ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 10/1 ಪು. 29-30
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1993
  • ಅನುರೂಪ ಮಾಹಿತಿ
  • ಅವಿಶ್ವಾಸಿಗಳ ನೊಗದೊಳಗೆ ನಿಮ್ಮನ್ನು ತಂದುಕೂಳ್ಲಬೇಡಿರಿ
    ಕಾವಲಿನಬುರುಜು—1990
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ನಾನು ಅವಿಶ್ವಾಸಿಯೊಂದಿಗೆ ಮೋಹಿತಳಾಗುವುದಾದರೆ ಆಗೇನು?
    ಎಚ್ಚರ!—1994
ಇನ್ನಷ್ಟು
ಕಾವಲಿನಬುರುಜು—1993
w93 10/1 ಪು. 29-30

ವಾಚಕರಿಂದ ಪ್ರಶ್ನೆಗಳು

“ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ” ಎಂದು ಬೈಬಲ್‌ ನಮಗೆ ಹೇಳುವುದರಿಂದ, ಕ್ರೈಸ್ತನು ನಂಬದವನೊಬ್ಬನೊಂದಿಗೆ ವ್ಯಾಪಾರದಲ್ಲಿ ಪಾಲುಗಾರನಾಗುವುದು ಯೋಗ್ಯವಾಗಿರುವುದೋ?

ನಾವು ಆ ಹಿತೋಪದೇಶವನ್ನು 2 ಕೊರಿಂಥ 6:14-16 ರಲ್ಲಿ ಕಾಣುತ್ತೇವೆ: “ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ. ಧರ್ಮಕ್ಕೂ ಅಧರ್ಮಕ್ಕೂ ಜೊತೆಯೇನು? ಬೆಳಕಿಗೂ ಕತ್ತಲೆಗೂ ಐಕ್ಯವೇನು? ಕ್ರಿಸ್ತನಿಗೂ ಸೈತಾನನಿಗೂ ಒಡನಾಟವೇನು? ನಂಬುವವನಿಗೂ ನಂಬದೆ ಇರುವವನಿಗೂ ಪಾಲುಗಾರಿಕೆ ಏನು? ದೇವರ ಮಂದಿರಕ್ಕೂ ವಿಗ್ರಹಗಳಿಗೂ ಒಪ್ಪಿಗೆ ಏನು?”

ನಂಬದವನೊಬ್ಬನೊಂದಿಗೆ ವ್ಯಾಪಾರದಲ್ಲಿ ಪಾಲುಗಾರನಾಗುವ ವಿರುದ್ಧವಾದಂತಹ ವಿಶಿಷ್ಟ ಪ್ರತಿಬಂಧಗಳನ್ನು ಸ್ಥಾಪಿಸುವ ಉದ್ದೇಶದಿಂದ, ಅಪೊಸ್ತಲ ಪೌಲನು ಈ ಹಿತೋಪದೇಶವನ್ನು ನೀಡಿದ್ದನೆಂದು ನಂಬಲು ಯಾವ ಕಾರಣವೂ ಇರುವುದಿಲ್ಲ. ಆದರೂ, ಅವನ ಹಿತೋಪದೇಶವು ಖಂಡಿತವಾಗಿಯೂ ಅದಕ್ಕೆ ಹಾಗೂ ಜೀವಿತದ ಇತರ ಪಥಗಳಿಗೆ ಸಂಬಂಧಿಸುತ್ತದೆ.

ಪುರಾತನ ಕೊರಿಂಥದ ತನ್ನ ಕ್ರೈಸ್ತ ಸಹೋದರರಿಗಾಗಿ ಪೌಲನು ಆ ಬುದ್ಧಿವಾದವನ್ನು ಬರೆದನು. ವಿಶಿಷ್ಟವಾಗಿ ಭ್ರಷ್ಟಗೊಂಡಿದ್ದ ಪಟ್ಟಣದಲ್ಲಿ ಜೀವಿಸುತ್ತಿದ್ದ ಅವರಿಗೆ, ನಿತ್ಯವೂ ನೈತಿಕ ಮತ್ತು ಆತ್ಮಿಕ ಅಪಾಯಗಳೊಂದಿಗೆ ಹೆಣಗಾಡಲಿಕ್ಕಿತ್ತು. ಅವರು ಜಾಗ್ರತೆಯಿಂದಿರದ ಹೊರತು, ಅಹಿತಕರವಾದ ಪ್ರಭಾವಗಳಿಗೆ ಒಡ್ಡುವಿಕೆಯು ಒಂದು ಪ್ರತ್ಯೇಕ ಜನರಾಗಿರುವ, “ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ದೇವರ ಸಕ್ವೀಯ ಪ್ರಜೆಯೂ” ಆಗಿರುವ ಅವರ ದೃಢ ನಿಶ್ಚಯವನ್ನು ಕ್ರಮೇಣ ನಿರ್ಬಲಗೊಳಿಸ ಸಾಧ್ಯವಿತ್ತು.—1 ಪೇತ್ರ 2:9.

ಎರಡನೇ ಕೊರಿಂಥ 6:14-16 ರಲ್ಲಿರುವ ವಿಷಯವನ್ನು ಬರೆಯುವ ಮುಂಚಿತವಾಗಿ, ಪೌಲನು ಕೊರಿಂಥದ ತನ್ನ ಸಹೋದರರ ನಡುವೆ ಇದ್ದ ಒಂದು ಗಂಭೀರ ಸಮಸ್ಯೆಯೊಂದಿಗೆ ವ್ಯವಹರಿಸಿದ್ದನು. ಅವರು ತಮ್ಮ ಮಧ್ಯೆ ಒಂದು ಘೋರವಾದ ಅನೈತಿಕತೆಯ ವಿಷಯವು ಇರುವಂತೆ ಬಿಟ್ಟುಕೊಟ್ಟಿದ್ದರು, ಆದುದರಿಂದ, ಆ ಪಶ್ಚಾತ್ತಾಪಪಡದ ಪಾಪಿಯನ್ನು ಹೊರಗೆ ಹಾಕಲು ಅಥವಾ ಬಹಿಷ್ಕರಿಸಲು ಪೌಲನು ಮಾರ್ಗದರ್ಶಿಸಿದನು. (1 ಕೊರಿಂಥ 5:1) ಆ ಮನುಷ್ಯನ ದುರ್ನಡತೆಯು ತೋರಿಸಿದ್ದೇನಂದರೆ ದುಸ್ಸಹವಾಸವು ಅಥವಾ ಲೋಕದ ನೈತಿಕ ವಾತಾವರಣದಲ್ಲಿ ಭೇಹುಷಾರಿನ ತಲ್ಲೀನತೆಯು ಕ್ರೈಸ್ತರನ್ನು ಪ್ರಭಾವಿಸಬಲ್ಲದು.

ಬಹಿಷ್ಕೃತ ಮನುಷ್ಯನೊಂದಿಗೆ ಸಹವಾಸವನ್ನು ಕೊರಿಂಥದ ಕ್ರೈಸ್ತರು ವರ್ಜಿಸಬೇಕಿತ್ತು, ಆದರೆ ನಂಬದವರಿಂದ ಅವರು ತಮ್ಮನ್ನು ಪೂರ್ಣವಾಗಿ ಪ್ರತ್ಯೇಕಿಸಬೇಕಿತ್ತು ಎಂದದರ ಅರ್ಥವಾಗಿತ್ತೋ? ಕ್ರೈಸ್ತತರರೊಂದಿಗೆ ಅವರು ಕಾರ್ಯತಃ ಎಲ್ಲಾ ಸಂಪರ್ಕವನ್ನು ಅಥವಾ ವ್ಯವಹಾರಗಳನ್ನು ವರ್ಜಿಸಿ, ಮೃತ ಸಮುದ್ರದ ಸಮೀಪದ ಕುಮ್ರಾನಿಗೆ ಹೊರಟುಹೋದ ಯೆಹೂದ್ಯರಂತೆ, ಒಂದು ಸನ್ಯಾಸಿ ಪಂಥದ ಹಾಗೆ ಇರಬೇಕಿತ್ತೋ? ಪೌಲನೇ ಉತ್ತರಿಸಲಿ: “ಜಾರರ ಸಹವಾಸವನ್ನು ಮಾಡಬಾರದೆಂದು ನನ್ನ ಪತ್ರಿಕೆಯಲ್ಲಿ ಬರೆದಿದೆನ್ದಷ್ಟೆ. ಈ ಲೋಕದಲ್ಲಿರುವ ಜಾರರು . . . ಇವರ ಸಹವಾಸವನ್ನು ಬಿಟ್ಟುಬಿಡಬೇಕೆಂದು ನನ್ನ ತಾತ್ಪರ್ಯವಲ್ಲ. ಹಾಗೆ ಬಿಡಬೇಕಾದರೆ ನೀವು ಈ ಲೋಕವನ್ನೇ ಬಿಟ್ಟುಹೋಗಬೇಕಾಗುವದು.”—1 ಕೊರಿಂಥ 5:9, 10.

ಆ ಮಾತುಗಳ ನಿಜಾಭಿಪ್ರಾಯವು ಸರಳವಾಗಿದೆ. ಕೀಳಾದ ನೈತಿಕತೆ ಮತ್ತು ಭಿನ್ನವಾದ ಮಟ್ಟಗಳಿರುವ ನಂಬದವರೊಂದಿಗೆ ಜೀವಿಸುತ್ತಿರುವ ಮತ್ತು ಬಹುಮಟ್ಟಿಗೆ ನಿತ್ಯದ ಸಂಪರ್ಕವಿರುವ ಕ್ರೈಸ್ತರು ಇನ್ನೂ ಈ ಭೂಗ್ರಹದಲ್ಲಿದ್ದಾರೆ ಎಂಬದನ್ನು ಪೌಲನು ತಿಳಿದಿದ್ದನು. ಅದನ್ನು ತಪ್ಪಿಸಲು ಮೂಲತಃ ಅಸಾಧ್ಯವಾಗಿರುವುದರಿಂದ, ಅಂಥ ಸಂಪರ್ಕಗಳ ಅಪಾಯಕ್ಕೆ ಕ್ರೈಸ್ತರು ಎಚ್ಚರವಾಗಿರಬೇಕು.

ಈಗ ನಾವು ಕೊರಿಂಥದವರಿಗೆ ಪೌಲನ ಎರಡನೆಯ ಪತ್ರವನ್ನು ಪುನಃ ಪರಿಗಣಿಸೋಣ. ಅಭಿಷಿಕ್ತ ಕ್ರೈಸ್ತರು ದೇವರ ಶುಶ್ರೂಷಕರಾಗಿ, ಕ್ರಿಸ್ತನಿಗಾಗಿ ಬದಲಿ ರಾಯಭಾರಿಗಳಾಗಿ ಅರ್ಹತೆ ಪಡೆದವರೆಂದು ಪೌಲನು ತೋರಿಸಿದನು. ಅವರ ಶುಶ್ರೂಷೆಯನ್ನು ಕೆಟ್ಟ ಬೆಳಕಿಗೆ ತರಬಹುದಾದ ಯಾವುದೇ ಮುಗ್ಗರಿಸುವಿಕೆಗೆ ಕಾರಣವಾಗುವ ವಿರುದ್ಧ ಎಚ್ಚರವಿರಲು ಅವನು ಅವರಿಗೆ ಹೇಳಿದನು. (2 ಕೊರಿಂಥ 4:1–6:3) ತನ್ನ ಆತ್ಮಿಕ ಮಕ್ಕಳಂತಿದ್ದ ಕೊರಿಂಥದ ಸಹೋದರರು ತಮ್ಮ ಒಲುಮೆಗಳಲ್ಲಿ ವಿಶಾಲವಾಗುವಂತೆ ಪೌಲನು ನೇರವಾಗಿ ಪ್ರಚೋದಿಸಿದನು. (2 ಕೊರಿಂಥ 6:13) ತದನಂತರ ಅವನು ಪ್ರೇರೇಪಿದ್ದು: “ಕ್ರಿಸ್ತನಂಬಿಕೆಯಲ್ಲಿಲ್ಲದವರೊಂದಿಗೆ ಇಜ್ಜೋಡಾಗಬೇಡಿರಿ.” ಆ ವಿಷಯಕ್ಕೆ ಒತ್ತನ್ನು ಹಾಕಲು ಅವನು ಹಲವಾರು ಅಲಂಕಾರಿಕ ವೈದೃಶ್ಯಗಳ ಸರಣಿಯನ್ನು ಉಪಯೋಗಿಸಿದನು.

ವ್ಯಾಪಾರ ಯಾ ಉದ್ಯೋಗದಂತಹ ಜೀವಿತದ ಒಂದು ವಿಶಿಷ್ಟ ಕ್ಷೇತ್ರಕ್ಕೆ ಕೇಂದ್ರೀಕರಿಸುತ್ತಾ, ಆ ವಿಷಯದಲ್ಲಿ ಜಾರಿಗೆ ತರಬೇಕಾದ ಒಂದು ವಿಧಿವಿಹಿತ ನಿಯಮವನ್ನು ಪೌಲನು ಇಡಲ್ಲಿಲ್ಲವೆಂದು ಪೂರ್ವಾಪರ ಸಂಬಂಧವು ತೋರಿಸುತ್ತದೆ. ಬದಲಿಗೆ ಅವನು, ತಾನು ಅತಿಯಾಗಿ ಪ್ರೀತಿಸಿದ ಸಹೋದರರಿಗಾಗಿ ಒಂದು ವಿಶಾಲವೂ ಯೋಗ್ಯವೂ ಸಹಾಯಕಾರಿಯೂ ಆದ ಬುದ್ಧಿವಾದವನ್ನು ಒದಗಿಸುತ್ತಿದ್ದನು.

ದೃಷ್ಟಾಂತಕ್ಕೆ, ಈ ಬುದ್ಧಿವಾದವು, ವಿವಾಹದಲ್ಲಿ ಆಸಕ್ತನಿರುವ ಒಬ್ಬ ಕ್ರೈಸ್ತನ ವಿದ್ಯಮಾನದಲ್ಲಿ ಅನ್ವಯಿಸುತ್ತದೋ? ಖಂಡಿತವಾಗಿಯೂ. ಮದುವೆಯಾಗ ಬಯಸುವವರು “ಕರ್ತನಲ್ಲಿ ಮಾತ್ರವೇ” ಅದನ್ನು ಮಾಡುವಂತೆ ಕೊರಿಂಥದವರಿಗೆ ತನ್ನ ಮೊದಲನೆಯ ಪತ್ರದಲ್ಲಿ ಅಪೊಸ್ತಲನು ಉಪದೇಶಿಸಿದ್ದನು. (1 ಕೊರಿಂಥ 7:39, NW) ಆ ಮಾತುಗಳ ಸುಜ್ಞತೆಯನ್ನು, ಅನಂತರ ಅವನು 2 ಕೊರಿಂಥ 6:14-18 ರಲ್ಲಿ ಏನು ಬರೆದನೋ ಅದರಿಂದ ಒತ್ತಿಹೇಳಿದನು. ಯೆಹೋವನ ಸೇವಕರಲ್ಲದ ಮತ್ತು ಕ್ರಿಸ್ತನ ಹಿಂಬಾಲಕರಲ್ಲದ ಒಬ್ಬರನ್ನು ಕ್ರೈಸ್ತನು ವಿವಾಹವಾಗಲು ಯೋಚಿಸುವುದಾದರೆ, ಅವನು ಅಥವಾ ಅವಳು, ನಂಬದವನೊಂದಿಗೆ ಕೂಡಿಕೊಳ್ಳುವದನ್ನು ಪರಿಗಣಿಸುವವರಾಗಿರುತ್ತಾರೆ. (ಹೋಲಿಸಿ ಯಾಜಕಕಾಂಡ 19:19; ಧರ್ಮೋಪದೇಶಕಾಂಡ 22:10.) ಸ್ಪಷ್ಟವಾಗಿಗಿ, ಮೂಲಭೂತ ಅಸಂಗತತೆಯು ಸಮಸ್ಯೆಗಳನ್ನು, ಆತ್ಮಿಕವಾದವುಗಳನ್ನು ಸಹಿತ, ಹೆಚ್ಚಿಸುವ ಸಂಭವನೀಯತೆ ಇರುವುದು. ದೃಷ್ಟಾಂತಕ್ಕೆ, ನಂಬದವನು ಪ್ರಸ್ತುತದಲ್ಲಿ ಅಥವಾ ಭವಿಷ್ಯತ್ತಿನಲ್ಲಿ ಸುಳ್ಳು ದೇವರ ಭಕ್ತಿಯನ್ನು ಬೆಂಬತ್ತಬಹುದು. ಪೌಲನು ವಿವೇಚಿಸಿದ್ದು: “ಕ್ರಿಸ್ತನಿಗೂ ಸೈತಾನನಿಗೂ ಒಡನಾಟವೇನು?”

ಜೀವಿತದ ಇನ್ನೊಂದು ಪಥವಾದ—ನಂಬದವನೊಂದಿಗೆ ವ್ಯಾಪಾರದಲ್ಲಿ ಪಾಲುಗಾರರಾಗುವುದರ ಕುರಿತೇನು? ಕೆಲವು ಸಂದರ್ಭಗಳಲ್ಲಿ ಕ್ರೈಸ್ತನೊಬ್ಬನು ಭಾವಿಸಬಹುದೇನಂದರೆ ಜೀವನೋಪಾಯ ನಡಿಸುವುದು ಮತ್ತು ತನ್ನ ಕುಟುಂಬ ಪೋಷಣೆಯು ಜೊತೆ ಕ್ರೈಸ್ತನಲ್ಲದ ಒಬ್ಬನೊಂದಿಗೆ ವ್ಯಾಪಾರ ಸಂಬಂಧದಲ್ಲಿ ಪ್ರವೇಶಿಸುವುದನ್ನು ಆವಶ್ಯಪಡಿಸುತ್ತದೆ. (1 ತಿಮೊಥೆಯ 5:8) ಕೇವಲ ಉದಾಹರಣೆಗಳಾಗಿರುವ ಕೆಳಗಿನವುಗಳನ್ನು ಪರಿಗಣಿಸಿರಿ:

ಕ್ರೈಸ್ತನೊಬ್ಬನು ಒಂದು ವಿಧದ ಸರಕನ್ನು ಮಾರುವ ವ್ಯಾಪಾರವನ್ನು ಆರಂಭಿಸಲು ಬಯಸಬಹುದು, ಆದರೆ ಅದರ ಒಂದೇ ಮಾರ್ಗವು, ಬೇಕಾದ ಸರಕುಗಳು ಯಾ ಬಂಡವಾಳಗಳಿಗೆ ಹಾದಿ ಇರುವ ವ್ಯಕ್ತಿಯೊಂದಿಗೆ ಪಾಲುಗಾರಿಕೆಯನ್ನು ಸ್ವೀಕರಿಸುವುದಾಗಿರುವುದು. ಇನ್ನೊಬ್ಬ ಕ್ರೈಸ್ತನು ತೋಟಗಾರಿಕೆಯನ್ನು (ಯಾ ಒಂದು ಜಾತಿಯ ಪ್ರಾಣಿಗಳನ್ನು ಬೆಳಸುವದನ್ನು) ಮಾಡ ಬಯಸಬಹುದು; ಆದರೆ ಯಾವ ಜಮೀನೂ ದೊರೆಯುವುದಿಲ್ಲ, ಅದುದರಿಂದ, ಯಾವುದೇ ಲಾಭದಲ್ಲಿ ಒಂದು ಪಾಲಿಗಾಗಿ ಜಮೀನನ್ನು ಗುತ್ತಿಗೆಗೆ ಕೊಡಲು ಸಿದ್ಧನಾಗಿರುವ ಒಬ್ಬನ ಜತೆಯಲ್ಲಿ ಅದನ್ನು ಮಾಡಬೇಕಾಗುತ್ತದೆ. ಪ್ರಾಯಶಃ ಇನ್ನೊಬ್ಬ ಕ್ರೈಸ್ತನು ಕೊಳಾಯಿ ಕೆಲಸದ ವ್ಯಾಪಾರಕ್ಕೆ ಸೇರ ಶಕ್ತನಾಗಿಲ್ಲ, ಯಾಕಂದರೆ ಸರಕಾರವು ಕೆಲವೇ ಲೈಸೆನ್ಸ್‌ಗಳನ್ನು ಕೊಡುತ್ತದೆ, ಅವು ಆವಾಗಲೇ ತಕ್ಕೊಳ್ಳಲ್ಪಟ್ಟಿವೆ; ಅವನಿಗಿರುವ ಒಂದೇ ದಾರಿಯು ಲೈಸೆನ್ಸ್‌ ಇರುವ ನಂಬದ ಸಂಬಂಧಿಕನೊಂದಿಗೆ ಜತೆಗೂಡುವುದಾಗಿದೆ.—ಮಾರ್ಕ 12:17.

ಇವುಗಳು ಕೇವಲ ದೃಷ್ಟಾಂತಗಳು. ನಾವು ಶಕ್ಯತೆಗಳನ್ನು ಪೂರ್ತಿ ಬಳಸಿಬಿಡಲು ಪ್ರಯತ್ನಿಸುವುದಿಲ್ಲ, ಇಲ್ಲವೇ ಸಮ್ಮತಿ ಯಾ ಅಸಮ್ಮತಿಯ ಯಾವ ಹೇಳಿಕೆಯನ್ನೂ ನಾವು ಮಾಡುವುದಿಲ್ಲ. ಆದರೆ, ಈ ಉದಾಹರಣೆಗಳನ್ನು ಮನಸ್ಸಿನಲ್ಲಿಟ್ಟವರಾಗಿ, 2 ಕೊರಿಂಥ 6:14-18ರ ಬುದ್ಧಿವಾದವನ್ನು ಅಸಡ್ಡೆಮಾಡಬಾರದೇಕೆಂಬದನ್ನು ನೀವು ಕಾಣಲಾರಿರೋ?

ಸಂಬಂಧಿಕನಿರಲಿ ಅಲ್ಲದಿರಲಿ, ನಂಬದವನೊಂದಿಗೆ ವ್ಯಾಪಾರಕ್ಕಿಳಿಯುವ ಕ್ರೈಸ್ತನು ಅನಿರೀಕ್ಷಿತ ಸಮಸ್ಯೆಗಳನ್ನು ಮತ್ತು ಶೋಧನೆಗಳನ್ನು ಎದುರಿಸಿಯೇ ತೀರುತ್ತಾನೆ. ಪಾಲುಗಾರನು ಪ್ರಾಯಶಃ ತೀರ್ಮಾನಿಸಬಹುದೇನಂದರೆ ಒಂದು ಮಿತಿಯಾದ ಲಾಭವನ್ನು ಮಾಡುವ ಮಾರ್ಗವು, ಸರಕಾರದ ನಿಯಮಗಳನ್ನು ಅದು ಮೀರಿದರೂ ಕೂಡ, ಸಂಪಾದನೆಗಳನ್ನು ಕಡಿಮೆ ವರದಿಸುವುದು ಯಾ ದಾಖಲೆಯನ್ನಿಡದೆ ಕೆಲಸಗಾರರನ್ನು ಬಳಸುವುದು. ಅಧಿಕೃತ ಸರಕುಪಟ್ಟಿಗಳಲ್ಲಿ ನಮೂದಿಸದೆ ಇರದ ಸಾಮಾನುಗಳಿಗಾಗಿ ಬಟವಾಡೆಗಾರನಿಗೆ ಮರೆಯಲ್ಲಿ ಹಣಕೊಡಲು ಅವನು ಸಿದ್ಧನಾಗಿರಬಹುದು. ಅದರಲ್ಲಿ ಮತ್ತು ತದ್ರೀತಿಯ ಅಪ್ರಾಮಾಣಿಕತೆಯಲ್ಲಿ ಕ್ರೈಸ್ತನಿಗೆ ಯಾವ ಪಾಲಾದರೂ ಇರುವುದೋ? ಮತ್ತು ಅವರ ವ್ಯಾಪಾರ ವಿಧಾನದ ಬಗ್ಗೆ ತೆರಿಗೆಯ ಕಾಗದಪತ್ರಗಳಿಗೆ ಯಾ ಇತರ ನಿಯಮಬದ್ಧ ದಸ್ತೈವಜುಗಳಿಗೆ ಸಹಿಹಾಕುವ ಸಮಯ ಬಂದಾಗ ಕ್ರೈಸ್ತನೇನು ಮಾಡುವನು?—ವಿಮೋಚನಕಾಂಡ 23:1; ರೋಮಾಪುರ 13:1, 7.

ಅಥವಾ ನಂಬದ ವ್ಯಾಪಾರ ಸಹವಾಸಿಯು ವಿಧರ್ಮಿ ರಜಾದಿನಗಳಿಗೆ ಸಂಬಂಧಿಸಿದ ವಸ್ತುಗಳನ್ನು ಸಂಗ್ರಹ ಮಾಡಿಡಲು, ಕಂಪೆನಿಯ ಹೆಸರಿನಲ್ಲಿ ಹಬ್ಬದಿನದ ಶುಭಾಶಯ ಕಾರ್ಡುಗಳನ್ನು ಕಳುಹಿಸಲು, ಮತ್ತು ಧಾರ್ಮಿಕ ರಜಾದಿನಗಳಿಗಾಗಿ ವ್ಯಾಪಾರ ಸ್ಥಳವನ್ನು ಶೃಂಗರಿಸಲು ಬಯಸಬಹುದು. ಪೌಲನು ಕೇಳಿದ್ದು: “ದೇವರ ಮಂದಿರಕ್ಕೂ ವಿಗ್ರಹಗಳಿಗೂ ಒಪ್ಪಿಗೆ ಏನು? ನಾವು ಜೀವಸ್ವರೂಪನಾದ ದೇವರ ಮಂದಿರವಾಗಿದ್ದೇವಲ್ಲಾ.” ಎಷ್ಟು ಯೋಗ್ಯವಾದ ಹೇಳಿಕೆಯದು: “ಆದದರಿಂದ ಅನ್ಯಜನರ ಮಧ್ಯದಲ್ಲಿಂದ ಹೊರಟುಬಂದು ಪ್ರತ್ಯೇಕವಾಗಿರಿ,” ಅನ್ನುತ್ತಾನೆ ಯೆಹೋವನು, “ಅಶುದ್ಧವಾದ ಯಾವದನ್ನೂ ಮುಟ್ಟದಿರಿ;” “ನಾನು ನಿಮ್ಮನ್ನು ಸೇರಿಸಿಕೊಳ್ಳುವೆನು.” (2 ಕೊರಿಂಥ 6:16, 17) ಆ ಸುಜ್ಞ ಬುದ್ಧಿವಾದವನ್ನು ಅನ್ವಯಿಸುವಲ್ಲಿ, ಅನೇಕ ಕ್ರೈಸ್ತರು ತಮ್ಮನ್ನು ಆದಷ್ಟು ಕಡಿಮೆ ಸಂಭವನೀಯ ಸಮಸ್ಯೆಗಳಿಗೆ ಒಡ್ಡುವಂತಹ ಐಹಿಕ ಕೆಲಸವನ್ನು ಆರಿಸಿಕೊಂಡಿರುತ್ತಾರೆ.—ಇಬ್ರಿಯ 13:5, 6, 18.

ನೌಕರರಾಗಿಯಾಗಲಿ ಯಾ ವ್ಯಾಪಾರದ ಧಣಿಗಳಾಗಿಯಾಗಲಿ, ತಮ್ಮ ಐಹಿಕ ಉದ್ಯೋಗದಲ್ಲಿ ಕ್ರೈಸ್ತರು ಮಾಡುವ ಎಲ್ಲವನ್ನು ನೋಡಿಕೊಳ್ಳುವ ಯಾ ತನಿಖೆಮಾಡುವ ಆದೇಶವು ಸಭೆಗೆ ಕೊಡಲ್ಪಟ್ಟಿರುವುದಿಲ್ಲ. ಆದರೆ, ಮಿಥ್ಯಾರಾಧನೆಯನ್ನು ಪ್ರವರ್ಧಿಸುವಂಥ ಅಥವಾ ಸುಳ್ಳಾಡುವ ಯಾ ಕದಿಯುವ ಕೆಲವು ವಿಧಾನಗಳಲ್ಲಿ ಒಬ್ಬ ಕ್ರೈಸ್ತನು ದುರ್ನಡತೆಗೆ ಪಾಲುಗಾರನು ಎಂದು ತಿಳಿದುಬಂದರೆ, ಯೆಹೋವನ ಮಟ್ಟಗಳನ್ನು ಎತ್ತಿಹಿಡಿಯಲು ಸಭೆಯು ಹೆಜ್ಜೆಗಳನ್ನು ತಕ್ಕೊಳ್ಳಲೇಬೇಕು ಎಂಬುದು ನಿಶ್ಚಯ.

ಆದರೂ, “ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಇಜ್ಜೋಡಾಗಬೇಡಿರಿ” ಎಂಬ ಪೌಲನ ಪ್ರೇರಿತ ಹಿತೋಪದೇಶವು, ಸಮಸ್ಯೆಗಳಿಂದ ಮತ್ತು ಬೇಕಾದ ಯಾವುದೇ ನ್ಯಾಯನಿರ್ಣಾಯಕ ಕ್ರಮದಿಂದ ದೂರವಾಗಿರಲು ಕ್ರೈಸ್ತರಿಗೆ ನೆರವಾಗಬಲ್ಲದು ಎಂಬುದು ಕೀಲಿಕೈಯಾಗಿದೆ. ವಿವೇಕಿಗಳಾದ ಕ್ರೈಸ್ತರು ಆ ಬುದ್ಧಿವಾದವನ್ನು ಹೃದಯಕ್ಕೆ ತೆಗೆದುಕೊಳ್ಳುವರು ಮತ್ತು ಬೈಬಲ್‌ ತತ್ವಗಳಲ್ಲಿ ಸಂಧಾನಮಾಡಲು, ಅವರು ಹೆಚ್ಚಿನ ಒತ್ತಡದ ಕೆಳಗೆ ಬರುವ ಪರಿಸ್ಥಿತಿಗಳನ್ನು ಪ್ರವೇಶಿಸಲು ಆರಿಸಿಕೊಳ್ಳರು. ನಂಬದ ವ್ಯಕ್ತಿಯೊಂದಿಗೆ ವ್ಯಾಪಾರಕ್ಕಿಳಿಯಲೇ ಬೇಕೆಂದು ಒಬ್ಬನು ಭಾವಿಸುವುದಾದರೆ, ಅವನು ತನ್ನ ಆಯ್ಕೆಯ ಹೊಣೆಗಾರಿಕೆಯನ್ನು ತಾನೇ ಹೊರಬೇಕೆಂಬದನ್ನು ತಿಳಿದವರಾಗಿ, ಇತರರು ಅವನಿಗೆ ತೀರ್ಪುಮಾಡಲು ಯಾ ಟೀಕಿಸಲು ತರ್ವೆಪಡುವ ಅಗತ್ಯವಿಲ್ಲ. ಮೂಲತಃ, ನಂಬದವನೊಂದಿಗೆ ವ್ಯಾಪಾರಕ್ಕಿಳಿಯುವ ವಿರುದ್ಧ ಒಂದು ವಿಧಿವತ್ತಾದ, ಜಾರಿಗೆ ತರಶಕ್ತನಾದ ಒಂದು ನಿಯಮವನ್ನು ಪೌಲನು ಇಟ್ಟಿರುವುದಿಲ್ಲ. ಆದರೂ, ಅವನ ಹಿತೋಪದೇಶವು ನಿರ್ಲಕ್ಷ್ಯಿಸಲ್ಪಡಬಾರದು. ಆ ಬುದ್ಧಿವಾದವನ್ನು ದೇವರು ಪ್ರೇರಿಸಿದನು ಮತ್ತು ನಮ್ಮ ಪ್ರಯೋಜನಕ್ಕಾಗಿ ಬೈಬಲಿನಲ್ಲಿ ದಾಖಲಿಸಲ್ಪಡುವಂತೆ ಮಾಡಿದನು. ಅದನ್ನು ಆಲಿಸುವುದರಲ್ಲಿ ನಾವು ವಿವೇಕವುಳ್ಳವರಾಗಿರುತ್ತೇವೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ