ಬೈಬಲ್ ಭೂವಿವರಣೆ ಅದು ನಿಷ್ಕೃಷ್ಟವೊ?
ಪ್ಯಾಲೆಸ್ಟೈನ್ ದೇಶದಲ್ಲಿ ಸೂರ್ಯನು ಆಗ ತಾನೆ ಕಂತಿದ್ದಾನೆ. ವರ್ಷವು 1799 ನೆಯ ಇಸವಿ. ಬಿಸಿಲಲ್ಲಿ ದಿನವಿಡೀ ನಡೆದಿದ್ದ ಫ್ರೆಂಚ್ ಸೈನ್ಯ ಶಿಬಿರಗಳಲ್ಲಿ ತಂಗಿದೆ, ಮತ್ತು ಮುಖ್ಯ ಸೇನಾನಿ ನೆಪೋಲಿಯನ್ ತನ್ನ ಡೇರೆಯಲ್ಲಿ ವಿಶ್ರಮಿಸುತ್ತಿದ್ದಾನೆ. ಮೋಂಬತಿಯ್ತ ಮಿಣುಕಾಟದಲ್ಲಿ ಅವನ ಸೇವಕರಲ್ಲೊಬ್ಬನು ಫ್ರೆಂಚ್ ಬೈಬಲಿನಿಂದ ಗಟ್ಟಿಯಾಗಿ ಓದುತ್ತಿದ್ದಾನೆ.
ನೆಪೋಲಿಯನನ ಪ್ಯಾಲೆಸ್ಟೈನಿನ ಮಿಲಿಟರಿ ದಂಡಯಾತ್ರೆಯ ಸಮಯದಲ್ಲಿ ಇದು ಅನೇಕ ವೇಳೆ ನಡೆಯಿತಂತೆ. “ಆ ಹಳೆಯ ಪಟ್ಟಣಗಳ ಭಗ್ನಾವಶೇಷಗಳಲ್ಲಿ ಶಿಬಿರಗಳಲ್ಲಿ ನೆಲೆಸಿದಾಗ ಪ್ರತಿ ಸಾಯಂಕಾಲ ಅವರು ಶಾಸ್ತ್ರಗಳನ್ನು ಗಟ್ಟಿಯಾಗಿ ಓದಿದರು. . . . ಅನುರೂಪತೆ ಮತ್ತು ವರ್ಣನೆಗಳ ಸತ್ಯತೆ ಗಮನಾರ್ಹವಾಗಿದ್ದವು: ಅಷ್ಟೊಂದು ಶತಮಾನಗಳ ಮತ್ತು ಬದಲಾವಣೆಗಳ ಬಳಿಕವೂ ಅವು ಇನ್ನೂ ಈ ದೇಶಕ್ಕೆ ಹೊಂದಿಕೆಯಾಗಿವೆ,” ಎಂದು ಅವನು ಆ ಬಳಿಕ ತನ್ನ ಜೀವನ ಚರಿತ್ರೆಯಲ್ಲಿ ಬರೆದನು.
ಮಧ್ಯ ಪೂರ್ವಕ್ಕೆ ಹೋಗುವ ಪ್ರಯಾಣಿಕರು ಬೈಬಲ್ ಘಟನೆಗಳನ್ನು ಈ ದಿನಗಳ ನಿವೇಶನಗಳಿಗೆ ಹೊಂದಿಸಿಕೊಳ್ಳುವುದು ಸುಲಭವೆಂದು ಕಂಡುಕೊಳ್ಳುವುದು ನಿಶ್ಚಯ. ಫ್ರೆಂಚ್ ಸೈನ್ಯ ಈಜಿಪ್ಟನ್ನು ಜಯಿಸುವ ಮೊದಲು, ಆ ಪ್ರಾಚೀನ ದೇಶದ ಬಗೆಗೆ ವಿದೇಶೀಯರಿಗೆ ಕೊಂಚವೇ ತಿಳಿದಿತ್ತು. ಆ ಬಳಿಕ ನೆಪೋಲಿಯನನು ಈಜಿಪ್ಟಿಗೆ ಕರೆತಂದಿದ್ದ ವಿಜ್ಞಾನಿಗಳೂ ವಿದ್ವಾಂಸರೂ ಈಜಿಪ್ಟಿನ ಪುರಾತನ ವೈಭವದ ವಿವರಣೆಗಳನ್ನು ಜಗತ್ತಿಗೆ ಪ್ರಕಟಿಸಲಾರಂಭಿಸಿದರು. ಇದು ಇಸ್ರಾಯೇಲ್ಯರಿಗೆ ಒಮ್ಮೆ ವಿಧಿಸಲ್ಪಟ್ಟಿದ್ದ ‘ಕಠಿನ ದಾಸತ್ವ’ ವನ್ನು ಚಿತ್ರೀಕರಿಸಲು ಸುಲಭ ಮಾಡಿದೆ.—ವಿಮೋಚನಕಾಂಡ 1:13, 14.
ಇಸ್ರಾಯೇಲ್ಯರು, ಈಜಿಪ್ಟಿನಿಂದ ಅವರ ವಿಮೋಚನೆಯ ರಾತ್ರಿಯಲ್ಲಿ ರಮ್ಸೇಸ್ನಲ್ಲಿ ಕೂಡಿಬಂದು ಆ ಬಳಿಕ “ಮರುಳುಕಾಡಿನ ಅಂಚಿ” ಗೆ ನಡೆದು ಹೋದರು. (ವಿಮೋಚನಕಾಂಡ 12:37; 13:20) ಇಲ್ಲಿ ದೇವರು ಅವರಿಗೆ, “ಅಡ್ಡ ತಿರಿಗಿ” “ಸಮುದ್ರದ ಬಳಿಯಲ್ಲಿ . . . ಇಳಿದುಕೊಳ್ಳಬೇಕು” ಎಂದು ಆಜ್ಞಾಪಿಸಿದನು. ಈ ವಿಚಿತ್ರ ಚಲನೆಯನ್ನು ಇಸ್ರಾಯೇಲ್ಯರಿಗೆ “ದಾರಿ ತಪ್ಪಿದೆ” ಎಂದು ಅರ್ಥಮಾಡಿ, ಈಜಿಪ್ಟಿನ ಅರಸನು ತನ್ನ ಮಾಜಿ ದಾಸರನ್ನು ಮತ್ತೆ ಸೆರೆಹಿಡಿಯಲು ತನ್ನ ಸೈನ್ಯ ಮತ್ತು 600 ಯುದ್ಧರಥಗಳೊಂದಿಗೆ ಹೊರಟನು.—ವಿಮೋಚನಕಾಂಡ 14:1-9.
ನಿರ್ಗಮನ
ಸಾ.ಶ. ಒಂದನೆಯ ಶತಮಾನದ ಇತಿಹಾಸಗಾರ ಜೋಸೀಫಸನಿಗನುಸಾರ, ಈಜಿಪ್ಟಿನ ಸೈನ್ಯ ಮೊದಲು ಇಸ್ರಾಯೇಲ್ಯರನ್ನು “ಒಂದು ಅಗಲಕಿರಿದಾದ ಸ್ಥಳಕ್ಕೆ” ಓಡಿಸಿ, ಅವರನ್ನು “ಪ್ರವೇಶಿಸಲಾಗದ ಪ್ರಪಾತಗಳು ಮತ್ತು ಸಮುದ್ರದ ಮಧ್ಯೆ” ಸಿಕ್ಕಿ ಹಾಕಿಸಿತು. ಇಸ್ರಾಯೇಲ್ಯರು ಕೆಂಪು ಸಮುದ್ರವನ್ನು ದಾಟಿದ ನಿಖರವಾದ ಸ್ಥಳವು ಇದೇ ಎಂದು ನಿಶ್ಚಯವಾಗಿ ಇಂದು ಗೊತ್ತಿಲ್ಲ. ಆದರೂ, ಕೆಂಪು ಸಮುದ್ರದ ಉತ್ತರ ತುದಿಯು ತೋರುವ ಒಂದು ಪರ್ವತ ಶ್ರೇಣಿಯ ಮೇಲಿನಿಂದ ಈ ಘಟನೆಯನ್ನು ಚಿತ್ರೀಕರಿಸುವುದು ಸುಲಭ. ರಸಕರವಾಗಿ, ಈ ಪರ್ವತವು ಜೆಬೆಲ್ ಅಟಾಕ ಅಂದರೆ “ವಿಮೋಚನೆಯ ಪರ್ವತ” ಎಂದು ಕರೆಯಲ್ಪಡುತ್ತದೆ. ಈ ಶ್ರೇಣಿ ಮತ್ತು ಕೆಂಪು ಸಮುದ್ರದ ನಡುವೆ ಅಡಿಗುಡ್ಡಗಳು ಸುಮಾರಾಗಿ ಸಮುದ್ರಕ್ಕೆ ಚಾಚುವ ಒಂದು ತುದಿಯ ವರೆಗೆ ಅಗಲಕಿರಿದಾಗಿ ಹರಡಿರುವ ಒಂದು ಚಿಕ್ಕ ಬಯಲಿದೆ. ಕೆಂಪು ಸಮುದ್ರದ ಆಚೆ ಬದಿಯಲ್ಲಿ ಮೋಶೆಯ ಬಾವಿಗಳು ಎಂಬ ಅರ್ಥದ ಅಯೂನ್ ಮೂಸ ಎಂದು ಕರೆಯಲ್ಪಡುವ, ಅನೇಕ ಒರತೆಗಳಿರುವ ಒಂದು ಫಲವತ್ತಾದ ಪ್ರದೇಶವಿದೆ. ಈ ಎರಡು ಸ್ಥಳಗಳ ಮಧ್ಯೆ ಸಮುದ್ರತಳವು ತೀರಾ ನಿಧಾನವಾಗಿ ಕೆಳಗಿಳಿಯುತ್ತದೆ, ಆದರೆ ಬೇರೆ ಸ್ಥಳಗಳಲ್ಲಿ ಇದು ಒಮ್ಮೆಲೇ 9 ರಿಂದ 18 ಮೀಟರ್ ಆಳಕ್ಕೆ ಇಳಿಯುತ್ತದೆ.
ದೇವರು ಕೆಂಪು ಸಮುದ್ರದ ನೀರುಗಳನ್ನು ವಿಭಾಗಿಸಿ ಇಸ್ರಾಯೇಲ್ಯರು ಒಣನೆಲದ ಮೇಲೆ ಪಲಾಯನ ಮಾಡುವಂತೆ ಸಾಧ್ಯಗೊಳಿಸಿದ ಈ ಅದ್ಭುತವನ್ನು ಕ್ರೈಸ್ತಪ್ರಪಂಚದ ನಂಬುಗೆಯಿಲ್ಲದ ದೇವತಾಶಾಸ್ತ್ರಜ್ಞರು ಅಪಖ್ಯಾತಿಗೊಳಪಡಿಸಲು ಪ್ರಯತ್ನಿಸಿದ್ದಾರೆ. ಅವರು ಈ ಘಟನೆಯನ್ನು ಕೆಂಪು ಸಮುದ್ರದ ಉತ್ತರದಲ್ಲಿರುವ ಒಂದು ಆಳವಿಲ್ಲದ ಜವುಗು ಯಾ ತಗ್ಗು ನೆಲಕ್ಕೆ ಸ್ಥಳಾಂತರಿಸುತ್ತಾರೆ. ಆದರೆ ಈ ದಾಟುವಿಕೆ, ಫರೋಹನನ್ನೂ ಅವನ ಇಡೀ ಸೈನ್ಯವನ್ನೂ ಮುಳುಗಿಸಿ ಬಿಡಲು, ಹೌದು, ನುಂಗಿಬಿಡಲು ಸಾಕಷ್ಟು ನೀರಿದ್ದ ಸ್ಥಳದಲ್ಲಿ ಆಯಿತೆಂದು ಯಾವುದು ಪದೇ ಪದೇ ಹೇಳುತ್ತದೋ ಆ ಬೈಬಲ್ ದಾಖಲೆಗೆ ಇದು ಹೊಂದಿಕೆಯಾಗಿರುವುದಿಲ್ಲ.—ವಿಮೋಚನಕಾಂಡ 14:26-31; ಕೀರ್ತನೆ 136:13-15; ಇಬ್ರಿಯ 11:29.
ಸೀನಾಯಿ ಅರಣ್ಯಪ್ರದೇಶ
ಸೀನಾಯಿ ದ್ವೀಪಕಲ್ಪದಲ್ಲಿ ಕಂಡುಬರುವ ಕಠಿನ ಪರಿಸ್ಥಿತಿಗಳು ಇಸ್ರಾಯೇಲ್ಯರ ಅಲೆದಾಟದ ಕುರಿತ ಬೈಬಲ್ ವೃತ್ತಾಂತದಲ್ಲಿ ಸ್ಪಷ್ಟವಾಗಿಗಿ ವರ್ಣಿಸಲ್ಪಟ್ಟಿವೆ. (ಧರ್ಮೋಪದೇಶಕಾಂಡ 8:15) ಆದುದರಿಂದ, ಒಂದು ಇಡೀ ಜನಾಂಗ ದೇವರ ಧರ್ಮಶಾಸ್ತ್ರವನ್ನು ಪಡೆಯಲು ಸೀನಾಯಿ ಬೆಟ್ಟದ ಬುಡದಲ್ಲಿ ಕೂಡಿಬಂದು ಆ ಬಳಿಕ “ದೂರದಲ್ಲಿ ನಿಂತು” ಕೊಳ್ಳಲಿಕ್ಕಾಗಿ ಹಿಂದೆ ಸರಿಯುವುದು ಸಾಧ್ಯವೊ? (ವಿಮೋಚನಕಾಂಡ 19:1, 2; 20:18) ಮೂವತ್ತು ಲಕ್ಷವೆಂದು ಅಂದಾಜಿಸಲ್ಪಟ್ಟಿರುವ ಅಷ್ಟು ದೊಡ್ಡ ಜನಸಂಖ್ಯೆಯು ಈ ರೀತಿಯಲ್ಲಿ ಚಲಿಸುವಷ್ಟು ದೊಡ್ಡ ಸ್ಥಳ ಅಲ್ಲಿದೆಯೆ?
ಆರ್ಥರ್ ಸ್ಟ್ಯಾನ್ಲಿ ಎಂಬ 19 ನೆಯ ಶತಮಾನದ ಪ್ರವಾಸಿ ಹಾಗೂ ಬೈಬಲ್ ತಜ್ಞನು ಸೀನಾಯಿ ಬೆಟ್ಟದ ಈ ಪ್ರದೇಶಕ್ಕೆ ಭೇಟಿಕೊಟ್ಟು, ರಾಸ್ ಸಾಫ್ಸಸವನ್ನು ಹತ್ತಿದಾಗ ಅವನ ತಂಡಕ್ಕೆ ಗೋಚರಿಸಿದ ದೃಶ್ಯವನ್ನು ವರ್ಣಿಸುತ್ತಾನೆ: “ನಮ್ಮ ಮೇಲೆ ಹಾಗೂ ಅದನ್ನು ನೋಡಿ ವರ್ಣಿಸಿದ ಪ್ರತಿಯೊಬ್ಬನ ಮೇಲೆ ಒಂದೇ ಕ್ಷಣದಲ್ಲಿ ಪರಿಣಾಮವಾಯಿತು. . . . ಶಿಖರಗಳ ಬುಡಕ್ಕೇ ಹರಡುವ ಆಳ ಮತ್ತು ಅಗಲವಾದ ಹಳದಿ ಬಯಲು ಅಲ್ಲಿತ್ತು . . . ಈ ಪ್ರದೇಶದಲ್ಲಿ ಇಂತಹ ಬೆಟ್ಟ ಮತ್ತು ಬಯಲುಗಳ ಸೇರಿಕೆಯು ಸುಮಾರಾಗಿ ತೀರಾ ಅನುಪಸ್ಥಿತವಾಗಿರುವುದನ್ನು ಎಣಿಸುವಾಗ, ಇಂಥ ಸೇರಿಕೆಯು ಕಂಡುಹಿಡಿಯಲ್ಪಡುವುದು, ಅದೂ ಸಾಂಪ್ರದಾಯಿಕ ಸೀನಾಯಿಯ ನೆರೆಹೊರೆಯಲ್ಲಿ ಕಂಡುಹಿಡಿಯಲ್ಪಡುವುದು, ಆ ಕಥನದ ಸತ್ಯತೆಗೆ ನಿಜವಾಗಿಯೂ ಒಂದು ಪ್ರಾಮುಖ್ಯ ರುಜುವಾತಾಗಿದೆ.”
ವಾಗ್ದಾನ ದೇಶ
ಇಸ್ರಾಯೇಲ್ಯರು ಅರಣ್ಯದಲ್ಲಿ ಅಲೆದಾಡಿದ 40 ನೆಯ ವರ್ಷದಲ್ಲಿ, ಅವರು ಆಗಲೇ ಪ್ರವೇಶಿಸಲಿದ್ದ ಆ ದೇಶದ ಲಕ್ಷಣಗಳ ಈ ವರ್ಣನೆಯನ್ನು ಮೋಶೆಯು ಕೊಟ್ಟನು: “ನಿಮ್ಮ ದೇವರಾದ ಯೆಹೋವನು ಉತ್ತಮ ದೇಶಕ್ಕೆ ನಿಮ್ಮನ್ನು ಸೇರಿಸುತ್ತಾನೆ. ಆ ದೇಶದ ಹಳ್ಳಗಳಲ್ಲಿ ನೀರು ಯಾವಾಗಲೂ ಹರಿಯುತ್ತದೆ; ಮತ್ತು ತಗ್ಗುಗಳಲ್ಲಾಗಲಿ ಗುಡ್ಡಗಳಲ್ಲಾಗಲಿ ಎಲ್ಲಾ ಕಡೆಯೂ ಬಾವಿಗಳಲ್ಲಿಯೂ ಬುಗ್ಗೆಗಳಿಂದಲೂ ನೀರು ಉಕ್ಕುತ್ತದೆ.”—ಧರ್ಮೋಪದೇಶಕಾಂಡ 8:7.
ಪುರುಷರು, ಸ್ತ್ರೀಯರು, ಮಕ್ಕಳು, ಮತ್ತು ಅನ್ಯದೇಶಸ್ಥರಾದ ಇಡೀ ಜನಾಂಗವೇ ಏಬಾಲ್ ಬೆಟ್ಟ ಮತ್ತು ಗೆರಿಜ್ಜೀಮ್ ಬೆಟ್ಟಗಳ ಮಧ್ಯೆ ಒಳ್ಳೆಯ ನೀರಿದ್ದ ಶೆಕೆಮ್ ಕಣಿವೆಯಲ್ಲಿ ಕೂಡಿಬಂದಾಗ ಈ ವಾಗ್ದಾನದ ನಿಷ್ಕೃಷ್ಟತೆಯು ಬೇಗನೆ ಅನುಭವಿಸಲ್ಪಟ್ಟಿತು. ಗೆರಿಜ್ಜೀಮ್ ಬೆಟ್ಟದ ಬುಡದಲ್ಲಿ ಆರು ಕುಲಗಳು ನಿಂತವು. ಬೇರೆ ಆರು ಕುಲಗಳು ಆ ಕಣಿವೆಯ ಎದುರು ಪಕ್ಕದಲ್ಲಿರುವ ಏಬಾಲ್ ಬೆಟ್ಟದ ಬುಡದಲ್ಲಿ, ಯೆಹೋವನ ನಿಯಮಕ್ಕೆ ವಿಧೇಯರಾಗುವಲ್ಲಿ ಬರಲಿದ್ದ ದೈವಿಕಾಶೀರ್ವಾದಗಳು ಮತ್ತು ದೇವರ ನಿಯಮವನ್ನು ಪಾಲಿಸಲು ತಪ್ಪುವಲ್ಲಿ ಬರಲಿರುವ ಶಾಪಗಳನ್ನು ಕೇಳಲು ಕೂಡಿಬಂದವು. (ಯೆಹೋಶುವ 8:33-35) ಆದರೆ ಆ ಜನಾಂಗವು ಈ ಅಗಲಕಿರಿದಾದ ಕಣಿವೆಯಲ್ಲಿ ಕೂಡಿಬರಲಾಗುವಂತೆ ಅಲ್ಲಿ ಸಾಕಷ್ಟು ಸ್ಥಳವಿತ್ತೊ? ಮತ್ತು ಆಧುನಿಕ ಧ್ವನಿವರ್ಧಕ ಸಲಕರಣೆಗಳಿಲ್ಲದೆ ಅವರೆಲ್ಲರೂ ಹೇಗೆ ಆಲಿಸಿದರು?
ಯೆಹೋವ ದೇವರು ಆ ಲೇವಿಯರ ಸರ್ವಗಳನ್ನು ಅದ್ಭುತಕರವಾಗಿ ವರ್ಧಿಸಸಾಧ್ಯವಿತ್ತು. ಆದರೆ ಇಂತಹ ಅದ್ಭುತವು ಅಗತ್ಯವಿತ್ತೆಂದು ತೋರಿಬರುವುದಿಲ್ಲ. ಈ ಕಣಿವೆಯಲ್ಲಿ ಧ್ವನಿಯ ಕೇಳುವಿಕೆ ಉತ್ಕೃಷ್ಟವಾಗಿದೆ. ಹತ್ತೊಂಬತ್ತನೆಯ ಶತಮಾನದ ಬೈಬಲ್ ತಜ್ಞ ಆಲ್ಫ್ರೆಡ್ ಎಡರ್ಶಯಿಮ್ ಬರೆದುದು: “ಸರ್ವ ಪ್ರಯಾಣಿಕರು ಎರಡು ವಿಷಯಗಳಲ್ಲಿ ಏಕಾಭಿಪ್ರಾಯವುಳ್ಳವರಾಗಿದ್ದಾರೆ: 1. ಕಣಿವೆಯಲ್ಲಿ ಮಾತಾಡಿದ ಯಾವುದನ್ನೂ ಸ್ಪಷ್ಟವಾಗಿಗಿ ಏಬಾಲ್ ಮತ್ತು ಗೆರಿಜ್ಜೀಮ್ನಿಂದ ಕೇಳಲು ಯಾವ ಕಷ್ಟವೂ ಇದ್ದಿರಲಿಕ್ಕಿಲ್ಲ. 2. ಈ ಎರಡು ಬೆಟ್ಟಗಳು ಎಲ್ಲ ಇಸ್ರಾಯೇಲ್ಯರಿಗೆ ನಿಲ್ಲಲು ಸಾಕಷ್ಟು ಸ್ಥಳವನ್ನು ಕೊಟ್ಟವು.”
ಹತ್ತೊಂಬತ್ತನೆಯ ಶತಕದ ಇನ್ನೊಬ್ಬ ಬೈಬಲ್ ವಿದ್ವಾಂಸ ವಿಲ್ಯಮ್ ಥಾಮ್ಸನ್ ಎಂಬವನು ಈ ಕಣಿವೆಯಲ್ಲಿ ತನ್ನ ಅನುಭವವನ್ನು ದ ಲ್ಯಾಂಡ್ ಆ್ಯಂಡ್ ದ ಬುಕ್ ಎಂಬ ತನ್ನ ಪುಸ್ತಕದಲ್ಲಿ ವರ್ಣಿಸಿದ್ದಾನೆ. “ನಾನು ಕೂಗಿ ಮಾತಾಡಿದಾಗ ಬಂದ ಪ್ರತಿಧ್ವನಿಯನ್ನು ಕೇಳಿ, ಗಟ್ಟಿ ಸರ್ವದ ಲೇವಿಯರು, ‘ಯಾವ ವಿಗ್ರಹವನ್ನಾದರೂ ಮಾಡುವವನು ಯೆಹೋವನಿಗೆ ಹೇಯವಾಗಿದ್ದು ಶಾಪಗ್ರಸ್ತನು’ ಎಂದು ಹೇಳಿದಾಗ, ಆ ಮಹಾ ಸಭೆಯಿಂದ ಏರುವ ಮತ್ತು ಉಕ್ಕೇರುವ, ಏಬಾಲ್ನಿಂದ ಗೆರಿಜ್ಜೀಮಿನ ವರೆಗೆ ಮತ್ತು ಗೆರಿಜ್ಜೀಮಿನಿಂದ ಏಬಾಲ್ನ ವರೆಗೆ ಪುನರ್ಪ್ರತಿಧ್ವನಿಸುವ, ಹತ್ತು ಪಾಲು ಹೆಚ್ಚು ಗಟ್ಟಿಯಾಗಿರುವ ಹೌದು! ಎಂಬ ಮಹತ್ತರವಾದ ಧ್ವನಿ ಹೇಗೆ ಕೇಳಿಸಿದಿರ್ದಬಹುದೆಂದೂ ಭಾವಿಸಿದೆ.”—ಧರ್ಮೋಪದೇಶಕಾಂಡ 27:11-15 ಹೋಲಿಸಿ.
ಇಜ್ರೇಲ್ ಕಣಿವೆ
ಶೆಕೆಮಿನ ಉತ್ತರಕ್ಕೆ ಇನ್ನೊಂದು ಫಲವತ್ತಾದ ಕಣಿವೆಯಿದೆ. ಅದು ಸಮುದ್ರ ಮಟ್ಟದ ಕೆಳಗಿಂದ ಮೇಲೇರಿ ಒಂದು ವಿಸ್ತಾರವಾದ ಬಯಲಾಗುತ್ತದೆ. ಈ ಪೂರ್ತಿ ಪ್ರದೇಶವನ್ನು ಇಜ್ರೇಲ್ ನಗರದ ಹೆಸರಿನಿಂದ ಇಜ್ರೇಲ್ ಕಣಿವೆಯೆಂದು ಕರೆಯಲಾಗುತ್ತದೆ. ಈ ಕಣಿವೆಯ ಉತ್ತರಕ್ಕೆ ಯೇಸುವಿನ ಮನೆಯೂರಾಗಿದ್ದ ನಜರೇತ್ ಇದ್ದ ಗಲಿಲಾಯದ ಬೆಟ್ಟಗಳಿವೆ. ಜಾರ್ಜ್ ಸ್ಮಿತ್, ದ ಹಿಸ್ಟಾರಿಕಲ್ ಜಿಆಗ್ರಫಿ ಆಫ್ ದ ಹೋಲಿ ಲ್ಯಾಂಡ್ ಎಂಬ ತನ್ನ ಪುಸ್ತಕದಲ್ಲಿ ವಿವರಿಸುವುದು: “ನಜರೇತ್, ಗುಡ್ಡಗಳ ಮಧ್ಯೆ ಒಂದು ಖಾತದಲ್ಲಿ ನೆಲೆಸಿದೆ. ಆದರೆ ಈ ಖಾತದ ಅಂಚಿಗೆ ನೀವು ಹತ್ತಿದ ಕ್ಷಣ . . . ನಿಮಗೆ ಎಂತಹ ದೃಶ್ಯ ಕಾಣಸಿಗುತ್ತದೆ! [ಇಜ್ರೇಲ್ ಕಣಿವೆ] . . . ರಣರಂಗಗಳೊಂದಿಗೆ . . . ನಿಮ್ಮ ಮುಂದಿದೆ. ಅದು ಹಳೆಯ ಒಡಂಬಡಿಕೆಯ ಇತಿಹಾಸದ ನಕಾಶೆ.”
ಈ ಬಯಲುಕಣಿವೆಯಲ್ಲಿ, ಪ್ರಾಚೀನ ಶೋಧಕರು ಯೆಹೋಶುವನ ದಿನಗಳಲ್ಲಿ ಇಸ್ರಾಯೇಲು ಗೆದ್ದಿದ್ದ ತಾನಕ, ಮೆಗಿದ್ದೋ, ಯೊಕ್ನೆಯಾಮ ಮತ್ತು ಒಂದು ವೇಳೆ ಇರಬಹುದಾಗಿದ್ದ ಕೆದೆಷಿನ ನಗರರಾಜ್ಯಗಳ ಅವಶೇಷಗಳನ್ನು ಅಗೆದಿದ್ದಾರೆ. (ಯೆಹೋಶುವ 12:7, 21, 22) ಇದೇ ಪ್ರದೇಶದಲ್ಲಿ, ನ್ಯಾಯಸ್ಥಾಪಕ ಬಾರಾಕ ಮತ್ತು ನ್ಯಾಯಸ್ಥಾಪಕ ಗಿದ್ಯೋನನ ದಿನಗಳಲ್ಲಿ, ಯೆಹೋವನು ತನ್ನ ಜನರನ್ನು ತೀರಾ ಬಲಾಢ್ಯ ಶತ್ರು ಜನಾಂಗಗಳಿಂದ ಅದ್ಭುತಕರವಾಗಿ ವಿಮೋಚಿಸಿದನು.—ನ್ಯಾಯಸ್ಥಾಪಕರು 5:1, 19-21; 6:33; 7:22.
ಶತಮಾನಗಳು ಕಳೆದ ಬಳಿಕ, ರಾಜ ಯೇಹು ಈ ಕಣಿವೆಯಿಂದ ಇಜ್ರೇಲ್ ನಗರಕ್ಕೆ ಸವಾರಿ ಮಾಡುತ್ತಾ ಈಜೆಬೆಲ್ ಮತ್ತು ವಿಧರ್ಮಿ ಆಹಾಬನ ಮನೆತನಕ್ಕೆ ತೀರ್ಪು ವಿಧಿಸಲಿಕ್ಕಾಗಿ ಬಂದನು. ಇಜ್ರೇಲಿನ ಕಾವಲಿನ ಬುರುಜಿನಿಂದ, ಪೂರ್ವಕ್ಕೆ ಯೇಹುವಿನ ಸೈನ್ಯವು ಹತ್ತೊಂಬತ್ತು ಕಿಲೊಮೀಟರ್ ದೂರದಿಂದ ಬರುವುದನ್ನು ನೋಡುವುದು ಸುಲಭವಾಗಿತ್ತು. ಹೀಗೆ, ಯೆಹೋರಾಮ್ ರಾಜನಿಗೆ ಮೊದಲನೆಯ ಮತ್ತು ಎರಡನೆಯ ಸಂದೇಶವಾಹಕನನ್ನು ಕುದುರೆಯ ಮೇಲೆ ಕಳುಹಿಸಲು ಯಥೇಷ್ಟ ಸಮಯವಿತ್ತು. ಮತ್ತು ಕೊನೆಗೆ, ಇಸ್ರಾಯೇಲಿನ ಅರಸ ಯೆಹೋರಾಮ್ ಮತ್ತು ಯೆಹೂದದ ಅರಸ ಅಹಜ್ಯರಿಗೆ ತಮ್ಮ ರಥಗಳನ್ನೇರಿ ಯೇಹು ಇಜ್ರೇಲ್ ನಗರವನ್ನು ಮುಟ್ಟುವ ಮುನ್ನವೇ ಅವನನ್ನು ಸಂಧಿಸಲು ಸಮಯವಿತ್ತು. ಯೇಹು ಯೆಹೋರಾಮನನ್ನು ಒಡನೆಯೇ ಸಂಹರಿಸಿದನು. ಅಹಜ್ಯನು ಓಡಿಹೋದರೂ ಆ ಬಳಿಕ ಗಾಯಗೊಂಡನು, ಮತ್ತು ಆತನು ಮೆಗಿದ್ದೋವಿನಲ್ಲಿ ಸತ್ತನು. (2 ಅರಸು 9:16-27) ಇಂತಹ ರಣರಂಗಗಳ ವಿಷಯದಲ್ಲಿ ಜಾರ್ಜ್ ಸ್ಮಿತ್ ಬರೆಯುವುದು: “ಭೂವಿವರಣೆಯ ಯಾವುದೇ ಅಸಾಧ್ಯತೆ . . . ಯಾವ ಕಥನಗಳಲ್ಲಿಯೂ ಇಲ್ಲದಿರುವುದು ಗಮನಾರ್ಹವಾಗಿದೆ.”
ಯೇಸು ಅನೇಕ ವೇಳೆ ಇಜ್ರೇಲ್ ಕಣಿವೆಯನ್ನು ನೋಡಿ ಅಲ್ಲಿ ಸಂಭವಿಸಿದ್ದ ರೋಮಾಂಚಗೊಳಿಸುವ ವಿಜಯಗಳ ಕುರಿತು ಧ್ಯಾನಿಸಿದ್ದನೆಂಬುದರಲ್ಲಿ ಸಂಶಯವಿಲ್ಲ. ವಾಗ್ದಾನಿತ ಮೆಸ್ಸೀಯನಾಗಿದ್ದ ತಾನು, ಯೆಹೋವನ ಪರಮಾಧಿಕಾರದ ನಿರ್ದೋಷೀಕರಣದಲ್ಲಿ ಮಹಾ ಯೆಹೋಶುವ, ಮಹಾ ಬಾರಾಕ, ಮಹಾ ಗಿದ್ಯೋನ ಮತ್ತು ಮಹಾ ಯೇಹುವಿನ ಪಾತ್ರವನ್ನು ನೆರವೇರಿಸಲು ಗೊತ್ತುಮಾಡಲ್ಪಟ್ಟಿದ್ದವನು ಎಂಬುದು ಅವನಿಗೆ ತಿಳಿದಿತ್ತು. ಹೌದು. ಬೈಬಲು ಈ ಬಯಲಿನಲ್ಲಿ ಅತಿ ಯುದ್ಧೋಪಾಯ ಪ್ರಯೋಜನಗಳಿದ್ದ ನಗರವಾದ ಮೆಗಿದ್ದೋವನ್ನು ದೇವರ ಹರ್ಮಗೆದೋನ್ (“ಮೆಗಿದ್ದೋ ಬೆಟ್ಟ” ವೆಂದು ಅರ್ಥ) ಯುದ್ಧಸ್ಥಳದ ಸಂಕೇತವಾಗಿ ಉಪಯೋಗಿಸುತ್ತದೆ. ಅದು ರಾಜರ ರಾಜನೋಪಾದಿ, ಯೇಸು ಕ್ರಿಸ್ತನು ದೇವರ ಮತ್ತು ದೇವರ ನಿಜ ಜನರಾದ ಕ್ರೈಸ್ತ ಸಭೆಯ ಸಕಲ ಶತ್ರುಗಳನ್ನು ನಾಶಮಾಡುವ ಭೂವ್ಯಾಪಕ ಯುದ್ಧವಾಗಿರುವುದು.—ಪ್ರಕಟನೆ 16:16; 17:14.
ಕೋಪಗೊಂಡಿದ್ದ ಯೆಹೂದ್ಯರು ಒಮ್ಮೆ ಯೇಸುವನ್ನು, “ತಮ್ಮ ಊರು ಕಟ್ಟಿದ್ದ ಗುಡ್ಡದಿಂದ ಕಡಿದಾದ ಸ್ಥಳಕ್ಕೆ ನಡಿಸಿಕೊಂಡು ಹೋಗಿ” ಅಲ್ಲಿಂದ ಅವನನ್ನು ದೊಬ್ಬಿ ಬಿಡಲು ಪ್ರಯತ್ನಿಸಿದರೆಂದು ಬೈಬಲು ಹೇಳುತ್ತದೆ. (ಲೂಕ 4:29) ರಸಕರವಾಗಿ, ಆಧುನಿಕ ನಜರೇತ್ ನಗರದ ನೈರುತ್ಯಕ್ಕೆ ಈ ಸಂಭವ ನಡೆದಿರಬಹುದಾಗಿದ್ದ 12 ಮೀಟರ್ ಎತ್ತರದ ಪ್ರಪಾತವೊಂದಿದೆ. ಯೇಸು ತನ್ನ ವೈರಿಗಳಿಂದ ಪಾರಾಗಿ “ಗಟ್ಟಾ ಇಳಿದು . . . ಕಪೆರ್ನೌಮೆಂಬ ಊರಿಗೆ ಬಂದನು” ಎಂದು ಬೈಬಲು ಕೂಡಿಸಿ ಹೇಳುತ್ತದೆ. (ಲೂಕ 4:30, 31) ನಿಶ್ಚಯವಾಗಿ, ಗಲಿಲಾಯ ಸಮುದ್ರದ ತೀರದಲ್ಲಿರುವ ಕಪೆರ್ನೌಮ್, ಇನ್ನೂ ಹೆಚ್ಚು ಕೆಳಮಟ್ಟದಲ್ಲಿದೆ.
ಇವೂ ಇನ್ನಿತರ ವಿವರಣೆಗಳೂ ನೆಪೋಲಿಯನನನ್ನೂ ಇತರರನ್ನೂ ಅವರು ಬೈಬಲಿನ ಭೂವಿವರಣೆಯ ನಿಷ್ಕೃಷ್ಟತೆಯ ಕುರಿತು ಆಶ್ಚರ್ಯ ವ್ಯಕ್ತಪಡಿಸುವಂತೆ ಮಾಡಿವೆ. “[ಬೈಬಲಿನಲ್ಲಿ] ಪ್ರದೇಶ ವಿವರಣಾ ಸೂಚನೆಗಳು ಅನೇಕಾನೇಕ, ಮತ್ತು ಪೂರ್ತಿ ತೃಪ್ತಿಕರ,” ಎಂದು ಥಾಮ್ಸನ್ ದ ಲ್ಯಾಂಡ್ ಆ್ಯಂಡ್ ದ ಬುಕ್ ಇದರಲ್ಲಿ ಬರೆದರು. “ಬರೆದಿಟ್ಟಿರುವ ಇತಿಹಾಸ ಮತ್ತು ಹಳೆಯ ಮತ್ತು ಹೊಸ ಒಡಂಬಡಿಕೆಯ ನೈಸರ್ಗಿಕ ಭೂವಿವರಣೆಯ ಸಂಬಂಧದಲ್ಲಿ ಎಡೆಬಿಡದ ಏಕಾಭಿಪ್ರಾಯದಿಂದ ಮನಮುಟ್ಟಲ್ಪಡದಿರಲು ಅಸಾಧ್ಯ,” ಎಂದು ಸೈನಾಯ್ ಆ್ಯಂಡ್ ಪ್ಯಾಲೆಸ್ಟೈನ್ ಪುಸ್ತಕದಲ್ಲಿ ಸ್ಟ್ಯಾನ್ಲಿ ಹೇಳುತ್ತಾರೆ.
ಭೂವಿವರಣಾ ವಿಷಯದಲ್ಲಿ ಬೈಬಲಿನ ಬೆರಗುಗೊಳಿಸುವ ನಿಷ್ಕೃಷ್ಟತೆಯು ಈ ಗ್ರಂಥವು ಕೇವಲ ಮಾನವ ಮೂಲದ್ದಲ್ಲವೆಂಬುದಕ್ಕೆ ಕೇವಲ ಒಂದು ರುಜುವಾತಾಗಿದೆ. ಕಾವಲಿನ ಬುರುಜು ಪತ್ರಿಕೆಯ ಹಿಂದಿನ ಮೂರು ಸಂಚಿಕೆಗಳು ಬೈಬಲ್ ಸಂಬಂಧಿತ ಲೇಖನಗಳನ್ನು ಒಳಗೊಂಡಿದ್ದವು. ಈ ಶ್ರೇಣಿಯಲ್ಲಿ ಉಳಿದ ಮೂರು ಭಾಗಗಳನ್ನು ಪಡೆದುಕೊಂಡು ಆನಂದಿಸಿರೆಂದು ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.
[ಪುಟ 7ರಲ್ಲಿರುವಚಿತ್ರ]
(For fully formatted text, see publication)
ಇಜ್ರೇಲ್ ಕಣಿವೆ
ಇಜ್ರೇಲ್
ನಜರೇತ್
ತಾನಕ
ಮೆಗಿದ್ದೋ
ಯೊಕ್ನೆಯಾಮ
ಕೆದೆಷ್
ಉ
ಗಲಿಲಾಯ ಸಮುದ್ರ
ದೊಡ್ಡ ಸಮುದ್ರ
ಮೈಲುಗಳು
ಕಿಲೊಮೀಟರ್ಗಳು
5
10
10
20
[ಕೃಪೆ]
Based on a map copyrighted by Pictorial Archive (Near Eastern History) Est. and Survey of Israel.
[ಪುಟ 5 ರಲ್ಲಿರುವ ಚಿತ್ರ]
ಇಸ್ರಾಯೇಲು ಸೀನಾಯಿ ಪರ್ವತದಲ್ಲಿ ಧರ್ಮಶಾಸ್ತ್ರವನ್ನು ಪಡೆಯಿತು
[ಕೃಪೆ]
Pictorial Archive (Near Eastern History) Est.