ಲೋಕದ ಧರ್ಮಗಳ ಪಾರ್ಲಿಮೆಂಟ್ ಅದು ಯಶಸ್ವಿಯಾಗುವುದೋ?
ನೂರಾರು ಧಾರ್ಮಿಕ ಮುಖಂಡರು, 1993ರ ಬೇಸಗೆಯಲ್ಲಿ ಅಮೆರಿಕದ ಎಲಿನೊಯಿಸನ ಶಿಕಾಗೋದಲ್ಲಿ ಜರುಗಿದ ಲೋಕದ ಧರ್ಮಗಳ ಎರಡನೆಯ ಪಾರ್ಲಿಮೆಂಟಿನಲ್ಲಿ ಒಟ್ಟಾಗಿ ಕೂಡಿಬಂದಿದ್ದರು. ಬೌದ್ಧ, ಕ್ರೈಸ್ತಪ್ರಪಂಚ, ಹಿಂದು, ಯೆಹೂದ್ಯ, ಮತ್ತು ಇಸ್ಲಾಮ್ ಮತಗಳೆಲ್ಲವೂ ಪ್ರತಿನಿಧಿಸಲ್ಪಟ್ಟಿದ್ದವು. ಮಂತ್ರವಾದಿನಿಯರು ಮತ್ತು ದೇವತೆಗಳ ಆರಾಧಕರು ಸಹ ಹಾಜರಿದ್ದರು. ಯುದ್ಧಕ್ಕೆ ಅಂತ್ಯ ತರುವುದರಲ್ಲಿ ತಮ್ಮ ಪಾತ್ರದ ಕುರಿತು ಅವರು ಚರ್ಚಿಸಿದರು. “ಇಂದು ಲೋಕದಲ್ಲಿನ ಪ್ರಧಾನ ಸಂಘರ್ಷಣೆಗಳ ಮೂರನೆಯ ಎರಡು ಪಾಲುಗಳ ಮೇಲೆ ಧಾರ್ಮಿಕ ತೊಡಕಿಸಿಕೊಳ್ಳುವಿಕೆಯು ಇದೆ” ಎಂದು ಪಾರ್ಲಿಮೆಂಟಿನ ಅಧ್ಯಕ್ಷರು ಅಂಗೀಕರಿಸಿದರು.
ಒಂದು ನೂರು ವರ್ಷಗಳ ಹಿಂದೆ
ಪಾರ್ಲಿಮೆಂಟ್ ಯಶಸ್ವಿಯಾಗಿತ್ತೋ? ಒಂದು ನೂರು ವರ್ಷಗಳ ಹಿಂದೆ ಲೋಕದ ಧರ್ಮಗಳ ಪ್ರಥಮ ಪಾರ್ಲಿಮೆಂಟಿನಲ್ಲಿ ಏನು ಸಂಭವಿಸುತ್ತದೆಂಬುದರೆಡೆಗೆ ಒಂದು ನೋಟ ಹಾಯಿಸಿರಿ. ಅದು ಕೂಡ 1893ರ ಬೇಸಗೆಯಲ್ಲಿ ಶಿಕಾಗೋದಲ್ಲಿ ನಡೆಸಲ್ಪಟ್ಟಿತ್ತು, ಮತ್ತು 40 ಕ್ಕಿಂತಲೂ ಹೆಚ್ಚು ಧರ್ಮಗಳು ಪ್ರತಿನಿಧಿಸಲ್ಪಟ್ಟಿದ್ದವು. ಲೋಕದ ಧರ್ಮಗಳ ಒಂದು ಪಾರ್ಲಿಮೆಂಟಿನ ಕೌನ್ಸಿಲ್ ಒಪ್ಪುವುದೇನಂದರೆ 1893 ರಲ್ಲಿ ಹಾಜರಾದವರು “ನಂಬಿದ್ದೇನಂದರೆ ಅಂತಾರಾಷ್ಟ್ರೀಯ ಮಧ್ಯನಂಬಿಕೆ ನೆರವಿಗಳ ಸರಣಿಯಲ್ಲಿ ಮೊದಲನೆಯದ್ದು ತಿಳಿವಳಿಕೆ, ಶಾಂತಿ ಮತ್ತು ಪ್ರಗತಿಗೆ ನೆರವನ್ನೀಯಲಿರುವುದು. ಅದು ಹಾಗೆ ಆಗಿ ಪರಿಣಮಿಸಲಿಲ್ಲ. ಧಾರ್ಮಿಕ ಅಸಹಿಷ್ಣುತೆ ಮತ್ತು ಹಿಂಸಾಚಾರವು ಗತಿಸಿದ 100 ವರ್ಷಗಳ ಯುದ್ಧಗಳ ಭಾಗವಾಗಿ ಇತ್ತು, ಮತ್ತು ಅದು ಹಾಗೆ ಇಂದು ಮುಂದುವರಿಯುತ್ತಿದೆ.” ಯಾಕೆ ಸೋಲು? ಕಾರಣವೇನಂದರೆ ಮಧ್ಯನಂಬಿಕೆಯ ಸಮಗ್ರ ಕಲ್ಪನೆಯು ದೇವರಿಂದ ಅನುಮೋದಿಸಲ್ಪಟ್ಟಿಲ್ಲ. ಬೈಬಲು ಹೇಳುವುದು: “ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ.”—2 ಕೊರಿಂಥ 6:14-17.
ತಕ್ಕದ್ದಾಗಿಯೇ, ಜೈಅನ್ಸ್ ವಾಚ್ ಟವರ್ನ ಸಪ್ಟಂಬರ 1893ರ ಸಂಚಿಕೆಯು, ಲೋಕದ ಧರ್ಮಗಳ ಪಾರ್ಲಿಮೆಂಟಿಗೆ ಇರುವ ಶಾಸ್ತ್ರೀಯ ಬೆಂಬಲದ ಕೊರತೆಯನ್ನು ಎತ್ತಿತೋರಿಸಿದಾಗ, ವಿಡಂಬನಾತ್ಮಕವಾಗಿ ಅದು ಹೇಳಿದ್ದು: “ಭೂಅಗಿತಶಾಸ್ತ್ರಜ್ಞರು ಬ್ಯಾಬಿಲನ್ ಮತ್ತು ಇತರ ಪುರಾತನ ನಗರಗಳ ಅವಶೇಷಗಳಿಂದ ಸೋಜಿಗವನ್ನುಂಟುಮಾಡುವ ಸುಟ್ಟ ಆವೆಮಣ್ಣಿನ ಉರುಳೆಗಳನ್ನು ಅಗೆದು ತೆಗೆದರು, ಆದರೆ ದೊರಕದೆ ಇರುವ ಕೆಲವು ಇನ್ನು ಅಲ್ಲಿವೆ. . . . ಮೋವಾಬ್ಯರ ಮತ್ತು ಅಮ್ಮೋನಿಯರ, ಮತ್ತು ಎದೋಮ್ಯರ ‘ಧರ್ಮಗಳ ಪಾರ್ಲಿಮೆಂಟ್’ ಒಂದನ್ನು ಕರೆದಿರುವ ಕುರಿತು ಮೋಶೆ ಮತ್ತು ಯೆಹೋಶುವರು ಮಾತಾಡಿರುವ ಯಾವುದನ್ನು ಅವರು ಇನ್ನೂ ಕಂಡುಕೊಂಡಿಲ್ಲ. . . . ಶಿಲೋವಿಗೆ ಬರುವಂತೆ ಮತ್ತು ಯೆಹೋವನ ಯಾಜಕರೊಂದಿಗೆ ಒಂದು ಪರಿಷತ್ತನ್ನು ಜರುಗಿಸಲು ಗಟಿಮ್ಟುಟ್ಟಾದ ಸಮುವೇಲನು ತ್ ಮತ್ತು ಎಕ್ರೋನ್ಗೆ ಕರೇಕಳುಹಿಸಿದರ್ದ ಯಾವುದೇ ಒಂದನ್ನು ಅವರು ಕಂಡುಕೊಂಡಿಲ್ಲ. . . ಒಬ್ಬರು ಇನ್ನೊಬ್ಬರ ಧರ್ಮಗಳಿಗಾಗಿ ಪರಸ್ಪರ ಗೌರವವನ್ನು ಪ್ರವರ್ಧಿಸುವ ನೋಟದೊಂದಿಗೆ, ಅವರ ಪರಸ್ಪರ ನಂಬಿಕೆಗಳ ತತ್ವಗಳ ಒಂದು ವಾರದ ಚರ್ಚೆಗಾಗಿ ಬಾಳನ ಮತ್ತು ಮೋಲೆಕನ ಯಾಜಕರೊಂದಿಗೆ ‘ಔಪಚಾರಿಕ ಸಮ್ಮೇಳನ’ ವೊಂದನ್ನು ಚರ್ಮದ ನಡುಪಟ್ಟಿಯನ್ನು ಧರಿಸಿದ್ದ ವಯಸ್ಸಾದ ಎಲೀಯನು ಮಾತಾಡಿರುವುದರ ಯಾವುದನ್ನೂ ಅವರು ಕಂಡುಕೊಂಡಿಲ್ಲ.”
ದೇವರ ರಾಜ್ಯ—ಏಕಮಾತ್ರ ನಿರೀಕ್ಷೆ
ಲೋಕದ ಧರ್ಮಗಳ ಪಾರ್ಲಿಮೆಂಟ್ ಯಶಸ್ವಿಯಾಗುವುದಿಲ್ಲ. ವಾರ್ತಾಪತ್ರಗಳು ಮತ್ತು ಪ್ರತಿನಿಧಿಗಳು ಪಾರ್ಲಿಮೆಂಟಿನೊಂದಿಗೆ “ಗೊಂದಲ,” “ಸಂಕ್ಷೋಭೆ,” ಮತ್ತು “ಕೂಗುಸಂತೆ” ಎಂಬಂತಹ ವಾಕ್ಸರಣಿಗಳನ್ನು ಬಳಸಿದರು. ಒಂದು ವರದಿಗನುಸಾರ, ರಾಜಕೀಯ ವಿಭಾಗಗಳಿಂದ ಉಂಟಾದ ಎರಡು ಗಲಭೆಗಳನ್ನು ಶಾಂತಗೊಳಿಸಲು ಪೊಲೀಸರನ್ನು ಕೂಡ ಒಳಗೂಡಿಸಬೇಕಾಯಿತು. ಇಸವಿ 1952ರ ದಾಖಲೆಯೊಂದರಲ್ಲಿ, “ಎಲ್ಲಾ ಜನಾಂಗಗಳಲ್ಲಿ ಲೋಕ ಶಾಂತಿ ಮತ್ತು ತಿಳಿವಳಿಕೆಯನ್ನು ಉಂಟುಮಾಡುವಂತೆ, ಸಂಯುಕ್ತ ರಾಷ್ಟ್ರ ಸಂಘದೊಂದಿಗೆ ಕಾರ್ಯವೆಸಗಲು ಧರ್ಮಗಳ ಶಾಶ್ವತ ಲೋಕ ಪಾರ್ಲಿಮೆಂಟನ್ನು ಸ್ಥಾಪಿಸುವುದು” ಅದರ ಉದ್ದೇಶಗಳಲ್ಲೊಂದು ಎಂದು ಪಾರ್ಲಿಮೆಂಟ್ ಪಟ್ಟಿಮಾಡಿತು. ವಿಪರ್ಯಸ್ತವಾಗಿ, ಆತನ ರಾಜ್ಯವು ಈ ಲೋಕದ ಭಾಗವಾಗಿರುವುದಿಲ್ಲವೆಂದು ಯೇಸುವು ಹೇಳಿದನು. ಮಾನವಕುಲದ ಸಮಸ್ಯೆಗಳಿಗೆ ಏಕಮಾತ್ರ ಪರಿಹಾರದೋಪಾದಿ ದೇವರ ರಾಜ್ಯಕ್ಕೆ ಬೈಬಲು ನಿರ್ದೇಶಿಸುತ್ತದೆ.—ದಾನಿಯೇಲ 2:44; ಯೋಹಾನ 18:36. ◆