ಕ್ರಮದ ಪಯನೀಯರ್ ಸೇವೆಯಲ್ಲಿ ಅಧಿಕ ಸಹೋದರರ ಅಗತ್ಯವಿದೆ
1 ‘ಕರ್ತನ ಕೆಲಸದಲ್ಲಿ ಮಾಡಲು ಯಾವಾಗಲೂ ಹೇರಳವಾಗಿ ಪಡೆದಿರು’ವಂತೆ ಪೌಲನು ನಮ್ಮನ್ನು ಪ್ರಚೋದಿಸಿದನು. (1 ಕೊರಿಂ. 15:58, NW) ಅನೇಕರಿಗಾದರೋ, ಇದು ಕ್ರಮದ ಪಯನೀಯರ್ ಸೇವೆಯನ್ನು ಪ್ರವೇಶಿಸುವುದನ್ನು ಅರ್ಥೈಸುತ್ತದೆ. ಪ್ರತಿ ವರ್ಷ, ಭಾರತದಲ್ಲಿ ಕ್ರಮದ ಪಯನೀಯರ್ ಶ್ರೇಣಿಗೆ ಸುಮಾರು 100 ಜನರು ಕೂಡಿಸಲ್ಪಡುತ್ತಾರೆ!
2 ಪ್ರಸ್ತುತವಾಗಿ, ಈ ದೇಶದಲ್ಲಿ ಕ್ರಮದ ಪಯನೀಯರರಾಗಿ ಸೇವೆಸಲ್ಲಿಸುತ್ತಿರುವ ಮೂರನೆಯ ಎರಡು ಭಾಗದಷ್ಟು ಜನರು ಸಹೋದರಿಯರಾಗಿದ್ದಾರೆ. (ಕೀರ್ತ. 68:11) ಪೂರ್ಣ ಸಮಯದ ಸೇವಕರ ಶ್ರೇಣಿಗೆ ಹೆಚ್ಚಿನ ಸಹೋದರರು ಸೇರಿಕೊಳ್ಳುವುದಾದರೆ ಸಭೆಗೆ ಎಂಥ ಒಂದು ಹರ್ಷವಾಗಿರುವುದು! (ಕೀರ್ತ. 110:3) ಅನೇಕ ಸಹೋದರರು ಮುಖ್ಯವಾದ ಐಹಿಕ ಮತ್ತು ಕುಟುಂಬ ಹಂಗುಗಳಿಗಾಗಿ ಕಾಳಜಿ ವಹಿಸಬೇಕೆಂಬುದು ಗ್ರಾಹ್ಯವೇ. ಇತರರು ಸಭೆಯ ಆತ್ಮಿಕ ಅಗತ್ಯಗಳಿಗಾಗಿ ಕಾಳಜಿ ವಹಿಸಲು ಸಹ ಕಠಿಣವಾಗಿ ಪರಿಶ್ರಮಿಸುತ್ತಾರೆ. ರಾಜ್ಯದ ಪರವಾಗಿ ಸ್ವತಃ ಶ್ರಮವಹಿಸುತ್ತಿರುವ ಈ ಪುರುಷರನ್ನು ನಾವು ಗಣ್ಯಮಾಡುತ್ತೇವೆ.—1 ತಿಮೊ. 4:10.
3 ಆದರೂ, ನಿಮ್ಮಲ್ಲಿ ಹೆಚ್ಚಿನ ಸಹೋದರರು ಕ್ರಮದ ಪಯನೀಯರ್ ಸೇವೆಯನ್ನು ಪ್ರವೇಶಿಸಸಾಧ್ಯವಿದೆಯೋ? ನಿಮ್ಮ ಪತ್ನಿಯು ಪಯನೀಯರ್ ಸೇವೆಯನ್ನು ಮಾಡುತ್ತಿರುವಲ್ಲಿ, ಆಕೆಯನ್ನು ನೀವು ಜೊತೆಗೂಡಬಲ್ಲಿರೋ? ನೀವು ನಿವೃತ್ತರಾಗಿರುವಲ್ಲಿ, ಪೂರ್ಣ ಸಮಯದ ಶುಶ್ರೂಷೆಯಲ್ಲಿ ನಿಮ್ಮ ಸಮಯವನ್ನು ಕಳೆಯುವುದಕ್ಕಿಂತಲೂ ಹೆಚ್ಚು ಸಂತೃಪ್ತಕರವಾದ ಯಾವ ವಿಧವೂ ಇಲ್ಲವೆಂಬುದನ್ನು ನೀವು ಸಮ್ಮತಿಸುವುದಿಲ್ಲವೋ? ನೀವು ಈಗತಾನೇ ಶಾಲೆಯನ್ನು ಮುಗಿಸುತ್ತಿರುವಲ್ಲಿ, ಸೇವೆಯ ಹೆಚ್ಚಿನ ಸುಯೋಗಗಳಿಗೆ ಒಂದು ಅಡಿಗಲ್ಲಿನೋಪಾದಿ ಕ್ರಮದ ಪಯನೀಯರ್ ಸೇವೆಯನ್ನು ಪ್ರವೇಶಿಸುವುದರ ಕುರಿತಾಗಿ ಮನಃಪೂರ್ವಕವೂ ಪ್ರಾರ್ಥನಾಪೂರ್ವಕವೂ ಆದ ಚಿಂತನವನ್ನು ನೀವು ನೀಡಿದ್ದೀರೋ?—ಎಫೆ. 5:15-17.
4 ಒಬ್ಬ ಸಹೋದರನು, ತಾನೊಬ್ಬ ಕ್ರಮದ ಪಯನೀಯರನೋಪಾದಿ ಸೇವೆಮಾಡಸಾಧ್ಯವಾಗುವಂತೆ, ತನ್ನ ಏಳಿಗೆ ಹೊಂದುತ್ತಿರುವ ವ್ಯಾಪಾರವನ್ನು ವಿಕ್ರಯಿಸಿ, ಅಂಶಕಾಲಿಕ ಕೆಲಸವನ್ನು ತೆಗೆದುಕೊಂಡನು. ಅವನ ಉತ್ತಮವಾದ ಮುಂದಾಳುತ್ವದಿಂದ, ಅವನ ನಾಲ್ಕು ಮಕ್ಕಳಲ್ಲಿ ಮೂವರು, ಅವರು ಶಾಲಾಭ್ಯಾಸವನ್ನು ಮುಗಿಸಿದ ಕೂಡಲೇ ಕ್ರಮದ ಪಯನೀಯರರಾದರು. ನಾಲ್ಕನೆಯವನು ಅವರನ್ನು ಜೊತೆಗೂಡಲು ಅತ್ಯುತ್ಸಾಹವುಳ್ಳವನಾಗಿದ್ದನು. ಈ ಸಹೋದರನೂ ಅವನ ಕುಟುಂಬದವರೂ ಪುಷ್ಕಳವಾಗಿ ಆಶೀರ್ವದಿಸಲ್ಪಟ್ಟಿದ್ದಾರೆ.
5 ಒಂದು ದೊಡ್ಡ ದ್ವಾರವು ತೆರೆದಿದೆ: ಕ್ರಮದ ಪಯನೀಯರ್ ಸೇವೆಯು, “ಚಟುವಟಿಕೆಗೆ ನಡೆಸುವ ಒಂದು ದೊಡ್ಡ ದ್ವಾರ”ವನ್ನು ತೆರೆಯಬಲ್ಲದು. (1 ಕೊರಿಂ. 16:9, NW) ಕ್ರಮದ ಪಯನೀಯರರಾಗಿರುವ ಸಹೋದರರು ಸಭೆಯಲ್ಲಿ ವ್ಯಾಪಕವಾಗಿ ಉಪಯೋಗಿಸಲ್ಪಡಬಹುದು. ಹುರುಪುಳ್ಳ ಕ್ಷೇತ್ರ ಚಟುವಟಿಕೆಯು, ಅವರ ಆತ್ಮೋನ್ನತಿಗೆ ಹೆಚ್ಚನ್ನು ಕೂಡಿಸುತ್ತದೆ ಮತ್ತು ಅವರ ದೇವಪ್ರಭುತ್ವ ಪ್ರಗತಿಗೆ ನೆರವನ್ನೀಯುತ್ತದೆ. ಕ್ರಮದ ಪಯನೀಯರ್ ಸೇವೆಯು ಹೆಚ್ಚಿನ ಸುಯೋಗಗಳಿಗೆ ಮಾರ್ಗವನ್ನು ತೆರೆಯಬಲ್ಲದು. ಪಯನೀಯರ್ ಸೇವೆಯ ಪ್ರಥಮ ವರ್ಷದ ಅನಂತರ, ಪಯನೀಯರ್ ಸೇವಾ ಶಾಲೆಯನ್ನು ಹಾಜರಾಗುವ ಆಶೀರ್ವಾದವಿದೆ. ಅವಿವಾಹಿತ ಶುಶ್ರೂಷಾ ಸೇವಕರು ಮತ್ತು ಹಿರಿಯರು, ಶುಶ್ರೂಷಾ ತರಬೇತಿ ಶಾಲೆಯನ್ನು ಹಾಜರಾಗಲು ನಿಲುಕಿಸಿಕೊಳ್ಳಬಹುದು. ಸಹೋದರರು ಕಟ್ಟಕಡೆಗೆ ಸಂಚರಣ ಕೆಲಸಕ್ಕಾಗಿ ಅರ್ಹರಾಗಬಹುದು. ಹೌದು, ಕ್ರಮದ ಪಯನೀಯರ್ ಶುಶ್ರೂಷೆಯು, ಯೆಹೋವನ ಸಂಸ್ಥೆಯಲ್ಲಿನ ಸೇವೆಯ ಈ ಮಹತ್ತರವಾದ ಸುಯೋಗಗಳಿಗೆ ದ್ವಾರವನ್ನು ತೆರೆಯುತ್ತದೆ.
6 ಕ್ರಮದ ಪಯನೀಯರ್ ಸೇವೆಗಾಗಿ ಆಸ್ಪದಕೊಡಬಲ್ಲ ಸಹೋದರರು, ಹೆಚ್ಚಿನ ಕೊಡುವಿಕೆಯೊಂದಿಗೆ ಬರುವ ಮಹತ್ತರವಾದ ಸಂತೋಷವನ್ನು ಅನುಭವಿಸಬಹುದು.—ಅ. ಕೃ. 20:35.