ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w95 7/15 ಪು. 4-7
  • ಆತ್ಮ ಲೋಕದ ಅಧಿಪತಿಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆತ್ಮ ಲೋಕದ ಅಧಿಪತಿಗಳು
  • ಕಾವಲಿನಬುರುಜು—1995
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ದೇವರಿಗೆ ವಿರೋಧವಾಗಿರುವ ಒಬ್ಬ ನಿಜ ವ್ಯಕ್ತಿ
  • ಸೈತಾನನನ್ನು ಆಳಲು ಬಿಟ್ಟದ್ದಕ್ಕೆ ಕಾರಣ
  • ಸೈತಾನನ ಕಾಲವು ಸ್ವಲ್ಪವೇ!
  • ರಾಜ್ಯದಾಳಿಕೆಯ ಕೆಳಗೆ ಉಲ್ಲಾಸಿಸುವುದು
  • ಸೈತಾನನು ನಿಮ್ಮನ್ನು ನುಂಗಲು ಕಾಯುತ್ತಿದ್ದಾನೆ—ಎಚ್ಚರವಾಗಿರಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಭೂಮಿಗಾಗಿ ದೇವರ ಉದ್ದೇಶವೇನು?
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ನಿಮ್ಮ ವೈರಿ ಎಂಥವನೆಂದು ತಿಳಿದುಕೊಳ್ಳಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
ಕಾವಲಿನಬುರುಜು—1995
w95 7/15 ಪು. 4-7

ಆತ್ಮ ಲೋಕದ ಅಧಿಪತಿಗಳು

ಲೋಕವನ್ನು ಯಾರು ಆಳುತ್ತಾರೆ? ಒಂದು ವಿಧದ ಅತಿಮಾನುಷ ಮೇಲ್ವಿಚಾರವು ಅಲ್ಲಿದೆಯೆ? ಅಥವಾ ಮನುಷ್ಯರು ತಮ್ಮನ್ನು ತಾವೆ ಪರಿಪಾಲಿಸಿಕೊಳ್ಳುವಂತೆ ದೇವರು ಬಿಟ್ಟಿದ್ದಾನೊ? ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವಲ್ಲಿ, ನಾವು ಮೊದಲಾಗಿ ಯೇಸು ಕ್ರಿಸ್ತನ ಐಹಿಕ ಶುಶ್ರೂಷೆಯ ಸಮಯದಲ್ಲಿ ಸಂಭವಿಸಿದ ಒಂದು ಘಟನೆಯನ್ನು ಪರಿಗಣಿಸೋಣ.

ಯೇಸುವಿನ ದೀಕ್ಷಾಸ್ನಾನದ ಬಳಿಕ ಸ್ವಲ್ಪದರಲ್ಲಿ, ಪಿಶಾಚನಾದ ಸೈತಾನನೆಂಬ ಅದೃಶ್ಯ ಆತ್ಮ ಜೀವಿಯಿಂದ ಆತನು ಶೋಧಿಸಲ್ಪಟ್ಟನು. ಆ ಶೋಧನೆಗಳಲ್ಲೊಂದನ್ನು ಪ್ರಸ್ತಾಪಿಸುತ್ತಾ ಬೈಬಲನ್ನುವುದು: “ಸೈತಾನನು ಆತನನ್ನು [ಯೇಸುವನ್ನು] ಬಹಳ ಎತ್ತರವಾದ ಬೆಟ್ಟಕ್ಕೆ ಕರಕೊಂಡು ಹೋಗಿ ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಆತನಿಗೆ ತೋರಿಸಿ” ದನು. (ಮತ್ತಾಯ 4:8) ಬಳಿಕ ಸೈತಾನನು ಯೇಸುವಿಗೆ ಅಂದದ್ದು: “ಇವೆಲ್ಲವುಗಳ ಅಧಿಕಾರವನ್ನೂ ಇವುಗಳ ವೈಭವವನ್ನೂ ನಿನಗೆ ಕೊಡುವೆನು; ಇದೆಲ್ಲಾ ನನಗೆ ಕೊಟ್ಟದೆ, ಇದನ್ನು ನನ್ನ ಮನಸ್ಸು ಬಂದವನಿಗೆ ಕೊಡುತ್ತೇನೆ; ನೀನು ನನ್ನ ಮುಂದೆ ಅಡ್ಡಬಿದ್ದರೆ ಅದೆಲ್ಲಾ ನಿನ್ನದಾಗುವದು.”—ಲೂಕ 4:6, 7.

ಈ ಲೋಕದ ಎಲ್ಲಾ ರಾಜ್ಯಗಳ ಅಥವಾ ಸರಕಾರಗಳ ಮೇಲಿನ ಅಧಿಕಾರವನ್ನು ತಾನು ಹೊಂದಿದವನೆಂದು ಸೈತಾನನು ವಾದಿಸಿದನು. ಈ ವಾದವನ್ನು ಯೇಸು ಅಲ್ಲಗಳೆದನೊ? ಇಲ್ಲ, ವಾಸ್ತವಿಕವಾಗಿ, ಇನ್ನೊಂದು ಸಂದರ್ಭದಲ್ಲಿ ಸೈತಾನನನ್ನು “ಇಹಲೋಕಾಧಿಪತಿ” ಎಂದು ನಿರ್ದೇಶಿಸುವ ಮೂಲಕ ಅವನು ಅದನ್ನು ದೃಢೀಕರಿಸಿದನು.—ಯೋಹಾನ 14:30.

ಬೈಬಲಿಗನುಸಾರವಾಗಿ, ಸೈತಾನನು ಮಹಾ ಶಕ್ತಿಯನ್ನು ಹೊಂದಿರುವ ಒಬ್ಬ ದುಷ್ಟ ದೇವದೂತನು. ಕ್ರೈಸ್ತ ಅಪೊಸ್ತಲ ಪೌಲನು ಸೈತಾನನನ್ನು “ದುರಾತ್ಮಗಳ ಸೇನೆ” ಯೊಂದಿಗೆ ಜತೆಗೂಡಿಸುತ್ತಾ ಅವರನ್ನು “ಈ ಅಂಧಕಾರದ ಲೋಕಾಧಿಪತಿಗಳು” ಎಂಬುದಾಗಿ ಮಾತಾಡುತ್ತಾನೆ. (ಎಫೆಸ 6:11, 12) ಅದಲ್ಲದೆ, ಅಪೊಸ್ತಲ ಯೋಹಾನನು “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದಿದ್ದೆ” ಎಂದು ಹೇಳಿದನು. (1 ಯೋಹಾನ 5:19) ಸೈತಾನನು “ಭೂಲೋಕದವರನ್ನೆಲ್ಲಾ ಮರುಳುಗೊಳಿಸು” ತ್ತಾನೆಂದು ಬೈಬಲಿನ ಪ್ರಕಟನೆ ಪುಸ್ತಕವು ಹೇಳುತ್ತದೆ. (ಪ್ರಕಟನೆ 12:9) ಸಾಂಕೇತಿಕ ಭಾಷೆಯಲ್ಲಿ, ಸೈತಾನನನ್ನು, ಲೋಕದ ರಾಜಕೀಯ ವ್ಯವಸ್ಥೆಗೆ “ಶಕ್ತಿಯನ್ನೂ ಸಿಂಹಾಸನವನ್ನೂ ಮಹಾ ಅಧಿಕಾರವನ್ನೂ” ಕೊಡುವ ಘಟಸರ್ಪನಾಗಿ ಸಹ ಪ್ರಕಟನೆಯು ಚಿತ್ರಿಸುತ್ತದೆ.—ಪ್ರಕಟನೆ 13:2.

ಮನುಷ್ಯರನ್ನು ಅವರ ಹಾನಿಗಾಗಿ ಕೌಶಲದಿಂದ ನಿರ್ವಹಿಸಿಕೊಳ್ಳುವ ಒಂದು ದುಷ್ಟ ಶಕ್ತಿಯಿದೆಯೆಂದು ಲೋಕ ಘಟನೆಗಳು ಸಹ ಸಾಕ್ಷ್ಯಕೊಡುತ್ತವೆ. ಬೇರೆ ಯಾವ ಕಾರಣಕ್ಕಾಗಿ ಮಾನವ ಸರ್ಕಾರಗಳು ಶಾಂತಿಯನ್ನು ಪ್ರವರ್ಧಿಸಲು ತಪ್ಪುತ್ತವೆ? ಒಬ್ಬರನ್ನೊಬ್ಬರು ದ್ವೇಷಿಸಲಿಕ್ಕೆ ಮತ್ತು ಸಂಹರಿಸಿಕೊಳ್ಳಲಿಕ್ಕೆ ಬೇರೆ ಯಾವುದು ಕಾರಣಮಾಡುತ್ತದೆ? ಒಂದು ಒಳಯುದ್ಧದಲ್ಲಿ ನಡೆದ ಕಗ್ಗೊಲೆ ಮತ್ತು ಸಾವಿನಿಂದಾಗಿ ದಿಗಿಲುಗೊಂಡ ಒಬ್ಬಾಕೆ ಪ್ರತ್ಯಕ್ಷ ಸಾಕ್ಷಿಯು ಅಂದದ್ದು: “ಈ ಅತ್ಯಾಚಾರವು ಹೇಗೆ ಸಂಭವಿಸಬಹುದಾಗಿತ್ತೆಂದು ನನಗೆ ತಿಳಿಯದು. ಅದು ದ್ವೇಷಕ್ಕಿಂತಲೂ ಅತೀತ. ಒಂದು ದುಷ್ಟ ಆತ್ಮವೆ ಈ ಮಾನವ ಜೀವಿಗಳು ಒಬ್ಬರನ್ನೊಬ್ಬರು ನಾಶಪಡಿಸಿಕೊಳ್ಳುವಂತೆ ಬಳಸುತ್ತಿದೆ.”

ದೇವರಿಗೆ ವಿರೋಧವಾಗಿರುವ ಒಬ್ಬ ನಿಜ ವ್ಯಕ್ತಿ

ಇಂದು ಅನೇಕರು ಪಿಶಾಚನಾದ ಸೈತಾನನ ಅಸ್ತಿತ್ವವನ್ನು ನಂಬುವುದಿಲ್ಲ. ಆದರೂ, ಕೆಲವರು ನಂಬುವ ಪ್ರಕಾರ, ಅವನು ಕೇವಲ ಮಾನವಕುಲದಲ್ಲಿರುವ ಕೆಡುಕಿನ ಮೂಲತತ್ವವಲ್ಲ. ಅವನು ಒಬ್ಬ ನಿಜ ವ್ಯಕ್ತಿಯೆಂಬುದಾಗಿ ಬೈಬಲು ಮತ್ತು ಲೋಕ ಘಟನೆಗಳು ಇವೆರಡೂ ತೋರಿಸುತ್ತವೆ. ಅಷ್ಟಲ್ಲದೆ, ಸೈತಾನನು ಯೆಹೋವ ದೇವರ ನೇರಿದಿರಾದ ವಿರೋಧಿ. ನಿಶ್ಚಯವಾಗಿಯೂ, ಸೈತಾನನು ದೇವರಿಗೆ ಸರಿಸಮಾನನಲ್ಲ. ಯೆಹೋವನು ಸರ್ವಶಕ್ತನಾದ ನಿರ್ಮಾಣಿಕನಾಗಿರುವುದರಿಂದ, ಸಮಸ್ತ ಸೃಷ್ಟಿಯ ಮೇಲೆ ನ್ಯಾಯವಾದ ಹಕ್ಕುಳ್ಳ ಅಧಿಪತಿಯು ಆತನೇ ಆಗಿದ್ದಾನೆ.—ಪ್ರಕಟನೆ 4:11.

ದೇವರು ತಾನೆ ತನ್ನ ವಿರುದ್ಧವಾಗಿ ಒಂದು ದುಷ್ಟ ಜೀವಿಯನ್ನು ನಿರ್ಮಿಸಲಿಲ್ಲ. ಬದಲಿಗೆ, “ದೇವಕುಮಾರರಲ್ಲಿ” ಒಬ್ಬ ದೂತನು ಯೆಹೋವನಿಗೆ ನ್ಯಾಯವಾಗಿ ಸೇರತಕ್ಕದ್ದಾಗಿರುವ ಭಕ್ತಿಯನ್ನು ತನಗಾಗಿ ಬಾಚಿಕೊಳ್ಳುವ ಒಂದು ಸ್ವಾರ್ಥಪರ ಬಯಕೆಯನ್ನು ಬೆಳೆಸಿಕೊಂಡನು. (ಯೋಬ 38:7; ಯಾಕೋಬ 1:14, 15) ಈ ಅಪೇಕ್ಷೆಯು ಅವನನ್ನು ದೇವರ ವಿರುದ್ಧವಾಗಿ ದಂಗೆಯ ಪಥವೊಂದನ್ನು ಪ್ರಾರಂಭಿಸುವಂತೆ ನಡಿಸಿತು. ದಂಗೆಯೇಳುವ ಮೂಲಕ, ಈ ಆತ್ಮ ಜೀವಿಯು ತನ್ನನ್ನು ಸೈತಾನ (ಅಂದರೆ “ಪ್ರತಿಭಟಕ”) ಮತ್ತು ಪಿಶಾಚ (ಅಂದರೆ “ನಿಂದಕ”) ನನ್ನಾಗಿ ಮಾಡಿಕೊಂಡನು. ಇವೆಲ್ಲವುಗಳ ನೋಟದಲ್ಲಿ, ಸೈತಾನನಿಗೆ ಲೋಕವನ್ನಾಳಲು ಅನುಮತಿ ಕೊಟ್ಟದ್ದೇಕೆಂದು ನೀವು ಕುತೂಹಲಪಡಬಹುದು.

ಸೈತಾನನನ್ನು ಆಳಲು ಬಿಟ್ಟದ್ದಕ್ಕೆ ಕಾರಣ

ಭೂಮಿಯ ಮೇಲಿನ ಅಧಿಕಾರದ ಕುರಿತು ಸೈತಾನನು ಯೇಸುವಿಗೆ ಏನಂದನೆಂಬುದು ನಿಮಗೆ ಜ್ಞಾಪಕವಿದೆಯೆ? “ಇವೆಲ್ಲವುಗಳ ಅಧಿಕಾರವನ್ನೂ . . . ನಿನಗೆ ಕೊಡುವೆನು. ಇದೆಲ್ಲ ನನಗೆ ಕೊಟ್ಟದೆ” ಅಂದನು ಸೈತಾನನು. (ಲೂಕ 4:6) ದೇವರ ಅನುಮತಿಯಿಂದ ಮಾತ್ರ ಪಿಶಾಚನಾದ ಸೈತಾನನು ಅಧಿಕಾರವನ್ನು ಬಳಸುತ್ತಾನೆಂದು ಈ ಹೇಳಿಕೆಯು ತೋರಿಸುತ್ತದೆ. ಆದರೆ ದೇವರು ಸೈತಾನನನ್ನು ಸಹಿಸಿಕೊಳ್ಳುವುದೇಕೆ?

ಆ ಪ್ರಶ್ನೆಗೆ ಉತ್ತರವು, ಎಲ್ಲಿ ಸೈತಾನನು ಲೋಕಾಧಿಪತಿಯಂತೆ ತನ್ನ ಕಸಬನ್ನು ಪ್ರಾರಂಭಿಸಿದನೋ, ಆ ಏದೆನ್‌ ತೋಟದಲ್ಲಿನ ಘಟನಾವಳಿಗೆ ಸಂಬಂಧಿಸಿದೆ. ಮೊದಲನೆ ಪುರುಷ ಮತ್ತು ಸ್ತ್ರೀಯಾದ ಆದಾಮ ಮತ್ತು ಹವ್ವರಿಂದ ದೇವರು ಏನೊ ಒಳ್ಳೇ ಸಂಗತಿಯನ್ನು ತಡೆದಿಡುವ ಮೂಲಕ ಕೆಟ್ಟ ರೀತಿಯಲ್ಲಿ ಆಳುತಿದ್ದಾನೆಂದು ಅಲ್ಲಿ ಸೈತಾನನು ಸೂಚಿಸಿದ್ದನು. ಸೈತಾನನಿಗನುಸಾರ, ದೇವರಿಂದ ನಿಷೇಧಿಸಲ್ಪಟ್ಟ ಹಣ್ಣನ್ನು ಅವರು ತಿಂದಿದ್ದರೆ ಅವರು ಬಿಡುಗಡೆಯನ್ನು ಹೊಂದುತ್ತಿದ್ದರು. ಆದಾಮ ಮತ್ತು ಹವ್ವರು ಯೆಹೋವನಿಂದ ಸ್ವತಂತ್ರರೂ ಸ್ವಾವಲಂಬಿಗಳೂ ಆಗುತ್ತಿದ್ದರು. ಸ್ವತಃ ದೇವರಂತೆ ಅವರಾಗುತ್ತಿದ್ದರು!—ಆದಿಕಾಂಡ 2:16, 17; 3:1-5.

ಈ ರೀತಿಯಾಗಿ ಸುಳ್ಳಾಡಿ, ಹವ್ವಳನ್ನು ವಂಚಿಸಿ, ಅವಳ ಮೂಲಕ ಆದಾಮನೂ ದೇವರ ನಿಯಮವನ್ನು ಉಲ್ಲಂಘಿಸುವಂತೆ ಒಲಿಸಿ, ಸೈತಾನನು ಮೊದಲನೆಯ ಮಾನವ ಜೊತೆಯನ್ನು ತನ್ನ ನಾಯಕತ್ವ ಮತ್ತು ಹತೋಟಿಯ ಕೆಳಗೆ ತಂದನು. ಹೀಗೆ ಪಿಶಾಚನು, ಅವರ ದೇವನಾಗಿ, ಯೆಹೋವನಿಗೆ ವಿರೋಧಿಯಾದ ಒಬ್ಬ ದೇವನಾಗಿ ಪರಿಣಮಿಸಿದನು. ಆದರೆ, ಬಿಡುಗಡೆಯ ಬದಲಿಗೆ ಆದಾಮ ಮತ್ತು ಹವ್ವರು ಸೈತಾನನಿಗೆ, ಪಾಪಕ್ಕೆ, ಮತ್ತು ಮರಣಕ್ಕೆ ದಾಸರಾದರು.—ರೋಮಾಪುರ 6:16; ಇಬ್ರಿಯ 2:14, 15.

ತನ್ನ ಪರಿಪೂರ್ಣ ನ್ಯಾಯಕ್ಕೆ ಹೊಂದಿಕೆಯಲ್ಲಿ, ಯೆಹೋವನು ಸೈತಾನನನ್ನೂ ಅವನ ಇಬ್ಬರು ಹೊಸ ಅನುಯಾಯಿಗಳನ್ನೂ ಆ ಕೂಡಲೆ ನಾಶಮಾಡಬಹುದಿತ್ತು. (ಧರ್ಮೋಪದೇಶಕಾಂಡ 32:4) ಆದರೂ, ಅಲ್ಲಿ ಒಂದು ನೈತಿಕ ವಾದಾಂಶವು ಒಳಗೂಡಿತ್ತು. ಯೆಹೋವನ ಆಳುವ ವಿಧಾನದ ನ್ಯಾಯಪರತೆಯನ್ನು ಸೈತಾನನು ಪಂಥಾಹ್ವಾನಿಸಿದ್ದನು. ದೇವರು ತನ್ನ ವಿವೇಕಪೂರ್ಣತೆಯಲ್ಲಿ, ತನ್ನಿಂದ ಸ್ವಾತಂತ್ರ್ಯವು ವಿಪತ್ತನ್ನು ತರುವುದೆಂಬುದನ್ನು ಸಿದ್ಧಪಡಿಸಲಾಗುವಂತೆ ಸಮಯವು ದಾಟುವಂತೆ ಬಿಟ್ಟುಕೊಟ್ಟನು. ಆದಾಮ ಮತ್ತು ಹವ್ವರು ಸಂತತಿಯನ್ನು ಪಡೆಯಲು ಅನುಮತಿಸುತ್ತಾ, ಈ ದಂಗೆಕೋರರು ಸ್ವಲ್ಪ ಸಮಯ ಜೀವಿಸುತ್ತಾ ಮುಂದುವರಿಯುವಂತೆ ಯೆಹೋವನು ಅನುಮತಿಸಿದನು.—ಆದಿಕಾಂಡ 3:14-19.

ಆದಾಮನ ಸಂತತಿಯವರಲ್ಲಿ ಹೆಚ್ಚಿನವರು ಯೆಹೋವನ ಆಳಿಕೆಗೆ ಅಧೀನಪಡಿಸಿಕೊಂಡಿಲ್ಲವಾದರೂ, ತನ್ನ ಆರಾಧಕರೊಂದಿಗೆ ದೇವರ ವ್ಯವಹಾರಗಳು ಆತನ ಆಡಳಿತದ ಶ್ರೇಷ್ಠತ್ವವನ್ನು ಪ್ರದರ್ಶಿಸಿವೆ. ಯೆಹೋವನ ಅಧಿಕಾರದ ಯೋಗ್ಯ ಅಂಗೀಕಾರವು ಸಂತೋಷವನ್ನೂ ನಿಜ ಸುರಕ್ಷೆಯನ್ನೂ ತರುತ್ತದೆ. ಇನ್ನೊಂದು ಕಡೆ, ಸೈತಾನನ ಪ್ರಭಾವದ ಕೆಳಗಿನ ಮಾನವ ಆಳಿಕೆಯ ಫಲವು ಕ್ಲೇಶ ಮತ್ತು ಅಭದ್ರ ಸ್ಥಿತಿಯೆ. ಹೌದು, “ಮನುಷ್ಯನು ಮನುಷ್ಯನ ಮೇಲೆ ಅಧಿಕಾರ ನಡಸಿ ಹಾನಿಯನ್ನುಂಟುಮಾಡಿದ್ದಾನೆ.” (ಪ್ರಸಂಗಿ 8:9, NW) ಸೈತಾನನ ವಶದಲ್ಲಿ ಬಿದ್ದಿರುವ ಈ ಲೋಕದಲ್ಲಿ ಮಾನವ ಆಳಿಕೆಯ ಕೆಳಗೆ ಮಾನವರು ನಿಜ ಭದ್ರತೆ ಮತ್ತು ಬಾಳುವ ಸಂತೋಷವನ್ನು ಕಂಡುಕೊಂಡಿಲ್ಲ. ಆದರೂ ಸತ್‌ಪ್ರತೀಕ್ಷೆಗೆ ಸ್ವಸ್ಥ ಕಾರಣವಿದೆ.

ಸೈತಾನನ ಕಾಲವು ಸ್ವಲ್ಪವೇ!

ಭೂಮಿಯ ಮೇಲೆ ಸೈತಾನನ ಪ್ರಭಾವವು ತಾತ್ಕಾಲಿಕ. ಪೈಶಾಚಿಕ ಆಳಿಕೆಯನ್ನು ಯೆಹೋವನು ಹೆಚ್ಚು ಕಾಲ ಸಹಿಸಿಕೊಳ್ಳನು! ಶೀಘ್ರದಲ್ಲೆ ಪಿಶಾಚನು ಕ್ರಿಯಾಹೀನನಾಗಿ ಮಾಡಲ್ಪಡುವನು. ಒಬ್ಬ ಹೊಸ ಅರಸನು, ಸ್ವತಃ ದೇವರಿಂದ ಆರಿಸಲ್ಪಟ್ಟ ಒಬ್ಬ ನೀತಿಯ ರಾಜನು ಭೂಮಿಯ ಅಧಿಕಾರವನ್ನು ತೆಗೆದುಕೊಳ್ಳುವನು. ಆ ಅರಸನು ಯೇಸು ಕ್ರಿಸ್ತನು. ಸ್ವರ್ಗದಲ್ಲಿ ಅವನ ಸಿಂಹಾಸನಾರೋಹಣದ ಕುರಿತು ಪ್ರಕಟನೆ ಹೇಳುವುದು: “ಲೋಕದ ರಾಜ್ಯಾಧಿಕಾರವು ನಮ್ಮ ಕರ್ತ [ಯೆಹೋವ] ನಿಗೂ ಆತನು ಅಭಿಷೇಕಿಸಿದವನಿಗೂ ಉಂಟಾಯಿತು.” (ಪ್ರಕಟನೆ 11:15) ಬೈಬಲ್‌ ಕಾಲಗಣನೆ, ಶಾಸ್ತ್ರೀಯ ಪ್ರವಾದನಾ ನೆರವೇರಿಕೆಯೊಂದಿಗೆ ಸೇರಿ, ಈ ಘಟನೆಯು 1914 ರಲ್ಲಿ ಸಂಭವಿಸಿತೆಂಬುದನ್ನು ದೃಢೀಕರಿಸುತ್ತದೆ.—ಮತ್ತಾಯ 24:3, 6, 7.

ಯೇಸುವಿನ ಸಿಂಹಾಸನಾರೋಹಣದ ಬಳಿಕ ಸ್ವಲ್ಪ ಸಮಯದಲ್ಲೆ ಏನು ಸಂಭವಿಸಿತೆಂಬುದನ್ನು ಸಹ ಬೈಬಲು ವರ್ಣಿಸುತ್ತದೆ. ಅದನ್ನುವುದು: “ಪರಲೋಕದಲ್ಲಿ ಯುದ್ಧ ನಡೆಯಿತು. ಮೀಕಾಯೇಲ [ಯೇಸು ಕ್ರಿಸ್ತ]ನೂ ಅವನ ದೂತರೂ ಘಟಸರ್ಪ [ಪಿಶಾಚನಾದ ಸೈತಾನ]ನ ಮೇಲೆ ಯುದ್ಧಮಾಡುವದಕ್ಕೆ ಹೊರಟರು. ಘಟಸರ್ಪನೂ ಅವನ ದೂತರೂ ಯುದ್ಧಮಾಡಿ ಸೋತುಹೋದರು, ಮತ್ತು ಪರಲೋಕದೊಳಗೆ ಅವರಿಗೆ ಸ್ಥಾನವು ತಪ್ಪಿಹೋಯಿತು. ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ ಆ ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪವು ದೊಬ್ಬಲ್ಪಟ್ಟು ಭೂಮಿಗೆ ಬಿದ್ದನು; ಅವನ ದೂತರೂ ಅವನೊಂದಿಗೆ ದೊಬ್ಬಲ್ಪಟ್ಟರು.”—ಪ್ರಕಟನೆ 12:7-9.

ಸ್ವರ್ಗದಿಂದ ಸೈತಾನನ ಹೊರದೂಡುವಿಕೆಯ ಪರಿಣಾಮವೇನಾಗುವುದು? ಪರಲೋಕದಲ್ಲಿರುವವರು ಹರ್ಷಗೊಳ್ಳಶಕ್ತರಾಗಿದ್ದರು, ಆದರೆ ಭೂನಿವಾಸಿಗಳ ಕುರಿತೇನು? “ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ” ಎನ್ನುತ್ತದೆ ಪ್ರಕಟನೆ 12:12, “ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ.” ನಿಶ್ಚಯವಾಗಿ, ಪರಲೋಕದಿಂದ ಸೈತಾನನ ಹೊರದೊಬ್ಬುವಿಕೆಯು ಭೂಮಿಗೆ ದುರ್ಗತಿಯನ್ನು ತಂದಿರುತ್ತದೆ. ದ ಕೊಲಂಬಿಯ ಹಿಸ್ಟರಿ ಆಫ್‌ ದ ವರ್ಲ್ಡ್‌ ಹೇಳುವುದು: “1914-1918ರ ನಾಲ್ಕು ವರ್ಷಗಳ ಯುದ್ಧದ ಮಹಾ ದುರಂತವು . . . ಪಾಶ್ಚಾತ್ಯ ಲೋಕಕ್ಕೆ ಅದು ತನ್ನ ನಾಗರಿಕತೆಯನ್ನು ತನ್ನ ಸ್ವಂತ ಮೂರ್ಖತೆ ಅಥವಾ ದುಷ್ಟ ಪ್ರವೃತ್ತಿಯಿಂದ ಕಾಪಾಡಲು ಶಕವ್ತಲವ್ಲೆಂದು ತೋರಿಸಿತು. ಧ್ವಂಸದಿಂದ ಪಾಶ್ಚಾತ್ಯ ಲೋಕದ ಹುರುಪು ನಿಜವಾಗಿ ಎಂದೂ ಚೇತರಿಸಿಕೊಳ್ಳಲಿಲ್ಲ.”

ಈ ಸಂತತಿಯ ಸಂಕಟಗಳು ಒಂದು ಭಗ್ನ ಹುರುಪಿಗಿಂತ ಎಷ್ಟೋ ಹೆಚ್ಚಿನ ಸಂಗತಿಯಿಂದ ಗುರುತಿಸಲ್ಪಟ್ಟಿವೆ. ಯೇಸು ಪ್ರವಾದಿಸಿದ್ದು: “ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಮತ್ತು ಅಲ್ಲಲ್ಲಿ ಬರಗಳು ಬರುವವು, ಭೂಕಂಪಗಳು ಆಗುವವು.” ಆತನು ಸೋಂಕು ರೋಗಗಳನ್ನೂ ಮುಂತಿಳಿಸಿದನು. (ಮತ್ತಾಯ 24:7, 8; ಲೂಕ 21:11) ಅದಲ್ಲದೆ, ಸೈತಾನನ ವಿಷಯಗಳ ವ್ಯವಸ್ಥೆಯ “ಕಡೇ ದಿವಸಗಳಲ್ಲಿ” ಅನೇಕರು “ಸ್ವಾರ್ಥಚಿಂತಕರೂ ಹಣದಾಸೆಯವರೂ . . . ತಂದೆತಾಯಿಗಳಿಗೆ ಅವಿಧೇಯರೂ . . . ಸಮಾಧಾನವಾಗದವರೂ” ಆಗಿರುವರೆಂದು ಬೈಬಲು ಹೇಳುತ್ತದೆ. ಜನರು “ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವವರೂ” ಆಗಿರುವರು.—2 ತಿಮೊಥೆಯ 3:1-5.

ಬೈಬಲ್‌ ಮುಂತಿಳಿಸಿದಂತೆಯೇ, ಯುದ್ಧಗಳು, ಸೋಂಕು ರೋಗಗಳು, ಬರಗಳು, ಭೂಕಂಪಗಳು, ನೈತಿಕ ಮೌಲ್ಯಗಳಲ್ಲಿ ಅವನತಿ—ಇಂಥ ಎಲ್ಲ ಸಂಗತಿಗಳು 1914 ರಿಂದ ಒಂದು ಅಭೂತಪೂರ್ವ ಪ್ರಮಾಣದಲ್ಲಿ ಸಂಭವಿಸಿವೆ. ದೇವರ ಮತ್ತು ಮನುಷ್ಯನ ಕುಪಿತ ಶತ್ರುವು—ಪಿಶಾಚನಾದ ಸೈತಾನನು—ಸ್ವರ್ಗದಿಂದ ದೊಬ್ಬಲ್ಪಟ್ಟಿದ್ದಾನೆ ಮತ್ತು ಈಗ ತನ್ನ ಕೋಪವನ್ನು ಭೂಕ್ಷೇತ್ರಕ್ಕೆ ಮಾತ್ರ ಸೀಮಿತಿಗೊಳಿಸಬೇಕು. ಆದರೆ ಸೈತಾನನು ಇನ್ನು ಹೆಚ್ಚುಕಾಲ ಕ್ರಿಯೆನಡಿಸಲು ಬಿಡಲ್ಪಡನೆಂದೂ ಬೈಬಲು ತೋರಿಸುತ್ತದೆ. ಅರ್ಮಗೆದೋನಿನ ವರೆಗೆ ಅವನಿಗೆ “ಸ್ವಲ್ಪ ಕಾಲಾವಧಿಯು” ಮಾತ್ರ ಉಳಿದಿದ್ದು, ಆಗ ದೇವರು ಸೈತಾನನು ನಿಯಂತ್ರಿಸುವ ಈ ಲೋಕ ವ್ಯವಸ್ಥೆಯನ್ನು ನಾಶಮಾಡುತ್ತಾನೆ.

ಆ ಸ್ವಲ್ಪ ಕಾಲವು ಮುಗಿದಾಗ ಸೈತಾನನಿಗೆ ಏನು ಸಂಭವಿಸಲಿದೆ? ಅಪೊಸ್ತಲ ಯೋಹಾನನು ಬರೆದದ್ದು: “ಆಗ ಒಬ್ಬ ದೇವದೂತನು ಅಧೋಲೋಕದ ಬೀಗದ ಕೈಯನ್ನೂ ದೊಡ್ಡ ಸರಪಣಿಯನ್ನೂ ಕೈಯಲ್ಲಿ ಹಿಡಿದುಕೊಂಡು ಪರಲೋಕದಿಂದ ಇಳಿದು ಬರುವದನ್ನು ಕಂಡೆನು. ಅವನು ಪಿಶಾಚನೂ ಸೈತಾನನೂ ಆಗಿರುವ ಪುರಾತನಸರ್ಪನೆಂಬ ಘಟಸರ್ಪನನ್ನು ಹಿಡಿದು ಸಾವಿರ ವರುಷ ಬಂಧನದಲ್ಲಿಟ್ಟನು. . . . ಅವನನ್ನು ಅಧೋಲೋಕದಲ್ಲಿ ದೊಬ್ಬಿ ಬಾಗಿಲು ಮುಚ್ಚಿ ಅದಕ್ಕೆ ಮುದ್ರೆಹಾಕಿದನು.” (ಪ್ರಕಟನೆ 20:1-3) ನರಳಾಡುವ ಮಾನವಕುಲಕ್ಕೆ ಎಂತಹ ಉಪಶಮನ!

ರಾಜ್ಯದಾಳಿಕೆಯ ಕೆಳಗೆ ಉಲ್ಲಾಸಿಸುವುದು

ಸೈತಾನನ ಕೈಹಾಕುವಿಕೆಯು ಇಲ್ಲದಿರಲಾಗಿ, ಮಾನವ ಕಾರ್ಯಾದಿಗಳ ಪೂರ್ಣಾಧಿಕಾರವನ್ನು ಯೇಸು ಕ್ರಿಸ್ತನ ಕೈಕೆಳಗೆ ದೇವರ ರಾಜ್ಯವು ತೆಗೆದುಕೊಳ್ಳುವುದು. ಭೂಮಿಯಲ್ಲಿ ಅನೇಕಾನೇಕ ಸರಕಾರಗಳಿರುವ ಬದಲಿಗೆ, ಒಂದೇ ಒಂದು ಸ್ವರ್ಗೀಯ ಸರಕಾರವು ಇಡೀ ಭೂಗ್ರಹವನ್ನು ಆಳಲಿಕ್ಕಾಗಿ ಉಳಿಯುವುದು. ಇನ್ನು ಮುಂದೆ ಯುದ್ಧವಿರದು ಮತ್ತು ಎಲ್ಲೆಲ್ಲಿಯೂ ಶಾಂತಿಯು ನೆಲೆಸುವುದು. ದೇವರ ರಾಜ್ಯದ ಆಳಿಕೆಯ ಕೆಳಗೆ ಎಲ್ಲರೂ ಪ್ರೀತಿಯ ಭ್ರಾತೃತ್ವದಲ್ಲಿ ಒಂದುಗೂಡಿ ಜೀವಿಸುವರು.—ಕೀರ್ತನೆ 72:7, 8; 133:1; ದಾನಿಯೇಲ 2:44.

ಯೇಸು ಯಾವ ರೀತಿಯ ಅಧಿಪತಿಯಾಗಿ ಪರಿಣಮಿಸುವನು? ಆತನು ಭೂಮಿಯಲ್ಲಿದ್ದಾಗ ಜನರಿಗಾಗಿ ಆಳವಾದ ಪ್ರೀತಿಯನ್ನು ಆತನು ಪ್ರದರ್ಶಿಸಿದನು. ಹಸಿದವರಿಗೆ ಯೇಸು ಕರುಣೆಯಿಂದ ಉಣಿಸಿದನು. ರೋಗಿಗಳನ್ನು ವಾಸಿಮಾಡಿದನು ಮತ್ತು ಕುರುಡರಿಗೆ ದೃಷ್ಟಿಯನ್ನು, ಮೂಕರಿಗೆ ಬಾಯಿಯನ್ನು, ಅಂಗವಿಕಲರಿಗೆ ಅಂಗ ಸ್ವಸ್ಥತೆಯನ್ನು ಕೊಟ್ಟನು. ಯೇಸು ಸತ್ತವರನ್ನು ಸಹ ಪುನಃ ಜೀವಿತರಾಗಿ ಮಾಡಿದನು! (ಮತ್ತಾಯ 15:30-38; ಮಾರ್ಕ 1:34; ಲೂಕ 7:11-17) ಆ ಅದ್ಭುತಗಳು ಅರಸನೋಪಾದಿ ಆತನು ಇನ್ನೂ ಮಾಡಲಿರುವ ಆಶ್ಚರ್ಯಕರ ವಿಷಯಗಳ ಪೂರ್ವಕಿರಣಗಳಾಗಿದ್ದವು. ಉಪಕಾರಿಯಾದ ಅಂತಹ ಒಬ್ಬ ಅಧಿಪತಿಯನ್ನು ಹೊಂದುವುದು ಅದೆಷ್ಟು ಆಶ್ಚರ್ಯಕರವಾಗಿರುವುದು!

ಯೆಹೋವನ ಪರಮಾಧಿಕಾರಕ್ಕೆ ಯಾರು ಅಧೀನರಾಗುತ್ತಾರೋ ಅವರಿಂದ ಅನಂತ ಆಶೀರ್ವಾದಗಳು ಅನುಭವಿಸಲ್ಪಡುವುವು. ಶಾಸ್ತ್ರವು ವಾಗ್ದಾನಿಸುವುದು: “ಆಗ ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು, ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವದು.” (ಯೆಶಾಯ 35:5, 6) ಆ ಮಹಾ ದಿನಕ್ಕೆ ಮುಂಚಿತವಾಗಿ ಸೂಚಿಸುತ್ತಾ ಅಪೊಸ್ತಲ ಯೋಹಾನನು ಬರೆದದ್ದು: “ಇದಲ್ಲದೆ ಸಿಂಹಾಸನದೊಳಗಿಂದ ಬಂದ ಮಹಾ ಶಬ್ದವು ನನಗೆ ಕೇಳಿಸಿತು. ಅದು—ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:3, 4.

ತನ್ನ ಮಗನಾದ ಯೇಸು ಕ್ರಿಸ್ತನ ಮುಖಾಂತರ ಯೆಹೋವ ದೇವರ ಆಳಿಕ್ವೆಯಿಂದ ಅನುಗ್ರಹಿಸಲ್ಪಡುವ ಆನಂದಗಳು, ಪಿಶಾಚನಾದ ಸೈತಾನನಿಂದ ಆಳಲ್ಪಡುವ ಪ್ರಚಲಿತ ವಿಷಯಗಳ ವ್ಯವಸ್ಥೆಯಲ್ಲಿ ನಾವು ಅನುಭವಿಸಿದಿರ್ದಬಹುದಾದ ಯಾವುದೆ ಕಷ್ಟಾನುಭವಕ್ಕಾಗಿ ಉದಾರವಾಗಿ ಪರಿಹಾರ ಕೊಡುವುದು. ದೇವರ ವಾಗ್ದತ್ತ ಹೊಸ ವ್ಯವಸ್ಥೆಯಲ್ಲಿ, ‘ಆಳುತ್ತಿರುವವರು ನಿಜವಾಗಿ ಯಾರು?’ ಎಂದು ಜನರು ಕುತೂಹಲಪಡರು. (2 ಪೇತ್ರ 3:13) ವಿಧೇಯ ಮಾನವರು, ಆತ್ಮ ಲೋಕದ ಪ್ರೀತಿಯುಳ್ಳ ಅಧಿಪತಿಗಳಾದ ಯೆಹೋವ ಮತ್ತು ಕ್ರಿಸ್ತನ ಭೂ ಆದಿಪತ್ಯದಲ್ಲಿ ಸಂತೋಷಿತರೂ ಸುರಕ್ಷಿತರೂ ಆಗಿರುವರು. ಅವರ ಪ್ರಜೆಗಳೊಳಗೆ ಇರುವಂತಹ ನಿರೀಕ್ಷೆಯನ್ನು ಏಕೆ ಅವಲಂಬಿಸಬಾರದು?

[ಪುಟ 7 ರಲ್ಲಿರುವ ಚಿತ್ರ]

ದೇವರ ರಾಜ್ಯದ ಐಹಿಕ ಆಧಿಪತ್ಯದಲ್ಲಿ ಮಾನವಕುಲವು ಸುರಕ್ಷಿತವಾಗಿರುವುದು

[ಪುಟ 4 ರಲ್ಲಿರುವ ಚಿತ್ರ ಕೃಪೆ]

NASA photo

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ