಂಕ್ವಿಸ್ಟ್ ಡಬ್ಲ್ಯೂ; ವಿನೈಕಿನನ್ ಜೆ; ಮೊಸ್ಟ್ಬರ್ಗ್ ಎಸ್.