ಸಮಯೋಚಿತ ಸಹಾಯವು
1 ಸಭೆಗಾಗಿ ನಿಜ ಚಿಂತೆಯು ಯೇಸುವಿಗಿರುವುದರಿಂದ ಅವನು ಯಾವಾಗಲೂ “ಸಮಯೋಚಿತ ಸಹಾಯವನ್ನು” ಒದಗಿಸುವನು. (ಇಬ್ರಿ. 4:16) ಬೇಕಾದ ಹೆಚ್ಚಿನ ಸಹಾಯವು, ಎಫೆಸ 4:8, 11, 12 ರಲ್ಲಿ ವಾಗ್ದಾನಿಸಲ್ಪಟ್ಟ ಪ್ರಕಾರ, “ಮನುಷ್ಯರಲ್ಲಿ ದಾನಗಳ” ಮೂಲಕ ಒದಗಿಸಲ್ಪಟ್ಟಿದೆ. ಅಂತಹ ಒಂದು ದಾನವು ಪ್ರತಿ ಸಭೆಯಲ್ಲಿರುವ ಸೇವಾ ಮೇಲ್ವಿಚಾರಕನು.
2 ಸೇವಾ ಮೇಲ್ವಿಚಾರಕನು ನಮಗೆ ಯಾವ ರೀತಿಗಳಲ್ಲಿ ಸಹಾಯ ಮಾಡಬಲ್ಲನು? ಹಲವಾರು ವಿಧಗಳಲ್ಲಿ: (1) ಅವನು ನಮ್ಮೆಲ್ಲರನ್ನು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕಾರ್ಯದ ಮಹತ್ವದ ಅರುಹುಳ್ಳವರಾಗಿ ಮಾಡುತ್ತಾನೆ. (2) ಸಭಾ ಪುಸ್ತಕಭ್ಯಾಸ ಗುಂಪಿನ ಮೂಲಕ ಕ್ಷೇತ್ರದಲ್ಲಿ ಒಳ್ಳೇ ಸಂಘಟನೆ ಮತ್ತು ನಾಯಕತ್ವವು ಸಿಗುವಂತೆ ಅವನು ನೋಡುತ್ತಾನೆ. (3) ಶುಶ್ರೂಷಕರಾದ ನಮ್ಮ ಪರಿಣಾಮಕಾರತೆಯನ್ನು ಪ್ರಗತಿಮಾಡಲು ಬೇಕಾದ ವೈಯಕ್ತಿಕ ಸಹಾಯವು ಪ್ರತಿಯೊಬ್ಬನಿಗೆ ಸಿಗುವಂತೆ ಮಾಡುವುದರಲ್ಲಿ ಅವನು ಅಸಕ್ತನಿದ್ದಾನೆ.
ಸೇವಾ ಮೇಲ್ವಿಚಾರಕನ ಸಂದರ್ಶನೆ
3 ಸಭಾಪುಸ್ತಕಭ್ಯಾಸದ ಏರ್ಪಾಡಿನ ಮೂಲಕ ಒದಗಿಸುವ ಕ್ರಮದ ಉತ್ತಮ ಸಹಾಯವಲ್ಲದೆ, ವೈಯಕ್ತಿಕ ರೀತಿಯಲ್ಲಿ ನಮಗೆ ಸಹಾಯ ಸಿಗುವಂತೆ ವಿಶೇಷ ಒದಗಿಸುವಿಕೆಯನ್ನು ಮಾಡಲಾಗಿದೆ. ಸೇವಾ ಮೇಲ್ವಿಚಾರಕನು ಸಾಮಾನ್ಯವಾಗಿ ಒಂದು ಸಭಾ ಪುಸ್ತಕಭ್ಯಾಸ ಚಾಲಕನಾಗಿ ನೇಮಿಸಲ್ಪಡುತ್ತಾನೆ. ಆದರೆ ತಿಂಗಳಿಗೊಮ್ಮೆ ಅವನು ತನ್ನ ಸ್ವಂತ ಗುಂಪನ್ನು ಬಿಟ್ಟು ಬೇರೊಂದು ಪುಸ್ತಕಭ್ಯಾಸ ಗುಂಪಿನೊಂದಿಗೆ ಒಂದು ವಾರ ಕೆಲ್ಸಮಾಡುವನು. ಅವನ ಗೈರುಹಾಜರಿಯಲ್ಲಿ ಅವನ ಸಹಾಯಕನು ಅಭ್ಯಾಸ ನಡಿಸುವನು. ಅವನು ಪುಸ್ತಕಭ್ಯಾಸ ಚಾಲಕನಿಗೆ ತನ್ನ ಸಂದರ್ಶನೆಯ ಕುರಿತು ಮುಂದಾಗಿ ತಿಳಿಸುವನು, ಹೀಗೆ ಗುಂಪು ಅವನ ವಾರದ ಚಟುವಟಿಕೆಯಿಂದ ಪೂರ್ಣ ಪ್ರಯೋಜನ ಪಡೆಯುವಂತೆ ಬೇಕಾದ ಯೋಜನೆಗಳನ್ನು ಮಾಡ ಸಾಧ್ಯವಾಗುವುದು.
4 ಈ ವಿಶೇಷ ವಾರದಲ್ಲಿ, ಪುಸ್ತಕಭ್ಯಾಸವು ಸಾಮಾನ್ಯವಾಗಿ 45 ನಿಮಿಷ ನಡೆಯುವುದು. ಉಳಿದ 15 ನಿಮಿಷ ಸೇವಾ ಮೇಲ್ವಿಚಾರಕನು ನಮ್ಮ ಸೌವಾರ್ತಿಕ ಕಾರ್ಯವನ್ನು ಪ್ರಗತಿಮಾಡಲು ನೆರವಾಗುವಂತೆ ರಚಿಸಲಾದ ಉತ್ತೇಜಕ ಭಾಷಣವನ್ನು ಕೊಡುವನು. ಎಲ್ಲಾ ಪ್ರಚಾರಕರು ಹಾಗೂ ಹೊಸಾಸಕ್ತರು ಇದಕ್ಕೆ ಹಾಜರಿರುವದು ಮಹತ್ವದ್ದು.
5 ಸಂದರ್ಶಿಸಲ್ಪಡುವ ಗುಂಪಿನ ಪ್ರಚಾರಕರೆಲ್ಲರೂ ಈ ವಿಶೇಷ ಭೇಟಿಯ ಸೇವೆಯಲ್ಲಿ, ವಿಶೇಷವಾಗಿ ವಾರಾಂತ್ಯದ ಸೇವೆಯಲ್ಲಿ ಪೂರ್ಣ ಪಾಲಿಗರಾಗಲು ಏರ್ಪಡಿಸಬೇಕು. ಎಲ್ಲಿ ಯುಕ್ತವೋ ಅಲ್ಲಿ, ಆ ವಾರಕ್ಕಾಗಿ ಸಂಜೆಯ ಸಾಕ್ಷಿಕಾರ್ಯವನ್ನು ಏರ್ಪಡಿಸಬಹುದು. ಸೇವಾ ಮೇಲ್ವಿಚಾರಕನ ಗುರಿಗಳಲ್ಲಿ ಒಂದು ಆದಷ್ಟು ಹೆಚ್ಚು ಪ್ರಚಾರಕರೊಂದಿಗೆ ಸೇವೆ ಮಾಡುವದೇ ಆಗಿದೆ. ಪ್ರಾಯಶ: ಕೆಲವರೊಂದಿಗೆ ಪುನರ್ಭೇಟಿ ಮತ್ತು ಬೈಬಲಭ್ಯಾಸಕ್ಕೂ ಅವನು ಹೋಗಬಹುದು. ಸೇವೆಯಲ್ಲಿ ಸಹಾಯ ಅಥವಾ ಉತ್ತೇಜನ ಬೇಕಾದ ಯಾವನೂ ಅವನನ್ನು ಗೋಚರಿಸಿ ಸಹಾಯ ಕೇಳಬಹುದು. ಅಲ್ಲದೆ, ಆ ವಾರ ಗುಂಪಿಗಾಗಿ ಅವನು ನಡಿಸುವ ಕ್ಷೇತ್ರಸೇವೆಗಾಗಿ ಕೂಡುವಿಕೆಗಳನ್ನು ಹಾಜರಾಗುವ ಮೂಲಕವೂ ನಾವು ಪ್ರಯೋಜನ ಹೊಂದಬಲ್ಲೆವು.
6 ಸೇವಾ ಮೇಲ್ವಿಚಾರಕನು ಪುಸ್ತಕಭ್ಯಾಸ ಚಾಲಕನೊಂದಿಗೆ ಗುಂಪಿನ ಚಟುವಟಿಕೆಯನ್ನು ಚರ್ಚಿಸಲು ಸಮಯ ತಕ್ಕೊಳ್ಳುವನು. ಕ್ರಮದ ಸೇವಾ ಏರ್ಪಾಡುಗಳನ್ನು ಪರೀಕ್ಷಿಸಿ, ವಿಷಯಗಳು ಎಲ್ಲರಿಗೂ ಅನುಕೂಲವಾದ ವ್ಯಾವಹಾರ್ಯ ರೀತಿಯಲ್ಲಿದೆಯೋ ಎಂದು ನೋಡುವನು. ಕ್ರಮವಾಗಿ ಸೇವೆಮಾಡಲು ಯಾರಿಗಾದರೂ ಸಹಾಯ ಅಥವಾ ಉತ್ತೇಜನ ಬೇಕಾದರೆ, ಅವನು ಅವರೊಂದಿಗೆ ಖಾಸಗಿಯಾಗಿ ಮಾತಾಡಿ, ಪ್ರಗತಿಮಾಡುವಂತೆ ದಯೆಯಿಂದ ಸಲಹೆ ಕೊಡಬಹುದು. ಅಕ್ರಮ ಪ್ರಚಾರಕರನ್ನು ಪುಸ್ತಕಭ್ಯಾಸಚಾಲಕನೊಂದಿಗೆ ಸಂದರ್ಶಿಸುವ ಏರ್ಪಾಡನ್ನೂ ಸೇವಾ ಮೇಲ್ವಿಚಾರಕನು ಮಾಡ ಸಾಧ್ಯವಿದೆ. ಆ ಗುಂಪಿನ ಬೈಬಲಭ್ಯಾಸ ವರದಿಗಳ ಫೈಲನ್ನೂ ಪುಸ್ತಕಭ್ಯಾಸಚಾಲಕನೊಂದಿಗೆ ಅವನು ಪರಾಮರ್ಶಿಸಬಹುದು. ಪ್ರಾಯಶ: ಅವರು ಕೆಲವು ಪ್ರಚಾರಕರೊಂದಿಗೆ ಅವರ ಮನೆಬೈಬಲಭ್ಯಾಗಳಿಗೆ ಹೋಗಿ ಆತ್ಮಿಕ ಉತ್ತೇಜನ ನೀಡಬಹುದು.
7 ಅನೇಕ ಪುಸ್ತಕಭ್ಯಾಸಗಳಿರುವ ಸಭೆಗಳಲ್ಲಿ ಸೇವಾ ಮೇಲ್ವಿಚಾರಕನ ಸಂದರ್ಶನೆಗಳು ವಿರಳವಾಗಿರುವವು. ಆದ್ದರಿಂದ ಎಲ್ಲರೂ ಅವನು ಸಂದರ್ಶಿಸುವಾಗ ಪೂರ್ಣ ಪ್ರಯೋಜನ ಹೊಂದಲು ಅಧಿಕ ಪ್ರಯತ್ನ ಮಾಡಬೇಕು. ಆ ಸಮಯದಲ್ಲಿ ಸೇವಾ ಪ್ರಗತಿಗಾಗಿ ಕೊಡಲ್ಪಡುವ ಸೂಚನೆಗಳನ್ನು ಬರೆದಿಟ್ಟು, ಮುಂದಿನ ಸಂದರ್ಶನೆಗೆ ಮುಂಚೆ ಅವನ್ನು ಅನ್ವಯಿಸಲು ಎಡೆಬಿಡದೆ ಪ್ರಯತ್ನಿಸಿರಿ. ನಿಶ್ಚಯವಾಗಿ, ನಮಗೆ ಯಾವಾಗ ಸಹಾಯ ಬೇಕೋ ಆವಾಗ ಅದನ್ನು ನೀಡಲು ಅವನು ಸಭೆಯಲ್ಲಿದ್ದಾನೆ. ಕೆಲವೇ ಪುಸ್ತಕಭ್ಯಾಸಗಳಿರುವ ಸಭೆಗಳಲ್ಲಿ, ಸೇವಾಮೇಲ್ವಿಚಾರಕನು ಪ್ರತಿ ಸಭೆಯನ್ನು ಕಡಿಮೆ ಪಕ್ಷ ಆರು ತಿಂಗಳಿಗೊಮ್ಮೆಯಾದರೂ ಸಂದರ್ಶಿಸುವಂತೆ ಪ್ರಯತ್ನಿಸುವನು.
8 ಸೇವಾ ಮೇಲ್ವಿಚಾರಕನೊಂದಿಗೆ ಸಹಕರಿಸುವ ನಮ್ಮ ಸಿದ್ಧಮನಸ್ಸು ಮತ್ತು ಅವನು ನಮ್ಮ ಸಭಾಪುಸ್ತಕಭ್ಯಾಸಕ್ಕೆ ಸಂದರ್ಶನೆ ಮಾಡುವಾಗ ನಾವು ಕೊಡುವ ಮನಪೂರ್ವಕ ಬೆಂಬಲವು, ಶಿಷ್ಯರನ್ನಾಗಿ ಮಾಡುವ ಕಾರ್ಯದಲ್ಲಿ ನಮ್ಮ ಪರಿಣಾಮಕಾರತೆಯನ್ನು ಹೆಚ್ಚಿಸುವುದು ಮತ್ತು ನಮ್ಮ ಶುಶ್ರೂಷೆಯಲ್ಲಿ ನಾವು ಹೆಚ್ಚಿನ ಸಂತೋಷವನ್ನು ಕಂಡುಕೊಳ್ಳುವೆವು