ನಮ್ಮ ಬ್ರೋಷರ್ಗಳನ್ನು ಅಭ್ಯಾಸಿಸುವುದು
ಫೆಬ್ರವರಿ 1998ರ ನಮ್ಮ ರಾಜ್ಯದ ಸೇವೆಯಲ್ಲಿ ಪ್ರಕಟಿಸಲ್ಪಟ್ಟಂತೆ, 1998ರ ಮೇ 4ರಿಂದ ಆರಂಭಿಸಿ, ಸೆಪ್ಟೆಂಬರ್ 14ರ ವರೆಗಿನ ವಾರಗಳಲ್ಲಿ ನಮ್ಮ ಸಭಾ ಪುಸ್ತಕ ಅಭ್ಯಾಸಗಳಲ್ಲಿ ನಾವು ಒಂದರ ನಂತರ ಒಂದು, ಹೀಗೆ ಮೂರು ಬ್ರೋಷರುಗಳನ್ನು ಅಭ್ಯಾಸಿಸುವೆವು. ಪ್ರತಿ ತಿಂಗಳು ನಮ್ಮ ರಾಜ್ಯದ ಸೇವೆಯಲ್ಲಿ ಬರಲಿರುವ ಶೆಡ್ಯೂಲ್ನಿಂದ, ಸಕಲ ಜನರಿಗಾಗಿರುವ ಒಂದು ಗ್ರಂಥ ಮತ್ತು ದೇವರು ನಿಜವಾಗಿಯೂ ನಮ್ಮ ಕುರಿತು ಚಿಂತಿಸುತ್ತಾನೊ? ಎಂಬ ಬ್ರೋಷರುಗಳ ಆವರಿಸುವಿಕೆಯು ಬಹುಮಟ್ಟಿಗೆ ವೇಗವಾಗಿ ಮುಂದುವರಿಯಬೇಕೆಂಬುದನ್ನು ನೀವು ನೋಡುವಿರಿ. ಇದು ಅಭ್ಯಾಸ ಚಾಲಕನ ಮತ್ತು ಅದಕ್ಕೆ ಹಾಜರಾಗುವವರ ವತಿಯಿಂದ ಒಳ್ಳೆಯ ತಯಾರಿಯನ್ನು ಮತ್ತು ತಡವಿಲ್ಲದೆ ಉತ್ತರ ಕೊಡುವುದನ್ನು ಅವಶ್ಯಪಡಿಸುತ್ತದೆ. ಸಕಲ ಜನರಿಗಾಗಿರುವ ಒಂದು ಗ್ರಂಥ ಎಂಬ ಬ್ರೋಷರ್ಗೆ ಮುದ್ರಿತ ಪ್ರಶ್ನೆಗಳು ಇಲ್ಲದಿರುವುದರಿಂದ, ಪ್ರತಿಯೊಬ್ಬ ಅಭ್ಯಾಸ ಚಾಲಕನು ಪ್ಯಾರಗ್ರಾಫ್ನಲ್ಲಿನ ಮುಖ್ಯ ವಿಷಯಗಳನ್ನು ಹೊರತರುತ್ತಾ, ತನ್ನ ಸ್ವಂತ ಪ್ರಶ್ನೆಗಳನ್ನು ತಯಾರಿಸಬೇಕಾಗುವುದು. ಶೆಡ್ಯೂಲ್ ಮಾಡಲ್ಪಟ್ಟಿರುವ ಎಲ್ಲ ಪ್ಯಾರಗ್ರಾಫ್ಗಳನ್ನು ಓದುವುದು ಯಾವಾಗಲೂ ಸಾಧ್ಯವಾಗಿರಲಿಕ್ಕಿಲ್ಲ, ಆದರೆ ಮುಖ್ಯ ಪ್ಯಾರಗ್ರಾಫ್ಗಳು ಓದಲ್ಪಡುವುದನ್ನು ಅಭ್ಯಾಸ ಚಾಲಕನು ಖಚಿತಪಡಿಸಬೇಕು. ಕ್ಷಿಪ್ರವಾದ ಆವರಿಸುವಿಕೆಯು, ನಾವು ಬ್ರೋಷರುಗಳ ಒಳವಿಷಯದೊಂದಿಗೆ ಪರಿಚಿತರಾಗಲು ಶಕ್ತರನ್ನಾಗಿ ಮಾಡುವುದು. ಹೀಗೆ ಭವಿಷ್ಯತ್ತಿನಲ್ಲಿ ಒಂದು ನಿರ್ದಿಷ್ಟ ವಿಷಯವನ್ನು ಸಂಶೋಧಿಸುವಾಗ, ಎಲ್ಲಿ ಹುಡುಕಬೇಕೆಂದು ನಮಗೆ ತಿಳಿದಿರುವುದು.
ಇನ್ನೊಂದು ಕಡೆ, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಬ್ರೋಷರಿನ ಕೇವಲ ಮೂರು ಪಾಠಗಳು ಪ್ರತಿಯೊಂದು ಅಭ್ಯಾಸಕ್ಕಾಗಿ ಶೆಡ್ಯೂಲ್ ಮಾಡಲ್ಪಟ್ಟಿವೆ. ಇದು, ಎಲ್ಲ ಪ್ಯಾರಗ್ರಾಫ್ಗಳನ್ನು ಓದಲು, ಎಲ್ಲ ಅಥವಾ ಹೆಚ್ಚಿನ ಉಲ್ಲೇಖಿತ ಶಾಸ್ತ್ರವಚನಗಳನ್ನು ಓದಲು ಮತ್ತು ಚರ್ಚಿಸಲು, ಹಾಗೂ ಚೆನ್ನಾಗಿ ಯೋಚಿಸಲಾಗಿರುವ ಉತ್ತರಗಳನ್ನು ಕೊಡಲು ಸಾಕಷ್ಟು ಸಮಯವಿರುವುದನ್ನು ಖಚಿತಪಡಿಸುವುದು. ಇದು ಕೂಡ ಎಲ್ಲರ ವತಿಯಿಂದ ಒಳ್ಳೆಯ ತಯಾರಿಯನ್ನು ಅವಶ್ಯಪಡಿಸುವುದು. ಬೈಬಲ್ ವಿದ್ಯಾರ್ಥಿಗಳೊಂದಿಗೆ ನಾವು ಅನೇಕವೇಳೆ ಈ ಬ್ರೋಷರನ್ನೇ ಅಭ್ಯಾಸಮಾಡುತ್ತೇವೆ. ಆದುದರಿಂದ ಈ ಬ್ರೋಷರನ್ನು ಉಪಯೋಗಿಸುತ್ತಾ, ಸ್ವಲ್ಪ ಬೈಬಲ್ ಜ್ಞಾನವಿರುವ ಅಥವಾ ಬೈಬಲ್ ಜ್ಞಾನವೇ ಇಲ್ಲದಿರುವ ವ್ಯಕ್ತಿಗಳೊಂದಿಗೆ ಈ ಬ್ರೋಷರನ್ನು ಅಭ್ಯಾಸಿಸಸಾಧ್ಯವಿರುವ ವಿಧ, ಅಗತ್ಯವಿಲ್ಲದ ಮಾಹಿತಿಯನ್ನು ಸೇರಿಸದೆ ಶಾಸ್ತ್ರೀಯ ವಿಷಯಗಳನ್ನು ಸ್ಪಷ್ಟವಾಗಿ ತರ್ಕಿಸಸಾಧ್ಯವಿರುವ ವಿಧ, ಮತ್ತು ಈ ಬ್ರೋಷರನ್ನು ಉಪಯೋಗಿಸುತ್ತಾ ಯೆಹೋವನ ಮಟ್ಟಗಳಿಗಾಗಿ ಹೃತ್ಪೂರ್ವಕವಾದ ಗಣ್ಯತೆಯನ್ನು ಬೆಳೆಸಲು ಹೊಸಬರಿಗೆ ಸಹಾಯಮಾಡುವ ವಿಧವನ್ನು ಅಭ್ಯಾಸ ಚಾಲಕನು ಪ್ರದರ್ಶಿಸಬಹುದು. ಪಾಠ 16ನ್ನು ಅಭ್ಯಾಸಮಾಡಿದ ನಂತರ, ಇಡೀ ಬ್ರೋಷರನ್ನು ಪುನರ್ವಿಮರ್ಶಿಸುವಾಗ, ಅಭ್ಯಾಸ ಚಾಲಕನು ವಿಶೇಷವಾಗಿ ಬೈಬಲ್ ಅಭ್ಯಾಸದ ಕೆಲಸದಲ್ಲಿ ಉಪಯೋಗಿಸಲ್ಪಡಬಹುದಾದ ಕಲಿಸುವ ಅಂಶಗಳನ್ನು ಪುನರ್ವಿಮರ್ಶಿಸಸಾಧ್ಯವಿದೆ. ಅಂತಹ ಒಂದು ಪರಿಗಣನೆಯು, ದೇವರ ವಾಕ್ಯದ ಶಿಕ್ಷಕರೋಪಾದಿ ನಮ್ಮ ಕೌಶಲಗಳನ್ನು ಉತ್ತಮಗೊಳಿಸುವುದು ಮತ್ತು ದೇವರು ನಮ್ಮಿಂದ ಅಪೇಕ್ಷಿಸುವಂತಹದ್ದೆಲ್ಲವನ್ನೂ ಮಾಡುವ ನಮ್ಮ ದೃಢನಿರ್ಧಾರವನ್ನು ಬಲಗೊಳಿಸುವುದು.—ಕೀರ್ತ. 143:10; ಯೆಶಾ. 50:4.