ರುಆಂಡದಲ್ಲಿ ದುರಂತ—ಯಾರು ಜವಾಬ್ದಾರರು?
“23 ವರ್ಷ ಪ್ರಾಯದ ಯಂತ್ರಿಗನ ತಲೆಬುರುಡೆಯನ್ನು ಕಡಿಯುವ ಒಂದು ಕ್ಷಣಕ್ಕೆ ಮುಂಚೆ, ಆಕ್ರಮಣಗಾರರಲ್ಲಿ ಒಬ್ಬನು ಹಿಟಿಯಿಸೆಗೆ ಹೇಳಿದ್ದು: ‘ನೀನೊಬ್ಬ ಟೂಟ್ಸಿಯಾಗಿರುವದರಿಂದ ನೀನು ಸಾಯಲೇಬೇಕು’” ಎಂದು ಯು. ಎಸ್. ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ ಹೇಳಿತು.
ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಮಧ್ಯ ಆಫ್ರಿಕದ ಚಿಕ್ಕ ದೇಶ ರುಆಂಡದಲ್ಲಿ ಇಂಥ ಒಂದು ದೃಶ್ಯವು ಎಷ್ಟೊಂದು ಸಲ ಪುನರಾವರ್ತಿಸಲ್ಪಟ್ಟಿತು! ಆ ಸಮಯದಲ್ಲಿ ರುಆಂಡದ ರಾಜಧಾನಿ ಪಟ್ಟಣವಾದ ಕಿಗಾಲಿಯಲ್ಲಿ ಮತ್ತು ಅದರ ಸುತ್ತಲೂ ಯೆಹೋವನ ಸಾಕ್ಷಿಗಳ 15 ಸಭೆಗಳು ಇದ್ದವು. ಪಟ್ಟಣದ ಮೇಲ್ವಿಚಾರಕ, ಟಾಬಾನಾ ಯ್ಯೂಜಾನ್, ಒಬ್ಬ ಟೂಟ್ಸಿಯಾಗಿದ್ದನು. ಅವನು, ಅವನ ಹೆಂಡತಿ, ಅವನ ಮಗ, ಮತ್ತು ಅವನ ಒಂಭತ್ತು ವರ್ಷ ಪ್ರಾಯದ ಮಗಳು, ಶಾಮಿ, ಹಿಂಸೆಯ ಹುಚ್ಚುರೇಗಾಟವು ಸ್ಫೋಟಿಸಿದಾಗ ಹತಿಸಲ್ಪಟ್ಟ ಮೊದಲ ವ್ಯಕ್ತಿಗಳ ಮಧ್ಯೆ ಇದ್ದರು.
ಹಲವಾರು ವಾರಗಳಲ್ಲಿ ಸಾವಿರಾರು ಮಂದಿ ರುಆಂಡದವರನ್ನು ದಿನನಿತ್ಯ ಕೊಲಲ್ಲಾಯಿತು. “ಕಳೆದ ಆರು ವಾರಗಳಲ್ಲಿ, ಕ್ಯಾಂಬೋಡಿಯದ 1970 ಗಳ ಮಧ್ಯ ಭಾಗದಲ್ಲಿ ಕಮೆರ್ ರೂಜ್ ಮಾಡಿದ ರಕ್ತಮಯ ಹತ್ಯಾಕಾಂಡವನ್ನು ಪ್ರತಿಸ್ಪರ್ಧಿಸುವ 2,50,000 ರಷ್ಟು ಮಂದಿ ಜನಾಂಗನಾಶ ಮತ್ತು ಪ್ರತೀಕಾರದ ಒಂದು ಕಾರ್ಯಾವಳಿಯಲ್ಲಿ ಸತ್ತಿದ್ದಾರೆ” ಎಂದು ಮೇಲೆ ಉದ್ಧರಿಸಲ್ಪಟ್ಟ ವಾರ್ತಾಪತ್ರವು ಮೇ ತಿಂಗಳ ಮಧ್ಯ ಭಾಗದಲ್ಲಿ ವರದಿಸಿತು.
ಟೈಮ್ ಪತ್ರಿಕೆ ಹೇಳಿದ್ದು: “ನಾಜಿ ಜರ್ಮನಿಯನ್ನು ಜ್ಞಾಪಕಕ್ಕೆ ತರುವ ಒಂದು ದೃಶ್ಯದಲ್ಲಿ, ಅವರು ಕೇವಲ ಟೂಟ್ಸಿಯರಂತೆ ಕಾಣುತ್ತಿದ್ದ ಕಾರಣ 500ರ ಒಂದು ಗುಂಪಿನಿಂದ ಮಕ್ಕಳನ್ನು ಹೆಕ್ಕಿ ತೆಗಿಯಲಾಯಿತು. . . . ಒಬ್ಬ ಟೂಟ್ಸಿಯೊಂದಿಗೆ ಮದುವೆಯಾಗಿರುವ ಬ್ಯೂಟಾರೇ ಎಂಬ ದಾಕ್ಷಿಣ್ಯಾತ ಪಟ್ಟಣದ ಪೌರ ಸಭಾಧ್ಯಕ್ಷನಿಗೆ ಹೂಟು ರೈತರಿಂದ ಒಂದು ಆಯ್ಕೆಯು ನೀಡಲಾಯಿತು: ಅವನು ತನ್ನ ಹೆಂಡತಿಯ ಕುಟುಂಬವನ್ನು—ಅವಳ ಹೆತ್ತವರನ್ನೂ ಮತ್ತು ಅವಳ ತಂಗಿಯನ್ನು—ಕೊಲಲ್ಲಿಕ್ಕಾಗಿ ಬಿಟ್ಟುಕೊಟ್ಟರೆ ಅವನು ತನ್ನ ಹೆಂಡತಿ ಮತ್ತು ಮಕ್ಕಳನ್ನು ರಕ್ಷಿಸಬಹುದು. ಅವನು ಈ ಏರ್ಪಾಡಿಗೆ ಒಪ್ಪಿದನು.”
ಕಿಗಾಲಿಯಲ್ಲಿರುವ ಯೆಹೋವನ ಸಾಕ್ಷಿಗಳ ಟ್ರಾನ್ಸಲೇಶನ್ ಆಫೀಸಿನಲ್ಲಿ ಆರು ವ್ಯಕ್ತಿಗಳು ಕೆಲಸ ಮಾಡುತ್ತಿದ್ದರು. ಅವರಲ್ಲಿ ನಾಲ್ವರು ಹೂಟು ಮತ್ತು ಇಬ್ಬರು ಟೂಟ್ಸಿಯಾಗಿದ್ದರು. ಆನಾನೀ ಬಾಂಡಾ ಮತ್ತು ಮೂಕಾಗಿಸಾಗಾರಾ ಡನೀಸ್ ಟೂಟ್ಸಿಗಳಾಗಿದ್ದರು. ಕೊಳ್ಳೆಹೊಡೆಯುವವರೊಂದಿಗೆ ಸೈನಿಕರು ಮನೆಗೆ ಬಂದಾಗ, ಹೂಟು ಮತ್ತು ಟೂಟ್ಸಿಯರು ಜೊತೆಯಾಗಿ ವಾಸಿಸುವದನ್ನು ಕಂಡು ಅವರು ಸಿಟ್ಟುಗೊಂಡರು. ಅವರು ಬಾಂಡಾ ಮತ್ತು ಡನೀಜ್ರನ್ನು ಕೊಲ್ಲಲು ಬಯಸಿದರು.
“ನಮ್ಮೊಳಗೆ ಅವರ ಶತ್ರುಗಳಿದ್ದದ್ದರಿಂದ ನಮ್ಮನ್ನು ಕೊಲ್ಲಲು ಬೆದರಿಸುತ್ತಾ ಅವರು ತಮ್ಮ ಸಿಡಿಗುಂಡುಗಳಿಂದ ಗೂಟಗಳನ್ನು ತೆಗೆಯಲು ಆರಂಭಿಸಿದರು . . . ಅವರಿಗೆ ಒಂದು ದೊಡ್ಡ ಮೊತ್ತದ ಹಣ ಬೇಕಾಗಿತ್ತು. ನಮ್ಮಲ್ಲಿದ್ದ ಎಲ್ಲಾ ಹಣವನ್ನು ನಾವು ಅವರಿಗೆ ಕೊಟ್ಟೆವು, ಆದರೆ ಅವರು ತೃಪ್ತರಾಗಲಿಲ್ಲ. ಅವರು ಉಪಯೋಗಿಸಬಹುದಾದ ಎಲ್ಲವನ್ನು, ನಮ್ಮ ಟ್ರಾನ್ಸಲೇಶನ್ ಕೆಲಸದಲ್ಲಿ ಉಪಯೋಗಿಸಲಾಗುವ ಒಂದು ಲ್ಯಾಪ್ಟಾಪ್ ಕಂಪ್ಯೂಟರ್, ನಮ್ಮ ಫೋಟೋ ಕಾಪಿಯರ್, ನಮ್ಮ ರೇಡಿಯೋಗಳು, ನಮ್ಮ ಜೋಡುಗಳು ಮತ್ತು ಇನ್ನೂ ಮುಂತಾದವುಗಳನ್ನು ನಷ್ಟಭರ್ತಿಯಾಗಿ ನಮ್ಮಿಂದ ಕೊಂಡ್ಯೊಯಲು ಅವರು ನಿರ್ಣಯಿಸಿದರು. ನಮ್ಮಲ್ಲಿ ಯಾರನ್ನೂ ಕೊಲ್ಲದೆ, ಆದರೆ ತಾವು ಇನ್ನೊಮ್ಮೆ ಹಿಂದೆ ಬರುವೆವು ಎಂದು ಹೇಳುತ್ತಾ ಅವರು ಒಮ್ಮೆಲೇ ಹೊರಟುಹೋದರು” ಎಂದು ಹೂಟು ಸಹೋದರರಲ್ಲಿ ಒಬ್ಬರಾದ ಎಮಾನೆಲ್ಪ್ ಗೀರೆಂಟೇ ಹೇಳಿದರು.
ಮುಂದಿನ ದಿನಗಳಲ್ಲಿ, ಕೊಳ್ಳೆಹೊಡೆಯುವವರು ಪುನಃ ಪುನಃ ಹಿಂದಿರುಗಿದರು, ಮತ್ತು ಪ್ರತಿ ಸಲ ಹೂಟು ಸಾಕ್ಷಿಗಳು ತಮ್ಮ ಟೂಟ್ಸಿ ಸ್ನೇಹಿತರ ಜೀವಗಳಿಗಾಗಿ ಬೇಡಿಕೊಂಡರು. ಕೊನೆಗೆ, ಬಾಂಡಾ ಮತ್ತು ಡನೀಜ್ ಇನ್ನು ಹೆಚ್ಚು ಸಮಯ ನಿಲ್ಲುವದು ಅಪಾಯಕಾರಿಯಾದಾಗ, ಇತರ ಟೂಟ್ಸಿ ಆಶ್ರಿತರೊಂದಿಗೆ ಒಂದು ಹತ್ತಿರದ ಶಾಲೆಗೆ ಹೋಗಲು ಏರ್ಪಾಡುಗಳನ್ನು ಮಾಡಲಾಯಿತು. ಶಾಲೆಯು ಆಕ್ರಮಿಸಲ್ಪಟ್ಟಾಗ, ಬಾಂಡಾ ಮತ್ತು ಡನೀಸ್ ತಪ್ಪಿಸಿಕೊಳ್ಳಲು ಶಕ್ತರಾದರು. ಅವರು ಹಲವಾರು ರಸ್ತೆತಡೆಗಟ್ಟುಗಳನ್ನು ದಾಟುವದರಲ್ಲಿ ಯಶಸ್ವಿಯಾದರು, ಆದರೆ ಕಟ್ಟಕಡೆಗೆ, ಒಂದು ರಸ್ತೆತಡೆಗಟ್ಟಿನಲ್ಲಿ ಎಲ್ಲಾ ಟೂಟ್ಸಿಯರನ್ನು ಬದಿಗೆ ಕೊಂಡೊಯ್ಯಲಾಯಿತು ಮತ್ತು ಬಾಂಡಾ ಮತ್ತು ಡನೀಜ್ ಕೊಲ್ಲಲ್ಪಟ್ಟರು.
ಸೈನಿಕರು ಟ್ರಾನ್ಸ್ಲೇಶನ್ ಆಫೀಸಿಗೆ ಹಿಂದಿರುಗಿ ಟೂಟ್ಸಿ ಸಾಕ್ಷಿಗಳು ಹೊರಟು ಹೋಗಿರುವದನ್ನು ಕಂಡುಹಿಡಿದಾಗ, ಹೂಟು ಸಹೋದರರನ್ನು ವಿಪರೀತವಾಗಿ ಹೊಡೆದರು. ಅನಂತರ ಹತ್ತಿರದಲ್ಲೇ ಒಂದು ಸಣ್ಣ ಫಿರಂಗಿ ಸಿಡಿಯಿತು, ಮತ್ತು ಸಹೋದರರು ತಮ್ಮ ಜೀವಗಳೊಂದಿಗೆ ಪಾರಾಗಲು ಶಕ್ತರಾದರು.
ದೇಶದಲ್ಲೆಲ್ಲಾ ಕೊಲ್ಲುವಿಕೆಯು ಮುಂದುವರಿದಂತೆ, ಸತ್ತವರ ಸಂಖ್ಯೆ ಐದು ಲಕ್ಷವನ್ನು ಮುಟ್ಟಿರುವ ಸಾಧ್ಯತೆಯಿತ್ತು. ಕಟ್ಟಕಡೆಗೆ, ರುಆಂಡದ 80 ಲಕ್ಷ ನಿವಾಸಿಗಳಲ್ಲಿ, 20 ಮತ್ತು 30 ಲಕ್ಷ ಅಥವಾ ಹೆಚ್ಚಿನವರು ತಮ್ಮ ಮನೆಗಳನ್ನು ಬಿಟ್ಟುಹೋದರು. ಹೆಚ್ಚಿನವರು ಹತ್ತಿರದಲ್ಲಿರುವ ಜಾಎರ್ ಮತ್ತು ಟಾನ್ಸೆನೀಯದಲ್ಲಿ ಆಶ್ರಯವನ್ನು ಪಡೆದುಕೊಂಡರು. ಯೆಹೋವನ ಸಾಕ್ಷಿಗಳಲ್ಲಿ 400 ಕ್ಕಿಂತ ಹೆಚ್ಚಿನವರು ಕೊಲ್ಲಲ್ಪಟ್ಟರು, ಮತ್ತು ದೇಶದ ಹೊರಗಿರುವ ಶಿಬಿರಗಳಿಗೆ ಓಡಿಹೋದವರಲ್ಲಿ ಇತರ ನೂರಾರು ಜನರು ಇದ್ದರು.
ಹಿಂದೆಂದೂ ನಡೆಯದ ಇಂಥ ಹತಿಸುವಿಕೆ ಮತ್ತು ವಲಸೆ ಹೋಗುವಿಕೆಯನ್ನು ಏನು ಕೆರಳಿಸಿತು? ಅದನ್ನು ತಡೆಯಬಹುದಿತ್ತೋ? ಹಿಂಸೆಯು ಸ್ಫೋಟಿಸುವ ಮುಂಚೆ ಪರಿಸ್ಥಿತಿ ಹೇಗಿತ್ತು?
ಹೂಟು ಮತ್ತು ಟೂಟ್ಸಿ
ರುಆಂಡ ಮತ್ತು ನೆರೆಯ ದೇಶವಾದ ಬುರುಂಡಿಯಲ್ಲಿ, ಸಾಮಾನ್ಯವಾಗಿ ಕುಳ್ಳರಾಗಿರುವ, ದಪ್ಪಗಿನ ಬಂಟು ಜನರಾದ ಹೂಟು ಮತ್ತು ಸಾಧಾರಣವಾಗಿ ಎತ್ತರವಾಗಿರುವ, ನಸು ಚರ್ಮವಿರುವ, ವಾಟುಸಿ ಎಂದು ಸಹ ಪ್ರಸಿದ್ಧರಾಗಿರುವ ಟೂಟ್ಸಿ ಜನರು ವಾಸಿಸುತ್ತಾರೆ. ಎರಡೂ ದೇಶಗಳ ಜನಸಂಖ್ಯೆಯಲ್ಲಿ ಹೂಟು ಸುಮಾರು 85 ಪ್ರತಿಶತ ಮತ್ತು ಟೂಟ್ಸಿ 14 ಪ್ರತಿಶತದಷ್ಟು ಇದ್ದಾರೆ. 15ನೇ ಶತಮಾನದಷ್ಟು ಹಿಂದೆ ಈ ಕುಲಸಂಬಂಧಿತ ಗುಂಪುಗಳ ನಡುವಿನ ಘರ್ಷಣೆಗಳನ್ನು ದಾಖಲಿಸಲಾಗಿದೆ. ಆದರೂ, ಹೆಚ್ಚಿನಾಂಶ ಅವರು ಶಾಂತಿಪೂರ್ವಕವಾಗಿ ಜೊತೆಯಾಗಿ ಜೀವಿಸಿದ್ದಾರೆ.
“ನಾವು ಶಾಂತಿಯಲ್ಲಿ ಜೊತೆಯಾಗಿ ಜೀವಿಸುತ್ತಿದ್ದೆವು” ಎಂದು ಜಾಎರ್ನ ಕೆಲವು ಕಿಲೊಮೀಟರ್ಗಳ ಪೂರ್ವದಲ್ಲಿ ನೆಲೆಸಿರುವ ರುಗಾಂಡಾ ಹಳ್ಳಿಯಲ್ಲಿ ಜೀವಿಸುತ್ತಿರುವ 3,000 ಹೂಟು ಮತ್ತು ಟೂಟ್ಸಿಯರ ಕುರಿತಾಗಿ 29 ವರ್ಷ ಪ್ರಾಯದ ಹೆಂಗಸೊಬ್ಬಳು ಹೇಳುತ್ತಾಳೆ. ಹಾಗಿದ್ದರೂ, ಎಪ್ರಿಲ್ನಲ್ಲಿ ಹೂಟು ತಂಡಗಳಿಂದ ನಡೆದ ದಾಳಿಗಳು ಕಡಿಮೆಪಕ್ಷ ಇಡೀ ಟೂಟ್ಸಿ ಜನಸಂಖ್ಯೆಯನ್ನು ಅಳಿಸಿಬಿಟ್ಟಿತ್ತು. ದ ನ್ಯೂ ಯಾರ್ಕ್ ಟೈಮ್ಸ್ ವಿವರಿಸಿದ್ದು:
“ಈ ಹಳ್ಳಿಯ ಪರಿಸ್ಥಿತಿಯೇ ರುಆಂಡದ ಪರಿಸ್ಥಿತಿಯಾಗಿದೆ: ಹೂಟು ಮತ್ತು ಟೂಟ್ಸಿ ಜೊತೆಯಾಗಿ ಜೀವಿಸುವುದು, ಜಾತ್ಯಂತರ ವಿವಾಹವಾಗುವುದು, ಯಾರು ಹೂಟು ಮತ್ತು ಯಾರೂ ಟೂಟ್ಸಿಯೆಂಬದರ ಕುರಿತು ಚಿಂತಿಸದೆ ಅಥವಾ ತಿಳಿಯದೆ ಇರುವುದು.
“ಅನಂತರ ಫಕ್ಕನೇ ಎಲ್ಲವು ಬದಲಾಯಿತು. ಅವರು ಟೂಟ್ಸಿಗಳನ್ನು ಕಂಡಲೆಲ್ಲಾ ಕೊಂದುಹಾಕುತ್ತಾ, ದೇಶದಲ್ಲೆಲ್ಲಾ ಹೂಟು ದೊಂಬಿಗಳು ಎಪ್ರಿಲ್ನಲ್ಲಿ ಸಿಕ್ಕಾಬಟ್ಟೆ ಕೋಪಾವೇಶದಿಂದ ವರ್ತಿಸಲು ಆರಂಭಿಸಿದವು. ಕೊಲ್ಲುವಿಕೆಗಳು ಆರಂಭಿಸಿದಾಗ ಟೂಟ್ಸಿಗಳು ಸಂರಕ್ಷಣೆಗಾಗಿ ಚರ್ಚುಗಳಿಗೆ ಓಡಿಹೋದರು. ಆಶ್ರಯಸ್ಥಾನಗಳನ್ನು ರಕ್ತದಿಂದ ಎರಚಿರುವ ಸಮಾಧಿಗಳಾಗಿ ಪರಿವರ್ತಿಸುತ್ತಾ ದೊಂಬಿಗಳು ಹಿಂಬಾಲಿಸಿದವು.
ಈ ಕೊಲ್ಲುವಿಕೆಯನ್ನು ಏನು ಕೆರಳಿಸಿತ್ತು? ಎಪ್ರಿಲ್ 6 ರಂದು ವಿಮಾನ ಅಘಾತದಲ್ಲಿ ರುಆಂಡ ಮತ್ತು ಬುರುಂಡಿ ದೇಶಗಳ ರಾಷ್ಟ್ರಪತಿಗಳ ಮರಣಗಳು. ಅವರಿಬ್ಬರೂ ಹೂಟು ಆಗಿದ್ದರು. ಈ ಘಟನೆಯು ಹೇಗೋ ಟೂಟ್ಸಿಯರ ಹತ್ಯವನ್ನು ಮಾತ್ರವಲ್ಲ ಬದಲಾಗಿ ಅವರೊಂದಿಗೆ ಸಹಾನುಭೂತಿ ತೋರಿಸುತ್ತಾನೆಂದು ಎಣಿಸಲಾದ ಯಾವನೇ ಹೂಟುವಿನ ಹತ್ಯವನ್ನು ಸಹ ಆರಂಭಿಸಿತು.
ಅದೇ ಸಮಯದಲ್ಲಿ, ದಂಗೆಕೋರ ಸೇನೆಗಳ—ಟೂಟ್ಸಿ-ಪ್ರಾಬಲ್ಯವಿದ್ದ ಆರ್. ಪಿ. ಎಫ್. (ರುಆಂಡನ್ ಪೇಟ್ರಿಯೋಟಿಕ್ ಫ್ರಂಟ್) ಮತ್ತು ಹೂಟು ಪ್ರಾಬಲ್ಯವಿದ್ದ ಸರಕಾರೀ ಸೇನೆಗಳು—ನಡುವೆ ಕಾದಾಟವು ತೀವ್ರವಾಯಿತು. ಜುಲೈಯಷ್ಟಕ್ಕೆ ಆರ್. ಪಿ. ಎಫ್. ಸರಕಾರೀ ಸೇನೆಗಳನ್ನು ಸೋಲಿಸಿತ್ತು ಮತ್ತು ಕಿಗಾಲಿ ಹಾಗೂ ರುಆಂಡಾದ ಉಳಿದ ಹೆಚ್ಚಿನ ಭಾಗದ ಮೇಲೆ ನಿಯಂತ್ರಣವನ್ನು ಗಳಿಸಿತ್ತು. ಪ್ರತೀಕಾರಗಳಿಗೆ ಹೆದರುತ್ತಾ, ಜುಲೈ ಆರಂಭದಲ್ಲಿ ನೂರಾರು ಸಾವಿರ ಹೂಟು ಜನರು ದೇಶದಿಂದ ಓಡಿಹೋದರು.
ಯಾರು ಜವಾಬ್ದಾರರಾಗಿದ್ದಾರೆ?
ಎಪ್ರಿಲ್ನಲ್ಲಿ ಹಿಂಸೆಯು ಯಾಕೆ ಒಮ್ಮೆಲೆ ಸ್ಫೋಟಿಸಿತು ಎಂದು ವಿವರಿಸಲು ಕೇಳಲ್ಪಟ್ಟಾಗ, ಒಬ್ಬ ಟೂಟ್ಸಿ ರೈತನು ಹೇಳಿದ್ದು: “ಅದು ಕೆಟ್ಟ ಧುರೀಣರ ಕಾರಣದಿಂದಾಗಿದೆ.”
ನಿಜವಾಗಿಯೂ, ಶತಮಾನದಲ್ಲಿಲ್ಲಾ, ರಾಜಕೀಯ ಧುರೀಣರು ಅವರ ಶತ್ರುಗಳ ಕುರಿತಾಗಿ ಸುಳ್ಳುಗಳನ್ನು ಹರಡಿಸಿದ್ದಾರೆ. “ಇಹಲೋಕಾಧಿಪತಿ” ಯಾಗಿರುವ ಪಿಶಾಚನಾದ ಸೈತಾನನ ಮಾರ್ಗದರ್ಶನದ ಕೆಳಗೆ, ಲೋಕದ ರಾಜಕಾರಣಿಗಳು ತಮ್ಮ ಸ್ವಂತ ಜನರು ಇನ್ನೊಂದು ಜಾತಿ, ಕುಲ ಅಥವಾ ಜನಾಂಗದ ಜನರನ್ನು ಕೊಲ್ಲುವಂತೆ ಮನವೊಪ್ಪಿಸಿದ್ದಾರೆ. (ಯೋಹಾನ 12:31; 2 ಕೊರಿಂಥ 4:4; 1 ಯೋಹಾನ 5:19) ರುಆಂಡದಲ್ಲಿ ಪರಿಸ್ಥಿತಿಯು ಭಿನ್ನವಾಗಿಲ್ಲ. ದ ನ್ಯೂ ಯಾರ್ಕ್ ಟೈಮ್ಸ್ ಹೇಳಿದ್ದು: “ರಾಜಕಾರಣಿಗಳು ಪದೇ ಪದೇ ಕುಲಸಂಬಂಧಿತ ನಿಷ್ಠೆ ಮತ್ತು ಕುಲವರ್ಣೀಯ ಭಯಗಳನ್ನು ಪೋಷಿಸಲು ಪ್ರಯತ್ನಿಸಿದ್ದಾರೆ—ಹೂಟುಗಳ ವಿದ್ಯಮಾನದಲ್ಲಿ, ಸರಕಾರವನ್ನು ನಿಯಂತ್ರಣದಲ್ಲಿಡಲು; ಟೂಟ್ಸಿಗಳ ವಿದ್ಯಮಾನದಲ್ಲಿ ದಂಗೆಕೋರರ ಪಂಕ್ತಿಗಾಗಿ ಬೆಂಬಲವನ್ನು ಒಟ್ಟುಗೂಡಿಸಲು.”
ರುಆಂಡದ ಜನರು ಹಲವಾರು ವಿಧಗಳಲ್ಲಿ ಸದೃಶರಾಗಿರುವದರಿಂದ, ಅವರು ಒಬ್ಬರನ್ನೊಬ್ಬರು ದ್ವೇಷಿಸಿ ಕೊಲ್ಲುವರೆಂದು ಯಾರೂ ಎಂದೂ ನಿರೀಕ್ಷಿಸಲಾರರು. “ಹೂಟು ಮತ್ತು ಟೂಟ್ಸಿ ಒಂದೇ ಭಾಷೆಯನ್ನಾಡುತ್ತಾರೆ ಮತ್ತು ಸಾಮಾನ್ಯವಾಗಿ ಒಂದೇ ಸಂಪ್ರದಾಯಗಳಲ್ಲಿ ಪಾಲಿಗರಾಗುತ್ತಾರೆ,” ಎಂದು ಬರೆದರು ವರದಿಗಾರ ರೇಮಂಡ್ ಬಾನರ್. “ಜಾತ್ಯಂತರ ವಿವಾಹದ ಅನೇಕ ಸಂತತಿಗಳ ಅನಂತರ, ಶಾರೀರಿಕ ಭಿನ್ನತೆಗಳು—ಟೂಟ್ಸಿಗಳು ಉದ್ದ ಮತ್ತು ಸಪೂರ, ಹೂಟು ಗಿಡ್ಡ ಮತ್ತು ಸ್ಥೂಲಕಾಯಿ—ಎಷ್ಟರ ತನಕ ಮಾಯವಾಗಿವೆಯೆಂದರೆ ರುಆಂಡದವರಿಗೆ ಒಬ್ಬನು ಹೂಟು ಅಥವಾ ಟೂಟ್ಸಿಯಾಗಿದ್ದಾನೋ ಎಂಬ ವಿಷಯದಲ್ಲಿ ಅನೇಕ ಸಲ ನಿಶ್ಚಯವಿರುವುದಿಲ್ಲ.”
ಆದರೂ, ಇತ್ತೀಚಿಗಿನ ನಿರಂತರ ಪ್ರಚಾರವು ನಂಬಲಸಾಧ್ಯವಾದ ಪ್ರಭಾವವನ್ನು ಬೀರಿದೆ. ಈ ವಿಷಯವನ್ನು ದೃಷ್ಟಾಂತಿಸುತ್ತಾ, ಆಲೆಕ್ಸ್ ಡ ವಾಲ್, ಎಂಬ ಆಫ್ರಿಕನ್ ರೈಟ್ಸ್ (ಆಫ್ರಿಕನರ ಹಕ್ಕುಗಳು) ಗುಂಪಿನ ನಿರ್ದೇಶಕರು ಅಂದದ್ದು: “ಆರ್. ಪಿ. ಎಫ್. ರವರು ನುಗ್ಗಿ ವಶಮಾಡಿಕೊಂಡಿರುವ ಕ್ಷೇತ್ರಗಳಲ್ಲಿನ ರೈತರು, ಅವರು ಕೇಳುತ್ತಿರುವ ರೇಡಿಯೋ ವಾರ್ತಾಪ್ರಸಾರಣಗಳ ವಿಷಯಕ್ಕನುಸಾರ, ಟೂಟ್ಸಿ ಸೈನಿಕರಿಗೆ ಕೊಂಬುಗಳು, ಬಾಲಗಳು ಮತ್ತು ಕತ್ತಲಿನಲ್ಲಿ ಹೊಳೆಯುವ ಕಣ್ಣುಗಳಿಲದ್ಲಿರುವದನ್ನು ನೋಡಿ ಆಶ್ಚರ್ಯಚಕಿತರಾಗುತ್ತಾರಂತೆ.”
ಜನರ ಆಲೋಚನೆಯನ್ನು ರಾಜಕೀಯ ಧುರೀಣರು ಮಾತ್ರವಲ್ಲ ಬದಲಾಗಿ ಧರ್ಮವೂ ಅಳವಡಿಸುತ್ತದೆ. ರುಆಂಡದ ಪ್ರಮುಖ ಧರ್ಮಗಳು ಯಾವುವು? ದುರಂತಕ್ಕೆ ಅವು ಕೂಡ ಜವಾಬ್ದಾರವಾಗಿವೆಯೋ?
ಧರ್ಮದ ಪಾತ್ರ
ರುಆಂಡದ ಕುರಿತಾಗಿ ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ (1994) ಹೇಳುವದು: “ಹೆಚ್ಚಿನ ಜನರು ರೋಮನ್ ಕ್ಯಾತೊಲಿಕರಾಗಿದ್ದಾರೆ. . . . ರೋಮನ್ ಕ್ಯಾತೊಲಿಕ್ ಮತ್ತು ಇತರ ಕ್ರೈಸ್ತ ಚರ್ಚುಗಳು, ಅಧಿಕಾಂಶ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಚಲಾಯಿಸುತ್ತವೆ.” ನ್ಯಾಷನಲ್ ಕ್ಯಾತೊಲಿಕ್ ರಿಪೋರ್ಟರ್, ವಾಸ್ತವದಲ್ಲಿ ರುಆಂಡವನ್ನು ಒಂದು “70% ಕ್ಯಾತೊಲಿಕ್ ರಾಷ್ಟ್ರ” ವನ್ನಾಗಿ ಕರೆಯುತ್ತದೆ.
ಗ್ರೇಟ್ ಬ್ರಿಟನಿನ ದಿ ಅಬ್ಸರ್ವ್ರ್, ರುಆಂಡದ ಧಾರ್ಮಿಕ ಪರಿಸ್ಥಿತಿಯ ಹಿನ್ನೆಲೆಯನ್ನು ಕೊಡುತ್ತಾ, ವಿವರಿಸುವುದು: “1930 ಗಳಲ್ಲಿ, ಚರ್ಚುಗಳು ಶಿಕ್ಷಣ ವ್ಯವಸ್ಥೆಯ ನಿಯಂತ್ರಣಕ್ಕಾಗಿ ಹೋರಾಡುತ್ತಿದ್ದಾಗ, ಕ್ಯಾತೊಲಿಕರು ಟೂಟ್ಸಿ ಕುಲೀನಸತ್ತೆಯನ್ನು ಮೆಚ್ಚಿದರು, ಪ್ರಾಟೆಸ್ಟಂಟರು ಪೀಡಿಸಲ್ಪಟ್ಟ ಹೂಟು ಅಧಿಕಾಂಶದೊಂದಿಗೆ ತಮ್ಮನ್ನು ಒಟ್ಟುಗೂಡಿಸಿಕೊಂಡರು. 1959 ರಲ್ಲಿ ಹೂಟುಗಳು ಅಧಿಕಾರಕ್ಕೆ ಬಂದರು ಮತ್ತು ಬೇಗನೇ ಕ್ಯಾತೊಲಿಕರ ಹಾಗೂ ಪ್ರಾಟೆಸ್ಟಂಟರ ಬೆಂಬಲವನ್ನು ಆನಂದಿಸಲಾರಂಭಿಸಿದರು. ಹೂಟು ಅಧಿಕಾಂಶಕ್ಕೆ ಪ್ರಾಟೆಸ್ಟಂಟ್ ಬೆಂಬಲವು ತುಂಬಾ ಬಲವಾಗಿ ಉಳಿದಿದೆ.”
ಉದಾಹರಣೆಗಾಗಿ, ಪ್ರಾಟೆಸ್ಟಂಟ್ ಚರ್ಚಿನ ಮುಖಂಡರು, ಕಗ್ಗೊಲೆಗಳನ್ನು ಖಂಡಿಸಿದರೋ? ದಿ ಅಬ್ಸರ್ವ್ರ್ ಉತ್ತರಿಸುವದು: “ರುಆಂಡಗಳ ಚರ್ಚುಗಳ ಪಡಸಾಲೆಗಳನ್ನು ಶಿರಚ್ಛೇದ ಮಾಡಲ್ಪಟ್ಟ ಮಕ್ಕಳ ದೇಹಗಳಿಂದ ತುಂಬಿಸಿದ್ದ ಕೊಲೆಗಾರರನ್ನು ಅವರು ಖಂಡಿಸುತ್ತಾರೋ ಎಂದು ಇಬ್ಬರು ಕ್ರೈಸ್ತಮಠೀಯರಿಗೆ ಕೇಳಲಾಯಿತು.
“ಅವರು ಉತ್ತರಿಸಲು ನಿರಾಕರಿಸಿದರು. ಅವರು ಪ್ರಶ್ನೆಗಳಿಗೆ ಉತ್ತರಕೊಡದೆ ಜಾರಿಕೊಂಡರು, ಕ್ಷೋಭೆಗೊಂಡರು, ಅವರ ಸರ್ವಗಳು ಇನ್ನೂ ಎತ್ತರವಾದ ದನಿಗಳನ್ನು ತಲಪಿದವು, ಮತ್ತು ರುಆಂಡದ ಬಿಕ್ಕಟ್ಟಿನ ಆಳವಾದ ಬೇರು ಪ್ರಕಟಿಸಲ್ಪಟ್ಟಿತು—ಆ್ಯಂಗ್ಲಿಕನ್ ಚರ್ಚಿನ ಅತಿ ಮೇಲಿನ ದರ್ಜೆಯ ಸದಸ್ಯರು ಕೊಲೆ ಮಾಡಬೇಕೆಂದು ಸಾರಿ, ನದಿಗಳನ್ನು ರಕ್ತದಿಂದ ತುಂಬಿಸಿರುವ ರಾಜಕೀಯ ಧಣಿಗಳಿಗೆ ಸಂದೇಶವಾಹಕರಾಗಿ ಕಾರ್ಯನಡಿಸಿದ್ದಾರೆ.”
ನಿಜವಾಗಿಯೂ, ರುಆಂಡದಲ್ಲಿನ ಕ್ರೈಸ್ತಪ್ರಪಂಚದ ಚರ್ಚುಗಳು ಬೇರೆ ಕಡೆಗಳಲ್ಲಿರುವ ಚರ್ಚುಗಳಿಗಿಂತ ಸ್ಪಲ್ಪವೂ ಭಿನ್ನವಾಗಿಲ್ಲ. ಉದಾಹರಣೆಗಾಗಿ, ಲೋಕ ಯುದ್ಧ I ರಲ್ಲಿ ರಾಜಕೀಯ ಧುರೀಣರ ಅವರ ಬೆಂಬಲದ ಕುರಿತಾಗಿ ಬ್ರಿಟಿಷ್ ಬ್ರಿಗಡಿಯರ್ ಜೆನರಲ್ ಫ್ರಾಕ್ ಪಿ. ಕ್ರೋಸರ್ ಹೇಳಿದ್ದು: “ನಮ್ಮಲ್ಲಿರುವ ಮತ್ತು ನಾವು ಧಾರಾಳವಾಗಿ ಉಪಯೋಗಿಸಿದ ಅತ್ಯುತ್ತಮ ರಕ್ತದಾಹ ನಿಮಾರ್ಣಿಕರು ಕ್ರೈಸ್ತ ಚರ್ಚುಗಳಾಗಿವೆ.”
ಹೌದು, ಏನು ನಡೆದಿದೆಯೋ ಅದಕ್ಕಾಗಿ ಧಾರ್ಮಿಕ ಮುಖಂಡರು ಜವಾಬ್ದಾರಿಯ ಒಂದು ದೊಡ್ಡ ಪಾಲನ್ನು ಹೊರುತ್ತಾರೆ! ಜೂನ್ 3, 1994 ರ ನಾಷನಲ್ ಕ್ಯಾತೊಲಿಕ್ ರಿಪೋರ್ಟರ್ ವರದಿಸಿದ್ದು: “ಆಫ್ರಿಕನ್ ದೇಶದಲ್ಲಿನ ಹೋರಾಟವು ‘ದುರದೃಷ್ಟವಾಗಿ, ಕ್ಯಾತೊಲಿಕರು ಸಹ ಜವಾಬ್ದಾರರಾಗಿರುವ ಒಂದು ನಿಜ ಮತ್ತು ಸತ್ಯವಾಗಿರುವ ಸಮೂಹನಾಶ’ ವನ್ನು ಒಳಗೂಡುತ್ತದೆ ಎಂದು ಪೋಪರು ಹೇಳಿದರು.”
ಸ್ಪಷ್ಟವಾಗಿಗಿ, ಚರ್ಚುಗಳು ಯೆಶಾಯ 2:4 ಮತ್ತು ಮತ್ತಾಯ 26:52 ರಂತಹ ಶಾಸ್ತ್ರವಚನಗಳ ಮೇಲೆ ಆಧಾರಿತವಾದ ನಿಜ ಕ್ರೈಸ್ತ ಸೂತ್ರಗಳನ್ನು ಕಲಿಸುವುದರಲ್ಲಿ ವಿಫಲಗೊಂಡಿವೆ. ಫ್ರೆಂಚ್ ವಾರ್ತಾಪತ್ರ ಲ ಮಾಂಡ್ ಗನುಸಾರ, ಒಬ್ಬ ಪಾದ್ರಿಯು ಪ್ರಲಾಪಿಸಿದ್ದು: “ಅವರು ಸಹೋದರರು ಎಂಬದನ್ನು ಆ ಸಮಯದಲ್ಲಿ ಮರೆಯುತ್ತಾ ಅವರು ಒಬ್ಬರನ್ನೊಬ್ಬರು ಹತಿಸುತ್ತಾರೆ.” ರುಆಂಡದ ಇನ್ನೊಬ್ಬ ಪಾದ್ರಿಯು ಒಪ್ಪಿಕೊಂಡದ್ದು: “ಪ್ರೀತಿ ಮತ್ತು ಕ್ಷಮಾಪಣೆಯ ಮೇಲೆ ಪ್ರವಚನಗಳ ಒಂದು ಶತಮಾನದ ಅನಂತರ, ಕ್ರೈಸ್ತರು ಇತರ ಕ್ರೈಸ್ತರಿಂದ ಕೊಲ್ಲಲ್ಪಟ್ಟಿದ್ದಾರೆ. ಅದು ಪರಾಜಯಗೊಂಡಿದೆ.” ಲ ಮಾಂಡ್ ಹೀಗೆ ಕೇಳಿತು: “ರುಆಂಡ ಮತ್ತು ಬುರುಂಡಿಯಲ್ಲಿ ಯುದ್ಧ ಮಾಡುತ್ತಿರುವ ಹೂಟು ಮತ್ತು ಟೂಟ್ಸಿಯರು ಅದೇ ಕ್ರೈಸ್ತ ಮಿಶನರಿಗಳಿಂದ ತರಬೇತುಗೊಳಿಸಲ್ಪಟ್ಟವರು ಮತ್ತು ಒಂದೇ ಚರ್ಚುಗಳಿಗೆ ಹಾಜರಾಗುತ್ತಿದ್ದರೆಂಬದನ್ನು ಯಾರಾದರೂ ಆಲೋಚಿಸುವದನ್ನು ಹೇಗೆ ಹೋಗಲಾಡಿಸಬಲ್ಲರು?”
ನಿಜ ಕ್ರೈಸ್ತರು ಭಿನ್ನರಾಗಿದ್ದಾರೆ
ಯೇಸು ಕ್ರಿಸ್ತನ ನಿಜ ಹಿಂಬಾಲಕರು “ಒಬ್ಬರನ್ನೊಬ್ಬರು ಪ್ರೀತಿಸಬೇಕು” ಎಂಬ ಅವನ ಆಜೆಗ್ಞನುಸಾರವಾಗಿ ಜೀವಿಸುತ್ತಾರೆ. (ಯೋಹಾನ 13:34) ಯೇಸು ಅಥವಾ ಅವನ ಶಿಷ್ಯರಲ್ಲಿ ಒಬ್ಬನು ಒಂದು ಮಚ್ಚುಕತ್ತಿಯನ್ನು ತೆಗೆದುಕೊಂಡು ಒಬ್ಬನನ್ನು ಕಡಿದು ಕೊಲ್ಲುವದನ್ನು ನೀವು ಊಹಿಸಬಲ್ಲಿರೋ? ಅಂಥ ಕಾನೂನುಬದ್ಧವಾಗಿರದ ಕೊಲ್ಲುವಿಕೆಯು ಜನರನ್ನು “ಸೈತಾನನ ಮಕ್ಕಳೆಂದು” ಗುರುತಿಸುತ್ತದೆ.—1 ಯೋಹಾನ 3:10-12.
ಯೆಹೋವನ ಸಾಕ್ಷಿಗಳು ಯುದ್ಧಗಳಲ್ಲಿ, ಕ್ರಾಂತಿಗಳಲ್ಲಿ, ಮತ್ತು ಪಿಶಾಚನಾದ ಸೈತಾನನ ಹತೋಟಿಯ ಕೆಳಗಿರುವ ಲೋಕದ ರಾಜಕಾರಣಿಗಳಿಂದ ಪ್ರವರ್ಧಿಸಲಾದ ಇತರ ಯಾವದೇ ಕಲಹಗಳಲ್ಲಿ ಭಾಗವನ್ನು ತೆಗೆದುಕೊಳ್ಳುವದಿಲ್ಲ. (ಯೋಹಾನ 17:14, 16; 18:36; ಪ್ರಕಟನೆ 12:9) ಇದರ ಬದಲು, ಯೆಹೋವನ ಸಾಕ್ಷಿಗಳು ಒಬ್ಬರಿಗೊಬ್ಬರು ನೈಜವಾದ ಪ್ರೀತಿಯನ್ನು ಪ್ರದರ್ಶಿಸುತ್ತಾರೆ. ಹೀಗೆ ಕಗ್ಗೊಲೆಗಳ ಸಮಯದಲ್ಲಿ ತಮ್ಮ ಟೂಟ್ಸಿ ಸಹೋದರರನ್ನು ಸಂರಕ್ಷಿಸುವ ಪ್ರಯತ್ನದಲ್ಲಿ ಹೂಟು ಸಾಕ್ಷಿಗಳು ತಮ್ಮ ಜೀವಗಳನ್ನು ಇಚ್ಛಾಪೂರ್ವಕವಾಗಿ ಗಂಡಾಂತರದಲ್ಲಿರಿಸಿದರು.
ಆದರೂ, ಇಂತಹ ದುರಂತಗಳು ಆಶ್ಚರ್ಯಜನಕವಾಗಿರಬಾರದು. “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ” ಕುರಿತಾದ ತನ್ನ ಪ್ರವಾದನೆಯಲ್ಲಿ ಯೇಸು ಮುಂತಿಳಿಸಿದ್ದು: “ಆಗ ನಿಮ್ಮನ್ನು . . . ಕೊಲ್ಲುವರು.” (ಮತ್ತಾಯ 24:3, 9) ಸಂತೋಷಕರವಾಗಿ, ಸತ್ತವರ ಪುನರುತ್ಥಾನದಲ್ಲಿ ನಂಬಿಗಸ್ತರನ್ನು ನೆನಪಿಸಲಾಗುವದು ಎಂದು ಯೇಸು ವಾಗ್ದಾನಿಸುತ್ತಾನೆ.—ಯೋಹಾನ 5:28, 29.
ಅಷ್ಟರತನಕ, ರುಆಂಡದಲ್ಲಿ ಮತ್ತು ಬೇರೆಲಿಯ್ಲೂ ಇರುವ ಯೆಹೋವನ ಸಾಕ್ಷಿಗಳು, ಒಬ್ಬರನ್ನೊಬ್ಬರು ಪ್ರೀತಿಸುವ ಮೂಲಕ ತಮ್ಮನ್ನು ಕ್ರಿಸ್ತನ ಶಿಷ್ಯರೆಂದು ರುಜುಪಡಿಸುವದನ್ನು ಮುಂದುವರಿಸುತ್ತಾ ಇರಲು ದೃಢನಿಶ್ಚಯ ಮಾಡಿಕೊಂಡಿದ್ದಾರೆ. (ಯೋಹಾನ 13:35) “ಆಶ್ರಿತರ ಶಿಬಿರಗಳಲ್ಲಿ ಸಾಕ್ಷಿಗಳು” ಎಂಬ ಒಡಗೂಡಿರುವ ವರದಿಯು ಪ್ರಕಟಪಡಿಸುವಂತೆ ಈ ಸದ್ಯದ ಕಷ್ಟಗಳ ಮಧ್ಯದಲ್ಲೂ ಅವರ ಪ್ರೀತಿಯು ಒಂದು ಸಾಕ್ಷಿಯನ್ನು ಕೊಡುತ್ತಾ ಇದೆ. ಯೇಸು ತನ್ನ ಪ್ರವಾದನೆಯಲ್ಲಿ ಹೇಳಿದಂಥದ್ದನ್ನು ನಾವೆಲ್ಲರೂ ನೆನಪಿನಲ್ಲಿರಿಸುವ ಅಗತ್ಯವಿದೆ: “ಕಡೇ ವರೆಗೆ ತಾಳುವವನು ರಕ್ಷಣೆ ಹೊಂದುವನು.”—ಮತ್ತಾಯ 24:13.
[ಪುಟ 29 ರಲ್ಲಿರುವ ಚೌಕ]
ಆಶ್ರಿತರ ಶಿಬಿರಗಳಲ್ಲಿ ಸಾಕ್ಷಿಗಳು
ಈ ವರ್ಷದ ಜುಲೈಯಲ್ಲಿ, 4,700 ಕ್ಕಿಂತ ಹೆಚ್ಚಿನ ಸಾಕ್ಷಿಗಳು ಮತ್ತು ಅವರ ಸಂಗಾತಿಗಳು ಆಶ್ರಿತರ ಶಿಬಿರಗಳಲ್ಲಿ ಇದ್ದರು. ಜಾಎರ್ನಲ್ಲಿ, ಗೋಮ ನಗರದಲ್ಲಿ 2,376 ಇದ್ದರು, ಬುಕಾವುನಲ್ಲಿ 454, ಮತ್ತು ಊವೀರ ನಗರದಲ್ಲಿ 1,592 ಇದ್ದರು. ಇದಕ್ಕೆ ಕೂಡಿಸಿ, ಟಾನ್ಸೆನೀಯದ ಬೆನಾಕೊ ಹಳ್ಳಿಯಲ್ಲಿ 230 ಸಾಕ್ಷಿಗಳು ಇದ್ದರು.
ಆಶ್ರಿತರ ಕೇಂದ್ರಗಳಿಗೆ ಮುಟ್ಟುವದು ಸುಲಭವಾಗಿರಲಿಲ್ಲ. 60 ಸಾಕ್ಷಿಗಳ ಒಂದು ಸಭೆ, ಟಾನ್ಸೆನೀಯದಲ್ಲಿರುವ ಆಶ್ರಿತರ ಶಿಬಿರಗಳಿಗೆ ಒಂದು ಮುಖ್ಯ ತಪ್ಪಿಸಿಕೊಳ್ಳುವ ಹಾದಿಯಾಗಿರುವ ರೂಸೂಮೊ ಸೇತುವೆಯನ್ನು ದಾಟಲು ಪ್ರಯತ್ನಿಸಿತು. ಅವರಿಗೆ ದಾಟುವಿಕೆ ನಿರಾಕರಿಸಲ್ಪಟ್ಟಾಗ ಅವರು ನದಿಯ ದಡದಲ್ಲಿ ಒಂದು ವಾರ ಅಲೆದಾಡಿದರು. ಅನಂತರ ಅವರು ತೋಡುದೋಣಿಗಳಲ್ಲಿ ದಾಟುವಂತೆ ಪ್ರಯತ್ನಿಸಲು ನಿರ್ಣಯಿಸಿದರು. ಅವರು ಯಶಸ್ವಿಯಾದರು, ಮತ್ತು ಕೆಲವು ದಿನಗಳ ನಂತರ ಅವರು ಸುರಕ್ಷಿತವಾಗಿ ಟಾನ್ಸೆನೀಯದಲ್ಲಿರುವ ಶಿಬಿರವನ್ನು ತಲಪಿದರು.
ಇತರ ದೇಶಗಳಲ್ಲಿನ ಯೆಹೋವನ ಸಾಕ್ಷಿಗಳು ಮಹತ್ತಾದ ಪರಿಹಾರ ಪ್ರಯತ್ನಗಳನ್ನು ಸಂಘಟಿಸಿದರು. ಫ್ರಾನ್ಸಿನಲ್ಲಿರುವ ಸಾಕ್ಷಿಗಳು ನೂರು ಟನ್ನು ಬಟ್ಟೆಗೆಳು ಮತ್ತು ಒಂಭತ್ತು ಟನ್ನು ಜೋಡುಗಳನ್ನು ಶೇಖರಿಸಿದರು, ಮತ್ತು ಇಂಥ ಸರಬರಾಯಿಗಳೊಂದಿಗೆ ಪುಷ್ಟಿಕರ ಸಂಪೂರಕಗಳನ್ನು ಮತ್ತು ಔಷಧಗಳನ್ನು ಅಗತ್ಯವಿರುವ ಕ್ಷೇತ್ರಗಳಿಗೆ ರವಾನಿಸಲಾಯಿತು. ಆದಾಗಲೂ, ಅನೇಕ ಸಲ ಆಶ್ರಿತರ ಶಿಬಿರಗಳಲ್ಲಿದ್ದ ಸಹೋದರರು ಮೊದಲು ಕೇಳಿಕೊಂಡ ವಸ್ತು, ಒಂದು ಬೈಬಲು ಅಥವಾ ಒಂದು ಕಾವಲಿನಬುರುಜು ಯಾ ಎಚ್ಚರ! ಪತ್ರಿಕೆ ಆಗಿತ್ತು.
ಸ್ಥಳಾಂತರಿಸಲ್ಪಟ್ಟ ತಮ್ಮ ಸಹೋದರರನ್ನು ಭೇಟಿ ಮಾಡಿ ಸಹಾಯ ಮಾಡಿದ ಜಾವಿರ್ ಮತ್ತು ಟಾನ್ಸೆನೀಯದಲ್ಲಿದ್ದ ಸಾಕ್ಷಿಗಳಿಂದ ತೋರಿಸಲ್ಪಟ್ಟ ಪ್ರೀತಿಯಿಂದ ಅನೇಕ ಪ್ರೇಕ್ಷಕರು ಪ್ರಭಾವಿಸಲ್ಪಟ್ಟರು. “ನಿಮ್ಮ ಧರ್ಮದ ಜನರು ನಿಮ್ಮನ್ನು ಭೇಟಿಮಾಡಿದ್ದಾರೆ, ಆದರೆ ನಮ್ಮ ಧರ್ಮದ ಒಬ್ಬ ಪಾದ್ರಿಯಿಂದಲೂ ನಾವು ಸಂದರ್ಶಿಸಲ್ಪಟ್ಟಿಲ್ಲ” ಎಂದು ಹೇಳುತ್ತಾರೆ ಆಶ್ರಿತರು.
ಹೆಚ್ಚಿನಂಶ ಅವರ ಏಕತೆ, ಕ್ರಮಬದ್ಧತೆ ಮತ್ತು ಪ್ರೀತಿಯುಕ್ತ ಮನೋವೃತ್ತಿಯ ಕಾರಣವೇ ಸಾಕ್ಷಿಗಳು ಶಿಬಿರಗಳಲ್ಲಿ ಪ್ರಸಿದ್ಧರಾದರು. (ಯೋಹಾನ 13:35) ಟಾನ್ಸೆನೀಯದ ಬೆನಾಕೊನಲ್ಲಿ, ಶಿಬಿರದಲ್ಲಿರುವ ಸುಮಾರು 2,50,000 ಜನರೊಳಗಿಂದ ಜೊತೆ ಸಾಕ್ಷಿಗಳನ್ನು ಕಂಡುಹಿಡಿಯಲು ಸಾಕ್ಷಿಗಳಿಗೆ ಕೇವಲ 15 ನಿಮಿಷಗಳು ತಗಲಿದವು.