ಆಕೆ ಯೆಹೋವನಿಂದ ಅತಿಶಯವಾಗಿ ಅನುಗ್ರಹಿಸಲ್ಪಟ್ಟಳು
“ದೇವರ ದಯೆ ಹೊಂದಿದವಳೇ, ನಿನಗೆ ಶುಭವಾಗಲಿ; ಕರ್ತನು (ಯೆಹೋವನು, NW) ನಿನ್ನ ಸಂಗಡ ಇದ್ದಾನೆ.” ಎಂತಹ ಒಂದು ಅಭಿವಂದನೆ! ಮಾತಾಡುವವನು ಬೇರೆ ಯಾರೂ ಆಗಿರದೆ ದೇವದೂತನಾದ ಗಬ್ರಿಯೇಲನಾಗಿದ್ದಾನೆ. ಅವನು ನಮ್ರ ಹೃದಯದ ಒಬ್ಬ ಯುವ ಹೆಂಗಸನ್ನು—ಹೇಲೀ ಎಂಬ ಹೆಸರಿನ ಮನುಷ್ಯನ ಮಗಳಾದ ಮರಿಯಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾನೆ. ವರುಷವು ಸಾ.ಶ.ಪೂ. 3 ಆಗಿದೆ, ಮತ್ತು ಸ್ಥಳವು ನಜರೇತ್ ಪಟ್ಟಣವಾಗಿದೆ.—ಲೂಕ 1:26-28.
ಮರಿಯಳಿಗೆ ಬಡಗಿಯಾದ ಯೋಸೇಫನೊಂದಿಗೆ ಮದುವೆಗೆ ನಿಶ್ಚಯವಾಗಿದೆ. ಯೆಹೂದಿ ನಿಯಮ ಮತ್ತು ಪದ್ಧತಿಗನುಸಾರ, ಅವಳನ್ನು ಅವನ ಅಂಗೀಕೃತ ಹೆಂಡತಿಯಾಗಿ ನೋಡಲಾಗುತ್ತದೆ. (ಮತ್ತಾಯ 1:18) ಅವಳಂತೆಯೇ, ಅವನು ಸಮಾಜದಲ್ಲಿ ನಮ್ರ ಅಂತಸ್ತಿನವನಾಗಿದ್ದಾನೆ. ಹಾಗಿದ್ದಲ್ಲಿ, ದೇವದೂತನು ಅವಳನ್ನು ಅತಿಶಯವಾಗಿ ಅನುಗ್ರಹಿಸಲ್ಪಟ್ಟವಳಂತೆ ಯಾಕೆ ವಂದಿಸುತ್ತಾನೆ?
ಅವಳ ಅದ್ಭುತ ಸುಯೋಗ
ಗಬ್ರಿಯೇಲನು ಕೂಡಿಸುವದು: “ಮರಿಯಳೇ, ಹೆದರಬೇಡ; ನಿನಗೆ ದೇವರ ದಯೆ (ಅನುಗ್ರಹ, NW) ದೊರಕಿತು. ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸುವೆಂದು ಹೆಸರಿಡಬೇಕು. ಆತನು ಮಹಾಪುರುಷನಾಗಿ ಪರಾತ್ಪರನ ಕುಮಾರನೆನಿಸಿಕೊಳ್ಳುವನು; ಇದಲ್ಲದೆ ದೇವರಾಗಿರುವ ಕರ್ತನು (ಯೆಹೋವನು, NW) ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು. ಆತನು ಯಾಕೋಬನ ವಂಶವನ್ನು ಸದಾಕಾಲ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇಲ್ಲ.”—ಲೂಕ 1:29-33.
ಅಚ್ಚರಿ ಹಾಗೂ ಬೆರಗುಗೊಂಡವಳಾಗಿ, ಮರಿಯಳು ಕೇಳುತ್ತಾಳೆ: “ಇದು ಹೇಗಾದೀತು? ನಾನು ಪುರುಷನನ್ನು ಅರಿತವಳಲ್ಲವಲ್ಲಾ?” ಗಬ್ರಿಯೇಲನು ಉತ್ತರಿಸುತ್ತಾನೆ: “ನಿನ್ನ ಮೇಲೆ ಪವಿತ್ರಾತ್ಮ ಬರುವದು; ಪರಾತ್ಪರನ ಶಕ್ತಿಯ ನೆರಳು ನಿನ್ನ ಮೇಲೆ ಬೀಳುವದು; ಆದದರಿಂದ ಹುಟ್ಟುವ ಆ ಪವಿತ್ರ ಶಿಶು ದೇವರ ಮಗನೆನಿಸಿಕೊಳ್ಳುವದು.” ಯಾವದೇ ಸಂದೇಹಗಳನ್ನು ಹೋಗಲಾಡಿಸಲು, ದೇವದೂತನು ಕೂಡಿಸುವದು: “ನಿನ್ನ ಬಂಧುವಾದ ಎಲಿಸಬೇತಳಿದ್ದಾಳಲ್ಲಾ, ಆಕೆ ಸಹ ಮುಪ್ಪಿನವಳಾದರೂ ಗರ್ಭಿಣಿಯಾಗಿದ್ದಾಳೆ; ಆಕೆಯ ಗರ್ಭದಲ್ಲಿ ಗಂಡುಮಗುವದೆ; ಬಂಜೆಯೆನಿಸಿಕೊಂಡಿದ್ದ ಆಕೆಗೆ ಇದೇ ಆರನೆಯ ತಿಂಗಳು. ದೇವರಿಂದ ಬರುವ ಯಾವ ಮಾತಾದರೂ ನಿಷ್ಫಲವಾಗುವದಿಲ್ಲ.”—ಲೂಕ 1:34-37.
ಮರಿಯಳು ಸೇವೆಯ ಈ ಆಶ್ಚರ್ಯಕರ ಸುಯೋಗವನ್ನು ಒಡನೆಯೇ ಸ್ವೀಕರಿಸುತ್ತಾಳೆ. ಮನಃಪೂರ್ವಕವಾಗಿ ಆದರೆ ನಮ್ರತೆಯಿಂದ, ಅವಳು ಪ್ರತಿಕ್ರಿಯಿಸುವದು: “ಇಗೋ, ನಾನು ಕರ್ತನ (ಯೆಹೋವನ, NW) ದಾಸಿ; ನಿನ್ನ ಮಾತಿನಂತೆ ನನಗಾಗಲಿ.” ತರುವಾಯ, ಗಬ್ರಿಯೇಲನು ಹೊರಟುಹೋಗುತ್ತಾನೆ. ಮರಿಯಳು ಯೆಹೂದದ ಪರ್ವತಮಯ ಪ್ರದೇಶದಲ್ಲಿರುವ ಒಂದು ಪಟ್ಟಣಕ್ಕೆ ತರ್ವೆಯಿಂದ ಹೋಗುತ್ತಾಳೆ. ಯಾಜಕನಾದ ಜಕರೀಯ ಮತ್ತು ಅವನ ಹೆಂಡತಿಯಾದ ಎಲಿಸಬೇತಳ ಮನೆಗೆ ತಲುಪಿದಾಗ, ಪರಿಸ್ಥಿತಿಗಳು ದೇವದೂತನು ವರ್ಣಿಸಿದಂತೆಯೇ ಇರುವದನ್ನು ಅವಳು ಕಂಡುಕೊಳ್ಳುತ್ತಾಳೆ. ಎಂತಹ ಆನಂದ ಮರಿಯಳ ಹೃದಯವನ್ನು ತುಂಬುತ್ತದೆ! ಅವಳ ತುಟಿಗಳಿಂದ ಯೆಹೋವನಿಗೆ ಸ್ತುತಿಯ ಶಬ್ದಗಳು ಉಕ್ಕುತ್ತವೆ.—ಲೂಕ 1:38-55.
ಅವಳು ಯೋಸೇಫನ ಪತ್ನಿಯಾಗುತ್ತಾಳೆ
ಒಬ್ಬ ಕನ್ಯೆ ಯೇಸುವಿನ ಮಾನವ ಶರೀರವನ್ನು ಒದಗಿಸಬೇಕು, ಯಾಕಂದರೆ ಅಂತಹ ಒಂದು ಜನ್ಮವು ಮುಂತಿಳಿಸಲ್ಪಟ್ಟಿತ್ತು. (ಯೆಶಾಯ 7:14; ಮತ್ತಾಯ 1:22, 23) ಆದರೆ ನಿಶಿತ್ಚಾರ್ಥವಾಗಿರುವ ಒಬ್ಬ ಕನ್ಯೆ ಯಾಕೆ ಅವಶ್ಯ? ರಾಜ ದಾವೀದನ ಸಿಂಹಾಸನದ ಕಾನೂನುಬದ್ಧ ಹಕ್ಕನ್ನು ದಾಟಿಸಬಲ್ಲ ಒಬ್ಬ ದತ್ತು ತಂದೆಯನ್ನು ಒದಗಿಸಲಿಕ್ಕಾಗಿ. ಯೋಸೇಫ ಮತ್ತು ಮರಿಯ ಇಬ್ಬರೂ ಯೆಹೂದ ಕುಲಕ್ಕೆ ಸೇರಿದವರು ಮತ್ತು ರಾಜ ದಾವೀದನ ವಂಶದವರು ಆಗಿದ್ದಾರೆ. ಹೀಗೆ ಯೇಸುವಿನ ಹಕ್ಕುದಾರಿಕೆಯ ಹಕ್ಕುಗಳು ಇಮ್ಮಡಿಯಾಗಿ ಸ್ಥಾಪಿತವಾಗುವವು. (ಮತ್ತಾಯ 1:2-16; ಲೂಕ 3:23-33) ಈ ಕಾರಣದಿಂದ ಅನಂತರ ದೇವದೂತನು, ಅವಳು ಗರ್ಭಿಣಿಯಾಗಿದ್ದರೂ ಮರಿಯಳನ್ನು ತನ್ನ ಕಾನೂನುಬದ್ಧ ಹೆಂಡತಿಯಾಗಿ ತಗೆದುಕೊಳ್ಳಲು ಹಿಂಜರಿಯಬಾರದೆಂದು ಯೋಸೇಫನಿಗೆ ಭರವಸೆ ಕೊಡುತ್ತಾನೆ.—ಮತ್ತಾಯ 1:19-25.a
ಕೈಸರನಾದ ಔಗುಸ್ತನಿಂದ ಹೊರಡಿಸಲ್ಪಟ್ಟ ಕಂದಾಯ ವಸೂಲಿಯ ನಿಯಮವು ಯೋಸೇಫ ಮತ್ತು ಮರಿಯಳು ಬೇತ್ಲೆಹೇಮಿನಲ್ಲಿ ದಾಖಲು ಮಾಡಿಸುವಂತೆ ನಿರ್ಬಂಧಿಸುತ್ತದೆ. ಅಲ್ಲಿದ್ದಾಗ, ಅವಳ ಜೇಷ್ಠಪುತ್ರನಿಗೆ ಅವಳು ಜನ್ಮವನ್ನೀಯುತ್ತಾಳೆ. ಶಿಶುವನ್ನು ನೋಡಲು ಕುರುಬರು ಬರುತ್ತಾರೆ, ಮತ್ತು ಅವರು ಅವನ ತಂದೆಯಾದ ಯೆಹೋವನಿಗೆ ಸ್ತುತಿಯನ್ನು ಸಲ್ಲಿಸುತ್ತಾರೆ. ಮೋಶೆಯ ನಿಯಮಕ್ಕನುಸಾರ 40 ದಿನಗಳ ಶುದ್ಧೀಕರಿಸುವಿಕೆಯ ನಂತರ, ಅವಳ ಪಾಪಗಳ ದೋಷ ಪರಿಹಾರ ಮಾಡಲಿಕ್ಕಾಗಿ ಮರಿಯಳು ಯೆರೂಸಲೇಮಿನಲ್ಲಿರುವ ದೇವಾಲಯಕ್ಕೆ ಹೋಗುತ್ತಾಳೆ. (ಯಾಜಕಕಾಂಡ 12:1-8; ಲೂಕ 2:22-24) ಹೌದು, ಅವಳು ಪರಿಶುದ್ಧಳಾಗಿ ಹುಟ್ಟಿರದ್ದರಿಂದ, ಮತ್ತು ಹೀಗೆ ಪಾಪದ ಕಳಂಕದಿಂದ ಮುಕ್ತಳಾಗಿರದ್ದರಿಂದ ಅವಳಿಗೆ ಬಾಧ್ಯತೆಯಾಗಿ ಬಂದಿರುವ ಅಪರಿಪೂರ್ಣತೆಗಳು, ದೋಷ ಪರಿಹಾರಕ ಯಜ್ಞಗಳ ಮೂಲಕ ಮುಚ್ಚಲ್ಪಡಬೇಕಿತ್ತು.—ಕೀರ್ತನೆಗಳು 51:5
ಮರಿಯ ಮತ್ತು ಯೋಸೇಫ ದೇವಾಲಯದಲ್ಲಿರುವಾಗ, ವೃದ್ಧ ಸಿಮೆಯೋನ ಮತ್ತು ವಯಸ್ಸಾದ ಪ್ರವಾದಿನಿ ಅನ್ನಳು ದೇವರ ಮಗನನ್ನು ನೋಡಲು ಸುಯೋಗ ಹೊಂದಿದವರಾಗುತ್ತಾರೆ. ಮರಿಯಳು ಗಮನದ ಕೇಂದ್ರಬಿಂದುವಾಗಿಲ್ಲ. (ಲೂಕ 2:25-38) ತದನಂತರ, ಮೇಜೆ ಜ್ಞಾನಿಗಳು ಅವಳಿಗಲ್ಲ ಬದಲಾಗಿ ಯೇಸುವಿಗೆ ಪ್ರಣಾಮ ಮಾಡುತ್ತಾರೆ.—ಮತ್ತಾಯ 2:1-12.
ಐಗುಪ್ತಕ್ಕೆ ಓಡಿಹೋದ ಬಳಿಕ ಮತ್ತು ದುಷ್ಟ ಹೆರೋದನು ಸಾಯುವ ತನಕ ಅಲ್ಲಿ ಉಳಿದ ಬಳಿಕ, ಯೇಸುವಿನ ಹೆತ್ತವರು ಹಿಂದಿರುಗುತ್ತಾರೆ ಮತ್ತು ನಜರೇತೆಂಬ ಚಿಕ್ಕ ಹಳ್ಳಿಯಲ್ಲಿ ನೆಲೆಸುತ್ತಾರೆ. (ಮತ್ತಾಯ 2:13-23; ಲೂಕ 2:39) ಅಲ್ಲಿಯೇ ಯೋಸೇಫ ಮತ್ತು ಮರಿಯಳು ಯೇಸುವನ್ನು ದೈವಿಕ ಕುಟುಂಬ ಪರಿಸ್ಥಿತಿಗಳ ಕೆಳಗೆ ಪೋಷಿಸುತ್ತಾರೆ.
ಮರಿಯಳಿಗೆ ಬೇರೆ ಮಕ್ಕಳಿದ್ದರು
ಸಮಯಾನಂತರ, ಮರಿಯಳು ಮತ್ತು ಯೋಸೇಫರು ಯೇಸುವಿಗೆ ಸ್ವಾಭಾವಿಕ ಸಹೋದರರು ಮತ್ತು ಸಹೋದರಿಯರನ್ನು ಒದಗಿಸುತ್ತಾರೆ. ತನ್ನ ಶುಶ್ರೂಷೆಯ ನಿಮಿತ್ತ ತನ್ನ ಸ್ವಂತ ಊರಾದ ನಜರೇತಿಗೆ ಯೇಸು ಬಂದಾಗ, ಅವನ ಬಾಲ್ಯದ ಪರಿಚಯಸ್ಥರು ಅವನನ್ನು ಗುರುತಿಸುತ್ತಾರೆ. “ಇವನು ಆ ಬಡಗಿಯ ಮಗನಲ್ಲವೇ?” ಎಂದು ಅವರು ಕೇಳುತ್ತಾರೆ. “ಇವನ ತಾಯಿ ಮರಿಯಳೆಂಬವಳಲ್ಲವೇ. ಯಾಕೋಬ, ಯೋಸೇಫ ಸೀಮೋನ ಯೂದ ಇವರು ಇವನ ತಮ್ಮಂದಿರಲ್ಲವೇ?” (ಮತ್ರಾಯ 13:55, 56) ಯೇಸುವಿನ ಹುಟ್ಟು ಸಹೋದರರು ಮತ್ತು ಸಹೋದರಿಯರು ಎಂದು ಯಾರನ್ನು ಅವರು ತಿಳಿದಿರುತ್ತಾರೋ, ಅವರನ್ನು ಒಳಗೂಡಿರುವ ಯೋಸೇಫನ ಮತ್ತು ಮರಿಯಳ ಶಾರೀರಿಕ ಕುಟುಂಬಕ್ಕೆ ಸೂಚಿಸಿ ನಜರೇತಿನವರು ಮಾತಾಡುತ್ತಿದ್ದರು.
ಈ ಸಹೋದರ ಸಹೋದರಿಯರು ಯೇಸುವಿನ ಸೋದರಸಂಬಂಧಿಗಳಲ್ಲ. ಅವರು ಅವನ ಶಿಷ್ಯರು, ಅಥವಾ ಆತ್ಮಿಕ ಸಹೋದರ ಸಹೋದರಿಯರೂ ಅಲ್ಲ, ಯಾಕಂದರೆ ಯೋಹಾನ 2:12 ಈ ಎರಡು ಗುಂಪುಗಳ ನಡುವೆ ಒಂದು ಸ್ಪಷ್ಟವಾಗಿದ ಭೇದವನ್ನು ಮಾಡುತ್ತಾ ತಿಳಿಸುವದು: “ಇದಾದ ಮೇಲೆ ಆತನೂ [ಯೇಸು] ಆತನ ತಾಯಿಯೂ ತಮ್ಮಂದಿರೂ ಆತನ ಶಿಷ್ಯರೂ ಘಟ್ಟಾ ಇಳಿದು ಕಪೆರ್ನೌಮಿಗೆ” ಹೋದರು. ವರ್ಷಗಳಾನಂತರ ಯೆರೂಸಲೇಮಿನಲ್ಲಿ, ಅಪೊಸ್ತಲ ಪೌಲನು ಕೇಫ, ಅಥವಾ ಪೇತ್ರನನ್ನು ನೋಡಿದನು, ಮತ್ತು ಕೂಡಿಸಿದ್ದು: “ನಾನು ಇತರ ಯಾವ ಅಪೊಸ್ತಲರನ್ನೂ ನೋಡಲಿಲ್ಲ; ನಾನು ಕೇವಲ ಕರ್ತನ ತಮ್ಮನಾದ ಯಾಕೋಬನನ್ನು ನೋಡಿದೆನು.” (ಗಲಾತ್ಯ 1:19, ದ ಜೆರೂಸಲೇಮ್ ಬೈಬಲ್) ಇನ್ನೂ ಹೆಚ್ಚಾಗಿ, ಯೋಸೇಫನು “ಆಕೆಯು ಗಂಡುಮಗನನ್ನು ಹಡೆಯುವ ತನಕ [ಮರಿಯಳನ್ನು] ಅರಿಯಲಿಲ್ಲ” ಎಂಬ ಹೇಳಿಕೆಯು ಸೂಚಿಸುತ್ತದೇನಂದರೆ ಆನಂತರ ಯೇಸುವಿನ ತಂದೆ ಅವಳೊಂದಿಗೆ ಸಂಬಂಧಗಳನ್ನಿಟ್ಟನು ಮತ್ತು ಅವಳ ಇತರ ಮಕ್ಕಳಿಗೆ ತಂದೆಯಾದನು. (ಮತ್ತಾಯ 1:25) ಇದಕ್ಕನುಸಾರವಾಗಿ, ಲೂಕ 2:7 ಯೇಸುವನ್ನು ಅವಳ “ಚೊಚ್ಚಲುಮಗ” ನೆಂದು ಕರೆಯುತ್ತದೆ.
ಭಯಭಕ್ತಿಯ ತಾಯಿ
ಭಯಭಕ್ತಿಯ ತಾಯಿಯೋಪಾದಿ, ಅವಳ ಮಕ್ಕಳನ್ನು ಧಾರ್ಮಿಕತೆಯಲ್ಲಿ ಉಪದೇಶಿಸುವದರಲ್ಲಿ ಮರಿಯಳು ಯೋಸೇಫನೊಂದಿಗೆ ಸಹಕರಿಸುತ್ತಾಳೆ. (ಜ್ಞಾನೋಕ್ತಿ 22:6) ಅವಳು ಶಾಸ್ತ್ರವಚನಗಳ ಉತ್ಕಟ ವಿದ್ಯಾರ್ಥಿ ಎಂಬದನ್ನು, ಎಲಿಸಬೇತಳಿಂದ ವಂದಿಸಲ್ಪಟ್ಟಾಗ ಅವಳು ಉಚ್ಚರಿಸಿದ ಆತ್ಮಿಕವಾಗಿ ಸಮೃದ್ಧವಾಗಿರುವ ಅಭಿವ್ಯಕ್ತಿಯಿಂದ ನೋಡಬಹುದು. ಆ ಸಮಯದಲ್ಲಿ ಯೇಸುವಿನ ತಾಯಿ, ಹನ್ನಳ ಹಾಡಿನಿಂದ ರಸಭಾವಗಳನ್ನು ಪುನರುಚ್ಚರಿಸುತ್ತಾಳೆ ಮತ್ತು ಕೀರ್ತನೆಗಳು, ಐತಿಹಾಸಿಕ ಹಾಗೂ ಪ್ರವಾದನಾತ್ಮಕ ಬರಹಗಳ, ಮತ್ತು ಮೋಶೆಯ ಪುಸ್ತಕಗಳ ಕುರಿತಾಗಿ ಜ್ಞಾನವನ್ನು ಪ್ರದರ್ಶಿಸುತ್ತಾಳೆ. (ಆದಿಕಾಂಡ 30:13; 1 ಸಮುವೇಲ 2:1-10; ಜ್ಞಾನೋಕ್ತಿ 31:28; ಮಲಾಕಿ 3:12; ಲೂಕ 1:46-55) ಮರಿಯಳು ಪ್ರವಾದನಾತ್ಮಕ ಘಟನೆಗಳನ್ನು ಮತ್ತು ನುಡಿಗಳನ್ನು ನೆನಪಿನಲ್ಲಿರಿಸಿಕೊಂಡು, ಅವಳ ಹೃದಯದಲ್ಲಿ ಅವುಗಳನ್ನು ಶೇಖರಿಸಿಟ್ಟು, ಅವಳ ಮನಸ್ಸಿನಲ್ಲಿ ಅವುಗಳ ಕುರಿತು ಮನನ ಮಾಡಿದ್ದಾಳೆ. ಆದುದರಿಂದ ಅವಳು ಬಾಲಕನಾದ ಯೇಸುವಿಗೆ ಉಪದೇಶವನ್ನು ಕೊಡುವದರಲ್ಲಿ ಪಾಲಿಗಳಾಗಲು ಚೆನ್ನಾಗಿ ಸನ್ನದ್ಧಳಾಗಿದ್ದಾಳೆ.—ಲೂಕ 2:19, 33.
ಚೆನ್ನಾಗಿ ಬೋಧಿಸಲ್ಪಟ್ಟ 12 ವರ್ಷ ಪ್ರಾಯದ ಯೇಸು, ದೇವಾಲಯದಲ್ಲಿರುವ ವಿದ್ಯಾವಂತ ಮನುಷ್ಯರನ್ನು ಆಶ್ಚರ್ಯಗೊಳಿಸುವ ಶಾಸ್ತ್ರೀಯ ಜ್ಞಾನವನ್ನು ಪ್ರಕಟಿಸುತ್ತಾನೆ. ಆ ಪಸ್ಕಹಬ್ಬದ ಕಾಲದಲ್ಲಿ ಅವನು ತನ್ನ ಹೆತ್ತವರಿಂದ ವಿಂಗಡಿಸಲ್ಪಟ್ಟ ಕಾರಣ, ಅವನ ತಾಯಿ ಹೇಳುವುದು: “ಕಂದಾ, ನೀನು ನಮಗೆ ಯಾಕೆ ಹೀಗೆ ಮಾಡಿದಿ? ನಿನ್ನ ತಂದೆಯೂ ನಾನೂ ಎಷ್ಟೋ ತಳಮಳಗೊಂಡು ನಿನ್ನನ್ನು ಹುಡುಕಿ ಬಂದೆವಲ್ಲಾ.” ಯೇಸು ಪ್ರತಿಕ್ರಿಯಿಸುವದು: “ನೀವು ನನ್ನನ್ನು ಹುಡುಕಿದ್ದೇನು? ನಾನು ನನ್ನ ತಂದೆಯ ಮನೆಯಲ್ಲಿ ಇರಬೇಕಾದದ್ದು ನಿಮಗೆ ತಿಳಿಯಲಿಲ್ಲವೇ?” ಅವನ ಉತ್ತರದ ಪ್ರಾಮುಖ್ಯವನ್ನು ಗ್ರಹಿಸಲು ಅಶಕ್ತಳಾಗಿ, ಮರಿಯಳು ಅದನ್ನು ಅವಳ ಹೃದಯದಲ್ಲಿ ಶೇಖರಿಸಿಡುತ್ತಾಳೆ. ನಜರೇತಿಗೆ ಹಿಂತಿರುಗಿ, “ಯೇಸು ಜ್ಞಾನದಲ್ಲಿಯೂ ದೇಹಬಲದಲ್ಲಿಯೂ ವೃದ್ಧಿಯಾಗುತ್ತಾ ಬಂದನು; ಇದಲ್ಲದೆ ದೇವರ ಮತ್ತು ಮನುಷ್ಯರ ದಯೆಯು ಆತನ ಮೇಲೆ ಹೆಚ್ಚಾಗುತ್ತಾ ಬಂತು.”—ಲೂಕ 2:42-52.
ಮರಿಯಳು ಯೇಸುವಿನ ಶಿಷ್ಯಳಾಗಿ
ಕಟ್ಟಕಡೆಗೆ ಮರಿಯಳು ಯೇಸುವಿನ ಅಚಲ ನಿಷ್ಠೆಯುಳ್ಳ ಶಿಷ್ಯಳಾಗುವದು ಎಷ್ಟು ತಕ್ಕದ್ದಾಗಿದೆ! ಅವಳು ನಮ್ರಳಾಗಿದ್ದಾಳೆ ಮತ್ತು ದೇವರಿಂದ ಕೊಡಲ್ಪಟ್ಟ ಅವಳ ಅದೀತ್ವಿಯ ನೇಮಕದ ಹೊರತಾಗಿಯೂ ಅವಳಿಗೆ ಶೋಭಿಸುವ ಯಾವ ಮಹತ್ವಾಕಾಂಕ್ಷೆ ಇರುವುದಿಲ್ಲ. ಮರಿಯಳಿಗೆ ಶಾಸ್ತ್ರವಚನಗಳು ತಿಳಿದಿವೆ. ನೀವಾಗಿಯೇ ಅವುಗಳನ್ನು ಹುಡುಕಿದರೂ, ತಲೆಯ ಸುತ್ತಲೂ ಪ್ರಭಾವಮಂಡಲದೊಂದಿಗೆ, ಒಂದು ಸಿಂಹಾಸನದ ಮೇಲೆ “ಮಾತಾರಾಣಿ” ಯಾಗಿ ಕೂತುಕೊಂಡಿದ್ದು, ಯೇಸುವಿನ ಪ್ರತಿಬಿಂಬಿಸಲ್ಪಟ್ಟ ಮಹಿಮೆಯಲ್ಲಿ ತೋಯಿಸಲ್ಪಟ್ಟದ್ದಾಗಿ ಅವಳನ್ನು ವರ್ಣಿಸಲಾಗಿರುವದನ್ನು ನೀವು ಕಂಡುಕೊಳ್ಳಲಾರಿರಿ. ಬದಲಿಗೆ, ನೀವು ಅವಳನ್ನು ಮರೆಯಲ್ಲಿ, ರಂಗಸ್ಥಳದ ಬೆಳಕಿನಿಂದ ಹೊರಗೆ, ಕಂಡುಕೊಳ್ಳುವಿರಿ.—ಮತ್ತಾಯ 13:53-56; ಯೋಹಾನ 2:12.
ತನ್ನ ಹಿಂಬಾಲಕರ ಮಧ್ಯೆ ಮರಿಯಳ ಆರಾಧನೆಯಂತಹ ಯಾವದನ್ನೂ ಯೇಸು ಮೊದಲೇ ಭಗ್ನಗೊಳಿಸಿದನು. ಒಂದು ಸಂದರ್ಭದಲ್ಲಿ ಅವನು ಮಾತಾಡುತ್ತಿದ್ದಾಗ, “ಜನರೊಳಗಿಂದ ಒಬ್ಬ ಸ್ತ್ರೀಯು ‘ನಿನ್ನನ್ನು ಹೊತ್ತ ಗರ್ಭವು ಮತ್ತು ನೀನು ಕುಡಿದ ಮೊಲೆಗಳೂ ಧನ್ಯವಾದವುಗಳು!’ ಎಂದು ಕೂಗಿದಳು. ‘ಅದಕ್ಕಿಂತ ಹೆಚ್ಚಾಗಿ’ ಅವನು ಉತ್ತರಿಸಿದ್ದು, ‘ದೇವರ ವಾಕ್ಯವನ್ನು ಕೇಳುವವರು ಮತ್ತು ಪಾಲಿಸುವವರು ಧನ್ಯರು’”. (ಲೂಕ 11:27, 28, ದ ನ್ಯೂ ಅಮೆರಿಕನ್ ಬೈಬಲ್, ಕ್ಯಾತೊಲಿಕ್ ಬಿಬ್ಲಿಕಲ್ ಅಸೋಸಿಎಷನ್ ಆಫ್ ಅಮೆರಿಕದ ಸದಸ್ಯರಿಂದ ಭಾಷಾಂತರಿಸಲಟ್ಟದ್ದು) ಒಂದು ಮದುವೆಯ ಔತಣದಲ್ಲಿ, ಯೇಸು ಮರಿಯಳಿಗೆ ಅಂದದ್ದು: “ಅಮ್ಮಾ, ನನ್ನ ಗೊಡವೆ ನಿನಗೇಕೆ? ನನ್ನ ಸಮಯವು ಇನ್ನೂ ಬಂದಿಲ್ಲ.” (ಯೋಹಾನ 2:4) ಇತರ ಭಾಷಾಂತರಗಳು ಹೀಗೆ ಓದುತ್ತವೆ: “ವಿಷಯವನ್ನು ನನ್ನ ಕೈಗೆ ಬಿಡು” (ವೈಮತ್) “ನನ್ನನ್ನು ಮಾರ್ಗದರ್ಶಿಸಲು ಪ್ರಯತ್ನಿಸಬೇಡ.” (ಆ್ಯನ್ ಅಮೆರಿಕನ್ ಟ್ರಾನ್ಸ್ಲೇಶನ್) ಹೌದು, ಯೇಸು ತನ್ನ ತಾಯಿಯನ್ನು ಗೌರವಿಸಿದನು, ಆದರೆ ಆತನು ಅವಳನ್ನು ಒಂದು ಉಚ್ಚಸ್ಥಾನದಲ್ಲಿ ಇಟ್ಟುಕೊಂಡು ಪೂಜಿಸಲಿಲ್ಲ.
ಅನಂತ ಸುಯೋಗಗಳು
ಮರಿಯಳು ಎಂತಹ ಸುಯೋಗಗಳನ್ನು ಅನುಭವಿಸಿದಳು! ಅವಳು ಯೇಸುವಿಗೆ ಜನ್ಮವನ್ನಿತಳ್ತು. ಅನಂತರ ಆ ಎಳೆಯ ಮಗುವನ್ನು ಅವಳು ಪರಾಮರಿಸಿದಳು ಮತ್ತು ತರಬೇತಿ ನೀಡಿದಳು. ಕೊನೆಗೆ, ಅವಳು ನಂಬಿಕೆಯನ್ನು ಅಭ್ಯಸಿಸಿದಳು, ಹೀಗೆ ಯೇಸುವಿನ ಶಿಷ್ಯೆ ಮತ್ತು ಆತ್ಮಿಕ ಸಹೋದರಿಯಾದಳು. ಮರಿಯಳ ಕುರಿತಾದ ನಮ್ಮ ಕೊನೆಯ ಶಾಸ್ತ್ರೀಯ ನಸುನೋಟದಲ್ಲಿ, ನಾವು ಅವಳನ್ನು ಯೆರೂಸಲೇಮಿನಲ್ಲಿ ಮೇಲಿನ ಕೋಣೆಯೊಂದರಲ್ಲಿರುವದನ್ನು ಕಾಣುತ್ತೇವೆ. ಅವಳು ಅಲ್ಲಿ ಯೇಸುವಿನ ಅಪೊಸ್ತಲರು, ಅವಳ ಪುತ್ರರು, ಮತ್ತು ಕೆಲವು ನಂಬಿಗಸ್ತ ಹೆಂಗಸರ—ಎಲ್ಲರೂ ಯೆಹೋವನ ಆರಾಧಕರು—ಜೊತೆಯಲ್ಲಿ ಇದ್ದಾಳೆ.—ಅ. ಕೃತ್ಯಗಳು 1:13, 14.
ಸಮಯಾನಂತರ, ಮರಿಯಳು ಸತ್ತಳು ಮತ್ತು ಅವಳ ಶರೀರವು ಪುನಃ ಮಣ್ಣಿಗೆ ಸೇರಿತು. ತನ್ನ ಪ್ರಿಯ ಪುತ್ರನ ಇತರ ಆದಿ ಅಭಿಷಿಕ್ತ ಹಿಂಬಾಲಕರಂತೆ, ಅವಳು—ಸ್ವರ್ಗದಲ್ಲಿ ಅಮರ ಜೀವದೊಂದಿಗೆ ಒಂದು ಆತ್ಮ ಜೀವಿಯಾಗಿ ಪುನರುತ್ಥಾನಗೊಳಿಸಲ್ಪಡುವ ದೇವರ ನೇಮಿತ ಸಮಯದ ತನಕ—ಮರಣದಲ್ಲಿ ನಿದ್ರಿಸಿದಳು. (1 ಕೊರಿಂಥ 15:44, 50; 2 ತಿಮೊಥೆಯ 4:8) ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ ಸನ್ನಿಧಿಯಲ್ಲಿ ಇರಲು ಈ “ವಿಶೇಷವಾದ ಅನುಗ್ರಹ ಪಡೆದವಳು” ಈಗ ಎಷ್ಟು ಸಂತೋಷಿತಳಾಗಿರಬೇಕು!
[ಅಧ್ಯಯನ ಪ್ರಶ್ನೆಗಳು]
a ಮರಿಯಳು ಒಬ್ಬ ಕನ್ಯೆಯಾಗಿರದೆ ಇರುತ್ತಿದ್ದರೆ, ಅವಳನ್ನು ಯಾರು ಮದುವೆಯಾಗಲು ಬಯಸುತ್ತಿದ್ದರು? ಒಂದು ಹುಡುಗಿಯು ಕನ್ಯೆಯಾಗಿರುವದರ ಕುರಿತಾಗಿ ಯೆಹೂದ್ಯರು ಪಟ್ಟು ಹಿಡಿಯುತ್ತಿದ್ದರು.—ಧರ್ಮೋಪದೇಶಕಾಂಡ 22:13-19; ಹೋಲಿಸಿರಿ ಆದಿಕಾಂಡ 38:24-26.
[ಪುಟ 31 ರಲ್ಲಿರುವ ಚಿತ್ರ]
ಯೇಸುವಿನ ತಾಯಿಯೋಪಾದಿ ಮರಿಯಳು ವಿಶೇಷವಾದ ಅನುಗ್ರಹಪಡೆದವಳಾಗಿದ್ದಳು