ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w92 4/15 ಪು. 3-4
  • ಮರೆಯಲಾಗದ ಆ ಜಲಪ್ರಲಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮರೆಯಲಾಗದ ಆ ಜಲಪ್ರಲಯ
  • ಕಾವಲಿನಬುರುಜು—1992
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಪ್ರಲಯದ ಬೈಬಲ್‌ ದಾಖಲೆ
  • ಆ ನಾವೆಗಾಗಿ ಹುಡುಕುವುದು
  • ಮಹಾ ಜಲಪ್ರಳಯ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಹೊಸ ಲೋಕಕ್ಕೆ ಕಾಲಿಟ್ಟ ಎಂಟು ಜನ
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ನೋಹ ಮತ್ತು ಜಲಪ್ರಳಯ—ನಿಜನಾ? ಕಟ್ಟುಕಥೆನಾ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ನೋಹನ ಹಡಗು
    ಬೈಬಲ್‌ ನಮಗೆ ಕಲಿಸುವ ಪಾಠಗಳು
ಇನ್ನಷ್ಟು
ಕಾವಲಿನಬುರುಜು—1992
w92 4/15 ಪು. 3-4

ಮರೆಯಲಾಗದ ಆ ಜಲಪ್ರಲಯ

ಸುಮಾರು 4,300 ವರ್ಷಗಳ ಹಿಂದೆ, ಒಂದು ವಿಪತ್ಕಾರಕ ಪ್ರಲಯವು ಭೂಮಿಯನ್ನು ಮುಳುಗಿಸಿತ್ತು. ಒಂದು ಬೃಹದಾಕಾರದ ರಭಸದಲ್ಲಿ, ಅದು ಬಹುಮಟ್ಟಿಗೆ ಎಲ್ಲಾ ಸಜೀವ ಜೀವಿಗಳನ್ನು ನಿರ್ಮೂಲಗೊಳಿಸಿತು. ಅದು ಎಷ್ಟೊಂದು ದೊಡ್ಡ ಪರಿಮಾಣದ್ದಾಗಿತ್ತೆಂದರೆ, ಮಾನವ ಕುಲದ ಮೇಲೆ ಒಂದು ಅಳಿಸಲಾಗದ ಅಚ್ಚೊತ್ತನ್ನು ಅದು ಮಾಡಿತ್ತು, ಮತ್ತು ಪ್ರತಿಯೊಂದು ಸಂತತಿಯು ಅದರ ಕಥೆಯನ್ನು ಪಾರಂಪರ್ಯವಾಗಿ ಅದರ ಮುಂದಿನ ಸಂತತಿಗೆ ದಾಟಿಸಿತು.

ಆ ಪ್ರಲಯವಾಗಿ ಸುಮಾರು 850 ವರ್ಷಗಳಾದ ಮೇಲೆ, ಇಬ್ರಿಯ ಲೇಖಕನಾದ ಮೋಶೆಯು ಆ ಭೂ-ವ್ಯಾಪಕ ಜಲಪ್ರಲಯವನ್ನು ದಾಖಲೆಯಾಗಿ ಬರೆದಿಟ್ಟನು. ಬೈಬಲ್‌ ಪುಸ್ತಕವಾದ ಆದಿಕಾಂಡದಲ್ಲಿ ಅದು ಕಾಪಾಡಿ ಉಳಿಸಲ್ಪಟ್ಟಿದೆ, ಅಧ್ಯಾಯ 6ರಿಂದ 8ರ ತನಕ ಅದರ ಸುಸ್ಪಷ್ಟವಾಗಿದ ವರ್ಣನೆಯನ್ನು ನಾವು ಓದಬಲ್ಲೆವು.

ಪ್ರಲಯದ ಬೈಬಲ್‌ ದಾಖಲೆ

ಆದಿಕಾಂಡವು ಕೊಡುವ ಈ ವಿವರಣೆಗಳು ಒಬ್ಬ ಪ್ರತ್ಯಕ್ಷದರ್ಶಿಯದೆಂಬದು ವ್ಯಕ್ತ: “ನೋಹನ ಜೀವಮಾನದ ಆರುನೂರನೆಯ ವರುಷದ ಎರಡನೆಯ ತಿಂಗಳಿನ ಹದಿನೇಳನೆಯ ದಿನದಲ್ಲಿ ಭೂಮಿಯ ಕೆಳಗಿನ ಸಾಗರದ ಸೆಲೆಗಳು ಒಡೆದವು, ಆಕಾಶದ ತೂಬುಗಳು ತೆರೆದವು. ಜಲಪ್ರಳಯವು ನಾಲ್ವತ್ತು ದಿನ ಭೂಮಿಯ ಮೇಲೆ ಇದ್ದು ನೀರು ಹೆಚ್ಚುತ್ತಾ ನಾವೆಯನ್ನು ಎತ್ತಲು ಅದು ನೀರಿನ ಮೇಲೆ ತೇಲಾಡಿತು. ನೀರು ಭೂಮಿಯ ಮೇಲೆ ಅತ್ಯಧಿಕವಾಗಿ ಪ್ರಬಲವಾದ್ದರಿಂದ ಆಕಾಶಮಂಡಲದ ಕೆಳಗಿರುವ ಎಲ್ಲಾ ದೊಡ್ಡ ಬೆಟ್ಟಗಳು ಮುಚ್ಚಿಹೋದವು.”—ಆದಿಕಾಂಡ 7:11, 17, 19.

ಜೀವಂತ ಜೀವಿಗಳ ಮೇಲೆ ಆ ಜಲಪ್ರಲಯದ ಅಪ್ಪಳಿಕೆಯ ಕುರಿತು, ಬೈಬಲು ಅನ್ನುವುದು: “ಪಶುಪಕ್ಷಿ ಮೃಗಕ್ರಿಮಿಗಳು ಮನುಷ್ಯರು ಸಹಿತವಾಗಿ ಭೂಮಿಯಲ್ಲಿ ಸಂಚರಿಸುವ ಸಕಲ ಪ್ರಾಣಿಗಳೂ ಲಯವಾದವು. ಮನುಷ್ಯರು ಮೊದಲುಗೊಂಡು ಪಶುಪಕ್ಷಿ ಕ್ರಿಮಿಕೀಟಗಳ ವರೆಗೂ ಭೂಮಿಯ ಮೇಲಿದ್ದದ್ದೆಲ್ಲಾ ನಾಶವಾಯಿತು.” ಆದರೂ, ನೋಹ ಮತ್ತು ಇತರ ಏಳು ಮಂದಿ ಮತ್ತು ಅವರೊಂದಿಗೆ ಪ್ರತಿಯೊಂದು ಜಾತಿಯ ಪಶು, ಹಾರಾಡುವ ಪಕ್ಷಿ ಮತ್ತು ಭೂಮಿಯ ಮೇಲೆ ಸಂಚರಿಸುವ ಸಕಲ ಜೀವಿಗಳು ತಮ್ಮ ಒಂದೊಂದು ನಮೂನೆಯೊಂದಿಗೆ ಪಾರಾದವು. (ಆದಿಕಾಂಡ 7:21, 23) ಇವೆಲ್ಲವೂ ಸುಮಾರು 133 ಮೀಟರ್‌ ಉದ್ದದ, 22 ಮೀಟರ್‌ ಅಗಲದ ಮತ್ತು 13 ಮೀಟರ್‌ ಎತ್ತರದ ಒಂದು ದೊಡ್ಡ ತೇಲು ನಾವೆಯೊಳಗೆ ಕಾಪಾಡಿ ಉಳಿಸಲ್ಪಟ್ಟವು. ಆ ನಾವೆಯ ಒಂದೇ ಕಾರ್ಯವಿಧಾನವು ಅದು ನೀರುತೂರದೆ ಇರುವುದು ಮತ್ತು ತೇಲುತ್ತಾ ಇರುವುದು ಆದ್ದರಿಂದ, ಅದಕ್ಕೆ ವೃತ್ತಾಕಾರದ ತಳ, ಚೂಪಾದ ಮೂತಿ, ಚಾಲಕ ಸಾಧನಗಳು ಅಥವಾ ಚುಕ್ಕಾಣಿ ಚಕ್ರವು ಇದ್ದಿರಲಿಲ್ಲ. ನೋಹನ ನಾವೆಯು ಕೇವಲ ಸಮತಲಾಕೃತಿಯ ಪೆಟ್ಟಿಗೆಯಂಥ ಹಡಗವಾಗಿತ್ತು.

ಪ್ರಳಯ ಪ್ರಾರಂಭಿಸಿ ಐದು ತಿಂಗಳಾದ ನಂತರ, ಪ್ರಚಲಿತ-ದಿನದ ಪೂರ್ವ ಟರ್ಕಿಯಲ್ಲಿರುವ ಅರಾರಾಟ್‌ ಬೆಟ್ಟಗಳ ಮೇಲೆ, ನಾವೆಯು ಬಂದು ನಿಂತಿತು. ಹೀಗೆ ಜಲಪ್ರಲಯವು ಆರಂಭಿಸಿ ಒಂದು ವರ್ಷದ ತರುವಾಯ ನೋಹನೂ ಅವನ ಕುಟುಂಬವೂ ನಾವೆಯ ಹೊರಗೆ ಬಂದು ಒಣನೆಲದ ಮೇಲೆ ಕಾಲಿಟ್ಟರು ಮತ್ತು ತಮ್ಮ ದಿನನಿತ್ಯದ ಸಾಮಾನ್ಯ ಜೀವಿತವನ್ನು ಹೊಸತಾಗಿ ಪ್ರಾರಂಭಿಸಿದರು. (ಆದಿಕಾಂಡ 8:14-19) ಕಾಲಾನಂತರ ಮಾನವ ಕುಲವು ಸಾಕಷ್ಟು ವೃದ್ಧಿಗೊಂಡು, ಯೂಫ್ರೆಟೀಸ್‌ ನದಿಯ ಸಮೀಪದಲ್ಲಿ ಬಾಬೆಲ್‌ ಪಟ್ಟಣ ಮತ್ತು ಅದರ ಕುಖ್ಯಾತ ಬುರುಜನ್ನು ಕಟ್ಟಲಾರಂಭಿಸಿತು. ದೇವರು ಮಾನವ ಕುಲದ ಭಾಷೆಯನ್ನು ಗಲಿಬಿಲಿಗೊಳಿಸಿದಾಗ, ಜನರು ಕ್ರಮೇಣ ಅಲ್ಲಿಂದ ಭೂಮಿಯ ಎಲ್ಲಾ ಭಾಗಗಳಿಗೆ ಚದರಿಸಲ್ಪಟ್ಟರು. (ಆದಿಕಾಂಡ 11:1-9) ಆದರೆ ನಾವೆಯ ಕುರಿತಾಗಿ ಏನು?

ಆ ನಾವೆಗಾಗಿ ಹುಡುಕುವುದು

19ನೆಯ ಶತಮಾನದಿಂದ, ಆ ನಾವೆಗಾಗಿ ಆರಾರಾಟ್‌ ಬೆಟ್ಟಗಳ ಮೇಲೆ ಹುಡುಕಾಡುವ ಹಲವಾರು ಪ್ರಯತ್ನಗಳನ್ನು ಮಾಡಲಾಗಿದೆ. ಈ ಬೆಟ್ಟಗಳಿಗೆ ಎರಡು ಪ್ರಧಾನ ಶಿಕರಗಳಿವೆ, ಒಂದು 5,165 ಮೀಟರ್‌ ಎತ್ತರದಲ್ಲಿ ಮತ್ತು ಇನ್ನೊಂದು 3,914 ಮೀಟರ್‌ ಎತ್ತರದಲ್ಲಿ. ಈ ಎರಡರಲ್ಲಿ ಅಧಿಕ ಎತ್ತರದ ಶಿಕರವು ಸದಾ ಹಿಮದಿಂದ ಆವೃತವಾಗಿರುತ್ತದೆ. ಜಲಪ್ರಲಯವನ್ನು ಹಿಂಬಾಲಿಸಿ ಬಂದ ಹವಾಮಾನದ ಬದಲಾವಣೆಗಳಿಂದಾಗಿ, ಆ ನಾವೆಯು ಶೀಘ್ರದಲ್ಲೇ ಹಿಮದಿಂದ ಹೂತುಹೋಗಿದ್ದಿರಬೇಕು. ಆ ನಾವೆಯು ನೀರ್ಗಲಿನ್ಲ ದೊಡ್ಡ ರಾಶಿಯ ಕೆಳಗೆ ಆಳವಾಗಿ ಹೂತುಹೋಗಿ ಇನ್ನೂ ಅಲ್ಲಿದೆ ಎಂಬದಾಗಿ ಕೆಲವು ಸಂಶೋಧಕರು ದೃಢವಾಗಿ ನಂಬುತ್ತಾರೆ. ಹಿಮವು ಸಾಕಷ್ಟು ಕರಗಿದಾಗ ನಾವೆಯ ಕೆಲವು ಭಾಗಗಳು ತಾತ್ಕಾಲಿಕವಾಗಿ ತೋರಿಬಂದಿರಬಹುದಾದ ಕೆಲವು ಕಾಲಾವಧಿಗಳು ಇದ್ದವೆಂದೂ ಅವರು ವಾದಿಸುತ್ತಾರೆ.

1902ರಲ್ಲಿ ಮತ್ತು ಪುನಃ 1904ರಲ್ಲಿ ತಾನು ಅರಾರಾಟ್‌ ಬೆಟ್ಟವನ್ನು ಹತ್ತಿ ಆ ನಾವೆಯನ್ನು ನೋಡಿದೆನು ಎಂಬದಾಗಿ ವಾದಿಸಿರುವ ಜಾರ್ಜ್‌ ಹೆಗೋಪ್ಯನ್‌ ಎಂಬ ಆರ್ಮೇನಿಯನ್‌ ವ್ಯಕ್ತಿಯನ್ನು, ಸರ್ಚ್‌ ಆಫ್‌ ನೋವಾಸ್‌ ಆರ್ಕ್‌ ಎಂಬ ಪುಸ್ತಕವು ಉಲ್ಲೇಕಿಸಿದೆ. ಮೊದಲ ಸಂದರ್ಶನೆಯಲ್ಲಿ, ಅವನು ಕಾರ್ಯಥಃ ಆ ನಾವೆಯ ತುದಿಯನ್ನು ಹತ್ತಿದನ್ದೆಂದು ಅವನು ಹೇಳಿದ್ದಾನೆ. “ನಾನು ನೆಟ್ಟಗೆ ನಿಂತು ಆ ಹಡಗದ ಎಲ್ಲಾ ಕಡೆ ನೋಡಿದೆ. ಅದು ಉದ್ದವಾಗಿತ್ತು. ಅದರ ಎತ್ತರವು ಸುಮಾರು 12 ಮೀಟರ್‌.” ತದನಂತರದ ಸಂದರ್ಶನೆಯ ಕುರಿತು ತನ್ನ ಅವಲೋಕನೆಯ ಸಂಬಂಧದಲ್ಲಿ, ಅವನಂದದ್ದು: “ಅಲ್ಲಿ ಯಾವುದೇ ನಿಜ ತಿರುವುಗಳನ್ನು ನಾನು ಕಾಣಲಿಲ್ಲ. ನಾನು ನೋಡಿದ್ದ ಯಾವುದೇ ದೋಣಿಗಿಂತ ಅದು ಬೇರೆಯಾಗಿತ್ತು. ಅದು ಹೆಚ್ಚುಮಟ್ಟಿಗೆ ಚಪ್ಪಟೆ-ತಳವುಳ್ಳ ಹರಿಗೋಲು ದೋಣಿಯಂತೆ ಕಾಣುತ್ತಿತ್ತು.”

ಆ ನಾವೆಯ ಕುರಿತು ಪುರಾವೆಯನ್ನು ಕಂಡು ಹಿಡಿಯಲು ಫರ್ನನ್‌ ನೆವಾರ್ರ ಎಂಬವನು 1952ರಿಂದ 1969ರ ವರೆಗೆ ನಾಲ್ಕು ಪ್ರಯತ್ನಗಳನ್ನು ಮಾಡಿದನು. ಆರಾರಾಟ್‌ ಬೆಟ್ಟಕ್ಕೆ ಅವನ ಮೂರನೆಯ ಸಂಚರಣೆಯಲ್ಲಿ, ಅವನು ಒಂದು ನೀರ್ಗಲ್ಲು ನದಿಯ ಆಳವಾದ ಬಿರುಕಿನ ತಳಕ್ಕೆ ಇಳಿದನು, ಅಲ್ಲಿ ಅವನಿಗೆ ಹಿಮದೊಳಗೆ ಹೂತಿದ್ದ ಒಂದು ಕಪ್ಪು ಮರದ ತುಂಡು ಕಾಣಸಿಕ್ಕಿತು. “ಅದು ಬಹಳ ಉದ್ದವಾಗಿದ್ದಿರಬೇಕು,” ಎಂದನವನು, “ಹಡಗದ ಚೌಕಟ್ಟಿನ ಇತರ ಭಾಗಗಳಿಗೆ ಪ್ರಾಯಶಃ ಇನ್ನೂ ಜೋಡಿಕೆಯಾಗಿದ್ದಿರಬೇಕು. ಅದರ ಕಣವಿನ್ಯಾಸದುದ್ದಕ್ಕೆ ಮಾತ್ರ ನಾನದನ್ನು ತುಂಡರಿಸ ಶಕ್ತನಾಗಿ ಕೊನೆಗೆ ಸುಮಾರು 1.5 ಮೀಟರ್‌ ಉದ್ದದ ತುಂಡನ್ನು ಸೀಳಿತೆಗೆದೆ.”

ಆ ಮರದ ತುಂಡನ್ನು ಪರೀಕ್ಷಿಸಿದ ಹಲವಾರು ತಜ್ಞರಲ್ಲಿ ಒಬ್ಬರಾದ ಪ್ರೊಫೆಸರ್‌ ರಿಚರ್ಡ್‌ ಬ್ಲಿಸ್‌, ಅಂದದ್ದು: “ಆ ನೆವಾರ್ರ ಮರದ ತುಂಡಿನ ನಮೂನೆಯು ಹಡಗದ ಅಡತ್ಡೊಲೆಯಾಗಿದ್ದು ಬಿಟ್ಯೂಮೆನ್‌ ಕಪ್ಪುರಾಳದಿಂದ ಗರ್ಭೀಕರಿಸಿದ್ದಾಗಿದೆ. ಅದರಲ್ಲಿ ಕೂಲುವೆಜ್ಜ ಮತ್ತು ಕೂರು ಸಂದುಗಳಿವೆ. ಮತ್ತು ಅದು ಖಂಡಿತವಾಗಿ ಕೈಯಿಂದ-ಕೆತ್ತಿ ಮಾಡಿದ ಚಚ್ಚೌಕ.” ಆ ಮರವು ಸುಮಾರು ನಾಲ್ಕು ಅಥವಾ ಐದು ಸಾವಿರ ವರ್ಷ ಹಳೆಯದಾಗಿದೆ ಎಂಬ ಅಂದಾಜನ್ನು ಹಾಕಲಾಗಿದೆ.

ಅರಾರಾಟ್‌ ಬೆಟ್ಟಗಳ ಮೇಲೆ ಆ ನಾವೆಯನ್ನು ಕಂಡುಹಿಡಿಯಲು ಪ್ರಯತ್ನಗಳು ಮಾಡಲ್ಪಟ್ಟಾಗ್ಯೂ, ಒಂದು ಜಲಪ್ರಳಯದಿಂದಾದ ನಾಶವನ್ನು ಪಾರಾಗಲು ಅದು ಉಪಯೋಗಿಸಲ್ಪಟ್ಟಿತ್ತೆಂಬ ನಿಶ್ಚಿತ ಪುರಾವೆಯು ಬೈಬಲಿನ ಆದಿಕಾಂಡ ಪುಸ್ತಕದಲ್ಲಿ ಲಿಖಿತ ದಾಖಲೆಯಾಗಿ ಅಸ್ತಿತ್ವದಲ್ಲಿದೆ. ಆ ದಾಖಲೆಯ ದೃಢೀಕರಣವು ಭೂಲೋಕದಲ್ಲೆಲ್ಲೂ ಪುರಾತನಕಾಲದ ಜನರ ನಡುವೆ ಪ್ರಲಯ ಸಂಬಂಧವಾದ ಬಹು ಸಂಖ್ಯಾತ ದಂತಕಥೆಗಳಿಂದಾಗಿ ತೋರಿಬರುತ್ತದೆ. ಹಿಂಬಾಲಿಸುವ ಲೇಖನದಲ್ಲಿ ಅವರ ಸಾಕ್ಷ್ಯಗಳನ್ನು ಗಮನಿಸಿರಿ. (w92 1/15)

[ಪುಟ 4 ರಲ್ಲಿರುವ ಚಿತ್ರ]

ನೋಹನ ನಾವೆಯ ಸಂಚಯನ ಶಕ್ತಿಯು ಪ್ರತಿಯೊಂದರಲ್ಲಿ 25 ಅಮೆರಿಕನ್‌ ಬಾಕ್ಸ್‌ಕಾರುಗಳಿರುವ ಸರಕು ರವಾನೆಯ 10 ರೈಲು ಬಂಡಿಗಳಿಗೆ ಸಮಾನವಾಗಿತ್ತು!

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ