ವಿವಾಹದಲ್ಲಿ ಅಧೀನತೆಯ ಅರ್ಥವೇನು?
ಒಬ್ಬಾಕೆ ಕ್ರೈಸ್ತ ಸ್ತ್ರೀಯು ವಿವಾಹವಾಗುವಾಗ ಆಕೆಗೆ ಅನೇಕ ಅಳವಡಿಸುವಿಕೆಗಳನ್ನು ಮಾಡಲಿಕ್ಕದೆ. ಪ್ರಾಯಶಃ ಇವುಗಳಲ್ಲಿ ಮಹತ್ವದ್ದು ಅವಳ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವಂಥಾದ್ದು. ಒಂಟಿಗ ಪ್ರೌಢಳಾಗಿರುವಾಗ ಆಕೆ ತನ್ನ ಅನೇಕ ಸ್ವಂತ ನಿರ್ಣಯಗಳನ್ನು ಯಾರನ್ನೂ ಸಂಪರ್ಕಿಸದೆ ಮಾಡಶಕ್ತಳಾಗಿದ್ದಳು. ಆದರೆ ಅವಳಿಗೀಗ ಒಬ್ಬ ಗಂಡನು ಇರುವುದರಿಂದ, ಅವಳು ಅವನನ್ನು ಸಂಪರ್ಕಿಸುವ ಮತ್ತು ತನಗಾಗಿ ತಾನೆ ನಿರ್ಣಯಿಸುತ್ತಿದ್ದ ಅನೇಕ ವಿಷಯಗಳಲ್ಲಿ ಅವನ ಅನುಮತಿಯನ್ನು ಕೇಳುವ ಹಂಗಿನವಳಾಗುತ್ತಾಳೆ. ಅದು ಹಾಗೆ ಏಕೆ?
ಯಾಕಂದರೆ ಮಾನವಕುಲದ ನಿರ್ಮಾಣಿಕನು ಮೊದಲನೆ ಸ್ತ್ರೀಯನ್ನು ಮೊದಲನೆ ಪುರುಷನಿಗೆ ಹೆಂಡತಿಯಾಗಿ ಕೊಟ್ಟಾಗ, ಅವನು ಪುರುಷನನ್ನು ಅವನ ಪತ್ನಿಯ ಮತ್ತು ಭವಿಷ್ಯದ ಮಕ್ಕಳ ತಲೆಯಾಗಿ ನೇಮಿಸಿದನು. ಇದು ಕೇವಲ ನ್ಯಾಯಸಮ್ಮತವಾಗಿತ್ತು. ಯಾವುದೆ ಸಂಸ್ಥಾಪಿತ ಜನರ ಗುಂಪಿನಲ್ಲಿ, ಯಾರಾದರೊಬ್ಬನು ನಾಯಕತ್ವವನ್ನು ವಹಿಸಲೆಬೇಕು ಮತ್ತು ಕೊನೆಯ ನಿರ್ಣಯವನ್ನು ಮಾಡಬೇಕು. ಮದುವೆಯ ವಿಷಯದಲ್ಲಾದರೊ, “ಗಂಡನು ಹೆಂಡತಿಗೆ ತಲೆಯಾಗಿದ್ದಾನೆ” ಎಂಬದನ್ನು ದೇವರು ವಿಧಿಸಿದನು.—ಎಫೆಸ 5:23.
ಇದಕ್ಕೆ ಬೆಂಬಲದಲ್ಲಿ ದೈವಿಕ ಸೂಚನೆಯು ಹೇಳುವುದು: “ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನವಾಗಿರಿ.” (ಎಫೆಸ 5:22) ಪತ್ನಿಯು ಈ ಏರ್ಪಾಡಿನಿಂದ ಹೇಗೆ ಪ್ರಭಾವಿತಳೆಂಬದು ಎರಡು ವಿಷಯಗಳ ಮೇಲೆ ಹೊಂದಿಕೊಂಡಿದೆ: ಮೊದಲನೆಯದು, ಈ ಏರ್ಪಾಡಿಗೆ ಅಧೀನಳಾಗಿರಲು ಆಕೆಯೆಷ್ಟು ಸಿದ್ಧಮನಸ್ಕಳು? ಮತ್ತು ಎರಡನೆಯದು, ಗಂಡನು ತನ್ನ ಅಧಿಕಾರವನ್ನು ಎಷ್ಟು ಚೆನ್ನಾಗಿ ನಿರ್ವಹಿಸುತ್ತಾನೆ? ಸತ್ಯದಲ್ಲಿ, ವಿವಾಹದ ಜತೆಗಾರರಿಬ್ಬರೂ ಈ ಏರ್ಪಾಡನ್ನು ಯೋಗ್ಯವಾಗಿ ವೀಕ್ಷಿಸುವಾಗ, ಅದು ಪತ್ನಿಗೆ, ಗಂಡನಿಗೆ ಮತ್ತು ಅವರ ಮಕ್ಕಳಿಗೆ ಆಶೀರ್ವಾದವಾಗಿ ಪರಿಣಮಿಸುವುದನ್ನು ಕಾಣುತ್ತಾರೆ.
ಸರ್ವಾಧಿಕಾರಿಯಲ್ಲ
ಗಂಡನು ತನ್ನ ಅಧಿಕಾರವನ್ನು ಹೇಗೆ ನಡಿಸಬೇಕು? ದೇವಕುಮಾರನ ಉತ್ತಮ ಮಾದರಿಯನ್ನು ಅನುಕರಿಸುವ ಮೂಲಕವೆ. ಬೈಬಲ್ ಅನ್ನುವದು: “ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೆ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ. ಕ್ರಿಸ್ತನೋ ಸಭೆಯೆಂಬ ದೇಹಕ್ಕೆ ರಕ್ಷಕನಾಗಿದ್ದಾನೆ. ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರ ನಿಮ್ಮ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. ಆತನು ಅದನ್ನು ಪ್ರತಿಷ್ಠೆಪಡಿಸುವದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟನು.” (ಎಫೆಸ 5:23, 25) ಯೇಸು ಕ್ರಿಸ್ತನ ತಲೆತನದ ನಿರ್ವಹಣೆಯು ಸಭೆಗೆ ಆಶೀರ್ವಾದಕರವಾಗಿತ್ತು. ಆತನು ದಬ್ಬಾಳಿಕೆ ನಡಿಸುವಾತನಾಗಿರಲಿಲ್ಲ. ಅವನು ತನ್ನ ಶಿಷ್ಯರನ್ನು ನಿರ್ಬಂಧಪಡಿಸಲಿಲ್ಲ ಮತ್ತು ಅದುಮಿ ಹಿಡಿಯಲಿಲ್ಲ. ಬದಲಾಗಿ ತನ್ನ ಪ್ರೀತಿಯುಳ್ಳ ಕರುಣಾಮಯ ಉಪಚಾರದಿಂದ ಅವನು ಎಲ್ಲರ ಗೌರವವನ್ನು ಗಳಿಸಿದ್ದನು. ತಮ್ಮ ಪತ್ನಿಯರನ್ನು ಉಪಚರಿಸುವುದರಲ್ಲಿ ಗಂಡಂದಿರಿಗೆ ಹಿಂಬಾಲಿಸಲು ಎಂಥ ಉತ್ತಮ ಮಾದರಿಯು!
ಆದರೆ ಈ ಉತ್ತಮ ಮಾದರಿಯನ್ನು ಪಾಲಿಸದೆ ಇರುವ ಗಂಡಂದಿರು ಇದ್ದಾರೆ. ಅವರು ತಮ್ಮ ದೇವ-ದತ್ತ ಅಧಿಕಾರವನ್ನು ತಮ್ಮ ಹೆಂಡತಿಯರ ಹಿತಕ್ಕೆ ಬದಲಾಗಿ ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸುತ್ತಾರೆ. ಅವರು ನಿರಂಕುಶ ಅಧಿಕಾರದಿಂದ ತಮ್ಮ ಪತ್ನಿಯರ ಮೇಲೆ ದೊರೆತನ ನಡಸುತ್ತಾರೆ, ಸಂಪೂರ್ಣ ಅಧೀನತೆಯನ್ನು ಬಲಾತ್ಕಾರದಿಂದ ಕೇಳುತ್ತಾರೆ, ತಮಗಾಗಿ ಯಾವೊಂದು ನಿರ್ಣಯವನ್ನೂ ಮಾಡುವ ಅನುಮತಿಯನ್ನು ಅವರಿಗೆ ಕೊಡುವುದಿಲ್ಲ. ಅಂಥ ಗಂಡಂದಿರ ಪತ್ನಿಯರು ಹೆಚ್ಚಾಗಿ ಒಂದು ಅಸಂತೋಷ ಜೀವಿತವನ್ನು ನಡಿಸುತ್ತಾರೆಂಬದು ಗ್ರಹಣೀಯವು. ಮತ್ತು ಅಂಥ ಗಂಡನು ಸಹಾ ಬಾಧಿತನು ಯಾಕಂದರೆ ತನ್ನ ಪತ್ನಿಯ ಪ್ರೀತಿಯುಳ್ಳ ಗೌರವವನ್ನು ಗಳಿಸಲು ಅವನು ತಪ್ಪುತ್ತಾನೆ.
ಕುಟುಂಬದ ತಲೆಯೋಪಾದಿ ಗಂಡನಿಗಿರುವ ಸ್ಥಾನವನ್ನು ಹೆಂಡತಿಯು ಗೌರವಿಸುವಂತೆ ದೇವರು ಅಪೇಕ್ಷಿಸುತ್ತಾನೆ ನಿಜ. ಆದರೆ ವ್ಯಕ್ತಿಯೋಪಾದಿ ಆಕೆಯ ಹೃದಯಪೂರ್ವಕ ಗೌರವವನ್ನು ಆನಂದಿಸಲು ಗಂಡನು ಅಪೇಕ್ಷಿಸುವದಾದರೆ, ಅವನದನ್ನು ಸಂಪಾದಿಸಬೇಕು, ಮತ್ತು ಅದನ್ನು ಮಾಡುವ ಉತ್ತಮ ವಿಧಾನವು ಜವಾಬ್ದಾರಿಕೆಯಿಂದ ಕ್ರಿಯೆ ನಡಿಸುವುದು ಮತ್ತು ಮನೆವಾರ್ತೆಯ ತಲೆಯೋಪಾದಿ ಉತ್ತಮವಾದ ದೈವಿಕ ಗುಣಗಳನ್ನು ಬೆಳೆಸುವುದು ಆಗಿದೆ.
ಅಧೀನತೆಯು ಸಂಬಂಧಕ
ಪತ್ನಿಯ ಮೇಲೆ ಗಂಡನಿಗಿರುವ ಅಧಿಕಾರವು ಪೂರ್ಣಾಧಿಕಾರವಲ್ಲ. ಕೆಲವು ರೀತಿಯಲ್ಲಿ ಪತ್ನಿಯ ಅಧೀನತೆಯನ್ನು, ಲೌಕಿಕ ಅಧಿಪತಿಗೆ ಕ್ರೈಸ್ತನು ತೋರಿಸುವ ಅಧೀನತೆಗೆ ಹೋಲಿಸಬಹುದು. ಕ್ರೈಸ್ತನು “ಮೇಲಧಿಕಾರಿಗಳಿಗೆ ಅಧೀನನಾಗಿರಬೇಕು” ಎಂದು ದೇವರು ಆಜ್ಞಾಪಿಸಿರುತ್ತಾನೆ. (ರೋಮಾಪುರ 13:1) ಅದರೂ ಈ ಅಧೀನತೆಯು ಯಾವಾಗಲೂ ನಾವು ದೇವರಿಗೆ ಏನನ್ನು ಸಲ್ಲಿಸುತೇವ್ತೊ ಅದರಿಂದ ಸಮದೂಗಿರಬೇಕು. ಯೇಸು ಹೇಳಿದ್ದು: “ಕೈಸರನದ್ದನ್ನು ಕೈಸರನಿಗೆ ಮತ್ತು ದೇವರದನ್ನು ದೇವರಿಗೆ ಕೊಡಿರಿ.” (ಮಾರ್ಕ 12:17) ಕೈಸರ (ಐಹಿಕ ಸರಕಾರ) ನು ನಮ್ಮಿಂದ ದೇವರಿಗೆ ಸಲ್ಲುವುದನ್ನು ನಿರ್ಬಂಧಿಸಿ ಕೇಳುವುದಾದರೆ, ಅಪೊಸ್ತಲ ಪೇತ್ರನು ಏನನ್ನು ಹೇಳಿದನೊ ಅದನ್ನು ನಾವು ಜ್ಞಾಪಕಕ್ಕೆ ತರುವೆವು: “ಮನುಷ್ಯರಿಗಿಂತ ದೇವರಿಗೆ ಅಧಿಪತಿಯೋಪಾದಿ ನಾವು ವಿಧೇಯರಾಗಬೇಕು.”—ಅಪೊಸ್ತಲರ ಕೃತ್ಯಗಳು 5:29.
ಸಾಧಾರಣ ಇದೇ ರೀತಿಯಲ್ಲಿ, ಒಬ್ಬ ಕ್ರೈಸ್ತ ಸ್ತ್ರೀಯು ಕ್ರೈಸ್ತ ತತ್ವಗಳನ್ನು ತಿಳಿಯದಿರುವ ಅಥವಾ ಅವನ್ನು ಗೌರವಿಸಲು ತಪ್ಪುವ ಒಬ್ಬ ಪುರುಷನನ್ನು ವಿವಾಹವಾಗಿದ್ದರೆ, ಮತ್ತೂ ಆಕೆ ಅವನಿಗೆ ಅಧೀನಳಾಗುವ ಹಂಗಿನಲ್ಲಿದ್ದಾಳೆ. ಈ ದೇವ-ದತ್ತ ಏರ್ಪಾಡಿನ ವಿರುದ್ಧ ದಂಗೆಯೇಳುವ ಬದಲಿಗೆ, ಪ್ರೀತಿ ಮತ್ತು ಪರಿಗಣನೆಯಿಂದ ಆತನೆಡೆಗೆ ಕ್ರಿಯೆಗೈಯುವುದು ಮತ್ತು ಹೀಗೆ ಆತನ ಭರವಸವನ್ನು ಗಳಿಸಲು ಪ್ರಯತ್ನಿಸುವುದು ಆಕೆಗೆ ಒಳ್ಳೆಯದು. ಒಂದುವೇಳೆ ಅಂಥ ಉತ್ತಮ ನಡವಳಿಕೆಯು ಅವಳ ಗಂಡನನ್ನು ಮಾರ್ಪಡುವಂತೆ ಮಾಡುವುದು; ಅದು ಸತ್ಯಕ್ಕೆ ಅವನನ್ನು ಜಯಿಸಲೂ ಬಹುದು. (1 ಪೇತ್ರ 3:1, 2) ದೇವರಿಂದ ನಿಷೇಧಿತವಾದ ಒಂದು ವಿಷಯವನ್ನು ಮಾಡುವಂತೆ ಗಂಡನು ಅವಳಿಗೆ ಅಪ್ಪಣೆ ಕೊಟ್ಟರೆ, ದೇವರು ತನ್ನ ಪ್ರಧಾನ ಅಧಿಪತಿ ಎಂಬದನ್ನು ಆಕೆಯು ಜ್ಞಾಪಕದಲ್ಲಿಡಬೇಕು. ಉದಾಹರಣೆಗೆ, ಅವಳು, ಹೆಂಡತಿಯನ್ನು ಅದಲುಬದಲುಮಾಡಿಕೊಳ್ಳುವಂತಹ ಅನೈತಿಕ ಲೈಂಗಿಕ ಪದ್ಧತಿಗಳನ್ನು ನಡಿಸಬೇಕೆಂದು ಅವನು ನಿರ್ಬಂಧಪಡಿಸುವುದಾದರೆ, ಆಕೆ ಅದಕ್ಕೆ ಒಳಗಾಗುವ ಹಂಗಿನಲ್ಲಿರುವುದಿಲ್ಲ. (1 ಕೊರಿಂಥ 6:9, 10) ಗಂಡನಿಗೆ ಅವಳ ಅಧೀನತೆಯು ಅವಳ ಮನಸ್ಸಾಕ್ಷಿಯಿಂದ ಮತ್ತು ಪ್ರಾಮುಖ್ಯವಾಗಿ ದೇವರಿಗೆ ಅವಳು ತೋರಿಸುವ ಅಧೀನತೆಯಿಂದ ಪ್ರಭಾವಿಸಲ್ಪಡುತ್ತದೆ.
ಅರಸನಾದ ದಾವೀದನ ಕಾಲದಲ್ಲಿ, ಅಬೀಗೈಲಳು ದೈವಿಕ ತತ್ವಗಳ ಕಡೆಗೆ ಯಾವ ಗೌರವವೂ ಇರದಿದ್ದ ಮತ್ತು ದಾವೀದನೆಡೆಗೆ ಇಲ್ಲವೆ ಅವನ ಜನರೆಡೆಗೆ ಕ್ರೂರವಾಗಿ, ಪ್ರೀತಿರಹಿತ ರೀತಿಯಲ್ಲಿ ವರ್ತಿಸಿದ್ದ ನಾಬಾಲನೆಂಬ ಒಬ್ಬ ಮನುಷ್ಯನನ್ನು ಮದುವೆಯಾಗಿದ್ದಳು. ದಾವೀದನ ಜನರು ನಾಬಾಲನಿಗೆ ಸೇರಿದ್ದ ಸಾವಿರಾರು ಆಡು ಕುರಿಗಳನ್ನು ರಕ್ಷಿಸಿ ಉಪಕಾರ ಮಾಡಿದ್ದರು, ಆದರೆ ದಾವೀದನು ಆಹಾರವನ್ನು ಕಾಣಿಕೆಯಾಗಿ ಕೇಳಿದಾಗ ನಾಬಾಲನು ಏನನ್ನು ಕೊಡಲೂ ನಿರಾಕರಿಸಿಬಿಟ್ಟನು.
ತನ್ನ ಗಂಡನ ಜಿಪುಣ ಸ್ವಭಾವವು ತಮ್ಮ ಮನೆವಾರ್ತೆಯ ಮೇಲೆ ತರಲಿದ್ದ ವಿಪತ್ತನ್ನು ಅಬೀಗೈಲಳು ಮನಗಂಡು, ದಾವೀದನಿಗೆ ತಾನಾಗಿಯೆ ಆಹಾರವನ್ನೊಯ್ಯಲು ನಿರ್ಧರಿಸಿದಳು. “ಆಗ ಅಬೀಗೈಲಳು ಶೀಘ್ರವಾಗಿ ಇನ್ನೂರು ರೊಟ್ಟಿ, ಎರಡು ಬುದ್ದಲಿ ದ್ರಾಕ್ಷಾರಸ, ಸಿದ್ಧಮಾಡಿದ ಐದು ಕುರಿಗಳ ಮಾಂಸ, ಐವತ್ತು ಸೇರು ಹುರಿಗಾಳು, ಒಣಗಿದ ನೂರು ದ್ರಾಕ್ಷೆಗೊಂಚಲುಗಳು, ಅಂಜೂರ ಹಣ್ಣುಗಳ ಇನ್ನೂರು ಉಂಡೆಗಳು ಇವುಗಳನ್ನು ಕತ್ತೆಗಳ ಮೇಲೆ ಹೇರಿಸಿ ತನ್ನ ಸೇವಕರಿಗೆ—ನೀವು ಮುಂದೆ ನಡೆಯಿರಿ, ನಾನು ಹಿಂದೆ ಬರುತ್ತೇನೆ ಎಂದು ಹೇಳಿ ಅವರನ್ನು ಕಳುಹಿಸಿದಳು; ಗಂಡನಾದ ನಾಬಾಲನಿಗೆ ಏನೂ ತಿಳಿಸಲಿಲ್ಲ.”—1 ಸಮುವೇಲ 25:18, 19.
ಅಬೀಗೈಲಳು ತನ್ನ ಗಂಡನ ಇಚ್ಛೆಗೆ ವಿರುದ್ಧವಾಗಿ ಕ್ರಿಯೆನಡಿಸಿದ್ದರಲ್ಲಿ ತಪ್ಪುಮಾಡಿದ್ದಳೊ? ಈ ಸಂದರ್ಭದಲ್ಲಿ ಅಲ್ಲ. ಅಬೀಗೈಲಳ ಅಧೀನತೆಯು, ವಿಶೇಷವಾಗಿ ನಾಬಾಲನ ಅವಿವೇಕತನವು ಅವನ ಇಡೀ ಮನೆವಾರ್ತೆಯನ್ನು ಕೇಡಿಗೆ ಒಡ್ಡಿದ್ದ ಆ ಸಂದರ್ಭದಲ್ಲಿ, ಅವಳ ಗಂಡನಂತೆ ಪ್ರೀತಿರಹಿತಳಾಗಿರುವಂತೆ ಅವಳಿಂದ ಕೇಳಿರಲಿಲ್ಲ. ಆದದರಿಂದ ದಾವೀದನು ಅವಳಿಗೆ ಹೇಳಿದ್ದು: “ಈ ಹೊತ್ತು ನನ್ನನ್ನು ಎದುರುಗೊಳ್ಳುವುದಕ್ಕಾಗಿ ನಿನ್ನನ್ನು ಕಳುಹಿಸಿದ ಇಸ್ರಾಯೇಲ್ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ನೀನೂ ನಿನ್ನ ಬುದ್ಧಿಯೂ ಸ್ತೋತ್ರಾರ್ಹವೇ ಸರಿ.” (1 ಸಮವೇಲ 25:32, 33) ತದ್ರೀತಿ, ಇಂದಿನ ಕ್ರೈಸ್ತ ಪತ್ನಿಯರು ತಮ್ಮ ಗಂಡಂದಿರ ತಲೆತನದ ವಿರುದ್ಧ ಚಳವಳಿ ಯಾ ದಂಗೆ ಎಬ್ಬಿಸಬಾರದು, ಆದರೆ ಅವರು ಅಕ್ರೈಸ್ತ ಮಾರ್ಗವನ್ನು ತಕ್ಕೊಂಡದಾದ್ದರೆ, ಹೆಂಡತಿಯರು ಅದರಲ್ಲಿ ಅವರನ್ನು ಹಿಂಬಾಲಿಸಬೇಕೆಂದಿಲ್ಲ.
ಪೌಲನು ಎಫೆಸದವರಿಗೆ ಬರೆದ ತನ್ನ ಪತ್ರದಲ್ಲಿ ಹೀಗಂದಿದ್ದಾನೆ, ನಿಜ: “ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೋ ಹಾಗೆಯೇ ಸ್ತ್ರೀಯರು ತಮ್ಮ ತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನರಾಗಿರಬೇಕು.” (ಎಫೆಸ 5:24) ಇಲ್ಲಿ “ಎಲ್ಲಾ ವಿಷಯಗಳಲ್ಲಿ” ಎಂದು ಅಪೊಸ್ತಲನು ಉಪಯೋಗಿಸಿದ ಪದವು ಪತ್ನಿಯ ಅಧೀನತೆಗೆ ಸೀಮಿತವೆ ಇಲ್ಲವೆಂಬ ಅರ್ಥವನ್ನು ಕೊಡುವುದಿಲ್ಲ. “ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೋ” ಎಂಬ ಪೌಲನ ಹೇಳಿಕೆಯು, ಅವನ ಮನಸ್ಸಿನಲ್ಲೇನಿತ್ತೆಂದು ಸೂಚಿಸುತ್ತದೆ. ಕ್ರಿಸ್ತನು ಸಭೆಯಿಂದ ಅವಶ್ಯಪಡಿಸುವದೆಲ್ಲವು ನೀತಿಯಳ್ಳದ್ದು, ದೇವರ ಚಿತ್ತಕ್ಕೆ ಹೊಂದಿಕೆಯಾದದ್ದು. ಆದುದರಿಂದ ಸಭೆಯು ಸುಲಭವಾಗಿ ಮತ್ತು ಸಂತೋಷದಿಂದ ಪ್ರತಿಯೊಂದು ವಿಷಯದಲ್ಲಿ ಅವನಿಗೆ ಅಧೀನವಾಗ ಸಾಧ್ಯವಿದೆ. ತದ್ರೀತಿಯಲ್ಲಿ, ಯೇಸುವಿನ ಮಾದರಿಯನ್ನು ಅನುಸರಿಸಲು ದಕ್ಷತೆಯಿಂದ ಪ್ರಯತ್ನಿಸುವ ಒಬ್ಬ ಕ್ರೈಸ್ತ ಗಂಡನ ಪತ್ನಿಯು, ಅವನಿಗೆ ಎಲ್ಲಾ ವಿಷಯಗಳಲ್ಲಿ ಅಧೀನಳಾಗಿರಲು ಸಂತೋಷಪಡುವಳು. ತನ್ನ ಹಿತಾಸಕ್ತಿಯನ್ನು ಅವನು ಅತಿಯಾಗಿ ಚಿಂತಿಸುತ್ತಾನೆ ಮತ್ತು ದೇವರ ಚಿತ್ತಕ್ಕೆ ಹೊಂದಿಕೆಯಿಲ್ಲದ ಒಂದು ವಿಷಯವನ್ನು ಮಾಡಲು ಅವನು ಬುದ್ಧಿಪೂರ್ವಕವಾಗಿ ಎಂದೂ ಕೇಳಲಾರನು ಎಂದು ಅವಳಿಗೆ ಗೊತ್ತು.
ಒಬ್ಬರನ್ನೊಬ್ಬರು ಪ್ರೀತಿಸಬೇಕೆಂದು ಆಜ್ಞಾಪಿಸಿರುವ ತನ್ನ ತಲೆಯಾದ ಯೇಸು ಕ್ರಿಸ್ತನ ದಿವ್ಯ ಗುಣಗಳನ್ನು ಒಬ್ಬ ಗಂಡನು ಪ್ರದರ್ಶಿಸುವಾಗ, ತನ್ನ ಪತ್ನಿಯ ಪ್ರೀತಿ ಮತ್ತು ಗೌರವವನ್ನು ಇಟ್ಟುಕೊಳ್ಳುವನು. (ಯೋಹಾನ 13:34) ಗಂಡನು ತಪ್ಪುಮಾಡುವವನೂ ಅಪೂರ್ಣನೂ ಆದಾಗ್ಯೂ, ಅವನು ತನ್ನ ಅಧಿಕಾರವನ್ನು ಕ್ರಿಸ್ತನ ಶ್ರೇಷ್ಠ ತಲೆತನದ ಹೊಂದಿಕೆಯಲ್ಲಿ ನಡಿಸುವುದಾದರೆ, ಅವನನ್ನು ತಲೆಯಾಗಿಡುವುದರಲ್ಲಿ ಸಂತೋಷಪಡಲು ಪತ್ನಿಗೆ ಸುಲಭ ಮಾಡುವನು. (1 ಕೊರಿಂಥ 11:3) ಪತ್ನಿಯು ವಿನಯಶೀಲತೆ ಮತ್ತು ಪ್ರೀತಿ-ಉಪಕಾರಗಳೆಂಬ ಕ್ರೈಸ್ತ ಗುಣಗಳನ್ನು ಬೆಳೆಸುವುದಾದರೆ, ತನ್ನ ಗಂಡನಿಗೆ ತನ್ನನ್ನು ಅಧೀನಪಡಿಸುವುದು ಅವಳಿಗೆ ಕಷ್ಟವಾಗಲಾರದು.
ದೀನತೆ ಮತ್ತು ವಿವೇಚನೆ
ಸಭೆಯಲ್ಲಿರುವ ಗಂಡಂದಿರು ಮತ್ತು ಹೆಂಡತಿಯರು ಯೆಹೋವನ ಮುಂದೆ ಸಮಾನ ನಿಲುವಿರುವ ಸಹೋದರರು ಮತ್ತು ಸಹೋದರಿಯರಾಗಿದ್ದಾರೆ. (ಗಲಾತ್ಯ 3:28 ಕ್ಕೆ ಹೋಲಿಸಿ.) ಆದರೂ ಪುರುಷರು ಸಭಾ ಮೇಲ್ವಿಚಾರವನ್ನು ನಡಸುವದಕ್ಕಾಗಿ ದೇವರಿಂದ ನೇಮಿಸಲ್ಪಟ್ಟಿದ್ದಾರೆ. ಇದು ಯೋಗ್ಯ ಹೃದಯದ ಸ್ತ್ರೀಯರಿಂದ ಪೂರಾ ಅಧೀನತೆಯಲ್ಲಿ ಸಂತೋಷದಿಂದ ಅಂಗೀಕರಿಸಲ್ಪಡುತ್ತದೆ. ಮತ್ತು ಮಂದೆಯ ಮೇಲೆ ದೊರೆತನ ಮಾಡಬಾರದೆಂದು ಅದು ಪುರುಷರ ಮೇಲೆ ಹಾಕುವ ಭಾರವಾದ ಹಂಗನ್ನು ಸಭೆಯಲ್ಲಿರುವ ಬಲಿತ ಪುರುಷರು ದೀನತೆಯಿಂದ ಅಂಗೀಕರಿಸುತ್ತಾರೆ.—1 ಪೇತ್ರ 5:2, 3.
ಸಭೆಯಲ್ಲಿರುವ ಪುರುಷ ಮತ್ತು ಸ್ತ್ರೀಯರ ನಡುವೆ ಇರುವ ಸಂಬಂಧವು ಅಂಥದ್ದಾಗಿದ್ದರೆ, ಕ್ರೈಸ್ತ ಗಂಡನು ತನ್ನ ಆತ್ಮಿಕ ಸಹೋದರಿಯಾಗಿರುವ ಪತ್ನಿಯ ಮೇಲೆ ಸರ್ವಾಧಿಕಾರದಿಂದ ವರ್ತಿಸುವುದನ್ನು ಹೇಗೆ ಸಮರ್ಥಿಸ್ಯಾನು? ಮತ್ತು ಪತ್ನಿಯು ತಲೆತನಕ್ಕಾಗಿ ತನ್ನ ಪತಿಯೊಂದಿಗೆ ಪ್ರತಿಸ್ಪರ್ಧಿಸುವದನ್ನು ಹೇಗೆ ಸಮರ್ಥಿಸ್ಯಾಳು? ಅದಕ್ಕೆ ಬದಲಾಗಿ, ಪೇತ್ರನು ಸಭೆಯ ಎಲ್ಲಾ ಸದಸ್ಯರಿಗೆ ಉಪದೇಶ ಮಾಡಿದ ಪ್ರಕಾರ ಅವರು ಒಬ್ಬರನ್ನೊಬ್ಬರು ಉಪಚರಿಸುವುದು ಒಳ್ಳೆಯದು: “ನೀವೆಲ್ಲರೂ ಏಕ ಮನಸ್ಸುಳ್ಳವರಾಗಿರಿ; ಪರರ ಸುಖದುಃಖಗಳಲ್ಲಿ ಸೇರುವವರಾಗಿರಿ. ಅಣತ್ಣಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ. ಕರುಣೆಯೂ ದೀನಭಾವವೂ ಉಳ್ಳವರಾಗಿರಿ.” (1 ಪೇತ್ರ 3:8) ಪೌಲನು ಸಹಾ ಸೂಚಿಸಿದ್ದು: “ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ. ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪು ಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಯೆಹೋವನು ನಿಮ್ಮನ್ನು ಕ್ಷಮಿಸಿದಂತೆ ನೀವೂ ಕ್ಷಮಿಸಿರಿ.”—ಕೊಲೊಸ್ಸೆ 3:12, 13.
ಅಂಥ ಮನೋಭಾವವು ಸಭೆಯಲ್ಲಿ ಬೆಳೆಸಲ್ಪಡಬೇಕು. ಮತ್ತು ಕ್ರೈಸ್ತ ಮನೆಯಲ್ಲಿ ವಿಶೇಷವಾಗಿ ಗಂಡ ಹೆಂಡತಿಯರ ನಡುವೆ ಅದು ಬೆಳೆಸಲ್ಪಡಬೇಕು. ಗಂಡನು ತನ್ನ ಪತ್ನಿಯ ಸಲಹೆಗಳಿಗೆ ಕಿವಿಗೊಡುವ ಮೂಲಕ ತನ್ನ ಮೃದು ಮಮತೆಯನ್ನು ಮತ್ತು ಸೌಮ್ಯತೆಯನ್ನು ತೋರಿಸಬಹುದು. ಕುಟುಂಬವನ್ನು ಪ್ರಭಾವಿಸುವ ಒಂದು ನಿರ್ಣಯವನ್ನು ಮಾಡುವ ಮುಂಚೆ ಪತ್ನಿಯ ದೃಷ್ಟಿಕೋನವನ್ನು ಅವನು ಪರಿಗಣಿಸಬೆಕು. ಕ್ರೈಸ್ತ ಪತ್ನಿಯರು ಪೊಳ್ಳು-ತಲೆಯವರಲ್ಲ. ಸಾರಳು ತನ್ನ ಗಂಡನಾದ ಅಬ್ರಹಾಮನಿಗೆ ಮಾಡಿದಂತೆ, ಅವರು ಆಗಿಂದಾಗ್ಯೆ ತಮ್ಮ ಪತಿಯಂದಿರಿಗೆ ಬೆಲೆಯುಳ್ಳ ಸಲಹೆಗಳನ್ನು ನೀಡಶಕ್ತರು. (ಆದಿಕಾಂಡ 21:12) ಇನ್ನೊಂದು ಕಡೆ, ಒಬ್ಬ ಕ್ರೈಸ್ತ ಪತ್ನಿಯು ತನ್ನ ಪತಿಯಿಂದ ಹಕ್ಕುಕೇಳಿಕೆಗಳ ಅವಿವೇಚನೆಯ ತಗಾದೆ ಮಾಡಬಾರದು. ಅವನ ನಾಯಕತ್ವವನ್ನು ಅನುಸರಿಸುವ ಮೂಲಕ ಮತ್ತು ಅವನ ನಿರ್ಣಯಗಳನ್ನು ಬೆಂಬಲಿಸುವ ಮೂಲಕ, ಅವು ಕೆಲವೊಮ್ಮೆ ಅವಳ ಸ್ವಂತ ಇಷ್ಟಗಳಿಗಿಂತ ಬೇರೆಯಾಗಿದ್ದಾಗ್ಯೂ, ತನ್ನ ದಯೆ ಮತ್ತು ದೀನಭಾವವನ್ನು ಆಕೆ ಪ್ರದರ್ಶಿಸುವಳು.
ವಿವೇಚನೆಯಳ್ಳ ಗಂಡನು, ಒಬ್ಬ ವಿವೇಚನೆಯುಳ್ಳ ಹಿರಿಯನಂತೆ, ಗೋಚರಣೀಯನು ಮತ್ತು ದಯಾಪರನು. ಅಪೂರ್ಣತೆ ಮತ್ತು ಜೀವಿತದ ಒತ್ತಡಗಳ ನಡುವೆಯೂ ತನ್ನ ಜವಾಬ್ದಾರಿಕೆಗಳನ್ನು ನಿರ್ವಹಿಸಲು ಅವನು ಮಾಡುವ ಪ್ರಯತ್ನಗಳನ್ನು ಮನಗಾಣುತ್ತಾ, ಪ್ರೀತಿಯುಳ್ಳ ಪತ್ನಿಯು ಅವನಿಗೆ ಕನಿಕರ ಮತ್ತು ದೀರ್ಘಶಾಂತಿಯಿಂದ ಪ್ರತಿವರ್ತನೆ ತೋರಿಸುತ್ತಾಳೆ. ಗಂಡ ಮತ್ತು ಹೆಂಡತಿ ಇಬ್ಬರಿಂದಲೂ ಅಂಥ ಮನೋಭಾವನೆಗಳು ಬೆಳೆಸಲ್ಪಡುವಾಗ, ವಿವಾಹದಲ್ಲಿ ಅಧೀನತೆಯು ಒಂದು ಸಮಸ್ಯೆಯಾಗಿರಲಾರದು. ಬದಲಿಗೆ, ಅದು ಸಂತೋಷ, ಭದ್ರತೆ ಮತ್ತು ಬಾಳುವ ಸಂತೃಪ್ತಿಯ ಒಂದು ಮೂಲವಾಗಿರುವುದು. (w91 12/15)