ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w07 9/1 ಪು. 3
  • ರಚಕನು ಇಲ್ಲದ ರಚನೆಯೋ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ರಚಕನು ಇಲ್ಲದ ರಚನೆಯೋ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಗಲಿಬಿಲಿ ಹುಟ್ಟಿಸುವ ಲೋಪ
  • ರಚನೆಯನ್ನು ಮೆಚ್ಚಿರಿ ರಚಕನನ್ನು ತಿಳಿಯಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ನಮಗೆ ಯಾವನು ತಿಳಿಸಬಲ್ಲನು?
    ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?
  • ಮಹಾ ವಿನ್ಯಾಸಗಾರನು ಪ್ರಕಟಿಸಲ್ಪಟ್ಟದ್ದು
    ಎಚ್ಚರ!—2000
  • ಜೀವರಸಾಯನ ವಿಜ್ಞಾನಿಯೊಂದಿಗೆ ಸಂದರ್ಶನ
    ಎಚ್ಚರ!—2006
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
w07 9/1 ಪು. 3

ರಚಕನು ಇಲ್ಲದ ರಚನೆಯೋ?

ಚಾರ್ಲ್ಸ್‌ ಡಾರ್ವಿನನು ಜೀವರಾಶಿಯಲ್ಲಿನ ಜಟಿಲತೆ ಮತ್ತು ವೈವಿಧ್ಯತೆಗೆ ವಿಕಾಸವೇ ಕಾರಣ ಎಂದು ಹೇಳಿ ಬಹುಮಟ್ಟಿಗೆ 150 ವರ್ಷಗಳು ದಾಟಿವೆ. ಆದರೆ ಅವನು ಮಂಡಿಸಿದ ವಿಕಾಸವಾದ ಮತ್ತು ಅದರ ಆಧುನಿಕ ಮಾರ್ಪಾಟುಗಳು ಇತ್ತೀಚೆಗೆ ಕಟು ವಿಮರ್ಶೆಗೊಳಗಾಗಿವೆ. ಈ ವಿಮರ್ಶಕರು, ಜೀವಿಗಳ ಅತಿಸೂಕ್ಷ್ಮ ರಚನಾವ್ಯವಸ್ಥೆಯು ಉದ್ದೇಶಭರಿತ ನಿರ್ಮಾಣವನ್ನು ಸಾರಿಹೇಳುತ್ತದೆಂದು ನಂಬುವವರಾಗಿದ್ದಾರೆ. ಈ ಭೂಮಿಯಲ್ಲಿ ನಾವು ನೋಡುವ ವೈವಿಧ್ಯಮಯ ಜೀವಜಾತಿಗಳಿಗೆ ವಿಕಾಸವು ಕಾರಣವಲ್ಲ ಎಂಬುದನ್ನು ಹಲವಾರು ಗಣ್ಯ ವಿಜ್ಞಾನಿಗಳು ಸಹ ಅಂಗೀಕರಿಸುತ್ತಾರೆ.

ಇಂಥ ವಿಜ್ಞಾನಿಗಳಲ್ಲಿ ಕೆಲವರು, ‘ಬುದ್ಧಿವಂತಿಕೆಯ ರಚನೆ’ (ಇಂಟೆಲಿಜೆಂಟ್‌ ಡಿಸೈನ್‌) ಎಂದು ಕರೆಯಲಾಗುವ ಪ್ರತಿವಾದವನ್ನು ಮಂಡಿಸುತ್ತಾರೆ. ಈ ವಾದಕ್ಕನುಸಾರ, ಸೃಷ್ಟಿಯ ರಚನೆ ಆಗಿದೆಯೆಂಬ ಮಾತನ್ನು ಜೀವವಿಜ್ಞಾನ, ಗಣಿತಶಾಸ್ತ್ರ ಮತ್ತು ಸಹಜ ಜ್ಞಾನವು ಬಲವಾಗಿ ಬೆಂಬಲಿಸುತ್ತದೆ. ಈ ವಾದವನ್ನು ಶಾಲೆಗಳ ವಿಜ್ಞಾನ ಪಠ್ಯಕ್ರಮದಲ್ಲಿ ಸೇರಿಸುವಂತೆ ಈ ವಿಜ್ಞಾನಿಗಳು ಉತ್ತೇಜಿಸುತ್ತಾರೆ. ‘ವಿಕಾಸವಾದದ ಸಂಘರ್ಷ’ಗಳೆಂದು ಕರೆಯಲಾಗುವ ಈ ವಿವಾದಗಳ ಅಬ್ಬರವು ಮುಖ್ಯವಾಗಿ ನಡೆಯುತ್ತಿರುವುದು ಅಮೆರಿಕದಲ್ಲಿ. ಆದರೆ ಇದೇ ರೀತಿಯ ವಾದವಿವಾದಗಳು ಇಂಗ್ಲೆಂಡ್‌, ಟರ್ಕಿ, ನೆದರ್ಲೆಂಡ್ಸ್‌, ಪಾಕಿಸ್ತಾನ್‌ ಮತ್ತು ಸರ್ಬಿಯ ದೇಶಗಳಲ್ಲೂ ನಡೆಯುತ್ತಿವೆಯೆಂದು ವರದಿಸಲಾಗಿದೆ.

ಗಲಿಬಿಲಿ ಹುಟ್ಟಿಸುವ ಲೋಪ

‘ಬುದ್ಧಿವಂತಿಕೆಯ ರಚನೆ’ ಎಂಬ ವಾದವನ್ನು ಸಮರ್ಥಿಸಲು ಪದಗಳನ್ನು ಜಾಗ್ರತೆಯಿಂದ ಆರಿಸಲಾಗಿರುವುದಾದರೂ ಅದರಲ್ಲಿ ಒಂದು ವಿಷಯವು ಬಿಟ್ಟುಬಿಡಲ್ಪಟ್ಟಿದೆ ಎಂಬುದು ಎದ್ದುಕಾಣುತ್ತದೆ. ಅದರಲ್ಲಿ ಒಬ್ಬ ರಚಕನ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ರಚಕನಿಲ್ಲದ ರಚನೆ ಇರಸಾಧ್ಯವೆಂದು ನೀವೆಣಿಸುತ್ತೀರೊ? ‘ಬುದ್ಧಿವಂತಿಕೆಯ ರಚನೆ’ ಎಂಬ ವಾದದ ಪ್ರತಿಪಾದಕರು “ರಚಕನು ಯಾರು ಅಥವಾ ಏನು ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಹೇಳಿಕೆಗಳನ್ನು ಕೊಡುವುದಿಲ್ಲ” ಎಂದು ದ ನ್ಯೂ ಯಾರ್ಕ್‌ ಟೈಮ್ಸ್‌ ಮ್ಯಾಗಸೀನ್‌ ವರದಿಸಿತು. ಲೇಖಕಿ ಕ್ಲಾಡಿಯಾ ವಾಲಿಸ್‌ ಹೇಳಿದ್ದೇನೆಂದರೆ, ಈ ವಾದದ ಪ್ರತಿಪಾದಕರು “ದೇವರನ್ನು ಚರ್ಚೆಯೊಳಗೆ ತರದಿರಲು ಜಾಗ್ರತೆವಹಿಸುತ್ತಾರೆ.” ಮಾತ್ರವಲ್ಲ, ಈ ವಾದ “ಒಬ್ಬ ರಚಕನ ಅಸ್ತಿತ್ವದ ಕುರಿತು ಹಾಗೂ ಆತನು ಯಾರು ಎಂಬುದರ ಕುರಿತು ಏನೂ ಹೇಳುವುದಿಲ್ಲ” ಎಂದು ನ್ಯೂಸ್‌ವೀಕ್‌ ಪತ್ರಿಕೆ ತಿಳಿಸುತ್ತದೆ.

ಆದರೆ ರಚಕನ ಕುರಿತಾದ ಪ್ರಶ್ನೆ ಎದ್ದಾಗಲೆಲ್ಲಾ ಅದನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುವುದು ವ್ಯರ್ಥವೆಂದು ನಿಮಗೆ ತಿಳಿದಿರಬಹುದು. ರಚಕನ ಅಸ್ತಿತ್ವ ಮತ್ತು ಆತನು ಯಾರೆಂಬುದನ್ನು ಮರೆಮಾಡುವಲ್ಲಿ ಇಲ್ಲವೆ ಆತನನ್ನು ಲೆಕ್ಕಕ್ಕೆ ತೆಗೆದುಕೊಳ್ಳದಿರುವಲ್ಲಿ, ವಿಶ್ವ ಮತ್ತು ಜೀವರಾಶಿಯಲ್ಲಿನ ರಚನಾವ್ಯವಸ್ಥೆಯ ಕುರಿತಾದ ವಿವರಣೆ ಹೇಗೆ ಪೂರ್ಣವಾದೀತು?

ಒಬ್ಬ ರಚಕನಿದ್ದಾನೆ ಎಂಬುದನ್ನು ಒಪ್ಪಿಕೊಳ್ಳಬೇಕೊ ಇಲ್ಲವೊ ಎಂಬ ವಾಗ್ವಾದವು ಮುಖ್ಯವಾಗಿ ಈ ಪ್ರಶ್ನೆಗಳ ಕುರಿತಾಗಿದೆ: ಮಾನವಾತೀತನಾದ ಒಬ್ಬ ರಚಕನಿದ್ದಾನೆಂದು ಒಪ್ಪಿಕೊಳ್ಳುವುದು ವೈಜ್ಞಾನಿಕ ಹಾಗೂ ಬೌದ್ಧಿಕ ಪ್ರಗತಿಯ ಹಾದಿಯಲ್ಲಿ ಒಂದು ಅಡ್ಡಗಲ್ಲಾಗುವುದೋ? ಬೇರಾವುದೇ ವಿವರಣೆ ಇಲ್ಲದಿರುವಾಗ ಮಾತ್ರ ಒಬ್ಬ ಬುದ್ಧಿವಂತ ರಚಕನಿದ್ದಾನೆಂಬುದನ್ನು ಒಪ್ಪಬೇಕೋ? ಅಲ್ಲದೆ, ರಚನಾವ್ಯವಸ್ಥೆಯನ್ನು ನೋಡಿ ಒಬ್ಬ ರಚಕನಿದ್ದಾನೆಂಬ ತೀರ್ಮಾನಕ್ಕೆ ಬರುವುದು ನಿಜವಾಗಿಯೂ ಔಚಿತ್ಯಪೂರ್ಣವೋ? ಮುಂದಿನ ಲೇಖನವು ಈ ಪ್ರಶ್ನೆಗಳನ್ನು ಹಾಗೂ ಇದಕ್ಕೆ ಸಂಬಂಧಪಟ್ಟ ಇತರ ಪ್ರಶ್ನೆಗಳನ್ನು ಚರ್ಚಿಸುವುದು. (w07 8/15)

[ಪುಟ 3ರಲ್ಲಿರುವ ಚಿತ್ರಗಳು]

ಜೀವರಾಶಿಯಲ್ಲಿನ ಜಟಿಲತೆಗೆ ವಿಕಾಸವೇ ಕಾರಣವೆಂದು ಚಾರ್ಲ್ಸ್‌ ಡಾರ್ವಿನ್‌ ನಂಬಿದನು

[ಕೃಪೆ]

ಡಾರ್ವಿನ್‌: From a Photograph by Mrs. J. M. Cameron/U.S. National Archives photo

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ