1993ರ “ದೈವಿಕ ಬೋಧನ” ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ ಇಸವಿ 1993ರ “ದೈವಿಕ ಬೋಧನೆ” ಜಿಲ್ಲಾ ಅಧಿವೇಶನದಿಂದ ಪೂರ್ಣ ಪ್ರಯೋಜನ ಪಡೆಯಿರಿ
1 “ಯೆಹೋವನೇ, ನನಗೆ ಬೋಧಿಸು.” (ಕೀರ್ತ. 86:11 NW) ಇದು ದೇವರ ಪ್ರತಿಯೊಬ್ಬ ಸಮರ್ಪಿತ ಸೇವಕನ ಶ್ರದ್ಧೆಯ ಬೇಡಿಕೆಯಾಗಿರತಕ್ಕದ್ದು. ನಾವು ಕಲಿಯುವುದನ್ನು ಎಂದೂ ನಿಲ್ಲಿಸದಿರಲು ಮತ್ತು ನಾವು ಏನನ್ನು ಕಲಿಯುತ್ತೇವೊ ಅದನ್ನು ಅನ್ವಯಿಸುವುದನ್ನು ಎಂದೂ ನಿಲ್ಲಿಸದಿರಲು ದೃಢನಿಶ್ಚಯಿಗಳಾಗಿದ್ದೇವೆ. ಕೆಲವೊಮ್ಮೆ ನಾವು ಮರುಹೊಂದಾಣಿಕೆ ಮಾಡುವ ಅಗತ್ಯವಿದೆ, ಮತ್ತು ಕೀರ್ತನೆಗಾರನು ಮಾಡಿದಂತೆ, ನಮ್ಮ ಹೃದಯವು ವಿಭಜಿತವಾಗದಂತೆ ಅದನ್ನು ಐಕ್ಯಗೊಳಿಸಲು ನಾವು ದೇವರನ್ನು ಬೇಡುವ ಅಗತ್ಯವಿದೆ. ಈ ವಿಷಯಗಳ ವ್ಯವಸ್ಥೆಯ ಒತ್ತಡಗಳ ಮಧ್ಯೆ ಯೆಹೋವನನ್ನು ನಂಬಿಗಸತ್ತೆಯಿಂದ ಸೇವಿಸಲು ನಮಗೆ ಬೇಕಾದ ಪ್ರಾಯೋಗಿಕ ಉಪದೇಶವನ್ನು ಮತ್ತು ಮರುಹೊಂದಾಣಿಕೆಯನ್ನು “ದೈವಿಕ ಬೋಧನೆ” ಜಿಲ್ಲಾ ಅಧಿವೇಶನದ ಕಾರ್ಯಕ್ರಮವು ಒದಗಿಸುವುದು.
2 ನಾಲ್ಕು ದಿನಗಳ ಅಧಿವೇಶನ: ಕಾರ್ಯಕ್ರಮವನ್ನು, ಭಾರತದ ಉದ್ದಕ್ಕೂ 16 ಅನುಕೂಲವಾದ ಸ್ಥಳಗಳಲ್ಲಿ ಸಾದರಪಡಿಸಲಾಗುವುದು. ಜುಲೈ 15, 1993ರ ದ ವಾಚ್ಟವರ್ನ ಇಂಗ್ಲಿಷ್ ಸಂಚಿಕೆಯು ಮತ್ತು ಮೇ 15, 1993ರ ದೇಶೀಯ ಭಾಷೆಗಳ ಕಾವಲಿನಬುರುಜು, ಈ ಸ್ಥಳಗಳ ಸಂಪೂರ್ಣ ಪಟ್ಟಿಯನ್ನು ಒದಗಿಸುತ್ತವೆ. ಇಂಗ್ಲಿಷ್ನಲ್ಲಿ ಇರುವುದರ ಜೊತೆಗೆ, ಕಾರ್ಯಕ್ರಮವನ್ನು ಅದರದರ ಸ್ಥಳಗಳಲ್ಲಿ ಆಸಾಮೀಸ್, ಬಂಗಾಲಿ, ಗುಜುರಾಥಿ, ಹಿಂದಿ, ಕನ್ನಡ, ಕೊಂಕಣಿ, ಮಲೆಯಾಳಂ, ಮರಾಠಿ, ತಮಿಳು, ಮತ್ತು ತೆಲುಗು ಭಾಷೆಗಳಲ್ಲಿ ಸಾದರಪಡಿಸಲಾಗುವುದು. ಹೆಚ್ಚಿನ ಸ್ಥಳಗಳಲ್ಲಿ, ಕಾರ್ಯಕ್ರಮವು ಗುರುವಾರ ಅಪರಾಹ್ನ 1:20ಕ್ಕೆ ಆರಂಭಿಸಲ್ಪಡುವುದು ಮತ್ತು ರವಿವಾರ ಅಪರಾಹ್ನ ಸುಮಾರು 4:15ಕ್ಕೆ ಮುಕ್ತಾಯಗೊಳ್ಳುವುದು.
3 ನಮಗಾಗಿ ಏನು ಕಾದಿದೆ? ಭಾಷಣಗಳು, ಪ್ರತ್ಯಕ್ಷಾಭಿನಯಗಳು, ಇಂಟರ್ವ್ಯೂಗಳು, ಮತ್ತು ಎರಡು ನಾಟಕಗಳು—ವಿಭಿನ್ನ ರೀತಿಗಳಲ್ಲಿ ಸಾದರಪಡಿಸಲಾದ ಗಟ್ಟಿಯಾದ ಆತ್ಮಿಕ ಆಹಾರದ ಪುಷ್ಕಳತೆ. ಈ ಅತಿ ಮುಖ್ಯವಾದ ಉಪದೇಶದಲ್ಲಿ ಯಾವುದನ್ನೂ ಕಳೆದುಕೊಳ್ಳಬೇಡಿ! ಇದರೊಂದಿಗೆ, ಹಳೆಯ ಪರಿಚಯಗಳನ್ನು ನವೀಕರಿಸಲು ಮತ್ತು ಅನೇಕ ಹೊಸ ಪರಿಚಯಗಳನ್ನು ಉಂಟುಮಾಡಲು ನಾವು ಮುನ್ನೋಡುತ್ತೇವೆ. ವಿದೇಶೀ ನೇಮಕಗಳಲ್ಲಿ ಸೇವೆ ಮಾಡುತ್ತಿರುವ ಮಿಷನೆರಿಗಳು ನಿಮ್ಮ ಅಧಿವೇಶನವನ್ನು ಹಾಜರಾಗುತ್ತಿರಬಹುದು. ಈ ನಂಬಿಗಸ್ತ ಸಹೋದರ ಸಹೋದರಿಯರನ್ನು ಅರಿಯಲು ಇರುವ ಅವಕಾಶದ ಲಾಭವನ್ನು ಪಡೆಯಿರಿ. ನೀವು ಒಬ್ಬ ಹೆತ್ತವರಾಗಿದ್ದರೆ, ನಿಮ್ಮ ಮಕ್ಕಳನ್ನು ಸಂಭಾಷಣೆಯಲ್ಲಿ ಸೇರಿಸಿರಿ. ಪೂರ್ಣ ಸಮಯದ ಸೇವೆಯಲ್ಲಿ ಒಂದು ಜೀವನೋಪಾಯವನ್ನು ಪರಿಗಣಿಸಲು, ಈ ಮಿಷನೆರಿಗಳ ಆನಂದಭರಿತ ಮತ್ತು ಸ್ವತ್ಯಾಗದ ಆತ್ಮವು, ನಿಮ್ಮ ಎಳೆಯರಿಗೆ ಅಸ್ತಿವಾರವನ್ನು ಹಾಕಬಹುದು.
4 ಬಂಡಾರದೊಳಗೆ ಸಂಪೂರ್ಣ ದಶಾಂಶವನ್ನು ನೀವು ತರುವಿರೊ? ಮಲಾಕಿಯ 3:10 ರಲ್ಲಿ, ಇಸ್ರಾಯೇಲ್ಯರು ಯೆಹೋವನನ್ನು ಪರೀಕ್ಷಿಸಲು ಬಯಸುವುದಾದರೆ ಮತ್ತು ಬಂಡಾರದೊಳಗೆ ಸಂಪೂರ್ಣ ದಶಾಂಶವನ್ನು ತರುವುದಾದರೆ, ಆತನು ಹಿಡಿಯಲಾಗದಷ್ಟು ಸುವರವನ್ನು ಅವರ ಮೇಲೆ ಸುರಿಯುವನೆಂದು ಯೆಹೋವನು ವಾಗ್ದಾನಿಸಿದನು.
5 ಕೆಲವರಿಗೆ, ಯೆಹೋವನನ್ನು ಪರೀಕೆಗ್ಷೆ ಒಳಪಡಿಸುವುದೆಂದರೆ, ಅಧಿವೇಶನವನ್ನು ಹಾಜರಾಗಲು ರಜೆಗಾಗಿ ಯಾ ಬಿಡುವಿನ ಸಮಯಕ್ಕಾಗಿ ಆದಷ್ಟು ಬೇಗನೆ ತಮ್ಮ ಯಜಮಾನರನ್ನು ಕೇಳುವುದನ್ನು ಅರ್ಥೈಸುವುದು. ಅಧಿವೇಶನವನ್ನು ಹಾಜರಾಗಲು ಅವರ ಯಜಮಾನರು ಅವರಿಗೆ ಅನುಮತಿಯನ್ನು ಎಂದೂ ಕೊಡುವುದಿಲ್ಲ ಎಂಬುದನ್ನು ಕಲ್ಪಿಸಿಕೊಳ್ಳುತ್ತಾ, ಇದನ್ನು ಮಾಡಲು ಸಹೋದರರು ಕೆಲವೊಮ್ಮೆ ಹಿಂಜರಿದಿದ್ದಾರೆ. ಆದರೂ, ಆತ್ಮಿಕ ವಿಷಯಗಳನ್ನು ಒಳಗೊಳ್ಳದ ಸಮಯಗಳಲ್ಲಿ, ಅವರು ಏನನ್ನು ಮಾಡಲು ಬಯಸುತ್ತಾರೊ ಅದನ್ನು ಅವರ ಯಜಮಾನರಿಗೆ ತಿಳಿಯಪಡಿಸುವುದರಲ್ಲಿ ಅವರಿಗೆ ಕಡಿಮೆ ಅಥವಾ ಯಾವುದೇ ತೊಂದರೆ ಇರುವುದಿಲ್ಲ.
6 ನಾವು ನಮ್ಮನ್ನೇ ಕೇಳಿಕೊಳ್ಳತಕ್ಕದ್ದು: ಪ್ರಿಯ ಮಿತ್ರನೊಬ್ಬನು ಇನ್ನೊಂದು ಪ್ರದೇಶದಲ್ಲಿ ಮದುವೆಯಾಗುತ್ತಿದ್ದರೆ, ಮದುವೆಗೆ ಹಾಜರಾಗಲು ಬಿಡುವಿನ ಸಮಯಕ್ಕಾಗಿ ಕೇಳಲು ನಾವು ನಮ್ಮ ಯಜಮಾನರನ್ನು ಸಮೀಪಿಸುತ್ತಿರಲಿಲ್ಲವೊ? ಅವನು ಹಿಂಜರಿದಂತೆ ಕಂಡರೆ, ಹೋಗಲು ಶಕ್ತರಾಗಿರುವುದು ನಮಗೆ ಎಷ್ಟನ್ನು ಅರ್ಥೈಸುವುದು ಎಂಬುದನ್ನು ನಾವು ಗೌರವವುಳ್ಳವರಾಗಿ ವಿವರಿಸುತ್ತಿರಲಿಲ್ಲವೊ? ಖಂಡಿತವಾಗಿಯೂ, ಒಂದು ಮದುವೆಯನ್ನು ಹಾಜರಾಗುವುದಕ್ಕಿಂತಲೂ ಯೆಹೋವನಿಂದ ಕಲಿಸಲ್ಪಡುವುದು ಹೆಚ್ಚು ಪ್ರಾಮುಖ್ಯವು! ನಮ್ಮ ಆತ್ಮಿಕ ಬೆಳವಣಿಗೆಗಾಗಿ ಅಧಿವೇಶನದ ಕಾರ್ಯಕ್ರಮವು ಅತಿ ಮುಖ್ಯವಾಗಿದೆ ಎಂದು ನಮಗೆ ನಿಜವಾಗಿಯೂ ಮನವರಿಕೆಯಾದರೆ, ಅಧಿವೇಶನವನ್ನು ಹಾಜರಾಗಲು ನಮಗೆ ಸಮಯವನ್ನು ಅನುಮತಿಸುವಂತೆ ನಮ್ಮ ಯಜಮಾನರನ್ನು ಮನಗಾಣಿಸಲು ಸರಳವಾಗಿರುವುದು.—ಯಾಕೋಬ 1:7, 8.
7 ಇಸ್ರಾಯೇಲಿನಲ್ಲಿ ದಶಾಂಶವು ಯೆಹೋವನ ಆರಾಧನಾ ಸ್ಥಳಕ್ಕೆ ಐಹಿಕ ಬೆಂಬಲವನ್ನು ಒಳಗೊಂಡಿತ್ತು. ನಮ್ಮ ದಿನಗಳಲ್ಲಿ ದಶಾಂಶವು ಯೆಹೋವನ ಸೇವೆಯಲ್ಲಿ ಮತ್ತು ರಾಜ್ಯ ಕೆಲಸದ ಸಮರ್ಥನೆಯಲ್ಲಿ ನೇರವಾಗಿ ಉಪಯೋಗಿಸಲಾದ ಸಮಯ, ಶಕ್ತಿ, ಮತ್ತು ಹಣಕಾಸನ್ನು ಪ್ರತಿನಿಧಿಸುತ್ತದೆ. ನಾವು ಕೂಟಗಳಲ್ಲಿ, ಸಮ್ಮೇಳನಗಳಲ್ಲಿ, ಮತ್ತು ಅಧಿವೇಶನಗಳಲ್ಲಿ, ಅಷ್ಟೇ ಅಲ್ಲದೆ ನಮ್ಮ ಕೂಟದ ಜಾಗವನ್ನು ಕಾಪಾಡುವುದರಲ್ಲಿ ಮತ್ತು ಶುಚಿಮಾಡುವುದರಲ್ಲಿ ವ್ಯಯಿಸುವ ಸಮಯವನ್ನು ದಶಾಂಶವು ಒಳಗೊಂಡಿರುತ್ತದೆ. ಯೆಹೋವನ ಆತ್ಮಿಕ ಬಂಡಾರದೊಳಗೆ ಸಂಪೂರ್ಣ ದಶಾಂಶವನ್ನು ತರುವ ಅನೇಕ ಅವಕಾಶಗಳನ್ನು “ದೈವಿಕ ಬೋಧನೆ” ಜಿಲ್ಲಾ ಅಧಿವೇಶನವು ನಮಗೆ ಕೊಡುವುದು. ಇವುಗಳಲ್ಲಿ ಕೆಲವು ಯಾವುವು?
8 ಅಧಿವೇಶನದ ಕಾರ್ಯಕ್ರಮವನ್ನು ಗಮನವಿಟ್ಟು ಕೇಳುವ ಮೂಲಕ, ಪ್ರತಿಯೊಂದು ರಾಜ್ಯ ಸಂಗೀತ ಹಾಡುವಿಕೆಯಲ್ಲಿ ಉತ್ಸಾಹಪೂರ್ವಕವಾಗಿ ಪಾಲ್ಗೊಳ್ಳುವುದರ ಮೂಲಕ, ಮತ್ತು ನಮ್ಮ ಹೃದಯಪೂರ್ವ ಆಮೆನನ್ನು ನಾವು ಕೂಡಿಸ ಸಾಧ್ಯವಿರುವ ಪ್ರತಿಯೊಂದು ಪ್ರಾರ್ಥನೆಯನ್ನು ಜಾಗರೂಕತೆಯಿಂದ ಕೇಳುವ ಮೂಲಕ, ನಾವು ದಶಾಂಶವನ್ನು ತರಬಲ್ಲೆವು.
9 ಸತ್ಯದಲ್ಲಿ ನಮ್ಮ ಪ್ರಗತಿಯು ಒಂದು ಗಣನೀಯವಾದ ಮಟ್ಟದ ವರೆಗೆ ನಾವು ಹೇಗೆ ಕೇಳುತ್ತೇವೊ ಅದರ ಮೇಲೆ ಅವಲಂಬಿಸಿದೆ. ದೊಡ್ಡ ಸಭಾಂಗಣ ಯಾ ಕ್ರೀಡಾಂಗಣದಲ್ಲಿ, ಇತರರು ನಮ್ಮ ಸುತ್ತಲೂ ಏನನ್ನು ಮಾಡುತ್ತಿರುವರೊ ಅದರಿಂದ ಅಪಕರ್ಷಿಸಲ್ಪಡುವುದು ಸುಲಭ, ಮತ್ತು ಆ ಕಾರಣಕ್ಕಾಗಿ ನಾವು ನಮ್ಮ ಆಲೋಚನೆಗಳನ್ನು ಸರಿಯಾದ ನಿಯತಪಥದಲ್ಲಿಡಬೇಕು. ನಿಮ್ಮ ಬೈಬಲ್, ಸಂಗೀತಪುಸ್ತಕ, ಪೆನ್ನು ಮತ್ತು ನೋಟ್ಪುಸ್ತಕ, ಮತ್ತು ಆ ವಾರ ಅಭ್ಯಾಸಿಸಲಿಕ್ಕಿರುವ ಕಾವಲಿನಬುರುಜು ಸಂಚಿಕೆಯೊಂದಿಗೆ ಅಧಿವೇಶನಕ್ಕೆ ಪೂರ್ಣವಾಗಿ ತಯಾರಾಗಿ ಬರುವಂತೆ ಖಚಿತಮಾಡಿಕೊಳ್ಳಿ. ಭಾಷಣಕಾರನಿಂದ ಉಪಯೋಗಿಸಲಾದ ಅಂಶಗಳ ಮತ್ತು ವಚನಗಳ ಟಿಪ್ಪಣಿ ಮಾಡುವುದು ಸಹಾಯಕಾರಿಯು. ಟಿಪ್ಪಣಿಗಳನ್ನು ಸಂಕ್ಷಿಪ್ತವಾಗಿಡಿರಿ; ಬಹಳಷ್ಟು ಟಿಪ್ಪಣಿಗಳನ್ನು ಮಾಡುವುದು ಲಕ್ಷ್ಯವನ್ನು ಅಡಿಯೊಡಬ್ಡಹುದು. ಗಮನಕೊಟ್ಟು ಕೇಳುವವರಾಗಿರುವಂತೆ ಎಳೆಯರಿಗೆ ತರಬೇತಿಯನ್ನು ಕೊಡತಕ್ಕದ್ದು. ಸಾಧ್ಯವಾಗುವ ಮಟ್ಟಿಗೆ ತಮ್ಮ ಹೆತ್ತವರೊಂದಿಗೆ ಕಾರ್ಯಕ್ರಮವನ್ನು ನಿಕಟವಾಗಿ ಅನುಸರಿಸುವ ಮೂಲಕ ಮಕ್ಕಳು ದಶಾಂಶವನ್ನು ತರಬಲ್ಲರು.
10 ಕೆಲವು ಹೆತ್ತವರು ಮನೆಯಲ್ಲಿ ಪ್ರತಿ ದಿನ ಅವರ ಎಳೆಯ ಮಕ್ಕಳು ಸಂಸ್ಥೆಯ ಪ್ರಕಾಶನಗಳಲ್ಲಿ ಒಂದನ್ನು ಓದುವಂತೆ ಯಾ ಅದರಲ್ಲಿರುವ ಚಿತ್ರಗಳನ್ನು ನೋಡುವಂತೆ ಅಪೇಕ್ಷಿಸುತ್ತಾ, ಸುಮ್ಮನಿರುವ ಒಂದು ಸಮಯಕ್ಕಾಗಿ ಏರ್ಪಡಿಸುತ್ತಾರೆ. ಕೂಟಗಳಲ್ಲಿ ಮತ್ತು ಅಧಿವೇಶನಗಳಲ್ಲಿ ಸುಮ್ಮನೆ ಕುಳಿತುಕೊಳ್ಳುವುದಕ್ಕಾಗಿ ಈ ಒಳ್ಳೆಯ ತರಬೇತಿಯು ಮಕ್ಕಳಿಗೆ ಬಹಳ ಸುಲಭವಾಗಿ ಮಾಡುತ್ತದೆ. ಕೂಟಗಳಿಗೆ ಆಟದ ಸಾಮಾನುಗಳನ್ನು ಯಾ ಬಣ್ಣ ಹಚ್ಚುವ ಪುಸ್ತಕಗಳನ್ನು ಅವರ ಎಳೆಯರು ತರುವಂತೆ ಅವರು ಎಂದೂ ಅನುಮತಿಸಿಲ್ಲ ಎಂದು ಆದರ್ಶ ಮಕ್ಕಳನ್ನು ಬೆಳಸಿರುವ ಹೆತ್ತವರು ಹೇಳುತ್ತಾರೆ. ಕೂಟಗಳಿಗೆ ಹಾಜರಾಗುವ ಕಾರಣವು ಯೆಹೋವನನ್ನು ಆರಾಧಿಸುವುದೇ ಆಗಿದೆ ಎಂಬುದನ್ನು ಬಹಳ ಎಳೆಯ ಮಕ್ಕಳು ಕೂಡ ಕಲಿಯಬಲ್ಲರು. ಸಂಪೂರ್ಣ ದಶಾಂಶವನ್ನು ಬಂಡಾರಕ್ಕೆ ತರುವುದು ಅವರಿಗೆ ಯಾವ ಅರ್ಥದಲ್ಲಿ ಇರುವುದು ಎಂಬುದನ್ನು ತಮ್ಮ ಎಳೆಯರಿಗೆ ಕಲಿಸುವ ಹೆತ್ತವರು ನಿಜವಾಗಿಯೂ ಪ್ರಶಂಸಿಸಲ್ಪಡಬೇಕು!
11 ಅಧಿವೇಶನದ ಸಂಘಟನೆಗೆ ನೆರವಾಗಲು ನಮ್ಮ ಸಮಯ ಮತ್ತು ಶಕ್ತಿಯನ್ನು ಸ್ವಯಂ ಪ್ರೇರಿತವಾಗಿ ನೀಡುವ ಮೂಲಕವೂ ಕೂಡ ನಾವು ದಶಾಂಶವನ್ನು ತರಬಲ್ಲೆವು. ಅನೇಕ ಸ್ಥಳಗಳಲ್ಲಿ, ಅಧಿವೇಶನವು ಆರಂಭವಾಗುವ ಒಂದು ಯಾ ಎರಡು ದಿನಗಳ ಮೊದಲು ಅಧಿವೇಶನಪೂರ್ವ ಶುಚಿಮಾಡುವಿಕೆಯನ್ನು ಶೆಡ್ಯೂಲ್ ಮಾಡಲಾಗುತ್ತದೆ. ನೀವು ಹತ್ತಿರವೇ ಜೀವಿಸುವುದಾದರೆ, ಇಡೀ ಕುಟುಂಬವು ಭಾಗವಹಿಸಲಿಕ್ಕಾಗಿ ಯಾಕೆ ಏರ್ಪಡಿಸಬಾರದು? ಯೆಹೋವನ ಆರಾಧನೆಯನ್ನು ಬೆಂಬಲಿಸುವುದರಲ್ಲಿ ಏನು ಒಳಗೊಂಡಿದೆ ಎಂದು ಹೊಸಬರು ತಮ್ಮ ದೀಕ್ಷಾಸ್ನಾನದ ಮೊದಲೇ ಕಲಿಯ ಸಾಧ್ಯವಿರುವ ಕಾರಣ, ಕೆಲವು ಸಹೋದರರು ತಮ್ಮ ಪ್ರಗತಿಪರ ಬೈಬಲ್ ವಿದ್ಯಾರ್ಥಿಗಳನ್ನು ತಮ್ಮೊಂದಿಗೆ ಕರೆದುಕೊಂಡು ಬಂದಿದ್ದಾರೆ. ಅಧಿವೇಶನವು ಸುಗಮವಾಗಿ ಕಾರ್ಯ ಮಾಡುವುದು ಎಂಬುದನ್ನು ಖಚಿತಮಾಡಿಕೊಳ್ಳಲು ಹೆಚ್ಚನ್ನು ಮಾಡಲಿಕ್ಕಿದೆ. ಕುಟುಂಬದೋಪಾದಿ ಯಾಕೆ ಸ್ವಯಂಸೇವೆಗೆ ನೀಡಿಕೊಳ್ಳಬಾರದು?
12 ಅಧಿವೇಶನಕ್ಕೆ ನಮ್ಮ ಆರ್ಥಿಕ ಬೆಂಬಲವನ್ನು ಕೊಡುವುದು ದಶಾಂಶವನ್ನು ತರುವ ಇನ್ನೊಂದು ಮಾರ್ಗವಾಗಿದೆ. ಶುದ್ಧ ಆರಾಧನೆಯನ್ನು ಬೆಂಬಲಿಸಲು ಪ್ರಾಪಂಚಿಕ ಕೊಡುಗೆಗಳನ್ನು ಹೇಗೆ ಮಾಡಬೇಕು ಎಂಬುದನ್ನು ರೂಪಿಸುತ್ತಾ, ಯೆಹೋವನು ಇಸ್ರಾಯೇಲ್ ಜನಾಂಗಕ್ಕೆ ಹೀಗೆ ಆಜ್ಞಾಪಿಸಿದನು: “ಒಬ್ಬರೂ ಕೈಯಲ್ಲಿ ಕಾಣಿಕೆಯಿಲ್ಲದೆ ಆತನ ಸನ್ನಿಧಿಗೆ ಬರಕೂಡದು. ಪ್ರತಿಯೊಬ್ಬನು ತನಗೆ ಕರ್ತನು ಅನುಗ್ರಹಿಸಿದ ಆದಾಯದ ಮೇರೆಗೆ ತನ್ನ ಶಕ್ತ್ಯನುಸಾರ ಕೊಡಬೇಕು.” (ಧರ್ಮೋ. 16:16, 17) ಜನರು ಹೆಚ್ಚನ್ನು ಯಾ ಕಡಿಮೆಯನ್ನು ಕೊಡಲು ಶಕ್ತರಾಗಿರುವಲ್ಲಿ, ಮುಂಚಿತವಾಗಿ ತಯಾರಿಸಲ್ಪಟ್ಟ ಅವರ ಅರ್ಪಣೆಗಳು, ಯೆಹೋವನಿಗೆ ಮೆಚ್ಚಿಕೆಯುಳ್ಳದ್ದಾಗಿದ್ದವು. ಅದೇ ರೀತಿಯಲ್ಲಿ, ಹಣದ ರೂಪದಲ್ಲಿಯಾಗಲಿ ಯಾ ವಸ್ತುಗಳ ರೂಪದಲ್ಲಿಯಾಗಲಿ, ಅವರು ಮಾಡುವಂಥ ಕಾಣಿಕೆಗೆ ಅನೇಕ ಸಹೋದರರು ಪ್ರಾರ್ಥನಾಪೂರ್ವಕವಾದ ಯೋಜನೆಯನ್ನು ಕೊಡುತ್ತಾರೆ. ನಿಮ್ಮ ಚಿಕ್ಕ ಮಕ್ಕಳು ಪೆಟ್ಟಿಗೆಯಲ್ಲಿ ಕಾಣಿಕೆಯನ್ನು ಹಾಕುವಂತೆ ನೀವು ಎಂದಾದರೂ ಬಿಡುತ್ತೀರೊ?
13 ನಮ್ಮ ರಕ್ಷಕನಾದ ದೇವರ ಬೋಧನೆಯನ್ನು ಅಲಂಕರಿಸಿರಿ: ನಮ್ಮ ಒಳ್ಳೆಯ ಶಿಷ್ಟಾಚಾರ ಮತ್ತು ನಮ್ಮ ಉತ್ತಮ ನಡತೆಯ ಮೂಲಕ, ನಾವು “ಎಲ್ಲಾ ವಿಷಯಗಳಲ್ಲಿ ನಮ್ಮ ರಕ್ಷಕನಾದ ದೇವರ ಬೋಧನೆಯನ್ನು ಅಲಂಕರಿಸ” ಬಲ್ಲೆವು. (ತೀತ 2:10) ಬೇರೆ ಶಬ್ದಗಳಲ್ಲಿ, ಅಧಿವೇಶನದಲ್ಲಿಯೇ, ನಮ್ಮ ಜೀವಿತಗಳಲ್ಲಿ ದೈವಿಕ ಬೋಧನೆಯು ಅನ್ವಯಿಸಲಾಗುತ್ತಿದೆ ಎಂಬುದನ್ನು ನಾವು ತೋರಿಸಬಲ್ಲೆವು.
14 ನಮ್ಮ ಶಿಷ್ಟಾಚಾರಗಳ ಕುರಿತೇನು? ಇತರರಿಗಾಗಿ ಪರಿಗಣನೆ ಇಂದು ಲೋಕದಲ್ಲಿ ವಿರಳವಾಗಿದೆ. ಆದರೆ ಶಾಸ್ತ್ರೀಯ ತತ್ವಗಳಿಂದ ಮಾರ್ಗದರ್ಶಿಸಲ್ಪಡುವ ಯೆಹೋವನ ಜನರು, ತಮ್ಮ ಸ್ವಂತ ಸೌಕರ್ಯದ ಕುರಿತಲ್ಲ ಆದರೆ ತಮ್ಮ ಜೊತೆಮಾನವರ ಸೌಕರ್ಯದ ಕುರಿತು ಯೋಚಿಸುತ್ತಾರೆ. (ಫಿಲಿ. 2:4) ನಮ್ಮ ಸುತ್ತಲೂ ಇರುವವರ ಪ್ರಜ್ಞೆ ನಮಗಿದೆ. ಆಹಾರಕ್ಕಾಗಿ ಯಾ ಪ್ರಕಾಶನಗಳಿಗಾಗಿ ಸಾಲಿನಲ್ಲಿ ನಿಲ್ಲುವಾಗ ನಾವು ನೂಕುವುದಿಲ್ಲ ಯಾ ದೂಡುವುದಿಲ್ಲ. ಅವರ ಹೆತ್ತವರೊಂದಿಗೆ ಸಾಲಿನಲ್ಲಿ ಕಾಯುತ್ತಿರಬಹುದಾದ ಮತ್ತು ಅವರನ್ನು ಗಮನಿಸದೆ ಇರಬಹುದಾದ ವಯಸ್ಕರಿಂದ ಸುಲಭವಾಗಿ ದೂಡಲ್ಪಡುವ ಚಿಕ್ಕ ಮಕ್ಕಳ ಮತ್ತು ವೃದ್ಧರ ಕುರಿತು ನಾವು ಲೆಕ್ಕಿಸುತ್ತೇವೆ. ಹೋಟೆಲುಗಳಲ್ಲಿ, ಸೇವೆಯು ನಮ್ಮ ನಿರೀಕ್ಷಣೆಗಳಿಗೆ ತಕ್ಕಂತೆ ಇರದಿದ್ದರೆ ನಾವು ನಯವಿಲ್ಲದೆ ಯಾ ತಗಾದೆ ಮಾಡುವವರಾಗಿರದೆ, ಸಿಬ್ಬಂದಿಯ ಕಡೆಗೆ ನಯವಾಗಿಯೂ ಸೌಜನ್ಯವುಳ್ಳವರಾಗಿಯೂ ಇರುತ್ತೇವೆ. ಮತ್ತು ಅರ್ಪಿಸಲಾದ ಸೇವೆಗಳಿಗಾಗಿ ಉಚಿತವಾದ ಇನಾಮನ್ನು ಬಿಟ್ಟು ಹೋಗುವ ರೂಢಿಯೊಂದಿಗೆ ಅನುವರ್ತಿಸಲು ನಾವು ಸಂತೋಷಿಸುತ್ತೇವೆ.
15 ನಮ್ಮ ದೈವಿಕ ನಡತೆಯು ನಮ್ಮ ಸುತ್ತಲೂ ಇರುವವರ ಮೇಲೆ ನಿಜವಾದ ಪರಿಣಾಮವನ್ನು ಬೀರುತ್ತದೆ. ಕಳೆದ ವರ್ಷ ಒಂದು ಅಧಿವೇಶನ ಪಟ್ಟಣದಲ್ಲಿ, 21 ವರ್ಷಗಳ ಕಾಲ ಸೇನಾಪಡೆಯೊಂದಿಗೆ ಇದ್ದ ಒಬ್ಬ ಪೊಲೀಸನಿಗೆ ಇದನ್ನು ಹೇಳಲಿಕ್ಕಿತ್ತು: “ನಿಮ್ಮ ಜನರ ಶಿಸ್ತಿನಿಂದ ನಾನು ಪ್ರಭಾವಿತನಾಗಿದ್ದೇನೆ. ಅವರು ಎದ್ದುಕಾಣುವವರಾಗಿದ್ದಾರೆ; ಅವರಿಗೆ ಯಾರೂ ಹೇಳದೆಯೇ ಅವರು ಕಸವನ್ನು ಎತ್ತುತ್ತಾರೆ ಮತ್ತು ಅವರು ವ್ಯವಸ್ಥಿತರಾಗಿದ್ದಾರೆ ಮತ್ತು ನಿಮ್ಮ ಅಧಿವೇಶನವು ಉತ್ತಮವಾಗಿ ಸಂಘಟಿಸಲ್ಪಟ್ಟಿದೆ.” ಅವನು ಕೂಡಿಸಿದ್ದು: “ನಿಮ್ಮ ಜನರು ನಮ್ಮನ್ನು ನೋಡಿದಾಗ, ಮುಗುಳ್ನಗುತ್ತಾರೆ. ಅದು ಒಳ್ಳೆಯ ಸಂಕೇತವಾಗಿದೆ. ನಾವು ಅದಕ್ಕಾಗಿ ಎದುರುನೋಡುತ್ತೇವೆ. ಅದು ಗೆಳೆತನದ ಮತ್ತು ಯಾವುದನ್ನೂ ಮರೆಮಾಡದ ಒಂದು ಸಂಕೇತವಾಗಿದೆ. ಮಕ್ಕಳು ತಮ್ಮ ಹೆತ್ತವರೊಂದಿಗೆ ಇರುವುದನ್ನು ಮತ್ತು ಒಳ್ಳೆಯ ಶಿಸ್ತುಳ್ಳವರಾಗಿರುವುದನ್ನು ಕೂಡ ನಾವು ಗಮನಿಸುತ್ತೇವೆ. ನನ್ನನ್ನು ನಂಬಿ, ನಾನು ಪ್ರಭಾವಿತನಾಗಿದ್ದೇನೆ. ಇಲ್ಲಿಗೆ ನೇಮಕ ಹೊಂದುವುದು ಆನಂದಕರವು.”
16 ಅವರ ಪಟ್ಟಣದಲ್ಲಿ ಒಂದು ಅಧಿವೇಶನವನ್ನು ನಡೆಸಲು ಆಮಂತ್ರಣವೊಂದನ್ನು ನೀಡಲು ಕೆಲವು ಅಧಿಕಾರಿಗಳು ಬೆತೆಲ್ಗೆ ಒಂದು ವಿಶೇಷವಾದ ಸಂಚಾರವನ್ನು ಮಾಡಿದರು. ಸೊಸೈಟಿಯು ಅವರ ದಯಾಪರ ಆಮಂತ್ರಣವನ್ನು ಸ್ವೀಕರಿಸಿತು, ಮತ್ತು ಸಂಸ್ಥೆಯ ಸದಸ್ಯರು ನಿರಾಶೆ ಹೊಂದಲಿಲ್ಲ. ಪಟ್ಟಣದ ಉಪಮ್ಯಾನೇಜರ್ ಹೀಗೆ ಹೇಳಿದನು: “ನಿಮ್ಮಂಥ ಪ್ರತಿಷ್ಠೆಯಿರುವ ಒಂದು ಗುಂಪು ನಮ್ಮ ಪಟ್ಟಣದಲ್ಲಿ ಕೂಡುವುದರ ಕುರಿತು ನಾವು ಬಹಳ ಉತ್ತೇಜಿಸಲ್ಪಟ್ಟಿದ್ದೇವೆ. ನಿಮ್ಮನ್ನು ಇಲ್ಲಿಗೆ ತರಲು ನಾವು ಪ್ರಧಾನ ಪ್ರಯತ್ನವನ್ನು ಮಾಡಿದೆವು . . . ಮತ್ತು ನಾವು ಬಹಳ ಸಂತೋಷಿಸಿದೆವು.” ಅವರ ಉತ್ತಮ ನಡತೆಯಿಂದಾಗಿ, ಅಲ್ಲಿ ನೀಡಲ್ಪಟ್ಟ ಅತ್ಯುತ್ತಮ ಸಾಕ್ಷಿಗೆ ಪ್ರತಿಯೊಬ್ಬ ಸಹೋದರ ಮತ್ತು ಸಹೋದರಿ ನೆರವು ನೀಡಿದರು.
17 ನಿಮ್ಮ ಆದರ್ಶ ನಡತೆಯಿಂದಾಗಿ, ನೀವು ವೈಯಕ್ತಿಕವಾಗಿ ನಮ್ಮ ರಕ್ಷಕನಾದ ದೇವರ ಬೋಧನೆಯನ್ನು ಅಲಂಕರಿಸುವಿರೊ? ಇದನ್ನು ಮಾಡಸಾಧ್ಯವಿರುವ ಹಲವಾರು ವಿಧಗಳು ಇಲ್ಲಿವೆ:
ಉಡಿಗೆ ಮತ್ತು ಬಾಚುವಿಕೆ: ನಾವೊಂದು ಅಧಿವೇಶನವನ್ನು ಹಾಜರಾಗುತ್ತಿರುವ ಸಮಯದಲ್ಲಿ, ನಾವು ನಮ್ಮನ್ನು ರಜೆಯಲ್ಲಿರುವಂತೆ ಪರಿಗಣಿಸಬಾರದು. ಬದಲಾಗಿ, ಆತನಿಂದ ಕಲಿಸಲ್ಪಡುವಂತೆ ನಾವು ನಮ್ಮನ್ನು ಯೆಹೋವನಿಗೆ ಸಾದರಪಡಿಸಿಕೊಳ್ಳುತ್ತಾ ಇದ್ದೇವೆ. ವಿಷಯವು ಹಾಗಿರುವಾಗ, ರಾಜ್ಯ ಸಭಾಗೃಹದಲ್ಲಿ ಕೂಟಗಳನ್ನು ಹಾಜರಾಗುವಾಗ ನಾವು ಉಡುಪನ್ನು ಧರಿಸುವಂತೆ ಇಲ್ಲಿ ಧರಿಸಬಾರದೊ? (1 ತಿಮೊ. 2:9, 10) ಇದರ ಜೊತೆಗೆ, ದಿನದ ಅಧಿವೇಶನಗಳು ಮುಗಿದ ಮೇಲೆ ನಾವು ಏನನ್ನು ಧರಿಸುವೆವೊ ಅದರ ಕುರಿತು ಕೂಡ ಜಾಗರೂಕವಾಗಿ ಆಲೋಚಿಸತಕ್ಕದ್ದು. ನಮ್ಮ ವಸತಿಗಳಿಗೆ ಹಿಂದಿರುಗಿದ ಮೇಲೆ, ನಮ್ಮ ವಯಸ್ಸು ಏನೇ ಆಗಿರಲಿ, ಅಧಿವೇಶನದ ಯೋಗ್ಯ, ಗಂಭೀರ ವೇಷಭೂಷಣವನ್ನು ಕೊಳಕು ರೀತಿಯಲ್ಲಿ ಉಡುಪು ಧರಿಸಿದ ಮತ್ತು ಓರಣವಿಲ್ಲದ ಲೌಕಿಕ ವ್ಯಕ್ತಿಯ ತೋರಿಕೆಯನ್ನು ನಮಗೆ ಕೊಡುವ ಬಟ್ಟೆಗೆ ಬದಲಾಯಿಸುವುದು ಸಮಂಜಸವಾಗಿರುವುದೊ? ನಮ್ಮ ಕೂಟದ ಬಟ್ಟೆಗೆಳು ನಮ್ಮ ಜೀವನಕ್ರಮದ ಪ್ರತಿಬಿಂಬವಾಗಿರುವ ಬದಲು ಒಂದು ಪೋಷಾಕಿಗಿಂತ ಹೆಚ್ಚಿನದ್ದೇನೂ ಅಲ್ಲ ಎಂಬ ಅಭಿಪ್ರಾಯವನ್ನು ಇದು ಕೊಡಲಿಕ್ಕಿಲ್ಲವೆ? ನಾವು ಯೆಹೋವನ ಹೆಸರನ್ನು ಹೊಂದಿರುತ್ತೇವೆಂದು ನೆನಪಿನಲ್ಲಿಡಿ, ಮತ್ತು ಸತ್ಯ ಮಾರ್ಗದ ವಿರುದ್ಧ ನ್ಯಾಯಬದ್ಧವಾದ ಆಪಾದನೆಯು ತರಲ್ಪಡದೇ ಇರುವಂತೆ ನಮ್ಮಲ್ಲಿ ಪ್ರತಿಯೊಬ್ಬರು ನೋಡಿಕೊಳ್ಳಬೇಕು.
ದೀಕ್ಷಾಸ್ನಾನದ ಅಭ್ಯರ್ಥಿಗಳು ಇಂಥ ಒಂದು ಪವಿತ್ರವಾದ ಸಂದರ್ಭದಲ್ಲಿ ಲೌಕಿಕ ಘೋಷಣೆಗಳು, ಶಬ್ದಗಳು, ಯಾ ವಾಣಿಜ್ಯದ ಜಾಹೀರಾತುಗಳು ಇರುವ ಟಿ—ಷರ್ಟುಗಳನ್ನು ಧರಿಸುವುದು ಉಚಿತವಲ್ಲ ಎಂಬುದರ ಕುರಿತು ಮರುಜ್ಞಾಪಿಸಲ್ಪಡಬೇಕು. ದೀಕ್ಷಾಸ್ನಾನದ ಪ್ರಶ್ನೆಗಳು ಬಹಳ ಮುಂಚಿತವಾಗಿಯೇ ವಿಮರ್ಶಿಸಲ್ಪಟ್ಟಿವೆ ಎಂಬುದನ್ನು ಹಿರಿಯರು ಖಚಿತಮಾಡಿಕೊಳ್ಳಬೇಕು ಮತ್ತು ಪ್ರತಿ ಅಭ್ಯರ್ಥಿಯು ಅವನು ದೀಕ್ಷಾಸ್ನಾನಕ್ಕೆ ಒಪ್ಪಿಗೆ ಪಡೆದಿದ್ದಾನೊ ಇಲ್ಲವೊ ಎಂಬುದರ ಕುರಿತು ಮುಂಚಿತವಾಗಿಯೇ ತಿಳಿಸಲ್ಪಡಬೇಕು. (ಪ್ರಶ್ನೆಗಳನ್ನು ಪರಿಗಣಿಸುತ್ತಿರುವಾಗ, ದೀಕ್ಷಾಸ್ನಾನಕ್ಕಾಗಿ ಸೂಕ್ತವಾದ, ಯೋಗ್ಯವಾದ ಉಡಿಗೆಯ ಸಂಬಂಧದಲ್ಲಿ ಸೂಚನೆಗಳನ್ನು ನೀಡಲು ಅದು ಸೂಕ್ತವಾದ ಸಮಯವಾಗಿರಬಹುದು.)
ಹೋಟೆಲುಗಳು: ನಿಮ್ಮ ಹೋಟೆಲಿನೊಳಗೆ ಪ್ರವೇಶಿಸುವಾಗ ಆತ್ಮದ ಫಲವನ್ನು ಪ್ರದರ್ಶಿಸಿರಿ. ಕೊಂಚ ಸಮಯದಲ್ಲಿ ಒಂದು ದೊಡ್ಡ ಗುಂಪನ್ನು ನಿರ್ವಹಿಸಲು ಹೋಟೆಲಿನ ಸಿಬ್ಬಂದಿ ಸಜ್ಜಿತವಾಗಿರದೆ ಇರಬಹುದು. ತಾಳ್ಮೆಯಿಂದ ಇರ್ರಿ, ಅನುಭೂತಿ ತೋರಿಸಿರಿ, ಮತ್ತು ಸೂಕ್ತವಾದ ರೀತಿಯಲ್ಲಿ ಇನಾಮು ಕೊಡಿರಿ.
ಹೋಟೆಲಿನ ಸ್ವತ್ತಿಗಾಗಿ ಗೌರವವನ್ನು ತೋರಿಸುವ ಮೂಲಕ ಮತ್ತು ಸೌಕರ್ಯಗಳ ಉಪಯೋಗವನ್ನು ನಿರ್ವಹಿಸುವ ನಿಯಮಗಳನ್ನು ಪಾಲಿಸುವ ಮೂಲಕ ಮಕ್ಕಳು ತಮ್ಮ ಭಾಗವನ್ನು ಮಾಡಬಲ್ಲರು. ನಡತೆಯ ಕ್ರೈಸ್ತ ಮಟ್ಟಗಳಿಗೆ ಸರಿಹೊಂದುವ ಕುರಿತು ಅವರ ವೈಯಕ್ತಿಕ ಜವಾಬ್ದಾರಿಯ ಬಗೆಗೆ ಅವರಿಗೆ ಜ್ಞಾಪಿಸುತ್ತಾ, ಅವರಿಂದ ಯಾವ ರೀತಿಯ ವರ್ತನೆಯನ್ನು ನಿರೀಕ್ಷಿಸಲಾಗುತ್ತದೆ ಎಂದು ಅಧಿವೇಶನದ ಮುಂಚೆ ಸ್ವಲ್ಪ ಸಮಯ ತಮ್ಮ ಮಕ್ಕಳೊಂದಿಗೆ ವಿಮರ್ಶಿಸುವುದು ಹೆತ್ತವರಿಗೆ ಸಹಾಯಕಾರಿಯಾಗಿರುವುದು.
ರೆಕಾರ್ಡಿಂಗ್ ಉಪಕರಣಗಳು: ವಿಡಿಯೊ ಕ್ಯಾಮರಾಗಳನ್ನು ಅನುಮತಿಸುವುದಾದರೂ, ನೀವು ಇತರರ ಕುರಿತು ಪರಿಗಣಿಸುವಿರೆಂದು ನಮಗೆ ಗೊತ್ತಿದೆ. ಕಾರ್ಯಕ್ರಮವನ್ನು ಚಿತ್ರಿಸುವಾಗ ಸಹಅಧಿವೇಶನಾ ಸದಸ್ಯರ ನೋಟವನ್ನು ಅಡಿಮ್ಡಾಡುವುದು ಪ್ರೀತಿಪರವಾಗಿರುವುದಿಲ್ಲ. ನಿಮ್ಮ ಆಸನದಿಂದ ಎಚ್ಚರಿಕೆಯಿಂದ ನೀವು ರೆಕಾರ್ಡ್ಮಾಡಬಲ್ಲಿರಾದರೆ, ನೀವು ಹಾಗೆ ಮಾಡುವುದಕ್ಕೆ ಯಾವುದೇ ಆಕ್ಷೇಪಣೆ ಇರುವುದಿಲ್ಲ. ಅಧಿವೇಶನದಲ್ಲಿ ವಿದ್ಯುತ್ತಿನ ಯಾ ಧ್ವನಿವರ್ಧಕ ವ್ಯವಸ್ಥೆಗೆ ಕ್ಯಾಮರಾಗಳು ಯಾ ರೆಕಾರ್ಡಿಂಗ್ ಉಪಕರಣಗಳು ಸೇರಿಸಲ್ಪಡಬಾರದೆಂದು, ಸಜ್ಜು ನಡುದಾರಿಗಳಲ್ಲಿ ಯಾ ಸಂಚಾರ ಪ್ರದೇಶಗಳಲ್ಲಿ ಇಡಬಾರದೆಂದು ದಯವಿಟ್ಟು ನೆನಪಿನಲ್ಲಿಡಿ.
ಪೀಠವ್ಯವಸ್ಥೆ: ನಿಮ್ಮ ಹತ್ತಿರದ ಕುಟುಂಬ ಸದಸ್ಯರಿಗೆ ಮತ್ತು ನಿಮ್ಮೊಂದಿಗೆ ನಿಮ್ಮ ಕಾರಿನಲ್ಲಿ ಪ್ರಯಾಣಿಸುವವರಿಗೆ ಮಾತ್ರ ಆಸನಗಳನ್ನು ಕಾದಿಡಬಹುದು ಎಂಬುದನ್ನು ದಯವಿಟ್ಟು ಮನಸ್ಸಿನಲ್ಲಿಡಿ. ದಯವಿಟ್ಟು ವೃದ್ಧರನ್ನು ಪರಿಗಣಿಸಿರಿ. ಗತಿಸಿದ ಸಮಯಗಳಲ್ಲಿ, ವೃದ್ಧರಿಗಾಗಿ ಇದ್ದ ಭಾಗದಲ್ಲಿ ಎಳೆಯರು ಆಸನಗಳನ್ನು ಆವರಿಸಿದರ್ದಿಂದ ಕೆಲವು ವೃದ್ಧ ಸಹೋದರರು ಆಸನಗಳಿಗಾಗಿ ಅನುಕೂಲವಲ್ಲದ ಪ್ರದೇಶಗಳಲ್ಲಿ ಹುಡುಕಬೇಕಾಗಿ ಬಂತು. ಆ್ಯಲರ್ಜಿಗಳಂಥ ಸಮಸ್ಯೆಗಳು ಇರುವವರಿಗೆ ಪ್ರತ್ಯೇಕಿಸಲ್ಪಟ್ಟ ಪ್ರದೇಶಗಳು ಯಾ ಕೋಣೆಗಳಿಗೆ ವಿನಂತಿಗಳನ್ನು ಸರಿಹೊಂದಿಸಲು ನಮಗೆ ಸಾಧ್ಯವಿಲ್ಲ ಎಂಬ ಸಂಗತಿಗಾಗಿ ನಾವು ವಿಷಾದಿಸುತ್ತೇವೆ.
ವೈಯಕ್ತಿಕ ಸ್ವತ್ತುಗಳು: ಅಧಿವೇಶನಕ್ಕೆ ನೀವು ತರುವಂಥ ಯಾವುದೇ ವೈಯಕ್ತಿಕ ಸ್ವತ್ತುಗಳನ್ನು ಕನಿಷ್ಠ ಮಟ್ಟಕ್ಕೆ ಇಡಿರೆಂದು ಸೂಚಿಸಲಾಗಿದೆ. ಒಂದು ಸಾಮಾನು ನಿಮ್ಮ ಆಸನದ ಕೆಳಗೆ ಸರಿಹೊಂದದಿದ್ದರೆ, ಅದನ್ನು ಮನೆಯಲ್ಲಿ ಯಾ ಕಾರಿನ ಪೆಟ್ಟಿಗೆಯಲ್ಲಿ ಬಿಟ್ಟುಬರುವುದು ಉತ್ತಮ. ಸುರಕ್ಷೆಯ ಕಾರಣಗಳಿಗಾಗಿ ನೀರಿನ ದೊಡ್ಡ ಜಾಡಿಗಳನ್ನು ಅನುಮತಿಸಲಾಗುವುದಿಲ್ಲ, ಮತ್ತು ಅವುಗಳನ್ನು ನಿಮ್ಮ ಪಕ್ಕದ ಆಸನದ ಮೇಲೆ ಇಡುವುದಾದರೆ, ಯಾರಾದರೂ ಒಂದು ಆಸನದಿಂದ ವಂಚಿತರಾಗಬಹುದು.
ಸಾಹಿತ್ಯ ಮತ್ತು ಆಹಾರ ಸೇವೆ: ಯಾವುದೂ ವ್ಯರ್ಥವಾಗಿ ಹೋಗದಂತೆ ನೋಡಿಕೊಳ್ಳುತ್ತಾ, ನಾವೆಲ್ಲರೂ ದೇವರ ಒಳ್ಳೆಯ ಕೊಡುಗೆಗಳಿಗೆ ಗಣ್ಯತೆಯನ್ನು ತೋರಿಸ ಬಯಸುತ್ತೇವೆ. (ಯೋಹಾನ 6:12) ಅಗತ್ಯವಿರುವುದಕ್ಕಿಂತ ಹೆಚ್ಚಿನದನ್ನು ತೆಗೆದುಕೊಳ್ಳದಂತೆ ನೋಡಿಕೊಳ್ಳಿ. ಆಹಾರವನ್ನು ವ್ಯರ್ಥ ಮಾಡಬಾರದೆಂಬುದರ ಕುರಿತು ಹೆತ್ತವರು ತಮ್ಮ ಮಕ್ಕಳೊಂದಿಗೆ ಮಾತಾಡಬೇಕು. ಸಾಹಿತ್ಯವು ಹಂಚಲ್ಪಡುವಾಗ, ಇತರರಿಗೆ ದಯವಿಟ್ಟು ಪ್ರೀತಿಪರ ಪರಿಗಣನೆಯನ್ನು ತೋರಿಸಿರಿ.
18 ಇತರರಿಗಾಗಿ ಪ್ರೀತಿಪರ ಪರಿಗಣನೆಯ ಕಾರಣ, ಪ್ರತಿ ದಿನ ವಿಶೇಷವಾಗಿ ಗುರುವಾರ ವಾಹನವನ್ನು ನಿಲ್ಲಿಸುವ ಸ್ಥಳ ಮತ್ತು ಆಸನಗಳನ್ನು ಕಂಡುಹಿಡಿಯವುದು ಸಾಮಾನ್ಯಕ್ಕಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳುವ ಸಾಧ್ಯತೆಗಳು ಇರುವುದರಿಂದ ಬೇಗ ಬರಲು ಯೋಜಿಸಿರಿ.
19 ಯೆಹೋವನಿಂದ ಕಲಿಸಲ್ಪಡಲು ನಾವು ಎಂಥ ಸುಯೋಗವುಳ್ಳವರಾಗಿದ್ದೇವೆ! “ದೈವಿಕ ಬೋಧನೆ” ಜಿಲ್ಲಾ ಅಧಿವೇಶನವನ್ನು ಬೆಂಬಲಿಸಲು ನಮ್ಮ ಸಮಯ, ಶಕ್ತಿ, ಮತ್ತು ಪ್ರಾಪಂಚಿಕ ಸಾಧನಗಳ ನಮ್ಮ ಉಪಯೋಗವು ನಮಗೂ, ನಮ್ಮ ಕುಟುಂಬಗಳಿಗೂ ಬಾಳುವ ಆತ್ಮಿಕ ಪ್ರಯೋಜನಗಳಲ್ಲಿ ಫಲಿಸುವುದು.
[ಪುಟ 6ರಲ್ಲಿರುವಚೌಕ]
ಜಿಲ್ಲಾ ಅಧಿವೇಶನ ಮರುಜ್ಞಾಪನಗಳು
ಯೋಗ್ಯವಾದ ಸಭ್ಯತೆ: ಒಟ್ಟಾಗಿ ಸೇರುವ ಸ್ಥಳವನ್ನು ಭಯಭಕ್ತಿಯಿಂದ “ದೇವಾಲಯ” ದಂತೆ ವೀಕ್ಷಿಸುತ್ತಾ, ಅಧಿವೇಶನವನ್ನು ಹಾಜರಾಗುವವರೆಲ್ಲರೂ ಯೋಗ್ಯವಾದ ಸಭ್ಯತೆಯನ್ನು ಪಾಲಿಸುವುದು ಪ್ರಾಮುಖ್ಯವಾಗಿದೆ. (ಕೀರ್ತ. 55:14) ಭಾಷಣಗಳು, ನಾಟಕಗಳು, ಹಾಡುಗಳು, ಮತ್ತು ವಿಶೇಷವಾಗಿ ಪ್ರಾರ್ಥನೆಯ ಸಮಯಗಳಲ್ಲಿ, ಕಾರ್ಯಕ್ರಮಕ್ಕೆ ಕಿವಿಗೊಡುತ್ತಿರುವ ಇತರರ ಗಮನವನ್ನು ತಿರುಗಿಸುವಂಥ ಯಾವುದನ್ನೂ ಮಾಡುವುದರಿಂದ ದಯವಿಟ್ಟು ದೂರವಿರ್ರಿ. ಅಗತ್ಯವಿಲ್ಲದೆ ಅತ್ತಿತ್ತು ಓಡಾಡುವುದು, ಸಂಭಾಷಣೆಗಳನ್ನು ನಡೆಸುವುದು, ಯಾ ಏನು ಹೇಳಲಾಗುತ್ತಿದೆಯೊ ಅದರ ಮೇಲೆ ಕೇಂದ್ರೀಕರಿಸಲು ಪ್ರಯತ್ನಿಸುತ್ತಿರುವವರನ್ನು ಅಪಕರ್ಷಿಸುವ ರೀತಿಯಲ್ಲಿ ಫ್ಲ್ಯಾಷ್ ಕ್ಯಾಮರಾಗಳನ್ನು ಅಥವಾ ವಿಡಿಯೊ ರೆಕಾರ್ಡರ್ಗಳನ್ನು ಉಪಯೋಗಿಸುವುದು, ಗೌರವವನ್ನು ತೋರಿಸುವದಾಗಿರುವುದಿಲ್ಲ. ನಾವು ಯಥಾರ್ಥವಾಗಿ ದೈವಿಕ ಬೋಧನೆಯನ್ನು ಗಣ್ಯಮಾಡುತ್ತೇವೆ ಮತ್ತು ಯೆಹೋವನಿಂದ ಉಪದೇಶಿಸಲ್ಪಡಲು ಅಧಿವೇಶನಕ್ಕೆ ಬಂದಿದ್ದೇವೆ ಎಂಬುದನ್ನು ನಮ್ಮ ವಿಚಾರಪರತೆಯು ಮತ್ತು ಉತ್ತಮ ನಡತೆಯು ತೋರಿಸುವುದು.
ರೂಮಿಂಗ್: ಅಧಿವೇಶನದ ರೂಮಿಂಗ್ ಇಲಾಖೆಯೊಂದಿಗೆ ನಿಮ್ಮ ಸಹಕಾರ ಬಹಳಷ್ಟು ಗಣ್ಯಮಾಡಲ್ಪಡುತ್ತದೆ. ರೂಮ್ ವಿನಂತಿ ಫಾರ್ಮ್ಗಳು ತಡೆಯಿಲ್ಲದೆ ಸೂಕ್ತವಾದ ಅಧಿವೇಶನ ವಿಳಾಸಗಳಿಗೆ ಕಳುಹಿಸಲ್ಪಟ್ಟಿವೆ ಎಂಬ ವಿಷಯದಲ್ಲಿ ಸಭಾ ಸೆಕ್ರಿಟರಿಗಳು ಖಚಿತರಾಗಿರಬೇಕು. ಮೀಸಲಾತಿಯನ್ನು ನೀವು ಇನ್ನು ದೃಢೀಕರಿಸದಿದ್ದರೆ, ದಯವಿಟ್ಟು ಕೂಡಲೇ ಹಾಗೆ ಮಾಡಿರಿ. ನಿಮ್ಮ ಮೀಸಲಾತಿಯನ್ನು ರದ್ದು ಮಾಡುವುದು ಅಗತ್ಯವೆಂದು ನೀವು ಕಂಡರೆ, ಬೇರೊಬ್ಬರಿಗೆ ಕೋಣೆಯು ದೊರೆಯುವಂತೆ ಆದಷ್ಟು ಮುಂಚಿತವಾಗಿ ಅಧಿವೇಶನ ಮುಖ್ಯಕಾರ್ಯಾಲಯಕ್ಕೆ ಮತ್ತು ಸಾಧ್ಯವಾದರೆ, ಹೋಟೆಲಿಗೆ ನೀವು ಬರೆಯತಕ್ಕದ್ದು ಅಥವಾ ಫೋನ್ ಮಾಡತಕ್ಕದ್ದು. ನಿಮಗೆ ಖಾಸಗಿ ವಸತಿ ಕೊಡಲಾಗಿದ್ದರೆ, ಆದಷ್ಟು ಬೇಗನೆ, ನೀವು ವಸತಿ ನೀಡಿರುವ ವ್ಯಕ್ತಿಗೆ ಅಷ್ಟೇ ಅಲ್ಲದೆ ಅಧಿವೇಶನ ಮುಖ್ಯಕಾರ್ಯಾಲಯಕ್ಕೆ ತಿಳಿಸಿರಿ.
ದೀಕ್ಷಾಸ್ನಾನ: ಶನಿವಾರ ಬೆಳಗ್ಗೆ ಕಾರ್ಯಕ್ರಮ ಆರಂಭವಾಗುವ ಮುಂಚೆ, ದೀಕ್ಷಾಸ್ನಾನ ಅಭ್ಯರ್ಥಿಗಳು ನಿರ್ದಿಷ್ಟವಾಗಿ ನಮೂದಿಸಲ್ಪಟ್ಟ ತಮ್ಮ ಆಸನಗಳಲ್ಲಿ ಇರತಕ್ಕದ್ದು. ದೀಕ್ಷಾಸ್ನಾನ ಪಡೆಯಲು ಯೋಜಿಸುವ ಪ್ರತಿಯೊಬ್ಬರಿಂದ ಒಂದು ಯೋಗ್ಯವಾದ ಸ್ನಾನದ ಉಡುಪು ಮತ್ತು ಒಂದು ಟವಲು ತರಲ್ಪಡತಕ್ಕದ್ದು. ಭಾಷಣಕಾರನಿಂದ ದೀಕ್ಷಾಸ್ನಾನದ ಭಾಷಣ ಮತ್ತು ಪ್ರಾರ್ಥನೆಯ ಅನಂತರ, ಸೇಶನ್ ಅಧ್ಯಕ್ಷನು ದೀಕ್ಷಾಸ್ನಾನ ಅಭ್ಯರ್ಥಿಗಳಿಗೆ ಸಂಕ್ಷಿಪ್ತ ಮಾಹಿತಿಗಳನ್ನು ಕೊಡುವನು ಮತ್ತು ಆಮೇಲೆ ಹಾಡಿಗಾಗಿ ಕರೆ ನೀಡುವನು. ಕೊನೆಯ ಸಾಲಿನ ತರುವಾಯ, ದೀಕ್ಷಾಸ್ನಾನ ಪಡೆಯುವ ಸ್ಥಳಕ್ಕೆ ಅಥವಾ ಅಲ್ಲಿಗೆ ಅವರನ್ನು ಕರೆದುಕೊಂಡು ಹೋಗುವ ವಾಹನಗಳ ಬಳಿಗೆ ದೀಕ್ಷಾಸ್ನಾನದ ಅಭ್ಯರ್ಥಿಗಳನ್ನು ಅಟೆಂಡೆಂಟರು ನಡೆಸುವರು. ಒಬ್ಬನ ಸಮರ್ಪಣೆಯ ಚಿಹ್ನೆಯಾಗಿರುವ ದೀಕ್ಷಾಸ್ನಾನವು ಯೆಹೋವನ ಮತ್ತು ವ್ಯಕ್ತಿಯ ನಡುವೆ ಒಂದು ಆಪ್ತವಾದ ಮತ್ತು ವೈಯಕ್ತಿಕವಾದ ವಿಷಯವಾಗಿರುವುದರಿಂದ, ಎರಡು ಯಾ ಹೆಚ್ಚು ದೀಕ್ಷಾಸ್ನಾನ ಅಭ್ಯರ್ಥಿಗಳು ದೀಕ್ಷಾಸ್ನಾನ ಪಡೆಯುವಾಗ ಅಪ್ಪಿಕೊಳ್ಳುವ ಯಾ ಕೈಗಳನ್ನು ಹಿಡಿಯುವ ಸಹಭಾಗಿ ದೀಕ್ಷಾಸ್ನಾನಗಳು ಎಂಬುದಾಗಿ ಕರೆಯಲ್ಪಡುವ ದೀಕ್ಷಾಸ್ನಾನಗಳ ಏರ್ಪಾಡು ಇರುವುದಿಲ್ಲ.
ಸ್ವಯಂ ಸೇವೆ: ಒಂದು ಜಿಲ್ಲಾ ಅಧಿವೇಶನದ ಸುಗಮವಾದ ಕಾರ್ಯಾಚರಣೆಗೆ ಸ್ವಯಂಸೇವಕರ ಸಹಾಯವು ಬೇಕಾಗಿದೆ. ಅಧಿವೇಶನದ ಕೇವಲ ಒಂದು ಭಾಗಕ್ಕಾಗಿ ನೀವು ಕೆಲಸಮಾಡಲು ಶಕ್ತರಾಗಬಹುದಾದರೂ, ನಿಮ್ಮ ಸೇವೆಗಳು ಗಣ್ಯಮಾಡಲ್ಪಡುವುವು. ನೀವು ಸಹಾಯ ಮಾಡಬಲ್ಲಿರಾದರೆ, ಅಧಿವೇಶನದ ಸ್ವಯಂ ಸೇವಕರ ಇಲಾಖೆಗೆ ದಯವಿಟ್ಟು ವರದಿಮಾಡಿ. ಅಧಿವೇಶನದ ಸಾಫಲ್ಯಕ್ಕೆ 16 ವರ್ಷ ಪ್ರಾಯಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳು ಕೂಡ ನೆರವಾಗಬಹುದು, ಆದರೆ ಅವರು ಹೆತ್ತವರಲ್ಲೊಬ್ಬರೊಂದಿಗೆ ಯಾ ಬೇರೆ ಜವಾಬ್ದಾರ ವಯಸ್ಕರೊಂದಿಗೆ ಕೆಲಸಮಾಡಬೇಕು.
ಬ್ಯಾಡ್ಜ್ ಕಾರ್ಡ್ಸ್: ಅಧಿವೇಶನದಲ್ಲಿ ಮತ್ತು ಅಧಿವೇಶನ ಸ್ಥಳಕ್ಕೆ ಮತ್ತು ಅಧಿವೇಶನದಿಂದ ಪ್ರಯಾಣಿಸುವಾಗ, ವಿಶೇಷವಾಗಿ ತಯಾರಿಸಲಾದ ಬ್ಯಾಡ್ಜ್ ಕಾರ್ಡನ್ನು ದಯವಿಟ್ಟು ಧರಿಸಿಕೊಳ್ಳಿರಿ. ಪ್ರಯಾಣ ಮಾಡುವಾಗ ಒಂದು ಉತ್ತಮ ಸಾಕ್ಷಿಯನ್ನು ನೀಡಲು ಇದು ಅನೇಕ ವೇಳೆ ನಮಗೆ ಸಾಧ್ಯಮಾಡುತ್ತದೆ. ಸ್ಪಷ್ಟವಾಗಿಗಿ ಬರೆಯಲ್ಪಟ್ಟ ಬ್ಯಾಡ್ಜ್ ಕಾರ್ಡಿನ ಮೂಲಕ ಅಧಿವೇಶನ ಪ್ರತಿನಿಧಿ ಎಂದು ಗುರುತಿಸಲ್ಪಡುವುದು, ಸುಲಭಗೊಳಿಸಲ್ಪಟ್ಟ ಆಹಾರ ಸೇವೆಯ ಏರ್ಪಾಡಿನ ಕಾರ್ಯವನ್ನು ಸರಾಗ ಮಾಡುವುದು. ಬ್ಯಾಡ್ಜ್ ಕಾರ್ಡುಗಳು ಅಧಿವೇಶನಗಳಲ್ಲಿ ದೊರೆಯದೆ ಇರುವ ಕಾರಣ, ಅವುಗಳನ್ನು ನಿಮ್ಮ ಸಭೆಯ ಮುಖಾಂತರ ಪಡೆಯತಕ್ಕದ್ದು.
ವೈಯಕ್ತಿಕ ಗುರುತಿಸುವಿಕೆ: “ದೈವಿಕ ಬೋಧನೆ” ಲೇಪಲ್ ಕಾರ್ಡಿನ ಜೊತೆಗೆ, ಅವನ ಮೇಲೆ ಅವನ ಮೆಡಿಕಲ್ ಡೈರೆಕ್ಟಿವ್ ಕಾರ್ಡನ್ನು ಹೊಂದಿರುವಂತೆ ಪ್ರತಿಯೊಬ್ಬನು ಉತ್ತೇಜಿಸಲ್ಪಟ್ಟಿದ್ದಾನೆ. ಬೆತೆಲ್ ಕುಟುಂಬದ ಸದಸ್ಯರು ಮತ್ತು ಪಯನೀಯರರು ತಮ್ಮೊಂದಿಗೆ ತಮ್ಮ ಐಡೆಂಟಿಫಿಕೇಷನ್ ಕಾರ್ಡ್ಗಳನ್ನು ಹೊಂದಿರತಕ್ಕದ್ದು.
ಎಚ್ಚರಿಕೆಯ ಮಾತುಗಳು: ನಿಮ್ಮ ವಾಹನವನ್ನು ಎಲ್ಲಿ ನಿಲ್ಲಿಸಿದರೂ, ಎಲ್ಲಾ ಸಮಯಗಳಲ್ಲಿ ಅದನ್ನು ಬೀಗ ಹಾಕಿಡತಕ್ಕದ್ದು ಮತ್ತು ತೋರುವಂತೆ ಯಾವುದನ್ನು ಒಳಗೆ ಎಂದೂ ಬಿಡಬಾರದು. ಸಾಧ್ಯವಾದರೆ ನಿಮ್ಮ ಸ್ವತ್ತುಗಳನ್ನು ಪೆಟ್ಟಿಗೆಯೊಳಗೆ ಬೀಗ ಹಾಕಿಡಿ. ದೊಡ್ಡ ಕೂಟಗಳಿಂದ ಆಕರ್ಷಿತರಾಗುವ ಕಳ್ಳರು ಮತ್ತು ಜೇಬುಗಳ್ಳರ ವಿರುದ್ಧ ಎಚ್ಚರವಹಿಸಿರಿ. ಅಧಿವೇಶನದಲ್ಲಿ, ಬೆಲೆಯುಳ್ಳ ಯಾವುದೇ ವಿಷಯಗಳ ಕಡೆಗೆ ಗಮನಕೊಡದೆ ಅವುಗಳನ್ನು ಆಸನಗಳ ಮೇಲೆ ಬಿಡದೇ ಇರುವುದು ಒಳಗೊಂಡಿದೆ. ಅಧಿವೇಶನದ ಪ್ರದೇಶದಿಂದ ದೂರಕ್ಕೆ ಮಕ್ಕಳನ್ನು ಆಕರ್ಷಿಸಲು ಪ್ರಯತ್ನಪಡುವ ನಿರ್ಲಜ್ಜೆಯ ವ್ಯಕ್ತಿಗಳ ಕೆಲವು ವರದಿಗಳೂ ಇವೆ. ದಯವಿಟ್ಟು ಜಾಗರೂಕತೆಯಿಂದ ಇರ್ರಿ.
ಕೆಲವು ಹೋಟೆಲುಗಳು ಅನೈತಿಕ ವಿಷಯವಿರುವ ಯಾ ಅಶ್ಲೀಲ ಸ್ವಭಾವದ ಟೆಲಿವಿಷನ್ ಚಿತ್ರಗಳಿಗೆ ಸುಲಭವಾದ ದಾರಿಯನ್ನು ಒದಗಿಸುತ್ತವೆ ಎಂಬುದಾಗಿ ವರದಿಸಲಾಗಿದೆ. ಉಳುಕೊಳ್ಳುವ ಈ ಸ್ಥಳಗಳಲ್ಲಿ ಮಕ್ಕಳು ಮೇಲ್ವಿಚಾರಣೆಯಿಲ್ಲದೆ ಟಿವಿ ನೋಡುವುದನ್ನು ತಡೆಯುವ ಅಗತ್ಯವನ್ನು ಇದು ಎತ್ತಿತೋರಿಸುತ್ತದೆ.
ಸೆಶನ್ಗಳು ಆರಂಭವಾಗುವ ಸಮಯ ಮತ್ತು ಇತರ ವಿಷಯಗಳ ಕುರಿತು ಮಾಹಿತಿಯನ್ನು ಪಡೆಯಲು ಕೆಲವು ಸಹೋದರರು ಮತ್ತು ಅಭಿರುಚಿಯುಳ್ಳ ವ್ಯಕ್ತಿಗಳು ಅಧಿವೇಶನ ಸಭಾಗೃಹದ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ದಯವಿಟ್ಟು ಇದನ್ನು ಮಾಡಬೇಡಿ. ನಿಮಗೆ ಬೇಕಾಗಿರುವ ಮಾಹಿತಿಯು ಕಾವಲಿನಬುರುಜು ಯಾ ನಮ್ಮ ರಾಜ್ಯದ ಸೇವೆ ಯಲ್ಲಿ ಸಿಗದಿದ್ದರೆ, ಜುಲೈ 1993ರ ನಮ್ಮ ರಾಜ್ಯದ ಸೇವೆ ಯಲ್ಲಿ ಕಂಡುಬರುವ ತಕ್ಕದಾದ ಅಧಿವೇಶನ ವಿಳಾಸಕ್ಕೆ ನೀವು ಬರೆಯತಕ್ಕದ್ದು.