ನಿಮ್ಮನ್ನು ಸಂತೋಷಗೊಳಿಸಲು ಯಾವುದು ಆವಶ್ಯಕ?
ಜನರಿಂದ ಚುನಾಯಿತರಾದ ರಾಜನೀತಿಜ್ಞರು, ಅಂಥ ಜನರನ್ನು ಸಂತೋಷಪಡಿಸಲು ಪ್ರಯತ್ನಿಸುವುದನ್ನು ತಮ್ಮ ಧ್ಯೇಯವಾಗಿಡುತ್ತಾರೆ. ಎಷ್ಟೆಂದರೂ, ಅವರ ಕೆಲಸಗಳು ಅದರ ಮೇಲೆ ಹೊಂದಿಕೊಂಡಿದೆ. ಆದರೆ ಒಂದು ವಾರ್ತಾಪತ್ರಿಕೆಯು, ಪೋಲೆಂಡಿನಲ್ಲಿ “ಭ್ರಮಹರಿಸಲ್ಪಟ್ಟ ಮತ್ತು ವಿಶ್ವಾಸಕಳಕೊಂಡ ಚುನಾಯಿತ ಸಮುದಾಯ” ದ ಕುರಿತು ಮಾತಾಡುತ್ತದೆ. ಅಮೆರಿಕವು “ವಿಧಿವಿಹಿತ ರಾಜಕೀಯದಲ್ಲಿ ಅಪನಂಬಿಕೆಯಿಂದ ತುಂಬಿಹೋಗಿರುವ” ಒಂದು ಸಮಾಜವಾಗಿದೆ ಎಂದು ಒಬ್ಬ ಪತ್ರಕರ್ತನು ವಿವರಿಸುತ್ತಾನೆ. “ಫ್ರಾನ್ಸ್ನಲ್ಲಿ ಬೆಳೆಯುತ್ತಿರುವ ರಾಜಕೀಯ ಉದಾಸೀನತೆ” ಯ ಕುರಿತು ಇನ್ನೊಬ್ಬ ಲೇಖಕನು ನಮಗೆ ತಿಳಿಸುತ್ತಾನೆ. ಅಂಥ ಬಹುವ್ಯಾಪಕ ನಿರುತ್ಸಾಹ ಮತ್ತು ಅಸಮಾಧಾನವು—ಈ ಮೂರು ದೇಶಗಳಿಗೆ ಎಷುಮ್ಟಾತ್ರಕ್ಕೂ ಎಲ್ಲೆಯಾಗಿರದೆ—ಜನತೆಯನ್ನು ಸಂತೋಷಗೊಳಿಸುವ ತಮ್ಮ ಪ್ರಯತ್ನದಲ್ಲಿ ರಾಜನೀತಿಜ್ಞರು ತಪ್ಪುತ್ತಿದ್ದಾರೆಂಬದನ್ನು ಸೂಚಿಸುತ್ತದೆ.
ಧಾರ್ಮಿಕ ಮುಖಂಡರು ಸಹ ಸಂತೋಷವನ್ನು ವಾಗ್ದಾನಿಸುತ್ತಾರೆ, ಈ ಜೀವಿತದಲ್ಲಿ ಅಲ್ಲದಿದ್ದರೆ, ಕಡಿಮೆ ಪಕ್ಷ ಭವಿಷ್ಯತ್ತಿನ ಜೀವಿತದಲ್ಲಾದರೂ. ಅವರಿದನ್ನು, ಅನೇಕ ಜನರು ಹಲವಾರು ಕಾರಣಗಳಿಂದಾಗಿ ನಿರಾಕರಿಸುವ, ಮತ್ತು ಬೈಬಲ್ ಸ್ಪಷ್ಟವಾಗಿಗಿ ತಿರಸ್ಕರಿಸುವ ಒಂದು ವಿಚಾರವಾದ, ಮನುಷ್ಯರಿಗೆ ಒಂದು ಅಮರವಾದ ಅಥವಾ ದೇಹಾಂತರ ಹೊಂದುವ ಆತ್ಮವಿದೆ ಎಂಬ ವಾಗ್ದಾನದ ಮೇಲೆ ಆಧಾರಿಸುತ್ತಾರೆ. ಖಾಲಿಯಾದ ಚರ್ಚುಗಳು ಮತ್ತು ಕ್ಷಯಿಸುತ್ತಿರುವ ಸದಸ್ಯತನ ಪಟ್ಟಿಗಳು, ಸಂತೋಷಕ್ಕೆ ಧರ್ಮವು ಅತ್ಯಾವಶ್ಯಕವೆಂಬದನ್ನು ಲಕ್ಷಾಂತರ ಜನರು ಇನ್ನು ಮುಂದೆ ಪರಿಗಣಿಸುವುದಿಲ್ಲವೆಂದು ತೋರಿಸುತ್ತದೆ.—ಹೋಲಿಸಿರಿ ಆದಿಕಾಂಡ 2:7, 17; ಯೆಹೆಜ್ಕೇಲ 18:4, 20.
ಅತೃಪ್ತರಾದ ಬೇಳ್ಳಿ ಪ್ರೇಮಿಗಳು
ರಾಜಕೀಯದಲ್ಲಿ ಅಥವಾ ಧರ್ಮದಲ್ಲಿ ಅಲ್ಲದಿದ್ದರೆ, ಸಂತೋಷವು ಕಂಡುಕೊಳ್ಳಲ್ಪಡುವುದಾದರೂ ಎಲ್ಲಿ? ಪ್ರಾಯಶಃ ವಾಣಿಜ್ಯದ ಕ್ಷೇತ್ರದಲ್ಲೋ? ಅದು ಕೂಡ ಸಂತೋಷವನ್ನು ಒದಗಿಸಶಕ್ತವಾಗಿದೆಯೆಂದು ವಾದಿಸುತ್ತದೆ. ಜಾಹೀರಾತಿನ ಮಾಧ್ಯಮದ ಮೂಲಕ ಅದು ತನ್ನ ಪರವಾದ ವಾದಗಳನ್ನು ನೀಡುತ್ತಾ, ಎಷ್ಟೋ ಮಾತುಗಳಲ್ಲಿ ಸ್ಪಷ್ಟವಾಗಿಗಿ ಹೇಳುವುದು: ಹಣವು ಖರೀದಿಸಬಲ್ಲ ಪ್ರಾಪಂಚಿಕ ಸೊತ್ತುಗಳು ಮತ್ತು ಸೇವೆಗಳೆಲ್ಲವನ್ನು ಪಡೆಯುವುದರಿಂದ ಸಂತೋಷವು ಸಿಗುತ್ತದೆ.
ಈ ರೀತಿಯಲ್ಲಿ ಸಂತೋಷವನ್ನು ಹುಡುಕುವ ಜನರ ಸಂಖ್ಯೆಯು ಅಧಿಕವಾಗುತ್ತಿರುವಂತೆ ತೋರುತ್ತದೆ. ಜರ್ಮನಿಯ ಮನೆವಾರ್ತೆಗಳಲ್ಲಿ 50% ಮನೆಗಳು ಗಂಭೀರ ಸಾಲದಲ್ಲಿ ಬಿದ್ದಿವೆಯೆಂದು ಹಲವಾರು ವರ್ಷಗಳ ಹಿಂದೆ ವರದಿಯಾಗಿತ್ತು. “[ಇವುಗಳಲ್ಲಿ] ಹೆಚ್ಚಿನವುಗಳಿಗೆ ಸಾಲದಿಂದ ಹೊರಬರುವ ಕಿಂಚಿತ್ತೂ ಅವಕಾಶ ಇರಲಾರದು” ಎಂದು ಪ್ರತಿಷ್ಠಿತ ಜರ್ಮನ್ ವಾರ್ತಾಪತ್ರವಾದ ಡೆ ಟ್ಸೆಟ್ ಹೇಳಿದ್ದರಲ್ಲೇನೂ ಆಶ್ಚರ್ಯವಿಲ್ಲ. ಅದು ವಿವರಿಸಿದ್ದು: “ಖಾತೆಯಲ್ಲಿರುವುದಕ್ಕಿಂತ ಹೆಚ್ಚಿನ ಮೊತ್ತವನ್ನು ತೆಗೆಯುವ ಸಂದರ್ಭವನ್ನು ಬ್ಯಾಂಕ್ ಸದಾ ನೀಡುತ್ತದೆ—ಮತ್ತು ಸಾಲದ ಪಾಶದೊಳಗಿಂದ ಹೊರಬರುವುದು ಬಹಳ ಕಷ್ಟ.”
ಬೇರೆ ಉಚ್ಚ ಉದ್ಯಮಶೀಲ ದೇಶಗಳಲ್ಲೂ ವಿದ್ಯಮಾನವು ಇದೇ ರೀತಿ ಇದೆ. ಕೆಲವು ವರ್ಷಗಳ ಹಿಂದೆ, ನ್ಯೂ ಯಾರ್ಕ್ ಸಿಟಿ ಯೂನಿವರ್ಸಿಟಿಯಲ್ಲಿ ಸಮಾಜ ಶಾಸ್ತ್ರಜ್ಞನಾಗಿದ್ದ ಡೇವಿಡ್ ಕ್ಯಾಪ್ಲೊವಿಟ್ಸ್ ಅಂದಾಜು ಮಾಡಿದ್ದೇನಂದರೆ, ಅಮೆರಿಕದಲ್ಲಿ ಸುಮಾರು ಎರಡು ಮತ್ತು ಎರಡೂವರೆ ಕೋಟಿ ಮನೆವಾರ್ತೆಗಳು ಆಳವಾಗಿ ಸಾಲದಲ್ಲಿವೆ. “ಜನರು ಸಾಲದಲ್ಲಿ ಮುಳುಗಿಹೋಗಿದ್ದಾರೆ,” ಎಂದನವನು, “ಮತ್ತು ಅದು ಅವರ ಜೀವನಗಳನ್ನು ಧ್ವಂಸಗೊಳಿಸುತ್ತಿದೆ.”
ಅದು ಸಂತೋಷದಂತೆ ತೋರುವುದು ಕಷ್ಟದಿಂದ ಮಾತ್ರ! ಆದರೆ ಬೇರೆ ಎರಡು (ರಾಜಕೀಯ ಮತ್ತು ಧರ್ಮ) ಏನನ್ನು ಪೂರೈಸ ಶಕವ್ತಲವ್ಲೆಂತ ತೋರುತ್ತದೋ ಅದನ್ನು ವಾಣಿಜ್ಯ ಲೋಕವು ಮಾಡಶಕ್ತವೆಂದು ನಾವು ನಿರೀಕ್ಷಿಸಬೇಕೋ? ಐಶ್ವರ್ಯವಂತ ರಾಜ ಸೊಲೊಮೋನನು ಒಮ್ಮೆ ಬರೆದದ್ದು: “ಬೆಳ್ಳಿಯನ್ನು ಆಶಿಸುವವನಿಗೆ ಎಷ್ಟು ಬೆಳ್ಳಿಯಿಂದಲೂ ತೃಪ್ತಿಯಾಗದು; ಸಮೃದ್ಧಿಯನ್ನು ಬಯಸುತ್ತಲೇ ಇರುವವನಿಗೆ ಆದಾವೆಷ್ಟಾದರೂ ಸಾಲದು. ಇದು ಸಹ ವ್ಯರ್ಥ.”—ಪ್ರಸಂಗಿ 5:10.
ಪ್ರಾಪಂಚಿಕ ಸೊತ್ತುಗಳಲ್ಲಿ ಸಂತೋಷವನ್ನು ಹುಡುಕುವುದು ಗಾಳಿ ಗೋಪುರಗಳನ್ನು ಕಟ್ಟುವುದಕ್ಕೆ ಸಮಾನವಾಗಿದೆ. ಗಾಳಿಗೋಪುರಗಳನ್ನು ಕಟ್ಟುವುದು ಬಹಳ ಉದ್ರೇಕಕಾರಿಯಾಗಿರಬಹುದು, ಆದರೆ ಅವುಗಳಲ್ಲಿ ನಿವಾಸಿಸಲು ಪ್ರಯತ್ನಿಸಿದರೆ ನಿಮಗೆ ಸಮಸ್ಯೆಗಳುಂಟಾಗುವುವು.
ಸಂತೋಷವು ಲಭ್ಯವು, ಆದರೆ ಹೇಗೆ?
ಅಪೊಸ್ತಲ ಪೌಲನು ಯೆಹೋವನನ್ನು “ಸಂತೋಷವುಳ್ಳ ದೇವರು” ಎಂದು ಕರೆಯುತ್ತಾನೆ. (1 ತಿಮೊಥೆಯ 1:11) ತನ್ನ ಸ್ವಂತ ಸ್ವರೂಪದಲ್ಲಿ ಮಾನವರನ್ನು ಉಂಟುಮಾಡುವ ಮೂಲಕ, ಈ ಸಂತೋಷವುಳ್ಳ ದೇವರು ಅವರಿಗೆ ಕೂಡ ಸಂತೋಷಿತರಾಗಿರುವ ಸಾಮರ್ಥ್ಯವನ್ನು ಕೊಟ್ಟನು. (ಆದಿಕಾಂಡ 1:26) ಆದರೆ ಅವರ ಸಂತೋಷವು, ಕೀರ್ತನೆಗಾರನು ತೋರಿಸಿದಂತೆ, ಅವರು ದೇವರನ್ನು ಸೇವಿಸುವ ಮೇಲೆ ಆಧಾರಿತವಾಗಿರಲಿತ್ತು: “ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರು ಭಾಗ್ಯವಂತರು [ಸಂತೋಷವುಳ್ಳವರು, NW].” (ಕೀರ್ತನೆ 144:15ಬಿ) ಎಲ್ಲಿ “ಸಂತೋಷವುಳ್ಳ” ಮತ್ತು “ಸಂತೋಷ” ಎಂಬ ಶಬ್ದಗಳು 110 ಸಾರಿ ಬರುತ್ತವೋ ಆ ನ್ಯೂ ವರ್ಲ್ಡ್ ಟ್ರಾನ್ಸ್ಲೇಷನ್ ನಲ್ಲಿ ಕೆಲವನ್ನು ನಾವು ಚರ್ಚಿಸುವುದಾದರೆ, ನಮ್ಮ ದೇವರ ಸೇವೆಯಲ್ಲಿ ಏನೆಲ್ಲಾ ಒಳಗೂಡಿದೆ ಮತ್ತು ಆತನ ಸೇವಿಸುವಿಕೆಯು ಹೇಗೆ ನಿಜ ಸಂತೋಷಕ್ಕೆ ನಡಿಸುವುದೆಂಬದನ್ನು ನಾವು ಚೆನ್ನಾಗಿ ತಿಳುಕೊಳ್ಳಬಲ್ಲೆವು.
ಆತ್ಮಿಕ ಅಗತ್ಯತೆಗಳನ್ನು ಅಂಗೀಕರಿಸುವುದು
ದೇವರ ಕುಮಾರನಾದ ಯೇಸು ಕ್ರಿಸ್ತನು, ತನ್ನ ಪ್ರಖ್ಯಾತ ಪರ್ವತ ಪ್ರಸಂಗದಲ್ಲಿ ಅಂದದ್ದು: “ಯಾರು ಆತ್ಮಿಕ ಅಗತ್ಯತೆಯ ಪ್ರಜ್ಞೆಯುಳ್ಳವರೋ ಅವರು ಸಂತೋಷವುಳ್ಳವರು.” (ಮತ್ತಾಯ 5:3, NW) ವಾಣಿಜ್ಯ ಲೋಕವು ನಮ್ಮನ್ನು, ಸುಖಭೋಗದ ವಸ್ತುಗಳನ್ನು ಖರೀದಿಸುವುದು ಸಂತೋಷಕ್ಕೆ ಸಾಕೆಂದು ನೆನಸುವಂತೆ ಮರುಳುಗೊಳಿಸಲು ಪ್ರಯತ್ನಿಸುತ್ತದೆ. ಅದು ನಮಗೆ ಹೇಳುವುದು: ಒಂದು ಗೃಹ ಕಂಪ್ಯೂಟರ್, ವೀಡಿಯೋ ಕ್ಯಾಮೆರ, ಟೆಲಿಫೊನ್, ಕಾರು, ಹೊಚ್ಚ ಹೊಸತಾದ ಕ್ರೀಡಾ ಉಪಕರಣ ಅಥವಾ ಶೈಲಿಯ ಬಟ್ಟೆಬರೆಯೇ ಸಂತೋಷವಾಗಿದೆ. ಲೋಕದಲ್ಲಿರುವ ಕೋಟ್ಯಾಂತರ ಜನರಲ್ಲಿ ಈ ವಸ್ತುಗಳು ಇರುವುದಿಲವ್ಲಾದರೂ ಅವರು ಅಸಂತೋಷಿತರು ಆಗಲೇಬೇಕೆಂದಿಲ್ಲವೆಂಬದನ್ನು ಅದು ನಮಗೆ ಹೇಳುವುದಿಲ್ಲ. ಈ ವಿಷಯಗಳು ಜೀವನವನ್ನು ಹೆಚ್ಚು ಆರಾಮಕರ ಮತ್ತು ಅನುಕೂಲವಾಗಿ ಮಾಡಶಕ್ತನಾದರೂ, ಸಂತೋಷಕ್ಕೆ ಅವು ಅತ್ಯಾವಶ್ಯಕವಲ್ಲ.
ಪೌಲನಂತೆ, ಆತ್ಮಿಕ ಅಗತ್ಯತೆಗಳ ಪ್ರಜ್ಞೆಯುಳ್ಳವರು ಹೇಳುವುದು: “ನಮಗೆ ಅನ್ನವಸ್ತ್ರಗಳಿದ್ದರೆ ಸಾಕು.” (1 ತಿಮೊಥೆಯ 6:8) ಯಾಕೆ? ಯಾಕಂದರೆ ಆತ್ಮಿಕ ಅಗತ್ಯತೆಗಳನ್ನು ತೃಪ್ತಿಪಡಿಸುವುದೇ ನಿತ್ಯ ಜೀವಕ್ಕೆ ನಡಿಸುವಂಥಾದ್ದಾಗಿದೆ.—ಯೋಹಾನ 17:3.
ಅವನ್ನು ಖರೀದಿಸಲು ನಮ್ಮಲ್ಲಿ ಹಣವಿರುವುದಾದರೆ, ಒಳ್ಳೇ ವಸ್ತುಗಳನ್ನು ಆನಂದಿಸುವುದರಲ್ಲೇನಾದರೂ ತಪ್ಪಿದೆಯೇ? ಇರದಿರಬಹುದು. ಆದರೂ, ಪ್ರತಿಯೊಂದು ಹುಚ್ಚಾಟವನ್ನು ತೃಪ್ತಿಪಡಿಸದಿರಲು ಅಥವಾ ನಾವದನ್ನು ಪಡೆಯಶಕ್ತರು ಎಂಬ ಕಾರಣ ಮಾತ್ರದಿಂದ ಏನನ್ನಾದರೂ ಕೊಂಡುಕೊಳ್ಳದಿರಲು ಕಲಿಯುವುದು ನಮ್ಮ ಆತ್ಮಿಕತೆಯನ್ನು ಬಲಗೊಳಿಸುತ್ತದೆ. ಹೀಗೆ ನಾವು, ಯೇಸು ಆತನ ಆರ್ಥಿಕ ಪರಿಸ್ಥಿತಿಯು ಐಹಿಕ ಮಟ್ಟಗಳಿಗನುಸಾರ ಅತಿ ಉತ್ತಮವಾಗಿರದಿದ್ದರೂ ಮಾಡಿದಂತೆ, ಸಂತೃಪ್ತಿಯನ್ನು ಕಲಿತುಕೊಳ್ಳುತ್ತೇವೆ ಮತ್ತು ಸಂತೋಷವನ್ನು ಕಾಪಾಡಿಕೊಳ್ಳುತ್ತೇವೆ. (ಮತ್ತಾಯ 8:20) ಮತ್ತು ಪೌಲನು ಹೀಗೆ ಬರೆದಾಗ ಅಸಂತೋಷವನ್ನು ವ್ಯಕ್ತಪಡಿಸತ್ತಿರಲಿಲ್ಲ: “ನಾನಂತೂ ಇದ್ದ ಸ್ಥಿತಿಯಲ್ಲಿಯೇ ಸಂತುಷ್ಟನಾಗಿರುವದನ್ನು ಕಲಿತುಕೊಂಡಿದ್ದೇನೆ. ಬಡವನಾಗಿರಲೂ ಬಲ್ಲೆನು, ಸಮೃದ್ಧಯುಳ್ಳವನಾಗಿರಲೂ ಬಲ್ಲೆನು. ನಾನು ತೃಪ್ತನಾಗಿದ್ದರೂ ಹಸಿದವನಾಗಿದ್ದರೂ, ಸಮೃದ್ಧಯುಳ್ಳವನಾದರೂ ಕೊರತೆಯುಳ್ಳವನಾದರೂ, ಯಾವ ತರದ ಸ್ಥಿತಿಯಲ್ಲಿರುವವನಾದರೂ ಅದರ ಗುಟ್ಟು ನನಗೆ ತಿಳಿದದೆ.”—ಫಿಲಿಪ್ಪಿ 4:11, 12.
ಯೆಹೋವನಲ್ಲಿ ಭರವಸವಿಡುವುದು
ಒಬ್ಬನ ಆತ್ಮಿಕ ಆಗತ್ಯತೆಗಳ ಪ್ರಜ್ಞೆಯು ದೇವರಲ್ಲಿ ಭರವಸೆಯಿಡುವ ಇಚ್ಛೆಯನ್ನು ಸೂಚಿಸುತ್ತದೆ. ರಾಜ ಸೊಲೊಮೋನನು ವಿವರಿಸಿದಂತೆಯೇ, ಇದು ಸಂತೋಷಕ್ಕೆ ಕಾರಣವಾಗುತ್ತದೆ: “ಯೆಹೋವನಲ್ಲಿ ಭರವಸವಿಡುವವನು ಸಂತೋಷವುಳ್ಳವನು.”—ಜ್ಞಾನೋಕ್ತಿ 16:20, NW.
ಆದರೂ ಅನೇಕ ಜನರು, ದೇವರಲ್ಲಿ ತಮ್ಮ ಭರವಸೆಗಿಂತ ತಮ್ಮ ಹಣದಲ್ಲಿ ಮತ್ತು ತಮ್ಮ ಸೊತ್ತುಗಳಲ್ಲಿ ಹೆಚ್ಚಿನ ಭರವಸೆ ಇಡುತ್ತಾರೆಂಬದು ನಿಜ ಸಂಗತಿಯಲ್ಲವೋ? ಈ ದೃಷ್ಟಿಕೋನದಿಂದ ವೀಕ್ಷಿಸುವುದಾದರೆ, “ನಮ್ಮ ಭರವಸೆ ದೇವರಲ್ಲಿ” ಎಂಬ ಸೂಕ್ತಿಯನ್ನು ಹಣದ ಮೇಲೆ ಪ್ರದರ್ಶಿಸುವುದಕ್ಕಿಂತ ಹೆಚ್ಚಿನ ಅಸಂಗತ ಸ್ಥಳ ಬೇರೊಂದಿಲ್ಲ, ಆದರೂ ಅದೇ ವ್ಯಕ್ತಪಡಿಸುವಿಕೆಯು ಅಮೆರಿಕದ ನಾಣ್ಯನೋಟುಗಳ ಮೇಲೆ ಗೋಚರಿಸುತ್ತದೆ.
ಹಣವು ಖರೀದಿಸಬಲ್ಲ ಯಾವುವೇ ಸುವಸ್ತುಗಳ ಕೊರತೆ ಇದ್ದಿರದ ರಾಜ ಸೊಲೊಮೋನನು, ಪ್ರಾಪಂಚಿಕ ವಸ್ತುಗಳಲ್ಲಿ ಭರವಸೆ ಇಡುವಿಕೆಯು ಬಾಳುವ ಸಂತೋಷಕ್ಕೆ ನಡಿಸುವುದಿಲ್ಲವೆಂಬದನ್ನು ಅಂಗೀಕರಿಸಿದ್ದನು. (ಪ್ರಸಂಗಿ 5:12-15) ಬ್ಯಾಂಕ್ನಲ್ಲಿದ್ದ ಹಣವು ಬ್ಯಾಂಕ್ ದಿವಾಳಿಯಾಗುವ ಮೂಲಕ ಅಥವಾ ಹಣದುಬ್ಬರದ ಮೂಲಕ ನಷ್ಟವಾಗಿ ಹೋಗಬಹುದು. ಸ್ಥಿರಾಸ್ತಿಯು ಪ್ರಚಂಡ ಬಿರುಗಾಳಿಯಿಂದಾಗಿ ನಾಶವಾಗಿ ಹೋಗಬಲ್ಲದು. ವಿಮಾ ಪತ್ರಗಳು, ಭೌತಿಕ ನಷ್ಟಗಳನ್ನು ಅಂಶಿಕವಾಗಿ ಭರ್ತಿಮಾಡಿದರೂ, ಭಾವನಾತ್ಮಕ ನಷ್ಟಗಳನ್ನೆಂದೂ ಕಟ್ಟಿಕೊಡಲಾರವು. ಒಂದು ದಿಢೀರ್ ಮಾರ್ಕೆಟ್ ಕುಸಿತದಿಂದಾಗಿ, ಸ್ಟಾಕ್ ಮತ್ತು ಬಾಂಡ್ಗಳು ಒಂದೇ ರಾತ್ರಿಯೊಳಗೆ ಬೆಲೆಯಿಲ್ಲದ್ದಾಗಿ ಪರಿಣಮಿಸಬಹುದು. ಒಂದು ಒಳ್ಳೇ ಸಂಬಳದ ಕೆಲಸ ಕೂಡ—ಅನೇಕ ಕಾರಣಗಳಿಂದಾಗಿ—ಇಂದು ಇದೆ, ನಾಳೆ ಇಲ್ಲ, ಎಂದಾಗಬಲ್ಲದು.
ಈ ಕಾರಣಗಳಿಂದಾಗಿ ಯಾವನು ಯೆಹೋವನಲ್ಲಿ ಭರವಸೆಯಿಡುತ್ತಾನೋ ಅವನು ಯೇಸುವಿನ ಎಚ್ಚರಿಕೆಗೆ ಕಿವಿಗೊಡುವ ವಿವೇಕವನ್ನು ಕಾಣುತ್ತಾನೆ: “ಭೂಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಬೇಡಿರಿ; ಇಲ್ಲಿ ಅಂತೂ ಅದು ನುಸಿಹಿಡಿದು ಕಿಲುಬು ಹತ್ತಿ ಕೆಟ್ಟುಹೋಗುವದು; ಇಲ್ಲಿ ಕಳ್ಳರು ಕನ್ನಾಕೊರೆದು ಕದಿಯುವರು. ಆದರೆ ಪರಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಿರಿ; ಅಲ್ಲಿ ಅದು ನುಸಿಹಿಡಿದು ಕಿಲುಬುಹತ್ತಿ ಕೆಟ್ಟುಹೋಗುವದಿಲ್ಲ; ಅಲ್ಲಿ ಕಳ್ಳರು ಕನ್ನಾಕೊರೆಯುವದೂ ಇಲ್ಲ.”—ಮತ್ತಾಯ 6:19, 20.
ಒಬ್ಬನು ತನ್ನ ಭರವಸೆಯನ್ನು, ಯಾವಾಗಲೂ ಒದಗಿಸುವಾತನಾದ ಸರ್ವಶಕ್ತನಾದ ದೇವರಲ್ಲಿ ಇಟ್ಟಿದ್ದಾನೆಂದು ತಿಳಿಯುವುದಕ್ಕಿಂತ ಹೆಚ್ಚಿನ ಸುರಕ್ಷೆಯ ಭಾವವು ಮತ್ತು ಸಂತೋಷದ ಅನಿಸಿಕೆಯು ಬೇರೆ ಯಾವುದಿರ ಸಾಧ್ಯವಿದೆ?—ಕೀರ್ತನೆ 94:14; ಇಬ್ರಿಯ 13:5, 6.
ದೈವಿಕ ಗದರಿಕೆಯನ್ನು ಸ್ವೀಕರಿಸುವುದು
ಬುದ್ಧಿವಾದ, ಗದರಿಕೆಯು ಕೂಡ, ನಿಜ ಸ್ನೇಹಿತನಿಂದ ಪ್ರೀತಿಯ ಭಾವದಲ್ಲಿ ಕೊಡಲ್ಪಟ್ಟಾಗ ಸ್ವಾಗತಾರ್ಹವಾಗಿದೆ. ಯೆಹೋವನ ಸೇವಕನಾದ ಯೋಬನ ಸ್ನೇಹಿತನೆನಿಸಿಕೊಂಡ ಒಬ್ಬನು ಸ್ವನೀತಿಯಿಂದ ಒಮ್ಮೆ ಅವನಿಗೆ ಹೇಳಿದ್ದು: “ದೇವರು ಯಾವನನ್ನು ಶಿಕ್ಷಿಸುವನೋ ಅವನು ಸಂತೋಷವುಳ್ಳವನು.” ಎಲೀಫಜನು ಆ ಮಾತುಗಳಿಂದ ಏನನ್ನು ಸೂಚಿಸಿದನೋ ಅದು ಸತ್ಯವಾಗಿದ್ದರೂ—ಯೋಬನು ಗಂಭೀರ ತಪ್ಪಿಗೆ ದೋಷಿಯಾಗಿದ್ದನೆಂಬದು ಮಾತ್ರ—ಸತ್ಯವಲ್ಲ. ಎಂತಹ ‘ಬೇಸರಿಕೆ ಹುಟ್ಟಿಸುವ ಆದರಣೆಯವನು’! ಅನಂತರ ಯೆಹೋವನು ಯೋಬನನ್ನು ಪ್ರೀತಿಯಲ್ಲಿ ಗದರಿಸಿದಾಗಲಾದರೋ, ಯೋಬನು ದೀನತೆಯಿಂದ ಗದರಿಕೆಯನ್ನು ಸ್ವೀಕರಿಸಿದನು ಮತ್ತು ತನ್ನನ್ನು ಅಧಿಕ ಸಂತೋಷದ ಹಾದಿಯಲ್ಲಿ ಹಾಕಿಕೊಂಡನು.—ಯೋಬ 5:17, NW; 16:2; 42:6, 10-17.
ಯೋಬನೊಂದಿಗೆ ಮಾಡಿದಂತೆ ಇಂದು ದೇವರು ತನ್ನ ಸೇವಕರೊಂದಿಗೆ ನೇರವಾಗಿ ಮಾತನಾಡುವುದಿಲ್ಲ. ಬದಲಿಗೆ ಆತನು, ತನ್ನ ವಾಕ್ಯದ ಮತ್ತು ತನ್ನ ಆತ್ಮ-ನಿರ್ದೇಶಿತ ಸಂಸ್ಥೆಯ ಮೂಲಕ ಅವರನ್ನು ಗದರಿಸುತ್ತಾನೆ. ಪ್ರಾಪಂಚಿಕ ಅಭಿರುಚಿಗಳನ್ನು ಬೆನ್ನಟ್ಟುವ ಕ್ರೈಸ್ತರಿಗಾದರೋ, ದೇವರ ವಾಕ್ಯವನ್ನು ಕ್ರಮವಾಗಿ ಅಭ್ಯಾಸಿಸಲು ಮತ್ತು ಯೆಹೋವನ ಸಂಸ್ಥೆಯು ಒದಗಿಸುವ ಎಲ್ಲಾ ಕೂಟಗಳಿಗೆ ಹಾಜರಾಗಲು ಸಮಯ, ಮತ್ತು ಶಕ್ತಿಯೂ ಇಲ್ಲ, ಒಲವೂ ಇಲ್ಲ.
ದೇವರು ಯಾರನ್ನು ಗದರಿಸುತ್ತಾನೋ ಆ ಮನುಷ್ಯನು, ಜ್ಞಾನೋಕ್ತಿ 3:11-18, (NW)ಕ್ಕೆ ಅನುಸಾರವಾಗಿ, ಅಂಥ ಗದರಿಕೆಯನ್ನು ಸ್ವೀಕರಿಸುವ ವಿವೇಕವನ್ನು ಅಂಗೀಕರಿಸುತ್ತಾನೆ: “ಜ್ಞಾನವನ್ನು ಪಡೆಯುವವನು ಮತ್ತು ವಿವೇಕವನ್ನು ಸಂಪಾದಿಸುವವನು ಸಂತೋಷವುಳ್ಳವನು. ಅದರ ಲಾಭವು ಬೆಳ್ಳಿಯ ಲಾಭಕ್ಕಿಂತಲೂ ಅದರಿಂದಾಗುವ ಆದಾಯವು ಬಂಗಾರಕ್ಕಿಂತಲೂ ಅಮೂಲ್ಯವೇ ಸರಿ. ಅದರ ಬೆಲೆಯು ಹವಳಕ್ಕಿಂತಲೂ ಹೆಚ್ಚು. ನಿನ್ನ ಇಷ್ಟವಸ್ತುಗಳೆಲ್ಲವು ಅದಕ್ಕೆ ಸಮವಲ್ಲ. ಅದರ ಬಲಗೈಯಲ್ಲಿ ದೀರ್ಘಾಯುಷ್ಯವೂ ಎಡಗೈಯಲ್ಲಿ ಧನವೂ ಘನತೆಯೂ ಉಂಟು. ಅದರ ದಾರಿಗಳು ಸುಖಕರವಾಗಿವೆ, ಅದರ ಮಾರ್ಗಗಳೆಲ್ಲಾ ಸಮಾಧಾನವೇ. ಅದನ್ನು ಹಿಡಿದುಕೊಳ್ಳುವವರಿಗೆ ಅದು ಜೀವದ ಮರವಾಗಿದೆ; ಅದನ್ನು ಅವಲಂಬಿಸುವ ಪ್ರತಿಯೊಬ್ಬನೂ ಸಂತೋಷವುಳ್ಳವನು.”
ನಿರ್ಮಲರೂ ಶಾಂತಿ-ಪ್ರಿಯರೂ ಆಗಿರುವುದು
ಸಂತೋಷವುಳ್ಳ ಜನರು “ನಿರ್ಮಲಚಿತ್ತರು” ಮತ್ತು “ಸಮಾಧಾನ ಪಡಿಸುವವರು” ಆಗಿ ವರ್ಣಿಸಲ್ಪಟ್ಟಿದ್ದಾರೆ. (ಮತ್ತಾಯ 5:8, 9) ಆದರೆ ಪ್ರಾಪಂಚಿಕ ಜೀವನ ಶೈಲಿಯನ್ನು ಉತ್ತೇಜಿಸುವ ಒಂದು ಲೋಕದಲ್ಲಿ, ಸ್ವಾರ್ಥಪರವಾದ, ಅಶುದ್ಧವೂ ಆಗಿರಬಹುದಾದ, ಅಪೇಕ್ಷೆಗಳು ನಮ್ಮ ಹೃದಯಗಳಲ್ಲಿ ಬೇರೂರುವುದು ಅದೆಷ್ಟು ಸುಲಭವು! ದೈವಿಕ ವಿವೇಕದಿಂದ ನಡಿಸಲ್ಪಡದಿದ್ದಲ್ಲಿ, ಇತರರೊಂದಿಗೆ ಶಾಂತಿಭರಿತ ಸಂಬಂಧಗಳನ್ನು ನಷ್ಟಗೊಳಿಸುವ ಸಂದೇಹಾಸ್ಪದ ಮೂಲಗಳಿಂದ ಆರ್ಥಿಕ ಸುಖವನ್ನು ಹುಡುಕುವರೆ ತಪ್ಪುದಾರಿಗೆಳೆಯಲ್ಪಡುವುದು ಕೂಡ ನಮಗೆಷ್ಟು ಸುಲಭ! ಬೈಬಲು ಎಚ್ಚರಿಸುವುದು ಕಾರಣವಿಲ್ಲದೆ ಅಲ್ಲ: “ಹಣದಾಸೆಯು ಸಕಲ ವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ಅದರಿಂದ ಕ್ರಿಸ್ತನಂಬಿಕೆಯನ್ನು ಬಿಟ್ಟು ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.”—1 ತಿಮೊಥೆಯ 6:10.
ಹಣದಾಸೆಯು ಅಸಂತುಷ್ಟಿ, ಕೃತಘ್ನತೆ, ಮತ್ತು ದುರಾಶೆಗೆ ಇಂಬುಕೊಡುವ ಸ್ವಾರ್ಥ ಸಾಧನೆಯ ನೋಟವನ್ನು ಪ್ರವರ್ಧಿಸುತ್ತದೆ. ಅಂಥ ಒಂದು ತಪ್ಪಾದ ಆತ್ಮವು ವಿಕಸಿಸುವುದರಿಂದ ತಡೆಯಲು, ಕೆಲವು ಕ್ರೈಸ್ತರು, ದೊಡ್ಡದಾದ ಆರ್ಥಿಕ ನಿರ್ಣಯಗಳನ್ನು ಮಾಡುವ ಮುಂಚೆ, ತಮ್ಮೊಂದಿಗೆ ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾರೆ: ಅದು ನನಗೆ ನಿಜವಾಗಿ ಅಗತ್ಯವಿದೆಯೇ? ಇತರ ಲಕ್ಷಾಂತರ ಜನರು ಅದರ ಹೊರತು ಜೀವಿಸಲೇಬೇಕಾಗಿರುವಾಗ, ನನಗೆ ಈ ಭಾರೀ ಕ್ರಯದ ಖರೀದಿಯು ಅಥವಾ ಒಳ್ಳೇ ಸಂಬಳದ ಮತ್ತು ಸಮಯ ವ್ಯಯದ ಕೆಲಸವು ಬೇಕೋ? ಸತ್ಯಾರಾಧನೆಯಲ್ಲಿ ನನ್ನ ಪಾಲನ್ನು ವಿಸ್ತರಿಸುವುದರಲ್ಲಿ, ಲೋಕವ್ಯಾಪಕ ಸಾರುವ ಕಾರ್ಯವನ್ನು ಬೆಂಬಲಿಸುವ ಮೂಲಕ, ಅಥವಾ ನನಗಿಂತ ಕಡಿಮೆ ಅನುಕೂಲಸ್ಥ ಜನರಿಗೆ ಸಹಾಯ ಮಾಡುವ ಮೂಲಕ, ಪ್ರಾಯಶಃ ನಾನು ನನ್ನ ಹಣ ಮತ್ತು ಸಮಯವನ್ನು ಹೆಚ್ಚು ಒಳ್ಳೆಯದಾಗಿ ವ್ಯಯಿಸಶಕ್ತನೋ?
ತಾಳ್ಮೆಯನ್ನು ತೋರಿಸುವುದು
ಯೋಬನನ್ನು ಸಹಿಸಿಕೊಳ್ಳುವಂತೆ ಒತ್ತಾಯಿಸಿದ ಪರೀಕ್ಷೆಗಳಲ್ಲಿ ಒಂದು ಆರ್ಥಿಕ ನಷ್ಟವಾಗಿತ್ತು. (ಯೋಬ 1:14-17) ಅವನ ಮಾದರಿಯು ತೋರಿಸುವ ಪ್ರಕಾರ, ಜೀವನದ ಪ್ರತಿಯೊಂದು ವಿಭಾಗದಲ್ಲಿ ತಾಳ್ಮೆಯು ಅಪೇಕ್ಷಿಸಲ್ಪಡುತ್ತದೆ. ಕೆಲವು ಕ್ರೈಸ್ತರು ಹಿಂಸೆಯನ್ನು ತಾಳಿಕೊಳ್ಳಬೇಕು; ಇತರರು ಶೋಧನೆಯನ್ನು; ಇನ್ನೂ ಇತರರು ನ್ಯೂನ ಆರ್ಥಿಕ ಪರಿಸ್ಥಿತಿಗಳನ್ನು. ಆದರೆ, ಪ್ರತಿಯೊಂದು ತರದ ತಾಳ್ಮೆಯು ಯೆಹೋವನಿಂದ ಬಹುಮಾನಿಸಲ್ಪಡುವುದು, ಕ್ರೈಸ್ತ ಶಿಷ್ಯನಾದ ಯಾಕೋಬನು ಯೋಬನಿಗೆ ನಿರ್ದೇಶಿಸಿ ಬರೆದ ಪ್ರಕಾರ: “ತಾಳಿಕೊಂಡಿರುವವರನ್ನು ಸಂತೋಷವುಳ್ಳವರೆಂದು ಹೇಳುತ್ತೇವಲ್ಲವೇ.”—ಯಾಕೋಬ 5:11, NW.
ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲಿಕ್ಕಾಗಿ ಆತ್ಮಿಕ ಅಭಿರುಚಿಗಳನ್ನು ಅಸಡ್ಡೆ ಮಾಡುವುದು ತಾತ್ಕಾಲಿಕ ಆರ್ಥಿಕ ಪರಿಹಾರವನ್ನು ತರಬಹುದು, ಆದರೆ ದೇವರ ರಾಜ್ಯದ ಕೆಳಗಿನ ಖಾಯಂ ಆರ್ಥಿಕ ಪರಿಹಾರದ ನಮ್ಮ ನೋಟವನ್ನು ಉಜ್ವಲವಾಗಿಡಲು ಅದು ಸಹಾಯಕರವೋ? ಆ ಅಪಾಯವು ತಕ್ಕೊಳ್ಳಲಿಕ್ಕೆ ಅರ್ಹವೋ?—2 ಕೊರಿಂಥ 4:18.
ಈಗ ಮತ್ತು ಸದಾಕಾಲಕ್ಕೂ ಸಂತೋಷವನ್ನು ಕಂಡುಕೊಳ್ಳುವುದು
ಮಾನವರನ್ನು ಸಂತೋಷಗೊಳಿಸಲಿಕ್ಕಾಗಿ ಯಾವುದು ಆವಶ್ಯಕವೆಂಬ ಯೆಹೋವನ ನೋಟವನ್ನು ಕೆಲವು ಜನರು ಪ್ರತ್ಯಕ್ಷವಾಗಿ ವಾದಿಸುತ್ತಾರೆ. ಅಧಿಕ ಮಹತ್ವದ ದೀರ್ಘ-ಕಾಲಿಕ ಪ್ರಯೋಜನಗಳನ್ನು ಅಲಕ್ಷಿಸುತ್ತಾ, ದೇವರು ಏನನ್ನು ಸೂಚಿಸುತ್ತಾನೋ ಅದನ್ನು ಮಾಡುವುದರಲ್ಲಿ ಯಾವ ತತ್ಕ್ಷಣದ ವೈಯಕ್ತಿಕ ಲಾಭವನ್ನು ಅವರು ಕಾಣುವುದಿಲ್ಲ. ಪ್ರಾಪಂಚಿಕ ವಿಷಯಗಳಲ್ಲಿ ಭರವಸೆ ಇಡುವುದು ವ್ಯರ್ಥವೆಂದೂ ಮತ್ತು ಅದು ಆಶಾಭಂಗಕ್ಕೆ ನಡಿಸುವುದೆಂದೂ ಅಂಗೀಕರಿಸಲು ಅವರು ತಪ್ಪುತ್ತಾರೆ. ಬೈಬಲ್ ಲೇಖಕನು ಸರಿಯಾಗಿಯೇ ಕೇಳುವುದು: “ಸೊತ್ತು ಹೆಚ್ಚಿದರೆ ಅನುಭವಿಸುವವರ ಸಂಖ್ಯೆಯೂ ಹೆಚ್ಚುವದು; ಅದನ್ನು ಕಣ್ಣಿಂದ ನೋಡುವದೇ ಹೊರತು ಯಜಮಾನನಿಗೆ ಇನ್ನಾವ ಲಾಭವೂ ಇಲ್ಲ.” (ಪ್ರಸಂಗಿ 5:11; ಇದನ್ನೂ ನೋಡಿರಿ ಪ್ರಸಂಗಿ 2:4-11; 7:12) ಎಷ್ಟು ಬೇಗನೆ ಆಸಕ್ತಿಯು ಕುಂದಿಹೋಗುತ್ತದೆ ಮತ್ತು ನಮಗೆ ಹೇಗಾದರೂ ಬೇಕೇ ಬೇಕೆಂದು ನಾವು ನೆನಸಿದ ವಿಷಯಗಳು ಸಹ ದೂರ ಹಾಕಲ್ಪಡುತ್ತವೆ ಮತ್ತು ಮರೆಯಲ್ಪಡುತ್ತವೆ.
ತನ್ನ ನೆರೆಯವನಲ್ಲೆಷ್ಟು ಪ್ರಾಪಂಚಿಕ ವಸ್ತುಗಳಿವೆಯೋ ಅವು ತನ್ನಲಿಯ್ಲೂ ಇರಬೇಕೆಂದು ಪ್ರಯತ್ನಿಸುವ ಒತ್ತಡಕ್ಕೆ ಬೀಳುವಂತೆ ನಿಜ ಕ್ರೈಸ್ತನು ತನ್ನನ್ನೆಂದೂ ಬಿಟ್ಟುಕೊಡನು. ನಿಜ ಪಾತ್ರತೆಯು ಒಬ್ಬನಲ್ಲಿ ಏನಿದೆಯೋ ಅದರಿಂದಲ್ಲ, ಬದಲಿಗೆ ಒಬ್ಬನು ಏನಾಗಿದ್ದಾನೋ ಅದರಿಂದ ಅಳೆಯಲ್ಪಡುತ್ತದೆಂದು ಅವನಿಗೆ ಗೊತ್ತಿದೆ. ಒಬ್ಬ ವ್ಯಕ್ತಿಯನ್ನು ಸಂತೋಷಗೊಳಿಸಲು—ನಿಜವಾಗಿ ಸಂತೋಷಪಡಿಸಲು—ಯಾವುದು ಆವಶ್ಯಕವೆಂಬ ವಿಷಯದಲ್ಲಿ ಅವನ ಮನಸ್ಸಿನಲ್ಲಿ ಯಾವ ಸಂಶಯವೂ ಇಲ್ಲ: ಯೆಹೋವನೊಂದಿಗೆ ಸುಸಂಬಂಧದಲ್ಲಿ ಆನಂದಿಸುವುದು ಮತ್ತು ಆತನ ಸೇವೆಯಲ್ಲಿ ಕಾರ್ಯನಿರತರಾಗಿರುವುದು.
[ಪುಟ 20 ರಲ್ಲಿರುವ ಚಿತ್ರ]
ಪ್ರಾಪಂಚಿಕ ವಸ್ತುಗಳು ಮಾತ್ರವೇ ಬಾಳುವ ಸಂತೋಷವನ್ನು ಎಂದೂ ತರಲಾರವು
[ಪುಟ 22 ರಲ್ಲಿರುವ ಚಿತ್ರ]
ಬೈಬಲ್ ಅನ್ನುವುದು: “ಯಾರು ಆತ್ಮಿಕ ಅಗತ್ಯತೆಯ ಪ್ರಜ್ಞೆಯುಳ್ಳವರೋ ಅವರು ಸಂತೋಷವುಳ್ಳವರು”