“ಎಚ್ಚರವಾಗಿರ್ರಿ”
1 ಮತ್ತಾಯ 26:38-41 ರಲ್ಲಿ ದಾಖಲಿಸಲ್ಪಟ್ಟ ಮಾತುಗಳನ್ನು ಯೇಸು ನುಡಿದಾಗ, ತನ್ನ ಮಾನವ ಅಸ್ತಿತ್ವದ ಅತ್ಯಂತ ಕಠಿನ ಸಮಯವನ್ನು ಅವನು ಸಮೀಪಿಸುತ್ತಿದ್ದನು. ಇಡೀ ಮಾನವ ಇತಿಹಾಸದಲ್ಲೇ ಅದು ಅತ್ಯಂತ ಪ್ರಾಮುಖ್ಯವಾದ ಸಮಯವಾಗಿ ಪರಿಣಮಿಸಲಿತ್ತು. ಇಡೀ ಮಾನವಜಾತಿಯ ರಕ್ಷಣೆಯು ಗಂಡಾಂತರದಲ್ಲಿತ್ತು. ಯೇಸುವಿನ ಶಿಷ್ಯರು “ಎಚ್ಚರ” ವಾಗಿರಬೇಕಿತ್ತು.
2 ಇಂದು, ರಕ್ಷಕ ಮತ್ತು ಸಂಹಾರಕನ ದ್ವಿಪಾತ್ರದಲ್ಲಿ ಯೇಸುವಿನ ಆಗಮನದ ಹೊಸ್ತಿಲಿನಲ್ಲಿ ನಾವು ನಿಂತಿದ್ದೇವೆ. ಸಮಯಗಳ ಜರೂರಿಯನ್ನು ಗ್ರಹಿಸುವ ಜಾಗರೂಕ ಕ್ರೈಸ್ತರಂತೆ, ನಾವು ಸುಮ್ಮನೆ ನಮ್ಮ ಕೈಗಳನ್ನು ಕಟ್ಟಿಕೊಂಡು ಬಿಡುಗಡೆಗಾಗಿ ಕಾಯುವುದಿಲ್ಲ. ನಾವು ಎಲ್ಲ ಸಮಯಗಳಲ್ಲಿ ಸಿದ್ಧರಾಗಿರಬೇಕೆಂದು ನಮಗೆ ಗೊತ್ತಿದೆ. ಯೆಹೋವನಿಗೆ ನಮ್ಮ ಸೇವೆಯಲ್ಲಿ ನಾವು ‘ಕಷ್ಟಪಟ್ಟು ಕೆಲಸಮಾಡಿ ಪ್ರಯಾಸಪಡುತ್ತಾ’ ಇರುವುದು ಅಗತ್ಯ. (1 ತಿಮೊ. 4:10, NW) ವೈಯಕ್ತಿಕವಾಗಿ ನಮ್ಮಲ್ಲಿ ಪ್ರತಿಯೊಬ್ಬರ ಕುರಿತೇನು? ನಾವು ಎಚ್ಚರವಾಗಿದ್ದೇವೊ?
3 ನಮ್ಮನ್ನು ಪರೀಕ್ಷಿಸಿಕೊಳ್ಳುವುದು: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ” ಎಂದೂ ಯೇಸು ಎಚ್ಚರಿಸಿದನು. (ಲೂಕ 21:34, 35) ನಾವು ‘ವಕ್ರಬುದ್ಧಿಯುಳ್ಳ ಮೂರ್ಖ ಜಾತಿಯ ಮಧ್ಯದಲ್ಲಿ ನಿರ್ದೋಷಿಗಳೂ ಯಥಾರ್ಥ ಮನಸ್ಸುಳ್ಳವರೂ’ ಆಗಿದ್ದೇವೆಂಬುದನ್ನು ಖಚಿತಪಡಿಸಿಕೊಳ್ಳುತ್ತಾ, ನಮ್ಮ ವಿಷಯದಲ್ಲಿ ಜಾಗರೂಕರಾಗಿರಬೇಕು. (ಫಿಲಿ. 2:15) ನಾವು ಪ್ರತಿ ದಿನ ಕ್ರೈಸ್ತರೋಪಾದಿ, ಯೇಸುವನ್ನು ಅನುಕರಿಸುತ್ತಾ, ದೇವರ ವಾಕ್ಯದಲ್ಲಿ ನಿರೂಪಿಸಲ್ಪಟ್ಟ ಮೂಲಸೂತ್ರಗಳಿಗೆ ಹೊಂದಿಕೆಯಲ್ಲಿ ನಡೆಯುತ್ತಾ, ಜೀವಿಸುತ್ತಿದ್ದೇವೊ? ‘ದುಷ್ಟನ ವಶದಲ್ಲಿ ಬಿದ್ದಿರುವ’ ಲೋಕವೊಂದರ ವಿಶೇಷಗುಣವಾಗಿರುವ ಅಕ್ರೈಸ್ತ ನಡವಳಿಕೆಯನ್ನು ನಾವು ತೊರೆಯಬೇಕು. (1 ಯೋಹಾನ 5:19; ರೋಮಾ. 13:11-14) ಶಾಸ್ತ್ರವಚನಗಳ ಬೆಳಕಿನಲ್ಲಿ ನಾವು ನಮ್ಮನ್ನು ಪರೀಕ್ಷಿಸಿಕೊಳ್ಳುವಾಗ, ಯೇಸು ಉಪದೇಶಿಸಿದಂತೆ ನಾವು ನಿಜವಾಗಿಯೂ ಎಚ್ಚರದಿಂದಿದ್ದೇವೊ?
4 ಹಿಂಡಿಗೆ ತೋರುವ ಕಾಳಜಿಗಾಗಿ ತಾವು ಲೆಕ್ಕವನ್ನು ಒಪ್ಪಿಸುವೆವೆಂದು ಗ್ರಹಿಸುತ್ತಾ, ಹಿರಿಯರು ಸಭೆಯಲ್ಲಿ ತಮ್ಮ ನೇಮಕಗಳನ್ನು ನೆರವೇರಿಸುವ ವಿಷಯದಲ್ಲಿ ಶ್ರಮಶೀಲರಾಗಿರಲು ಜಾಗರೂಕರಾಗಿರಬೇಕು. (ಇಬ್ರಿ. 13:17) ತಮ್ಮ ಮನೆವಾರ್ತೆಗಳನ್ನು ಯೆಹೋವನ ಮಾರ್ಗಗಳಲ್ಲಿ ನಿರ್ದೇಶಿಸುವ ವಿಶೇಷವಾದ ಹಂಗು ಕುಟುಂಬದ ತಲೆಗಳಿಗಿದೆ. (ಆದಿ. 18:19; ಯೆಹೋ. 24:15; ಹೋಲಿಸಿ 1 ತಿಮೊಥೆಯ 3:4, 5.) ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಶಾಸ್ತ್ರೀಯ ಆಜ್ಞೆಯನ್ನು ನಾವೆಲ್ಲರು ನೆರವೇರಿಸಬೇಕಾದದ್ದು ಸಹ ಎಷ್ಟೊಂದು ಪ್ರಾಮುಖ್ಯವಾಗಿದೆ! ಅದು ನಿಜ ಕ್ರೈಸ್ತತ್ವದ ಗುರುತು.—ಯೋಹಾನ 13:35.
5 ಇತರರನ್ನು ಎಚ್ಚರಿಸಲು ಜಾಗರೂಕರಾಗಿರ್ರಿ: ಎಚ್ಚರವಾಗಿರುವುದು, ನಮ್ಮ ವಿಷಯದಲ್ಲಿ ಜಾಗರೂಕರಾಗಿರುವುದಕ್ಕಿಂತ ಹೆಚ್ಚಿನದನ್ನು ಒಳಗೊಳ್ಳುತ್ತದೆ. ಇತರರನ್ನು ಶಿಷ್ಯರನ್ನಾಗಿ ಮಾಡುವ ಒಂದು ನಿಯೋಗ ನಮಗಿದೆ. (ಮತ್ತಾ. 28:19, 20) ಈ ಲೋಕದೆದುರಿಗೆ ಇರುವ ನಾಶನವನ್ನು ಅವರು ಪಾರಾಗುವಂತೆ ಇತರರಿಗೆ ಎಚ್ಚರಿಕೆಯನ್ನು ನೀಡಲು ನೆರೆಯವರ ಪ್ರೀತಿಯು ನಮ್ಮನ್ನು ಪ್ರೇರೇಪಿಸಬೇಕು. ಇದು ಎಲ್ಲ ಕ್ರೈಸ್ತರ ಮೇಲೆ ನೆಲೆಸಿರುವ ಒಂದು ಹೊಣೆಗಾರಿಕೆ. ಇದು ನಮ್ಮ ಆರಾಧನೆಯ ಅತ್ಯಗತ್ಯ ಭಾಗ. (ರೋಮಾ. 10:9, 10; 1 ಕೊರಿಂ. 9:16) ನಾವು ಅನೇಕ ಬಾರಿ ಜೀವರಕ್ಷಿಸುವ ಈ ಕೆಲಸದ ಕಡೆಗೆ ಔದಾಸೀನ್ಯ ಅಥವಾ ನೇರವಾದ ವಿರೋಧವನ್ನು ಎದುರಿಸುತ್ತೇವೆ. ಹೆಚ್ಚಿನವರು ನಮ್ಮ ಎಚ್ಚರಿಕೆಯನ್ನು ಕಡೆಗಣಿಸಿದರೂ, ಬಿಡದೆ ಮುಂದುವರಿಯುವ ಹಂಗು ನಮಗಿದೆ. (ಯೆಹೆ. 33:8, 9) ದೇವರಿಗಾಗಿ ಮತ್ತು ನೆರೆಯವರಿಗಾಗಿರುವ ಯಥಾರ್ಥವಾದ ಪ್ರೀತಿಯು ನಮ್ಮನ್ನು ಪಟ್ಟುಹಿಡಿದಿರುವಂತೆ ಪ್ರೇರೇಪಿಸುವುದು.
6 ನಿರಾತಂಕವಾಗಿರುವ ಸಮಯ ಇದಲ್ಲ. ಅವು ಒಂದು ಉರ್ಲಿನಂತೆ ಪರಿಣಮಿಸುವ ಹಾಗೆ ನಾವು ಜೀವಿತದ ಅನುದಿನದ ಚಿಂತೆಗಳು ನಮ್ಮನ್ನು ಅಪಕರ್ಷಿಸುವಂತೆ ಬಿಡಬಾರದು ಮಾತ್ರವಲ್ಲ, ಈ ವ್ಯವಸ್ಥೆಯ ಸುಖಗಳಲ್ಲಿ ತೀರ ಒಳಗೊಳ್ಳಲೂಬಾರದು. (ಲೂಕ 21:34, 35) ಜರೂರಿಯ ಪ್ರಜ್ಞೆಗಾಗಿರುವ ಅಗತ್ಯವು ಬೇರೆ ಯಾವುದೇ ಸಮಯಕ್ಕಿಂತ ಈಗ ಇದೆ. ಯೇಸು ಕ್ರಿಸ್ತನಿಗೆ ಈ ದುಷ್ಟ ವ್ಯವಸ್ಥೆಯ ವಿರುದ್ಧ ನ್ಯಾಯವನ್ನು ವಿಧಿಸುವ ಸಮಯ ತೀವ್ರವಾಗಿ ಸಮೀಪಿಸುತ್ತಿದೆ. ಜಾಗೃತರು, ಜಾಗರೂಕರು ಮತ್ತು ಎಚ್ಚರವಾಗಿರುವವರು ಮಾತ್ರ ಪಾರಾಗುವರು. ನಾವು ಯೇಸುವಿನ ಉಪದೇಶಗಳಿಗೆ ವಿಧೇಯತೆ ತೋರಿಸಿ, “ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ . . . ಶಕ್ತ” ರಾಗುವಲ್ಲಿ, ನಾವೆಷ್ಟು ಕೃತಜ್ಞರಾಗಿರುವೆವು!—ಲೂಕ 21:36.