ಸರ್ಪನ ಸಂತಾನ—ಹೇಗೆ ಬಯಲುಮಾಡಲ್ಪಟ್ಟಿದೆ?
“ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು.”—ಆದಿಕಾಂಡ 3:15.
1. (ಎ) ಯೆಹೋವನು ಏಕೆ ಸಂತುಷ್ಟ ದೇವರಾಗಿದ್ದಾನೆ? (ಬಿ) ತನ್ನ ಹರ್ಷದಲ್ಲಿ ಪಾಲಿಗರಾಗಲು ನಾವು ಶಕ್ತರಾಗುವಂತೆ ಆತನು ಏನು ಮಾಡಿದ್ದಾನೆ?
ಯೆಹೋವನು ಸಮಂಜಸವಾದ ಕಾರಣದಿಂದ ಸಂತುಷ್ಟ ದೇವರಾಗಿದ್ದಾನೆ. ಆತನು ಒಳ್ಳೆಯದಾಗಿರುವ ವಿಷಯಗಳ ಅತ್ಯಂತ ಮಹಾನ್ ಹಾಗೂ ಅಗ್ರಗಣ್ಯ ದಾತನು, ಮತ್ತು ಆತನ ಉದ್ದೇಶಗಳ ನೆರವೇರಿಕೆಯನ್ನು ಭಂಗಗೊಳಿಸಬಲ್ಲ ಯಾವ ವಿಷಯವೂ ಇರುವುದಿಲ್ಲ. (ಯೆಶಾಯ 55:10, 11; 1 ತಿಮೊಥೆಯ 1:11; ಯಾಕೋಬ 1:17) ತನ್ನ ಹರ್ಷವನ್ನು ತನ್ನ ಸೇವಕರು ಹಂಚಿಕೊಳ್ಳಬೇಕೆಂದು ಆತನು ಬಯಸುತ್ತಾನೆ, ಮತ್ತು ಹಾಗೆ ಮಾಡಲು ಆತನು ಅವರಿಗೆ ಸಮಂಜಸವಾದ ಕಾರಣಗಳನ್ನು ಒದಗಿಸುತ್ತಾನೆ. ಹೀಗೆ, ಮಾನವ ಇತಿಹಾಸದಲ್ಲಿನ ಅತ್ಯಂತ ಕರಾಳ ಕ್ಷಣಗಳಲ್ಲೊಂದರಲ್ಲಿ—ಏದೆನ್ನಲ್ಲಿ ನಡೆದ ದಂಗೆ—ಭವಿಷ್ಯತ್ತಿನ ಕಡೆಗೆ ನಿರೀಕ್ಷೆಯಿಂದ ನೋಡುವಂತೆ ನಮಗೆ ಆತನು ಆಧಾರವನ್ನು ಒದಗಿಸಿದನು.—ರೋಮಾಪುರ 8:19-21.
2. ಏದೆನ್ನಲ್ಲಿನ ದಂಗೆಕೋರರ ಮೇಲೆ ನ್ಯಾಯತೀರ್ಪನ್ನು ವಿಧಿಸುವಾಗ, ಯೆಹೋವನು ಆದಾಮ ಹವ್ವರ ಮಕ್ಕಳಿಗೆ ನಿರೀಕ್ಷೆಗಾಗಿ ಒಂದು ಆಧಾರವನ್ನು ಹೇಗೆ ಒದಗಿಸಿದನು?
2 ಯೆಹೋವನ ಆತ್ಮ ಪುತ್ರರಲ್ಲಿ ಒಬ್ಬನು, ದೇವರ ವಿರುದ್ಧ ಪ್ರತಿಭಟಿಸುವ ಹಾಗೂ ಮಿಥ್ಯಾಪವಾದ ಹೊರಿಸುವ ಮೂಲಕ, ಆಗ ತಾನೇ ತನ್ನನ್ನು ಪಿಶಾಚನಾದ ಸೈತಾನನನ್ನಾಗಿ ಮಾಡಿಕೊಂಡಿದ್ದನು. ಪ್ರಥಮ ಮಾನವರು, ಹವ್ವಳು ಮತ್ತು ಅನಂತರ ಆದಾಮನು ಅವನ ಪ್ರಭಾವಕ್ಕೆ ಒಳಗಾಗಿ, ಸ್ಪಷ್ಟವಾಗಿ ತಿಳಿಸಲ್ಪಟ್ಟಿದ್ದ ಯೆಹೋವನ ನಿಯಮವನ್ನು ಉಲ್ಲಂಘಿಸಿದ್ದರು. ಅವರನ್ನು ನ್ಯಾಯವಾಗಿಯೇ ಮರಣದಂಡನೆಗೊಳಪಡಿಸಲಾಯಿತು. (ಆದಿಕಾಂಡ 3:1-24) ಆದರೂ, ಈ ದಂಗೆಕೋರರ ಮೇಲೆ ನ್ಯಾಯತೀರ್ಪನ್ನು ವಿಧಿಸುವಾಗ, ಆದಾಮ ಹವ್ವರ ಸಂತತಿಗಾಗಿ ನಿರೀಕ್ಷೆಯ ಒಂದು ಆಧಾರವನ್ನು ಯೆಹೋವನು ಒದಗಿಸಿದನು. ಯಾವ ವಿಧದಲ್ಲಿ? ಆದಿಕಾಂಡ 3:15ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಯೆಹೋವನು ಹೇಳಿದ್ದು: “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.” ಆ ಪ್ರವಾದನೆಯು, ಸಂಪೂರ್ಣ ಬೈಬಲನ್ನು ಅಷ್ಟೇ ಅಲ್ಲದೆ, ಲೋಕ ಹಾಗೂ ಯೆಹೋವನ ಸೇವಕರು—ಇಬ್ಬರನ್ನೂ—ಒಳಗೊಳ್ಳುವ ಗತಕಾಲದ ಹಾಗೂ ಪ್ರಚಲಿತ ಘಟನೆಗಳ ತಿಳಿವಳಿಕೆಗೆ ಕೀಲಿ ಕೈಯಾಗಿದೆ.
ಪ್ರವಾದನೆಯು ಅರ್ಥೈಸುವ ವಿಷಯ
3. ಆದಿಕಾಂಡ 3:15ರಲ್ಲಿ ಸೂಚಿಸಲ್ಪಟ್ಟಂತೆ, (ಎ) ಸರ್ಪನನ್ನು, (ಬಿ) “ಸ್ತ್ರೀ”ಯನ್ನು, (ಸಿ) ಸರ್ಪನ “ಸಂತಾನ”ವನ್ನು, (ಡಿ) ಸ್ತ್ರೀಯ “ಸಂತಾನ”ವನ್ನು ಗುರುತಿಸಿರಿ.
3 ಪ್ರವಾದನೆಯ ಮಹತ್ವವನ್ನು ಗಣ್ಯಮಾಡಲು, ಸ್ವತಃ ಅದರ ವಿವಿಧ ಮೂಲಾಂಶಗಳನ್ನು ಪರಿಗಣಿಸಿರಿ. ಆದಿಕಾಂಡ 3:15ರಲ್ಲಿ ಸಂಬೋಧಿಸಲ್ಪಟ್ಟವನು ಸರ್ಪನು—ಅಲ್ಪವಾದ ಹಾವಲ್ಲ ಆದರೆ ಅದನ್ನು ಬಳಸಿದ ವ್ಯಕ್ತಿ ಆಗಿದ್ದಾನೆ. (ಪ್ರಕಟನೆ 12:9) “ಸ್ತ್ರೀ” ಹವ್ವಳಲ್ಲ ಬದಲಾಗಿ, ಭೂಮಿಯ ಮೇಲಿರುವ ಆತನ ಆತ್ಮಾಭಿಷಿಕ್ತ ಸೇವಕರ ತಾಯಿಯಾದ ಯೆಹೋವನ ಸ್ವರ್ಗೀಯ ಸಂಸ್ಥೆಯಾಗಿದೆ. (ಗಲಾತ್ಯ 4:26) ಸರ್ಪನ “ಸಂತಾನ” ಸೈತಾನನ ಸಂತಾನವಾಗಿದೆ, ಅವನ ಸಂತತಿ—ದೆವ್ವಗಳು ಹಾಗೂ ಮಾನವರು ಅಷ್ಟೇ ಅಲ್ಲದೆ ಸೈತಾನನ ವಿಶಿಷ್ಟ ಗುಣಗಳನ್ನು ಪ್ರದರ್ಶಿಸುವ ಮತ್ತು ಸ್ತ್ರೀಯ “ಸಂತಾನ”ದ ಕಡೆಗೆ ಹಗೆತನ ತೋರಿಸುವ ಮಾನವ ಸಂಸ್ಥೆಗಳಾಗಿವೆ. (ಯೋಹಾನ 15:19; 17:15) ಸ್ತ್ರೀಯ “ಸಂತಾನ”ವು ಮುಖ್ಯವಾಗಿ, ಸಾ.ಶ. 29ರಲ್ಲಿ ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟಿದ್ದ ಯೇಸು ಕ್ರಿಸ್ತನಾಗಿದ್ದನು. ‘ನೀರಿನಿಂದಲೂ ಆತ್ಮನಿಂದಲೂ ಮತ್ತೆ ಹುಟ್ಟಿ’ರುವ ಮತ್ತು ಕ್ರಿಸ್ತನೊಂದಿಗೆ ಸ್ವರ್ಗೀಯ ರಾಜ್ಯದ ಬಾಧ್ಯಸ್ಥರಾಗಿರುವ 1,44,000 ಮಂದಿ, ಆ ವಾಗ್ದತ್ತ ಸಂತಾನದ ಸಹಾಯಕ ಭಾಗವಾಗಿದ್ದಾರೆ. ಇವರನ್ನು ಸಾ.ಶ. 33ರ ಪಂಚಾಶತ್ತಮದ ಸಮಯದಿಂದ, ಸ್ತ್ರೀಯ ಸಂತಾನಕ್ಕೆ ಕೂಡಿಸಲ್ಪಡಲಾರಂಭವಾಯಿತು.—ಯೋಹಾನ 3:3, 5; ಗಲಾತ್ಯ 3:16, 29.
4. ಭೂಮಿಯು, ಪಾಪಮರಣಗಳಿಂದ ಮುಕ್ತರಾದ ಜನರಿಂದ ತುಂಬಿದ ಒಂದು ಪ್ರಮೋದವನವಾಗುವ ವಿಷಯಕ್ಕೆ ಆದಿಕಾಂಡ 3:15 ಹೇಗೆ ಸಂಬಂಧಿಸುತ್ತದೆ?
4 ಯಾರ ವಂಚನೆಯು ಮಾನವಜಾತಿಯ ಪ್ರಮೋದವನದ ನಷ್ಟಕ್ಕೆ ನಡೆಸಿತೊ, ಆ ವ್ಯಕ್ತಿಯಿಂದ ಏದೆನ್ನಲ್ಲಿದ್ದ ಆ ಅಕ್ಷರಾರ್ಥಕ ಸರ್ಪವು ಒಂದು ವದನಕನೋಪಾದಿ ಬಳಸಲಾಯಿತು. ಆ ಸರ್ಪವನ್ನು ಜಾಣ್ಮೆಯಿಂದ ನಿರ್ವಹಿಸಿದ ವ್ಯಕ್ತಿಯು ಜಜ್ಜಲ್ಪಡುವ ಸಮಯಕ್ಕೆ ಆದಿಕಾಂಡ 3:15 ಮುನ್ಸೂಚಿಸಿತು. ಆಗ ಪಾಪಮರಣಗಳಿಂದ ಮುಕ್ತರಾಗಿ ಪ್ರಮೋದವನದಲ್ಲಿ ವಾಸಿಸಲು, ದೇವರ ಮಾನವ ಸೇವಕರಿಗೆ ಮಾರ್ಗವು ಪುನಃ ತೆರೆದಿರುವುದು. ಅದು ಎಂತಹ ಹರ್ಷಭರಿತ ಸಮಯವಾಗಿರುವುದು!—ಪ್ರಕಟನೆ 20:1-3; 21:1-5.
5. ಯಾವ ವಿಶಿಷ್ಟ ಗುಣಗಳು ಪಿಶಾಚನ ಆತ್ಮಿಕ ಸಂತತಿಯನ್ನು ಗುರುತಿಸುತ್ತವೆ?
5 ಏದೆನ್ನಲ್ಲಾದ ದಂಗೆಯನ್ನು ಅನುಸರಿಸಿ, ಪಿಶಾಚನಾದ ಸೈತಾನನ ಗುಣಗಳಂತಹ ವಿಶಿಷ್ಟ ಗುಣಗಳನ್ನು—ಯೆಹೋವನ ಚಿತ್ತಕ್ಕೆ ಮತ್ತು ಯೆಹೋವನನ್ನು ಆರಾಧಿಸುವವರ ಪ್ರತಿಯಾಗಿ ವಿರೋಧದೊಂದಿಗೆ ಜೊತೆಗೂಡಿ, ದಂಗೆ, ಸುಳ್ಳಾಡುವಿಕೆ, ಮಿಥ್ಯಾಪವಾದ, ಮತ್ತು ಕೊಲೆಯನ್ನು—ಪ್ರದರ್ಶಿಸಿದಂತಹ ವ್ಯಕ್ತಿಗಳು ಹಾಗೂ ಸಂಸ್ಥೆಗಳು ತಲೆದೋರಲಾರಂಭಿಸಿದವು. ಆ ವಿಶಿಷ್ಟ ಗುಣಗಳು, ಪಿಶಾಚನ ಸಂತತಿಯನ್ನು, ಅವನ ಆತ್ಮಿಕ ಮಕ್ಕಳನ್ನು ಗುರುತಿಸಿದವು. ಇವರೊಳಗೆ, ಕಾಯಿನನ ಆರಾಧನೆಯ ಬದಲು ಹೇಬೆಲನ ಆರಾಧನೆಯನ್ನು ಯೆಹೋವನು ಮೆಚ್ಚಿದಾಗ, ಹೇಬೆಲನನ್ನು ಕೊಂದ ಕಾಯಿನನು ಸೇರಿದ್ದನು. (1 ಯೋಹಾನ 3:10-12) ಯಾರ ಹೆಸರು ತಾನೇ ಅವನನ್ನು ಒಬ್ಬ ದಂಗೆಕೋರನೋಪಾದಿ ಗುರುತಿಸಿತೊ ಮತ್ತು ಯಾರು ಯೆಹೋವನಿಗೆ ವಿರುದ್ಧವಾಗಿ ಅತಿಸಾಹಸಿಯಾದ ಬೇಟೆಗಾರನೂ ರಾಜನೂ ಆದನೊ, ಆ ನಿಮ್ರೋದನು ಅವರಲ್ಲೊಬ್ಬನಾಗಿದ್ದನು. (ಆದಿಕಾಂಡ 10:9) ಇದರ ಜೊತೆಗೆ, ಬಾಬೆಲನ್ನು ಸೇರಿಸಿ—ಅಸತ್ಯದ ಮೇಲೆ ಸ್ಥಾಪಿತವಾದ ತಮ್ಮ ರಾಜ್ಯ ಪ್ರಾಯೋಜಿತ ಧರ್ಮಗಳೊಂದಿಗೆ—ಪ್ರಾಚೀನ ರಾಜ್ಯಗಳ ಒಂದು ಪರಂಪರೆಯಿತ್ತು, ಮತ್ತು ಈ ರಾಜ್ಯಗಳು ಯೆಹೋವನ ಆರಾಧಕರನ್ನು ಕ್ರೂರವಾಗಿ ಹಿಂಸಿಸಿದವು.—ಯೆರೆಮೀಯ 50:29.
“ನಿನಗೂ ಈ ಸ್ತ್ರೀಗೂ . . . ಹಗೆತನ”
6. ಯಾವ ವಿಧಗಳಲ್ಲಿ ಸೈತಾನನು ಯೆಹೋವನ ಸ್ತ್ರೀಯ ಕಡೆಗೆ ಹಗೆತನವನ್ನು ತೋರಿಸಿದ್ದಾನೆ?
6 ಈ ಎಲ್ಲ ಸಮಯದಲ್ಲಿ, ಸರ್ಪನ ಮತ್ತು ಯೆಹೋವನ ಸ್ತ್ರೀಯ ನಡುವೆ, ಪಿಶಾಚನಾದ ಸೈತಾನನ ಮತ್ತು ನಿಷ್ಠಾವಂತ ಆತ್ಮ ಜೀವಿಗಳ ಯೆಹೋವನ ಸ್ವರ್ಗೀಯ ಸಂಸ್ಥೆಯ ನಡುವೆ ಹಗೆತನವಿತ್ತು. ಅವನು ಯೆಹೋವನನ್ನು ಕೆಣಕಿದಂತೆ ಮತ್ತು ದೇವದೂತರು ತಮ್ಮ ಯೋಗ್ಯವಾದ ವಾಸಸ್ಥಾನವನ್ನು ತೊರೆಯುವಂತೆ ಅವರನ್ನು ಆಕರ್ಷಿಸುತ್ತಾ, ಯೆಹೋವನ ಸ್ವರ್ಗೀಯ ಸಂಸ್ಥೆಯನ್ನು ಭಂಗಮಾಡಲು ಪ್ರಯತ್ನಿಸಿದಂತೆ, ಸೈತಾನನ ಹಗೆತನವು ತೋರಿಸಲ್ಪಟ್ಟಿತು. (ಜ್ಞಾನೋಕ್ತಿ 27:11; ಯೂದ 6) ಇದು, ಯೆಹೋವನ ಮೂಲಕ ರವಾನಿಸಲ್ಪಟ್ಟ ದೇವದೂತ ಸಂದೇಶವಾಹಕರಿಗೆ ಅಡ್ಡವಾಗಿ ಬರುವಂತೆ ಪ್ರಯತ್ನಿಸಲು ಸೈತಾನನು ತನ್ನ ದೆವ್ವಗಳನ್ನು ಬಳಸಿದಾಗ, ಪ್ರದರ್ಶಿಸಲ್ಪಟ್ಟಿತು. (ದಾನಿಯೇಲ 10:13, 14, 20, 21) ಇದು, ಮೆಸ್ಸೀಯ ಸಂಬಂಧಿತ ರಾಜ್ಯವನ್ನು ಅದರ ಜನನದ ಸಮಯದಲ್ಲಿ ನಾಶಮಾಡಲು ಸೈತಾನನು ಪ್ರಯತ್ನಿಸಿದಾಗ, ಈ 20ನೆಯ ಶತಮಾನದಲ್ಲಿ ಗಮನಾರ್ಹವಾಗಿ ವ್ಯಕ್ತವಾಗಿತ್ತು.—ಪ್ರಕಟನೆ 12:1-4.
7. ಯೆಹೋವನ ನಿಷ್ಠಾವಂತ ದೇವದೂತರಿಗೆ ಸಾಂಕೇತಿಕ ಸರ್ಪನ ಕಡೆಗೆ ಹಗೆತನದ ಅನಿಸಿಕೆಯು ಏಕೆ ಆಯಿತು, ಆದರೂ ಯಾವ ಸಂಯಮವನ್ನು ಅವರು ತೋರಿಸಿದ್ದಾರೆ?
7 ಸಾಂಕೇತಿಕ ಸರ್ಪನ ಕಡೆಗೆ, ನಿಷ್ಠಾವಂತ ದೇವದೂತರ ಸಮೂಹವಾದ ಯೆಹೋವನ ಸ್ತ್ರೀಯ ಕಡೆಯಿಂದಲೂ ಹಗೆತನವಿತ್ತು. ಸೈತಾನನು ದೇವರ ಒಳ್ಳೆಯ ಹೆಸರಿನ ಮೇಲೆ ಮಿಥ್ಯಾಪವಾದ ಹೊರಿಸಿದ್ದನು; ದೇವದೂತರೆಲ್ಲರನ್ನು ಸೇರಿಸಿ, ದೇವರ ಬುದ್ಧಿವಂತ ಜೀವಿಗಳಲ್ಲಿ ಪ್ರತಿಯೊಂದು ಜೀವಿಯ ಸಮಗ್ರತೆಯ ಕುರಿತೂ ಅವನು ಸಂದೇಹವನ್ನು ಎಬ್ಬಿಸಿ, ದೇವರ ಕಡೆಗಿನ ಅವರ ನಿಷ್ಠೆಯನ್ನು ಉರುಳಿಸಲು ಅವನು ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದನು. (ಪ್ರಕಟನೆ 12:4ಎ) ನಿಷ್ಠಾವಂತ ದೇವದೂತರು, ಕೆರೂಬಿಯರು, ಮತ್ತು ಸೆರಾಫರಿಗೆ, ತನ್ನನ್ನು ಪಿಶಾಚನೂ ಸೈತಾನನೂ ಆಗಿ ಮಾಡಿಕೊಂಡಿದ್ದವನ ಕಡೆಗೆ ನಿಶ್ಚಯವಾಗಿಯೂ ಅಸಹ್ಯವೆನಿಸಿರಬೇಕು. ಆದರೂ, ತನ್ನ ಸ್ವಂತ ಸಮಯ ಹಾಗೂ ವಿಧದಲ್ಲಿ ವಿಷಯಗಳನ್ನು ನಿರ್ವಹಿಸುವಂತೆ ಅವರು ಯೆಹೋವನ ಮೇಲೆ ಕಾದಿರುತ್ತಾರೆ.—ಹೋಲಿಸಿ ಯೂದ 9.
ದೇವರ ಸ್ತ್ರೀಯ ಸಂತಾನದ ಕಡೆಗೆ ಶತ್ರುತ್ವ
8. ಯಾರಿಗಾಗಿ ಸೈತಾನನು ಎದುರುನೋಡುತ್ತಿದ್ದನು?
8 ಈ ನಡುವೆ, ಸರ್ಪನ ತಲೆಯನ್ನು ಜಜ್ಜಲಿರುವನೆಂದು ಯೆಹೋವನು ಹೇಳಿದ, ಸ್ತ್ರೀಯ ಮುಂತಿಳಿಸಲ್ಪಟ್ಟ ಸಂತಾನಕ್ಕಾಗಿ ಸೈತಾನನು ಎದುರುನೋಡುತ್ತಿದ್ದನು. ಬೇತ್ಲೆಹೇಮಿನಲ್ಲಿ ಜನಿಸಿದ್ದ ಯೇಸು, ‘ಕರ್ತನಾಗಿರುವ ಕ್ರಿಸ್ತನು . . . ರಕ್ಷಕ’ನಾಗಿದ್ದನೆಂದು ಸ್ವರ್ಗದಿಂದ ಬಂದ ದೇವದೂತನು ಪ್ರಕಟಿಸಿದಾಗ, ಇದು ಅವನು ಆ ಸ್ತ್ರೀಯ ಮುಂತಿಳಿಸಲ್ಪಟ್ಟ ಸಂತಾನವಾಗಲಿದ್ದನೆಂಬ ವಿಷಯದ ಬಲವಾದ ದೃಢೀಕರಣವಾಗಿತ್ತು.—ಲೂಕ 2:10, 11.
9. ಯೇಸುವಿನ ಜನನದ ನಂತರ, ಸೈತಾನನು ವಿಷಮ ಹಗೆತನವನ್ನು ಹೇಗೆ ಪ್ರದರ್ಶಿಸಿದನು?
9 ವಿಧರ್ಮಿ ಜೋಯಿಸರನ್ನು ಮೊದಲು ಯೆರೂಸಲೇಮಿನಲ್ಲಿದ್ದ ರಾಜ ಹೆರೋದನ ಬಳಿಗೆ ಮತ್ತು ಅನಂತರ ಬೇತ್ಲೆಹೇಮಿನಲ್ಲಿದ್ದ ಮನೆಗೆ—ಎಲ್ಲಿ ಅವರು ಎಳೆಯ ಹುಡುಗನಾದ ಯೇಸು ಹಾಗೂ ಅವನ ತಾಯಿಯಾದ ಮರಿಯಳನ್ನು ಕಂಡುಕೊಂಡರೊ ಅಲ್ಲಿಗೆ—ಕರೆದೊಯ್ದ, ಒಂದು ನಿಯೋಗವನ್ನು ಕೈಕೊಳ್ಳುವಂತೆ ಸೈತಾನನು ಸೆಳೆದಾಗ, ಅವನ ವಿಷಮ ಹಗೆತನವು ಬೇಗನೆ ತೋರಿಸಲ್ಪಟ್ಟಿತು. ಇದಾದ ಸ್ವಲ್ಪ ಸಮಯದಲ್ಲೇ ರಾಜ ಹೆರೋದನು, ಬೇತ್ಲೆಹೇಮ್ ಮತ್ತು ಅದರ ಸುತ್ತಮುತ್ತಲೂ ಇದ್ದ ಪಟ್ಟಣಗಳಲ್ಲಿನ ಎರಡು ವರ್ಷ ಮತ್ತು ಅದಕ್ಕಿಂತಲೂ ಕಡಿಮೆ ಪ್ರಾಯದ ಎಲ್ಲ ಹುಡುಗರ ಮರಣಕ್ಕೆ ಆಜ್ಞೆಯನ್ನಿತ್ತನು. ಇದರಲ್ಲಿ ಹೆರೋದನು ಸಂತಾನಕ್ಕಾಗಿದ್ದ ಪೈಶಾಚಿಕ ದ್ವೇಷವನ್ನು ತೋರಿಸಿದನು. ಮೆಸ್ಸೀಯನಾಗಲಿದ್ದವನನ್ನು ಕೊಲ್ಲಲು ತಾನು ಪ್ರಯತ್ನಿಸುತ್ತಿದ್ದೇನೆಂದು ಹೆರೋದನಿಗೆ ಬಹಳ ಚೆನ್ನಾಗಿ ತಿಳಿದಿತ್ತೆಂಬುದು ಸುವ್ಯಕ್ತ. (ಮತ್ತಾಯ 2:1-6, 16) ರಾಜ ಹೆರೋದನು ನೀತಿ ನಿಷ್ಠೆಗಳಿಲ್ಲದವನು, ಕೃತ್ರಿಮನು, ಮತ್ತು ಕ್ರೂರನಾಗಿದ್ದನೆಂದು ಇತಿಹಾಸವು ಸಾಕ್ಷ್ಯನೀಡುತ್ತದೆ—ನಿಜವಾಗಿಯೂ ಸರ್ಪನ ಸಂತಾನದಲ್ಲಿ ಒಬ್ಬನು.
10. (ಎ) ಯೇಸುವಿನ ದೀಕ್ಷಾಸ್ನಾನವನ್ನು ಅನುಸರಿಸಿ, ವಾಗ್ದಾನಿತ ಸಂತಾನದ ಸಂಬಂಧದಲ್ಲಿ ಯೆಹೋವನ ಉದ್ದೇಶವನ್ನು ಭಂಗಮಾಡಲು ಸೈತಾನನು ಹೇಗೆ ವೈಯಕ್ತಿಕವಾಗಿ ಪ್ರಯತ್ನಿಸಿದನು? (ಬಿ) ತನ್ನ ಗುರಿಗಳನ್ನು ಬೆನ್ನಟ್ಟುವುದರಲ್ಲಿ ಸೈತಾನನು ಯೆಹೂದಿ ಧಾರ್ಮಿಕ ಮುಖಂಡರನ್ನು ಹೇಗೆ ಬಳಸಿದನು?
10 ಸಾ.ಶ. 29ರಲ್ಲಿ ಯೇಸು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟು, ಯೇಸುವನ್ನು ತನ್ನ ಪುತ್ರನೆಂದು ಅಂಗೀಕರಿಸುತ್ತಾ ಯೆಹೋವನು ಸ್ವರ್ಗದಿಂದ ಮಾತಾಡಿದ ತರುವಾಯ, ತನ್ನ ಪುತ್ರನ ಸಂಬಂಧದಲ್ಲಿ ಯೆಹೋವನ ಉದ್ದೇಶವನ್ನು ಭಂಗಮಾಡಲು ಪ್ರಯತ್ನಿಸುತ್ತಾ, ಯೇಸು ಪ್ರಲೋಭನೆಗೆ ಒಳಗಾಗುವಂತೆ ಮಾಡಲು ಸೈತಾನನು ಪದೇ ಪದೇ ಪ್ರಯತ್ನಿಸಿದನು. (ಮತ್ತಾಯ 4:1-10) ಅದರಲ್ಲಿ ವಿಫಲನಾಗುತ್ತಾ, ತನ್ನ ಗುರಿಗಳನ್ನು ಸಾಧಿಸಲು ಅವನು ಮಾನವ ನಿಯೋಗಿಗಳ ಇನ್ನೂ ಹೆಚ್ಚಿನ ಬಳಕೆಯನ್ನು ಆಶ್ರಯಿಸಿದನು. ಯೇಸುವಿನ ಹೆಸರುಗೆಡಿಸುವುದಕ್ಕೆ ಪ್ರಯತ್ನಿಸಲು ಉಪಯೋಗಿಸಲ್ಪಟ್ಟವರಲ್ಲಿ, ಕಪಟಿಗಳಾದ ಧಾರ್ಮಿಕ ಮುಖಂಡರು ಸೇರಿದ್ದರು. ಸ್ವತಃ ಸೈತಾನನಿಂದ ಬಳಸಲ್ಪಟ್ಟ ರೀತಿಯ ಉಪಾಯ—ಸುಳ್ಳುಗಳು ಹಾಗೂ ಮಿಥ್ಯಾಪವಾದ—ಗಳನ್ನು ಅವರು ಪ್ರಯೋಗಿಸಿದರು. ಯೇಸು ಒಬ್ಬ ಪಾರ್ಶ್ವವಾಯು ಪೀಡಿತನಿಗೆ, “ಧೈರ್ಯವಾಗಿರು, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ,” ಎಂದು ಹೇಳಿದಾಗ, ಆ ಮನುಷ್ಯನು ನಿಶ್ಚಯವಾಗಿಯೂ ವಾಸಿಮಾಡಲ್ಪಟ್ಟಿದ್ದನೊ ಇಲ್ಲವೊ ಎಂಬುದನ್ನು ನೋಡಲು ಕಾಯದೆ, ಶಾಸ್ತ್ರಿಗಳು ಯೇಸುವನ್ನು ಒಬ್ಬ ದೇವದೂಷಕನೆಂದು ತೀರ್ಮಾನಿಸಿದರು. (ಮತ್ತಾಯ 9:2-7) ಯೇಸು ಜನರನ್ನು ಸಬ್ಬತ್ ದಿನದಂದು ವಾಸಿಮಾಡಿದಾಗ, ಅವನನ್ನು ಸಬ್ಬತ್ ನಿಯಮದ ಉಲ್ಲಂಘನೆ ಮಾಡುವವನೋಪಾದಿ ಫರಿಸಾಯರು ಆಪಾದಿಸಿದರು ಮತ್ತು ಅವನನ್ನು ನಾಶಮಾಡಲು ತಮ್ಮೊಳಗೆ ಚರ್ಚಿಸಿದರು. (ಮತ್ತಾಯ 12:9-14; ಯೋಹಾನ 5:1-18) ಯೇಸು ದೆವ್ವಗಳನ್ನು ಬಿಡಿಸಿದಾಗ, ಅವನು “ದೆವ್ವಗಳ ಒಡೆಯನಾದ ಬೆಲ್ಜೆಬೂಲ”ನೊಂದಿಗೆ ಸಾಹಚರ್ಯದಲ್ಲಿದ್ದನೆಂದು ಫರಿಸಾಯರು ಆರೋಪಿಸಿದರು. (ಮತ್ತಾಯ 12:22-24) ಲಾಜರನು ಸತ್ತವರಿಂದ ಎಬ್ಬಿಸಲ್ಪಟ್ಟ ತರುವಾಯ, ಜನರಲ್ಲಿ ಅನೇಕರು ಯೇಸುವಿನಲ್ಲಿ ನಂಬಿಕೆಯನ್ನಿಟ್ಟರು, ಆದರೆ ಮಹಾ ಯಾಜಕರು ಮತ್ತು ಫರಿಸಾಯರು ಅವನನ್ನು ಕೊಲ್ಲಲು ಪುನಃ ತಮ್ಮೊಳಗೆ ಚರ್ಚಿಸಿದರು.—ಯೋಹಾನ 11:47-53.
11. ಯೇಸುವಿನ ಮರಣಕ್ಕೆ ಮೂರು ದಿನಗಳ ಮುಂಚಿತವಾಗಿ, ಯಾರನ್ನು ಅವನು ಸರ್ಪನ ಸಂತಾನದ ಒಂದು ಭಾಗದೋಪಾದಿ ಗುರುತಿಸಿದನು, ಮತ್ತು ಏಕೆ?
11 ಅವರು ಸಂಚು ನಡೆಸುತ್ತಿದ್ದರೆಂದು ಯೇಸುವಿಗೆ ಚೆನ್ನಾಗಿ ತಿಳಿದಿತ್ತಾದರೂ, ಸಾ.ಶ. 33ರ ನೈಸಾನ್ 11ರಂದು ಅವನು ಯೆರೂಸಲೇಮಿನಲ್ಲಿದ್ದ ದೇವಾಲಯದ ಕ್ಷೇತ್ರದೊಳಗೆ ನೇರವಾಗಿ ಭಯರಹಿತನಾಗಿ ಹೋಗಿ, ಅಲ್ಲಿ ಅವರ ಮೇಲೆ ಸಾರ್ವಜನಿಕವಾಗಿ ತೀರ್ಪನ್ನು ವಿಧಿಸಿದನು. ಒಂದು ಗುಂಪಿನೋಪಾದಿ, ಶಾಸ್ತ್ರಿಗಳು ಮತ್ತು ಫರಿಸಾಯರು ತಾವು ಯಾವ ರೀತಿಯ ಜನರಾಗಿದ್ದೇವೆಂಬುದನ್ನು ಸುಸಂಗತವಾಗಿ ಪ್ರದರ್ಶಿಸಿದ್ದರು; ಆದುದರಿಂದ ಯೇಸು ಹೇಳಿದ್ದು: “ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ಪರಲೋಕರಾಜ್ಯದ ಬಾಗಲನ್ನು ಮನುಷ್ಯರ ಎದುರಿಗೆ ಮುಚ್ಚಿಬಿಡುತ್ತೀರಿ; ನೀವಂತೂ ಒಳಕ್ಕೆ ಹೋಗುವದಿಲ್ಲ, ಒಳಕ್ಕೆ ಹೋಗಬೇಕೆಂದಿರುವವರನ್ನೂ ಹೋಗಗೊಡಿಸುವದಿಲ್ಲ.” “ಹಾವುಗಳೇ, ಸರ್ಪಜಾತಿಯವರೇ, ನರಕದಂಡನೆಗೆ ಹೇಗೆ ತಪ್ಪಿಸಿಕೊಂಡೀರಿ?” ಎಂದು ಹೇಳುತ್ತಾ, ಅವರು ಸರ್ಪನ ಸಂತಾನದ ಒಂದು ಭಾಗವಾಗಿದ್ದರೆಂಬುದನ್ನು ಯೇಸು ಯುಕ್ತವಾಗಿ ಪ್ರಕಟಿಸಿದನು. (ಮತ್ತಾಯ 23:13, 33) ಅವನ ಭಾಷೆಯು ಆದಿಕಾಂಡ 3:15ರಲ್ಲಿರುವ ಪ್ರವಾದನೆಯನ್ನು ಪ್ರತಿಬಿಂಬಿಸುತ್ತದೆ.
12, 13. (ಎ) ತಮ್ಮ ಆತ್ಮಿಕ ತಂದೆಯು ಯಾರಾಗಿದ್ದನೆಂಬುದಕ್ಕೆ ಹೆಚ್ಚಿನ ರುಜುವಾತನ್ನು ಮುಖ್ಯ ಯಾಜಕರು ಹಾಗೂ ಶಾಸ್ತ್ರಿಗಳು ಹೇಗೆ ನೀಡಿದರು? (ಬಿ) ಯಾರು ಅವರನ್ನು ಜೊತೆಗೂಡಿದನು? (ಸಿ) ಆದಿಕಾಂಡ 3:15ರ ನೆರವೇರಿಕೆಯಲ್ಲಿ, ಸ್ತ್ರೀಯ ಸಂತಾನದ ಹಿಮ್ಮಡಿಯು ಹೇಗೆ ಕಚ್ಚಲ್ಪಟ್ಟಿತು?
12 ಯೇಸುವಿನ ಮಾತುಗಳನ್ನು ಕೇಳಿದ ತರುವಾಯ, ಅವರು ದೇವರಿಂದ ಕರುಣೆಯನ್ನು ಬೇಡುವಷ್ಟರ ಮಟ್ಟಿಗೆ ತೀಕ್ಷ್ಣವಾದ ಪರಿತಾಪವನ್ನು ಪಟ್ಟರೊ? ತಮ್ಮ ದುಷ್ಟತನದ ವಿಷಯವಾಗಿ ಅವರು ಪಶ್ಚಾತ್ತಾಪಪಟ್ಟರೊ? ಇಲ್ಲ! ಮಾರ್ಕ 14:1 ವರದಿಸುವುದೇನೆಂದರೆ, ಮರುದಿನವೇ ಮಹಾ ಯಾಜಕನ ಅಂಗಳದಲ್ಲಿ ನಡೆದ ಒಂದು ಕೂಟದಲ್ಲಿ, “ಮಹಾ [“ಮುಖ್ಯ,” NW] ಯಾಜಕರೂ ಶಾಸ್ತ್ರಿಗಳೂ ಯೇಸುವನ್ನು ಉಪಾಯದಿಂದ ಹಿಡಿದು ಕೊಲ್ಲುವದಕ್ಕೆ ಮಾರ್ಗವನ್ನು ಹುಡುಕುತ್ತಿದ್ದರು.” ಯಾರನ್ನು ಯೇಸು ಈ ಮೊದಲು ಒಬ್ಬ ಕೊಲೆಗಾರನೆಂಬುದಾಗಿ ವರ್ಣಿಸಿದ್ದನೊ, ಆ ಸೈತಾನನ ಕ್ರೂರ ಮನೋಭಾವವನ್ನು ಪ್ರದರ್ಶಿಸಲು ಅವರು ಮುಂದುವರಿದರು. (ಯೋಹಾನ 8:44) ಯಾರನ್ನು ಒಬ್ಬ ಧರ್ಮಭ್ರಷ್ಟನಾಗುವಂತೆ ಸೈತಾನನು ಪ್ರೇರಿಸಿದನೊ, ಆ ಯೂದ ಇಸ್ಕಾರಿಯೋತನಿಂದ ಅವರು ಬೇಗನೆ ಜೊತೆಗೂಡಲ್ಪಟ್ಟರು. ಯೂದನು ದೇವರ ಸ್ತ್ರೀಯ ನಿರ್ದೋಷ ಸಂತಾನವನ್ನು ತೊರೆದು, ಸರ್ಪನ ಸಂತಾನವನ್ನು ಜೊತೆಗೂಡಿದನು.
13 ನೈಸಾನ್ 14ರ ಬೆಳಗ್ಗೆ ಬೇಗನೆ, ಯೆಹೂದಿ ಧಾರ್ಮಿಕ ನ್ಯಾಯಾಲಯದ ಸದಸ್ಯರು ಯೇಸುವನ್ನು ಒಬ್ಬ ಕೈದಿಯೋಪಾದಿ ರೋಮನ್ ಅಧಿಪತಿಯ ಬಳಿಗೆ ಕೊಂಡೊಯ್ದರು. ಈ ಸಮಯದಲ್ಲಿ ಯೇಸುವನ್ನು ಮರಣಕಂಭಕ್ಕೆ ಏರಿಸುವಂತೆ ಗಟ್ಟಿಯಾಗಿ ಕೂಗಿದವರಲ್ಲಿ ಮುಂದಾಳುತನ ವಹಿಸಿದವರು ಮುಖ್ಯ ಯಾಜಕರಾಗಿದ್ದರು. ಪಿಲಾತನು “ನಿಮ್ಮ ಅರಸನನ್ನು ಶಿಲುಬೆಗೆ ಹಾಕಿಸಲೋ?” ಎಂದು ಕೇಳಿದಾಗ, “ಕೈಸರನೇ ಹೊರತು ನಮಗೆ ಬೇರೆ ಅರಸನಿಲ್ಲ” ಎಂದು ಉತ್ತರಿಸಿದವರು ಮುಖ್ಯ ಯಾಜಕರೇ ಆಗಿದ್ದರು. (ಯೋಹಾನ 19:6, 15) ನಿಶ್ಚಯವಾಗಿಯೂ, ತಾವು ಸರ್ಪನ ಸಂತಾನದ ಒಂದು ಭಾಗವಾಗಿದ್ದೇವೆಂಬುದನ್ನು ಅವರು ಪ್ರತಿಯೊಂದು ವಿಧದಲ್ಲಿ ರುಜುಪಡಿಸಿದರು. ಆದರೆ ಅವರು ಖಂಡಿತವಾಗಿಯೂ ಒಬ್ಬಂಟಿಗರಾಗಿರಲಿಲ್ಲ. ಮತ್ತಾಯ 27:24, 25ರಲ್ಲಿರುವ ಪ್ರೇರಿತ ದಾಖಲೆಯು, ಈ ವರದಿಯನ್ನು ಕೊಡುತ್ತದೆ: “ಪಿಲಾತನು . . . ನೀರು ತಕ್ಕೊಂಡು ಜನರ ಮುಂದೆ ಕೈ ತೊಳಕೊಂಡ”ನು. ಆಗ ಎಲ್ಲ ಜನರು ಹೇಳಿದ್ದು: “ಅವನನ್ನು ಕೊಲ್ಲಿಸಿದ್ದಕ್ಕೆ ನಾವೂ ನಮ್ಮ ಮಕ್ಕಳೂ ಉತ್ತರ ಕೊಡುತ್ತೇವೆ.” ಹೀಗೆ ಆ ವಂಶಾವಳಿಯ ಅನೇಕ ಯೆಹೂದ್ಯರು ತಮ್ಮನ್ನು ಸರ್ಪನ ಸಂತಾನದ ಒಂದು ಭಾಗವಾಗಿ ಗುರುತಿಸಿಕೊಂಡರು. ಆ ದಿನದ ಅಂತ್ಯದ ಮೊದಲು, ಯೇಸು ಸತ್ತಿದ್ದನು. ಸೈತಾನನು ತನ್ನ ದೃಶ್ಯ ಸಂತಾನವನ್ನು ಬಳಸುವ ಮೂಲಕ, ದೇವರ ಸ್ತ್ರೀಯ ಸಂತಾನದ ಹಿಮ್ಮಡಿಯನ್ನು ಕಚ್ಚಿದ್ದನು.
14. ಸ್ತ್ರೀಯ ಸಂತಾನದ ಹಿಮ್ಮಡಿಯ ಕಚ್ಚುವಿಕೆಯು, ಸೈತಾನನಿಗೆ ವಿಜಯವನ್ನು ಅರ್ಥೈಸಲಿಲ್ಲ ಏಕೆ?
14 ಸೈತಾನನು ಜಯಗಳಿಸಿದ್ದನೊ? ಖಂಡಿತವಾಗಿಯೂ ಇಲ್ಲ! ಯೇಸು ಕ್ರಿಸ್ತನು ಲೋಕವನ್ನು ಜಯಿಸಿದ್ದನು ಮತ್ತು ಅದರ ಪ್ರಭುವಿನ ಮೇಲೆ ಜಯಶಾಲಿಯಾಗಿದ್ದನು. (ಯೋಹಾನ 14:30, 31; 16:33) ಅವನು ಯೆಹೋವನಿಗೆ ತನ್ನ ನಿಷ್ಠೆಯನ್ನು ಮರಣದ ತನಕ ಕಾಪಾಡಿಕೊಂಡಿದ್ದನು. ಪರಿಪೂರ್ಣ ಮಾನವನೋಪಾದಿ ಅವನ ಮರಣವು, ಆದಾಮನ ಮೂಲಕ ಕಳೆದುಕೊಳ್ಳಲ್ಪಟ್ಟಿದ್ದ ಜೀವದ ಹಕ್ಕನ್ನು ಹಿಂದಿರುಗಿ ಪಡೆಯಲು ಬೇಕಾಗಿದ್ದ ಪ್ರಾಯಶ್ಚಿತ್ತ ಮೌಲ್ಯವನ್ನು ಒದಗಿಸಿತು. ಆದುದರಿಂದ, ಆ ಏರ್ಪಾಡಿನಲ್ಲಿ ನಂಬಿಕೆಯನ್ನಿಟ್ಟು, ದೇವರ ಆಜ್ಞೆಗಳಿಗೆ ವಿಧೇಯರಾಗಲಿದ್ದವರಿಗಾಗಿ ಅನಂತ ಜೀವನದ ಮಾರ್ಗವನ್ನು ಅವನು ತೆರೆದನು. (ಮತ್ತಾಯ 20:28; ಯೋಹಾನ 3:16) ಯೆಹೋವನು ಯೇಸುವನ್ನು ಸತ್ತವರಿಂದ, ಸ್ವರ್ಗದಲ್ಲಿನ ಅಮರ ಜೀವನಕ್ಕೆ ಎಬ್ಬಿಸಿದನು. ಯೆಹೋವನ ಕ್ಲುಪ್ತ ಸಮಯದಲ್ಲಿ, ಯೇಸು ಸೈತಾನನನ್ನು ಅಸ್ತಿತ್ವದಲ್ಲಿ ಇರದಂತೆ ಜಜ್ಜಿಬಿಡುವನು. ಆದಿಕಾಂಡ 22:16-18ರಲ್ಲಿ, ಆ ನಿಷ್ಠಾವಂತ ಸಂತಾನದ ಮೂಲಕ ತಮ್ಮನ್ನು ಆಶೀರ್ವದಿಸಿಕೊಳ್ಳಲು ಬೇಕಾಗಿರುವ ಕ್ರಿಯೆಯನ್ನು ಕೈಗೊಳ್ಳುವ, ಭೂಮಿಯ ಸಕಲ ಕುಟುಂಬಗಳ ಮೇಲೆ ತನ್ನ ಅನುಗ್ರಹವನ್ನು ಯೆಹೋವನು ತೋರಿಸುವನೆಂದು ಮುಂತಿಳಿಸಲಾಗಿದೆ.
15. (ಎ) ಯೇಸುವಿನ ಮರಣಾನಂತರ, ಅವನ ಅಪೊಸ್ತಲರು ಸರ್ಪನ ಸಂತಾನದ ಬಯಲುಮಾಡುವಿಕೆಯನ್ನು ಹೇಗೆ ಮುಂದುವರಿಸಿದರು? (ಬಿ) ನಮ್ಮ ದಿನದ ವರೆಗೆ ಸರ್ಪನ ಸಂತಾನದಿಂದ ಯಾವ ಹೆಚ್ಚಿನ ಶತ್ರುತ್ವವು ಪ್ರದರ್ಶಿಸಲ್ಪಟ್ಟಿದೆ?
15 ಯೇಸುವಿನ ಮರಣಾನಂತರ, ಆತ್ಮಾಭಿಷಿಕ್ತ ಕ್ರೈಸ್ತರು ತಮ್ಮ ಕರ್ತನು ಮಾಡಿದ್ದಂತೆಯೇ ಸರ್ಪನ ಸಂತಾನವನ್ನು ಬಯಲುಪಡಿಸಲು ಮುಂದುವರಿದರು. ಪವಿತ್ರಾತ್ಮನ ಮೂಲಕ ಪ್ರೇರಿಸಲ್ಪಟ್ಟು, ಯಾರ ಪ್ರತ್ಯಕ್ಷತೆಯು “ಸೈತಾನನ ಮಾಟಕ್ಕನುಗುಣವಾಗಿರು”ವುದೊ, ಆ “ನಿಯಮರಾಹಿತ್ಯದ ಪುರುಷನ” (NW) ವಿರುದ್ಧವಾಗಿ ಅಪೊಸ್ತಲ ಪೌಲನು ಎಚ್ಚರಿಸಿದನು. (2 ಥೆಸಲೊನೀಕ 2:3-10) ಈ ಸಾಮೂಹಿಕ ‘ಪುರುಷನು’ ಕ್ರೈಸ್ತಪ್ರಪಂಚದ ವೈದಿಕರಾಗಿರುವುದಾಗಿ ರುಜುವಾಗಿದ್ದಾನೆ. ಸರದಿಯಾಗಿ ಸರ್ಪನ ಸಂತಾನವು, ಯೇಸು ಕ್ರಿಸ್ತನ ಹಿಂಬಾಲಕರನ್ನು ಉಗ್ರವಾಗಿ ಹಿಂಸಿಸಿತು. ಪ್ರಕಟನೆ 12:17ರಲ್ಲಿ ದಾಖಲಿಸಲ್ಪಟ್ಟ ಪ್ರವಾದನೆಯಲ್ಲಿ, ಸೈತಾನನು ನಮ್ಮ ದಿನದ ವರೆಗೆ ದೇವರ ಸ್ತ್ರೀಯ ಸಂತಾನದ ಉಳಿಕೆಯವರ ವಿರುದ್ಧ ಯುದ್ಧ ಮಾಡುವುದನ್ನು ಮುಂದುವರಿಸುವನೆಂದು ಅಪೊಸ್ತಲ ಯೋಹಾನನು ಮುಂತಿಳಿಸಿದನು. ಸಂಭವಿಸಿದ್ದು ನಿಖರವಾಗಿಯೂ ಅದೇ ಆಗಿದೆ. ಅನೇಕ ದೇಶಗಳಲ್ಲಿ ಯೆಹೋವನ ಸಾಕ್ಷಿಗಳು, ದೇವರ ರಾಜ್ಯ ಮತ್ತು ಆತನ ನೀತಿಯ ಮಾರ್ಗಗಳಿಗಾಗಿ ತಮ್ಮ ದೃಢವಾದ ನಿಲುವಿನ ಕಾರಣ, ನಿಷೇಧಿಸಲ್ಪಟ್ಟಿದ್ದಾರೆ, ಜನರ ಗುಂಪಿನ ಮೂಲಕ ಆಕ್ರಮಿಸಲ್ಪಟ್ಟಿದ್ದಾರೆ, ಸೆರೆಯಲ್ಲಿಡಲ್ಪಟ್ಟಿದ್ದಾರೆ, ಅಥವಾ ಕೂಟ ಶಿಬಿರಗಳಲ್ಲಿ ಹಾಕಲ್ಪಟ್ಟಿದ್ದಾರೆ.
ಸರ್ಪನ ಸಂತಾನದ ಆಧುನಿಕ ದಿನದ ಬಯಲುಮಾಡುವಿಕೆ
16. ಆಧುನಿಕ ಸಮಯಗಳಲ್ಲಿ, ಯಾರು ಸರ್ಪನ ಸಂತಾನದ ಭಾಗವಾಗಿರುವುದಾಗಿ ಬಯಲುಮಾಡಲ್ಪಟ್ಟಿದ್ದಾರೆ, ಮತ್ತು ಹೇಗೆ?
16 ಯೇಸು ಕ್ರಿಸ್ತನ ಅನುಕರಣೆಯಲ್ಲಿ, ಸತ್ಯ ಕ್ರೈಸ್ತರು ಸರ್ಪನ ಹಾಗೂ ಅವನ ಸಂತಾನದ ತಮ್ಮ ಭಯರಹಿತ ಬಯಲುಮಾಡುವಿಕೆಯಲ್ಲಿ ನಿಧಾನರಾಗಿರುವುದಿಲ್ಲ. 1917ರಲ್ಲಿ ಬೈಬಲ್ ವಿದ್ಯಾರ್ಥಿಗಳು—ಹಾಗೆಂದು ಯೆಹೋವನ ಸಾಕ್ಷಿಗಳು ಆಗ ವಿಧಿತರಾಗಿದ್ದು—ದ ಫಿನಿಷ್ಡ್ ಮಿಸ್ಟರಿ ಎಂಬ ಪುಸ್ತಕವನ್ನು ಪ್ರಕಾಶಿಸಿದರು, ಅದರಲ್ಲಿ ಅವರು ಕ್ರೈಸ್ತಪ್ರಪಂಚದ ವೈದಿಕವರ್ಗದವರ ಕಪಟವನ್ನು ಬಹಿರಂಗಪಡಿಸಿದರು. ಇದು, 1924ರಲ್ಲಿ ಎಕ್ಲೀಸಿಆ್ಯಸ್ಟಿಕ್ಸ್ ಇಂಡೈಟೆಡ್ ಎಂಬ ಶೀರ್ಷಿಕೆಯ ಮುದ್ರಿತ ಗೊತ್ತುವಳಿಯ ಮೂಲಕ ಅನುಸರಿಸಲ್ಪಟ್ಟಿತು. ಐದು ಕೋಟಿ ಪ್ರತಿಗಳಿಗೆ ಅಂತಾರಾಷ್ಟ್ರೀಯ ವಿತರಣೆ ನೀಡಲಾಯಿತು. 1937ರಲ್ಲಿ, ಆ ಸಮಯದಲ್ಲಿ ವಾಚ್ ಟವರ್ ಸೊಸೈಟಿಯ ಅಧ್ಯಕ್ಷರಾಗಿದ್ದ ಜೆ. ಎಫ್. ರದರಫರ್ಡ್, “ಬಯಲುಗೊಳಿಸಲ್ಪಟ್ಟಿದ್ದು” ಮತ್ತು “ಧರ್ಮ ಹಾಗೂ ಕ್ರೈಸ್ತತ್ವ” ಎಂಬ ಶೀರ್ಷಿಕೆಯ ಉಪನ್ಯಾಸಗಳಲ್ಲಿ, ಸೈತಾನನ ಸಂತಾನದ ಶಕ್ತಿಶಾಲಿ ಬಯಲುಮಾಡುವಿಕೆಗಳನ್ನು ಮಾಡಿದರು. ಮುಂದಿನ ವರ್ಷ, ಹಲವಾರು ದೇಶಗಳಲ್ಲಿನ 50 ಅಧಿವೇಶನಾ ಸಭಿಕರು ಆಲಿಸಿದಂತೆ, ಇಂಗ್ಲೆಂಡ್ನ ಲಂಡನ್ನಿಂದ ರೇಡಿಯೊಟೆಲಿಫೋನಿನ ಮೂಲಕ, “ನಿಜತ್ವಗಳನ್ನು ಎದುರಿಸಿರಿ” ಎಂಬ ಉಪನ್ಯಾಸವನ್ನು ಅವರು ನೀಡಿದರು. ಒಂದು ತಿಂಗಳಿನ ತರುವಾಯ, “ಸರ್ವಾಧಿಕಾರ ತತ್ವ ಅಥವಾ ಸ್ವಾತಂತ್ರ್ಯ” ಎಂಬ ಭಾಷಣವನ್ನು, ಅಮೆರಿಕದಲ್ಲಿನ ಒಂದು ವಿಸ್ತಾರವಾದ ರೇಡಿಯೊ ನೆಟ್ವರ್ಕ್ ಸಾಗಿಸಿತು. ಇವು ವೈರಿಗಳು (ಇಂಗ್ಲಿಷ್) ಮತ್ತು ಧರ್ಮ (ಇಂಗ್ಲಿಷ್) ಎಂಬಂಥ ಪುಸ್ತಕಗಳಲ್ಲಿ ಹಾಗೂ ಅನಾವರಣಗೊಳಿಸಿದ್ದು (ಇಂಗ್ಲಿಷ್) ಎಂಬ ಪುಸ್ತಿಕೆಯಲ್ಲಿನ ಶಕ್ತಿಶಾಲಿ ವಿಷಯ ನಿರೂಪಣೆಗಳ ಮೂಲಕ ಅನುಬಂಧಿಸಲ್ಪಟ್ಟವು. 1920ಗಳಂದಿನಿಂದ ಪ್ರಕಾಶಿಸಲ್ಪಟ್ಟ ವಿಷಯದೊಂದಿಗೆ ಹೊಂದಿಕೆಯಲ್ಲಿ, ಈಗ 65 ಭಾಷೆಗಳಲ್ಲಿ ಮುದ್ರಿಸಲ್ಪಟ್ಟಿರುವ ಪ್ರಕಟನೆ—ಅದರ ಪರಮಾವಧಿಯು ಹತ್ತಿರ!a ಎಂಬ ಪುಸ್ತಕವು, ಭ್ರಷ್ಟ ರಾಜಕೀಯ ಶಾಸಕರನ್ನು ಮತ್ತು ಅತ್ಯಾಶೆಯ, ನೀತಿ ನಿಯಮಗಳಿಲ್ಲದ ವಾಣಿಜ್ಯ ವರ್ತಕರನ್ನು, ಸರ್ಪನ ದೃಶ್ಯ ಸಂತಾನದ ಅಗ್ರಗಣ್ಯ ಸದಸ್ಯರಲ್ಲಿ ಇರುವವರಾಗಿ ಗುರುತಿಸುತ್ತದೆ. ರಾಜಕೀಯ ನಾಯಕರು, ತಮ್ಮ ಪ್ರಜೆಗಳನ್ನು ತಪ್ಪುದಾರಿಗೆ ನಡೆಸಲು ಅಸತ್ಯವನ್ನು ಆಶ್ರಯಿಸುವುದನ್ನು, ರಕ್ತದ ಪಾವಿತ್ರ್ಯಕ್ಕೆ ಯಾವ ಗೌರವವನ್ನು ತೋರಿಸದೆ ಇರುವುದನ್ನು, ಮತ್ತು ಯೆಹೋವನ ಸೇವಕರನ್ನು ಪೀಡಿಸುವುದನ್ನು (ಹೀಗೆ ದೇವರ ಸ್ತ್ರೀಯ ಸಂತಾನಕ್ಕೆ ದ್ವೇಷವನ್ನು ತೋರಿಸುತ್ತಾ), ಒಂದು ರೂಢಿಯನ್ನಾಗಿ ಮಾಡುವಾಗ, ಅವರು ತಮ್ಮನ್ನು ಖಂಡಿತವಾಗಿಯೂ ಸರ್ಪನ ಸಂತಾನದ ಒಂದು ಭಾಗವಾಗಿ ಗುರುತಿಸಿಕೊಳ್ಳುತ್ತಾರೆ. ಮನಸ್ಸಾಕ್ಷಿಯ ಯಾವುದೇ ಅಳುಕುಗಳಿಲ್ಲದೆ, ಆರ್ಥಿಕ ಲಾಭಕ್ಕಾಗಿ ಸುಳ್ಳು ಹೇಳುವ ಮತ್ತು ರೋಗವನ್ನುಂಟುಮಾಡುವವು ಎಂದು ವಿಧಿತವಾಗಿರುವ ಉತ್ಪಾದನೆಗಳನ್ನು ತಯಾರಿಸುವ ಅಥವಾ ಮಾರಾಟಮಾಡುವ ವಾಣಿಜ್ಯ ವರ್ತಕರ ವಿಷಯದಲ್ಲಿಯೂ ಇದು ಸತ್ಯವಾಗಿದೆ.
17. ಈ ಲೋಕದ ವ್ಯವಸ್ಥೆಯಿಂದ ಹೊರಗೆಬರಬಹುದಾದ ಪ್ರಖ್ಯಾತ ವ್ಯಕ್ತಿಗಳಿಗೆ ಯಾವ ಅವಕಾಶವು ಇನ್ನೂ ತೆರೆದಿದೆ?
17 ಲೌಕಿಕ ಧರ್ಮ, ರಾಜಕೀಯ, ಅಥವಾ ವಾಣಿಜ್ಯದಿಂದ ಕಳಂಕಿತಗೊಂಡು ಪ್ರತಿಯೊಬ್ಬ ವ್ಯಕ್ತಿಯು, ಅಂತಿಮವಾಗಿ ಸರ್ಪನ ಸಂತಾನದ ಭಾಗದೋಪಾದಿ ಎಣಿಸಲ್ಪಡನು. ಈ ಪುರುಷರು ಹಾಗೂ ಸ್ತ್ರೀಯರಲ್ಲಿ ಕೆಲವರು ಯೆಹೋವನ ಸಾಕ್ಷಿಗಳನ್ನು ಮೆಚ್ಚತೊಡಗಿದ್ದಾರೆ. ಅವರು ಸಾಕ್ಷಿಗಳಿಗೆ ಸಹಾಯ ಮಾಡಲು ತಮ್ಮ ಪ್ರಭಾವವನ್ನು ಉಪಯೋಗಿಸುತ್ತಾರೆ, ಮತ್ತು ಕಾಲಕ್ರಮದಲ್ಲಿ ಸತ್ಯ ಆರಾಧನೆಯನ್ನೂ ಅಂಗೀಕರಿಸುತ್ತಾರೆ. (ಹೋಲಿಸಿ ಅ. ಕೃತ್ಯಗಳು 13:7, 12; 17:32-34.) ಅಂತಹವರೆಲ್ಲರಿಗೆ, ಈ ಮನವಿಯು ನೀಡಲಾಗಿದೆ: “ಆದದರಿಂದ ಅರಸುಗಳಿರಾ, ವಿವೇಕಿಗಳಾಗಿರ್ರಿ; ದೇಶಾಧಿಪತಿಗಳಿರಾ, ಬುದ್ಧಿಮಾತುಗಳಿಗೆ ಕಿವಿಗೊಡಿರಿ. ಯೆಹೋವನನ್ನು ಭಯಭಕ್ತಿಯಿಂದ ಸೇವಿಸಿರಿ; ನಡುಗುತ್ತಾ ಉಲ್ಲಾಸಪಡಿರಿ. ಆತನ ಮಗನಿಗೆ ಮುದ್ದಿಡಿರಿ; ಇಲ್ಲವಾದರೆ ಆತನ ಕೋಪವು ಬೇಗನೆ ಪ್ರಜ್ವಲಿಸಲು ನೀವು ದಾರಿಯಲ್ಲೇ ನಾಶವಾದೀರಿ. ಆತನ ಮರೆಹೊಕ್ಕವರೆಲ್ಲರು ಧನ್ಯರು.” (ಕೀರ್ತನೆ 2:10-12) ನಿಶ್ಚಯವಾಗಿಯೂ, ಅವಕಾಶದ ಬಾಗಲನ್ನು ಸ್ವರ್ಗೀಯ ನ್ಯಾಯಾಧೀಶನು ಮುಚ್ಚುವ ಮೊದಲು, ಯೆಹೋವನ ಅನುಗ್ರಹವನ್ನು ಬಯಸುವವರೆಲ್ಲರಿಗೆ ಈಗ ಕ್ರಿಯೆಗೈಯುವುದು ಅತ್ಯಾವಶ್ಯಕವಾಗಿದೆ!
18. ಸ್ತ್ರೀಯ ಸಂತಾನದ ಭಾಗವಾಗಿರದಿದ್ದರೂ, ಯಾರು ಯೆಹೋವನ ಆರಾಧಕರಾಗಿದ್ದಾರೆ?
18 ಆ ಸ್ವರ್ಗೀಯ ರಾಜ್ಯದಲ್ಲಿ ಕೂಡಿರುವವರು ಮಾತ್ರ ಆ ಸ್ತ್ರೀಯ ಸಂತಾನದ ಭಾಗವಾಗಿದ್ದಾರೆ. ಇವರು ಸಂಖ್ಯೆಯಲ್ಲಿ ಕೊಂಚ ಜನರು. (ಪ್ರಕಟನೆ 7:4, 9) ಆದರೂ, ಇತರರ ಒಂದು ಮಹಾ ಸಮೂಹವಿದೆ, ಹೌದು ಯೆಹೋವನ ಆರಾಧಕರಂತೆ ಅವರಲ್ಲಿ ಲಕ್ಷಾಂತರ ಜನರು, ಪ್ರಮೋದವನ ಭೂಮಿಯ ಮೇಲೆ ಅನಂತ ಜೀವನಕ್ಕೆ ಎದುರುನೋಡುತ್ತಾರೆ. ನುಡಿ ಮತ್ತು ಕ್ರಿಯೆ—ಇವೆರಡರ—ಮೂಲಕವೂ, ಅವರು ಯೆಹೋವನ ಅಭಿಷಿಕ್ತರಿಗೆ ಹೇಳುವುದು: “ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ.”—ಜೆಕರ್ಯ 8:23.
19. (ಎ) ಯಾವ ಆಯ್ಕೆಯನ್ನು ಸಕಲ ಜನರು ಮಾಡಬೇಕು? (ಬಿ) ಅವಕಾಶವು ಇನ್ನೂ ಇರುವಾಗಲೇ ವಿವೇಕಯುತವಾಗಿ ಕ್ರಿಯೆಗೈಯಲು ವಿಶೇಷವಾಗಿ ಯಾರಿಗೆ ಶ್ರದ್ಧಾಪೂರ್ವಕವಾದ ಮನವಿಯು ಮಾಡಲ್ಪಟ್ಟಿದೆ?
19 ಸಕಲ ಮಾನವಜಾತಿಯು ಒಂದು ಆಯ್ಕೆಯನ್ನು ಮಾಡಬೇಕಾದ ಸಮಯವು ಇದಾಗಿರುತ್ತದೆ. ಅವರು ಯೆಹೋವನನ್ನು ಆರಾಧಿಸಿ, ಆತನ ಪರಮಾಧಿಕಾರವನ್ನು ಎತ್ತಿಹಿಡಿಯಲು ಬಯಸುತ್ತಾರೊ, ಅಥವಾ ಸೈತಾನನಿಗೆ ಇಷ್ಟವಾಗುವ ವಿಷಯಗಳನ್ನು ಮಾಡುವ ಮೂಲಕ ಅವನು ತಮ್ಮ ಶಾಸಕನಾಗಿರುವಂತೆ ಅವರು ಅನುಮತಿಸುವರೊ? ಸಕಲ ರಾಷ್ಟ್ರಗಳಿಂದ ಬಂದ ಸುಮಾರು 50 ಲಕ್ಷ ಜನರು, ರಾಜ್ಯ ಬಾಧ್ಯಸ್ಥರಾದ, ಸ್ತ್ರೀಯ ಸಂತಾನದ ಉಳಿಕೆಯವರ ಸಹವಾಸದಲ್ಲಿ, ಯೆಹೋವನ ಪಕ್ಷದಲ್ಲಿ, ತಮ್ಮ ನಿಲುವನ್ನು ತೆಗೆದುಕೊಂಡಿದ್ದಾರೆ. ಇತರ ಎಂಬತ್ತು ಲಕ್ಷ ಜನರು ಅವರೊಂದಿಗೆ ಬೈಬಲನ್ನು ಅಭ್ಯಸಿಸುವುದರಲ್ಲಿ ಅಥವಾ ಅವರ ಕೂಟಗಳನ್ನು ಹಾಜರಾಗುವುದರಲ್ಲಿ ಆಸಕ್ತಿಯನ್ನು ತೋರಿಸಿದ್ದಾರೆ. ಯೆಹೋವನ ಸಾಕ್ಷಿಗಳು ಇವರೆಲ್ಲರಿಗೆ ಹೇಳುವುದು: ಅವಕಾಶದ ಬಾಗಲು ಇನ್ನೂ ತೆರೆದಿದೆ. ಯೆಹೋವನ ಪಕ್ಷದಲ್ಲಿ ನಿಮ್ಮ ನಿಲುವನ್ನು ನಿಸ್ಸಂದಿಗ್ಧವಾಗಿ ತೆಗೆದುಕೊಳ್ಳಿರಿ. ಕ್ರಿಸ್ತ ಯೇಸುವನ್ನು ವಾಗ್ದಾನಿತ ಸಂತಾನದೋಪಾದಿ ಅಂಗೀಕರಿಸಿರಿ. ಯೆಹೋವನ ದೃಶ್ಯ ಸಂಸ್ಥೆಯೊಂದಿಗೆ ಹರ್ಷಭರಿತರಾಗಿ ಸಹವಸಿಸಿರಿ. ಅರಸನಾದ ಕ್ರಿಸ್ತ ಯೇಸುವಿನ ಆಳಿಕೆಯ ಮುಖಾಂತರ ಆತನು ಒದಗಿಸಲಿರುವ ಸಕಲ ಆಶೀರ್ವಾದಗಳಲ್ಲಿ ನೀವು ಪಾಲಿಗರಾಗುವಂತಾಗಲಿ.
[ಪಾದಟಿಪ್ಪಣಿ]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
ನಿಮಗೆ ನೆನಪಿದೆಯೇ?
◻ ಆದಿಕಾಂಡ 3:15ರಲ್ಲಿ ಸೂಚಿಸಲ್ಪಟ್ಟ ಸರ್ಪನು ಯಾರು? ಮತ್ತು ಸ್ತ್ರೀಯು ಯಾರು?
◻ ಯಾವ ವಿಶಿಷ್ಟ ಗುಣಗಳು ಸರ್ಪನ ಸಂತಾನವನ್ನು ಗುರುತಿಸುತ್ತವೆ?
◻ ಯೇಸು ಸರ್ಪನ ಸಂತಾನವನ್ನು ಹೇಗೆ ಬಯಲುಮಾಡಿದನು?
◻ ಆಧುನಿಕ ಸಮಯಗಳಲ್ಲಿ ಯಾರು ಸರ್ಪನ ಸಂತಾನದ ಭಾಗದೋಪಾದಿ ಬಯಲುಮಾಡಲ್ಪಟ್ಟಿದ್ದಾರೆ?
◻ ಸರ್ಪನ ಸಂತಾನದ ಭಾಗದೋಪಾದಿ ಪರಿಗಣಿಸಲ್ಪಡುವುದನ್ನು ತೊರೆಯಲು, ಯಾವ ಜರೂರಿಯ ಕ್ರಿಯೆಯು ಅಗತ್ಯವಾಗಿದೆ?
[ಪುಟ 10 ರಲ್ಲಿರುವ ಚಿತ್ರ]
ಯೇಸು ಕಪಟ ಧಾರ್ಮಿಕ ಮುಖಂಡರನ್ನು ಸರ್ಪನ ಸಂತಾನದ ಭಾಗವಾಗಿರುವವರಾಗಿ ಬಯಲುಮಾಡಿದನು