ದೇವಭಕ್ತಿಯೊಂದಿಗೆ ತರಬೇತಾಗಲು ಹೊಸ ಹೊರಡಿಸುವಿಕೆಗಳು ನಮಗೆ ನೆರವಾಗುತ್ತವೆ
1 ಕಳೆದ ವರ್ಷದ ಜಿಲ್ಲಾ ಅಧಿವೇಶನವನ್ನು ಹಾಜರಾದ ಮೇಲೆ, ದೇವಭಕ್ತಿಯನ್ನು ಗುರಿಯಾಗಿಟ್ಟು ಅದರಲ್ಲಿ ತರಬೇತುಹೊಂದುವ ಅಗತ್ಯವನ್ನು ನಾವು ಚೆನ್ನಾಗಿ ಅರಿತುಕೊಂಡೆವು. (1 ತಿಮೋ. 4:7) ಕಾರ್ಯಕ್ರಮದಲ್ಲಿ ನೀಡಲಾದ ಎಲ್ಲಾ ಸಮಾಚಾರವನ್ನು ನಾವು ಯೋಚಿಸುವಲ್ಲಿ ಮತ್ತು ನಿತ್ಯದ ಜೀವಿತದಲ್ಲಿ ಅದನ್ನು ಅನ್ವಯಿಸಲು ಪ್ರಯತ್ನ ಪಟ್ಟಲ್ಲಿ, ಸತ್ಯಾರಾಧನೆಯಲ್ಲಿ ಯೆಹೋವನಿಗೆ ಇನ್ನೂ ಹತ್ತಿರವಾಗಿ ಎಳೆಯಲ್ಪಡಲು ಸಹಾಯವಾಗುವುದು.
2 ಆದರೂ, ದೇವಭಕ್ತಿಯಲ್ಲಿ ನಮ್ಮ ತರಬೇತು ವಿಶಿಷ್ಟವಾಗಿ ಹೆಚ್ಚುವುದು ಯಾವಾಗವೆಂದರೆ “ದೇವಭಕ್ತಿ” ಜಿಲ್ಲಾ ಅಧಿವೇಶನದಲ್ಲಿ ಹೊರಡಿಸಲಾದ ಮೂರು ಹೊಸ ಪ್ರಕಾಶನಗಳ ಸಮೃದ್ಧ ಸಮಾಚಾರವನ್ನು ಪ್ರಗತಿಪರವಾಗಿ ಹೀರಿಕೊಂಡಾಗಲೇ. ಈ ಹೊಸ ಪ್ರಕಾಶನಗಳನ್ನು ನೀವು ಈವಾಗಲೇ ಓದಿರುವಿರೋ?
ಒಂದು ಹೊಸ ಬ್ರೊಷರ್
3 ಶುಡ್ ಯು ಬಿಲಿವ್ ಇನ್ ಟ್ರಿನಿಟಿ? ಬ್ರೊಷರಿನಲ್ಲಿ ಕೊಡಲಾದ ಖಾತ್ರಿದಾಯಕ ಶಾಸ್ತ್ರೀಯ ವಾದಗಳು ತ್ರಿಯೇಕತ್ವವನ್ನು ತಿರಸ್ಕರಿಸಬೇಕಾದ ಒಂದು ಸುಳ್ಳು ಭೋದನೆಯೆಂದು ಸ್ಥಾಪಿಸಿದೆ ಮಾತ್ರವಲ್ಲ ದೇವರ, ಆತನ ಪುತ್ರನ ಮತ್ತು ಪವಿತ್ರಾತ್ಮದ ಕುರಿತಾದ ಸತ್ಯವನ್ನು ಇತರರಿಗೆ ವಿವರಿಸುವಂತೆಯೂ ಸಾಧ್ಯಮಾಡಿದೆ.
4 ನಮ್ಮ ಬೈಬಲಾಧರಿತ ಸ್ಥಾನವೇನಂದರೆ, “ನಮಗಾದರೋ ಒಬ್ಬನೇ ದೇವರಿದ್ದಾನೆ; ಆತನು ತಂದೆಯೆಂಬಾತನೇ.” (1 ಕೊರಿ. 8:6) ಈ ಹೊಸ ಬ್ರೊಷರ್ ಅನ್ಯಭೋದನೆಯಾದ ತ್ರಿಯೇಕತ್ವದ ಮಿಥ್ಯೆಯನ್ನು ಬಯಲುಮಾಡಲು ನಮಗೆ ಸಹಾಯಮಾಡುವುದು ಮತ್ತು ಹೀಗೆ ನಾವು “ಎಲ್ಲಾ ಮನುಷ್ಯರು ಸುಳ್ಳುಗಾರರಾದರೂ ದೇವರು ಸತ್ಯವಂತನೇ ಸರಿ” ಎಂಬದನ್ನು ದೀನರೆಲರ್ಲಿಗೆ ತಿಳಿಸಲು ಶಕ್ತರಾಗುವೆವು.—ರೋಮಾ. 3:4.
ಯುವಜನರಿಗೆ ಉತ್ತರಗಳು
5 ಅಧಿವೇಶನದ ನೇರವಾದ ಭಾಷಣ ಮತ್ತು ಕ್ವೆಶ್ಚನ್ಸ್ ಯಂಗ್ ಪೀಪಲ್ ಆಸ್ಕ್—ಆನ್ಸ್ರ್ಸ್ ದೇಟ್ ವರ್ಕ್ ಪುಸ್ತಕದ ಹೊರಡೋಣದ ವಿಶೇಷ ಏರ್ಪಾಡನ್ನು ನಾವು ಬೇಗನೇ ಮರೆಯುವಂತಿಲ್ಲ. ಅದು ಯುವಜನರ ಪ್ರಯೋಜನಕ್ಕಾಗಿ ಒದಗಿಸಲ್ಪಟ್ಟಾಗ್ಯೂ, ಹೆತ್ತವರು, ವಿಶೇಷವಾಗಿ ತಂದೆಯಂದಿರು, ತಮ್ಮ ಮಕ್ಕಳನ್ನು ತರಬೇತು ಮಾಡಲು ಈ ಪುಸ್ತಕವನ್ನು ಬಳಸುವಂತೆ ಮತ್ತು ಅವರನ್ನು “ಯೆಹೋವನ ಮಾನಸಿಕ ಕ್ರಮದಲ್ಲಿ ಮತ್ತು ಶಿಸ್ತಿನಲ್ಲಿ ಬೆಳೆಸುವಂತೆ” ಪ್ರೇರೇಪಿಸಲ್ಪಟ್ಟರು.—ಎಫೆ. 6:4.
6 ಯುವಜನರು ದೇವಭಕ್ತಿಯಲ್ಲಿ ತರಬೇತು ಹೊಂದುತ್ತಾ ಮುಂದರಿಯಲು ಸಹಾಯಕ್ಕಾಗಿ ಯೆಹೋವನ ಸಂಸ್ಥೆಯು ಒದಗಿಸಿರುವ ಈ ಮಹತ್ವದ ಸಮಾಚಾರವನ್ನು ಹೆತ್ತವರು ಮಕ್ಕಳು ಇಬ್ಬರೂ ಪೂರ್ಣವಾಗಿ ಪರಿಚಯಿಸಿಕೊಳ್ಳಬೇಕು. ಅಧಿವೇಶನದ ಭಾಷಣದಲ್ಲಿ ಸೂಚಿಸಿದ ಪ್ರಕಾರ, ಇದನ್ನು ಕುಟುಂಬ ಚರ್ಚೆಗಳಲ್ಲಿ ಮಾಡಸಾಧ್ಯವಿದೆ.
ದೇವರ ವಾಕ್ಯ—ಮನುಷ್ಯರದಲ್ಲ
7 ದಿ ಬೈಬಲ್— ಗಾಡ್ಸ್ ವರ್ಡ್ ಆರ್ ಮ್ಯಾನ್ಸ್? ಎಂಬ ಶನಿವಾರದಂದು ಹೊರಡಿಸಲ್ಪಟ್ಟ ಹೊಸ ಪುಸ್ತಕವು ಪ್ರಾಮಾಣಿಕ ಜನರಿಗೆ ಬೈಬಲು ದೇವ ಪ್ರೇರಿತವೆಂದೂ ಮತ್ತು ಅದರಲ್ಲಿ “ದೇವಭಕ್ತಿಯನ್ನುಂಟುಮಾಡುವ ಸತ್ಯದ ಪರಿಜ್ಞಾನ” ಇದೆಯೆಂದೂ ತಿಳಿಯಲು ಸಹಾಯ ಮಾಡುವರೇ ರಚಿಸಲಾಗಿದೆ. (ತೀತ 1:1) ಈ ಹೊಸ ಪುಸ್ತಕವು ನಮ್ಮ ಕಾರ್ಯಕ್ಕೆ ಎಂತಹ ದಾನವು! ಆದರೆ ಇದನ್ನು ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಉಪಯೋಗಿಸಲು, ಅದರ ಉಪದೇಶಕ ವೈಶಿಷ್ಟ್ಯದ ಪೂರ್ಣ ಪರಿಚಯವು ನಮಗಿರಬೇಕು ಮತ್ತು ಕ್ಷೇತ್ರಸೇವೆಯಲ್ಲಿ ಉಪಯೋಗಿಸುವಾಗ ಪುಸ್ತಕದಲ್ಲಿರುವ ವಿಶಿಷ್ಟ ಅಂಶಗಳಿಗೆ ಗಮನ ಸೆಳೆಯಲು ನಾವು ಶಕ್ತರಾಗಿರಬೇಕು.
8 “ದೇವಭಕ್ತಿ” ಜಿಲ್ಲಾ ಅಧಿವೇಶನದಲ್ಲಿ ದೊರೆತ ಸಮಯೋಚಿತವಾದ ಹೇರಳ ಆತ್ಮಿಕ ಆಹಾರಕ್ಕಾಗಿ ನಾವೆಲ್ಲರೂ ಯೆಹೋವನಿಗೆಷ್ಟು ಕೃತಜ್ಞರು! ದೇವಭಕ್ತಿಯ ನಮ್ಮ ಬೆನ್ನಟ್ಟುವಿಕೆಯಲ್ಲಿ ಈ ಒದಗಿಸುವಿಕೆಗಳ ಉತ್ತಮ ಉಪಯೋಗವನ್ನು ಮಾಡುವ ಮೂಲಕ ನಮ್ಮ ಹೃದಯಪೂರ್ವಕ ಗಣ್ಯತೆಯನ್ನು ತೋರಿಸಲು ನಾವು ನಿರ್ಧಾರವನ್ನು ಮಾಡುವ. ಇದರಲ್ಲಿ ಇತರರು ಸಹಾ ನಮ್ಮ ಒಬ್ಬನೇ ದೇವರೂ ತಂದೆಯೂ ಆಗಿರುವ ಯೆಹೋವನ ಆರಾಧಕರಾಗುವಂತೆ ಸಹಾಯಕ್ಕಾಗಿ ಈ ಒದಗಿಸುವಿಕೆಗಳನ್ನು ಉಪಯೋಗಿಸುವುದೂ ಸೇರಿದೆ.