ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 2/15 ಪು. 3
  • ಹೊಸದಾಗಿ ಹುಟ್ಟಿದವರು ಯಾರು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹೊಸದಾಗಿ ಹುಟ್ಟಿದವರು ಯಾರು?
  • ಕಾವಲಿನಬುರುಜು—1993
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಭಾವೋದ್ರೇಕಗಳು ಮತ್ತು ಮನಸ್ಸು
  • ನಿಕೊದೇಮನಿಗೆ ಕಲಿಸಿದ್ದು
    ಅತ್ಯಂತ ಮಹಾನ್‌ ಪುರುಷ
  • ನಿಕೊದೇಮನಿಂದ ಪಾಠವನ್ನು ಕಲಿಯಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
ಕಾವಲಿನಬುರುಜು—1993
w93 2/15 ಪು. 3

ಹೊಸದಾಗಿ ಹುಟ್ಟಿದವರು ಯಾರು?

ಒಳ್ಳೆಯ ಜನರೆಲ್ಲರೂ ಪರಲೋಕಕ್ಕೆ ಹೋಗುತ್ತಾರೋ? ಅನೇಕರು ಹಾಗೆ ನೆನಸುತ್ತಾರೆ, ಆದರೆ ಯೇಸು ಕ್ರಿಸ್ತನು ಅದನ್ನು ಒಪ್ಪಿರಲಿಲ್ಲ. ರಾತ್ರಿಯಲ್ಲಿ ಗುಪ್ತವಾಗಿ ಆತನ ಬಳಿಗೆ ಬಂದ ನಿಕೊದೇಮನೆಂಬ ಯೆಹೂದ್ಯ ಅಧಿಪತಿಯೊಂದಿಗೆ ಮಾತಾಡುತ್ತಾ, ಯೇಸು ಅಂದದ್ದು: “ . . . ಹೊರತು ಮತ್ತಾರೂ ಪರಲೋಕಕ್ಕೆ ಏರಿಹೋದವನಲ್ಲ.”—ಯೋಹಾನ 3:13.

ಆದರೂ, ಕೆಲವು ಜನರಿಗೆ ಪರಲೋಕ ರಾಜ್ಯವನ್ನು ಪ್ರವೇಶಿಸುವ ಸಂದರ್ಭವಿರುವ ಒಂದು ಸಮಯವು ಬರುವುದು ಎಂದು ಯೇಸು ನಿಕೊದೇಮನಿಗೆ ಸೂಚಿಸಿದ್ದನು. ಅವರ ಕುರಿತು ಯೇಸು ಅಂದದ್ದು: “ಒಬ್ಬನು ನೀರಿನಿಂದಲೂ ಆತ್ಮನಿಂದಲೂ ಹುಟ್ಟದಿದ್ದರೆ ದೇವರ ರಾಜ್ಯಕ್ಕೆ ಸೇರಲಾರನು. ದೇಹದಿಂದ ಹುಟ್ಟಿದ್ದು ದೇಹವೇ; ಆತ್ಮನಿಂದ ಹುಟ್ಟಿದ್ದು ಆತ್ಮವೇ. ನೀವು ಹೊಸದಾಗಿ ಹುಟ್ಟಬೇಕು ಎಂದು ನಾನು ನಿನಗೆ ಹೇಳಿದ್ದರಿಂದ ಆಶ್ಚರ್ಯಪಡಬೇಡ.” ಆದರೆ ಯಾವನಾದರೂ ಹೊಸದಾಗಿ ಹುಟ್ಟುವುದು ಹೇಗೆ ಸಾಧ್ಯವೆಂದು ನಿಕೊದೇಮನು ಸೋಜಿಗಪಟ್ಟನು.—ಯೋಹಾನ 3:1-9.

ಪ್ರಾಯಶಃ ಯೇಸು ಯಾವ ಅರ್ಥದಲ್ಲಿ ಹಾಗಂದನೆಂದು ನೀವೂ ಯೋಚಿಸಬಹುದು. ತಾವು ದೇವರ ಪವಿತ್ರಾತ್ಮದಿಂದ ತುಂಬಿದವರಾಗಿದ್ದೇವೆಂದು ಭಾವಿಸುವ ಅನೇಕರಿಂದ ಪ್ರತಿಪಾದಿಸಲ್ಪಡುವ ದಿಢೀರ್‌ ಪರಿವರ್ತನೆಯ ಅನುಭವಗಳಿಗೆ ಅವನ ಮಾತುಗಳು ಅನ್ವಯಿಸಬಲ್ಲವೋ?

ಭಾವೋದ್ರೇಕಗಳು ಮತ್ತು ಮನಸ್ಸು

ಒಬ್ಬ ವ್ಯಕ್ತಿಯು ಹೊಸದಾಗಿ ಹುಟ್ಟಿದ್ದಾನೋ ಇಲ್ಲವೋ ಎಂಬದನ್ನು ನಿರ್ಧರಿಸುವುದರಲ್ಲಿ, ಪರಿಗಣಿಸಲ್ಪಡುವಂಥದ್ದು ಆತ್ಮದ ಶಕ್ತಿಯ ಅನಿಸಿಕೆ ಯೇ ಎಂದು ಕೆಲವರು ಹೇಳುತ್ತಾರೆ. ಆದಾಗ್ಯೂ, ನಮ್ಮ ಹೃದಯ ಮತ್ತು ಮನಸ್ಸು, ವಿಶೇಷವಾಗಿ ತೀವ್ರ ಭಾವೋದ್ರೇಕದಿಂದ ಪ್ರಭಾವಿಸಲ್ಪಟ್ಟಲ್ಲಿ, ನಮ್ಮನ್ನು ಮೋಸಗೊಳಿಸಬಲ್ಲವು.—ಯೆರೆಮೀಯ 17:9.

ಮನಸ್ಸಿನ ಮೇಲೆ ಭಾವೋದ್ರೇಕದ ಪರಿಣಾಮಗಳ ವಿಷಯದ ಒಬ್ಬ ಸಂಶೋಧಕ ವಿಲ್ಯಮ್‌ ಸಾರ್ಜಂಟ್‌, “ನಮ್ಮ ಮಿದುಳುಗಳು ನಮಗೆ ದ್ರೋಹವೆಸಗಬಹುದಾದ ಸಮಯವಾದ ಭಾವಪರವಶತೆಯ ಸ್ಥಿತಿಗಳಲ್ಲಿ ಗಳಿಸಲಾಗುವ ನಂಬಿಕೆಗಳ ವಿರುದ್ಧ ನಾವು ಎಚ್ಚರದಿಂದಿರಬೇಕಾದ” ಅಗತ್ಯವನ್ನು ತಿಳಿಸುತ್ತಾನೆ. ಸಾರ್ಜಂಟ್‌ಗೆ ಅನುಸಾರವಾಗಿ ಒಂದು ಉದಾಹರಣೆಯು, ಭಕ್ತಿಸಂಜೀವನಗಾರನು ಕೊಡುವ ಪ್ರಸಂಗ ಮತ್ತು ಅಗ್ನಿನರಕದ ದಂಡನೆಯ ಬೆದರಿಕೆಗಳ ಪರಿಣಾಮವೇ. ಬದಲಿಯಾಗಿ ನಿತ್ಯ ಯಾತನೆಯನ್ನು ಅನುಭವಿಸುವುದು ಮಾತ್ರವೇ ಇರುವುದಾದರೆ, ಪರಲೋಕಕ್ಕೆ ಹೋಗಲಾಗುವಂತೆ ಹೊಸದಾಗಿ ಹುಟ್ಟಲು ಬಯಸದವನು ಯಾರು? ಅಂಥ ಭಾವೋದ್ರೇಕದ ಒತ್ತಡದ ಕೆಳಗೆ, ಸಾರ್ಜಂಟ್‌ ಹೇಳುವುದು, “ವಿವೇಚನೆಯು ಪಕ್ಕಕ್ಕೆ ತಳ್ಳಲ್ಪಡುತ್ತದೆ, ಸಾಮಾನ್ಯವಾದ ಮಿದುಳು ಕಂಪ್ಯೂಟರ್‌ ತಾತ್ಕಾಲಿಕವಾಗಿ ನಿಷ್ಕ್ರಿಯವಾಗಿ ಮಾಡಲ್ಪಡುತ್ತದೆ, ಮತ್ತು ಹೊಸ ವಿಚಾರಗಳು ಮತ್ತು ನಂಬಿಕೆಗಳು ವಿಮರ್ಶನವಿಲ್ಲದೆ ಸ್ವೀಕರಿಸಲ್ಪಡುತ್ತವೆ.”—ದ ಮೈಂಡ್‌ ಪೊಸೆಸ್ಡ್‌.

ಹೀಗಿರಲಾಗಿ, ಹೊಸದಾಗಿ ಹುಟ್ಟುವ ವಿಷಯದ ಮೇಲೆ ಒಂದು ನಂಬಿಕೆಯು “ವಿಮರ್ಶನವಿಲ್ಲದೆ ಸ್ವೀಕರಿಸಲ್ಪಟ್ಟಿರ” ಬಹುದೆಂದು ಒಬ್ಬನು ಹೇಗೆ ಹೇಳಬಹುದು? ದೇವರ ಪವಿತ್ರಾತ್ಮವು ಬೈಬಲ್‌ ಲೇಖಕರನ್ನು ದಾಖಲಿಸುವಂತೆ ಮಾಡಿರುವ ಪ್ರತಿಯೊಂದರಿಂದ ಮಾರ್ಗದರ್ಶಿಸಲ್ಪಡುವುದೇ ನಿಜ ವಿವೇಕದ ಮಾರ್ಗವಾಗಿದೆ. ಕ್ರೈಸ್ತರು ದೇವರನ್ನು ‘ತಮ್ಮ ವಿವೇಚನಾ ಶಕ್ತಿಯೊಂದಿಗೆ’ ಆರಾಧಿಸುವಂತೆ ಉತ್ತೇಜಿಸಲ್ಪಡುತ್ತಾರೆ ಮತ್ತು ತಾವು ಏನನ್ನು ನಂಬುತ್ತಾರೋ ಅದು ಸತ್ಯವೆಂಬ ಖಾತರಿಯಿಂದಿರುವ ಅಗತ್ಯ ಅವರಿಗಿದೆ.—ರೋಮಾಪುರ 12:1, 2; 1 ಥೆಸಲೊನೀಕ 5:21.

ಹೊಸದಾಗಿ ಹುಟ್ಟುವಿಕೆಯು ಮಾನವರಿಗೆ ಎಂದೂ ನೀಡಲ್ಪಟ್ಟ ಅತ್ಯಂತ ಪ್ರಾಮುಖ್ಯ ಸುಯೋಗಗಳಲ್ಲೊಂದನ್ನು ತೆರೆಯುತ್ತದೆ. ದೇವರ ಉದ್ದೇಶದ ಪೂರೈಕೆಯಲ್ಲಿ ಒಂದು ನಿಜವಾದ ಗಮನಾರ್ಹ ವಿಕಸನದೊಂದಿಗೆ ಅದು ಜೋಡಿಸಲ್ಪಟ್ಟಿದೆ. ಇದೆಲ್ಲವೂ ಸತ್ಯವಾಗಿದೆಯಾದರೂ, ಇಂತಹ ಕೆಲವು ಪ್ರಶ್ನೆಗಳು ಏಳುತ್ತವೆ: ಹೊಸದಾಗಿ ಹುಟ್ಟಿದವರು ಯಾರು? ಇದು ಹೇಗೆ ಸಂಭವಿಸುತ್ತದೆ? ಅಂಥ ವ್ಯಕ್ತಿಗಳ ಮುಂದೆ ಯಾವ ಪ್ರತೀಕ್ಷೆಗಳು ಇಡಲ್ಪಟ್ಟಿವೆ? ಮತ್ತು ರಕ್ಷಿಸಲ್ಪಡಲಿರುವವರು ಅವರು ಮಾತ್ರವೋ?

[ಪುಟ 3 ರಲ್ಲಿರುವ ಚಿತ್ರ]

ಯಾವನಾದರೂ ಹೊಸದಾಗಿ ಹುಟ್ಟುವುದು ಹೇಗೆ ಸಾಧ್ಯವೆಂದು ನಿಕೊದೇಮನು ಸೋಜಿಗಪಟ್ಟನು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ