ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w10 5/15 ಪು. 6-7
  • ವೃದ್ಧರನ್ನು ಗೌರವಿಸಬೇಕು ಏಕೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವೃದ್ಧರನ್ನು ಗೌರವಿಸಬೇಕು ಏಕೆ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಅನುರೂಪ ಮಾಹಿತಿ
  • ಕ್ರೈಸ್ತ ಕುಟುಂಬವು ವೃದ್ಧರಿಗೆ ಸಹಾಯ ಮಾಡುತ್ತದೆ
    ಕಾವಲಿನಬುರುಜು—1993
  • ಯೆಹೋವನು ತನ್ನ ವೃದ್ಧ ಸೇವಕರನ್ನು ಕೋಮಲವಾಗಿ ಪರಾಮರಿಸುತ್ತಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ವೃದ್ಧರನ್ನು ಗೌರವಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ವಯೋವೃದ್ಧರ ಪರಾಮರಿಕೆ —ಒಂದು ಕ್ರೈಸ್ತ ಜವಾಬ್ದಾರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
w10 5/15 ಪು. 6-7

ವೃದ್ಧರನ್ನು ಗೌರವಿಸಬೇಕು ಏಕೆ?

ಅಮೆರಿಕದ ಕ್ಯಾಲಿಫೋರ್ನಿಯದ ಕರಾವಳಿತೀರದಲ್ಲಿ ಒಂದು ಮರವಿದೆ. ವಿಶ್ವದಲ್ಲೇ ಅತ್ಯಂತ ಹೆಚ್ಚು ಛಾಯಾಚಿತ್ರಗಳು ತೆಗೆಯಲ್ಪಟ್ಟಿರುವ ಮರಗಳಲ್ಲಿ ಇದು ಒಂದು. ‘ಲೋನ್‌ ಸೈಪ್ರಸ್‌’ ಎಂದು ಅದರ ಹೆಸರು. ಅದು 250 ವರ್ಷಕ್ಕಿಂತ ಹೆಚ್ಚು ಹಳೆಯ ಮರವೆಂಬ ವರದಿಯಿದೆ. ಅದರ ಬಾಳಿಕೆಗೆ ಪ್ರಸಿದ್ಧವಾಗಿರುವ ಈ ಸುಂದರ ಮರಕ್ಕೆ ಬೇರೆ ಬೇರೆ ವಿಧಗಳಲ್ಲಿ ಗಮನ ಕೊಡಲಾಗಿದೆ. ಉದಾಹರಣೆಗೆ, ಅದನ್ನು ತಂತಿಗಳಿಂದ ಆಧಾರ ಕೊಟ್ಟು ಭದ್ರಗೊಳಿಸಲಾಗಿದೆ ಮತ್ತು ಬುಡದ ಸುತ್ತಲೂ ಕಲ್ಲುಗಳನ್ನು ಕಟ್ಟಲಾಗಿದೆ.

ಈ ‘ಲೋನ್‌ ಸೈಪ್ರಸ್‌’ ಮರವು, ನಮ್ಮ ಮಧ್ಯದಲ್ಲಿರುವ ವೃದ್ಧರನ್ನು ನಮಗೆ ನೆನಪಿಸಬಹುದು. ಅವರು ಅಸಾಧಾರಣ ಸಹನೆಯ ಬಾಳ್ವೆಯನ್ನು ನಡೆಸುತ್ತಿದ್ದಾರೆ. ಅವರ ಸಹನೆಯು ಎದ್ದುಕಾಣುತ್ತಿರುವ ಒಂದು ವಿಧವು ಅವರು ಸುವಾರ್ತೆಯನ್ನು ಘೋಷಿಸುತ್ತಿರುವುದೇ. ಬೈಬಲ್‌ ಸಂದೇಶವನ್ನು ‘ಹಿರಿಯರು’ ಘೋಷಿಸುವರೆಂದು ಪ್ರವಾದಿ ಯೋವೇಲನು ಮುಂತಿಳಿಸಿದನು. (ಯೋವೇ. 2:28-32; ಅ. ಕಾ. 2:16-21) ‘ರಾಜ್ಯದ ಸುವಾರ್ತೆಯ’ ಕುರಿತು ಕಲಿಯಲು ಇತರರಿಗೆ ಶ್ರದ್ಧಾಪೂರ್ವಕವಾಗಿ ಸಹಾಯಮಾಡುವುದರಲ್ಲಿ ಅವರು ಅನೇಕಾನೇಕ ತಾಸುಗಳನ್ನು ವ್ಯಯಿಸುವುದರ ಕುರಿತು ಸ್ವಲ್ಪ ಯೋಚಿಸಿ! (ಮತ್ತಾ. 24:14) ಈ ವೃದ್ಧ ರಾಜ್ಯ ಘೋಷಕರಲ್ಲಿ ಕೆಲವರು ವರ್ಷಗಳಾದ್ಯಂತ ಹಿಂಸೆ ಹಾಗೂ ಇತರ ಕಷ್ಟಗಳನ್ನು ಸಹಿಸಿಕೊಂಡಿದ್ದಾರೆ. ಒಂದು ಸಾಮಾನ್ಯ ಸೈಪ್ರಸ್‌ ಮರವು ಅದರ ಬಾಳಿಕೆಗಾಗಿ ಗಮನಾರ್ಹವಾಗಿದ್ದು ಅದನ್ನು ತಂತಿಗಳ ಆಧಾರದಿಂದ ಹಾಗೂ ಕಲ್ಲುಕಟ್ಟೆಯ ಮೂಲಕ ಬಲಪಡಿಸಿರಬೇಕಾದರೆ, ನಮ್ಮ ಮಧ್ಯೆ ಇರುವ ವೃದ್ಧರು ಇನ್ನೂ ಹೆಚ್ಚಾದ ಮಾನ್ಯತೆಗೆ ಅರ್ಹರಾಗಿದ್ದು ಅವರಿಗೆ ಘನತೆ ಗೌರವಗಳು ಸಲ್ಲಬೇಕಲ್ಲವೆ?

“ತಲೆನರೆತ ವೃದ್ಧರ ಮುಂದೆ ಎದ್ದು ನಿಂತು ಅವರನ್ನು ಸನ್ಮಾನಿಸಬೇಕು” ಎಂದು ಯೆಹೋವ ದೇವರು ತನ್ನ ಪುರಾತನ ಜನರಿಗೆ ಆಜ್ಞೆಯಿತ್ತನು. (ಯಾಜ. 19:32) ದಶಕಗಳಿಂದಲೂ ‘ದೇವರೊಂದಿಗೆ ನಡೆಯುತ್ತಾ’ ಬಂದಿರುವ ಅತ್ಯುತ್ತಮ ಮಾದರಿಗಳಾಗಿರುವ ನಂಬಿಗಸ್ತರನ್ನು ಇಂದು ಯೆಹೋವನ ಸೇವಕರ ಮಧ್ಯದಲ್ಲಿ ನಾವು ಕಾಣುತ್ತೇವೆ. (ಮೀಕ 6:8) ಅವರು ಶಾಸ್ತ್ರಗ್ರಂಥದ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುತ್ತಾ ಮುಂದುವರಿಯುವಾಗ ಅವರ ನರೆಗೂದಲು ‘ಸುಂದರ ಕಿರೀಟದಂತಿರುವುದು.’—ಜ್ಞಾನೋ. 16:31.

ಅಪೊಸ್ತಲ ಪೌಲನು ಯುವ ತಿಮೊಥೆಯನಿಗೆ, “ವೃದ್ಧನನ್ನು ಕಟುವಾಗಿ ಟೀಕಿಸಬೇಡ” ಎಂದು ನಿರ್ದೇಶನ ಕೊಟ್ಟನು. ಅದಕ್ಕೆ ಬದಲಾಗಿ ತಿಮೊಥೆಯನು “ಅವನನ್ನು ತಂದೆಯಂತೆಯೂ” “ವೃದ್ಧ ಸ್ತ್ರೀಯರನ್ನು ತಾಯಂದಿರಂತೆಯೂ” ಪರಿಗಣಿಸಬೇಕಿತ್ತು. (1 ತಿಮೊ. 5:1, 2) ಇದರರ್ಥ ತಿಮೊಥೆಯನು ತಲೆನರೆತವರ ಮುಂದೆ ‘ಎದ್ದು ನಿಲ್ಲಬೇಕಿತ್ತು.’ ಹಾಗಾದರೆ, ವೃದ್ಧರೊಂದಿಗೆ ನಾವಾಡುವ ಮಾತುಗಳಲ್ಲಿ ಸಹ ಅಂಥ ಗೌರವವು ಪ್ರತಿಫಲಿತವಾಗಬೇಕೆಂದು ಯೆಹೋವನು ಅಪೇಕ್ಷಿಸುತ್ತಾನೆಂಬುದು ಸುಸ್ಪಷ್ಟ.

“ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ” ಎಂದು ರೋಮನ್ನರಿಗೆ 12:10 ಹೇಳುತ್ತದೆ. ಸಭೆಯಲ್ಲಿರುವ ಮೇಲ್ವಿಚಾರಕರು ವೃದ್ಧ ಕ್ರೈಸ್ತರಿಗೆ ಗೌರವ ತೋರಿಸುತ್ತಾರೆ ಖಂಡಿತ. ಆದರೆ ನಾವೆಲ್ಲರೂ ಒಬ್ಬರಿಗೊಬ್ಬರು ಗೌರವ ತೋರಿಸುವುದರಲ್ಲಿ ಮುಂದಾಗಿರಬೇಕು.

ಕುಟುಂಬ ಸದಸ್ಯರಿಗಾದರೋ ತಮ್ಮ ಹೆತ್ತವರು ಹಾಗೂ ಅಜ್ಜ-ಅಜ್ಜಿಯರ ಕಡೆಗೆ ವಿಶೇಷ ಜವಾಬ್ದಾರಿಯಿದೆ ನಿಶ್ಚಯ. ‘ಲೋನ್‌ ಸೈಪ್ರಸ್‌’ ಮರದ ವಿಷಯದಲ್ಲಾದರೋ ಜನರು ಅದನ್ನು ಕಾಪಾಡಿ ಉಳಿಸಲು ಸಹಾಯಕ್ಕಾಗಿ ಬೇರೆ ಬೇರೆ ಕ್ರಮಗಳನ್ನು ತಕ್ಕೊಂಡಿದ್ದಾರೆ, ಇನ್ನೂ ಹಾಗೆಯೇ ಮಾಡುವುದನ್ನು ಮುಂದುವರಿಸುತ್ತಿದ್ದಾರೆ. ಹೀಗಿರಲಾಗಿ ಪ್ರಾಯಸಂದುತ್ತಾ ಬರುವ ನಮ್ಮ ಹೆತ್ತವರ ಹಾಗೂ ಅಜ್ಜ-ಅಜ್ಜಿಯರ ಘನತೆ ಗೌರವವನ್ನು ಕಾಪಾಡಲು ನೆರವಾಗುವ ಮಾರ್ಗಗಳಿಗಾಗಿ ನಾವು ಖಂಡಿತವಾಗಿಯೂ ಹುಡುಕಬೇಕು. ಉದಾಹರಣೆಗೆ, ಉತ್ತಮವಾಗಿ ಕಿವಿಗೊಡುವವರಾಗಿರುವುದು ಅವರ ಅನಿಸಿಕೆಗಳಿಗೆ ಪರಿಗಣನೆ ತೋರಿಸದೆ ನಾವು ಬಯಸಿದಂತೆಯೇ ಮಾಡಬೇಕೆಂದು ಪಟ್ಟುಹಿಡಿಯುವುದನ್ನು ತಡೆಯುವುದು.—ಜ್ಞಾನೋ. 23:22; 1 ತಿಮೊ. 5:4.

ನಮ್ಮೊಂದಿಗಿರುವ ವೃದ್ಧರು ಯೆಹೋವನಿಗೆ ಬಹು ಅಮೂಲ್ಯರು. ಆತನು ಅವರನ್ನೆಂದೂ ಕೈಬಿಡನು. (ಕೀರ್ತ. 71:18) ಅವರು ತಮ್ಮ ಸೇವೆಯನ್ನು ನಂಬಿಗಸ್ತಿಕೆಯಿಂದ ಮಾಡುತ್ತಾ ಇರುವಂತೆ ಸತ್ಯ ದೇವರು ಅವರನ್ನು ಕಾರ್ಯತಃ ಬಲಪಡಿಸುವನು. ಹಾಗೆಯೇ ನಾವು ಸಹ, ವೃದ್ಧರನ್ನು ಬೆಂಬಲಿಸುತ್ತಾ ಅವರನ್ನು ಗೌರವಿಸುತ್ತಾ ಇರುವುದನ್ನು ಮುಂದುವರಿಸೋಣ.

[ಪುಟ 7ರಲ್ಲಿರುವ ಚಿತ್ರಗಳು]

‘ಲೋನ್‌ ಸೈಪ್ರಸ್‌’ ಮರಕ್ಕೆ ಆಧಾರ ಬೇಕಾಗಿರುವಂತೆಯೇ ವೃದ್ಧರನ್ನೂ ಘನತೆ ಹಾಗೂ ಗೌರವದಿಂದ ಉಪಚರಿಸುವುದು ಅವಶ್ಯ

[ಕೃಪೆ]

American Spirit Images/age fotostock

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ