ಎಪ್ರಿಲ್ ತಿಂಗಳಿನಲ್ಲಿ “ಸತ್ಕ್ರಿಯೆಗಳಿಗಾಗಿ ಹುರುಪುಳ್ಳ”ವರಾಗಿರಿ!
1 ಕಳೆದ ವರ್ಷ, ರಾಜ್ಯ ವಾರ್ತೆ ನಂಬ್ರ 34ರ ಲಕ್ಷಾಂತರ ಪ್ರತಿಗಳು ಲೋಕವ್ಯಾಪಕವಾಗಿ ವಿತರಿಸಲ್ಪಟ್ಟಾಗ, ಒಂದು ಅಭೂತಪೂರ್ವ ಸಾಕ್ಷಿಯು ಕೊಡಲ್ಪಟ್ಟಿತು. ಈ ಪ್ರಚೋದನಾತ್ಮಕ ಕೆಲಸದಲ್ಲಿ ಸಭಾ ಪ್ರಚಾರಕರು ಮತ್ತು ಪಯನೀಯರರು ಸಮಾನವಾಗಿ ಹುರುಪಿನಿಂದ ಪಾಲನ್ನು ತೆಗೆದುಕೊಂಡರು. ಅವರಲ್ಲಿ ನೀವೂ ಇದ್ದಿರೋ? ನೀವು ಇದ್ದಿದ್ದಲ್ಲಿ, ಆ ಗಮನಾರ್ಹವಾದ ಕಾರ್ಯಾಚರಣೆಯಲ್ಲಿ ಭಾಗವೊಂದನ್ನು ಹೊಂದಿದ್ದರಿಂದ ನೀವು ಸಂಪೂರ್ಣವಾಗಿ ಆನಂದಿಸಿದಿರಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಈ ವರ್ಷ ಯಾವ ‘ಸತ್ಕ್ರಿಯೆ’ ನಮಗಾಗಿ ಕಾದಿದೆ? ಎಂಬುದಾಗಿ ನೀವು ಈಗ ಕುತೂಹಲಪಡುತ್ತಿರಬಹುದು.—ತೀತ 2:14, NW.
2 ಎಪ್ರಿಲ್ ಮತ್ತು ಮೇ ತಿಂಗಳುಗಳ ಮೊದಲ ಭಾಗದಲ್ಲಿ, “ಯುದ್ಧಗಳು ಇನ್ನಿಲ್ಲದಿರುವಾಗ” ಎಂಬ ವಿಷಯವನ್ನು ಪ್ರದರ್ಶಿಸುತ್ತಿರುವ ಎಚ್ಚರ! ಪತ್ರಿಕೆಯ, ಮೇ 8, 1996ರ ಸಂಚಿಕೆಯ ಒಂದು ವಿಶೇಷ ಮುದ್ರಣವನ್ನು ವಿತರಿಸುವ ಆಹ್ಲಾದವು ನಮಗಿರುವುದು. ಈ ವಿಷಯವು ಅನೇಕಾನೇಕ ಮನೆಯವರನ್ನು ರಂಜಿಸಲಿರುವುದರಿಂದ, ಪತ್ರಿಕೆಗೆ ಸಾಧ್ಯವಾದಷ್ಟು ವಿಸ್ತಾರವಾದ ವಿತರಣೆಯನ್ನು ನೀಡಲು ನಾವು ಪ್ರಯತ್ನಿಸುವೆವು. ಅದು ಒಳಗೊಂಡಿರುವ ಮಾಹಿತಿಯ ಪ್ರಮುಖತೆಯ ದೃಷ್ಟಿಯಲ್ಲಿ, ಸರಬರಾಯಿಗಳು ಬರಿದಾಗುವ ತನಕ, ಎಚ್ಚರ! ಪತ್ರಿಕೆಯ ಈ ಸಂಚಿಕೆಯು, ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಪ್ರದರ್ಶಿಸಲ್ಪಡಬೇಕು.
3 ನಮ್ಮ ಗುರಿ—ಎಲ್ಲ ಪ್ರಚಾರಕರಿಂದ ಭಾಗವಹಿಸುವಿಕೆ: ಎಪ್ರಿಲ್ ತಿಂಗಳಿನಲ್ಲಿ ಸಾರುವ ಕೆಲಸದಲ್ಲಿ ಈ ದೇಶದಲ್ಲಿನ ಪ್ರತಿಯೊಬ್ಬ ಪ್ರಚಾರಕನು ಒಂದು ಪಾಲನ್ನು ಹೊಂದಿರಬಲ್ಲನಾದರೆ, ಅದು ನಿಜವಾಗಿಯೂ ಪ್ರೋತ್ಸಾಹದಾಯಕವಾಗಿರುವುದು. ಜ್ಞಾಪಕವನ್ನು ಇತ್ತೀಚೆಗೆ ಆಚರಿಸಿರುವ ಕಾರಣ, ಕ್ಷೇತ್ರ ಶುಶ್ರೂಷೆಯಲ್ಲಿ ನೇರವಾದೊಂದು “ಸ್ತೋತ್ರಯಜ್ಞವನ್ನು” ನೀಡುವ ಮೂಲಕ, ದೇವರ ಒಳ್ಳೆಯತನಕ್ಕಾಗಿ ನಮ್ಮ ಗಣ್ಯತೆಯನ್ನು ಖಂಡಿತವಾಗಿ ತೋರಿಸಲು ನಾವು ಬಯಸುವೆವು.—ಇಬ್ರಿ. 13:15.
4 ಎಪ್ರಿಲ್ ತಿಂಗಳಿನಲ್ಲಿ ಶುಶ್ರೂಷೆಯಲ್ಲಿ ಎಲ್ಲರೂ ಒಂದು ಹುರುಪಿನ ಪಾಲನ್ನು ಹೊಂದಸಾಧ್ಯವಾಗುವಂತೆ, ಸಭೆಯ ಪ್ರತಿಯೊಬ್ಬ ಸದಸ್ಯನ ಅಗತ್ಯಗಳನ್ನು ವಿವೇಚಿಸಲು ಒಂದು ಶ್ರದ್ಧಾಪೂರ್ವಕ ಪ್ರಯತ್ನವು ಮಾಡಲ್ಪಡಬೇಕು. (ರೋಮಾ. 15:1) ಪುಸ್ತಕ ಅಭ್ಯಾಸ ಚಾಲಕರು ತಮ್ಮ ಗುಂಪುಗಳಲ್ಲಿರುವವರ ಪರಿಸ್ಥಿತಿಗಳ ಕುರಿತು ಪೂರ್ಣ ಅರಿವುಳ್ಳವರಾಗಿರಬೇಕು ಮತ್ತು ಅಗತ್ಯವಿರುವಾಗ ಪ್ರಾಯೋಗಿಕ ಸಹಾಯವನ್ನು ನೀಡಬೇಕು. ಯಾರಾದರೊಬ್ಬರಿಗೆ ವಾಹನ ಸೌಕರ್ಯದ ಅಗತ್ಯವಿದೆಯೋ? ಅದನ್ನು ಯಾರು ಒದಗಿಸಬಲ್ಲರು? ಕೆಲವರು ಪುಕ್ಕಲು ಸ್ವಭಾವದವರು ಅಥವಾ ಸ್ವಪ್ರತಿಷ್ಠೆಯುಳ್ಳವರಾಗಿದ್ದಾರೋ? ಅವರೊಂದಿಗೆ ಹೆಚ್ಚು ಅನುಭವಸ್ಥರಾದ ಪ್ರಚಾರಕರು ಕೆಲಸಮಾಡಬಲ್ಲರೋ? ಹಾಸಿಗೆ ಹಿಡಿದಿರುವ ಅಥವಾ ಅಸ್ವಸ್ಥರಾಗಿರುವವರ ಕುರಿತಾಗಿ ಏನು? ಅವರು ಟೆಲಿಫೋನ್ ಸಾಕ್ಷಿ ಕಾರ್ಯದಲ್ಲಿ, ಪತ್ರವನ್ನು ಬರೆಯುವುದರಲ್ಲಿ, ಅಥವಾ ಇನ್ನಿತರ ಉತ್ಪಾದಕ ಚಟುವಟಿಕೆಯಲ್ಲಿ ಒಳಗೂಡಸಾಧ್ಯವಿದೆಯೋ?
5 ನಿಷ್ಕ್ರಿಯರಾಗಿ ಪರಿಣಮಿಸಿರುವ ಕೆಲವರು ಕ್ರಮವಾದ ಆತ್ಮಿಕ ಉತ್ತೇಜನವನ್ನು ಪಡೆಯುತ್ತಿದ್ದಾರೆ, ಮತ್ತು ಅವರು ಪುನಃ ಒಮ್ಮೆ ಸಾರುವ ಕಾರ್ಯದಲ್ಲಿ ಒಳಗೂಡಲು ಪ್ರೇರಿಸಲ್ಪಡಬಹುದು. ವಿಶೇಷವಾದ ಎಚ್ಚರ! ಪತ್ರಿಕೆಯೊಂದಿಗಿನ ಕಾರ್ಯಾಚರಣೆಯು, ಅವರಿಗೆ ಪುನರ್ಕ್ರಿಯಾಶೀಲರಾಗುವ ಒಂದು ಅತ್ಯುತ್ಕೃಷ್ಟ ಅವಕಾಶವನ್ನು ಒದಗಿಸುವುದು.
6 ಭಾಗವಹಿಸುವಂತೆ ಎಳೆಯರಿಗೆ ತರಬೇತಿ ನೀಡಿರಿ: ಯೆಹೋವನ ಸಾಕ್ಷಿಗಳ ಅನೇಕ ಮಕ್ಕಳು, ಅವರಿನ್ನೂ ಅಸ್ನಾತ ಪ್ರಚಾರಕರೋಪಾದಿ ಸೇವೆ ಸಲ್ಲಿಸುತ್ತಿಲ್ಲವಾದರೂ, ಅನೇಕ ವರ್ಷಗಳಿಂದ ಮನೆಯಿಂದ ಮನೆಯ ಸೇವೆಯಲ್ಲಿ ತಮ್ಮ ಹೆತ್ತವರನ್ನು ಜತೆಗೂಡಿದ್ದಾರೆ. ಅವರು ಸಾಕ್ಷಿ ಕಾರ್ಯದಲ್ಲಿ ತೊಡಗಲಿಕ್ಕಾಗಿರುವ ಸಮಯವು ಇದಾಗಿದೆಯೋ? ಅವರು ಹೃದಯದಿಂದ ಪ್ರೇರಿಸಲ್ಪಟ್ಟು ಮನೆಯಿಂದ ಮನೆಯ ಕೆಲಸದಲ್ಲಿ ಒಂದು ಅರ್ಥಭರಿತವಾದ ಪಾಲನ್ನು ಹೊಂದುವುದಕ್ಕೆ ಸಿದ್ಧರಾಗಿದ್ದಾರೋ? ಪ್ರತಿಯೊಬ್ಬರ ವಯಸ್ಸು ಮತ್ತು ಸಾಮರ್ಥ್ಯಕ್ಕೆ ಸರಿಹೊಂದುವ ಒಂದು ನಿರೂಪಣೆಯನ್ನು ತಯಾರಿಸುವಂತೆ, ತಮ್ಮ ಅರ್ಹ ಮಕ್ಕಳಿಗೆ ಸಹಾಯಮಾಡಲು ಕುಟುಂಬ ತಲೆಗಳು, ಕುಟುಂಬ ಬೈಬಲ್ ಅಭ್ಯಾಸದ ಅವಧಿಯಲ್ಲಿ ಸಮಯವನ್ನು ಉಪಯೋಗಿಸಬೇಕು. ಮನೆಯವನ ಆಸಕ್ತಿಯನ್ನು ಕೆರಳಿಸಲು ವಯಸ್ಕರು ಆಲೋಚನಾ ಪ್ರೇರಕ ಪ್ರಶ್ನೆಯೊಂದನ್ನು ಆರಿಸಿ, ನಂತರ ಪತ್ರಿಕೆಯಲ್ಲಿರುವ ಉತ್ತರವನ್ನು ಸೂಚಿಸಬಲ್ಲರು. ಎಳೆಯ ಮಕ್ಕಳು ಕೇವಲ ಕೆಲವೊಂದು ಮಾತುಗಳಲ್ಲಿ ಒಂದು ಪರಿಣಾಮಕಾರಿಯಾದ ಸಾಕ್ಷಿಯನ್ನು ನೀಡಬಲ್ಲರು. ಉದಾಹರಣೆಗಾಗಿ, ಅವರು “ಈ ತಿಂಗಳಿನಲ್ಲಿ ಲೋಕವ್ಯಾಪಕವಾಗಿ ನೀಡಲ್ಪಡುತ್ತಿರುವ ಒಂದು ವಿಶೇಷವಾದ ಪತ್ರಿಕೆಯನ್ನು ಓದಲು” ಮನೆಯವರನ್ನು ಪ್ರೋತ್ಸಾಹಿಸಬಲ್ಲರು. ನಿಮ್ಮ ಕುಟುಂಬದ ಸಿದ್ಧತೆಯ ಭಾಗವಾಗಿ, ಪರಿಚಿತ ಆಕ್ಷೇಪಣೆಗಳನ್ನು ಜಯಿಸಲಿಕ್ಕಾಗಿ ಸಲಹೆಗಳನ್ನು ಒಳಗೂಡಿಸಲು ಖಚಿತಪಡಿಸಿಕೊಳ್ಳಿರಿ. ರೀಸನಿಂಗ್ ಪುಸ್ತಕದಲ್ಲಿ ಅನೇಕ ಒಳ್ಳೆಯ ವಿಚಾರಗಳನ್ನು ನೀವು ಕಂಡುಕೊಳ್ಳುವಿರಿ. ಊಟದ ಸಮಯಗಳಲ್ಲಿ ಮತ್ತು ಇತರ ಸೂಕ್ತವಾದ ಸಂದರ್ಭಗಳಲ್ಲಿ, ಕ್ಷೇತ್ರ ಸೇವೆಯಲ್ಲಿ ಅವರಿಗಾದ ಅನುಭವಗಳನ್ನು ಹೇಳುವಂತೆ ಕುಟುಂಬ ಸದಸ್ಯರನ್ನು ಪ್ರೋತ್ಸಾಹಿಸಿರಿ.
7 ಅರ್ಹರಾದ ಬೈಬಲ್ ವಿದ್ಯಾರ್ಥಿಗಳು ಯೇಸು ಮಾಡಿದ ಕೆಲಸವನ್ನು ವಹಿಸಿಕೊಳ್ಳುತ್ತಾರೆ: ಯೇಸು ತನ್ನ ಬೋಧನೆಯನ್ನು ಸೈದ್ಧಾಂತಿಕ ವಿಷಯಗಳ ಮೇಲೆ ಉಪದೇಶವನ್ನು ನೀಡುವುದಕ್ಕೆ ಸೀಮಿತಗೊಳಿಸಲಿಲ್ಲ. ಆತನು ತನ್ನ ವಿದ್ಯಾರ್ಥಿಗಳನ್ನು ಶುಶ್ರೂಷೆಯಲ್ಲಿ ಜತೆಗೂಡಿದನು ಮತ್ತು ಸಾರುವ ವಿಧವನ್ನು ಅವರಿಗೆ ಕಲಿಸಿದನು. (ಲೂಕ 8:1; 10:1-11) ಇಂದು ಸನ್ನಿವೇಶವು ಏನಾಗಿದೆ? ಭಾರತದಲ್ಲಿ ಹದಿಮೂರು ಸಾವಿರಕ್ಕಿಂತಲೂ ಹೆಚ್ಚಿನ ಬೈಬಲ್ ಅಭ್ಯಾಸಗಳು ನಡೆಸಲ್ಪಡುತ್ತಿವೆ. ಈ ವಿದ್ಯಾರ್ಥಿಗಳಲ್ಲಿ ಅನೇಕ ಮಂದಿ ಸೂಕ್ತವಾದ ಪ್ರೋತ್ಸಾಹದೊಂದಿಗೆ ತಮ್ಮ ತರಬೇತಿಯಲ್ಲಿನ ಮುಂದಿನ ಹೆಜ್ಜೆಯನ್ನು ತೆಗೆದುಕೊಳ್ಳಸಾಧ್ಯವಿದೆ ಮತ್ತು ಎಪ್ರಿಲ್ ತಿಂಗಳಿನಲ್ಲಿ ಅಸ್ನಾತ ಪ್ರಚಾರಕರಾಗಿ ಸೇವೆ ಸಲ್ಲಿಸಲು ಅರ್ಹರಾಗಸಾಧ್ಯವಿದೆ ಎಂಬುದು ನಿಸ್ಸಂದೇಹ.
8 ನೀವು ಒಂದು ಬೈಬಲ್ ಅಭ್ಯಾಸವನ್ನು ನಡೆಸುತ್ತಿರುವುದಾದರೆ, ಈ ಪ್ರಶ್ನೆಗಳನ್ನು ಪರಿಗಣಿಸಿರಿ: ತನ್ನ ವಯಸ್ಸು ಮತ್ತು ಸಾಮರ್ಥ್ಯಕ್ಕೆ ಸುಸಂಗತವಾಗಿ, ವಿದ್ಯಾರ್ಥಿಯು ಪ್ರಗತಿಯನ್ನು ಮಾಡುತ್ತಿದ್ದಾನೋ? ಅವನು ತನ್ನ ನಂಬಿಕೆಯನ್ನು ಇತರರೊಂದಿಗೆ ಅನೌಪಚಾರಿಕವಾಗಿ ಹಂಚಿಕೊಳ್ಳಲು ಪ್ರಾರಂಭಿಸಿದ್ದಾನೋ? “ನೂತನಸ್ವಭಾವವನ್ನು” ಅವನು ಧರಿಸಿಕೊಳ್ಳುತ್ತಿದ್ದಾನೋ? (ಕೊಲೊ. 3:9) ನಮ್ಮ ಶುಶ್ರೂಷೆ ಪುಸ್ತಕದ 97ರಿಂದ 99ನೆಯ ಪುಟಗಳ ವರೆಗೆ ರೇಖಿಸಲ್ಪಟ್ಟಿರುವ, ಅಸ್ನಾತ ಪ್ರಚಾರಕರಿಗಾಗಿರುವ ಅರ್ಹತೆಗಳನ್ನು ಅವನು ತಲಪುತ್ತಾನೋ? ಅವನು ಅರ್ಹನಾಗಿದ್ದಾನೆಂದು ನೀವು ನಂಬುವುದಾದರೆ, ಆ ವಿಷಯವನ್ನು ಅವನೊಂದಿಗೆ ಏಕೆ ಚರ್ಚಿಸಬಾರದು? ಕೆಲವು ವಿದ್ಯಾರ್ಥಿಗಳಿಗೆ ಕೆಲಸದಲ್ಲಿ ಪಾಲುತೆಗೆದುಕೊಳ್ಳಲು ಕೇವಲ ಒಂದು ನೇರವಾದ ಆಮಂತ್ರಣದ ಅಗತ್ಯವಿರುತ್ತದೆ. ವಿದ್ಯಾರ್ಥಿಯು ಸಿದ್ಧಮನಸ್ಕನಾಗಿರುವುದಾದರೆ, ಪ್ರಥಮವಾಗಿ ಅಧ್ಯಕ್ಷ ಮೇಲ್ವಿಚಾರಕನು, ಸಾಮಾನ್ಯವಾದ ವಿಧದಲ್ಲಿ ಹಿರಿಯರಲ್ಲಿ ಇಬ್ಬರೊಂದಿಗೆ ಒಂದು ಚರ್ಚೆಗಾಗಿ ಏರ್ಪಡಿಸುವ ಅಗತ್ಯವಿದೆ ಎಂಬುದು ಖಂಡಿತ. ಮತ್ತೊಂದು ಕಡೆಯಲ್ಲಿ, ಯಾವುದೋ ಒಂದು ವಿಷಯವು ವಿದ್ಯಾರ್ಥಿಯನ್ನು ತಡೆಹಿಡಿಯುತ್ತಿರಬಹುದು. ಬಹುಶಃ ಬೈಬಲ್ ಅಭ್ಯಾಸಕ್ಕೆ ಹಿರಿಯರಲ್ಲಿ ಒಬ್ಬನು ನಿಮ್ಮನ್ನು ಜತೆಗೂಡಬಹುದು ಮತ್ತು ಸತ್ಯದೆಡೆಗೆ ತನಗಿರುವ ಭಾವನೆಗಳ ಕುರಿತಾಗಿ ವಿದ್ಯಾರ್ಥಿಯು ಮಾತನಾಡುವಂತೆ ಮಾಡಬಹುದು. ವಿದ್ಯಾರ್ಥಿಗೆ ಏನನ್ನು ಹೇಳಲಿಕ್ಕಿದೆಯೋ ಅದನ್ನು ಆಲಿಸಿದ ಅನಂತರ, ಹಿರಿಯನು ಶಾಸ್ತ್ರೀಯ ಸಹಾಯದೊಂದಿಗೆ, ಪ್ರಾಯೋಗಿಕ ಸಲಹೆಗಳನ್ನು ಒದಗಿಸಲು ಶಕ್ತನಾಗಿರಬಹುದು.
9 ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲಿಕ್ಕೆ ‘ಸಮಯವನ್ನು ಖರೀದಿಸಿರಿ’: ಪ್ರತಿ ವರ್ಷ ಜ್ಞಾಪಕದ ಕಾಲದಲ್ಲಿ, ಪ್ರಾಯಶ್ಚಿತ್ತಕ್ಕಾಗಿರುವ ಕೃತಜ್ಞತೆಯು ಸಾವಿರಾರು ಜನರನ್ನು ಆಕ್ಸಿಲಿಯರಿ ಪಯನೀಯರರಾಗಿ ಸೇವೆಮಾಡಲಿಕ್ಕೆ ಸಮಯವನ್ನು ‘ಖರೀದಿಸುವಂತೆ’ ಪ್ರಚೋದಿಸುತ್ತದೆ. (ಎಫೆ. 5:15-17, NW) ಕೆಲವು ತ್ಯಾಗಗಳು ಅಗತ್ಯವಿದ್ದರೂ, ಪ್ರತಿಫಲಗಳು ಮಹತ್ತರವಾಗಿವೆ. ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲು ಪ್ರಶಂಸನೀಯ ಸಂಖ್ಯೆಯ ಯುವಕರು ಶಾಲೆಯಿಂದ ಒದಗುವ ರಜೆಯ ಪ್ರಯೋಜನವನ್ನು ತೆಗೆದುಕೊಳ್ಳುತ್ತಾರೆ. ಯಾರು ಪೂರ್ಣ ಸಮಯ ಕೆಲಸವನ್ನು ಮಾಡುತ್ತಾರೋ ಆ ವಯಸ್ಕರು, ಈ ಚಟುವಟಿಕೆಯಲ್ಲಿ ಸಾಯಂಕಾಲಗಳನ್ನು ಮತ್ತು ವಾರಾಂತ್ಯಗಳನ್ನು ಪೂರ್ಣ ಪ್ರಯೋಜನಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ಹೀಗೆ ಇಡೀ ಕುಟುಂಬಗಳು ಒಡಗೂಡಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲು ಅವಕಾಶವನ್ನು ತೆಗೆದುಕೊಂಡಿವೆ! ಕೆಲವು ಸಭೆಗಳಲ್ಲಿ ಹಿರಿಯರಲ್ಲಿ ಮತ್ತು ಶುಶ್ರೂಷಾ ಸೇವಕರಲ್ಲಿ ಹೆಚ್ಚಿನವರು ಮತ್ತು ಅವರ ಪತ್ನಿಯರು ಆಕ್ಸಿಲಿಯರಿ ಪಯನೀಯರರಾಗಿ ನಮೂದಿಸಿಕೊಂಡಿದ್ದಾರೆ. ಅವರ ಹುರುಪಿನ ಮಾದರಿಯಿಂದ ಪ್ರಚೋದಿಸಲ್ಪಟ್ಟು, ಇತರರು ಅವರ ಮಾದರಿಯನ್ನು ನಕಲುಮಾಡಿದ್ದಾರೆ; ಹೀಗೆ ಎಪ್ರಿಲ್ ತಿಂಗಳಲ್ಲಿ ಸಭೆಯ ಹೆಚ್ಚಿನ ಪ್ರತಿಶತ ಮಂದಿ ಆಕ್ಸಿಲಿಯರಿ ಪಯನೀಯರರಾಗಿ ಸೇವೆಸಲ್ಲಿಸುತ್ತಾರೆ.
10 ನೀವು ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲು ಶಕ್ತರಾಗಿರಲಿ ಅಥವಾ ಇಲ್ಲದಿರಲಿ, ಎಪ್ರಿಲ್ ತಿಂಗಳಿನಲ್ಲಿ ಕ್ಷೇತ್ರದಲ್ಲಿ ನಿಮ್ಮ ಸೇವೆಯನ್ನು ವೃದ್ಧಿಗೊಳಿಸಲಿಕ್ಕಾಗಿರುವ ಮಾರ್ಗಗಳಿಗಾಗಿ ಹುಡುಕಿರಿ. ಸ್ವತಃ ನಿಮಗಾಗಿ—ಎಟುಕಿಸಿಕೊಳ್ಳಲು ಸ್ವಲ್ಪ ಪ್ರಯತ್ನವನ್ನು ಕೇಳಿಕೊಳ್ಳುವ, ಆದರೆ ಪ್ರಾಪ್ಯಸಾಧ್ಯವಾಗಿರುವ—ಒಂದು ವೈಯಕ್ತಿಕ ಗುರಿಯನ್ನು ಇಡಿರಿ. ನಿಮ್ಮ ವೈಯಕ್ತಿಕ ಸಂದರ್ಭಗಳಿಗನುಸಾರ, ಯೆಹೋವನ ಸೇವೆಯಲ್ಲಿ “ವ್ಯಯಿಸುವ ಮತ್ತು ಸಂಪೂರ್ಣವಾಗಿ ವ್ಯಯಿಸಿಕೊಂಡಿದ್ದೇನೆ” ಎಂಬುದಕ್ಕೆ ನಿಮಗಿರುವ ಅಭಿಲಾಷೆಯು ಆತನ ಆಶೀರ್ವಾದವನ್ನು ಹೊಂದುವುದು.—2 ಕೊರಿಂ. 12:15, NW.
11 ಕ್ಷೇತ್ರ ಸೇವೆಗಾಗಿ ಕೂಟಗಳು: ಶುಶ್ರೂಷೆಯಲ್ಲಿ ಬೇಗನೆ ಪ್ರಾರಂಭಿಸುವುದಕ್ಕಾಗಿ ಅನುಮತಿಸುವ ಒಂದು ಸಮಯದಲ್ಲಿ, ಪ್ರತಿದಿನ ಎಚ್ಚರ! ಪತ್ರಿಕೆಯ ಕಾರ್ಯಾಚರಣೆಯ ಕ್ಷೇತ್ರ ಸೇವೆಗಾಗಿ ಕೂಟಗಳು ಏರ್ಪಡಿಸಲ್ಪಡಬೇಕು. ಸಂಜೆ ಸಾಕ್ಷಿಗಾಗಿಯೂ ಒದಗಿಸುವಿಕೆಯು ಮಾಡಲ್ಪಡಬೇಕು. ಹೆಚ್ಚಿನ ಪ್ರಚಾರಕರು ವಾರಾಂತ್ಯಗಳಲ್ಲಿ ಕ್ಷೇತ್ರ ಸೇವೆಯಲ್ಲಿ ಒಳಗೂಡುತ್ತಿರುವರು, ಆದುದರಿಂದ ಸಭೆಗಳು ಎಚ್ಚರ!ದ ವಿಶೇಷವಾದ ವಿತರಣೆಯ ಅವಧಿಗಾಗಿ, ಶನಿವಾರಗಳಂದು ಬೆಳಗ್ಗೆ ಮತ್ತು ಮಧ್ಯಾಹ್ನ ಎರಡೂ ಸಮಯದಲ್ಲಿ, ಕ್ಷೇತ್ರ ಸೇವೆಗಾಗಿ ಕೂಟಗಳನ್ನು ನಿರ್ಧರಿಸಬೇಕು.
12 ಕ್ಷೇತ್ರ ಸೇವೆಗಾಗಿ ಕೂಟಗಳನ್ನು ನಡೆಸುವವರು, ಕೈಯಲ್ಲಿ ಹೇರಳವಾದ ಟೆರಿಟೊರಿಯಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇತ್ತೀಚೆಗೆ ಕೆಲಸಮಾಡಲ್ಪಟ್ಟಿರದ ಟೆರಿಟೊರಿಯು ಮೊದಲಾಗಿ ಆವರಿಸಲ್ಪಡಬೇಕು. ಹಾಗಿದ್ದರೂ, ಸೊಸೈಟಿಯ ಮೇಲ್ವಿಚಾರಣೆಯ ಕೆಳಗಿರುವ ಅನೇಮಿತ ಟೆರಿಟೊರಿಯು, ಸೊಸೈಟಿಯ ಅನುಮತಿಯಿಲ್ಲದೆ ಕೆಲಸಮಾಡಲ್ಪಡಬಾರದು. ಇತ್ತೀಚೆಗೆ ಆವರಿಸಲ್ಪಡದ ಒಂದು ಅಥವಾ ಹೆಚ್ಚು ವೈಯಕ್ತಿಕ ಟೆರಿಟೊರಿಗಳನ್ನು ನೀವು ಪಡೆದಿದ್ದೀರೋ? ಕಾರ್ಯಾಚರಣೆಯ ಅವಧಿಯಲ್ಲಿ ಅವುಗಳಲ್ಲಿ ಕೆಲಸಮಾಡಲು ಸಹಾಯವು ನಿಮಗೆ ಬೇಕಾದಲ್ಲಿ, ಸೇವಾ ಮೇಲ್ವಿಚಾರಕನೊಂದಿಗೆ ಅಥವಾ ಟೆರಿಟೊರಿಯ ಕಾಳಜಿವಹಿಸುತ್ತಿರುವ ಸಹೋದರನೊಂದಿಗೆ ಮಾತಾಡಿರಿ ಮತ್ತು ಸ್ವಲ್ಪ ನೆರವನ್ನು ನೀವು ಪಡೆಯುವಂತೆ ಏರ್ಪಾಡನ್ನು ಮಾಡಲು ಅವರು ಸಂತೋಷಿತರಾಗಿರುವರು.
13 ನೀವು ಎಷ್ಟು ಪತ್ರಿಕೆಗಳನ್ನು ನೀಡುವಿರಿ? ಆ ಪ್ರಶ್ನೆಯು ಪ್ರತಿಯೊಬ್ಬ ವ್ಯಕ್ತಿಯು ಉತ್ತರಿಸುವುದಕ್ಕಾಗಿದೆ. ಕಾರ್ಯಾಚರಣೆಯ ಅವಧಿಯಲ್ಲಿ ಎಷ್ಟು ಪತ್ರಿಕೆಗಳನ್ನು ನೀವು ನೀಡಬಲ್ಲಿರಿ ಎಂಬುದನ್ನು ನಿರ್ಧರಿಸುವ ವಿಷಯದಲ್ಲಿ, ನೀವು ಕೆಲಸಮಾಡಲಿರುವ ಟೆರಿಟೊರಿಯ ವಿಧವನ್ನು, ನಿಮ್ಮ ವಯಸ್ಸು, ನಿಮ್ಮ ಆರೋಗ್ಯ, ಕೆಲಸಕ್ಕೆ ನೀವು ಮೀಸಲಾಗಿರಿಸಬಲ್ಲ ಸಮಯ, ಮತ್ತು ಇತರ ಅಂಶಗಳನ್ನು ಪರಿಗಣಿಸಿರಿ. ಹಾಗಿದ್ದರೂ, ಜನವರಿ 1, 1994ರ ಕಾವಲಿನಬುರುಜು ಸಂಚಿಕೆಯಲ್ಲಿ ಕೊಡಲ್ಪಟ್ಟಿದ್ದ ಮರುಜ್ಞಾಪನವನ್ನು ಗಮನಿಸಿರಿ: “ಒಂದು ಸಲಹೆಯಾಗಿ, ಅವರ ಪರಿಸ್ಥಿತಿಗಳ ಮೇಲೆ ಆಧಾರಿಸಿ, ತಿಂಗಳಿಗೆ 10 ಪತ್ರಿಕೆಗಳು ಎನ್ನುವ ಗುರಿಯನ್ನು ಪ್ರಚಾರಕರು ಇಡಬಹುದು ಮತ್ತು ಪಯನೀಯರರು 90ಕ್ಕಾಗಿ ಪ್ರಯತ್ನಿಸಬಹುದು.” ನಿಮ್ಮ ವಿದ್ಯಮಾನದಲ್ಲಿ ಒಂದು ತದ್ರೀತಿಯ ಗುರಿಯು ವಾಸ್ತವವಾಗಿರುವುದೋ?
14 ಹಿರಿಯರೇ—ಜಾಗರೂಕ ಯೋಜನೆಯ ಅಗತ್ಯವಿದೆ: ಎಪ್ರಿಲ್ ತಿಂಗಳಿನ ಕಾರ್ಯಾಚರಣೆಗಾಗಿರುವ ಸ್ಥಳಿಕ ಏರ್ಪಾಡುಗಳು ಹಿರಿಯರ ಮಂಡಳಿಯಿಂದ ಮೇಲ್ವಿಚಾರಿಸಲ್ಪಡುವವು. ಎಚ್ಚರ!ದ ವಿಶೇಷ ಸಂಚಿಕೆಯೊಂದಿಗೆ ಸಾಧ್ಯವಾದಷ್ಟು ಹೆಚ್ಚಿನ ಸಭಾ ಟೆರಿಟೊರಿಯು ಕೆಲಸಮಾಡಲ್ಪಡುವುದು ಎಂಬುದನ್ನು ಅವರು ದೃಢಪಡಿಸಿಕೊಳ್ಳಬೇಕು. ಸಭಾ ಟೆರಿಟೊರಿಯೊಳಗಿರುವ ವ್ಯಾಪಾರ ಕ್ಷೇತ್ರಗಳಲ್ಲಿ ಕೆಲಸಮಾಡುವುದಕ್ಕೆ ಜಾಗರೂಕ ಗಮನವು ನೀಡಲ್ಪಡಬೇಕು. ಆ ಕ್ಷೇತ್ರದಲ್ಲಿ ಕೆಲಸಮಾಡುವವರು ಚೆನ್ನಾಗಿ ಸಿದ್ಧರಾದವರೂ ನೀಟಾಗಿ ಉಡುಪು ಧರಿಸಿದವರೂ ಆಗಿರಬೇಕು. ವಿಸ್ತಾರವಾದೊಂದು ನಿರೂಪಣೆಯ ಅಗತ್ಯವಿರುವುದಿಲ್ಲ. ಒಬ್ಬ ವ್ಯಾಪಾರಸ್ಥನನ್ನು ಅಥವಾ ಅಂಗಡಿಯವನನ್ನು ಸಮೀಪಿಸುವಾಗ, ಅನೇಕ ವೇಳೆ ನೀವು ವ್ಯಾಪಾರೀ ಜನರನ್ನು ಮನೆಯಲ್ಲಿ ಸಂಧಿಸುವುದಿಲ್ಲವೆಂಬುದನ್ನು, ಆದುದರಿಂದ ಅವನಿಗೆ ಖಂಡಿತವಾಗಿಯೂ ಆಸಕ್ತಿಕರವಾಗಿರುವ ಒಂದು ಲೇಖನವನ್ನು ನೀಡಲಿಕ್ಕಾಗಿ ನೀವು ಅವನ ಅಂಗಡಿ ಅಥವಾ ವ್ಯಾಪಾರದ ಸ್ಥಳದಲ್ಲಿ ಭೇಟಿ ನೀಡುತ್ತಿದ್ದೀರೆಂಬುದನ್ನು ಹೇಳಸಾಧ್ಯವಿದೆ. ಅನಂತರ ನೀವು ಪತ್ರಿಕೆಯಲ್ಲಿನ ಒಂದು ನಿರ್ದಿಷ್ಟ ಅಂಶವನ್ನು ಸಂಕ್ಷಿಪ್ತವಾಗಿ ಹಂಚಿಕೊಳ್ಳಬಲ್ಲಿರಿ. ಪತ್ರಿಕೆಗಳೊಂದಿಗೆ ರಸ್ತೆ ಸಾಕ್ಷಿ ಕಾರ್ಯವೂ ಸಭಾ ಟೆರಿಟೊರಿಯೊಳಗೆ ಯೋಗ್ಯವಾಗಿ ಸಂಘಟಿಸಲ್ಪಡಬೇಕು. ರಸ್ತೆ ಸಾಕ್ಷಿ ಕಾರ್ಯದಲ್ಲಿ ಒಳಗೊಳ್ಳುವ ಅತ್ಯಂತ ಪರಿಣಾಮಕಾರಿ ವಿಧವು, ಹಾದುಹೋಗುವವರು ನಿಮ್ಮನ್ನು ಸಮೀಪಿಸುವಂತೆ ಕಾಯುವ ಬದಲು, ಮೊದಲ ಹೆಜ್ಜೆಯನ್ನು ತಗೆದುಕೊಂಡು ಅವರನ್ನು ಸಮೀಪಿಸುವುದೇ ಆಗಿದೆ. ನೀವು ಸಾರ್ವಜನಿಕರಿಂದ ಗಮನಿಸಲ್ಪಡುವುದರಿಂದ, ಒಂದು ಗೌರವಾನಿತ್ವ ತೋರಿಕೆಯನ್ನು ಹೊಂದಿರುವುದರ ಅರಿವು ನಿಮಗಿರಬೇಕು. ಕಾರ್ಯಾಚರಣೆಯ ಅವಧಿಯಲ್ಲಿ ನಿಮ್ಮ ಟೆರಿಟೊರಿಯಲ್ಲಿ ಕೆಲಸಮಾಡಲ್ಪಡಸಾಧ್ಯವಿರುವ—ಸೂಕ್ತವಾದಲ್ಲಿ, ವಿಮಾನ ನಿಲ್ದಾಣಗಳು, ಬಸ್ ನಿಲ್ದಾಣಗಳು, ಆಸ್ಪತ್ರೆಗಳು, ಮತ್ತು ರೈಲು ನಿಲ್ದಾಣಗಳ ಹೊರಗೆ ಅಥವಾ ಮಾರುಕಟ್ಟೆಗಳು, ಪಾರ್ಕಿಂಗ್ ಸ್ಥಳಗಳು, ಅಥವಾ ಉದ್ಯಾನವನಗಳಂಥ—ಇತರ ಸ್ಥಳಗಳಿರಬಹುದು. ನಿಮ್ಮ ಸಭಾ ಟೆರಿಟೊರಿಯ ಈ ಕ್ಷೇತ್ರಗಳಲ್ಲಿ ಸಾಕ್ಷಿ ನೀಡುವಿಕೆಗಾಗಿ ಯಾವ ತಕ್ಕದ್ದಾದ ಏರ್ಪಾಡುಗಳನ್ನು ಮಾಡಸಾಧ್ಯವಿದೆ ಎಂಬುದನ್ನು ಹಿರಿಯರ ಮಂಡಳಿಯು ನಿರ್ಧರಿಸಬೇಕಾಗಿದೆ.
15 ಯೆಹೋವನು ದಣಿಯದ ಕೆಲಸಗಾರನಾಗಿದ್ದಾನೆ. (ಯೋಹಾ. 5:17) ಆತನು ಸ್ವರ್ಗ ಮತ್ತು ಭೂಮಿಯನ್ನು, ಹಾಗೂ ಸಸ್ಯಗಳನ್ನು ಮತ್ತು ಪ್ರಾಣಿಗಳನ್ನು ಸೃಷ್ಟಿಸಿದನು; ಆದರೆ ಮನುಷ್ಯನನ್ನು, ತನ್ನ ಪರಾಕಾಷ್ಠೆಯ ಮಹತ್ಸಾಧನೆಯನ್ನು ಸೃಷ್ಟಿಸುವ ತನಕ ಆತನು ಕೆಲಸಮಾಡುತ್ತಾ ಇದ್ದನು. ನಮಗೆ ಜೀವವಿದೆ ಎಂಬ ವಾಸ್ತವಾಂಶವು, ಕೆಲಸಮಾಡಲು ದೇವರ ಸಿದ್ಧಮನಸ್ಸಿನ ಒಂದು ನೇರವಾದ ಫಲಿತಾಂಶವಾಗಿದೆ. “ದೇವರನ್ನು ಅನುಕರಿಸು”ವವರೋಪಾದಿ ಆತನಿಗಾಗಿರುವ ನಮ್ಮ ಪ್ರೀತಿಯಿಂದ “ಸತ್ಕ್ರಿಯೆಗಳಿಗಾಗಿ ಹುರುಪುಳ್ಳ”ವರಾಗಿ ಇರುವಂತೆ ನಾವು ಪ್ರೇರಿಸಲ್ಪಡಬೇಕು. (ಎಫೆ. 5:1, NW; ತೀತ 2:14) ನಮ್ಮ ಅತ್ಯುತ್ತಮ ಪ್ರಯತ್ನವನ್ನು ಪಡೆದುಕೊಳ್ಳಲು ಯೆಹೋವನು ಯೋಗ್ಯನಾಗಿರುವುದರಿಂದ, ಮತ್ತು ಫಲಿತಾಂಶಗಳನ್ನು ಪಡೆದುಕೊಳ್ಳುವ ಅಭಿಲಾಷೆಯು ಹುರುಪುಳ್ಳವನಾಗಿರುವವನೊಬ್ಬನ ವಿಶಿಷ್ಟ ಲಕ್ಷಣವಾಗಿರುವುದರಿಂದ, ನಾವು ಶುಶ್ರೂಷೆಯಲ್ಲಿ ಗುಣಮಟ್ಟದ ಕೆಲಸವನ್ನು ಮಾಡುವುದರಲ್ಲಿ ಆಸಕ್ತರಾಗಿರಬೇಕು. ಆತನಿಗಾಗಿ ನಾವು ಮಾಡುವ ಯಾವುದೇ ತ್ಯಾಗವನ್ನು ಯೆಹೋವನು ಮೆಚ್ಚುತ್ತಾನೆ, ಮತ್ತು ನಮ್ಮ ಕೆಲಸವು ಎಂದೂ ವ್ಯರ್ಥವಾಗಿರುವುದಿಲ್ಲ ಎಂಬುದು ನಿಶ್ಚಯ. (1 ಕೊರಿಂ. 15:58) ಆದುದರಿಂದ, ಕೃತಜ್ಞತೆಯುಳ್ಳ ಹೃದಯಗಳಿಂದ, ಯೆಹೋವನ ಮೆಚ್ಚುಗೆ ಮತ್ತು ಆಶೀರ್ವಾದ ಹಾಗೂ ಅದರ ಪುಷ್ಕಳವಾದ ಯಶಸ್ಸಿನ ಕುರಿತಾಗಿ ಭರವಸೆಯುಳ್ಳವರಾಗಿದ್ದು, ನಾವು ಎಪ್ರಿಲ್ ತಿಂಗಳಿನಲ್ಲಿ ಹುರುಪಿನ ಚಟುವಟಿಕೆಗೆ ನಮ್ಮನ್ನು ಪ್ರಯೋಗಿಸಿಕೊಳ್ಳೋಣ!