ನೈಸರ್ಗಿಕ ವಿಪತ್ತುಗಳು—ಕಾಲಗಳ ಒಂದು ಸೂಚನೆಯೋ?
“ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಮತ್ತು ಅಲ್ಲಲ್ಲಿ ಬರಗಳು ಬರುವವು, ಭೂಕಂಪಗಳು ಆಗುವವು; ಇವೆಲ್ಲಾ ಪ್ರಸವವೇದನೆಯ ಪ್ರಾರಂಭ.” ಈ ಮಾತುಗಳೊಂದಿಗೆ ಯೇಸು, ಇಂತಹ ವಿಪತ್ಕಾರಕ ಫಟನೆಗಳು, ನಿಯಮರಾಹಿತ್ಯದ ವೃದ್ಧಿ ಮತ್ತು ದೇವರ ರಾಜ್ಯದ ಸುವಾರ್ತೆಯ ಲೋಕವ್ಯಾಪಕ ಸಾರುವಿಕೆಯಿಂದೊಡಗೂಡಿ, “ವಿಷಯಗಳ ವ್ಯವಸ್ಥೆಯ ಸಮಾಪ್ತಿಯನ್ನು” ಗುರುತಿಸುವ ಒಂದು ಸಂಘಟಿತ ಸೂಚನೆಯನ್ನು ಮುಂತರಲಿದೆಯೆಂದು ಹತ್ತೊಂಬತ್ತು ಶತಮಾನಗಳ ಹಿಂದೆ ತನ್ನ ಶಿಷ್ಯರಿಗೆ ವಿವರಿಸಿದನು.—ಮತ್ತಾಯ 24:3-14.
ಮೇಲಿನದರ ವೀಕ್ಷಣೆಯಲ್ಲಿ ನಾವಿದನ್ನು ಕೇಳಲೇಬೇಕು, ಗತಿಸಿಹೋದ ತಲೆಮೊರೆಗಳಿಗಿಂತ ಹೆಚ್ಚು ವಿಪತ್ಕಾರಕ ಭೂಕಂಪಗಳನ್ನು, ಚಂಡಮಾರುತಗಳನ್ನು, ನೆರೆಗಳನ್ನು, ಅನಾವೃಷ್ಟಿಗಳನ್ನು ಮತ್ತು ಬರಗಳನ್ನು ನಾವು ನೋಡುತ್ತಿದ್ದೇವೋ? ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನಗಳ ಪ್ರಗತಿಗಳ ಮಧ್ಯೆಯೂ, ಪ್ರಮಾಣಾನುಗುಣವಾಗಿ ಅಧಿಕ ಜನರು ಅವುಗಳಿಂದಾಗಿ ಕಷ್ಟಾನುಭವಿಸುತ್ತಿದ್ದಾರೋ?
ಅನೇಕರಿಗೆ ಉತ್ತರವು ಹೌದೆಂದಾಗಿದೆ. ಉದಾಹರಣೆಗೆ, “ಲೋಕವು ಕಳೆದ ದಶಕಗಳಿಗಿಂತ 1990 ಗಳಲ್ಲಿ ಹೆಚ್ಚಿನ ಆಪತ್ತುಗಳನ್ನು ನಿರೀಕ್ಷಿಸ ಸಾಧ್ಯವಿದೆ” ಎಂದು ನ್ಯೂ ಸೈಎಂಟಿಸ್ಟ್ ಪತ್ರಿಕೆಯು ಎಚ್ಚರಿಸುತ್ತದೆ. ಅಂತೆಯೇ, ಜೂನ್ 1991 ರ ಯುಎನ್ ಕ್ರಾನಿಕಲ್ ನಲ್ಲಿ, ವಿಶ್ವ ಪವನಶಾಸ್ತ್ರೀಯ ಸಂಸ್ಥೆಯ ಡೈರೆಕ್ಟರು ಹೇಳಿದ್ದು: “ಪ್ರವೃತ್ತಿಯು ತೀರ ಸ್ಪಷ್ಟವಾಗಿಗಿದೆ. ಇಸವಿ 1960 ಗಳಿಂದ 1980 ಗಳ ವರೆಗೆ . . . ಮಹಾ ನೈಸರ್ಗಿಕ ವಿಪತ್ತುಗಳ ಸಂಭವಪ್ರಮಾಣದಲ್ಲಿ ಐವಡಿ ವೃದ್ಧಿಯಾಗಿರುತ್ತದೆ, ಮತ್ತು ಜುಮ್ಲಾ ಆರ್ಥಿಕ ನಷ್ಟಗಳಲ್ಲಿ ಮುಮ್ಮಡಿ ವೃದ್ಧಿಯಾಗಿರುತ್ತದೆ.” ವಿಷಯದ ಮೇಲೆ ಕೊಂಚ ಕಣ್ನೆಲೆಯನ್ನು ಒದಗಿಸುತ್ತಾ, ವಿಶ್ವಾರೋಗ್ಯ ಸಂಸ್ಥೆಯ ಪತ್ರಿಕೆಯಾದ ವರ್ಲ್ಡ್ ಹೆಲ್ತ್ ಅವಲೋಕಿಸಿದ್ದು: “ನೈಸರ್ಗಿಕ ವಿಪತ್ತುಗಳ ಉದಾಹರಣೆಗಳನ್ನು ಮತ್ತು ಅವುಗಳ ವಿಪತ್ಕಾರಕ ಫಲಿತಾಂಶಗಳನ್ನು ಇತಿಹಾಸದಲ್ಲೆಲ್ಲಾ ಗುರುತಿಸ ಸಾಧ್ಯವಿದೆ. ಆದರೂ, 21 ನೆಯ ಶತಮಾನವು ಗೋಚರಿಸುತ್ತಾ ಬರುವಾಗ, ಹೆಚ್ಚಿನ ಜನತೆಯನ್ನು ನೈಸರ್ಗಿಕ ಮತ್ತು ಮಾನವ-ನಿರ್ಮಿತ, ಎರಡೂ ವಿಪತ್ತುಗಳ ಆಘಾತಕ್ಕೆ ಸುಲಭಭೇದ್ಯಗೊಳಿಸುವ ಜನಾಂಗಗಳ ಸಾಮಾಜಿಕ ಸ್ಥಿತಿ ವಿವರಣೆ, ಜೀವಿ ಪರಿಸ್ಥಿತಿ ಶಾಸ್ತ್ರ ಮತ್ತು ತಾಂತ್ರಿಕ ಶಾಸ್ತ್ರೀಯ ಪರಿಸ್ಥಿತಿಗಳ ಒಂದು ಬದಲಾಗುತ್ತಿರುವ ಮಿಶ್ರವಾಗುವಿಕೆಯನ್ನು ನಾವು ಎದುರಿಸುತ್ತೇವೆ.”
ಪ್ರಚಲಿತ ಘಟನೆಗಳಿಗೆ ಗಮನ ಕೊಡುತ್ತಿರುವ ಯಾವನಾದರೂ ಅಂಥ ಹೇಳಿಕೆಗಳಿಂದ ಆಶ್ಚರ್ಯಪಡುವುದಿಲ್ಲ. ಅದು, ಫಿಲಿಪ್ಪೀನ್ಸ್ನ ಜ್ವಾಲಾಮುಖಿಯ ಹೊರಚಿಮ್ಮುವಿಕೆಯಾಗಿರಲಿ, ಕ್ಯಾಲಿಫೋರ್ನಿಯದಲ್ಲಿನ ಒಂದು ಭೂಕಂಪ, ಬಾಂಗ್ಲಾದೇಶದ ಒಂದು ನೆರೆ, ಸೊಮಾಲಿಯದಲ್ಲಿನ ಬರಗಾಲ, ಹವಾಯಿಯಲ್ಲಿನ ಚಂಡಮಾರುತ ಹಾವಳಿ, ಅಥವಾ ನಿಕರಾಗುವದ ಭಾರೀ ಭರತದ ಅಲೆಯಾಗಿರಲಿ, ವಾರ್ತಾ ಮಾಧ್ಯಮಗಳಲ್ಲೆಂದೂ ಈ ಭಾವೋದ್ರೇಕದ ಕಥೆಗಳಿಗೆ ಕೊರತೆಯಿಲ್ಲ. ಲೋಕದ ಒಂದು ಅಥವಾ ಇನ್ನೊಂದು ಮೂಲೆಯಲ್ಲಿ ಒಂದು ವಿಪತ್ತಿನ ವರದಿಯ ಹೊರತು ಒಂದು ತಿಂಗಳಾದರೂ ದಾಟುವುದು ಬಹಳ ಅಪೂರ್ವ.
ಕೆಲವು ಜನರು ಇದನ್ನು ಅಪ್ರಾಮುಖ್ಯವೆಂದು ತಳ್ಳಿಬಿಡುತ್ತಾರೆ. ನಮ್ಮ ಕಾಲದಲ್ಲಿ ವಿಪತ್ತುಗಳಲ್ಲಿ ತೋರಿಬರುವ ಅಭಿವೃದ್ಧಿಗಳು ಕೇವಲ ಹೆಚ್ಚು ಒಳ್ಳೆಯ ವಾರ್ತಾವರದಿ ಅಥವಾ ಹೆಚ್ಚು ಒಳ್ಳೆಯ ದಾಖಲೆಯಿಡುವಿಕೆಗಳಿಂದಾಗಿಯೇ ಎಂದವರು ವಾದಿಸುತ್ತಾರೆ. ಇಂದು ಜನರು ಹೆಚ್ಚಾಗಿರುವ ಕಾರಣ ಮಾತ್ರದಿಂದಲೇ ಹೆಚ್ಚು ಜನರು ವಿಪತ್ತುಗಳಿಂದ ಬಾಧಿತರಾಗುತ್ತಿದ್ದಾರೆ ಎಂದವರು ಮತ್ತೂ ವಾದಿಸುತ್ತಾರೆ. ಈ ವಾದಗಳು ನಿರ್ಣಾಯಕವೋ ಅಥವಾ ತಿಳಿದಿರಬೇಕಾದ ಹೆಚ್ಚಿನ ವಿವರಣೆಗಳು ಇವೆಯೋ?
ಮೇಲೆ ಉಲ್ಲೇಖಿಸಿದ ನ್ಯೂ ಸೈಎಂಟಿಸ್ಟ್ ಲೇಖನದಲ್ಲಿ ಹೇಳಲ್ಪಟ್ಟದ್ದನ್ನು ಗಮನಿಸಿರಿ. “ಇಸವಿ 1960 ಗಳಲ್ಲಿ 523 ಮತ್ತು 1970 ಗಳಲ್ಲಿ 767 ವಿಪತ್ತುಗಳು ವರದಿಸಲ್ಪಟ್ಟವು. ಇಸವಿ 1980 ಗಳೊಳಗೆ, ಸಂಖ್ಯೆಯು 1,387 ಕ್ಕೇರಿತ್ತು.” ಅದು ಮತ್ತೂ ವಿವರಿಸಿದ್ದೇನಂದರೆ “ಕಳೆದ ದಶಕದಲ್ಲಿ ತೋರಿಬಂದ ಅಭಿವೃದ್ಧಿಯ ಅಂಶಕ್ಕೆ, ಚೀನಾದಲ್ಲಿ ಮತ್ತು ಸೋವಿಯೆಟ್ ಒಕ್ಕೂಟದಲ್ಲಿ ವಿಪತ್ತುಗಳ ಅಧಿಕ ಅಕೃತಿಮ ವರದಿಸುವಿಕೆಯೇ ಕಾರಣವಾಗಿರಬಲ್ಲದು.” ಅನಂತರ ಅದು ಕೂಡಿಸಿದ್ದು: “ಹಾಗಿದ್ದರೂ ಕೂಡ, ವಿಪತ್ತುಗಳ ಸಂಖ್ಯೆಯು ಬೆಳೆಯುತ್ತಾ ಬರುತ್ತಿದೆ.” ವಿಪತ್ತುಗಳ ಸಂಖ್ಯೆಯಲ್ಲಿ ಈ ಕಡಿದಾದ ವೃದ್ಧಿಗೆ ಹೆಚ್ಚು ಒಳ್ಳೆಯ ವರದಿಸುವಿಕೆ ಅಥವಾ ಹೆಚ್ಚು ಒಳ್ಳೆಯ ದಾಖಲೆಯಿಡುವಿಕೆ ಮಾತ್ರವೇ ಕಾರಣವೆಂದು ವಿವರಿಸಿಬಿಡಲು ಸಾಧ್ಯವಿಲ್ಲ.
ಅದಲ್ಲದೆ, ಮಾರ್ಚ್ 1992 ರ ಯುಎನ್ ಕ್ರಾನಿಕಲ್ ವರದಿಸುವುದು: “ಕಳೆದ ಕೆಲವು ದಶಕಗಳಲ್ಲಿ, ನೈಸರ್ಗಿಕ ವಿಪತ್ತುಗಳಿಂದ ತರಲ್ಪಟ್ಟ ‘ಹಾವಳಿ, ಕಷ್ಟ ದೆಸೆ ಮತ್ತು ಹಾನಿ’ ಯಿಂದಾಗಿ ಸುಮಾರು 30 ಲಕ್ಷ ಜನರು ಸತ್ತಿದ್ದಾರೆ ಮತ್ತು ಇನ್ನು 80 ಕೋಟಿ ಜನರು ಬಾಧಿತರಾಗಿದ್ದಾರೆ.” ಇದರ ಅರ್ಥವೇನಂದರೆ ಭೂಮಿಯಲ್ಲಿ ಜೀವಿಸುವ ಪ್ರತಿ 7 ವ್ಯಕ್ತಿಗಳಲ್ಲಿ ಸುಮಾರು 1 ವ್ಯಕ್ತಿ ಯಾವುದಾದರೊಂದು ವಿಪತ್ತಿನಿಂದ ಯಾ ದುರಂತದಿಂದ ಬಾಧಿಸಲ್ಪಟ್ಟಿರುತ್ತಾನೆ. ಅದು ನಿಜವಾಗಿಯೂ ಸ್ಥೈರ್ಯಗೆಡಿಸುತ್ತದೆ ಮತ್ತು ನಮ್ಮ ಯುಗವು ಉತ್ಪವ್ಲನ ಮತ್ತು ಕ್ಷೋಭೆಯದ್ದೆಂದು ಸಂದೇಹಿಸುವುದಕ್ಕೆ ಕೊಂಚವೇ ಆಧಾರವನ್ನೀಯುತ್ತದೆ.
ಅಂಥ ಮಹಾ ಸಂಕಟದ ಒಂದು ಕಾಲವನ್ನು ಬೈಬಲು ಮುಂತಿಳಿಸುತ್ತದೆಯಾದ್ದರಿಂದ, ವಿಪತ್ತುಗಳಿಗಾಗಿ ಮತ್ತು ಅವುಗಳಿಂದ ಫಲಿಸುವ ಕಷ್ಟಾನುಭವಕ್ಕಾಗಿ ದೇವರು ಜವಾಬ್ದಾರನೆಂದು ಅರ್ಥವಾಗುತ್ತದೋ? ಅನೇಕ ಜನರು ಹಾಗೆ ನೆನಸುತ್ತಾರೆ. ಆದರೆ ನಿಜತ್ವಗಳು ಏನನ್ನು ತೋರಿಸುತ್ತವೆ? ಮತ್ತು ಅಧಿಕ ಪ್ರಾಮುಖ್ಯವಾಗಿ, ಬೈಬಲು ಏನನ್ನು ತೋರಿಸುತ್ತದೆ?
[ಪುಟ 2 ರಲ್ಲಿರುವ ಚಿತ್ರ ಕೃಪೆ]
Cover: W. Faidley/Weatherstock
[ಪುಟ 3 ರಲ್ಲಿರುವ ಚಿತ್ರ ಕೃಪೆ]
Middle photo: Mark Peters/Sipa Press
WHO/League of Red Cross