ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಪರಿಶುಧ್ಧರಾಗಿರ್ರಿ
1 ಪರಿಶುದ್ಧತೆ ದೇವಜನರಿಗೆ, ಹಿಂದಿನಂತೆ ಈಗಲೂ ಒಂದು ದೈವಿಕ ಆವಶ್ಯಕತೆಯಾಗಿರುತ್ತದೆ. ಆದ್ದರಿಂದ ಪರಿಶುದ್ಧತೆ ಎಂದರೇನೆಂದು ಸ್ಪಷ್ಟವಾಗಿ ತಿಳುಕೊಳ್ಳುವದು ಮಾತ್ರವಲ್ಲ ಯೆಹೋವನ ನಮ್ಮ ಆರಾಧನೆಯಲ್ಲಿ ಅದು ಏಕೆ ಮತ್ತು ಹೇಗೆ ತೋರಿಬರಬೇಕು ಎಂದು ತಿಳಿಯುವ ಅತ್ಯಾವಶ್ಯಕತೆಯೂ ಅಲ್ಲಿದೆ. ಆದ್ದರಿಂದ, “ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಪರಿಶುದ್ಧರಾಗಿರಿ” ಎಂಬ ಮುಖ್ಯ ವಿಷಯವು 1991ನೇ ಸೇವಾ ವರ್ಷದ ನಮ್ಮ ವಿಶೇಷ ಸಮ್ಮೇಳನ ದಿನದಲ್ಲಿ ಚರ್ಚಿಸಲ್ಪಡಲಿದೆ.—1 ಪೇತ್ರ 1:15.
2 ಯೆಹೋವನ ನೀತಿಯ ತತ್ವಗಳು ಮತ್ತು ನಿಯಮಗಳು ಪವಿತ್ರ ದೇವರಾದ ಆತನಿಂದಲೇ ಬಂದಿವೆಯಾದ್ದರಿಂದ, ನಾವು ಆನಂದಿಸುವ ನೀತಿಯ ನಿಲುವು, ಆತನೊಂದಿಗೆ ನಮ್ಮ ಆಪ್ತವಾದ, ವೈಯಕ್ತಿಕ ಸಂಬಂಧದ ನೇರ ಫಲವಾಗಿದೆ. ಆದಕಾರಣ ಕಾರ್ಯಕ್ರಮವು, ದೇವರೊಂದಿಗೆ ನಮ್ಮ ಸಂಬಂಧವನ್ನು ಪ್ರಗತಿಗೊಳಿಸುವುದು ಹೇಗೆಂದು ತೋರಿಸುವ ಹಲವಾರು ಮಾರ್ಗಗಳನ್ನು ಮುಂತರುವುದು. ಇದರಲ್ಲಿ ಆತನ ಪರಿಶುದ್ಧ ಮಟ್ಟಕ್ಕೆ, ಅಲ್ಪವೆಂದು ಎಣಿಸಲಾಗುವ ವಿಷಯಗಳಲ್ಲೂ, ವಿಧೇಯತೆಯು ಸೇರಿದೆ. (ಲೂಕ 16:10) ಹೀಗೆ ಯೆಹೋವನ ಪವಿತ್ರ ಆವಶ್ಯಕತೆಗಳಿಗೆ ಆಳವಾದ ಗಣ್ಯತೆಯನ್ನು ಬೆಳೆಸಲು ನಮಗೆ ಸಹಾಯ ಮಾಡಲ್ಪಡುವುದು ಮತ್ತು ಅವು ನಮ್ಮೆಲ್ಲಾ ಯೋಚನೆ, ಭಾವನೆ ಮತ್ತು ಮಾರ್ಗಗಳನ್ನು ಏಕೆ ಪ್ರಭಾವಿಸಬೇಕೆಂಬ ಜ್ಞಾಪಕವನ್ನೂ ನೀಡಲಾಗುವುದು.
3 ಕೊಡಲ್ಪಡುವ ಎರಡು ಮುಖ್ಯ ಉಪನ್ಯಾಸಗಳಲ್ಲಿ “ಪ್ರಗತಿ ಪರವಾಗಿ ಶುದ್ಧೀಕರಿಸಲ್ಪಡುವುದಕ್ಕೆ ಅಧೀನರಾಗಿರುವುದು” ಮತ್ತು “ಯೆಹೋವನ ಪರಿಶುದ್ಧ ಜನರ ಚಟುವಟಿಕೆಗಳನ್ನು ವಿಸ್ತರಿಸುವುದು,” ಸೇರಿವೆ. ಉದ್ರೇಕಿತ ಲೋಕ ಸಂಭವಗಳು ನಮ್ಮ ಕಾಲದ ಜರೂರಿಯನ್ನು ನಿತ್ಯವೂ ನಮ್ಮ ಮನಸ್ಸಿಗೆ ಖಚಿತಪಡಿಸುತ್ತಿರುವಾಗ, ನಮ್ಮನ್ನು ಪರಿಶುದ್ಧತೆಯಲ್ಲಿ ನಡಿಸಿಕೊಳ್ಳುವ ಮೂಲಕ ಆತನನ್ನು ಮೆಚ್ಚಿಸುವವರಾಗುವಂತೆ ಮತ್ತು ಮಾರ್ಗದರ್ಶನೆಗಾಗಿ ಸದಾ ಆತನ ಕಡೆಗೆ ನೋಡುವಂತೆ ಈ ಹೊಸ ಸೇವಾ ವರ್ಷಕ್ಕಾಗಿರುವ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮವು ನಮ್ಮನ್ನು ಹುರಿದುಂಬಿಸಲಿದೆ.—1 ಪೇತ್ರ 1:14, 16.