ಕೆಲವರು ರಾಜ್ಯ ಸಾರುವ ಕಾರ್ಯಕ್ಕೆ ದಾನಗಳನ್ನು ಮಾಡುವ ವಿಧ
▫ ಜಗದ್ವ್ಯಾಪಕ ಕಾರ್ಯಕ್ಕಾಗಿ ಕಾಣಿಕೆಗಳು: ಅನೇಕರು ಒಂದು ಮೊಬಲಗನ್ನು ಬದಿಗಿಟ್ಟು ಅಥವಾ ಆಯವ್ಯಯದ ಅಂದಾಜುಪಟ್ಟಿಮಾಡಿ, “ಸೊಸೈಟಿಯ ಜಗದ್ವ್ಯಾಪಕ ಕಾರ್ಯಕ್ಕೋಸ್ಕರ ಕಾಣಿಕೆಗಳು—ಮತ್ತಾಯ 24:14,” ಎಂಬುದಾಗಿ ಗುರುತುಮಾಡಲ್ಪಟ್ಟ ಕಾಣಿಕೆಯ ಪೆಟ್ಟಿಗೆಗಳಲ್ಲಿ ಹಾಕುತ್ತಾರೆ. ಪ್ರತಿ ತಿಂಗಳು ಸಭೆಗಳು ಈ ಮೊಬಲಗುಗಳನ್ನು ವಾಚ್ ಟವರ್ ಸೊಸೈಟಿಯ ಅತಿ ಸಮೀಪದ ಬ್ರಾಂಚ್ ಆಫೀಸಿಗೆ ಕಳುಹಿಸುತ್ತವೆ.
▫ ಕೊಡುಗೆಗಳು: ಸ್ವಇಷ್ಟದಿಂದ ಮಾಡುವ ಹಣದಾನಗಳನ್ನು ನೇರವಾಗಿ, Watch Tower Bible and Tract Societyಗೆ ಕಳುಹಿಸಬಹುದು. ಆಭರಣಗಳನ್ನು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನೂ ದಾನಕೊಡಬಹುದು. ಇಂಥ ದಾನಗಳೊಂದಿಗೆ, ಇದು ನೇರವಾಗಿ ಮಾಡಿರುವ ದಾನ ಎಂದು ಹೇಳುವ ಒಂದು ಸಂಕ್ಷಿಪ್ತ ಪತ್ರವು ಜತೆಗೂಡಿರಬೇಕು.
▫ ಷರತ್ತು-ದಾನದ ಏರ್ಪಾಡು: ವಾಚ್ ಟವರ್ ಸೊಸೈಟಿಗೆ ದಾನಿಯ ಮರಣದ ತನಕ ಟ್ರಸ್ಟಿನಲ್ಲಿ ಇಟ್ಟುಕೊಳ್ಳುವಂತೆ ಹಣವನ್ನು ಕೊಡಬಹುದು, ದಾನಿಗೆ ಒಂದು ವೇಳೆ ವೈಯಕ್ತಿಕ ಅಗತ್ಯಬಿದ್ದರೆ ಅದನ್ನು ಅವನಿಗೆ ಹಿಂದೆ ಕೊಡುವ ಷರತ್ತಿನೊಂದಿಗೆ.
▫ ವಿಮೆ: ಜೀವವಿಮಾ ಪಾಲಿಸಿ ಅಥವಾ ನಿವೃತ್ತಿ⁄ಪೆನ್ಷನ್ ಯೋಜನೆಯಲ್ಲಿ ವಾಚ್ ಟವರ್ ಸೊಸೈಟಿಯನ್ನು ಫಲಾನುಭವಿಯಾಗಿ ಹೆಸರಿಸಬಹುದು. ಇಂಥ ಯಾವುದೇ ಏರ್ಪಾಡನ್ನು ಸೊಸೈಟಿಗೆ ತಿಳಿಸತಕ್ಕದು.
▫ ಬ್ಯಾಂಕ್ ಅಕೌಂಟ್ಗಳು: ಬ್ಯಾಂಕ್ ಅಕೌಂಟ್ಗಳು, ಠೇವಣಾತಿ ಸರ್ಟಿಫಿಕೇಟ್ಗಳು ಅಥವಾ ವೈಯಕ್ತಿಕ ನಿವೃತ್ತಿ ಅಕೌಂಟ್ಗಳನ್ನು ಸ್ಥಳಿಕ ಬ್ಯಾಂಕ್ ಆವಶ್ಯಕತೆಗೆ ಹೊಂದಿಕೆಯಲ್ಲಿ, ವಾಚ್ ಟವರ್ ಸೊಸೈಟಿ ಟ್ರಸ್ಟಿನಲ್ಲಿಟ್ಟುಕೊಳ್ಳುವಂತೆ ಅಥವಾ ದಾನಿಯು ಮರಣ ಹೊಂದುವಲ್ಲಿ ವಾಚ್ ಟವರ್ ಸೊಸೈಟಿಗೆ ಸಲ್ಲುವಂತೆ ಏರ್ಪಡಿಸಬಹುದು. ಇಂಥ ಯಾವುದೇ ಏರ್ಪಾಡುಗಳನ್ನು ಸೊಸೈಟಿಗೆ ತಿಳಿಸಬೇಕು.
▫ ಸ್ಟಾಕ್ ಮತ್ತು ಬಾಂಡ್ಗಳು: ಸ್ಟಾಕ್ ಮತ್ತು ಬಾಂಡ್ಗಳನ್ನು ಒಂದು ನೇರವಾದ ಕೊಡುಗೆಯಾಗಿ ಇಲ್ಲವೆ ಆದಾಯವು ದಾನಿಗೆ ಸಲ್ಲುತ್ತಾ ಇರುವಂಥ ಒಂದು ಏರ್ಪಾಡಿನೊಂದಿಗೆ ವಾಚ್ ಟವರ್ ಸೊಸೈಟಿಗೆ ದಾನಮಾಡಬಹುದು.
▫ ಸ್ಥಿರಾಸ್ತಿ: ವಿಕ್ರಯಯೋಗ್ಯ ಸ್ಥಿರಾಸ್ತಿಯನ್ನು ನೇರವಾದ ಒಂದು ಕೊಡುಗೆಯಾಗಿ ಇಲ್ಲವೆ ದಾನಿ ಅವನ⁄ಅವಳ ಜೀವಮಾನಕಾಲ ಅಲ್ಲಿ ಜೀವಿಸುತ್ತಾ ಇರಬಲ್ಲ ಏರ್ಪಾಡಿನೊಂದಿಗೆ ಜೀವಾವಧಿ ಅನುಭೋಗಕ್ಕೆ ಕಾದಿರಿಸಿದ ಆಸ್ತಿಯಾಗಿ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಗೆ ದಾನಮಾಡಬಹುದು. ಒಬ್ಬನು ಯಾವುದೇ ಸ್ಥಿರಾಸ್ತಿಯನ್ನು ಸೊಸೈಟಿಗೆ ಕರಾರುಪತ್ರ ಮಾಡುವ ಮೊದಲು ಸೊಸೈಟಿಯನ್ನು ಸಂಪರ್ಕಿಸಬೇಕು.
▫ ಉಯಿಲುಗಳು ಮತ್ತು ಟ್ರಸ್ಟ್ಗಳು: ಆಸ್ತಿ ಅಥವಾ ಹಣವನ್ನು ಕಾನೂನುಬದ್ಧವಾಗಿ ನಿರ್ವಹಿಸಿದ ಇಚ್ಛಾಪತ್ರಗಳ ಮೂಲಕವಾಗಿ, ವಾಚ್ ಟವರ್ ಸೊಸೈಟಿ ಇವರಿಗೆ ಬಿಟ್ಟುಬಿಡಬಹುದು ಅಥವಾ ಸೊಸೈಟಿಯನ್ನು ಒಂದು ಟ್ರಸ್ಟ್-ಒಪ್ಪಿಗೆ ಪತ್ರದ ಫಲಾನುಭವಿಯಾಗಿ ಹೆಸರಿಸಬಹುದು. ಒಂದು ಧಾರ್ಮಿಕ ಸಂಸ್ಥೆಗೆ ಪ್ರಯೋಜನಕಾರಿಯಾದ ಒಂದು ಟ್ರಸ್ಟ್, ನಿರ್ದಿಷ್ಟ ತೆರಿಗೆ ಸವಲತ್ತನ್ನು ಒದಗಿಸಬಹುದು. ಉಯಿಲಿನ ಅಥವಾ ಟ್ರಸ್ಟಿನ ಒಪ್ಪಿಗೆಪತ್ರದ ನಕಲುಪ್ರತಿಯನ್ನು ಸೊಸೈಟಿಗೆ ಕಳುಹಿಸಬೇಕು.
ಇಂಥ ವಿಷಯಗಳ ಕುರಿತ ಹೆಚ್ಚಿನ ಮಾಹಿತಿಗಾಗಿ, Watch Tower Bible and Tract Society H-58, Old Khandala Road, Lonavla 410401, Mah., India. ಇವರಿಗೆ ಬರೆಯಿರಿ.