ಹಗಲಿರುಳು ಪವಿತ್ರ ಸೇವೆಯನ್ನು ಸಲ್ಲಿಸಿರಿ
1 ಒಂದು ಅಸಾಧಾರಣವಾದ ಸುಯೋಗವು ನಮಗೆ ನೀಡಲ್ಪಟ್ಟಿದೆ. ಅದು ಯೆಹೋವನ ಸಾಕ್ಷಿಗಳಾಗಿ ಇರುವುದೇ ಆಗಿದೆ. ಎಂದೂ ಕೈಕೊಂಡಿರದ ಅತ್ಯಂತ ಮಹಾ ರಾಜ್ಯ ಘೋಷಣಾ ಕೆಲಸವನ್ನು ಪೂರೈಸಲು, ನಾವು ಯೆಹೋವನಿಂದ ಉಪಯೋಗಿಸಲ್ಪಡುತ್ತಿರುವ ಸೌವಾರ್ತಿಕರ ಲೋಕವ್ಯಾಪಕ ಸಂಸ್ಥೆಯ ಭಾಗವಾಗಿದ್ದೇವೆ! (ಮಾರ್ಕ 13:10) ನಮ್ಮ ಸಮಯಗಳ ತುರ್ತಿನ ನೋಟದಲ್ಲಿ, ನಾವು ಈ ಕೆಲಸದಲ್ಲಿ ಸಾಧ್ಯವಾದಷ್ಟು ಸಂಪೂರ್ಣವಾದ ಮಟ್ಟದಲ್ಲಿ ಪಾಲನ್ನು ತೆಗೆದುಕೊಳ್ಳುತ್ತಿದ್ದೇವೋ?
2 ನಮ್ಮ ಸಾರುವಿಕೆಗೆ ಎಷ್ಟು ಮಂದಿ ಕಟ್ಟಕಡೆಗೆ ಪ್ರತಿಕ್ರಿಯಿಸುವರು ಎಂಬುದು ನಮಗೆ ತಿಳಿದಿಲ್ಲ. ಅದು ತಮ್ಮ “ಪವಿತ್ರ ಸೇವೆಯನ್ನು ಆತನಿಗೆ ಹಗಲಿರುಳು ಸಲ್ಲಿಸುತ್ತಾ” ಇರುವುದರಿಂದ ಗುರುತಿಸಲ್ಪಟ್ಟಿರುವವರೆಲ್ಲರಿಂದ ಕೂಡಿದ ಒಂದು “ಮಹಾ ಸಮೂಹ”ವಾಗುವುದೆಂದು ಯೆಹೋವನು ನಮಗೆ ಆಶ್ವಾಸನೆ ನೀಡುತ್ತಾನೆ. (ಪ್ರಕ. 7:9, 15, NW) ಯಾರು ಈಗಾಗಲೇ ದೇವರ ಸೇವೆಯಲ್ಲಿ ಕಾರ್ಯಮಗ್ನರಾಗಿದ್ದಾರೋ, ಆ ಐವತ್ತು ಲಕ್ಷಕ್ಕಿಂತಲೂ ಹೆಚ್ಚಿನ ಸಾಕ್ಷಿಗಳು, ಕೇವಲ ಆಸಕ್ತಿಯುಳ್ಳ ಕೇಳುಗರಾಗಿಲ್ಲ, ಇಲ್ಲವೇ ಅವರು ಕೇವಲ ಕೂಟಕ್ಕೆ ಹಾಜರಾಗುವವರಾಗಿಲ್ಲ. ಅವರು ಲೋಕವ್ಯಾಪಕವಾಗಿ ಸುವಾರ್ತೆಯನ್ನು ಘೋಷಿಸುವ ಕೆಲಸಗಾರರಾಗಿದ್ದಾರೆ!
3 ಪ್ರತಿ ದಿನ—ಕ್ಷೇತ್ರ ಸೇವೆಯಲ್ಲಾಗಲಿ ಇಲ್ಲವೇ ಅನೌಪಚಾರಿಕವಾಗಿಯಾಗಲಿ—ಯೆಹೋವನನ್ನು ಸ್ತುತಿಸುವ ಅವಕಾಶಗಳಿವೆ. ಪ್ರತಿ ದಿನ, ಕೇವಲ ಒಬ್ಬ ವ್ಯಕ್ತಿಯೊಂದಿಗೆ ಸತ್ಯವನ್ನು ಹಂಚಿಕೊಳ್ಳಲು ನಮ್ಮಲ್ಲಿ ಪ್ರತಿಯೊಬ್ಬರು ಮೊದಲ ಹೆಜ್ಜೆಯನ್ನು ತೆಗೆದುಕೊಂಡಲ್ಲಿ, ನೀಡಲ್ಪಡಸಾಧ್ಯವಿರುವ ಮಹಾ ಸಾಕ್ಷಿಯ ಕುರಿತಾಗಿ ಯೋಚಿಸಿರಿ. ಯೆಹೋವನಿಗಾಗಿರುವ ನಮ್ಮ ಗಣ್ಯತೆಯು, ಆತನ ಕುರಿತು ಉತ್ಸಾಹದಿಂದ ಮಾತಾಡುವಂತೆ ನಮ್ಮನ್ನು ಪ್ರೇರಿಸಬೇಕು.—ಕೀರ್ತ. 92:1, 2.
4 ಪವಿತ್ರ ಸೇವೆಯನ್ನು ಸಲ್ಲಿಸುವಂತೆ ಇತರರಿಗೆ ಸಹಾಯ ಮಾಡಿರಿ: ಯೆಹೋವನು ನಮ್ಮನ್ನು ಸಂಖ್ಯಾವೃದ್ಧಿಯಿಂದ ಆಶೀರ್ವದಿಸುತ್ತಾ ಇರುತ್ತಾನೆ. (ಹಗ್ಗಾ. 2:7) ಭಾರತದಲ್ಲಿ ಕಳೆದ ಸೇವಾ ವರ್ಷದಲ್ಲಿ, ಪ್ರತಿ ತಿಂಗಳು ಸರಾಸರಿ 13,105 ಮನೆ ಬೈಬಲ್ ಅಭ್ಯಾಸಗಳು ನಡೆಸಲ್ಪಟ್ಟವು. ಈ ಜನರೊಂದಿಗೆ ಅಭ್ಯಾಸ ಮಾಡುವುದರಲ್ಲಿನ ನಮ್ಮ ಗುರಿಯು, ಯೇಸುವಿನ ಶಿಷ್ಯರಾಗಲು ಅವರಿಗೆ ಸಹಾಯ ಮಾಡುವುದೇ ಆಗಿದೆ. (ಮತ್ತಾ. 28:19, 20) ಅವರಲ್ಲಿ ಅನೇಕರು ಕೂಟಗಳಿಗೆ ಕ್ರಮವಾಗಿ ಹಾಜರಾಗುವ ಮೂಲಕ ಈಗಾಗಲೇ ಉತ್ತಮ ಪ್ರಗತಿಯನ್ನು ಮಾಡಿದ್ದಾರೆ. ಅವರು ತಾವು ಕಲಿತಿರುವಂಥ “ದೇವರ ಮಹತ್ತುಗಳ ವಿಷಯವಾಗಿ” ತಮ್ಮ ಪರಿಚಯಸ್ಥರೊಂದಿಗೆ ಮಾತಾಡಲು ಆರಂಭಿಸಿದ್ದಾರೆ. (ಅ. ಕೃ. 2:11) ಸಾರ್ವಜನಿಕ ಶುಶ್ರೂಷೆಯಲ್ಲಿ ಭಾಗವಹಿಸಲು ಅವರು ಈಗ ಆಮಂತ್ರಿಸಲ್ಪಡಸಾಧ್ಯವಿದೆಯೋ?
5 ಎಪ್ರಿಲ್ ತಿಂಗಳಿನಲ್ಲಿ ಕ್ಷೇತ್ರ ಸೇವೆಯಲ್ಲಿ ನಮ್ಮನ್ನು ಜತೆಗೂಡಲು ಅರ್ಹರಾಗುವ ಹೊಸಬರನ್ನು ಆಮಂತ್ರಿಸಲು, ನಾವು ಒಂದು ವಿಶೇಷವಾದ ಪ್ರಯತ್ನವನ್ನು ಮಾಡಬೇಕು. ಇದನ್ನು ಮಾಡಲು ನಿಮ್ಮ ವಿದ್ಯಾರ್ಥಿಯು ಇಚ್ಛೆಯನ್ನು ವ್ಯಕ್ತಪಡಿಸಿದ್ದಾನೋ? ಹಾಗಿರುವಲ್ಲಿ, ಅವನು ಶಾಸ್ತ್ರೀಯ ಆವಶ್ಯಕತೆಗಳನ್ನು ಮುಟ್ಟುತ್ತಾನೋ? (ನಮ್ಮ ಶುಶ್ರೂಷೆ ಎಂಬ ಪುಸ್ತಕದ, ಪುಟಗಳು 97-9ನ್ನು ನೋಡಿರಿ.) ವಿದ್ಯಾರ್ಥಿಯು ಕ್ಷೇತ್ರ ಸೇವೆಯಲ್ಲಿ ಪಾಲನ್ನು ತೆಗೆದುಕೊಳ್ಳಲು ಇಚ್ಛಿಸುವಾಗ, ಅವನ ಪ್ರತೀಕ್ಷೆಗಳನ್ನು ಅಧ್ಯಕ್ಷ ಮೇಲ್ವಿಚಾರಕನೊಂದಿಗೆ ಚರ್ಚಿಸಿರಿ, ಅವನು ವಿಷಯವನ್ನು ಪರೀಕ್ಷಿಸಲಿಕ್ಕಾಗಿ ಹಿರಿಯರಿಗಾಗಿ ಏರ್ಪಡಿಸುವನು. ವಿದ್ಯಾರ್ಥಿಯು ಒಬ್ಬ ಅಸ್ನಾತ ಪ್ರಚಾರಕನೋಪಾದಿ ಅಂಗೀಕರಿಸಲ್ಪಡಲು ಅರ್ಹನಾಗುವುದಾದರೆ, ನಿಮ್ಮನ್ನು ಕ್ಷೇತ್ರ ಸೇವೆಯಲ್ಲಿ ಜತೆಗೂಡಲು ಅವನನ್ನು ಆಮಂತ್ರಿಸಿರಿ. ಎಪ್ರಿಲ್ ತಿಂಗಳಿನಲ್ಲಿ ಪ್ರಚಾರ ಮಾಡಲು ತೊಡಗುವುದಕ್ಕೆ ಅರ್ಹರಾಗಿರಬಹುದಾದವರಿಗೆ ನೆರವನ್ನು ನೀಡುವ ವಿಷಯದಲ್ಲಿ, ವಿಶೇಷವಾಗಿ ಸೇವಾ ಮೇಲ್ವಿಚಾರಕರು ಮತ್ತು ಪುಸ್ತಕ ಅಭ್ಯಾಸ ಚಾಲಕರು ಅರಿವುಳ್ಳವರಾಗಿರಬೇಕು.
6 ಹೆತ್ತವರು ತಮ್ಮ ಮಕ್ಕಳು ಅಸ್ನಾತ ಪ್ರಚಾರಕರಾಗಲು ಅರ್ಹರಾಗುತ್ತಾರೋ ಎಂಬುದನ್ನು ಪರಿಗಣಿಸಬಹುದು. (ಕೀರ್ತ. 148:12, 13) ನಿಮ್ಮ ಮಗು ರಾಜ್ಯ ಸೇವೆಯಲ್ಲಿ ಸ್ವತಃ ವ್ಯಕ್ತಪಡಿಸಿಕೊಳ್ಳಲು ಇಚ್ಛಿಸುವುದಾದರೆ ಮತ್ತು ಅವನು ಒಳ್ಳೆಯ ನಡತೆಯುಳ್ಳವನಾಗಿದ್ದರೆ, ಪರಿಸ್ಥಿತಿಯನ್ನು ಚರ್ಚಿಸಲು ಸೇವಾ ಕಮಿಟಿಯಲ್ಲಿರುವ ಹಿರಿಯರಲ್ಲಿ ಒಬ್ಬರನ್ನು ನೀವು ಸಮೀಪಿಸಬಹುದು. ನಿಮ್ಮನ್ನು ಮತ್ತು ನಿಮ್ಮ ಮಗುವನ್ನು ಭೇಟಿಮಾಡಿದ ಬಳಿಕ, ಅವನು ಒಬ್ಬ ಪ್ರಚಾರಕನಾಗಿ ಎಣಿಸಲ್ಪಡಲು ಅರ್ಹನಾಗಿದ್ದಾನೋ ಎಂಬುದನ್ನು ಇಬ್ಬರು ಹಿರಿಯರು ನಿರ್ಧರಿಸುವರು. ದೇವರನ್ನು ಸ್ತುತಿಸುವುದರಲ್ಲಿ ಮಕ್ಕಳು ನಮ್ಮನ್ನು ಜತೆಗೂಡುವಾಗ, ಆನಂದಿಸಲಿಕ್ಕಾಗಿ ವಿಶೇಷವಾದ ಕಾರಣವಿದೆ!
7 ಯೆಹೋವನು ಮಾತ್ರವೇ ನಮ್ಮ ಪವಿತ್ರ ಸೇವೆಗೆ ಯೋಗ್ಯನಾಗಿದ್ದಾನೆ. (ಲೂಕ 4:8) ನಮ್ಮಲ್ಲಿ ಪ್ರತಿಯೊಬ್ಬರೂ ಆತನನ್ನು “ಬಹಳವಾಗಿ” ಸ್ತುತಿಸಲಿಕ್ಕಿರುವ ನಮ್ಮ ಅದ್ಭುತಕರವಾದ ಸುಯೋಗವನ್ನು ಉಪಯೋಗಿಸಿಕೊಳ್ಳೋಣ.—ಕೀರ್ತ. 109:30; 113:3.