ಅವರಿಗೆ ಗ್ರಹಿಸಲು ಸಹಾಯಮಾಡಿರಿ
1 ಬೈಬಲಿನಲ್ಲಿ ಹೇಳಲ್ಪಟ್ಟಿರುವ ಕೆಲವು ವಿಷಯಗಳು “ತಿಳಿಯು [“ಗ್ರಹಿಸು,” NW]ವದಕ್ಕೆ ಕಷ್ಟ”ಕರವಾಗಿವೆ ಎಂದು ಅಪೊಸ್ತಲ ಪೇತ್ರನು ಒಪ್ಪಿದನು. (2 ಪೇತ್ರ 3:16) ಅನೇಕರಿಗೆ ಹಾಗೆ ಅನಿಸಿದೆ. ಹಾಗಿದ್ದರೂ, ಅದರ ಮೂಲಭೂತ ಬೋಧನೆಗಳು ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕದಲ್ಲಿ ಸ್ಫಟಿಕದಂತೆ ಸ್ಫುಟಗೊಳಿಸಲ್ಪಟ್ಟಿವೆ. ಈ ಪುಸ್ತಕವನ್ನು ಮತ್ತು ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಎಂಬ ಪುಸ್ತಕವನ್ನು ಅತ್ಯುತ್ತಮವಾಗಿ ಉಪಯೋಗಿಸುವಂತೆ ಮಾಡಲು, ಆಸಕ್ತಿಯುಳ್ಳ ಜನರಿಗೆ ನಾವು ಹೇಗೆ ಸಹಾಯಮಾಡಬಲ್ಲೆವು?
2 ನಿಮ್ಮ ಪ್ರಥಮ ಭೇಟಿಯಲ್ಲಿ ನೀವು ಯೋಹಾನ 17:3ನ್ನು ಚರ್ಚಿಸಿರುವುದಾದರೆ, ಹೀಗೆ ಹೇಳುವ ಮೂಲಕ ಹೆಚ್ಚಿನ ಜ್ಞಾನವನ್ನು ತೆಗೆದುಕೊಳ್ಳುವುದಕ್ಕಾಗಿರುವ ಅಗತ್ಯವನ್ನು ನೀವು ಒತ್ತಿ ಹೇಳಸಾಧ್ಯವಿದೆ:
◼ “ಕಳೆದ ಬಾರಿ ನಾನು ಇಲ್ಲಿದ್ದಾಗ, ದೇವರ ಕುರಿತಾದ ಜ್ಞಾನವನ್ನು ತೆಗೆದುಕೊಳ್ಳುವುದು ನಿತ್ಯಜೀವಕ್ಕೆ ನಡೆಸಬಲ್ಲದೆಂಬುದನ್ನು ನಾವು ಯೋಹಾನ 17:3ರಲ್ಲಿ ಓದಿದೆವು. ಆದರೆ ಇಂದು ನಾವು ಜೀವಿಸುತ್ತಿರುವಂಥ ರೀತಿಯ ಲೋಕದಲ್ಲಿ ನೀವು ಸದಾ ಜೀವಿಸಲು ಬಯಸುವಿರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಅಧಿಕಾಂಶ ಜನರು ಬಯಸುವುದಿಲ್ಲ. ಈ ಕಾರಣಕ್ಕಾಗಿ, ದೇವರು ಏನನ್ನು ವಾಗ್ದಾನಿಸಿದ್ದಾನೋ ಅದಕ್ಕೆ ನಾವು ಕಿವಿಗೊಡುವಾಗ ನಾವು ಆನಂದಪಡಬಲ್ಲೆವು.” 12 ಮತ್ತು 13ನೇ ಪುಟಗಳಲ್ಲಿರುವ 12ನೇ ಪ್ಯಾರಗ್ರಾಫ್ಗೆ ತಿರುಗಿಸಿ, ಯೆಶಾಯ 11:6-9ನ್ನು ಓದಿರಿ ಮತ್ತು ಅನಂತರ, ಆ ಪುಟಗಳಲ್ಲಿರುವ ಚಿತ್ರವನ್ನು ಉಪಯೋಗಿಸುತ್ತಾ “ಮೊದಲಿದ್ದದ್ದೆಲ್ಲಾ ಇಲ್ಲದೆ” ಹೋಗುವಾಗ ಲೋಕವು ಯಾವ ರೀತಿಯಲ್ಲಿ ಇರುವುದೆಂಬುದನ್ನು ವರ್ಣಿಸಿರಿ. ಹೆಚ್ಚಿನ ಚರ್ಚೆಗಾಗಿ ಪುನಃ ಹಿಂದಿರುಗಲು ಸಿದ್ಧರೆಂದು ತಿಳಿಸಿರಿ.
3 ದೇವರ ರಾಜ್ಯವು ಕಷ್ಟದಶೆಗೆ ಒಂದು ಅಂತ್ಯವನ್ನು ತರುವುದೆಂಬುದನ್ನು ತೋರಿಸಲು ನೀವು 156ರಿಂದ 162ರ ವರೆಗಿನ ಪುಟಗಳಲ್ಲಿರುವ ಚಿತ್ರವನ್ನು ಉಪಯೋಗಿಸಿರುವುದಾದರೆ, ನೀವು ಪುಸ್ತಕದ ಆ ಪುಟಗಳನ್ನು ಪುನಃ ತೆರೆದು ಹೀಗೆ ಹೇಳಬಹುದು:
◼ “ದೇವರ ರಾಜ್ಯದ ಆಳ್ವಿಕೆಯ ಕೆಳಗೆ ಜನರು ಆನಂದಿಸುವರೆಂದು ಇಲ್ಲಿ ಚಿತ್ರಿಸಲ್ಪಟ್ಟಿರುವ ಆಶೀರ್ವಾದಗಳನ್ನು ನಾವು ಚರ್ಚಿಸಿದೆವು. ಆ ರಾಜ್ಯದ ಕೆಳಗೆ ಜೀವಿಸಲು ಬಯಸುವುದಾದರೆ ನಾವು ಏನು ಮಾಡಬೇಕೆಂದು ನೀವು ನೆನಸುತ್ತೀರಿ?” [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] 250ನೇ ಪುಟದಲ್ಲಿರುವ ಪ್ಯಾರಗ್ರಾಫ್ 2ಕ್ಕೆ ತಿರುಗಿಸಿರಿ ಮತ್ತು ಇಬ್ರಿಯ 11:6ನ್ನು ಓದಿರಿ. ದೇವರನ್ನು ಹುಡುಕಲು ಮತ್ತು ಆತನನ್ನು ಸ್ವೀಕಾರಾರ್ಹವಾಗಿ ಆರಾಧಿಸಲು, ಯೆಹೋವನ ಸಾಕ್ಷಿಗಳು ಪ್ರಾಮಾಣಿಕ ಜನರಿಗೆ ಸಹಾಯಮಾಡುತ್ತಿದ್ದಾರೆ ಎಂಬುದನ್ನು ವಿವರಿಸಿರಿ.
4 ಸಂಭಾಷಿಸಲು ತೀರ ಕಾರ್ಯಮಗ್ನನಾಗಿರುವ ಮನೆಯವನೊಬ್ಬನಿಗೆ “ಈ ಲೋಕವು ಪಾರಾಗುವುದೋ?” ಎಂಬ ಕಿರುಹೊತ್ತಗೆಯನ್ನು ನೀವು ಕೊಟ್ಟು ಬಂದಿರುವುದಾದರೆ, ಈ ಪ್ರಸ್ತಾಪವನ್ನು ನೀವು ಉಪಯೋಗಿಸಬಹುದು:
◼ “ನಾನು ಇತ್ತೀಚೆಗೆ ಬಂದಿದ್ದಾಗ, ನೀವು ತುಂಬ ಕಾರ್ಯಮಗ್ನರಾಗಿದ್ದಿರಿ. ಈ ಪ್ರಕ್ಷುಬ್ಧ ಸಮಯಗಳಿಂದ ಲೋಕದ ಪಾರಾಗುವಿಕೆಯ ಕುರಿತಾಗಿ ಪ್ರಶ್ನೆಯನ್ನು ಎಬ್ಬಿಸಿದ ಒಂದು ಕಿರುಹೊತ್ತಗೆಯನ್ನು ನಾನು ನೀಡಿದ್ದೆ. ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಈ ಪುಸ್ತಕದಲ್ಲಿ ಉದ್ಧರಿಸಲ್ಪಟ್ಟಿರುವ ಪ್ರಕಟನೆ 21:4ನ್ನು ನಾವು ಓದಿದೆವು [162ನೇ ಪುಟದಲ್ಲಿರುವುದನ್ನು ಓದಿರಿ.] ಈ ಚಿತ್ರಗಳು [156ರಿಂದ 162ರ ವರೆಗಿನ ಪುಟಗಳಲ್ಲಿರುವ] ‘ದೇವರು ಮನುಷ್ಯರ ಕಣ್ಣೀರನ್ನೆಲ್ಲಾ ಒರಸಿ’ಬಿಡುವಾಗ ಪರಿಸ್ಥಿತಿಯು ಹೇಗಿರುವುದೆಂಬುದರ ಕುರಿತಾಗಿ ನಿಮಗೆ ಒಂದು ಕಲ್ಪನೆಯನ್ನು ನೀಡುತ್ತವೆ. ಈ ಪುಸ್ತಕವು, ಅತಿ ಸಮೀಪವಿರುವ ಭವಿಷ್ಯತ್ತಿನಲ್ಲಿ ಈ ವಾಗ್ದಾನವು ನೆರವೇರಿಸಲ್ಪಡುವುದು ಎಂಬ ಮನವೊಪ್ಪಿಸುವ ರುಜುವಾತನ್ನು ನೀಡುತ್ತದೆ. ನೀವು ಇದನ್ನು ಓದಲು ಬಯಸುವುದಾದರೆ, ಇದು ನಿಮ್ಮ ಪ್ರತಿಯಾಗಿದೆ.”
5 ಈ ಪ್ರಸ್ತಾಪದೊಂದಿಗೆ “ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು” ಎಂಬ ಪುಸ್ತಕವನ್ನು ನೀಡಿರುವ ಸ್ಥಳಕ್ಕೆ ನೀವು ಹೋಗಬಹುದು:
◼ “ನಿಮ್ಮನ್ನು ನಾನು ಪ್ರಥಮವಾಗಿ ಭೇಟಿಯಾದಾಗ, ನಿಮ್ಮ ಕುಟುಂಬಕ್ಕಾಗಿ ನಿಮಗಿರುವ ಆಸ್ಥೆಯಿಂದ ನಾನು ಪ್ರಭಾವಿಸಲ್ಪಟ್ಟೆ. ದುಷ್ಟ ವಿಷಯಗಳ ವ್ಯವಸ್ಥೆಯ ಕಡೇ ದಿನಗಳಲ್ಲಿ ನಾವು ಜೀವಿಸುತ್ತಿರುವಾಗ, ಕುಟುಂಬಗಳು ಭವಿಷ್ಯತ್ತಿಗಾಗಿ ತಯಾರಾಗುತ್ತಿರುವುದು ಅತಿ ಪ್ರಾಮುಖ್ಯವಾಗಿದೆ. ಅದಕ್ಕಾಗಿ, ನಾನು ನಿಮ್ಮೊಂದಿಗೆ ಬಿಟ್ಟುಹೋದ, ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಎಂಬ ಪುಸ್ತಕವು, ಮನೆಯಲ್ಲಿ ಕ್ರಮವಾದ ಬೈಬಲ್ ಚರ್ಚೆಗಳನ್ನು ಮಾಡುವುದನ್ನು ಬಲವಾಗಿ ಶಿಫಾರಸ್ಸು ಮಾಡುತ್ತದೆ. [185-6ನೇ ಪುಟಗಳಲ್ಲಿರುವ 10ನೇ ಪ್ಯಾರಗ್ರಾಫ್ ಅನ್ನು ಓದಿರಿ.] ಸುಮಾರು 200 ದೇಶಗಳಲ್ಲಿ ಜನರು ಕುಟುಂಬ ಗುಂಪುಗಳೋಪಾದಿ ಮನೆಯಲ್ಲಿ ಬೈಬಲನ್ನು ಹೇಗೆ ಚರ್ಚಿಸುತ್ತಾರೆಂಬುದನ್ನು ಪ್ರದರ್ಶಿಸಲಿಕ್ಕೆ ಅನುಮತಿಸುವುದಾದರೆ, ನಾನು ಕೇವಲ ಕೆಲವೊಂದು ನಿಮಿಷಗಳನ್ನು ತೆಗೆದುಕೊಳ್ಳಲು ಬಯಸುತ್ತೇನೆ.” ಸಮಯವು ಅನುಮತಿಸಿದಂತೆ, ಅಭ್ಯಾಸವನ್ನು ಪ್ರದರ್ಶಿಸಲು ಪುಟ 71ರಲ್ಲಿರುವ ಉಪಶೀರ್ಷಿಕೆಯ ಕೆಳಗಿರುವ ವಿಷಯವನ್ನು ಉಪಯೋಗಿಸಿರಿ.
6 ನೀವು ಆಸಕ್ತ ಜನರನ್ನು ಕಂಡುಕೊಳ್ಳುವುದಾದರೆ, ಅಭ್ಯಾಸವೊಂದನ್ನು ಪ್ರಾರಂಭಿಸುವ ಏರ್ಪಾಡುಗಳನ್ನು ಮಾಡಲು ನೀವು ಬಯಸುವಿರಿ. “ಅನನುಭವಿಗಳಿಗೆ ಗ್ರಹಿಸಲು” ಸಹಾಯಮಾಡುವುದರಲ್ಲಿ ನೀವು ನಿಜವಾಗಿಯೂ ಅಧಿಕ ಹರ್ಷವನ್ನು ಕಂಡುಕೊಳ್ಳುವಿರಿ.—ಕೀರ್ತ. 119:130, NW.