ಬೈಬಲ್ ಅಭ್ಯಾಸಗಳಿಗಾಗಿ ಶ್ರದ್ಧೆಯಿಂದ ಹುಡುಕಿರಿ
1 ಈ ಹಳೆಯ ಲೋಕಕ್ಕೆ ಸಮಯವು ಕಡಿಮೆಯಾಗುತ್ತಿದೆ ಎಂಬುದಕ್ಕೆ ಹೆಚ್ಚಾಗುತ್ತಿರುವ ಪ್ರಮಾಣಗಳಿವೆ. (2 ತಿಮೊ. 3:1-5) ಇದರ ಅರ್ಥೆವೇನು? ಇದರ ಅರ್ಥವು ಜನರ ಜೀವಗಳು ಗಂಡಾಂತರದಲ್ಲಿವೆ. ಹಾಗಿದ್ದರೂ, ಕೆಲವರು ರಕ್ಷಿಸಲ್ಪಡುವಂತೆ ಸಹಾಯ ಮಾಡುವುದು ನಮ್ಮ ಕೈಯಲ್ಲಿದೆ. (ಜ್ಞಾನೋ. 3:27) ಈ ಉದ್ದೇಶಕ್ಕಾಗಿ, ನಾವು ಬೈಬಲ್ ಅಭ್ಯಾಸಗಳನ್ನು ಆರಂಭಿಸಲು ಮತ್ತು ನಡೆಸಲು ಶ್ರದ್ಧೆಯಿಂದ ಪ್ರಯತ್ನಿಸಬೇಕು.
2 ನಮ್ಮ ಬೈಬಲಾಧಾರಿತ ಸಾಹಿತ್ಯದ ಹಂಚುವಿಕೆಯ ಮೂಲಕ ಹೆಚ್ಚಿನ ಒಳಿತನ್ನು ಸಾಧಿಸಲಾಗಿದೆ. ಆದರೆ ಜನರಿಗೆ ಹೆಚ್ಚಾಗಿ ಅಗತ್ಯವಿರುವುದೇನೆಂದರೆ, ಕ್ರಮವಾಗಿ ನಡೆಸಲ್ಪಡುವ ಒಂದು ಮನೆ ಬೈಬಲ್ ಅಭ್ಯಾಸದ ಮುಖಾಂತರ ವೈಯಕ್ತಿಕ ನೆರವು. ಅವರು ಅದನ್ನು ಗಣ್ಯಮಾಡುವಂತೆ ನಾವು ಹೇಗೆ ಸಹಾಯ ಮಾಡಬಲ್ಲೆವು?
3 ಅನೇಕ ಜನರಿಗೆ ಸಂಬಂಧಿಸುವ ಪ್ರಶ್ನೆಗಳನ್ನು ನಾವು ಎಬ್ಬಿಸಸಾಧ್ಯವಿದೆ. ಅಂಥ ಪ್ರಶ್ನೆಗಳು, ನೈತಿಕ ಮಟ್ಟಗಳು ಪ್ರಚಂಡವಾಗಿ ಅವನತಿಗಿಳಿದಿರುವ ಕಾರಣ, ಕುಟುಂಬ ಜೀವಿತವು ಇಷ್ಟು ಅಸ್ಥಿರವಾಗಿರಲು ಕಾರಣ, ಹಿಂಸೆ ಮತ್ತು ಪಾತಕ ಇಂಥ ಒಂದು ಬೆದರಿಕೆಯಾಗಿರುವ ಕಾರಣ, ಒಬ್ಬ ಪ್ರೀತಿಪರ ದೇವರು ಸದ್ಯದ ಪರಿಸ್ಥಿತಿಗಳನ್ನು ಅನುಮತಿಸಿರುವುದಕ್ಕೆ ಕಾರಣ, ಮತ್ತು ಹೀಗೆ ಅನೇಕ ವಿಷಯಗಳ ಮೇಲೆ ಕೇಂದ್ರಿತವಾಗಿರಬಹುದು. ನಿಮ್ಮ ಟೆರಿಟೊರಿಯಲ್ಲಿರುವ ಜನರಿಗೆ ವಿಶೇಷ ಅಭಿರುಚಿಯುಳ್ಳ ವಿವಾದಾಂಶಗಳು ಮತ್ತು ಘಟನೆಗಳ ವಿಷಯದಲ್ಲಿ ಎಚ್ಚರವಾಗಿರ್ರಿ. ಈ ಪ್ರಶ್ನೆಗಳಿಗೆ ಬೈಬಲಿನ ಸ್ಪಷ್ಟ ಉತ್ತರಗಳನ್ನು ಸೂಚಿಸಿರಿ. ನಮ್ಮೆಲ್ಲರನ್ನು ಪ್ರಭಾವಿಸುವ ಈ ವಿಷಯಗಳು ಮತ್ತು ಇನ್ನಿತರ ಪ್ರಾಮುಖ್ಯ ವಿವಾದಾಂಶಗಳ ಕುರಿತು, ಬೈಬಲ್ ಏನನ್ನು ಹೇಳುತ್ತದೋ ಅದನ್ನು ಕಲಿಯಲು ನಾವು ಹಂಚುವ ಸಾಹಿತ್ಯವು ಅವರಿಗೆ ಹೇಗೆ ಸಹಾಯ ಮಾಡಬಲ್ಲದೆಂದು ತೋರಿಸಿರಿ.
4 ಮನೆಯವನನ್ನು ಸಂಭಾಷಣೆಯಲ್ಲಿ ಒಳಗೂಡಿಸುವುದು ಪ್ರಾಮುಖ್ಯವಾಗಿದೆ. ಅವನಿಗೆ ಸಂಬಂಧಿಸುವ ವಿಷಯವನ್ನು ಗ್ರಹಿಸಲು ಎಚ್ಚರವುಳ್ಳವರಾಗಿರ್ರಿ. ನಿಮ್ಮ ಸಂಭಾಷಣೆಯನ್ನು ಅವನ ಅಭಿರುಚಿಗಳ ಯಾ ಚಿಂತೆಗಳ ಸುತ್ತಲೂ ವಿಕಸಿಸಿರಿ. ಮಾನವಕುಲದ ಸಮಸ್ಯೆಗಳಿಗೆ ಬೈಬಲಿನ ಪರಿಹಾರವನ್ನು ವಿವರಿಸುವ ಒಂದು ಪುಸ್ತಕ, ಬ್ರೋಷರ್, ಪತ್ರಿಕೆ, ಯಾ ಕಿರುಹೊತ್ತಗೆಯಲ್ಲಿರುವ ಮಾಹಿತಿಯ ಕಡೆಗೆ ಗಮನವನ್ನು ಸೆಳೆಯಿರಿ. ಬಿಟ್ಟು ಹೋಗುವ ಮುಂಚೆ, ನಿಮ್ಮ ಮುಂದಿನ ಭೇಟಿಗಾಗಿ ಅವನಲ್ಲಿ ನಿರೀಕ್ಷಣೆಯನ್ನು ಕಟ್ಟಬಹುದೆಂದು ನೀವು ನಂಬುವ ಒಂದೆರಡು ಪ್ರಶ್ನೆಗಳನ್ನು ಎಬ್ಬಿಸಿರಿ. ನೀವು ಹಿಂದಿರುಗಿದಾಗ, ಈ ಪ್ರಶ್ನೆಗಳನ್ನು ಜ್ಞಾಪಿಸಲು ನಿಶ್ಚಿತರಾಗಿರಿ, ಮತ್ತು ಆಮೇಲೆ ಬೈಬಲಿನ ಉತ್ತರಗಳನ್ನು ಕಂಡುಹಿಡಿಯುವಂತೆ ಅವನಿಗೆ ಸಹಾಯ ಮಾಡಲು ಸಾಹಿತ್ಯವನ್ನು ಉಪಯೋಗಿಸಿರಿ.
5 ನಾವು ಅಭ್ಯಾಸಗಳನ್ನು ಆರಂಭಿಸಿ ಅವುಗಳನ್ನು ಕ್ರಮವಾಗಿ ನಡೆಸುವುದು, ಜನರ ಜೀವಿತಗಳನ್ನು ಬದಲಾಯಿಸಬಲ್ಲದು. ನಾವು ಕ್ಷೇತ್ರದಲ್ಲಿ ಯಾ ಅನೌಪಚಾರಿಕ ಸನ್ನಿವೇಶಗಳಲ್ಲಿ ಭೇಟಿಯಾಗುವವರ ಚಿಂತೆಗಳಲ್ಲಿ ಯಥಾರ್ಥವಾದ ಆಸಕ್ತಿಯನ್ನು ತೋರಿಸುವ ಅಗತ್ಯವಿದೆ. ಅವರ ಆಸಕ್ತಿಯನ್ನು ಪ್ರಗತಿಪರವಾಗಿ ಪ್ರಚೋದಿಸಲು ಒಳ್ಳೇ ತಯಾರಿಯ ಅಗತ್ಯವಿದೆ. ಆತ್ಮಿಕ ಉಣಿಸುವಿಕೆಯ ಕ್ರಮವಾದ ಮಾರ್ಗದಲ್ಲಿ ಅವರನ್ನು ತರುವ ತನಕ ಭೇಟಿಯಾಗುತ್ತಾ ಇರಲು ತಾಳ್ಮೆಯ ಅಗತ್ಯವಿರುತ್ತದೆ. ಸ್ವತಃ ಜನರಲ್ಲಿಯೇ ಪ್ರೀತಿಪರ ಆಸಕ್ತಿಯನ್ನು ಅದು ಅಗತ್ಯಪಡಿಸುತ್ತದೆ. ಹತ್ತಿರವಿರುವ ನಾಶನದಿಂದ ಅವರು ಪಾರಾಗುವಂತೆ ಸಹಾಯ ಮಾಡಲು ನಾವು ಪ್ರಾಮಾಣಿಕವಾಗಿ ಬಯಸಬೇಕು. ನಮ್ಮ ಬೈಬಲ್ ಅಭ್ಯಾಸದ ಕೆಲಸವನ್ನು, ಕ್ರಮದ ಮತ್ತು ಶ್ರದ್ಧೆಯ ಪ್ರಾರ್ಥನೆಯ ಒಂದು ವಿಷಯವಾಗಿ ಮಾಡತಕ್ಕದ್ದು.—1 ಥೆಸ. 5:17.
6 ಕಳೆದ ಮೂರು ವರ್ಷಗಳಲ್ಲಿ, ಸುಮಾರು ಹತ್ತು ಲಕ್ಷ ಜನರು ಸ್ನಾನಿತ ಶಿಷ್ಯರಾಗಿರುವುದನ್ನು ನೋಡುವುದು ಬಹಳ ಉತ್ತೇಜಕವಾಗಿದೆ. (ಮತ್ತಾ. 28:19, 20) ಈಗ ಪ್ರತಿ ತಿಂಗಳು ನಾವು ಸುಮಾರು 45 ಲಕ್ಷ ಬೈಬಲ್ ಅಭ್ಯಾಸಗಳನ್ನು ನಡೆಸುತ್ತಿದ್ದೇವೆ, ಮತ್ತು ಇದು ಇತರರ ಜೀವಗಳಿಗಾಗಿರುವ ನಮ್ಮ ಚಿಂತೆಯನ್ನು ತೋರಿಸುತ್ತದೆ. ನಿಮ್ಮ ಕುರಿತೇನು? ಮನೆ ಬೈಬಲ್ ಅಭ್ಯಾಸದ ಕಾರ್ಯದಲ್ಲಿ ಭಾಗವಹಿಸಲು ನೀವು ಶ್ರದ್ಧೆಯಿಂದ ಪ್ರಯತ್ನಿಸುತ್ತಿರುವಿರೊ? ಈ ಸಂಬಂಧದಲ್ಲಿ, ನಮ್ಮ ನಂಬಿಗಸತ್ತೆಯ ಮೇಲೆ, ನಮ್ಮ ಮತ್ತು ಇತರರ ಜೀವಿತಗಳು ಅವಲಂಬಿಸಿವೆ ಎಂದು ನೆನಪಿನಲ್ಲಿಡಿ.—ಯೆಹೆ. 3:17-19.