‘ನಿಷ್ಕೃಷ್ಟ ಜ್ಞಾನದಲ್ಲಿ ಏಳಿಗೆ ಹೊಂದುತ್ತಾ ಇರ್ರಿ’
ದೇವರ ಕುರಿತಾದ ನಿಷ್ಕೃಷ್ಟ ಜ್ಞಾನವು ನಿತ್ಯಜೀವಕ್ಕೆ ನಡೆಸುತ್ತದೆ. (ಯೋಹಾ. 17:3) ಯೆಹೋವನ ಕುರಿತಾದ ನಿಷ್ಕೃಷ್ಟ ಜ್ಞಾನದಲ್ಲಿ ಏಳಿಗೆ ಹೊಂದಲು ನಮಗೆ ಸಾಧ್ಯವಾದುದೆಲ್ಲವನ್ನೂ ನಾವು ಮಾಡುತ್ತಿರಬೇಕು. (ಕೊಲೊ. 1:9, 10) ಎಪ್ರಿಲ್ 29ರಿಂದಾರಂಭಿಸುತ್ತಾ, ನಾವು ಸಭಾ ಪುಸ್ತಕ ಅಭ್ಯಾಸದಲ್ಲಿ ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವನ್ನು ಅಭ್ಯಾಸಿಸುವೆವು. ದೇವರ ವಾಕ್ಯದ ಕುರಿತಾದ ನಮ್ಮ ಸ್ವಂತ ತಿಳಿವಳಿಕೆಯು ಉತ್ಪ್ರೇಕ್ಷಿಸಲ್ಪಡುವುದು ಮಾತ್ರವಲ್ಲ, ಅದನ್ನು ಇತರರಿಗೆ ಕಲಿಸಲು ಸಹ ನಾವು ಉತ್ತಮ ರೀತಿಯಲ್ಲಿ ಸಜ್ಜಿತರಾಗಿರುವೆವು. ನೀವು ಪೂರ್ವ ತಯಾರಿಮಾಡಿ, ಪ್ರತಿ ವಾರವೂ ಹಾಜರಾಗಿ, ಭಾಗವಹಿಸಿ, ಆ ಮಾಹಿತಿಯನ್ನು ಶುಶ್ರೂಷೆಯಲ್ಲಿ ಉಪಯೋಗಿಸುವುದಾದರೆ, ನೀವು ಮತ್ತು ನಿಮ್ಮ ಕುಟುಂಬವು ಆಶೀರ್ವದಿಸಲ್ಪಡುವುದು.