ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w07 8/1 ಪು. 3
  • ಆಧ್ಯಾತ್ಮಿಕತೆಯ ಅನ್ವೇಷಣೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಧ್ಯಾತ್ಮಿಕತೆಯ ಅನ್ವೇಷಣೆ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ಅನುರೂಪ ಮಾಹಿತಿ
  • ನೀವು ಭೌತಿಕ ವ್ಯಕ್ತಿನಾ ಆಧ್ಯಾತ್ಮಿಕ ವ್ಯಕ್ತಿನಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಕ್ರೈಸ್ತ ಕುಟುಂಬವು ಆತ್ಮಿಕ ವಿಷಯಗಳನ್ನು ಪ್ರಥಮವಾಗಿಡುತ್ತದೆ
    ಕಾವಲಿನಬುರುಜು—1993
  • ನಿಜ ಆಧ್ಯಾತ್ಮಿಕತೆ ನಿಮಗೆ ಹೇಗೆ ಲಭಿಸುವುದು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ಆಧ್ಯಾತ್ಮಿಕವಾಗಿ ಬೆಳೆಯುತ್ತಾ ಇರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
w07 8/1 ಪು. 3

ಆಧ್ಯಾತ್ಮಿಕತೆಯ ಅನ್ವೇಷಣೆ

“ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು” ಎಂದು ಯೇಸು ತನ್ನ ಪ್ರಸಿದ್ಧ ಪರ್ವತ ಪ್ರಸಂಗದಲ್ಲಿ ಹೇಳಿದನು. (ಮತ್ತಾಯ 5:3, ಹೊಸ ಲೋಕ ಭಾಷಾಂತರ) ಈ ಹೇಳಿಕೆಯನ್ನು ಬಹುಶಃ ನೀವು ಸಹ ಒಪ್ಪುವಿರಿ. ಬದುಕಿನಲ್ಲಿ ಆಧ್ಯಾತ್ಮಿಕತೆಯ ಅಗತ್ಯವನ್ನು ಎಲ್ಲೆಡೆಯೂ ಜನರು ಅಂಗೀಕರಿಸುತ್ತಾರೆ. ಅದು ಪ್ರಾಪ್ತಿಸಿದಾಗ ತಮಗೆ ಸಂತೋಷ ಲಭಿಸುವುದೆಂದು ಅವರೆಣಿಸುತ್ತಾರೆ. ಆದರೆ “ಆಧ್ಯಾತ್ಮಿಕತೆ” ಎಂಬುದರ ಅರ್ಥವೇನು?

ಆಧ್ಯಾತ್ಮಿಕತೆ ಅಂದರೆ, “ಧಾರ್ಮಿಕ ಮೌಲ್ಯಗಳ ಅರಿವು ಇಲ್ಲವೇ ಒಲವು” ಮತ್ತು “ಆಧ್ಯಾತ್ಮಿಕತೆಯ ಗುಣ ಇಲ್ಲವೇ ಆಧ್ಯಾತ್ಮಿಕತೆ ಉಳ್ಳವರಾಗಿರುವುದು” ಎಂದು ಒಂದು ಶಬ್ದಕೋಶವು ಅರ್ಥನಿರೂಪಿಸುತ್ತದೆ. ಈ ಕಾರಣದಿಂದ, “ಆಧ್ಯಾತ್ಮಿಕತೆ,” “ಆಧ್ಯಾತ್ಮವುಳ್ಳವರಾಗಿರುವುದು” ಇಲ್ಲವೇ “ಆಧ್ಯಾತ್ಮಿಕ-ಮನಸ್ಸುಳ್ಳವರು” ಎಂಬಂಥ ಪದಗಳನ್ನು ಸಮಾನಾರ್ಥ ಪದಗಳೆಂದು ಪರಿಗಣಿಸಲಾಗುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಆಧ್ಯಾತ್ಮಿಕ ವಿಷಯಗಳಿಗೆ ಇಲ್ಲವೇ ಧಾರ್ಮಿಕ ವಿಷಯಗಳಿಗೆ ತುಂಬ ಮಹತ್ವ ಕೊಡುವ ವ್ಯಕ್ತಿಯನ್ನು ಆಧ್ಯಾತ್ಮಿಕ-ಮನಸ್ಸುಳ್ಳವನೆಂದು ಕರೆಯಲಾಗುತ್ತದೆ.

ಆದರೆ ನಿಜ ಆಧ್ಯಾತ್ಮಿಕತೆ ಹೇಗೆ ಲಭಿಸುವುದು? ಪ್ರತಿಯೊಂದು ಧರ್ಮವು ಅದಕ್ಕೆ ಆಧ್ಯಾತ್ಮಿಕತೆಯ ಹಾದಿ ತಿಳಿದಿದೆಯೆಂದು ಹೇಳಿಕೊಳ್ಳುತ್ತದೆ. ಆದರೆ ಎಷ್ಟು ಅಸಂಖ್ಯಾತ ಧರ್ಮಗಳಿವೆಯೊ ಅಷ್ಟೇ ಅಸಂಖ್ಯಾತ ನಿರ್ದೇಶನಗಳೂ ಇವೆ. ಉದಾಹರಣೆಗೆ, ಒಬ್ಬ ಪ್ರಾಟೆಸ್ಟಂಟ್‌ ವ್ಯಕ್ತಿ ತಾನು ಧರ್ಮಜಾಗೃತಿಯ ಸಭೆಯೊಂದರಲ್ಲಿ ರಕ್ಷಣೆಹೊಂದಿದೆನೆಂದು ಹೇಳುತ್ತಾನೆ. ಕ್ಯಾಥೊಲಿಕನೊಬ್ಬನು ಚರ್ಚ್‌ನಲ್ಲಿ ಮಾಸ್‌ಗೆ ಹಾಜರಾಗಿ ದೇವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾನೆ. ಬೌದ್ಧ ವ್ಯಕ್ತಿಯು ಧ್ಯಾನದ ಮೂಲಕ ಜ್ಞಾನೋದಯ ಪಡೆಯಲು ಶ್ರಮಿಸುತ್ತಾನೆ. ಹಿಂದೂ ವ್ಯಕ್ತಿಯು ಸಂನ್ಯಾಸಿಯಾಗುವ ಮೂಲಕ ಪುನರ್ಜನ್ಮಗಳ ಚಕ್ರದಿಂದ ಮುಕ್ತಿ ಪಡೆಯಲು ಕಷ್ಟಪಡುತ್ತಾನೆ. ಇವೆಲ್ಲವೂ ನಿಜ ಆಧ್ಯಾತ್ಮಿಕತೆಯ ಹಾದಿಗಳೋ? ಅಥವಾ ಇವುಗಳಲ್ಲಿ ಯಾವುದಾದರೂ ಒಂದು ಆ ಹಾದಿ ಆಗಿದೆಯೋ?

ಇಲ್ಲ ಎಂದು ಅನೇಕರು ಉತ್ತರಿಸುತ್ತಾರೆ. ಅವರ ವಾದವೇನೆಂದರೆ, ಯಾವುದೇ ಒಂದು ನಿರ್ದಿಷ್ಟ ಧಾರ್ಮಿಕ ಗುಂಪಿಗೆ ಸೇರದೆ ಕೇವಲ ದೇವರಲ್ಲಿ ನಂಬಿಕೆಯಿಡುವುದೇ ಆಧ್ಯಾತ್ಮಿಕತೆ ಆಗಿದೆ. ಇತರರಿಗನುಸಾರ, ಆಧ್ಯಾತ್ಮಿಕತೆಯು ಒಂದು ಧಾರ್ಮಿಕ ವಿಷಯವೇ ಅಲ್ಲ ಬದಲಾಗಿ ಮನಶ್ಶಾಂತಿ ಹಾಗೂ ಅರ್ಥಪೂರ್ಣ ಬದುಕನ್ನು ಹೊಂದುವ ಬಯಕೆ ಆಗಿದೆ. ಆಧ್ಯಾತ್ಮಿಕತೆಗಾಗಿ ಹುಡುಕುವವರಿಗೆ ಧರ್ಮದ ಅಗತ್ಯವೇ ಇಲ್ಲ ಬದಲಾಗಿ ಅವರು ತಮ್ಮ ಆಂತರ್ಯವನ್ನು ನೋಡಬೇಕು, ಅಂದರೆ ಅಂತರಂಗದ ಭಾವನೆಗಳನ್ನು ಪರೀಕ್ಷಿಸಬೇಕೆಂದು ಅವರು ಪ್ರತಿಪಾದಿಸುತ್ತಾರೆ. ಒಬ್ಬ ಲೇಖಕನು ಹೇಳುವುದು: “ನಿಜ ಆಧ್ಯಾತ್ಮಿಕತೆ, ಒಬ್ಬ ವ್ಯಕ್ತಿ ತನ್ನಲ್ಲೇ ಕಂಡುಕೊಳ್ಳಬಹುದಾದ ಸಂಗತಿ. ಅದು, ನಿಮ್ಮ ಸುತ್ತಲಿರುವ ಜಗತ್ತು ಹಾಗೂ ಜನರನ್ನು ನೀವು ಪ್ರೀತಿಸುವ, ಸ್ವೀಕರಿಸುವ ಹಾಗೂ ಪರಸ್ಪರ ವ್ಯವಹರಿಸುವ ವಿಧ ಆಗಿದೆ. ಅದನ್ನು ಒಂದು ಚರ್ಚಿನಲ್ಲಾಗಲಿ, ನಿರ್ದಿಷ್ಟ ಬೋಧನೆಗಳನ್ನು ನಂಬುವುದರಿಂದಾಗಲಿ ಕಂಡುಕೊಳ್ಳಸಾಧ್ಯವಿಲ್ಲ.”

ಒಂದು ವಿಷಯವಂತೂ ಸ್ಪಷ್ಟ: ಆಧ್ಯಾತ್ಮಿಕತೆಯ ಕುರಿತಾಗಿ ಜನರಿಗೆ ಭಿನ್ನ ಭಿನ್ನ ಅಭಿಪ್ರಾಯಗಳಿವೆ. ಆಧ್ಯಾತ್ಮಿಕ ಜೀವನದ ಹಾದಿಯನ್ನು ತೋರಿಸುತ್ತವೆಂದು ಹೇಳಿಕೊಳ್ಳುವ ಸಾವಿರಾರು ಪುಸ್ತಕಗಳಿವೆ. ಆದರೆ ಹೆಚ್ಚಾಗಿ, ಇವುಗಳನ್ನು ಓದಿ ಮುದಿಸಿದ ಬಳಿಕ ವಾಚಕರಲ್ಲಿ ಅತೃಪ್ತಿ ಹಾಗೂ ಗಲಿಬಿಲಿಯ ಭಾವನೆಗಳು ಹಾಗೆಯೇ ಉಳಿದುಬಿಡುತ್ತವೆ. ಹೀಗಿದ್ದರೂ, ಆಧ್ಯಾತ್ಮಿಕ ವಿಷಯಗಳ ಕುರಿತಾಗಿ ಖಂಡಿತವಾಗಿಯೂ ಭರವಸಾರ್ಹ ಮಾರ್ಗದರ್ಶನ ಕೊಡುವ ಒಂದು ಪುಸ್ತಕವಿದೆ. ಅದು ದೇವರ ಪ್ರೇರಣೆಯಿಂದ ಬರೆಯಲ್ಪಟ್ಟಿದೆ ಎಂಬುದಕ್ಕೆ ಆ ಪುಸ್ತಕ ತಾನೇ ಪುರಾವೆ ಕೊಡುತ್ತದೆ. (2 ತಿಮೊಥೆಯ 3:16) ಆಧ್ಯಾತ್ಮಿಕತೆಯ ಅರ್ಥ ಹಾಗೂ ಅದರ ಮೌಲ್ಯದ ಕುರಿತಾಗಿ ಈ ಪುಸ್ತಕವಾದ ಬೈಬಲ್‌ ಏನನ್ನುತ್ತದೆಂಬುದನ್ನು ನಾವು ನೋಡೋಣ. (w07 8/1)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ