ಯೆಹೋವನು—ನಿಮ್ಮ ಪರಿಚಯಸ್ಥನೋ ಅಥವಾ ನಿಮ್ಮ ಸ್ನೇಹಿತನೋ?
“ಜೋನ್, ನನ್ನ ಸ್ನೇಹಿತನನ್ನು ನಿನಗೆ ಪರಿಚಯಿಸಬಹುದೋ? ಇವನು—ನನ್ನನ್ನು ಕ್ಷಮಿಸಿ, ಪುನಃ ಹೇಳಿ, ನಿಮ್ಮ ಹೆಸರೇನು?”
ಇಂಥ ತರಹದ ಸಂಭಾಷಣೆಯ ಪ್ರಮಾದವನ್ನು ನೀವು ಕೇಳಿರುವಿರೋ? “ಸ್ನೇಹಿತ” ಎಂಬ ಶಬ್ದವನ್ನು ಕೆಲವರು ಹೇಗೆ ಅಪಪ್ರಯೋಗ ಮಾಡುತ್ತಾರೆಂಬುದಕ್ಕೆ ಒಂದು ಉದಾಹರಣೆಯನ್ನು ಒದಗಿಸುತ್ತದೆ. ಅವರ ಅರ್ಥ “ಪರಿಚಯಸ್ಥನು” ಯಾ ಅದು ಕೂಡ ಇಲ್ಲದಿರುವದು ವಾಸ್ತವತೆಯಾಗಿರುತ್ತದೆ. ರಸ್ತೆಯ ಆಚೇಪಕ್ಕದಲ್ಲಿ ವಾಸಿಸುತ್ತಿರುವ ಶ್ರೀಮಾನ್ ಸಾಮಾನ್ಯರ ಪರಿಚಯವಿರುವದು ಒಂದು ಸಂಗತಿ; ಆದರೆ ಅವನ ಸ್ನೇಹಿತನಾಗಿರುವದು ಪೂರ್ಣವಾಗಿ ಇನ್ನೊಂದು ಸಂಗತಿ.
ಒಂದು ನಿಘಂಟು “ಪರಿಚಯಸ್ಥನು” ಅಂದರೆ “ವ್ಯಕ್ತಿಯೊಬ್ಬನೊಡನೆ ಸ್ವಲ್ಪ ಸಾಮಾಜಿಕ ಸಂಪರ್ಕ ಇರುತ್ತದಾದರೂ, ಅವನೊಡನೆ ಒಂದು ಬಲವಾದ ವೈಯಕ್ತಿಕ ಆಪತ್ತೆ ಇರುವದಿಲ್ಲ” ಎಂಬ ಅರ್ಥವಿವರಣೆ ನೀಡುತ್ತದೆ. ಅದು ಸೂಚಿಸುವದು “ಸ್ನೇಹಿತನಿಗಿಂತಲೂ ಕಡಿಮೆ ಸಲಿಗೆ, ನಿಕಟತೆ, ಒಡನಾಡಿತನ, ಮತ್ತು ಹಿತಕಾಂಕ್ಷೆ.”
ಈ ಬಲವಾದ ವೈಯಕ್ತಿಕ ಆಪತ್ತೆಯ ಕೊರತೆಯು, ನಮ್ಮ ಪರಿಚಯಸ್ಥರಿಗೆ ಏನಾದರೂ ಸಂಭವಿಸಿದರೆ ನಾವು ಹಲವು ಬಾರಿ ಯಾಕೆ ಸ್ವಲ್ಪವೇ ಗಮನಹರಿಸುತ್ತೇವೆ, ಆದರೆ ನಮ್ಮ ಸ್ನೇಹಿತರ ಜೀವಿತಗಳಲ್ಲಿ ನಾವು ಸೌಹಾರ್ದದಿಂದ ಯಾಕೆ ಸಂಮಿಳಿತಗೊಂಡಿರುತ್ತೇವೆಂಬುದನ್ನು ವಿವರಿಸಲು ನೆರವಾಗುತ್ತದೆ. ನಾವು ಅವರ ಸಂತೋಷಗಳಲ್ಲಿ ಮತ್ತು ಅವರ ದುಃಖಗಳಲ್ಲಿ ಪಾಲಿಗರಾಗುತ್ತಾ, ಅವು ನಮ್ಮನ್ನು ಗಾಢವಾಗಿ ಸ್ಪರ್ಶಿಸುವಂತೆ ಬಿಡುತ್ತೇವೆ. ಅವರ ಸ್ವಂತ ವ್ಯವಹಾರಗಳಲ್ಲಿ ತಲೆಹಾಕುವಂತೆ ತಪ್ಪಾಗಿ ನಿರ್ದೇಶಿಸಲು ನಮ್ಮ ಭಾವನಾತ್ಮಕ ಒಳಗೂಡುವಿಕೆಯು ಪ್ರಭಾವಿಸದಂತೆ ನಾವು ಜಾಗರೂಕರಾಗಿರತಕ್ಕದ್ದು ಎಂಬುದು ಸಹಜವೇ.—1 ಪೇತ್ರ 4:15.
ನಮ್ಮ ಮಿತ್ರರುಗಳೆಡೆಗೆ ಬಲವಾದ ವೈಯಕ್ತಿಕ ಆಪತ್ತೆಯು ಇರುವದು, ಅವರನ್ನು ಮೆಚ್ಚಿಸಲು ನಾವು ಯಾಕೆ ಪ್ರಯತ್ನಿಸುತ್ತೇವೆ ಎಂಬುದನ್ನು ಕೂಡ ವಿವರಿಸುತ್ತದೆ. ಒಬ್ಬ ಪರಿಚಯಸ್ಥನು ನಮ್ಮ ನಡತೆಯು ಹಿಡಿಸದ್ದು ಯಾ ಅಯೋಗ್ಯ ತರಹದ್ದು ಎಂದು ಕಂಡುಕೊಳ್ಳುವದಾದರೆ, ಅವನ ಅಪ್ರಸನ್ನತೆಯು ನಾವು ಬದಲಾಯಿಸಿಕೊಳ್ಳುವಂತೆ ಅಷ್ಟೇನೂ ನಡಿಸಲಿಕ್ಕಿಲ್ಲ. ಆದರೆ ಉಡುಪಿನ, ನಡತೆಯ, ಯಾ ಮನೋಭಾವದ ವಿಷಯಗಳಲ್ಲಿ ಸ್ನೇಹಿತನೊಬ್ಬನು ಖಂಡಿತವಾಗಿಯೂ ಬಲವಾದ ಪ್ರಭಾವವನ್ನು ಹಾಕಬಲ್ಲನು.
ಭರವಸೆ, ವಾತ್ಸಲ್ಯ, ಗೌರವ, ಮತ್ತು ನಿಷ್ಠೆಯ ವಿಷಯಗಳಲ್ಲಾದರೋ, ಮಿತ್ರತ್ವವು ಪರಿಚಯಕ್ಕಿಂತ ಅಧಿಕ ಮಟ್ಟದ ಹೊಣೆಗಾರಿಕೆಯನ್ನು ಅಪೇಕ್ಷಿಸುತ್ತದೆ. ಯಾವುದೇ ಜವಾಬ್ದಾರಿಕೆಗಳಿಲ್ಲದ ಮಿತ್ರತ್ವವನ್ನು ಕೇಳಿಕೊಳ್ಳುವವನು, ವಾಸ್ತವದಲ್ಲಿ ಒಬ್ಬ ಸ್ನೇಹಿತನನ್ನು ಕೇಳಿಕೊಳ್ಳದೆ, ಕೇವಲ ಒಬ್ಬ ಪರಿಚಯಸ್ಥನನ್ನು ಅಪೇಕ್ಷಿಸುತ್ತಾನೆ. ನಿಕಟ ಸ್ನೇಹಿತರು ಒಂದು ಬಲವಾದ ವೈಯಕ್ತಿಕ ಆಪತ್ತೆಯ ಕಾರಣದಿಂದ ಬರುವ ಜವಾಬ್ದಾರಿಕೆಯನ್ನು ಪೂರೈಸಲು ಸಂತೋಷಪಡುತ್ತಾರೆ, ಇದರಿಂದ ಅವರ ಗೆಳೆತನವನ್ನು ರುಜುಪಡಿಸಲು ಅವರಿಗೆ ಇದೊಂದು ಅವಕಾಶವನ್ನು ಒದಗಿಸುತ್ತದೆ ಎಂದು ಅರಿತುಕೊಳ್ಳುತ್ತಾರೆ.
ದೇವರೊಂದಿಗೆ ಸ್ನೇಹ
ನಿರ್ಮಾಣಿಕನೋಪಾದಿ, ಯೆಹೋವನು ಮಾನವ ಕುಲದ ಸ್ವರ್ಗೀಯ ಪಿತನಾಗಿದ್ದಾನೆ ಮತ್ತು ಪ್ರೀತಿಸಲ್ಪಡಲು, ವಿಧೇಯತೆ ಪಡೆಯಲು, ಮತ್ತು ಗೌರವಿಸಲ್ಪಡಲು ಅರ್ಹನಾಗಿದ್ದಾನೆ. ಆದರೆ ಕೇವಲ ಒಂದು ಕರ್ತವ್ಯದ ಭಾವದಿಂದಲ್ಲ, ಬದಲಿಗೆ ಒಂದು ಬಲವಾದ ವೈಯಕ್ತಿಕ ಆಪತ್ತೆಯ ಕಾರಣದಿಂದ ಇದನ್ನು ಮಾನವರು ಮಾಡಲು ಅವನು ಬಯಸುತ್ತಾನೆ. (ಮತ್ತಾಯ 22:37) ಅವನನ್ನು ಒಬ್ಬ ಸ್ನೇಹಿತನಾಗಿ ಅವರು ಪ್ರೀತಿಸುವಂತೆ ಅವನು ಬಯಸುತ್ತಾನೆ. (ಕೀರ್ತನೆ 18:1) ಅವನು “ಮೊದಲು ನಮ್ಮನ್ನು ಪ್ರೀತಿಸಿದರ್ದಿಂದ,” ಅಂಥ ಒಂದು ಸ್ನೇಹಕ್ಕೆ ಅವನು ಸ್ವತಃ ಒಂದು ಪರಿಪೂರ್ಣ ಬುನಾದಿಯನ್ನು ಹಾಕಿದ್ದಾನೆ.—1 ಯೋಹಾನ 4:19.
ನಮ್ಮ ಮೊದಲ ಹೆತ್ತವರಾದ ಆದಾಮ, ಹವ್ವರು ಯೆಹೋವನ ಪರಿಚಯಸ್ಥರಾಗಿದ್ದರು. ಇದು ಪ್ರಶ್ನೆಯಾಗಿತ್ತು: ಅವನ ಸ್ನೇಹವನ್ನು ಅವರು ಸ್ವೀಕರಿಸಲಿರುವರೋ? ವಿಷಾದಕರವೇನಂದರೆ, ಅವರು ಹಾಗೆ ಮಾಡಲಿಲ್ಲ. ದೇವರಿಂದ ಸ್ವಾತಂತ್ರ್ಯಕ್ಕಾಗಿ ಅವರ ಸ್ವಾರ್ಥತೆಯ ಗ್ರಹಣಮಾಡಿಕೊಳ್ಳುವಿಕೆಯು, ಬಲವಾದ ವೈಯಕ್ತಿಕ ಆಪತ್ತೆಯ ಭಾವನೆಯು ಇರಲಿಲ್ಲ ಎಂದು ಸೂಚಿಸಿತು. ಅವನು ನೀಡುವ ಗೆಳೆತನದ ಆಶೀರ್ವಾದಗಳನ್ನು ಸ್ವೀಕರಿಸಲು ಅವರು ಇಚ್ಛೆಯುಳ್ಳವರಾಗಿದ್ದರು, ಆದರೆ ಅವರು ಅದರ ಜವಾಬ್ದಾರಿಕೆಗಳನ್ನು ಪೂರೈಸಲು ಇಚ್ಛೆಯಿಲ್ಲದವರಾಗಿದ್ದರು. ಅವರು ಯಾವುದೇ ಬಾಡಿಗೆ ಕೊಡಲು ಇಚ್ಛಿಸದೆ, ತಮ್ಮ ಅನುಕೂಲಕರ ಪ್ರಮೋದವನದ ಮನೆಯ ಸೌಕರ್ಯಗಳಲ್ಲಿ ಮತ್ತು ಭದ್ರತೆಯಲ್ಲಿ ಆನಂದಿಸಲು ಬಯಸಿದ್ದರೋ ಎಂಬಂತಿತ್ತು.
ನಮ್ಮಲ್ಲಿ ಎಲ್ಲರೂ, ಕೆಲವರು ಇತರರಿಗಿಂತ ಹೆಚ್ಚು ಮಟ್ಟದಲ್ಲಿ, ಈ ಗಣ್ಯತಾಹೀನ ಮತ್ತು ಸ್ವತಂತ್ರ ಆತ್ಮವನ್ನು ಬಾಧ್ಯತೆಯಾಗಿ ಪಡೆದುಕೊಂಡು ಬಂದಿದ್ದೇವೆ. (ಆದಿಕಾಂಡ 8:21) ಉದಾಹರಣೆಗೆ ಕೆಲವು ಯುವಕರು, ಸ್ವಾತಂತ್ರ್ಯದ ಅವರ ಸ್ವಾಭಾವಿಕ ಬಯಕೆಯನ್ನು, ಅವರ ಹೆತ್ತವರೆಡೆಗೆ ಕೃತಜ್ಞತೆ ಇಲ್ಲದವರನ್ನಾಗಿ ಮಾಡುವಂತೆ ಬಿಟ್ಟುಕೊಟ್ಟಿದ್ದಾರೆ. ಇದು ಅವರ ಮತ್ತು ಅವರ ಹೆತ್ತವರ ನಡುವೆ ಜೀವಮಾನದಲ್ಲೆಲ್ಲಾ ಇರಬೇಕಾಗಿದ್ದ ಅತಿ ಅಮೂಲ್ಯವಾದ ಗೆಳೆತನದ ಮುರಿಯುವಿಕೆಯ ಫಲಿತಾಂಶಕ್ಕೆ ನಡಿಸಿದೆ. ಆದರೂ ಇದರಂತೆಯೇ ದುಃಖಕರವಾಗಿ, ನಮ್ಮ ಸ್ವರ್ಗೀಯ ಪಿತನೊಂದಿಗಿನ ನಮ್ಮ ಸ್ನೇಹದಲ್ಲಿ ಮುರಿಯುವಿಕೆಯೊಂದು ಇನ್ನು ಹೆಚ್ಚು ಗಂಭೀರತರದ್ದಾಗಿರುತ್ತದೆ. ವಾಸ್ತವದಲ್ಲಿ, ಅದು ಮಾರಕವಾಗಿರಬಲ್ಲದು!
ಸ್ನೇಹಕ್ಕಾಗಿ ಆವಶ್ಯಕತೆಗಳು
ಭರವಸೆಯಿಲ್ಲದೆ ಯಾವುದೇ ಸಂಬಂಧವು, ಅದು ಮಾನವರೊಂದಿಗೆಯಾಗಲಿ ಯಾ ದೇವರೊಂದಿಗೆಯಾಗಲಿ, ಬಹಳ ಕಾಲ ಬಾಳಲು ಸಾಧ್ಯವಿಲ್ಲ. ಮೂಲಪಿತೃಜನಾದ ಅಬ್ರಹಾಮನು ಇದನ್ನು ತಿಳಿದಿದ್ದನು, ಮತ್ತು ಈ ಕಾರಣದಿಂದ ಅವನು ದೇವರಲ್ಲಿ ಪ್ರಶ್ನಾತೀತವಾದ ಭರವಸೆಯನ್ನು ಪುನಃ ಪುನಃ ವ್ಯಕ್ತಪಡಿಸಿದನು. ಆದಿಕಾಂಡ 12:1-5 ಮತ್ತು 22:1-18 ನ್ನು ಓದಿರಿ, ಮತ್ತು ಯೆಹೋವನಲ್ಲಿ ಅವನ ಭರವಸೆಯ ಎದ್ದುಕಾಣುವ ಎರಡು ಉದಾಹರಣೆಗಳನ್ನು ನೋಡಿರಿ. ಹೌದು, “ಅಬ್ರಹಾಮನು ದೇವರ [ಯೆಹೋವನ, NW ] ನ್ನು ನಂಬಿದನು; ಆ ನಂಬಿಕೆ ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು.” ಆದಕಾರಣ “ದೇವರ [ಯೆಹೋವನ, NW ] ಸ್ನೇಹಿತನೆಂಬ ಹೆಸರು ಅವನಿಗೆ ಉಂಟಾಯಿತು.”—ಯಾಕೋಬ 2:23.
ದೇವರೊಂದಿಗಿನ ಸ್ನೇಹಕ್ಕೆ ಇನ್ನೊಂದು ಹೆಚ್ಚಿನ ಆವಶ್ಯಕತೆಯು, ಈ ಸ್ನೇಹವು ತರುವ ಹಂಗುಗಳನ್ನು ನಿರ್ವಹಿಸುವದೇ ಆಗಿರುತ್ತದೆ. ಯೆಹೋವನೊಂದಿಗಿನ ಸಂಬಂಧದಲ್ಲಿ ನಮ್ಮ ನಿಕೃಷ್ಟತೆಯ ಸ್ಥಾನದ ಕಾರಣ, ಮಾನವ ಸಂಬಂಧಕ್ಕಿಂತ ಈ ಹಂಗುಗಳು ಹೆಚ್ಚು ಮಹತ್ವದಾಗಿರುತ್ತವೆ ಎಂಬದು ಸಮಂಜಸತೆಯದ್ದಾಗಿರುತ್ತದೆ. ಕೆಲವು ವಿಷಯಗಳಲ್ಲಿ ನಾವು ಅವನನ್ನು ಮೆಚ್ಚಿಸಲು ಬಯಸುವದಕ್ಕಿಂತ—ಒಬ್ಬ ಮಾನವ ಸ್ನೇಹಿತನೊಂದಿಗೆ ನಾವು ಮಾಡುವದಕ್ಕಿಂತಲೂ—ಮೀರಿ ಅವು ಹೋಗುತ್ತವೆ. ಅವುಗಳಲ್ಲಿ ಅವನನ್ನು ಸರ್ವ ವಿಷಯಗಳಲ್ಲಿ ಮೆಚ್ಚಿಸಲು ನಾವು ಬಯಸುವುದು ಸೇರಿದೆ. ದೇವರ ಮಗನೂ ಅತಿ ಆಪ್ತ ಸ್ನೇಹಿತನೂ ಆದ ಯೇಸುವು, ಯೆಹೋವನಿಗೆ ಹೀಗೆ ಹೇಳಿದಾಗ ಅವನದನ್ನು ತೋರಿಸಿದನು: “ನಾನು ಆತನಿಗೆ ಮೆಚ್ಚಿಕೆಯಾದದ್ದನ್ನು ಯಾವಾಗಲೂ ಮಾಡುತ್ತೇನೆ.”—ಯೋಹಾನ 8:29.
ಹೀಗೆ, ಯೆಹೋವನೊಂದಿಗಿನ, ಯಾ ಅವನ ಮಗನೊಂದಿಗೆ ಸ್ನೇಹವು ಯಾವುದೇ ಶರ್ತಗಳ ಆಧಾರವಿಲ್ಲದೇ ದೊರಕುವದಿಲ್ಲ; ಅದು ಸ್ನೇಹಕ್ಕಾಗಿ ಅವರು ನಮೂದಿಸಿರುವ ಪೂರ್ವಾಪೇಕ್ಷಿತಗಳಿಗನುಸಾರ ನಾವು ಜೀವಿಸುವದರ ಮೇಲೆ ಆಧಾರಿತವಾಗಿದೆ. (ಕೀರ್ತನೆ 15:1-5 ನೋಡಿರಿ.) ಅವನ ಶಿಷ್ಯರೊಂದಿಗಿನ ಅವನ ಸಂಭಾಷಣೆಯಲ್ಲಿ ಯೇಸುವು ಇದನ್ನು ಸರಳವಾಗಿ ತೋರಿಸಿದನು. “ನಾನು ನಿಮಗೆ ಕೊಟ್ಟ ಆಜೆಗ್ಞಳಿಗೆ ಸರಿಯಾಗಿ ನೀವು ನಡೆದರೆ,” ಅವನು ಅವರಿಗೆ ಅಂದದ್ದು, “ನೀವು ನನ್ನ ಸ್ನೇಹಿತರು.”—ಯೋಹಾನ 15:14.
ಸ್ನೇಹಕ್ಕಾಗಿ ಇನ್ನೊಂದು ಆವಶ್ಯಕತೆಯು ತೆರೆದ ಮತ್ತು ಮರೆಮಾಜದ ಸಂಸರ್ಗವಾಗಿರುತ್ತದೆ. ಅವನ ಮರಣದ ದಿನದಲ್ಲಿ, ಯೇಸುವು ಅವನ ನಂಬಿಗಸ್ತ ಅಪೊಸ್ತಲರಿಗೆ ಹೇಳಿದ್ದು: “ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳನ್ನುವದಿಲ್ಲ; ಯಜಮಾನನು ಮಾಡುವಂಥದು ಆಳಿಗೆ ತಿಳಿಯುವದಿಲ್ಲ. ನಿಮ್ಮನ್ನು ಸ್ನೇಹಿತರೆಂದು ಹೇಳಿದ್ದೇನೆ; ತಂದೆಯ ಕಡೆಯಿಂದ ನಾನು ಕೇಳಿದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ.” (ಯೋಹಾನ 15:15) ಅವನ ಸ್ನೇಹಿತರೊಂದಿಗೆ ಅವನ ಆಲೋಚನೆಗಳನ್ನು ಹಂಚಿಕೊಳ್ಳುವದರಲ್ಲಿ, ಯಾರ ಕುರಿತಾಗಿ ಆಮೋಸ 3:7 ಹೇಳುತ್ತದೋ ಆ ತನ್ನ ಸ್ವರ್ಗೀಯ ಪಿತನ ಮಾದರಿಯನ್ನು ಯೇಸುವು ಅನುಸರಿಸಿದನು: “ಕರ್ತನಾದ ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ರಹಸ್ಯವನ್ನು ತಿಳಿಸದೆ ಏನೂ ಮಾಡನು.”
ಇದು ಸ್ನೇಹಿತರಲ್ಲಿ ಒಂದು ಸಾಮಾನ್ಯ ಸಂಗತಿಯಲ್ಲವೇ? ರಸ್ತೆಯ ಆಚೇಪಕ್ಕದಲ್ಲಿರುವ ಶ್ರೀಮಾನ್ ಸಾಮಾನ್ಯರೊಂದಿಗೆ ನಮ್ಮ ಅನುಭವಗಳನ್ನು ಹಂಚಿಕೊಳ್ಳಬೇಕೆಂಬ ಪ್ರಚೋದನೆಯ ಭಾವನೆ ನಮಗಾಗದಿರಬಹುದು. ಮತ್ತು ನಿಶ್ಚಯವಾಗಿಯೂ ನಮ್ಮ ಆಂತರಿಕ ಯೋಚನೆಗಳನ್ನು ಮತ್ತು ಭಾವನೆಗಳನ್ನು ಅವನಿಗೆ ತಿಳಿಸಲು ನಾವು ಬಯಸುವದಿಲ್ಲ. ಏನಂದರೂ ಅವನು ಕೇವಲ ನಮ್ಮ ಪರಿಚಯಸ್ಥನು. ಆದರೆ ನಮ್ಮ ಸ್ನೇಹಿತರೊಂದಿಗೆ, ಅಂಥ ಸಂಗತಿಗಳನ್ನು ತಿಳಿಸಲು ನಾವು ಕಾದುನಿಲ್ಲುವದೇ ಕಷ್ಟ!
ದೇವರೊಂದಿಗೆ ನಮ್ಮ ಸಂಬಂಧವು ತದ್ರೀತಿಯದ್ದಾಗಿದೆ. ಪ್ರಾರ್ಥನೆಯಲ್ಲಿ ಅವನನ್ನು ಸಮೀಪಿಸಲು, ನಮ್ಮ ಅಗತ್ಯತೆಗಳನ್ನು, ನಮ್ಮ ಆಶೆಗಳನ್ನು, ಮತ್ತು ನಮ್ಮ ಆಂತರಿಕ ಭಾವನೆಗಳನ್ನು ಅವನಿಗೆ ಅರುಹಲು ನಾವು ತಡಮಾಡದೆ ಇರುವೆವು. ಆದರೆ ಸಂಸರ್ಗ ಒಮ್ಮುಖವಾಗಿರುವದಾದರೆ, ಸ್ನೇಹಮೈತ್ರಿಯು ಬಲುಬೇಗನೇ ಸಾಯುವದು. ಆದುದರಿಂದ ದೇವರು ನಮ್ಮೊಂದಿಗೆ ಮಾತಾಡುವಂತೆ ಬಿಡಲು ನಾವು ಇಚ್ಛೆಯುಳ್ಳವರಾಗಿರತಕ್ಕದ್ದು. ನಾವು ಅವನ ಲಿಖಿತ ವಾಕ್ಯಕ್ಕೆ ಜಾಗ್ರತೆಯಿಂದ ಆಲಿಸುವದರ ಮೂಲಕ, ಅವನ ಬುದ್ಧಿವಾದದ ಮೇಲೆ ಧ್ಯಾನಿಸುವದರ ಮೂಲಕ, ಮತ್ತು ಅನಂತರ ನಮಗೆ ಸಾಧ್ಯವಾಗುವಷ್ಟು ಮಟ್ಟಿಗೆ ಅದನ್ನು ಅನ್ವಯಿಸುವದರ ಮೂಲಕ ಇದನ್ನು ಮಾಡುತ್ತೇವೆ.
ಯೆಹೋವನೊಂದಿಗಿನ ಸ್ನೇಹವು ನಿಮಗೆ ಎಷ್ಟು ಪ್ರಾಮುಖ್ಯವಾಗಿದೆ?
ಈ ಪ್ರಶ್ನೆಯನ್ನು ನೀವು ಉತ್ತರಿಸುವಂತೆ ಸಹಾಯಮಾಡಲು, ಮಾನವ ಸ್ನೇಹದ ಒಂದು ವಿಶೇಷ ವಿಧವನ್ನು ಪರಿಗಣಿಸಿರಿ. ನೀವು ಒಬ್ಬ ಎಳೆಯ ವ್ಯಕ್ತಿಯಾಗಿರುವದಾದರೆ, ವಿವಾಹಕ್ಕೆ ನಡಿಸಸಾಧ್ಯವಿರುವ ಒಂದು ಸ್ನೇಹದಲ್ಲಿ ಪ್ರಾಯಶಃ ನೀವು ಆಸಕ್ತರಾಗಿರಬಹುದು. ಭಾವಿ ಸಂಗಾತಿಯೊಂದಿಗೆ ಕೇವಲ ಪರಿಚಯಸ್ಥರಾಗಿರುವದು ವಿವಾಹಕ್ಕೆ ಒಂದು ಯೋಗ್ಯ ಅಸ್ತಿವಾರವಲ್ಲವೆಂದು ನೀವು ನಿಶ್ಚಯವಾಗಿಯೂ ತಿಳಿಯುವಿರಿ. ಪರಿಚಯವು ಮೊದಲು ಸ್ನೇಹವಾಗಿ ಬದಲಾಗತಕ್ಕದ್ದು. ಈ ಸ್ನೇಹವನ್ನು ಆ ಬಳಿಕ ವಿಕಸಿಸಸಾಧ್ಯವಿದೆ ಮತ್ತು ಇನ್ನು ಅಧಿಕ ಆಪತ್ತೆಯ ಸಂಬಂಧವಾಗಿ ರೂಪಿತಗೊಂಡು, ಕಟ್ಟಕಡೆಗೆ ಒಂದು ಸಂತೋಷದ ವಿವಾಹಕ್ಕೆ ಯೋಗ್ಯ ಅಸ್ತಿವಾರವಾಗಿ ಪರಿಣಮಿಸುತ್ತದೆ.
ಈಗ, ಪರಿಗಣಿಸಿರಿ. ಇಂಥ ವಿಧದ ಸ್ನೇಹವನ್ನು ಬೆಳಸಲು ಹೆಚ್ಚಿನ ಜನರು ಎಷ್ಟೊಂದು ಪ್ರಯತ್ನ ತಕ್ಕೊಳ್ಳುತ್ತಾರೆ? ಅದನ್ನು ಸ್ಥಾಪಿಸಲು ಮತ್ತು ಅನಂತರ ಕಾಪಾಡಿಕೊಳ್ಳಲು ಎಷ್ಟೊಂದು ಸಮಯ ಮತ್ತು ಹಣವನ್ನು ವ್ಯಯಿಸುತ್ತಾರೆ? ಅದರ ಕುರಿತು ಯೋಚಿಸಲು ಅವರು ಎಷ್ಟೊಂದು ಸಮಯವನ್ನು ವೆಚ್ಚಮಾಡುತ್ತಾರೆ? ಈ ಸಂಬಂಧವನ್ನು ಪ್ರಗತಿಗೊಳಿಸುವ ಯಾ ಕಾಪಾಡಿಕೊಳ್ಳುವ ಉದ್ದೇಶಕ್ಕಾಗಿ ಎಷ್ಟೊಂದು ವ್ಯಾಪಕವಾಗಿ ಅವರು ಯೋಜನೆಗಳನ್ನು ಮಾಡುತ್ತಾರೆ—ಯಾ ಯೋಜನೆಗಳನ್ನು ಬದಲಾಯಿಸಲು ಇಚ್ಛೆಯನ್ನು ತೋರಿಸುತ್ತಾರೆ?
ನಂತರ ನೀವಾಗಿಯೇ ಪ್ರಶ್ನಿಸಿಕೊಳ್ಳಿರಿ: ‘ನನ್ನ ನಿರ್ಮಾಣಿಕನೊಂದಿಗೆ ಸ್ನೇಹವನ್ನು ವಿಕಸಿಸಲು ಯಾ ಪ್ರಗತಿಗೊಳಿಸಲು ಮತ್ತು ಅದನ್ನು ಬಲಗೊಳಿಸಲು ಇದು ನನ್ನ ಪ್ರಯತ್ನಗಳೊಂದಿಗೆ ಹೇಗೆ ತುಲನೆಯಾಗುತ್ತದೆ? ಇದನ್ನು ಮಾಡುವರೆ ನಾನು ಎಷ್ಟೊಂದು ಸಮಯವನ್ನು ವ್ಯಯಿಸುತ್ತೇನೆ? ಯೆಹೋವನೊಂದಿಗಿನ ನನ್ನ ಮಿತ್ರತ್ವವು ನನ್ನ ಯೋಚನೆಗಳನ್ನು ಎಷ್ಟೊಂದು ವ್ಯಾಪಕವಾಗಿ ಆವರಿಸುತ್ತದೆ? ಈ ಸಂಬಂಧವನ್ನು ಪ್ರಗತಿಗೊಳಿಸುವ ಯಾ ಕಾಪಾಡಿಕೊಳ್ಳುವ ಉದ್ದೇಶಕ್ಕಾಗಿ ಎಷ್ಟೊಂದು ವ್ಯಾಪಕವಾಗಿ ನಾನು ಯೋಜನೆಗಳನ್ನು ಮಾಡುತ್ತೇನೆ—ಯಾ ಯೋಜನೆಗಳನ್ನು ಬದಲಾಯಿಸಲು ಇಚ್ಛೆಯನ್ನು ತೋರಿಸುತ್ತೇನೆ?’
ಯುವ ಕ್ರೈಸ್ತರಿಗೆ, ಎಲ್ಲಾ ಮಾನವ ಸ್ನೇಹಗಳು, ಕಟ್ಟಕಡೆಗೆ ವಿವಾಹಕ್ಕೆ ನಡಿಸಬಹುದಾದ ಸ್ನೇಹ ಸಹಿತವಾಗಿ, ಅವರ ನಿರ್ಮಾಣಿಕನೊಂದಿಗೆ ಇರಬೇಕಾದ ಸ್ನೇಹಕ್ಕೆ ಪ್ರಾಮುಖ್ಯತೆಯಲ್ಲಿ ಅವೆಲ್ಲವೂ ಎರಡನೆಯದ್ದಾಗಿ ಇರತಕ್ಕದ್ದು ಎಂಬ ಪೂರ್ಣ ಅರಿವು ಇರಬೇಕು. ಆದುದರಿಂದಲೇ ಪ್ರಸಂಗಿ 12:1 ರಲ್ಲಿ ಅವರಿಗೆ ಒತ್ತಾಯಿಸಲ್ಪಟ್ಟಿದೆ: “ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು.” ಅನೇಕರು ಇದನ್ನು ದೇವರ ಶುಶ್ರೂಷಕರುಗಳಾಗಿ, ಅವರಲ್ಲಿ ಅಧಿಕ ಸಂಖ್ಯಾತರು ಏರುತ್ತಿರುವ ಪೂರ್ಣ ಸಮಯದ ಸುವಾರ್ತಿಕರಾಗಿ, ಯಾ ಪಯನೀಯರರುಗಳಾಗಿ ಸಾರ್ವಜನಿಕವಾಗಿ ಸೇವೆಸಲ್ಲಿಸುವದರಿಂದ ಮಾಡುತ್ತಾರೆ.
ಅವರ ಸುತ್ತಲೂ ಬೆಳೆಯುತ್ತಿರುವ ಸಿನಿಕತನ ಮತ್ತು ಮತಧರ್ಮ ನಿರಾಕರಣೆಯ ನಡುವೆಯೂ, ಯೆಹೋವನ ವಿರುದ್ಧವಾಗಿ ಸುಳ್ಳಾದ ನಿಂದೆಗಳನ್ನು ಮತ್ತು ಆರೋಪಗಳನ್ನು ಮಾಡಿದಾಗ, ಇವರು ಧೈರ್ಯದಿಂದ ಅದನ್ನು ಅವನ ಪರವಾಗಿ ಪ್ರತಿಪಾದಿಸುತ್ತಾರೆ. ಅವನ ಸ್ನೇಹಿತರಿಂದ ಇದನ್ನು ತಾನೇ ಯೆಹೋವನು ನ್ಯಾಯಬದ್ಧವಾಗಿ ನಿರೀಕ್ಷಿಸಬೇಕಲ್ಲವೇ? ನಮ್ಮ ಸ್ನೇಹಿತರು ಕೂಡ ಅದನ್ನೇ ಮಾಡುವಂತೆ ನಾವು ನಿರೀಕ್ಷಿಸುತ್ತೇವಲ್ಲವೇ? ಅದನ್ನು ಉತ್ಸಾಹದಿಂದಲೂ ಮತ್ತು ಮನವರಿಕೆಯಿಂದಲೂ ನಮ್ಮ ಸ್ನೇಹಿತರು ಮಾಡುತ್ತಾರೆಂದು ನಮಗೆ ತಿಳಿದುಬಂದಾಗ, ನಮ್ಮ ಹೃದಯಗಳು ಸಂತೋಷಿಸುತ್ತವಲ್ಲವೇ?—ಜ್ಞಾನೋಕ್ತಿ 27:11 ಹೋಲಿಸಿರಿ.
ಹೌದು, ದೇವರೊಂದಿಗಿನ ಸ್ನೇಹವು—ಮಾನವರೊಂದಿಗಿನದ್ದು ಸಹಿತ—ಬಾಳಬೇಕಾದರೆ, ನೆರವೇರಿಸಲ್ಪಡಬೇಕಾದ ಜವಾಬ್ದಾರಿಕೆಗಳನ್ನು ಅದು ತರುತ್ತದೆ. ಈ ಜವಾಬ್ದಾರಿಕೆಗಳನ್ನು ಸ್ವೀಕರಿಸಲು ಇಚ್ಛೆಯಿಲ್ಲದ, ಯಾ ದೇವರಿಗೆ ಸಮರ್ಪಣೆ ಮಾಡಲು ಮತ್ತು ಅದನ್ನು ನಿರ್ವಹಿಸಲು ಸಿದ್ಧನಾಗಿರದ ವ್ಯಕ್ತಿಯು, ಖಂಡಿತವಾಗಿಯೂ ಯೆಹೋವನ ಪರಿಚಯವುಳ್ಳವನಾಗಿರಬಹುದು. ಆದಾಗ್ಯೂ ಅವನ ಸ್ನೇಹಿತನಾಗಿರುವದರ ಆನಂದಗಳನ್ನು ಅವನು ಇನ್ನೂ ಅನುಭವಿಸಲಿಕ್ಕಿರುತ್ತದೆ.
[ಪುಟ 25 ರಲ್ಲಿರುವ ಚಿತ್ರ]
ಅಬ್ರಹಾಮನು ದೇವರಲ್ಲಿ ಭರವಸವಿಟ್ಟ ಕಾರಣ ಯೆಹೋವನ ಸ್ನೇಹಿತನೆಂದು ಕರೆಯಲ್ಪಟ್ಟನು