1998ಕ್ಕಾಗಿರುವ ದೇವಪ್ರಭುತ್ವ ಶುಶ್ರೂಷಾ ಶಾಲೆ
ಶಿಕ್ಷಣಕ್ಕೆ ಒಳಪಡುವುದೆಂದರೆ, “ಒಂದು ನಿರ್ದಿಷ್ಟ ಜ್ಞಾನ ಇಲ್ಲವೆ ಕೌಶಲದಲ್ಲಿ ಕಲಿಸಲ್ಪಡುವುದು ಅಥವಾ ಅಭ್ಯಸಿಸಲ್ಪಡುವುದು.” ದೇವಪ್ರಭುತ್ವ ಶುಶ್ರೂಷಾ ಶಾಲೆಯ ಮುಖಾಂತರ, ನಾವು ಸತತವಾಗಿ ದೇವರ ಜ್ಞಾನದಲ್ಲಿ ತರಬೇತುಗೊಳಿಸಲ್ಪಡುತ್ತಿದ್ದೇವೆ. ಮತ್ತು ಈ ಶಾಲೆಯಲ್ಲಿನ ನಮ್ಮ ಭಾಗವಹಿಸುವಿಕೆಯು, ಮಾತಾಡುವ ಮತ್ತು ಕಲಿಸುವ ನಮ್ಮ ಕೌಶಲಗಳನ್ನು ವಿಕಸಿಸಿಕೊಳ್ಳುವಂತೆ ನಮಗೆ ಅವಕಾಶನೀಡುತ್ತದೆ. 1998ಕ್ಕಾಗಿರುವ ಶಾಲಾ ಕಾರ್ಯಕ್ರಮವು, ಹೆಚ್ಚಿನ ಆತ್ಮಿಕ ಪ್ರಗತಿಯನ್ನು ಮಾಡುವರೆ ನಮಗೆ ಅನೇಕ ಅವಕಾಶಗಳನ್ನು ಒದಗಿಸುವುದು.
ನೀವು ಮುಂದಿನ ವರ್ಷದ ಶಾಲಾ ಶೆಡ್ಯೂಲನ್ನು ಪರಾಮರ್ಶಿಸಿದಂತೆ, ವರ್ಷದ ಮೊದಲ ಅರ್ಧಭಾಗದಲ್ಲಿ 3ನೆಯ ನೇಮಕವು ಜ್ಞಾನ ಪುಸ್ತಕದ ಮೇಲೆ ಆಧಾರಿತವಾಗಿರುವುದೆಂಬುದನ್ನು ನೀವು ಗಮನಿಸುವಿರಿ. ಇದಕ್ಕೆ ಕೂಡಿಸಿ, 1998ಕ್ಕಾಗಿರುವ ಪಾಠಕ್ರಮಕ್ಕೆ ಕುಟುಂಬ ಸಂತೋಷ ಪುಸ್ತಕವು ಕೂಡಿಸಲಾಗಿದೆ, ಮತ್ತು 3ನೆಯ ಹಾಗೂ 4ನೆಯ ನೇಮಕಗಳು ಅದನ್ನು ಪ್ರಗತಿಪರವಾಗಿ ಆವರಿಸುವವು. 4ನೆಯ ನೇಮಕಕ್ಕೆ ಕುಟುಂಬ ಸಂತೋಷ ಪುಸ್ತಕವು ಆಧಾರವಾಗಿರುವಾಗಲೆಲ್ಲ, ಸಹೋದರನೊಬ್ಬನು ಅದನ್ನು ಸಭೆಗೆ ನೀಡಲಾಗುವ ಒಂದು ಭಾಷಣದಂತೆ ತಯಾರಿಸಬೇಕು. ಮತ್ತು ಒಂದು ಮರುಜ್ಞಾಪನವಾಗಿ, ಶಾಲಾ ಕಾರ್ಯಕ್ರಮದಲ್ಲಿರುವ ಯಾವನೂ ಸಮಯಮೀರಿ ಹೋಗಬಾರದು.
ಒಂದು ಹೊಸ ವೈಶಿಷ್ಟ್ಯ: ನಮ್ಮ ವೈಯಕ್ತಿಕ ಪ್ರಯೋಜನಕ್ಕಾಗಿ, ಪ್ರತಿ ವಾರಕ್ಕಾಗಿರುವ ಸಂಗೀತದ ಸಂಖ್ಯೆಯ ಪಕ್ಕದಲ್ಲಿ, ಆವರಣ ಚಿಹ್ನೆಗಳಲ್ಲಿ “ಸಂಪೂರಕವಾದ ಬೈಬಲ್ ವಾಚನದ ಶೆಡ್ಯೂಲ್” ಒಕ್ಕಣಿಸಲಾಗಿದೆ. ಸಾಪ್ತಾಹಿಕ ಶಾಲಾ ಕಾರ್ಯಕ್ರಮದ ಯಾವ ಭಾಗಗಳೂ ಅದರ ಮೇಲೆ ಆಧರಿಸಿರುವುದಿಲ್ಲವಾದರೂ, ಅದನ್ನು ಅನುಸರಿಸುವುದು ನಿಮ್ಮ ಗುರಿಯನ್ನಾಗಿ ಮಾಡಿಕೊಳ್ಳಿರಿ. ಪ್ರತಿದಿನ ಬೈಬಲನ್ನು ಓದುವ ಅಭ್ಯಾಸ ನಿಮಗಿರದಿದ್ದಲ್ಲಿ, ಅಭ್ಯಾಸವನ್ನು ಮಾಡಿಕೊಳ್ಳುವಂತೆ ಅದು ನಿಮ್ಮನ್ನು ಶಕ್ತರನ್ನಾಗಿಮಾಡುವುದು.
ನೇಮಕಗಳು, ಸಲಹೆ, ಮತ್ತು ಲಿಖಿತ ಪುನರ್ವಿಮರ್ಶೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ, “1998ಕ್ಕಾಗಿರುವ ದೇವಪ್ರಭುತ್ವ ಶುಶ್ರೂಷಾ ಶಾಲೆಯ ಶೆಡ್ಯೂಲ್”ನಲ್ಲಿ ಮತ್ತು ಅಕ್ಟೋಬರ್ 1996ರ ನಮ್ಮ ರಾಜ್ಯದ ಸೇವೆಯ 3ನೆಯ ಪುಟದಲ್ಲಿ ಕಂಡುಕೊಳ್ಳಲ್ಪಡುವ ಉಪದೇಶಗಳನ್ನು ದಯವಿಟ್ಟು ಜಾಗರೂಕವಾಗಿ ಓದಿರಿ.
ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ನೀವು ಇನ್ನೂ ನಿಮ್ಮ ಹೆಸರನ್ನು ನಮೂದಿಸಿಕೊಂಡಿರದಿದ್ದಲ್ಲಿ, ಈಗ ನಮೂದಿಸಿಕೊಳ್ಳುವಂತೆ ನಾವು ಆಮಂತ್ರಿಸುತ್ತೇವೆ. ಯೆಹೋವನ ನಮ್ರ ಹಾಗೂ ದೃಢನಿಷ್ಠೆಯುಳ್ಳ ಸೇವಕರು, ಆತನ ಶುಶ್ರೂಷಕರೋಪಾದಿ ಹೆಚ್ಚು ಅರ್ಹರಾಗುವಂತೆ ಅವರನ್ನು ತರಬೇತುಗೊಳಿಸುವುದರಲ್ಲಿ ಈ ಅದ್ವಿತೀಯ ಶಾಲೆಯು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತಾ ಇದೆ.—1 ತಿಮೊ. 4:13-16.