ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w10 1/1 ಪು. 28-29
  • ಮಾನವಕುಲದ ಭವಿಷ್ಯತ್ತಿನ ಕುರಿತು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾನವಕುಲದ ಭವಿಷ್ಯತ್ತಿನ ಕುರಿತು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮಾನವರು ಸ್ವರ್ಗಕ್ಕೆ ಹೋಗುವರೆಂದು ಯೇಸು ಮಾತುಕೊಟ್ಟಿದ್ದನೋ?
  • ಆ ‘ಚಿಕ್ಕ ಹಿಂಡು’ ಸ್ವರ್ಗದಲ್ಲಿ ಏನು ಮಾಡಲಿದೆ?
  • ಉಳಿದ ಮಾನವರಿಗೆ ಯೇಸು ಯಾವ ನಿರೀಕ್ಷೆ ಕೊಟ್ಟನು?
  • ದೇವರು ಮಾನವಕುಲವನ್ನು ಕಷ್ಟಸಂಕಟದಿಂದ ಹೇಗೆ ಬಿಡಿಸುವನು?
  • ಭೂಮಿಯ ಮೇಲೆ ನಿತ್ಯಜೀವ —ಕ್ರಿಸ್ತನೂ ಕಲಿಸಿದ ನಿರೀಕ್ಷೆಯೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ದೇವರ ರಾಜ್ಯದ ಕುರಿತು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ದೇವರ ರಾಜ್ಯ ಎಂದರೇನು?
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ಒಂದು ನಿಶ್ಚಿತ ನಿರೀಕ್ಷೆ
    ಎಚ್ಚರ!—2000
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
w10 1/1 ಪು. 28-29

ಯೇಸುವಿನಿಂದ ಕಲಿಯುವುದು. . .

ಮಾನವಕುಲದ ಭವಿಷ್ಯತ್ತಿನ ಕುರಿತು

ಮಾನವರು ಸ್ವರ್ಗಕ್ಕೆ ಹೋಗುವರೆಂದು ಯೇಸು ಮಾತುಕೊಟ್ಟಿದ್ದನೋ?

ಹೌದು! ಯೇಸು ಕೂಡ ಪುನರುತ್ಥಾನಹೊಂದಿದ ಬಳಿಕ ತನ್ನ ತಂದೆಯಾದ ದೇವರ ಬಳಿ ಸ್ವರ್ಗಕ್ಕೆ ಹೋದನು. ಅಲ್ಲದೆ, ಅವನು ತನ್ನ ಮರಣ ಹಾಗೂ ಪುನರುತ್ಥಾನಕ್ಕೆ ಮುಂಚೆ ತನ್ನ 11 ಮಂದಿ ನಂಬಿಗಸ್ತ ಅಪೊಸ್ತಲರಿಗೆ ಅಂದದ್ದು: “ನನ್ನ ತಂದೆಯ ಮನೆಯಲ್ಲಿ ಅನೇಕ ವಾಸಸ್ಥಳಗಳಿವೆ. . . . ನಾನು ನಿಮಗೋಸ್ಕರ ಒಂದು ಸ್ಥಳವನ್ನು ಸಿದ್ಧಪಡಿಸಲು ಹೋಗುತ್ತಿದ್ದೇನೆ.” (ಯೋಹಾನ 14:2) ಆದರೆ ಸ್ವರ್ಗಕ್ಕೆ ಹೋಗುವವರು ಕೊಂಚ ಮಂದಿ ಮಾತ್ರ. ಈ ಸತ್ಯವನ್ನು ಯೇಸು ತನ್ನ ಶಿಷ್ಯರಿಗೆ ಹೀಗಂದಾಗ ಸ್ಪಷ್ಟಪಡಿಸಿದನು: “ಚಿಕ್ಕ ಹಿಂಡೇ, ಭಯಪಡಬೇಡ, ಏಕೆಂದರೆ ನಿಮಗೆ ರಾಜ್ಯವನ್ನು ಕೊಡುವುದಕ್ಕೆ ನಿಮ್ಮ ತಂದೆಯು ಒಪ್ಪಿಗೆ ಕೊಟ್ಟಿದ್ದಾನೆ.”—ಲೂಕ 12:32.

ಆ ‘ಚಿಕ್ಕ ಹಿಂಡು’ ಸ್ವರ್ಗದಲ್ಲಿ ಏನು ಮಾಡಲಿದೆ?

ಈ ಚಿಕ್ಕ ಗುಂಪು ಸ್ವರ್ಗದಲ್ಲಿ ಯೇಸುವಿನೊಂದಿಗೆ ಒಂದು ಸರ್ಕಾರದ ಭಾಗವಾಗಿರಬೇಕು ಎಂಬುದು ದೇವರ ಉದ್ದೇಶ. ಇದು ನಮಗೆ ಹೇಗೆ ಗೊತ್ತು? ನಂಬಿಗಸ್ತರಾದ ಕೆಲವರು “ಭೂಮಿಯ ಮೇಲೆ ರಾಜರಾಗಿ ಆಳಲಿದ್ದಾರೆ” ಎಂದು ಪುನರುತ್ಥಿತ ಯೇಸುವೇ ಸಮಯಾನಂತರ ಅಪೊಸ್ತಲ ಯೋಹಾನನಿಗೆ ಹೇಳಿದನು. (ಪ್ರಕಟನೆ 1:1; 5:9, 10) ಇದೊಂದು ಶುಭವಾರ್ತೆ! ಏಕೆಂದರೆ ಮಾನವಕುಲಕ್ಕೆ ಅತ್ಯಗತ್ಯವಾಗಿ ಬೇಕಾಗಿರುವುದು ಒಂದು ಒಳ್ಳೇ ಸರ್ಕಾರವೇ. ಯೇಸುವಿನ ನೇತೃತ್ವದ ಈ ಸರ್ಕಾರ ಏನನ್ನು ಸಾಧಿಸಲಿದೆ? ‘ಹೊಸ ಸೃಷ್ಟಿಯಲ್ಲಿ ಮನುಷ್ಯಕುಮಾರನು ತನ್ನ ಮಹಿಮೆಯ ಸಿಂಹಾಸನದಲ್ಲಿ ಕುಳಿತುಕೊಳ್ಳುವಾಗ, ನನ್ನನ್ನು ಹಿಂಬಾಲಿಸಿರುವ ನೀವು ಸಹ ಹನ್ನೆರಡು ಸಿಂಹಾಸನಗಳಲ್ಲಿ ಕುಳಿತುಕೊಳ್ಳುವಿರಿ’ ಎಂದನು ಯೇಸು. (ಮತ್ತಾಯ 19:28) ಯೇಸು ಮತ್ತು ಅವನ ಹಿಂಬಾಲಕರ ಆಳ್ವಿಕೆಯಿಂದ “ಹೊಸ ಸೃಷ್ಟಿ” ಉಂಟಾಗುವುದು. ಅಂದರೆ ಪ್ರಥಮ ಮಾನವ ದಂಪತಿ ಪಾಪ ಮಾಡುವ ಮುಂಚೆ ಈ ಭೂಮಿಯ ಮೇಲೆ ಆನಂದಿಸಿದ ಯಾವುದೇ ಕುಂದಿಲ್ಲದ ಪರಿಸ್ಥಿತಿ ಪುನಃ ಸ್ಥಾಪಿಸಲ್ಪಡುವುದು.

ಉಳಿದ ಮಾನವರಿಗೆ ಯೇಸು ಯಾವ ನಿರೀಕ್ಷೆ ಕೊಟ್ಟನು?

ದೇವರು ಮಾನವರನ್ನು ಸೃಷ್ಟಿಸಿದ್ದು ಈ ಭೂಮಿಯಲ್ಲಿ ಜೀವಿಸಲಿಕ್ಕಾಗಿ. ಆದರೆ ಯೇಸುವನ್ನು ಸ್ವರ್ಗದಲ್ಲಿ ಜೀವಿಸಲಿಕ್ಕಾಗಿ ಸೃಷ್ಟಿಸಿದನು. (ಕೀರ್ತನೆ 115:16) ಆದುದರಿಂದಲೇ ಯೇಸು ಅಂದದ್ದು: “ನೀವು ಕೆಳಗಿನವರು, ನಾನು ಮೇಲಿನವನು.” (ಯೋಹಾನ 8:23) ಈ ಭೂಮಿಯ ಮೇಲೆ ಮಾನವರಿಗಿರುವ ಸುಂದರ ಭವಿಷ್ಯತ್ತಿನ ಕುರಿತೂ ಯೇಸು ಮಾತಾಡಿದನು. ಒಮ್ಮೆ ಅವನಂದದ್ದು: “ಸೌಮ್ಯಭಾವದವರು ಸಂತೋಷಿತರು; ಅವರು ಭೂಮಿಗೆ ಬಾಧ್ಯರಾಗುವರು.” (ಮತ್ತಾಯ 5:5) ಅವನು ಈ ದೇವಪ್ರೇರಿತ ಕೀರ್ತನೆಗೆ ಸೂಚಿಸುತ್ತಿದ್ದನು: “ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು. ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತನೆ 37:11, 29.

ಹೀಗೆ, ಶಾಶ್ವತ ಜೀವನವನ್ನು ಪಡೆಯುವವರು ಸ್ವರ್ಗಕ್ಕೆ ಹೋಗುವ “ಚಿಕ್ಕ ಹಿಂಡು” ಮಾತ್ರವೇ ಅಲ್ಲ. ಉಳಿದ ಲಕ್ಷಾಂತರ ಮಾನವರಿಗೆ ಲಭ್ಯವಿರುವ ನಿರೀಕ್ಷೆಯ ಕುರಿತೂ ಯೇಸು ತಿಳಿಸಿದನು. ಅವನಂದದ್ದು: “ದೇವರು ಲೋಕವನ್ನು ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು; ಅವನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳಬೇಕೆಂದು ಅವನನ್ನು ಕೊಟ್ಟನು.”—ಯೋಹಾನ 3:16.

ದೇವರು ಮಾನವಕುಲವನ್ನು ಕಷ್ಟಸಂಕಟದಿಂದ ಹೇಗೆ ಬಿಡಿಸುವನು?

“ಈಗ ಈ ಲೋಕಕ್ಕೆ ನ್ಯಾಯತೀರ್ಪಾಗುತ್ತಿದೆ; ಈಗ ಈ ಲೋಕದ ಅಧಿಪತಿಯು ಹೊರಗೆ ಹಾಕಲ್ಪಡುವನು” ಎಂದು ಯೇಸು ಹೇಳಿದಾಗ ಕಷ್ಟಸಂಕಟಕ್ಕೆ ಕಾರಣವಾಗಿರುವ ಎರಡು ಮೂಲಗಳ ಕೊನೆಗಾಣಿಸುವಿಕೆಯನ್ನು ತಿಳಿಸಿದನು. (ಯೋಹಾನ 12:31) ಒಂದನೆಯದಾಗಿ, ಕಷ್ಟಸಂಕಟಕ್ಕೆ ಕಾರಣವಾಗಿರುವ ಈ ಲೋಕ ಅಂದರೆ ಭಕ್ತಿಹೀನ ಮಾನವರಿಗೆ ತೀರ್ಪಾಗಿ ಅವರನ್ನು ನಾಶಮಾಡಲಾಗುವುದು. ಎರಡನೆಯದಾಗಿ, ಈ ಲೋಕದ ಅಧಿಪತಿಯಾದ ಸೈತಾನನನ್ನು ಹೊರಗೆ ಹಾಕಲಾಗುವುದು. ಆಗ ಅವನು ಮಾನವರನ್ನು ತಪ್ಪುದಾರಿಗೆ ಎಳೆಯಲಾರನು.

ದೇವರ ಮತ್ತು ಕ್ರಿಸ್ತನ ಕುರಿತು ಕಲಿತು ಅವರಲ್ಲಿ ನಂಬಿಕೆಯಿಡಲು ಅವಕಾಶ ಸಿಗದಿದ್ದ ಮೃತಜನರ ಕುರಿತೇನು? ಯೇಸು ಯಾತನಾ ಕಂಬದಲ್ಲಿದ್ದಾಗ ತನ್ನ ಪಕ್ಕದಲ್ಲಿದ್ದ ದುಷ್ಕರ್ಮಿಗೆ “ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ” ಎಂದು ಹೇಳಿದನು. (ಲೂಕ 23:43) ಇತಿಹಾಸದುದ್ದಕ್ಕೂ ಮರಣಹೊಂದಿರುವ ಇತರ ಲಕ್ಷಾಂತರ ಜನರೊಂದಿಗೆ ಆ ದುಷ್ಕರ್ಮಿಯನ್ನು ಯೇಸು ಪುನರುತ್ಥಾನಗೊಳಿಸುವಾಗ ದೇವರ ಕುರಿತು ಕಲಿಯಲು ಅವನಿಗೆ ಸಂದರ್ಭ ಸಿಗುವುದು. ಭೂಮಿಯ ಮೇಲೆ ಶಾಶ್ವತ ಜೀವನದ ಬಹುಮಾನ ಪಡೆಯುವ ದೀನ ಹಾಗೂ ನೀತಿವಂತ ಜನರಲ್ಲಿ ಒಬ್ಬನಾಗುವ ಅವಕಾಶವೂ ಅವನಿಗೆ ಸಿಗುವುದು.—ಅ. ಕಾರ್ಯಗಳು 24:15. (w09 08/01)

ಹೆಚ್ಚಿನ ಮಾಹಿತಿಗಾಗಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 3 ಮತ್ತು 7 ನೋಡಿ.a

[ಪಾದಟಿಪ್ಪಣಿ]

a ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

[ಪುಟ 29ರಲ್ಲಿರುವ ಚಿತ್ರ]

“ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” —ಕೀರ್ತನೆ 37:29

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ